ಶನಿವಾರ, ನವೆಂಬರ್ 30, 2013

ನಾವು ಮಾತ್ರ ಯಾಕೆ ಹೀಗೆ ?


ದೊಡ್ಡದಾಗಿ ಒಂದು ಕ್ರಾಂತಿ ಆಗಬೇಕು ಆಂದರೆ ಏನು ಮಾಡಬೇಕು?ಜನರೆಲ್ಲಾ ಗುಂಪು ಕಟ್ಟಿ ಬೀದಿಗಿಳಿದು ಹೋರಾಡಬೇಕಾ?ಎಲ್ಲರೂ ಉಪವಾಸ ಸತ್ಯಾಗ್ರಹ ಕುಳಿತುಕೊಳ್ಳಬೇಕಾ?ಇವೆಲ್ಲಾ ಕ್ರಾಂತಿಯ ಒಂದು ಭಾಗ ಅಷ್ಟೇ.ಇವೆಲ್ಲದಕ್ಕೂ ಮೊದಲು ಜನರ ಮನಸಿನಲ್ಲಿ ಕಿಚ್ಚು ಮೂಡಬೇಕು.ಪ್ರತಿಯೊಬ್ಬನ ಮನಸಿನಲ್ಲಿ ಮೂಡಿದ ಆ ಕಿಚ್ಚು ,ಎಲ್ಲರೂ ಒಗ್ಗೂಡಿದಾಗ ಜ್ವಾಲೆಯಾಗಿ ,ಕಾಡ್ಗಿಚ್ಚಿನಂತೆ ಹರಡಿ ದೊಡ್ಡಮಟ್ಟದಲ್ಲಿ ಕ್ರಾಂತಿ ಮೂಡುತ್ತದೆ.
                ಸಮಾಜದಲ್ಲಿ ಬದಲಾವಣೆಯಾಗಲು ಸಮಾಜದಲ್ಲಿ ಇರುವ ವ್ಯಕ್ತಿಗಳ ಮನಸಿನಲ್ಲಿ ಬದಲಾವಣೆ ಮೊದಲು ಮೂಡುವುದು ಅತ್ಯಗತ್ಯ .ಇದಕೆ ಮನೆಯಲ್ಲಿನ ವಾತವರಣ ಬಹಳ ಮುಖ್ಯ. ನಾವೆಲ್ಲವೂ ಓದಿದ್ದೇವೆ ಅಲ್ಲವೇ ಮನೆಯೇ ಮೊದಲ ಪಾಠ ಶಾಲೆ ಎಂದು . ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನು ಬೆಳೆದ ಮನೆಯ ವಾತಾವರಣ ತುಂಬಾ ಪರಿಣಾಮ ಬೀರುತ್ತದೆ. ಉದಾಹರಣೆಗೆ ಶಿವಾಜಿ,ಭಗತ್ ಸಿಂಗ್ ಯಾರ ದೊಡ್ಡ ವ್ಯಕ್ತಿಗಳ ಜೀವನ ತೆಗದುಕೊಳ್ಳಿ .ಈ ವ್ಯಕ್ತಿಗಳು ಇಂದು ಮಹನೀಯರಾಗಿ ಬೆಳೆಯುವುದಕ್ಕೆ ಅವರ ಮನೆಗಳಲ್ಲಿ ಹೇಳಿಕೊಟ್ಟ ಸಂಸ್ಕೃತಿ ಯೇ ಕಾರಣ .
              ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ನಾವು ಕನ್ನಡ ಉಳಿಯಬೇಕು ಬೆಳೆಯಬೇಕು ಅಂತ ದಿನಾಗಲೂ ಬಾಯಿ ಬಡಿದುಕೊಳ್ಳುತ್ತಿರುತ್ತೀವೆ . ದಿನದಿಂದ ದಿನೇ ಕನ್ನಡ ನಶಿಸುತ್ತಿದೇ ಅಂತ ಹೇಳುತ್ತಾ ಅಳುತ್ತಿರುತ್ತೇವೆ . ಆದರೆ ಇದಕ್ಕೆ ಮೂಲ ಕಾರಣ ಏನು ಅಂತ ನಾವೆಲ್ಲರೂ ಕುಳಿತು ಯೋಚನೆ ಮಾಡಿದರೆ ನಿಜವಾಗಲೂ ಹೆದರಿಕೆಯಾಗುತ್ತದೆ. ಅದೇನೆಂದರೆ ನಮ್ಮ ಮನೆಗಳಲ್ಲಿ ಕನ್ನಡ ಮರೆಯಾಗುತ್ತ್ತಿರುವುದು .
              ಹೌದು ,ಇಂದಿನ ದಿನಗಳಲ್ಲಿ ಮನೆಯಲ್ಲಿ ಕನ್ನಡ ಮರೆಯಾಗುತ್ತಿದೆ. ಅದಕ್ಕೆ ಮನಗಳಲ್ಲಿ ಕನ್ನಡ ಮರೆಯಾಗುತ್ತಿದೆ. ತಂದೆ ತಾಯಂದಿರು ಮಕ್ಕಳಿಗೆ ಇಂದು ಮಮ್ಮಿ ಡ್ಯಾಡಿ ಹೇಳಿಕೊಡುತ್ತಾರೆ ಹೊರತು ಅಪ್ಪ ಅಮ್ಮ ಸಂಸೃತಿಯಲ್ಲ . ಅಯ್ಯೋ ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಇಂಗ್ಲೀಷ್ ಕಲಿತಿಲ್ಲಾ ಅಂದರೆ ಬೆಲೆ ಎಲ್ಲಿದೆ ಅನ್ನುವುದು ಅವರ ವಾದ. ಅವರ ವಾದ ವನ್ನು ನಾನು ಖಂಡಿತವಾಗಿಯೂ ಒಪ್ಪುತ್ತೇನೆ . (ಯಾರಿಗೆ ಗೊತ್ತು ನನ್ನ ಹೆಂಡತಿ ಒಪ್ಪದಿದದಲ್ಲಿ ನಾನು ನನ್ನ ಮಕಳನ್ನು ಆಂಗ್ಲ ಶಾಲೆಗೇ ಸೇರಿಸಬೇಕಾಗುತ್ತದೆ. ). ಕನ್ನಡ ಹೃದಯದ ಭಾಷೆ,ಆಂಗ್ಲ ದುಡ್ಡು ತರುವ ಭಾಷೆ ಅನ್ನುವುದನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಆದರೆ ಇಂದಿನ ಮಕ್ಕಳಿಗೆ ಕನ್ನಡ ಹೃದಯದ ಭಾಷೆ ಅನ್ನುವುದನ್ನು ತಂದೆ ತಾಯಂದಿರು ಅರಿವು ಮೂಡಿಸುತ್ತಿಲ್ಲ . ಅದೇ ಸಮಸ್ಯೆ.
                 ನಮ್ಮಲ್ಲಿ ಕನ್ನಡದ ಕ್ರಾಂತಿಯಾಗಬೇಕೆಂದರೆ , ಮೊದಲಿಗೆ ಮನೆಮನೆಗಳಲ್ಲಿ ,ಮನ ಮನಗಳಲ್ಲಿ ಕನ್ನಡದ ದೀಪ ಹಚ್ಚಬೇಕು .ಹೀಗೆ ಪ್ರತಿಯೊಂದು ಮನೆಯಲ್ಲೂ ದೀಪಗಳು ಬೆಳಗಿದಾಗ ಬೀದಿಗಳು ಕಂಗೊಳಿಸುತ್ತದೆ. ಹಾಗೆಯೇ ಊರು ಹಾಗೆಯೇ ರಾಜ್ಯ. ಹೀಗೆ ನಾಡಿಗೆ ನಾಡೇ ಕನ್ನಡದ ಬೆಳಕಿನಲ್ಲಿ ಕಂಗೊಳಿಸಬೇಕು. ದಿನವೂ ಚಾಮುಂಡಿ ತಾಯಿಗೆ ದೀಪಾವಳಿಯಾಗಿರಬೇಕು .
English summary: What is essential for a revolution?People thronging on streets or people fasting.Actually, these are later part of revolution.Prior to this, a good motive in individual should arise leading them to be a part of revolution.And for this the environment of their house matters.We all know that house is the first school.It plays an important role in shaping individual.For example, personalties like Shivaji,Bhagat Singh who bought change in society had great influence by their culture at home.
Reason I am writing the above point is ,we all cry that kannada language is not growing as much as the other south Indian (or southern languages)languages.But the key problem for all these lies at our home.Nowadays parents show much interest in teaching English than Kannada to their children .Even I believe that to survive in this competitive environment we need English.But we should not forget that the mother tongue is our soul language.Children not taught about this, will never respect their mother tongue.So,it is important that parents teach their children the importance of mother tongue.


ಶುಕ್ರವಾರ, ನವೆಂಬರ್ 22, 2013

ನಾವು ಮಾತ್ರ ಯಾಕೆ ಹೀಗೆ ?



ದೃಶ್ಯ ೧: ಕರ್ನಾಟಕದ ಒಂದು ಊರು. ಜನ ಥಿಯೇಟರ್ ಮುಂದೆ ಜಾತ್ರೆ ಅನ್ನುವಂತೆ ಸೇರಿದ್ದಾರೆ. ಎಲ್ಲರಿಗೂ ಮೊದಲ ಶೋ ನೋಡುವ ತವಕ.ತುಂಬಾ ಜನಕೆ ಸಿಗುವುದಿಲ್ಲಾ ಎಂಬುದು ಗೊತ್ತು. ಆದರೂ ಮುಂದಿನ ಶೋಗಾದ್ರು ಸಿಗಲಿ ಎಂದು ನಿಂತಿದ್ದಾರೆ. ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿದ್ದುದು ಮಾತ್ರ ಕನ್ನಡೇತರ ಚಿತ್ರ.

ದೃಶ್ಯ ೨: ತಮಿಳು ನಾಡಿನಲ್ಲಿ ಕೆಲಸದ ಮೇಲೆ ೧೧ ತಿಂಗಳು ಇದ್ದೆ. ಹೀಗೆ ಒಂದು ದಿನ ನನ್ನ ತಮಿಳು ಗೆಳೆಯನೊಬ್ಬನ ಜೊತೆ ಮಾತನಾಡುತ್ತಿದ್ದಾಗ ವಿಷಯ ಚಿತ್ರರಂಗದ ಕಡೆ ಹೊರಳಿತು.ಅವರ ಚಿತ್ರರಂಗದ ಬಗ್ಗೆ ಸ್ವಲ್ಪ ಮಾತನಾಡಿದ ಮೇಲೆ, ನಾನು ನಮ್ಮ ಚಿತ್ರರಂಗದ ನಿಮ್ಮ ಬಗ್ಗೆ ಎಷ್ಟು ಗೊತ್ತು ಅಂತಕೇಳಿದೆ. ಆತನಿಗೆ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ನಂಬಿದರೆ ನಂಬಿ ನನಗೇ ಅವರ ಭಾಷೆಯ ಪುಟಗೋಸಿ ಕಲಾವಿದರ ಬಗ್ಗೆಯೂತಿಳಿದಿತ್ತು ,ಆತನಿಗೆ ಕಡೇಪಕ್ಷ ನಮ್ಮ ರಾಜಣ್ಣ ,ವಿಷ್ಣು ದಾದಾನ ಬಗ್ಗೆ ಅರಿವೇ ಇರಲಿಲ್ಲ.

ದೃಶ್ಯ ೩ : ನಮ್ಮ ದಾವಣಗೆರೆ ,ಕರ್ಣಾಟಕದ ಮಧ್ಯಭಾಗ .ನೆರೆ ರಾಜ್ಯಗಳಿಂದ ಭೌಗೋಳಿಕವಾಗಿ ಸ್ವಲ್ಪ ದೂರವೇ ಉಳಿದಿದೆ. ಹೀಗೆ ದಾವಣಗೆರೆಯಲ್ಲಿ ಗೆಳೆಯನೊಬ್ಬನ  ಹಾಸ್ಟೆಲ್ಗೆ ಹೋಗಿದ್ದೆ. ಅಲ್ಲಿ ಹುಡುಗರೆಲ್ಲರೂ ಗುಂಪು ಕಟ್ಟಿ ತೆಲಗು ಚಿತ್ರವೊಂದನ್ನು ನೋಡುತ್ತಿದ್ದರು . ಚಿತ್ರದ ಮಧ್ಯೆ ಎಲ್ಲರೂ ತೆಲಗು ಭಾಷೆಯಲ್ಲಿಯೀಕಾಮೆಂಟ್ ಹೊಡೆಯುತ್ತಿದ್ದರು. ನನ್ನ ಗೆಳೆಯನಿಗೆ ಇವರೆಲ್ಲರೂ ಆಂಧ್ರದವರಾ ಅಂತ ಕೇಳಿದೆ. ಆತ ಇಲ್ಲಾ ಅವರೆಲ್ಲರೂ ಅಪ್ಪಟ ಕನ್ನಡಗಿರೆಂದು , ಆದರೆತಮಿಳು ,ತೆಲಗು ಚಿತ್ರ ಗಳನ್ನು ಅದೆಷ್ಟು ನೋಡಿದ್ದಾರೆ ಆಂದರೆ ಆ ಭಾಷಿಕರಷ್ಟೇ ಚೆನ್ನಾಗಿ ಮಾತನಾಡುತ್ತಾರೆ ಎಂದು ಹೇಳಿದಾಗ ನನಗೆ ಪರಮಾಶ್ಚರ್ಯ .
ದೃಶ್ಯ ೩.: ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ನಮ್ಮ ಕಂಪೆನಿಯಲ್ಲಿಯೇ ಕೆಲಸ ಮಾಡುತ್ತಿದ್ದ ನೆರೆ ರಾಜ್ಯದವರು ಪರಿಚಯ ಆದರು. ಹೀಗೆ ಒಮ್ಮೆಅವರಿಗೆ ಎಷ್ಟು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತ ಕೇಳಿದಾಗ ಅವರ ಉತ್ತರ ಕೇಳಿದ ನಾನು ನಿಜವಾಗಲೂ ಕಕ್ಕಾಬಿಕ್ಕಿ. ಯಾಕಂದರೆ ಆತಆರು ವರ್ಷದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದರೂ ಕನ್ನಡ ಮಾತನಾಡಲು ಒಂದು ಪದ ಬರುತ್ತಿರಲಿಲ್ಲ.

                      ಮೇಲಿನ ಮೊದಲೆರಡು ಉದಾಹರಣೆಗಳು ನಮಗೆ ಬೇರೆ ಭಾಷೆಯ ಮೇಲಿರುವ ವ್ಯಾಮೋಹ ,ಅವರಿಗೆ ನಮ್ಮ ಭಾಷೆಯ ಬಗ್ಗೆ ಇರುವ ಅಸಡ್ಡೆ ಯನ್ನುತೋರಿಸುತ್ತದೆ. ಚಲನಚಿತ್ರದ ವಿಷಯ ಬರಿಯ ಉದಾಹರಣೆ ಅಷ್ಟೇ. ನಿಜ ಹೇಳಬೇಕೆಂದರೆ ನಮ್ಮವರಿಗೆ ಅಸಡ್ಡೆ ಜಾಸ್ತಿ. ಚಲನಚಿತ್ರ ಅಥವಾ ಕನ್ನಡದಪುಸ್ತಕಗಳ ವಿಷಯವನ್ನೇ ತೆಗೆದುಕೊಳ್ಳಿ . ನಮ್ಮವರು ಎಷ್ಟು ನೋಡುತ್ತೇವೆ.ನಮ್ಮಲ್ಲಿ ಒಳ್ಳೆಯ ಚಿತ್ರಗಳ ಸಂಖ್ಯೆ ಕಡಿಮೆ ನಿಜ .ಬಂದ ಒಳ್ಳೆಯಚಿತ್ರಗಳನ್ನಾದರೂ ಅಂದರೆ ಬಯ್ಯುವವರು ಎಲ್ಲಿ ನೋಡುತ್ತಾರೆ? ನಿಜ ಹೇಳಬೇಕಂದರೆ ನಮ್ಮಲ್ಲಿ, ತುಂಬಾ ಜನರು ಪಕ್ಕದ ಮನೆಯಲ್ಲಿ ದಿನಾಗಲೂ ಉಪ್ಪಿಟ್ಟು ಮಾಡಿದರೂ ಚೆನ್ನಾಗಿದೆ ಅಂದು ತಿನ್ನುವವರಿದ್ದಾರೆ. ಅದೇ ಉಪ್ಪಿಟ್ಟು ಅಥವಾ ಆಗೊಮ್ಮೆ ಈಗೊಮ್ಮೆ ವಿಶೇಷ ತಿಂಡಿ ನಮ್ಮ ಮನೆಯಲ್ಲಿ ಮಾಡಿದರೆಅವರು ಅದನ್ನು ಹೊಗಳುವುದು ಇರಲಿ ಅದನ್ನು ಬಾಯಿಗೆ ಹಾಕಿಕೊಂಡು ನೋಡುವ ಗೋಜಿಗೂ ಹೋಗುವುದಿಲ್ಲ. ಚಲನಚಿತ್ರದ ವಿಷಯ ಹಾಗಿರಲಿ ನಮ್ಮಲ್ಲಿಒಳ್ಳೆಯ ಪುಸ್ತಕಗಳು ಬರುತ್ತಿಲ್ಲ ಅಂದರೆ ನಿಜವಾಗಲೂ ನಂಬಲು ಅಸಾಧ್ಯ. ಹಾಗೆ ಹೇಳುವವರು ನಿಜಾವಾಗಲೂ ಎನೂ ಅರಿಯದವರು.ನಾವುಗಳುಓದುತ್ತಿಲ್ಲ ಅನ್ನುವುದು ನಿಜ. ಬೇರೆ ಭಾಷೆ ಕಲಿಯುವ ಆಸಕ್ತಿಯ ಕಾಲು ಭಾಗ ನಮ್ಮ ಪುಸ್ತಕಗಳನ್ನು ಓದುವುದರಲ್ಲಿ ಇದ್ದರೆ ನಮ್ಮ ಕನ್ನಡದ ಬರಹಗಾರರು ಎರಡು ಹೊತ್ತು ಊಟ ಮಾಡುತ್ತಿದ್ದರು . ಯಾವುದೇ ಇರಲಿ ಮೊದಲು ನಮ್ಮ ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಡೋಣ ,ನಂತರ ಬೇರೆ ಭಾಷೆ.
                        ಅದ್ಯಾಕೆ ನಾವುಗಳು ಬೇರೆಯವರ ಭಾಷೆಯನ್ನು ಪಟ್ಟನೆ ಕಲಿತು ,ಅವರ ಹತ್ತಿರ ಅದೇ ಭಾಷೆಯಲ್ಲಿ ಮಾತನಾಡುವುದರಲ್ಲಿ ತೋರುವ ಆಸಕ್ತಿನಮ್ಮ ಭಾಷೆಯನ್ನೂ ಅವರಿಗೆ ಕಲಿಸುವುದರಲ್ಲಿ ತೋರಿಸುವುದಿಲ್ಲ. ಅದು ನಮ್ಮ ಕನ್ನಡಿಗರಲ್ಲಿ ಮಾತ್ರ ಜಾಸ್ತಿ ಯಾಕೆ? ಇನ್ನೂ ತಿಳಿಯದ ವಿಷಯವಾಗಿದೆ.ನಾನು ಬೇರೆ ಬಾಷೆಯನ್ನು ಕಲಿಯುವುದೇ ತಪ್ಪು, ಅವರನ್ನು ಹೊಡೆದು ಹಾಕಿ ಕನ್ನಡದ ಬಾವುಟ ನೆಟ್ಟಬೇಕು ಎಂದು ಹೇಳುತ್ತಿಲ್ಲ. ಅದು ನಮ್ಮವರ ಸಂಸ್ಕೃತಿಯೂ ಅಲ್ಲಾ. ಉದಾಹರಣೆಗೆ ನಮ್ಮಲ್ಲಿ ತುಳು ,ಕೊಡವ ಭಾಷಿಕರನ್ನು ಕನ್ನಡಿಗರಂತೆಯೇ ನೋಡುತ್ತೇವೆಯೇ  ಹೊರತು ಹೊರಗಿನವರ ಹಾಗೆ ಅಲ್ಲ. ಬೇರೆ ಭಾಷೆಯ ಜನರಲ್ಲಿರುವ ಭಾಷಾಭಿಮಾನ ನಮ್ಮಲ್ಲಿ ಯಾಕೆ ಕಮ್ಮಿ . ಅವರೆಲ್ಲಾ ಯಾಕೆ ಹಾಗೆ .?ನಾವು ಮಾತ್ರ ಯಾಕೆ ಹೀಗೆ ? ಎಂಬುದು ನನ್ನ ಪ್ರಶ್ನೆ

English summary: Kannadigas always lag behind when it comes to the matter of pride about their own mother tongue,when compared to other people from different states.Many of Kannadigas term this this lack of pride  to friendliness nature.Here in Karnataka ,every language movie runs 100 days.We know each and everything about other language movies.But its not the same case with neighbouring states.Even after staying so many days in Karnataka,many of non-kannadigas don't know Kannada.Because we don't show the same interest in teaching Kannada that we show in learning other languages.Point is here I am not asking to disrespect the other language but to give priority to our mother tongue first ,when it comes to respect.

ಶನಿವಾರ, ನವೆಂಬರ್ 9, 2013

ನಾವು ಮಾತ್ರ ಯಾಕೆ ಹೀಗೆ ?



ಘಟನೆ ೧:
ತಮಿಳು ನಾಡಿನ ಫೈವ್ ಸ್ಟಾರ್ ಹೋಟೆಲ್. ಅಲ್ಲಿ ರೂಮು ಬುಕ್ ಮಾಡಲು ಹೋಗಿದ್ದೆ. ನನಗೇ ತಮಿಳು ಬಾರದ್ದರಿಂದ, ಅದೂ ಫೈವ್ ಸ್ಟಾರ್ ಹೋಟೆಲ್ ಆದ್ದರಿಂದ, ಅಲ್ಲಿನ ರಿಸೆಪ್ಸನಿಷ್ಟ್ ಗೆ ಆಂಗ್ಲ ಭಾಷೆ ಅಥವಾ ಹಿಂದಿ ಬರುತ್ತದೆ ಅಂದು ಕೊಂಡು ಆಂಗ್ಲ ಭಾಷೆಯಲ್ಲಿ ರೂಮ್ ಇದೆಯಾ ಅಂತ ಕೇಳಿದೆ. ಆಕೆ ತಮಿಳಿನಲ್ಲಿ ಉತ್ತರಿಸಿದಳು. ಎನೂ ಅರ್ಥ ಆಗದ ನಾನು ನನಗೆ ತಮಿಳು ಬರುವುದಿಲ್ಲಾ , ರೂಮ್ ಬೇಕು , ಎಷ್ಟು ಬಾಡಿಗೆ ಅಂತ ಮತ್ತೆ ಆಂಗ್ಲ ಭಾಷೆಯಲ್ಲಿ ,ಹಿಂದಿಯಲ್ಲಿ ಕೇಳಿದೆ. ಅವಳ ಕಡೆಯಿಂದ ಮತ್ತದೇ ಉತ್ತರ. ನನ್ನ ಕಡೆಯಿಂದ ಆಗುವ ಎಲ್ಲಾ ಪ್ರ ಯತ್ನ ಮಾಡಿ ,ಎನೂ ಆಗುವುದಿಲ್ಲಾ ಅಂತ ತಿಳಿದು,ಇನ್ನೇನು ಹೊರಟೆ ಅನ್ನುವಾಗ ಆಗ ಅವಳ ಬಾಯಿಯಿಂದ " ಸರ್, ಪ್ಲೀಸ್ ಕಮ್" ಅಂತ ಬಂತು.
ಘಟನೆ ೨.
ಕರ್ನಾಟಕ . ನನ್ನ ಪರಿಚಯದ ಮನೆಗೆ ಹೊರಡಲು, ಆಟೋವೊಂದನ್ನು ನಿಲ್ಲಿಸಿದೆ.ಆಟೋ ನಿಲ್ಲಿಸಿದವನೇ "ಕಹಾ ಜಾನಾ ಹೈ ಸಾಬ್? " ಅಂದ.ಥಟ್ ಏಂದು ಎದುರಾದ ಹಿಂದಿ ಪ್ರಶ್ನೆ ಯನ್ನು ಅರಗಿಸಿಕೊಂಡು " ಸರ್ ಇಲ್ಲೇ ವಿಜಯ ನಗರ ಕ್ಕೆ ಹೋಗಬೇಕಿತ್ತು" ಅಂದೆ .ಅದಕೆ ಆತ "ಫಿಫ್ಟಿ ರುಪೀಸ್ " ಆಂದ. ಆಟೋ ಹತ್ತಿದವನೇ ಅತ ಕನ್ನಡದವನಾ? ಅಂತ ವಿಚಾರಿಸಿದೆ.ಯಾಕಂದರೆ ನಾನು ಕನ್ನಡದಲ್ಲಿ ಉತ್ತರಿಸಿದರೂ ಆತ ಬೇರೆ ಬೇರೆ ಭಾಷೆಯಲ್ಲಿ ಉತ್ತರಿಸಿದನಲ್ಲಾ ಅದಕೆ.ಕಂಡರೆ ಆತ ಅಪ್ಪಟ ಕನ್ನಡದವನು. ಚಿನೀಸ್ ತರಹ ಇರುವ ನನ್ನ ಮುಖ ನೋಡಿ ನಾನು ಪರಭಾಷಿಗನೆಂದು ತಿಳಿದು ಕನ್ನಡ ಬಿಟ್ಟು ಬೇರೆ ಭಾಷೆಯೆಲ್ಲಾ ಮಾತಾಡಿದ್ದ.ಹಾಗೆ ನೋಡಿದರೆ ,ನಾನು ಅವನಿಗೆ ಕನ್ನಡದಲ್ಲಿ ಉತ್ತರಿಸಿದ ಮೇಲೆಯೂ ಅತ ಕನ್ನಡ ಮಾತಾಡಲಿಲ್ಲ.
ಮೇಲಿನ ತರಹದ ಘಟನೆಗಳು ಒಂದಲ್ಲಾ ಒಂದು ರೀತಿ ನೀವು ಅನುಭವಿಸಿರಬಹುದು.ಬಹುಶಃ ಕರ್ನಾಟಕದಲ್ಲಿ ಮಾತ್ರ ಹೀಗೆ ಅನ್ನಿಸುತ್ತದೆ. ಅದೇಕೋ ನಮ್ಮವ್ರು ಮಾತ್ರ ಕನ್ನಡ ಬಿಟ್ಟು ಬೇರೆಯಲ್ಲಾ ಭಾಷೆ ಉಪಯೋಗಿಸಿ ನಂತರ ಕನ್ನಡ ಉಪಯೋಗಿಸುವುದು ಅನ್ನಿಸುತ್ತದೆ.ನನ್ನಲ್ಲಿ ತುಂಬಾ ಕಾಡುವ ಪ್ರಶ್ನೆ ಏನೆಂದರೆ, ಬೇರೆ ಭಾಷೆಯ ಜನರಲ್ಲಿ ಕಾಣದ ಇಷ್ಟೊಂದು ಒಳ್ಳೆಯತನ ನಮ್ಮಲ್ಲಿ ಮಾತ್ರ ಯಾಕೆ? ಇದಕ್ಕೇ ಉತ್ತರ ನಮ್ಮವರೇ ಕೊಡಬೇಕು.
English summary: Once ,when I was in TamilNadu, I went to five star hotel for room booking.I tried to converse in english,hindi with the receptionist there.But she replied only in Tamil.When I was about to return then she replied in English.
Once in  Banglore ,I stopped auto as I needed to go to my aunt's home.The guy asked me where I need to I go in hindi thinking that I don't know Kannada.I replied him in Kannnada.But still he answered in hindi.Then out of curiousity I asked him whether he his Kannadiga.I was surprised to hear that he was Kannadiga.
Its only in  in Karnataka we people first speak other language first than our own mother tongue.

ಮಂಗಳವಾರ, ನವೆಂಬರ್ 5, 2013

ಕನ್ನಡ



ಕನ್ನಡ




ಭುವನೇಶ್ವರಿಯ ತಾಯಿಯ

ಮೈನವಿರಿಲೇಳಿಸುವ

ಗೆಜ್ಜೆನಾದ ಕನ್ನಡ,

ಕೋಲಾರದ ಕಣ್ಣು ಕೋರೈಸುವ

ಹೊನ್ನು ಕನ್ನಡ,

ಕಾನನದ ಗಂಧದ ಮರದ

ಘಮ ಘಮ ಕನ್ನಡ,

ಧುಮುಕುವ ಜೋಗದ

ಬೆಡಗು ಕನ್ನಡ,

ಕಬ್ಬಿನ ಹಾಲಿನ ಸಿಹಿ

ಸವಿ ಕನ್ನಡ,

ಕರುನಾಡಿನ ಅಣು ಅಣುವು

ಕನ್ನಡ.




ಇಂದು

ಅರಳಲು ಹಿಂದೇಟು

ಹಾಕುತಿದೆ ಮೈಸೂರು ಮಲ್ಲಿಗೆ,

ಚಾಮುಂಡಿ ಶಿಖರವು

ನಡುಗುತಿದೆ ಶೀತಲ ಗಾಳಿಗೆ,

ಪವಿತ್ರ ಕಾವೇರಿಯೂ ಮೆಲ್ಲಗೆ

ಆಗುತಿದೆ ಮೈಲಿಗೆ,

ಸೂರ್ಯನ ಕಿರಣಗಳು

ಸವಾಲು ಹಾಕುವಂತಾಗಿದೆ

ಕನ್ನಡ ತಾಯಿಯ

ತ್ರಿಶೂಲದ ಹೊಳಪಿಗೆ,

ಏಕಂದರೆ ಕನ್ನಡಿಗರೇ

ಬಯಸುತ್ತಿಲ್ಲ ಕನ್ನಡದ ಏಳಿಗೆ,

ಜೊತೆಗೆ ಕನ್ನಡವನ್ನು

ಮರೆಯುತ್ತಿದೆ

ಕನ್ನಡಿಗರ ನಾಲಿಗೆ.




ಮನವಿ




ಹೊರನಾಡಿನಿಂದ

ಕರುನಾಡಿಗೆ ಬಂದ

ಕನ್ನಡೇತರರೇ,

ಸಲ್ಲದು ಕನ್ನಡ ಭಾಷೆಗೆ

ನಿಮ್ಮ ಅಸಡ್ಡೆ, ಅಸಹ್ಯ,

ನಿಂದನೆ,

ಕನ್ನಡ ಭಾಷೆಗೆ ಅಪಮಾನ ,

ಕನ್ನಡ ತಾಯಿಯಿಗೆ ಅವಮಾನ,

ಇವೆರಡೂ ಒಂದೇನೆ.

ನಿಮ್ಮನ್ನು ಒಡಹುಟ್ಟಿದ

ಮಕ್ಕಳಂತೆ ಕಂಡ

ಕನ್ನಡ ತಾಯಿಗೆ

ಸಲ್ಲಬೇಕು ಅಭಿನಂದನೆ,

ಕನ್ನಡದಲ್ಲಿ ಮಾತನಾಡುವುದೇ

ನೀವು ಆಕೆಗೆ

ಸಲ್ಲಿಸುವ ಅಭಿನಂದನೆ.

ಬುಧವಾರ, ಅಕ್ಟೋಬರ್ 23, 2013

ನೆನಪುಗಳು ಅಮರ,ನೆನಪುಗಳು ಮಧುರ

ನಮ್ಮ ಬದುಕು ಜಟಕಾಬಂಡಿ ನಿತ್ಯವೂ ಮುಂದೆ ಸಾಗುತ್ತಲೇ ಇರುತ್ತದೆ. ನಾವು ಸಾಗುವ ದಾರಿಯಲ್ಲಿ ದಿನವೂ ಅನೇಕ ಘಟನೆಗಳನ್ನು ಎದುರಿಸುತ್ತಲೇ ಇರುತ್ತೇವೆ.ಆದರೆ ಅವುಗಳಲ್ಲಿ ಕೆಲವು  ಮಾತ್ರ  ರಿಜಿಸ್ಟರ್ ಆಗುತ್ತವೆ.ಆ ತರಹ ರಿಜಿಸ್ಟರ್ ಆದ  ಘಟನೆಗಳು ,ನೆನೆಪುಗಳಾಗಿ ಉಳಿದುಬಿಡುತ್ತವೆ. ಸುಮ್ಮನೇ ಉಳಿದರೆ ಓಕೆ.ಕೆಲವೊಂದು ಅಲೆಗಳಂತೆ ಅಗಾಗ ಅಪ್ಪಳಿಸುತ್ತದೆ. ಅದರಲ್ಲಿ ಕೆಲವೊಂದು ಮನದ ತೀರವನ್ನು ಬರೀ ಒದ್ದೆ ಮಾಡಿ ಹೋದರೇ,ಕೆಲವೊಂದು  ಮನದ ತೀರದಲ್ಲಿ ಇದ್ದ ಸಂತೋಷವನ್ನು ತಮ್ಮೊಂದಿಗೆ ತೆಗದುಕೊಂಡು ಹೋಗುತ್ತವೆ.ಕೆಲವೊಂದು ಅಲೆಗಳು ತಮ್ಮೊಂದಿಗೆ ಎನಾದರೂ ತಂದು ಹಾಗೆಯೇ ಬಿಟ್ಟು ಹೋಗುತ್ತವೆ.ಕೆಲವೊಮ್ಮೆ ಸುನಾಮಿಗಳಂತೆ ಅಪ್ಪಳಿಸುತ್ತಲೇ ಇರುತ್ತಾ, ಹಾರ್ಟ್ ಅಟ್ಯಾಕ್ ತರಿಸುತ್ತವೆ.
                    ನನಗೆ ಕೆಲವೊಮ್ಮೆ ನಾವು ಈ ಜಗತ್ತಿನಲ್ಲಿ ಎಲ್ಲಾದನ್ನೂ ಬಿಟ್ಟು ಬದುಕಬಹುದು . ನೆಂಟರು, ಸ್ನೇಹಿತರು , ಆಪ್ತರು,ಸಾಯುವಾಗ ತೆಗದುಕೊಂಡು ಹೋಗದೇ ಇರುವ ಐಶ್ವರ್ಯಗಳು ಇವೆಲ್ಲವನ್ನೂ ಬಿಟ್ಟು ಬದುಕಬಹುದು ,ಹಾಗೆ ಬದುಕಿದವರು ಇದ್ದಾರೆ. ಆದರೇ ನೆನಪುಗಳನ್ನು ಬಿಟ್ಟು ಬದುಕುವುದು ಅಸಾಧ್ಯ? ನಾವು ಅವುಗಳನ್ನು ಬಿಟ್ಟು ಬದುಕುತ್ತೇವೆ ಆಂದರೂ ,ಅವುಗಳು ನಮ್ಮನ್ನು ಬಿಡುವುದಿಲ್ಲ. ಆಗಾಗ ಒಂದಲ್ಲಾ ಒಂದು ರೀತಿ ನಮ್ಮೊಂದಿಗೆ  ತಗಲು ಹಾಕಿಕೊಳ್ಳುತ್ತಲೇ ಇರುತ್ತವೆ. ಬಹುಶಃ  ಶನಿಯೂ ಕೂಡ ನಮ್ಮನ್ನು ಕಾಡುವುದು ಬಿಡಬಹುದು ,ಆದರೆ ಈ ನೆನಪುಗಳು ಮಾತ್ರ ನಮ್ಮನ್ನು  ಬಿಡುವುದಿಲ್ಲ. ಅವುಗಳು ನಮ್ಮಿಂದ ದೂರ ಆಗುವುದು ಒಮ್ಮೆ ಮಾತ್ರ ಅನ್ನಿಸುತ್ತದೆ. ಅದೇ ನಾವು ಸತ್ತಾಗ.
                                                                ಆದರೆ ನಾವು ಇಲ್ಲಿ ಗಮನಿಸಬೇಕಾದ ಒಂದು ವಿಷಯ ಇದೆ. ಸತ್ತ ಮೇಲೆ ನಾವೇನೋ ನೆನೆಪುಗಳಿಂದ ಮುಕ್ತವಾಗಿ ಬಿಡುತ್ತೇವೆ. ಆದರೆ ಆ ಘಳಿಗೆಯಿಂದ,  ನಾವು ನೆನೆಪುಗಳಾಗಿ ಬದುಕುಳಿದವರಲ್ಲಿ ಉಳಿಯುತ್ತೇವೆ. ನಾವುಗಳು ಸತ್ತ ಮೇಲೆ ಜನರ ಮನದಲ್ಲಿ ಒಳ್ಳೆಯ ನೆನೆಪಗಳಾಗಿ ಉಳಿಯುತ್ತೇವೆಯೋ,ಕೆಟ್ಟ ನೆನಪುಗಳಾಗಿ ಉಳಿಯುತ್ತೇವೆಯೋ ಅದು ನಮ್ಮ ಬದುಕಿನ ಶೈಲಿ ಮೇಲೆ ಅವಲಂಭಿತವಾಗಿರುತ್ತದೆ.ನಾವು ಬದುಕುವ  ನಾಲ್ಕು ದಿನದಲ್ಲಿ ಬೇರೆಯವರ ಬದುಕಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತೇವೆಯೋ,ಆ ರೀತಿಯ ನೆನಪುಗಳಾಗಿ ಅವರ ಮನದಲ್ಲಿ ಉಳಿಯುತ್ತೇವೆ.ನಿಜ ಹೇಳಬೇಕೆಂದರೆ  ಒಬ್ಬ   ಮನುಷ್ಯ  ಎಷ್ಟರಮಟ್ಟಿಗೆ ಸಾರ್ಥಕ   ಬದುಕು ಬದುಕಿದ್ದಾನೆ ಎಂಬುದನ್ನು ,ಅವನು ಬಿಟ್ಟು ಹೋದ ನೆನಪುಗಳಿಂದ ಕಣ್ಣುಹಿಡಿಯಬಹುದು.
           ಕೆಲವೊಂದು ವ್ಯಕ್ತಿಗಳು ಇದಕ್ಕೆ  ಉದಾಹರಣೆಯಾಗಿ ನಿಲ್ಲುತ್ತಾರೆ.ಸತ್ತ ಹಲವು ವರ್ಷಗಳ ನಂತರವೂ ಅವರ ನೆನಪುಗಳು ಜನರ ಮನಸಿನಲ್ಲಿ ಹಸಿರಾಗಿಯೇ ಉಳಿದಿರುತ್ತದೆ. ಆದರೆ ಅದರಲ್ಲೂ ಇದರಲ್ಲೂ ಇಬ್ಬರು ತರಹದ  ವ್ಯಕ್ತಿಗಳು ಇರುತ್ತಾರೆ. ಒಬ್ಬರ ನೆನಪಾದಾಗ ನಮ್ಮ ಮನಸ್ಸಿಗೆ ಖುಷಿಯಾಗುತ್ತದೆ.ಸ್ಪೂರ್ತಿ ತುಂಬಿ ಬರುತ್ತದೆ . ಅವರ ನೆನಪುಗಳು ನಮ್ಮ ಮನಸ್ಸಿಗೆ ಮುದ ನೀಡುತ್ತದೆ. ಅದೇ ಇನ್ನೊಂದು ತರಹದ ವ್ಯಕ್ತಿಗಳು ಇದ್ದಾರೆ ಅವರ ನೆನಪು ಆದರೆ ಮನಸ್ಸಿಗೆ ಕಸಿವಿಸಿ.ಯಾಕಾದರೂ   ನೆನಪಿಸಿಕೊಂಡೆವೋ ಅನ್ನಿಸಿಬಿಡುತ್ತದೆ. ನಾವು ಪ್ರತಿಯೊಂದು ಹೆಜ್ಜೆ ಇಡುವ ಹೊತ್ತಿಗೆ ಈ ವಿಷಯ ಗಮನದಲ್ಲಿ ಇಟ್ಟು ಕೊಂಡರೆ ಒಳ್ಳೆಯದು.  ಸತ್ತ ಮೇಲೆ ಜನರ ಮನಸಿನಲ್ಲಿ ಒಳ್ಳೆಯ ನೆನಪುಗಳಾಗಿ ಉಳಿಯುವಂತೆ ಬದುಕೋಣ    .ಏನಂತೀರಾ?
  ಅದೇನೋ ಗೊತ್ತಿಲ್ಲಾ ,ನಾನೇನೋ ಬರೆಯಲು ಹೋಗಿದ್ದೆ. ಆದರೆ ಈ ನೆನಪುಗಳು ಒಂದಾದರ ಮೇಲೊಂದು ನನ್ನ ಕಣ್ಣ ಮುಂದೆ ಬರಲು ಶುರು ಆಗಿ ಇವುಗಳ ಬಗ್ಗೆ ಬರೆದೆ.ನೆನಪುಗಳ ಶಕ್ತಿಯೇ ಹಾಗೆ. ಅಲ್ಲವೇ?
English Summary:So many incidents occur in our daily life.But only some of them get registered in our mind and we call them memories.These memories are like waves.They keep on kissing the shore.Some of the waves just make the shore wet,some take away with them things which were on shore.Some waves bring some new things to shore .Some of them keep on hitting like tsunami waves which cause heart attack.One can live his life leaving relationships,property etc etc but not these memories.Actually we may try to forget these memories but they will not leave us.They leave us only once and that is when we die.But after our death we remain as memories in other people's heart.But its our life which decides whether we remain as good or bad memories. So,we have to lead a good life in order to remain as good memories after we die.

ಗುರುವಾರ, ಅಕ್ಟೋಬರ್ 17, 2013

ಗಂಡು ಜೀವಿಗಳು ಮಾಡುವ ಕಾಮನ್ ತಪ್ಪು

        ನಾವು ಹುಡುಗರೇ ಹಾಗಾ ? ಅಥವಾ ಈ ಹುಡುಗಿಯರೇ ಹಾಗಾ? ದೇವರು ನಮಗೆ ಅವರ ಮನಸು ಅರ್ಥ ಮಾಡಿಕೊಳ್ಳಲು ಶಕ್ತಿ ಕೊಡ್ಲಿಲ್ಲವೋ?ಅಥವಾ ಅವರ ಮನಸ್ಸನ್ನೇ ಅಷ್ಟೊಂದು ನಿಗೂಢ ವಾಗಿ ತಯಾರಿಸಿದನೋ ? ನಾವು ಹುಡುಗರು ದಡ್ಡರೋ ಅಥವಾ ಈ ಹುಡುಗಿಯರು ಜಾಣರೋ?ನಮಗೇ ಸಿಕ್ಕಾಪಟ್ಟೆ testosterone ತಯಾರಿಸೋ ಯಂತ್ರ ಇಟ್ಟುಬಿಟ್ಟು,ಅವರಿಗೆ ಅವ್ರ ಹಾರ್ಮೋನ್ ಗಳು ಮಾತ್ರ ಇತಿಮಿತಿಯಲ್ಲಿ ತಯಾರು ಆಗುವ ಹಾಗೆ ಮಾಡಿಬಿಟ್ಟ್ನೋ ? ನಮಗೆ ಆಕಾರಗಳ ಬಗ್ಗೆ ವ್ಯಾಮೋಹ ಇಟ್ಟ,ಅವರಿಗೆ ಮಾತ್ರ ಬಣ್ಣಗಳ ಮೇಲೆ ಇಟ್ಟ?ಏನೇ ಹೇಳಿ ಈ ಮೇಲಿರೋನು ಸಾಮನ್ಯ ಅಲ್ಲಾ. ಪಕ್ಕಾ ಖಿಲಾಡಿ. ಯಾಕೆ ಅಂದರೆ ನಮಗೆ ಈ ಹೃದಯಗಳ ಲೆಕ್ಕಾಚಾರ ಗೊತ್ತೇ ಆಗೋಲ್ಲಾ. ಆದರೆ ಆ ಹೃದಯಗಳ ಜೊತೆ ಆಟ ಆಡಿ ಸಮಯ ಕಳೆಯೋ ಮಹಾ ಆಟಗಾರ ಅವನು.

              ಇವೆಲ್ಲಾ ಯಾಕೆ ಹೇಳ್ತಾ ಇದೀನಿ ಅಂತ ಕೇಳ್ತಾ ಇದೀರಾ? ಕಾರಣ ಇದೆ. ಈ ಹುಡುಗರ ಮನಸಿಗೆ ಸ್ನೇಹ ಯಾವುದು ,ಪ್ರೀತಿ ಯಾವುದು ಅನ್ನೋ ಸೂಕ್ಷ್ಮ ಕಣ್ಣು ಹಿಡಿಯೋ ಮೆದುಳಿನ ಭಾಗ ಕೊಡೋದೂ ಮರೆತು ಬಿಟ್ಟ. ನಮಗೆ ಪ್ರೀತಿ ಅನ್ನಿಸಿದ್ದು ,ಈ ಹುಡುಗಿಯರಿಗೆ ಸ್ನೇಹ ಆಗಿರುತ್ತೆ. ಅವಳು ನಮ್ಮ ಜೊತೆ ಸಿನೆಮಾ ಬರೋ ಹಾಗಿಲ್ಲಾ ,ನಾವುಗಳು ಹೀರೋ ತರ ಕುಣಿಯೋಕೆ ಶುರು ಮಾಡ್ತೀವಿ.ನಮ್ಮ ಪ್ಲೇಟ್ ಅಲ್ಲಿ ಕೈ ಹಾಕಿ ತಿನ್ನೋಕೆ ಶುರು ಮಾಡಿದ ಕೂಡಲೇ ,ಓ ಇದು ಅದೇ ಅಂತ ಮನಸ್ಸೊಳಗೇ ಐಸ್ ಕ್ಯಾಂಡಿ ತಿನ್ನೋಕೆ ಶುರು ಮಾಡ್ತೀವಿ. ಅವಳು ಹಾಗೆ ಒಂದೇಟು ಮಾತಿನ ಮಧ್ಯೆ ಹೊಡೆಯೋ ಹಾಗಿಲ್ಲಾ ,ನಾವು ಅದಾಗಲೇ ನಮ್ಮ ಲೋಕದಲಿ ಲಗಾಟಿ ಹೊಡೆಯೋಕೆ ಶುರು ಮಾಡಿರ್ತೀವಿ. ಛೇ ನೀನಿಲ್ಲ ಅಂದರೆ ಸಿಕ್ಕಾಪಟ್ಟೆ ಬೋರು ಅಂತ ಅವಳು ಹೇಳಿದ್ದರೆ, ಛೇ ಜೀವನ ಪೂರ್ತಿ ನೀನು ನನ್ನ ಜೊತೆ ಇರ್ತೀಯಾ ಅಂತ ನಮ್ಮ ಕಿವಿಗೆ ಬಿದ್ದಿರುತ್ತೆ.

              ನಮ್ಮ ಹಾಳದ ಮನಸ್ಸಿಗೆ ಅವಳು ನಮ್ಮನ್ನು ಒಬ್ಬ ಸ್ನೇಹಿತನ ತರ ನೋಡ್ತಾ ಇದಾಳೆ ಅನ್ನಿಸೋದೆ ಇಲ್ಲಾ. ಅವಳಿಗೂ ನನ್ನ ಕಂಡ್ರೆ ಇಷ್ಟ ಇರಬಹುದು,ಹೇಳೋಕೆ ನಾಚಿಕೆ. ಒಮ್ಮೆ ಕೇಳಿ, ಒಂದು ಕೈ ನೋಡಿಬಿಡೋಣ ಆಂತ ಕೇಳಿಯೇ ಬಿಡುತ್ತೇವೆ.ನಾವುಗಳು ಬೈಕ್,ಕಾರ್ ಮಾಡೆಲ್ ಗಳು ಸುಲಭವಾಗಿ ಗುರುತಿಸುತ್ತೇವೆಯೋ ಹೊರತು, ಈ ಸ್ನೇಹ,ಪ್ರೀತಿ ನಡುವೆ ವ್ಯತ್ಯಾಸ ಗೊತ್ತೇ ಆಗೋಲ್ಲಾ.

               ಹೇಳಾದ ಮೇಲೆ ,ಅವಳು ಕಣ್ಣೀರು ಹಾಕಿದ ಮೇಲೆ , ಒಂದಿಷ್ಟು ರಾದ್ಧಾಂತ ಆದ ಮೇಲೆ, ನಮಗೆ ಗೊತ್ತಾಗುವುದು "ಛೇ ತಪ್ಪು ಮಾಡಿಬಿಟ್ಟ್ವಿ" ಅಂತ. ಆದರೆ ಏನು ಮಾಡೋದು ಮೊದಲಿನಂತೆ ಮತ್ತೇ ಯಾವುದು ಆಗೋಲ್ಲಾ. ನಾವು "worth a shot " ಅಂದು ಕೊಂಡು ಮಾಡಿದ್ದು ,ಅವರಿಗೆ ನಂಬಿಕೆ ದ್ರೋಹ ಆಗಿರುತ್ತೆ. ತಪ್ಪು ಒಂಥರಾ ನಮ್ಮದೇ ಅಂತ ಅನ್ನಿಸೋಕೆ ಶುರು ಆಗೋದೆ ಆಗ. ಆದರೆ ಕೆಲವು ಹುಡುಗರಿಗೆ ಅದು ಅನ್ನಿಸೋದೆ ಇಲ್ಲಾ.(ಆಗಲೇ ಹುಡುಗಿಯರ ಫೋನ್ ನಂಬರ ಗಳು ಬಾತ್ರೂಮ್ಗಳಲ್ಲಿ ಕಾಣಿಸುವುದು.)

        ಉಪ್ಪು ಖಾರ ತಿನ್ನೋ ಎಲ್ಲಾ ಹುಡುಗರಿಗೆ ಒಂದಲ್ಲಾ ಒಂದು ಸಲ ಈ ತರಹದ ಅನುಭವಗಳು ಆಗಿಯೇ  ಆಗಿರುತ್ತೆ.ಕೆಲವೊಮ್ಮೆ ತಪ್ಪೂ ಮಾಡಿರ್ತೀವಿ.ಏನು ಮಾಡೋಕೆ ಆಗೋಲ್ಲಾ? ನಮ್ಮ ಲೆಕ್ಕಾಚಾರ ಅವರ ಕಣ್ಣಿನಲ್ಲಿ ನೀರು ತರಿಸುತ್ತೆ ಅನ್ನೋ ಲೆಕ್ಕಾಚಾರ ನಮಗೆ ತಿಳಿಯೋದು ಸ್ವಲ್ಪ ತಡ. ಜೀವನದಲ್ಲಿ ಏನು ಮಾಡದೇ ಇರೋ ಬದಲು ,ತಪ್ಪುಗಳು ಮಾಡೋದು ಒಂಥರಾ ಒಳ್ಳೆಯದು. ಸ್ವಲ್ಪ ಬುದ್ಧಿ ಆದ್ರೂ ಬರುತ್ತೆ.

             ಏನೋ ಸ್ವಲ್ಪ ಅನುಭವ ,ಸ್ವಲ್ಪ ನೋಡಿ ತಿಳಿದುಕೊಂಡಿದ್ದು. ಏನೋ  ಹಂಚಿಕೊಳ್ಳಬೇಕು ಅನ್ನಿಸಿತು.ಗಂಡು ಅಭಿಮಾನಿಗಳು ಸ್ವಲ್ಪ ಸಿಟ್ಟಾಗಿದೀರಾ ಅಂತ ಗೊತ್ತು. ಇವ್ನು ಸರಿಯಿಲ್ಲಾ ಅನಿಸುತ್ತೆ ,ನಾವೂ ಹುಡುಗರು, ನಮಗೆ ಇದ್ಯಾವ್ದೂ ಅನ್ನಿಸಿಯೇ ಇಲ್ಲ ಅಂತ ಬಯ್ಕೋತಿರಬಹುದು. ಇರಲಿ ಬಿಡಿ, ಗುಂಪಿನಲ್ಲಿ ಹೂಸು ಬಿಟ್ಟಾಗ ,ಮೊದಲು ಬಯ್ಯುವುದೇ ......ಮುಂದೆ ಬೇಕಾ?
English summary: I don't know whether the boys are wrong or whether the gals are right?I don't know whether we don't understand gals or the gals themselves are the weird creatures.Sometimes I think its all fault of god. Because he gave boys, sharp eyes which could identify the model of the bike,car or any vehicle.But when it comes to identify whether the gal with whom he is hanging out ,is a friend or lover, he always fails.We boys ,often misunderstand the friendship of girl to love .We think even she might be in love with us ,but she may be shy to express.And then we end up in proposing.Then everything goes wrong.Even after  we understand the truth and then ask sorry,things never gonna be normal.According to me, this has happened with most of us .We make mistakes.Its ok .Its better doing mistakes in life than spending a life doing nothing.But we should learn from our mistakes.

ಸೋಮವಾರ, ಅಕ್ಟೋಬರ್ 14, 2013

ಗರ್ಲ್ ಫ್ರೆಂಡ್ ಅಂತ ಒಬ್ಬಳೇ ಇರಲೇಬೇಕಾ?


       ಇಂತಹ ಘಟನೆಗಳು ಬರೀ ನನ್ನ ಜೀವನದಲ್ಲಿ ನಡೆಯುತ್ತದೋ ಅಥವಾ ಎಲ್ಲರ ಜೀವನದಲ್ಲಿ ನಡೆಯುತ್ತದೋ ಗೊತ್ತಿಲ್ಲಾ.ನಾನು ಒಂಟಿ ಗೂಬೆ ,ಬೇರೆಯವರೆಲ್ಲಾ ಜೋಡಿ ಹಕ್ಕಿಗಳು ಎಂಬ ಭಾವನೆ ನನಗೊಬ್ಬನಿಗೆ ಮಾತ್ರ ಅನಿಸುತ್ತದೆಯೋ ಅಥವಾ ಎಲ್ಲರಿಗೂ ಅನಿಸುತ್ತದೆಯೋ ಗೊತ್ತಿಲ್ಲಾ.ಇದು ವಯಸ್ಸಿನ ಪ್ರಭಾವವೋ ಅಥವಾ ನನಗೆ ಸಿಗುವ ಜನರ ಮಾತುಗಳ ಪ್ರಭಾವವೋ ,ಅದೂ ನಾ ಕಾಣೆ?ಇದು ಸರಿಯೋ ,ತಪ್ಪೋ ಅದೂ ನಾ ಕಾಣೆ?ಒಂದಂತೂ ನಿಜ .ಇಂತಹ ಘಟನೆಗಳು ಬೇರೆಯವರ ಜೀವನದಲ್ಲಿ ನಡೆದೇ ಇಲ್ಲಾ ಎಂದು ಹೇಳಲು ಆಗುವುದಿಲ್ಲಾ. ಆದರೆ ಅವರು ಯಾರು ಬಾಯಿ ಬಿಟ್ಟಿಲ್ಲಾ ಅನ್ನುವುದಂತೂ ನಿಜ.ನಾವು ಊರಿಗೆ ದೊಡ್ಡವರು ನೋಡಿ(ಅಂದರೆ ಮೂರು ಬಿಟ್ಟವರು ಅಂತ ) . ಅದಕೆ ಎಲ್ಲಾ ಇಲ್ಲಿ ಹೇಳಿಕೊಂಡಿರುವೆ .ಇದನ್ನು ಓದಿ ,ಕೊನೆಗೆ ನಿಮಗೂ ಇವೆಲ್ಲಾ ನಿಜ ಅನಿಸಿದರೆ ಓಳ್ಳೆಯದು ,ಇಲ್ಲ ಅಂದರೆ ಸುಮ್ಮನೆ ಮನಸಿನಲ್ಲಿಯೇ ಬೈದುಕೊಂಡು ಸುಮ್ಮನಾಗಿಬಿಡಿ.

ಘಟನೆ 1
ಈಗಂತೂ ಮೀಸೆ ಚಿಗುರದ ಹುಡುಗರೆಲ್ಲಾ ಬೈಕ್, ಕಾರ್ ಓಡಿಸುತ್ತಾರೆ.ಹೀಗಿರುವಾಗ ಎರಡು ಕತ್ತೆಗೆ ಆಗುವ ವಯಸ್ಸು ಆದರೂ ನನಗೆ ಕಾರ್ ಓಡಿಸಲು ಬರುತ್ತಿರಲಿಲ್ಲ ಅಥವಾ ಲೈಸೆನ್ಸ್ ಇರಲಿಲ್ಲ. ಅದಕ್ಕೆ ಕಾರ್ ಡ್ರೈವಿಂಗ್ ಕಲಿತು ,ಲೈಸೆನ್ಸ್ ಮಾಡಿಸಿಕೊಂಡು ,ನನ್ನ ವಯಸ್ಸಿನ ಗಂಡಸರೆಲ್ಲಾ ಮಾಡುವ ಕೆಲಸ ಮಾಡೋಣ ಅಂದುಕೊಂಡು ಡ್ರೈವಿಂಗ್ ಕ್ಲಾಸ್ ಸೇರಿಕೊಂಡೆ. ಅಲ್ಲಿ ಕಾರ್ ಹೇಳಿಕೊಡುವವನು ಸ್ವಲ್ಪ ಬೇಗನೆ ಪರಿಚಯ ಆದ. ಕಾರ್ ಹೇಳಿಕೊಡುವಾಗ ,ಕ್ಲಾಸ್ ಮಧ್ಯೆ ಚಹಾ ಕುಡಿಯುವಾಗ ಒಬ್ಬರೊಬ್ಬರ ಜೀವನದ ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಿದ್ದೆವು. ಹೀಗೆ ಒಂದು ದಿನ ಐದನೇ ಗೇರಿನಲ್ಲಿ ಒಮ್ಮೆ ಓಡಿಸುವುದು ಕಲಿಯುತ್ತಿದ್ದಾಗ ಟೀಚರ್ ಕೇಳಿದ " ಸರ್,ನಿಮಗೆ ಗರ್ಲ್ ಫ್ರೆಂಡ್ ಇದಾರ?". ತಕ್ಷಣ ಐದನೇ ಗೇರಿನಲ್ಲಿ ಓಡುತ್ತಿದ್ದವನು ನಾಲ್ಕನೇ ಗೇರಿಗೆ ಬಂದೆ."ಇಲ್ಲಾ" ಅಂದೆ. ಅವನು "ಏನ್ ಸಾರ್? ಚೆನ್ನಾಗಿ ಓದಿಕೊಂಡಿದೀರಾ, ಓಳ್ಳೆ ಕೆಲ್ಸ ಬೇರೆ,ಕೆಂಪುಕೆಂಪಾಗಿದೀರಾ.ನೋಡೋಕು ಸ್ವಲ್ಪ ಚೈನೀಸ್ ತರಹ ಇದ್ರೂ ಒಂದು ರೇಂಜಿಗೆ ಪರವಾಗಿಲ್ಲಾ. ಅಷ್ಟೇ ಅಲ್ಲದೇ, ನಿಮ್ಮ ಕಂಪೆನಿಯಲ್ಲೂ ಒಳ್ಳೆ ಓಳ್ಳೇ ಹುಡುಗಿಯರಿದಾರೆ. ಇಷ್ಟು ಎಲ್ಲಾ ಆದ್ರೂ ನಿಮಗೆ ಗರ್ಲ್ ಫ್ರೆಂಡ್ ಇಲ್ವ್ವಾ.ಸುಳ್ಳು ಹೇಳ್ಬೇಡಿ". ಅದು ಹೇಗಿತ್ತೆಂದರೆ ಸ್ಟೇಜ್ ಹತ್ತಿಸಿ ಶಾಲು ಹಾಕಿಸಿ ,ಸನ್ಮಾನ ಮಾಡಿಸಿ ಆಮೇಲೆ ಸಭಿಕರ ಕೈಯಿಂದ ಮೊಟ್ಟೆ ಹೊಡೆಸಿದ ಹಾಗೆ ಆಯಿತು.ನಾನು ಮತ್ತೆ ಮೂರನೆ ಗೇರಿಗೆ ಬಂದು" ಇಲ್ಲಾ ಸಾರ್,ನಿಮಗೆ ಇದಾರ ?" ಅಂದೆ. ಅದಕೆ ಅವನು "ಇದ್ದಳು ಸಾರ್. ಆಮೇಲೆ ಬೇರೆಯವರು ಜೊತೆ ಮದುವೆ ಆದಳು .ಈಗ ಪಕ್ಕದ್ಮನೆ ಹುಡುಗಿ ಬಿದ್ದಿದಾಳೆ" ಆಂತ ಅವನು ಅನ್ನುತ್ತಿದ್ದ ಹಾಗೆ ನನಗೇ ಶಾಕ್ ಹೊಡೆದಂತಾಗಿ ಗಾಡಿ ನಿಲ್ಲಿಸಿಯೇಬಿಟ್ಟೆ. ಇಷ್ಟೇ ಅಲ್ಲಾ ಡ್ರೈವಿಂಗ್ ಮುಗಿದು ಹೋಗುತ್ತಿದ್ದ ಕೊನೆಯ ದಿನ, ಆತ ನನಗೆ ಬೇಜಾರು ಮಾಡಿಕೊಳ್ಳಬೇಡಿ ಅಂತ ಸಮಾಧಾನ ಕೂಡ ಮಾಡಿದ. ಅಷ್ಟೇ ಅಲ್ಲಾ ಫ್ರೀ ಟಿಪ್ಸ್ ಬೇರೆ. ಚೆನ್ನಾಗಿ ಓದಿ ಪಧವೀಧರನಾಗಿ, ಕೈ ತುಂಬಾ ಸಂಬಳ ತರುವ ಕೆಲ್ಸದಲ್ಲಿ ಇದ್ದು, ಪ್ರತಿ ಸಾರಿಯೂ ಓಟು ಹಾಕಿ,ತಿಂಗಳು ತಿಂಗಳು ಕಂದಾಯ ಕಟ್ಟಿ ಒಳ್ಳೆಯ ಪ್ರಜೆ ತರಹ ಸಾರ್ಥಕ ಜೀವನ ನಡೆಸುತ್ತಾ ಇದ್ದೀನಿ ಆಂತ ನನ್ನಷ್ಟ್ಕಕೇ ನಾನು ಬೀಗುತ್ತಿದ್ದೆ. ಆದರೆ ಆವತ್ತು ಆ ಡ್ರೈವರ್ ಕಣ್ಣುಗಳ ಮುಂದೆ ನಾನು ನಿಷ್ಪ್ರಯೋಜಕನಂತೆ ಕಂಡೆ? ಯಾಕೆ?
ಘಟನೆ 2
ಮೈಸೂರಿನಿಂದ ಹರಿಹರಕ್ಕೆ ಮನೆಗೆ ಬಸ್ಸಿನಲ್ಲಿ ಹೋಗುತ್ತಿದೆ.ಪಕ್ಕದಲ್ಲಿ ಹುಡುಗಿಯೊಬ್ಬಲು ಕುಳಿತಿದ್ದಳು.ಮೈಸೂರಿನಿಂದ ಫೋನಿನಲ್ಲಿ ಮಾತನಾಡುವುದು ಶುರು ಮಾಡಿದವಳು, ಎರಡು ಗಂಟೆ ಅದರಲ್ಲಿಯೇ ಮುಳುಗಿಹೋಗಿದ್ದಳು.ನಾನು ನನ್ನಷ್ಟಕ್ಕೇ ಯಾವುದೋ ಪುಸ್ತಕ ಓದುತ್ತಾ ಕುಳಿತಿದ್ದೆ. ಅದರೂ ಹಾಳಾದ ಕಿವಿಗೆ ಅವಳ ಮಾತು ಕೇಳಿಸುತ್ತಿತ್ತು. ಅವಳು ತನ್ನ ಪ್ರಿಯಕರನೊಡನೆ ಮಾತನಾಡುತ್ತಿದ್ದಳು.ಎರಡು ಗಂಟೆ ಅವಳು "ನೀನು ಊಟ ಮಾಡಿದ್ಯಾ ?ನೀನು ಮಾಡಿದರೆ ಮಾತ್ರ ನಾನು ಮಾಡುವುದು "ಇವು ಎರಡನ್ನು ನೂರು ಸಲ ರಿಪೀಟ್ ಮಾಡುವುದು ಬಿಟ್ಟು ಬೇರೆಯದೇನು ಮಾತನಾಡಲಿಲ್ಲಾ. ಆಮೇಲೆ ಸಿಗ್ನಲ್ ಹೋಯಿತು ಅನಿಸುತ್ತೆ ,ಪಕ್ಕದಲ್ಲಿ ಇದ್ದ ನನ್ನನು ಮಾತನಾಡಿಸಲು ಶುರು ಮಾಡಿದಳು. ಹೀಗೆ ಓರು,ಮನೆ,ಕುಲಗೋತ್ರ ಪರಿಚಯ ಆಗುತ್ತಿದ್ದ ಹಾಗೆ ನಾನು ಫೋನಿನಲ್ಲಿ ಯಾರು ನಿಮ್ಮ ಬಾಯ್ ಫ್ರೆಂಡ್ ಹಾ? ಅಂತ ಕೇಳಿಯೇ ಬಿಟ್ಟೆ. ಅವಳು ಅಷ್ಟಕ್ಕೇ ತನ್ನ ಲವ್ ಸ್ಟೋರಿಯನ್ನು ಮುಂಗಾರುಮಳೆ ಲೆವಲ್ಗೆ ಹೇಳಿದಳು.ಎಲ್ಲಾ ಆದ್ಮೇಲೆ ಮತ್ತದೇ ಪ್ರಶ್ನೆ "ನಿಮಗೆ ಇಲ್ವಾ?". ನಾನು ಇಲ್ಲಾ ಅಂದೆ. ಆಗ ಅವಳಿಂದ ಬಂದ ಉತ್ತರ" ಆವಾಗಿಂದ ಕೆಲ್ಸಕ್ಕೆ ಬಾರದೇ ಇರೋ ಪುಸ್ತಕ ಓದುತ್ತಿರುವಾಗಲೇ ಅಂದುಕೊಂಡೆ." ಇದನ್ನು ಹೇಳಿ ಆಕೆ ಜೋರಾಗಿ ನಗಲು ಶುರು ಮಾಡಿದಳು. ನನಗೆ ನನ್ನ ಹವ್ಯಾಸಗಳ ಬಗ್ಗೆ ಒಂದು ತರಹ ಹೆಮ್ಮೆ ಇತ್ತು. ಪುಸ್ತಕ ಓದುವುದು ,ಕವನ ಬರೆಯುವುದು ಹೀಗೆ ನಾನು ಎನೋ ದೊಡ್ಡ ದೊಡ್ದ ಸಾಧನೆ ಮಾಡುತ್ತಿದ್ದೇನೆಂದು ಆಂದುಕೊಂಡಿದ್ದೆ. ಆದರೆ ಅವಳ ನಗು ಅದನ್ನು ಎಲ್ಲಾ ಕುಟ್ಟಿ ಪುಡಿ ಮಾಡಿತು . ನಾನೊಬ್ಬ ಒಂಟಿ ಗೂಬೆ ,ಅದಕೆ ಬ್ಯಾರೆ ಕ್ಯಾಮೆ ಇಲ್ಲದೇ ಇವೆಲ್ಲಾ ಮಾಡುತ್ತಿದ್ದೇನೆಂದು ಅವಳ ನಗು ಹೇಳುತಿತ್ತು.
ಘಟನೆ 3
ಫ಼ೆಭ್ರವರಿ ಹದಿನಾಲ್ಕು ನಮಗೆ ಅಂದರೆ ನಮ್ಮಂತ ಸಿಂಗಲ್ ಹುಡುಗರಿಗೆ ಡ್ರೈ ಡೇ. ಜೋಡಿಗಳು ಹಬ್ಬವನ್ನು ಆಚರಿಸುವುದು ನೋಡಿ, ನಮ್ಮಂತವರು ಹೊಟ್ಟೆ ಉರಿದುಕ್ಕೊಳ್ಳುತ್ತಾ "ಮುಂಡೆ ನನ್ನ ಮಕ್ಕಳಿಗೆ ಬೇರೆ ಕೆಲ್ಸ ಇಲ್ಲಾ.ನಮ್ಮ ಸಂಸ್ಕೃತಿ ಹಾಳು ಮಾಡೋಕೆ ಹುಟ್ಟಿದಾರೆ ಆಂತ ಬಯ್ಯುತ್ತಾ ಕೂರುವುದೇ ನಮ್ಮ ಕೆಲಸ. ಹೀಗೆ ಒಂದು ವಾಲೆಂಟೈನ್ಸ್ ದಿನ ಸಾಯಂಕಾಲ ಗೋಲಗಪ್ಪಾ ತಿನ್ನಲು ಹೋದೆ. ತುಂಬಾ ದಿನದಿಂದ ಒಂದೇ ಕಡೆ ತಿನ್ನುತ್ತಿದ್ದರಿಂದ ಗೋಲ್ಗೊಪ್ಪಾ ಅಂಗಡಿಯವನು ಪರಿಚಯ ಆಗಿದ್ದ.ಗೋಲ್ಗೊಪ್ಪಾ ಕೊಡುತ್ತಾ "ಎನ್ ಸಾರ್ .ಏನು ಸ್ಪೆಷಲ್ ಇವತ್ತು?" ಅಂತ ಕೇಳಿದ.ನಮ್ಮ ಕಡೆಯಿಂದ ಮತ್ತದೇ ಉತ್ತರ "ಅಯ್ಯೋ .ಏನಿಲ್ಲಪ್ಪಾ,ಮಾಮೂಲು ,ನಾವು ಈ ವಾಲೆಂಟೈನ್ಸ್ ಡೇ ಎಲ್ಲಾ ಆಚರಿಸೊಲ್ಲಾ" ಆಂದೆ.ಕಾರಣ ಅದಲ್ಲಾ ,ನಿಜ ಏನು ಅಂತ ನಿಮಗೂ ಗೊತ್ತು . ಹಾಗೆಯೇ "ನಿನ್ನದೇನು ಪ್ಲಾನ್ ?" ಅಂತ ಸುಮ್ಮನೆ ಪ್ರಶ್ನೆ ಬಿಸಾಕಿದೆ.ನಂಬಿದರೆ ನಂಬಿ ,ಬಿಟ್ಟರೆ ಬಿಡಿ ಆತ ತನ್ನ ಪ್ರೇಯಸಿಗೆ ಅಂದು ದುಬಾರಿ ಗಿಫ್ಟ್ ತೆಗುದುಕೊಂಡು ಹೋಗಿ,ಹೋಟೆಲಿನಲ್ಲಿ ಊಟ ಮಾಡಿಸುವ ಪ್ಲಾನ್ ಹಾಕಿದ್ದ. ಅವನ ಕಥೆ ಕೇಳುತ್ತಾ ಇದ್ದ ಹಾಗೆ ನನಗೆ ಕೆಮ್ಮು ಬರಲು ಶುರು ಆಯಿತು. ಯಾಕೋ ಮತ್ತದೇ ನೋವು..ಉಳಿದ ಎಲ್ಲರೂ ಅವರವರ ಜೋಡಿಗಳ ಜೊತೆ ಚೆನ್ನಾಗಿದ್ದಾರೆ, ನಾನೊಬ್ಬನೇ ಒಂಟಿ ಅನ್ನುವ ಭಾವನೆ.

            ಕೆಲವೊಮ್ಮೆ ನಮ್ಮ ಜೀವನದಲ್ಲಿ ನಮಗೆ ತುಂಬಾ ಅಮೂಲ್ಯ ಅನಿಸಿದ್ದು ,ಬೇರೆಯವರಿಗೆ ಅನ್ನಿಸಿದೇ ಇರಬಹುದು ಅನ್ನುವುದಕ್ಕೇ ಇಂತಹ ಘಟನೆಗಳು ಕೆಲವು ಉದಾಹರಣೆಗೆಳು ಅಷ್ಟೇ. ನನ್ನ ಜೀವನ ಶೈಲಿ,ನನ್ನ ಹವ್ಯಾಸಗಳು , ನನ್ನ ಒಂಟಿತನ ಬೇರೆಯವರಿಗೆ ನಗೆ ತರಿಸಬಹುದು. ಅವರ ಬದುಕು ನನಗೇ ಹಿಡಿಸಿದೇ ಇರಬಹುದು. ಉದಾಹರಣೆಗೆ ಅನ್ನ ಸಾಂಬಾರು ತಿನ್ನುವವನಿಗೆ ,ಎದುರುಗಡೆ ಮಟನ್ ತಿನ್ನುವವನು ಕಂಡು ಕಸಿವಿಸಿ ಯಾಗಬಹುದು. ಹಾಗೆಯೇ ಮಟನ್ ತಿನ್ನುವವನಿಗೆ ಅನ್ನ ಸಾಂಬಾರು ತಿನ್ನುವವನು ನೋಡಿ ಅದರಲ್ಲೇನಿದೆ ಏಂದು ನಗಬಹುದು. ಅವರವರ ಭಾವಕ್ಕೆ ,ಅವರವರ ಭಕುತಿಗೆ. ಈ ಮೇಲಿನ ವಿಷಯಗಳು ತಿಳಿದಿದ್ದರೂ ಕೂಡ, ಮೇಲಿನ ತರಹದ ಜನರು ಎದುರಾದಾಗ ನನ್ನ ಬಾಳು ಖಾಲಿ ಖಾಲಿ ಅನ್ನಿಸುವುದಂತೂ ನಿಜ.

         ಈಗಲೂ ನನ್ನ ತುಂಬಾ ಗೆಳೆಯ ಗೆಳತಿಯರು ನನಗೆ ಎನೇನೋ ಮಾಡುತ್ತಿರುತ್ತೀಯಾ? ಗರ್ಲ್ ಫ್ರೆಂಡ್ ಇಲ್ಲಾ ಅದಕೆ.ಒಂದು ಜೋಡಿ ಹುಡುಕೋ ಅಂದಾಗ ನನಗೇ ಮನಸಿನಲ್ಲಿ ಅನೇಕ ಪ್ರಶ್ನೆಗಳು ಹುಟ್ಟುತ್ತವೆ. ಹೌದಾ? ನನ್ನ ಒಂಟಿ ತನ ಕಳೆಯಲು ಇಷ್ಟೊಂದು ಹವ್ಯಾಸಗಳನ್ನು ಮೈಗೂಡಿಸಿಕೊಂಡಿದ್ದೀನಾ?ಅಥವಾ ಈಗಿನಾ ಲಿವಿಂಗ್ ಟುಗೆದರ್ ಕಾಲದಲ್ಲಿ ಗರ್ಲ್ ಫ್ರ್ಂಡ್ ಇದ್ದರೇ ಮಾತ್ರ ಒಬ್ಬ ಯಶಸ್ವೀ ಅನ್ನಿಸಿಕೊಳ್ಳುವುದಾ? ೨೫ ಆದ್ರೂ ಒಂದು ಸಂಗಾತಿ ಹುಡುಕಿಕೊಳ್ಳಲಾಗದ ನಾನು ಸಿಗದ ದ್ರಾಕ್ಷಿ ಹುಳಿಯೆಂಬಂತೆ ಸುಮ್ಮನೇ ನಾನು ಲವ್ ಬರ್ಡ್ಸ್ ಗಳ ವಿರುದ್ಧ ಹೊಟ್ಟೆ ಕಿಚ್ಚಿನ ಮಾತನಾಡುತ್ತಿದ್ದೀನಾ ? ಎನೋ ಗೊತ್ತಿಲ್ಲಾ. ಮೇಲಿನ ಘಟನೆಗಳು ನಡೆದಾಗ ಮಾತ್ರ ನನ್ನಲ್ಲಿ ಹತ್ತು ವರ್ಷದ ಪ್ರಶ್ನೆ ಪತ್ರಿಕೆಗಳಿಗೆ ಆಗುವಷ್ಟು ಪ್ರಶ್ನೆಗಳು ಹುಟ್ಟುವುದಂತೂ ನಿಜ.
English Summary: I don't know whether I am the only one to come across these type of  incidents or  does everybody come across these type of incidents.I don't know why do I  feel that I am the only one who is alone in this world and rest of the people in the world are love birds.May be because of the type of people I come across. These people whom I come across .keeps on asking to me "Do u have girl friend?". The answer from my side will be always "No".It is their response to that answer that always annoys me. They act such a way that my life is a waste, just because  I don't have a girl friend. They even don't forget to mention that I always keep myself busy in different hobbies, just because I am alone or just because I couldn't find one.Even though I don't care about society's response to my life style,but when I come across these above people,I get confused.They leave thousands of questions spinning around me.Why is that?

.

ಬುಧವಾರ, ಅಕ್ಟೋಬರ್ 2, 2013

ಗಾಂಧಿ ಸರ್ಕಲ್



ಇಂದು ಗಾಂಧಿ ಜಯಂತಿ .ನಮ್ಮ ದೇಶದ ಪಿತಾಮಹ. ನನಗೆ ವ್ಯಯಕ್ತಿಕವಾಗಿ ಗಾಂಧೀಜಿ ಯವರನ್ನು ಕಂಡರೆ ಅಷ್ಟಕ್ಕಷ್ಟೇ . ಆದರೆ ದೇಶವೇ ಒಬ್ಬನನ್ನು ನಾಯಕನನ್ನಾಗಿ ಒಪ್ಪಿಕೊಂಡ ಮೇಲೆ ಆ ವ್ಯಕ್ತಿಯಲ್ಲಿ ಆಂತದ್ದೇನೋ ಶಕ್ತಿ ಇರುವುದು ನಿಜ.ಅದಕ್ಕೇ ನಮ್ಮ ದೇಶದ ಗಡಿಯಾಚೆಗೂ ಅವರ ಅಭಿಮಾನಿಗಳು ಇದ್ದಾರೆ. ಅವರನ್ನು ಹಾಡಿ ಹೊಗಳುವವರಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರಲ್ಲಿ ಗಾಂಧೀಜಿಯವರು ಪ್ರಮುಖ ಪಾತ್ರ ವಹಿಸಿದ್ದರು(ಅವರೇ ತಂದುಕೊಟ್ಟರು ಎಂದು ಒಪ್ಪಿಕೊಳ್ಳುವುದು ನನಗೇ ಕಷ್ಟ,ಆದರೆ ಅವರ ಹುಟ್ಟುಹಬ್ಬದ ದಿನದಂದು, ಸುಮ್ಮನೇ ಇಲ್ಲದೇ ಇರೋದನ್ನು ಯಾಕೆ ಕೆದುಕೋದು?).ಆದೊಂದೇ ಆಗಿದ್ದರೆ ನಾವು ಗಾಂಧೀಜಿಯವರನ್ನು ಮರೆತು ಹೋಗುತ್ತಿದ್ದೆವು ಅನಿಸುತ್ತದೆ.
          ಆದರೆ ಗಾಂಧೀಜಿಯವರು ಇಂದಿಗೂ ಪ್ರಸ್ತುತ ಅನ್ನಿಸುವುದಕ್ಕೆ ,ಇನ್ನೂ ಅನೇಕ ಕಾರಣಗಳಿವೆ. ಅದು ಅವರ ಖಾದಿಮಯ ಸರಳ ಜೀವನವಿರಬಹುದು. ಬಂದೂಕು ಹಿಡಿದವರ ಮುಂದೆ ಅಹಿಂಸೆಯೆಂಬ ಅಸ್ತ್ರ ಉಪಯೋಗಿಸಿದ ರೀತಿ ಇರಬಹುದು. ಅಥವಾ ಒಂದು ವರ್ಷದ ಹಿಂದೆ ದೇಶದ ಜನರನ್ನು ಬಡಿದೆಬ್ಬಿಸಿದ ಲೋಕಪಾಲ ಮಸೂದೆಗಾಗಿ ನಡೆದ ಸತ್ಯಾಗ್ರಹ ಇರಬಹುದು. ಜಾತಿ ಪದ್ಧತಿ ,ವರ್ಣ ಭೇದ ವಿರುದ್ಧ ಅವರ ನಿಲುವುಇರಬಹುದು . (ಅಂಬೇಡ್ಕರ ತರಹ ಹಿಂದು ಧರ್ಮ ಬಿಡದೇ ,ಹಿಂದು ಧರ್ಮದಲ್ಲಿ ಇದ್ದುಕೊಂಡೇ ಅದನ್ನು ತಿದ್ದಲು ಹೋದ ರೀತಿಯನ್ನು ನಾವಿಲ್ಲಿ ಗಮನಿಸಬೇಕಾಗಿದೆ)." ಹೆಣ್ಣು ಒಬ್ಬಳು ಮಧ್ಯರಾತ್ರಿ ಸ್ವತಂತ್ರವಾಗಿ ಓಡಾದಿದ ದಿನ, ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನ" ಏಂದು ಅವರು ಹೇಳಿರುವ ಮಾತು ಇಂದು ನಮ್ಮ ಕಿವಿಗೆ ಬಿದ್ದರೆ ನಮಗೇ ನಾಚಿಕೆಯಾಗುತ್ತದೆ.
       ಗಾಂಧೀಜಿಯವರು ಸರಳವಾಗಿಯೇ ಬದುಕುತ್ತಾ , ಬದುಕಿನ ಮೌಲ್ಯಗಳನ್ನು ಸರಳವಾಗಿಯೇ ನಮಗೇ ತಿಳಿಹೇಳಿದ್ದಾರೆ. ಅದರಲ್ಲಿ ಅವರು ಪಾಲಿಸುತ್ತಿದ್ದ ಮೂರು ಮಂಗಗಳ ನೀತಿ ನನಗೇ ಬಹು ಹತ್ತಿರವಾದದ್ದು. ಈ ಮೂರು ಮಂಗಗಳಲ್ಲಿ ಒಂದು ತನ್ನ ಬಾಯಿ ಮುಚ್ಚಿಕೊಂಡಿರುತ್ತದೆ,ಇನ್ನೊಂದು ಕಿವಿ ಹಾಗು ಇನ್ನೊಂದು ಕಣ್ಣು ಮುಚ್ಚಿಕೊಂಡಿರುತ್ತದೆ. ನೋಡಿದಾಗ ನಮಗೇ ಇದರಲ್ಲಿ ಅಂತದ್ದೇನಿದೆ ಅನ್ನಿಸಬಹುದು. ಆದರೆ ಕೆಟ್ಟದ್ದನ್ನು ನೋಡಬೇಡಿ,ಕೆಟ್ಟದನ್ನು ಕೇಳಬೇಡಿ,ಕೆಟ್ಟದನ್ನು ಮಾತನಾಡಬೇಡಿ ಏಂಬ ಈ ಮಂಗಗಳ ತತ್ವ,ಈಗಿನ ನಮ್ಮ ಶಿಥಿಲ ಸಮಾಜವನ್ನು ಮತ್ತೆ ಸರಿಯಾದ ಹಳಿಯಲ್ಲಿ ತರುವ ನಿಟ್ಟಿನಲ್ಲಿ ನೋಡಿದಾಗ ಬಹಳ ಮಹತ್ವದೆನಿಸುತ್ತದೆ.
       ಗಾಂಧೀಜಿ ಇಂದು ನಮ್ಮೊಂದಿಗೆ ಇಲ್ಲಾ. ಆವರ ನೆನಪು ನಮ್ಮಲ್ಲಿ ಸದಾ ಇರಲಿ ಎಂದೇನೋ ಅವರ ಮೂರ್ತಿಯನ್ನು  ಕೆತ್ತಿ ಕೆತ್ತಿ ಏಲ್ಲಿ ಬೇಕೆಂದರಲ್ಲಿ ಇಡಲಾಗಿದೆ. ಅವರ ಫೋಟೊಗಳನ್ನು ಪ್ರತಿ ಸರ್ಕಾರಿ ಕಛೇರಿಗಳಲ್ಲಿ ,ಶಾಲಾ ಕಾಲೇಜುಗಳಲ್ಲಿ ಇಡಲಾಗಿವೆ. ಗಾಂಧೀಜಿ ಹೆಸರಲ್ಲಿ ರಸ್ತೆಗಳಿವೆ,ಶಾಲ್ಗಳಿವೆ,ಆಶ್ರಮಗಳಿವೆ,ನಗರಗಳಿವೆ. ಆಷ್ಟೇ ಏಕೆ ನಮ್ಮ ನೋಟುಗಳಲ್ಲಿ ಕೂಡ ನಗುವ ಬಾಪುವನ್ನು ನೋಡುತ್ತೇವೆ. ಆದರೆ ಇಷ್ಟೆಲ್ಲಾ ಇದ್ದರೂ ಗಾಂಧೀಜಿಯವರ ಆತ್ಮಕ್ಕೆ ಇನ್ನೂ ಶಾಂತಿ ಸಿಕ್ಕಿಲ್ಲ .ಯಾಕೆ ಗೊತ್ತಾ?
      ನಾವುಗಳು ಬರಿಯ ಜೀವವಿಲ್ಲದ ಅವರ ಮೂರ್ತಿಗಳನ್ನು ಅಥವಾ ಫೋಟೋಗಳನ್ನು ಇಟ್ಟುಕೊಂಡಿದ್ದೇವೆ.ಅಥವಾ ಜೀವವಿಲ್ಲದ ಕಟ್ಟಡಗಳಿಗೆ,ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದೇವೆ . ಆದರೆ ಎಲ್ಲಿಯೂ ಅವರ ತತವಗಳನ್ನೂ ಪಾಲಿಸುವ ಗೋಜಿಗೆ ಹೋಗಿಲ್ಲ. ಮಹಾತ್ಮ ಗಾಂಧಿ ರಸ್ತೆಯಲ್ಲಿಯೇ ಹೆಣ್ಣು ಮಕ್ಕಳ ಅತ್ಯಾಚಾರ ನಡೆಯುತ್ತದೆ,ಅಲ್ಲಿಯೇ ಮಧ್ಯಪಾನ ಮಾರುವ ಅಂಗಡಿಗಳು ಇರುತ್ತವೆ,ಕೊಲೆ ಸುಲಿಗೆಗಳು ನಡೆಯುತ್ತವೆ.ಇನ್ನು ಸರ್ಕಾರಿ ಕಛೇರಿಗಳಲ್ಲಿ ಅವರ ಛಾಯಾಚಿತ್ರದ ಮುಂದೆಯೇ ಅವ್ಯವಹಾರಗಳು ನಡೆಯುತ್ತವೆ. ಹೀಗೆ ಒಂದೇ ಎರಡೇ. ಅವರ ತತ್ವಗಳನ್ನು ಪಾಲಿಸದೇ ಹೋದರೆ ಅವರ ಮೊರ್ತಿಗಳು,ಛಾಯಚಿತ್ರಗಳಿದ್ದರೆ ಏನು ಪ್ರಯೋಜನ?ನಿಜವಾಗಿಯೂ ಅವು ಬೇರೆ ಜೀವವಿಲ್ಲದ ವಸ್ತುಗಳಿಗ ಸಮ ಎನಿಸುತ್ತದೆ.
        ಒಂದರ್ಥದಲ್ಲಿ ಕೆಟ್ಟದ್ದನ್ನು ನೋಡಬೇಡಿ,ಕೆಟ್ಟದನ್ನು ಕೇಳಬೇಡಿ,ಕೆಟ್ಟದನ್ನು ಮಾತನಾಡಬೇಡಿ ಎಂದು ಹೇಳಿಕೊಟ್ಟ ಗಾಂಧೀಜಿಗೆ ನಾವು ಹೀಗೆಯೇ ನಮ್ಮ ಕರ್ಮ ಕಾಂಡಗಳನ್ನು ಮುಂದುವರೆಸುತ್ತೇವೆ. ನೀವೇ ನೋಡುವುದು ,ಕೇಳುವುದು ಅಥವಾ ಮಾತನಾಡುವುದು ಬಿಟ್ಟು ಬಿಡಿ ಎಂಬ ಅರ್ಥದಲ್ಲಿ ನಮ್ಮ ಬದುಕು ನಡೆಸುತ್ತಿದ್ದೇವೆ.
          ಇದೆಲ್ಲಾ ಯಾಕೆ ನೆನಪಾಯಿತು ಅಂದರೆ ಮೊನ್ನೆ ನಮ್ಮ ಕಂಪನಿಯಲ್ಲಿ ಗಾಂಧಿ ಸರ್ಕಲ್ ಎಂಬ mimes ಮಾಡಿದ್ದೆವು. ಅದರ ಕಥೆ ನಾನು ಇಲ್ಲಿವರೆಗೂ ಹೇಳಿದ ವಿಷಯಗಳನ್ನೇ ಅವಲಂಭಿಸಿತ್ತು. ತುಂಬಾ ದಿನಗಳ ಹಿಂದೆಯೇ ನಾನು ಈ mimes ನಿರ್ದೇಶಿಸಿ ,ಅನೇಕ ಬಾರಿ ಮಾಡಿದ್ದರೂ ಕೂಡ ಅದರ ವಿಡಿಯೋ ನನ್ನ ಹತ್ತಿರ ಇರಲಿಲ್ಲ. ಇದೀಗ ಸಿಕ್ಕಿದೆ..ಗಾಂಧಿ ಜಯಂತಿಯಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.
                       https://www.youtube.com/watch?v=wc4KeebSqd8

                     ನನ್ನ ಬೇರೆ ವೀಡಿಯೋಗಳು ಕೆಳಗೆ ಇವೆ ನೋಡಿ ಆನಂದಿಸಿ

https://www.youtube.com/watch?v=K62O-1E3rnU

English summary: Gandhi circle(mime) directed by Shravan Narayan.It focuses on the present day situation in India regarding people's view on Mahatma Gandhiji's principle.Mahatma Gandhiji,considered father of our nation preached us not to see bad ,not to speak bad and not to talk bad.Today after his death ,we have Gandhiji everwhere in india .We have Gandhiji 's statue,Gandhiji's photo almost in every organisation.We even have circles,road,schools,hospitals named after him.But what's missing in them all? gandhiji principles.We do all shameful acts in front of him . These acts are like we telling him not to see us,not to hear us and stop preaching us.

ಶನಿವಾರ, ಸೆಪ್ಟೆಂಬರ್ 28, 2013

ಕೋಸಂಬರಿ ಪಾನಕದ ವಾರ್ಷಿಕ ವರದಿ



       ಕೋಸಂಬರಿ ಪಾನಕ ಶುರು ಆಗಿ ಒಂದು ವರ್ಷ ಆಯಿತು .ಈ ಒಂದು ವರ್ಷದಲ್ಲಿ ಅದೆಷ್ಟು ಕುಖ್ಯಾತಿ ನನ್ನ ಬ್ಲಾಗ್ ಪಡೆದಿದೆಯೆಂದರೆ ಕನ್ನಡದ ಎಲ್ಲಾ ನ್ಯೂಸ್ ಚಾನೆಲ್ಗಳಲ್ಲಿ ನನ್ನ ಬ್ಲಾಗ್ದೇ ವಿಷಯ. ಬಹುಷಃ ನಿಮಗೆ ನೋಡಲು ಅವಕಾಶ ಸಿಗದೇ ಇರಬಹುದು ಅದಕ್ಕೇ ಇಲ್ಲಿ ಬರೆದಿದ್ದೇನೆ.ಓದಿ ಮಜಾ ಮಾಡಿ.

    ಮಾಮಶ್ರೀ ನ್ಯೂಸ್ ಅಲ್ಲಿ ಪ್ರೈಮ್ ಟೈಮ್ನಲ್ಲಿ ನಮ್ಮ ಕೋಸಂಬರಿ ಪಾನಕದ್ದೇ ನ್ಯೂಸ್.ಸುಂದರವಾದ ಮಹಿಳೆಯೊಬ್ಬಳು ನ್ಯೂಸ್ ಓದುತ್ತಿದ್ದಳು." ವಿವಾದಾತ್ಮಕ ಕೋಸಂಬರಿ ಪಾನಕ ಬ್ಲಾಗ್ ಶುರು ಆಗಿ ಇದೀಗ ಒಂದು ವರ್ಷ. ಏಂಜಿನೀಯರಿಂಗ್ ಪದವಿ ಮುಗಿಸಿ ,ಇನ್ಫ಼ೋಸಿಸ್ ನಲ್ಲಿ ಕೆಲಸದಲ್ಲಿರುವ ಶ್ರವಣ್ ಅವರು ಶುರು ಮಾಡಿರುವ ಈ ಬ್ಲಾಗ್ ,ಇತ್ತೀಚಿನ ದಿನಗಳಲ್ಲಿ ತನ್ನ ತಲೆ ನೋವು ತರಿಸುವ ಹಾಗೂ ದರಿದ್ರ ಕನ್ನಡ ಬರವಣಿಗೆಗಳಿಂದ ಖ್ಯಾತಿ ಪಡೆದಿದೆ. ಈ ಒಂದು ವರ್ಷದಲ್ಲಿ ಈ ಬ್ಲಾಗ್ ಅನ್ನು ನಿಲ್ಲಿಸಬೇಕೆಂದು ತುಂಬಾ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿವೆ. ಅಷ್ಟೇ ಅಲ್ಲದೇ ಲೇಖಕ ಶ್ರವಣ್ ಮೇಲೆ ಅನೇಕ ಬಾರಿ ದಾಳಿ ಕೂಡ ನಡೆದಿದೆ. ಇಷ್ಟೆಲ್ಲಾ ಆದರೂ ತಾನು ಬರೆಯುವುದನ್ನೂ ನಿಲ್ಲಿಸುವುದಿಲ್ಲ ಏಂದು ಶ್ರವಣ್ ನವರು ಹೇಳಿದ್ದಾರೆ.ಭಾರತ ಸ್ವತಂತ್ರ ದೇಶ ಹಾಗು ಅದರ ಪ್ರಜೆಯಾಗಿರುವ ನನ್ನ ವಾಕ್ ಸ್ವಾತಂತ್ರ್ಯವನ್ನು ಯಾರಿಂದಲೂ ಕಸಿದುಕೊಳ್ಳಲು ಆಗುವುದಿಲ್ಲಾ ಅಂದು ಹೇಳಿದ್ದಾರೆ. ಶ್ರವಣನವರು ಈ ವಿವಾದಾತ್ಮಕ ಹೇಳಿಕೆ ಕೊಡುತ್ತಿದ್ದ ಹಾಗೆ ಕನ್ನಡ ಕಾವಲು ಸಂಸ್ಥೆ ,ಅಖಿಲ ಭಾರತ ಮಹಿಳೆ ಸಂಸ್ಥೆ ,ಪ್ರ್ರಾಣಿ ದಯಾ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಅವರ ಹರಿಹರದ ಮನೆ ಮುಂದೆ ಪ್ರತಿಭಟನೆ ಶುರು ಮಾಡಿವೆ. ನಾವು ಈಗ ಹರಿಹರದಲ್ಲಿ ಅವರ ಮನೆ ಮುಂದೆ ಇರುವ ನಮ್ಮ ಸಂದರ್ಶಕ ರಮೇಶನನ್ನು ಮಾತನಾಡಿಸೋಣ.
ವಾರ್ತೆ ಓದುತ್ತಿರುವವಳು :ಹಲೋ ರಮೇಶ್ ಅವರೇ ,ಹೇಳಿ ಅಲ್ಲಿನ ಪರಿಸ್ಥಿತಿ ಹೇಗಿದೆ ಅಂತ.
ರಮೇಶ್ : ನೀವೇ ನೋಡುತ್ತಿರುವ ಹಾಗೆ ಶ್ರವಣ್ ಅವರ ಮನೆ ಸಮೃದ್ಧಿ ಮುಂದೆ ಅನೇಕ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ.ಬನ್ನಿ ಅವರನ್ನು ಮಾತನಾಡಿಸೋಣ. ಮೇಡಂ ನೀವು ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ ಅಂತ ಹೇಳ್ಬಹುದಾ?
ಮಹಿಳೆ: ಈ ಕೋಸಂಬರಿ ಪಾನಕ ಬ್ಲಾಗ್ ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವಂತಿದೆ.ಇಲ್ಲಿನ ಅನೇಕ ಕವನಗಳು ಮಹಿಳೆಯನ್ನು ಗೇಲಿ ಮಾಡುತ್ತಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಮಹಿಳೆಯರು ಇವರಿಗೆ ಗೇಲಿ ಮಾಡುವ ವಸ್ತುನಾ,ಇಂತಹ ಸಣ್ಣ ಮನಸ್ಸಿನ ವ್ಯಕ್ತಿಯ ಲೇಖನಗಳು ನಮಗ್ಯಾಕೆ?
ರಮೇಶ್: ನೋಡ್ದ್ರಲ್ಲಾ ,ಇದೀಗ ಶ್ರವಣ್ ಅವರ ಅಪ್ಪ ಬರುತಿದ್ದಾರೆ ಅವರನ್ನು ಮಾತನಾಡಿಸೋಣ.ಸರ್, ಈ ಸಮಯದಲ್ಲಿ ನಿಮ್ಮ ಅಭಿಪ್ರಾಯವೇನು?
ಅಪ್ಪ: ನೋಡಿ ಅವನು ಇಲ್ಲಿಲ್ಲಾ,ಮೈಸೂರಿ ನಲ್ಲಿದ್ದಾನೆ,ಅಲ್ಲಿ ಹೋಗಿ ಪ್ರತಿಭಟನೆ ಮಾಡಿ. ಅಂತ ಮಗನನ್ನು ಹೆತ್ತಿದ್ದಕ್ಕೆ ನನಗೂ ನಾಚಿಕೆ ಇದೆ.ದಯವಿಟ್ಟು ಇಲ್ಲಿ ಗದ್ದಲ ಮಾಡ್ಬೇಡಿ.
ಹೀಗೆ ಹೇಳುತ್ತಿದ್ದಂತೆ ಅವನ ಸಂಪರ್ಕ ನಿಂತು ಹೋಗಿ ವಾರ್ತೆ ಓದುತ್ತಿರುವಳು ಕ್ಷಮೆ ಯಾಚಿಸಿ ಮುಂದೆ ಹೀಗೆ ಓದುತ್ತಾಳೆ.
" ಲೇಖಕ ಶ್ರವಣ್ ರವರು ಮೈಸೂರಿನಲ್ಲಿ ತಮಗೆ ಪ್ರಾಣ ಬೆದರಿಕೆ ಇದೆ ಆದ್ದರಿಂದ ನಮ್ಗೆ ಪೋಲಿಸ್ ರಕ್ಷಣೆ ಬೇಕು ಎಂದು ಹಂಪಿ ಸರ್ಕಲ್ ಪೋಲಿಸ್
ಸ್ಟೇಷನ್ ಅಲ್ಲಿ ದೂರು ದಾಖಲಿಸಿದ್ದಾರೆ. ಕೋಸಂಬರಿ ಪಾನಕದ ಮೇಲೆ ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಮುಂದಿನ ವಿಶೇಷ ಕಾರ್ಯಕ್ರಮ ನೋಡುತ್ತಿರಿ"
...................................................................................................................................................
ನಮ್ಮ ಪವರ್ಣ ನ್ಯೂಸ್ ಚಾನೆಲ್ನಲ್ಲಿ "ಕೋಸಂಬರಿ ಪಾನಕ :ಬೇಕೋ ಬೇಡೋ" ಅನ್ನುವ ಚರ್ಚೆ ನಡೆಸುತಿತ್ತು .ಚರ್ಚೆಗೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ, ಕನ್ನಡ ಸಾಹಿತಿ , ಹಿರಿಯ ರಾಜಕಾರಣಿ ,ಬುದ್ಧಿವಂತ ಜೀವಿ ,ಪಿಂಡಾಂಡ ಜ್ಯೋತಿಷಿ ಮತ್ತೊಬ್ಬ ಕಾಲೇಜು ಹುಡುಗನನ್ನು ಕರಿಸಲಾಗುತಿತ್ತು.ಕಾರ್ಯಕ್ರಮ ಅರ್ಧ ಘಂಟೆದಾಗಿದ್ದರಿಂದ ನಿಮಗೆ ಎಲ್ಲರ ಮಾತಿನ ಭಾವರ್ಥವನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ.
ಕನ್ನಡ ಕಾವಲು ಸಮಿತಿಯ ಅಧ್ಯಕ್ಷ: :ಕನ್ನಡಕ್ಕೇ ಎಂಟು ಜ್ಞಾನ ಪೀಠ ಬಂದಿದೆ .ನಮ್ಮ ಸಾಹಿತ್ಯ ಸಮೃದ್ಧಿಯಾಗಿ ಇತ್ತು ,ಇದೆ, ಇರುತ್ತೆ. ನಮ್ಗೆ ಶ್ರವಣ್ ಅನ್ನುವ ಒಬ್ಬ ಹುಚ್ಚ ,ಅರೆ ಹುಚ್ಚ ತನ್ನ ತೆವಳು ತೀರಿಸಲು ಬರೆದು ಕೊಳ್ಳುವವನ ಲೇಖನಗಳು ಬೇಕಾಗಿಲ್ಲ.ಕನ್ನಡ ಹಾಳುಮಾಡಲು ಬೇರೆ ಭಾಷೆಯ ಸಂಸ್ಥೆಗಳು ಇಂತಹ ಕಚಡಾಗಳಿಗೆ ದುಡ್ಡು ಕೊಡುತ್ತಿದ್ದಾರೆ.ಇದು ಇಲ್ಲಿಗೆ ನಿಲ್ಲಬೇಕು.ನಾವು ಇದನ್ನು ನಮ್ಮ ಪ್ರಾಣ ಇರುವವರೆಗೂ ಮುಂದು ವರೆಯಲು ಬಿಡುವುದಿಲ್ಲ. ಸಿರಿಗನ್ನಡಂಗೆಲ್ಗೆ.
ಕನ್ನಡ ಸಾಹಿತಿ ::ನಮ್ಮ ಅಧ್ಯಕ್ಷರು ಹೇಳಿದ ಮಾತುಗಳಲ್ಲಿ ಅರ್ಥ ಇದೆ,ನಿಜಾನೂ ಇದೆ. ಅವರ್ ಲೇಖನಗಳನ್ನು ನಾನು ಓದಿದ್ದೇನೆ. ವ್ಯಾಕರಣ ದೋಷಗಳು ಒಂದಾ ಎರಡಾ?ಕನ್ನಡದ ಮಾನ ಬೀದಿಗೆ ಬರುವ ಮುನ್ನ ಇದನ್ನು ನಿಲ್ಲಿಸ್ಬೇಕಾಗಿದೆ.ನಾವು ಇಷ್ಟ್ರಲ್ಲೇ ಅಮರಣಾಂತ ಉಪವಾಸ ಕೂರುತ್ತೇವೆ
ಹಿರಿಯ ರಾಜಕಾರಣಿ: ಇದರಲ್ಲಿ ನಂಗೆ ಪ್ರತಿಪಕ್ಷದ ಕೈ ವಾಡ ಎದ್ದು ಕಾಣುತ್ತಿದೆ. ಸಮಾಜದಲ್ಲಿ ಗಲಭೆ ಎಬ್ಬಿಸಿ ,ನಂತರ ನಮ್ಮಮೇಲೆ ಗೂಬೆ ಕೂರಿಸಲು ಹೀಗೆಲ್ಲಾ ಮಾಡುತ್ತಿದ್ದಾರೆ.ಈ ಮನುಷ್ಯನ ಹಿಂದೆ ಯಾರು ಯಾರು ಇದ್ದಾರೆ ಅನ್ನುವುದನ್ನು ಕಣ್ಣು ಹಿಡಿಯಲು ನಾವು ಈ ಕೇಸನ್ನು ಸಿ. ಐ .ಬಿ ಗೆ ಒಪ್ಪಿಸುತ್ತೇವೆ.
ಬುದ್ಧಿವಂತ ಜೀವಿ: ನೋಡಿ ಭಾರತ ದೇಶದಲ್ಲಿ ಸಾರ್ವಜನಿಕವಾಗಿ ನೂರಾರು ಜನ ಕೊಂದ ಉಗ್ರಗಾಮಿಗೂ ಬದುಕುವ ಹಕ್ಕಿದೆ, ನಮ್ಮದು ಡೆಮಾಕ್ರ್ಟಿಕ್ ಕ್ಂಟ್ರಿ. ಸ್ವತಂತ್ರ ರಾಷ್ಟ್ರ. ಯಾರು ಹೇಗೆ ಬೇಕಾದರೂ ಬದುಕಬಹುದು.ಹಾಗೆಯೇ ಶ್ರವಣ್ ಗೂ ಬರೆಯುವ ಹಕ್ಕಿದೆ. ಅವರನ್ನು ತಡೆಯುವುದರಿಂದ ಮಾನವ ಹಕ್ಕು ಉಲ್ಲಂಘನೆಯಾಗುತ್ತದೆ.
ಕಾಲೇಜು ಹುಡುಗ:ನೋಡಿ ಸರ್, ಅವರ ಲೇಖನಗಳು ಟೈಮ್ ಪಾಸ್. ಮಜ ಬರುತ್ತೆ. ಸೋ ನಮ್ಗೆ , .ಯುವ ಜನಾಂಗಕ್ಕೆ ಇದರಿಂದ ಎನೂ ತೊಂದರೆಯಗಿಲ್ಲಾ. ಶ್ರವಣ್ ಇಸ್ ಕೂಲ್ ಗಯ್. ಬರೀಲಿ ಬಿಡಿ, ಅವರ ಮೇಲಿ ಕೈ ಮಾಡಿದ್ರೆ ನಾವುಗಳು ಸುಮ್ನೆ ಇರೋಲ್ಲಾ.
ಪಿಂಡಾಂಡ ಜ್ಯೋತಿಷಿ : ನೋಡಿ ಈ ಮನುಷ್ಯನ ಕುಂಡಲಿ ಯಲ್ಲಿ ಯಾವ ಗ್ರಹಾನೂ ಸರಿಯಾಗಿ ಕುಳಿತುಕೊಳ್ಳದೇ ,ಎಲ್ಲೆಲ್ಲೋ ಓಡಾಡುತ್ತಿರುವುದರಿಂದ ಹೀಗೆ ಆಗುತ್ತಿದೆ. ಇಂತಹ ಮನುಷ್ಯನು ಕನ್ನಡದಲ್ಲಿ ಬರೆಯುವ ಹಾಗೆ ಆಗಿದೆಯೆಂದರೆ ಇದು ಪ್ರಳಯದ ಮುನ್ಸೂಚನೆ.ಇವನನ್ನು ತಮಿಳು ನಾಡು ದೇವ ಸ್ಥಾನಕ್ಕೆ ಕರೆದು ಕೊಂಡು ಹೋಗಿ ದೆವ್ವ ಬಿಡಿಸಿದರೆ ಎಲ್ಲಾ ಒಳ್ಳೆಯದಾಗುತ್ತೆ.
.........................................................................................................................................................

           ಇನ್ನು ನಮ್ಮ ಟಿ.ವಿ ೬೯ ನವರು ನಮ್ಮ ಕೋಸಂಬರಿ ಪಾನಕದ ಮೇಲೆ ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದರು. ಅದರ ಹೆಸರು "ಹಲಸಿ ಹೋಗಿರುವ ಕೋಸಂಬರಿ ಪಾನಕ". ಕಾರ್ಯಕ್ರಮ ಹೀಗಿತ್ತು .
ಕೋಸಂಬರಿ ಪಾನಕ. ಶ್ರವಣ ಅನ್ನೊ ಹುಡುಗ ಬರಿತಾ ಇರೋ ಈ ಬ್ಲಾಗ್ ಗೆ ಇಂದು ಒಂದು ವರ್ಷ. ಯಾರು ಇವನು ,ಇದರ ಸುತ್ತ ಸುತ್ತುಕೊಂಡಿರುವ ವಿವಾದ ಆದ್ರೂ ಏನು ನೋಡೋಣ ಬನ್ನಿ.
ಯಾರಿವನು?
೧೯೮೮ ,ಮೇ ೮ ರಲ್ಲಿ ಪಡುಕೋಣೆಯಲ್ಲಿ ಜನಿಸಿದ ಶ್ರವಣ್ ,ಹುಟ್ಟಿ ಬೆಳದಿದ್ದೆಲ್ಲಾ ಹರಿಹರದಲ್ಲಿ. ಮೊದಲಿಂದಲೂ ಎಲ್ಲರನ್ನು ಸೆಳೆಯಬೇಕು,ಜನ ನನ್ನ ಗುರುತಿಸಬೇಕು ಎಂಬ ಹುಚ್ಚು ಈತನಿಗೆ, ಅದಕ್ಕೆ ಬರೆಯಲು ಶುರು ಮಾಡಿದ. ಆದ್ರೆ ಅಷ್ಟಕ್ಕೆ ನಿಲ್ಲದ ಇವನು ಕೋಸಂಬರಿ ಪಾನಕ ಬ್ಲಾಗ್ ಶುರು ಮಾಡಿದ. ಅಲ್ಲಿಂದ ಶುರುವಾಗಿದ್ದು ಸಮಸ್ಯೆಗಳು.
ಏನಾಯಿತು?
ಈ ಬ್ಲಾಗ್ನಲ್ಲಿರುವ ಲೇಖನಗಳನ್ನು ಓದಿದ ನಂತರ ಕನ್ನಡದ ಸಾಹಿತಿಗಳು ಆತ್ಮಹತ್ಯೆ ಮಾಡಿಕೊಂಡಿರುವ ವರದಿಗಳು ಬಂದಿದೆ. ಅದೆಷ್ಟೋ ಲೇಖಕರು ಸಾಯುವ ಮುನ್ನ ವೀಡಿಯೋ ಮಾಡಿ ಯೂ ಟ್ಯೂಬ್ ನಲ್ಲಿ ಹಾಕಿದ್ದಾರೆ. ಇನ್ನೂ ಇದನ್ನು ಓದಿದ ಅನೇಕ ಜನರಲ್ಲಿ ,ತಲೆನೋವು ಕಾಣಿಸಿಕೊಂಡಿರುವ ವರದಿ ಕೂಡ ಆಗಿದೆ.ಇದನ್ನು ಇಷ್ಟಪಟ್ಟವರು ಕೆಲೆವೇ ಕೆಲವರು .ಆದ್ರೆ ವರದಿಗಳ ಪ್ರಕಾರ ಇವರಿಗೆ ಶ್ರವಣ್ ನವರು ಮಾಟ ಮಾಡಿಸಿರಬಹುದು ಎಂಬ ಶಂಕೆ ಇದೆ.
ಆಮೇಲೆ?
ಇದೆಲ್ಲಾ ಆಗುತ್ತಿದ್ದ ಹಾಗೆ ಇದರ ವಿರುದ್ಧ ಅನೇಕ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಲು ಶುರು ಮಾಡಿದವು.ಪ್ರಾಣಿ ದಯಾ ಸಂಘ ದವರು ಏನು ಹೇಳುತ್ತಾರೆ ಕೇಳೋಣ ಬನ್ನಿ" ನೋಡಿ ಈ ಕೋಸಂಬರಿ ಪಾನಕ ಓದಿ ತುಂಬಾ ಜನ ಕೋಮಕ್ಕೇ ಹೋಗಿದ್ದಾರೆ. ಅಷ್ಟೇ ಅಲ್ಲಾ ಅನೇಕ ಆಸ್ಪತ್ರೆ ಗಳಲ್ಲಿ ವೈದರು ರೋಗಿಗಳ ಜ್ಞಾನ ತಪ್ಪಿಸಲು ವೈದ್ಯರು ಕೋಸಂಬರಿ ಪಾನಕ ಉಪಯೋಗಿಸುತ್ತಿದ್ದಾರೆ . ಆದರೆ  ಅಂತಹ ಯಾವ ರೋಗಿಗಳು ಬದುಕಿ ಉಳಿದಿಲ್ಲಾ . ಆದ್ದರಿಂದ ಮನುಷ್ಯ ಎಂಬ ಜೀವಿ ಮೇಲೆ ಇದನ್ನು ಉಪಯೋಗಿಸುವುದು ಬಹಳ ಅಪಾಯಕಾರಿ. ಆದ್ದರಿಂದ ಇದನ್ನು ನಿಲ್ಲಿಸಬೇಕಾದ ಅನಿವಾರ್ಯತೆ ಇದೆ."
ಯಾರ ಕೈ ವಾಡ ಇದೆ?
ಇದನ್ನು ಓದಿದ ತುಂಬಾ ಜನಕ್ಕೆ ಆರೋಗ್ಯ ಕೆಡುತ್ತಿದೆ. ಅವರಿಗ ಸರಿಯಾದ ಮಾತ್ರೆ ಕೊಡದೇ ಹೋದರೆ ಸಾಯುವುದು ಗ್ಯಾರ್ಂಟಿ. ಈ ಮಾತ್ರೆ ಗಳ ಬೆಲೆ ಬಹು ದುಬಾರಿಯಾದದ್ದು. ಇದನ್ನು ಅರಿತ ಅನೇಕ ಮಾತ್ರೆ ತಯಾರಿಸುವ ಸಂಸ್ಥೆ ಗಳು ಶ್ರವಣ್ ವರಿಗೆ ಲಕ್ಷಗಟ್ಟಲೇ ಹಣ ಕೊಟ್ಟು ಪ್ರೋತ್ಸಾಹಿಸಿ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಇನ್ನು ಈ ಬ್ಲಾಗನ್ನು ಓದಿ ಅನೇಕ ಜನ ಸತ್ತಿರುವ ವರದಿ ಯಾಗಿದೆ. ಇದನ್ನು ಅರಿತ ಉಗ್ರಗಾಮಿ ಸಂಘಟನೆಗಳು ಸುಲಭವಾಗಿ ಜನ ಸಾಯಿಸಲು, ಶ್ರವಣ್ ನನ್ನು ಉಪಯೋಗಿಸಿ ಕೊಳ್ಳುವ ಸಾಧ್ಯತೆಗಳು ಇವೆ.ಕೋಸಂಬರಿ ಪಾನಕದ ಸುತ್ತ ಬೆಳದಿರುವ ಈ ವಿವಾದಗಳು ಎಷ್ಟು ನಿಜ. ಎಷ್ಟು ಸುಳ್ಳು .ಮುಂದೇನಾಗುತ್ತೆ? ಕಾದು ನೋಡ್ಬೇಕಾಗಿದೆ. ಅಲ್ಲಿಯವರೆಗೂ ನಮಸ್ಕಾರ. ಮತ್ತೇ ಸಿಗೋಣ

                      ನೋಡಿದ್ರಲ್ಲಾ ನಮ್ಮ ಬ್ಲಾಗ್ ಎಷ್ಟು ಖ್ಯಾತಿ ಕ್ಷಮಿಸಿ ಕುಖ್ಯಾತಿ ಪಡೆದಿದೆ .ಮತ್ತೇ ಸಿಗೋಣ.
English summary.Many news channel aired special programs as my blog completed one year.
Mamashree news: Protesters had gathered in front of my house .They were demanding to stop blogging. When the news reporter asked one of the female protestor the reason,she answered like this "the poems and some article are derogatory to women ,so it has to be banned". Then my dad said "Shravan is not here .Please stop protesting here.He is in mysore, go there .even I support u guys.
Pavarna news: It aired a special discussion on why my blog has to be banned.One of the youth in the discussion supported me as he found my blog cool.One of the leader from kannada rakshana vedike  that my blog is a shame to Kannada literature.
tv69: tv 69 sired a special program .The program had brief introduction about me and the consequences of my blog. In program it mentioned that many people suffered mental disorders after reading my blog.Hospitals are using my blog as anesthsia.They even suspected the al qaeda people are supporting me as my blog can be used to kill people.

.

ಭಾನುವಾರ, ಸೆಪ್ಟೆಂಬರ್ 22, 2013

ಕೋಸಂಬರಿ ಪಾನಕಕ್ಕೆ ಒಂದು ವರ್ಷ

ನಮ್ಮ ಕೋಸಂಬರಿ ಪಾನಕಕ್ಕೆ ಇದೀಗ ಒಂದು ವರ್ಷ.ಈ ಒಂದು ವರ್ಷದಲ್ಲಿ ನನ್ನ ಬರಹಗಳನ್ನು ನೀವು ಓದಿದ್ದೀರಿ,ಪ್ರೋತ್ಸಾಹಿಸಿದ್ದೀರಿ ,ತಪ್ಪಾದಾಗ ಕಿವಿ ಹಿಂಡಿದ್ದೀರಿ. ನಿಜ ಹೇಳಬೇಕೆಂದರೆ ನನಗೆ ಸಾಹಿತ್ಯದ ಗಂಧ ಗಾಳಿಯೂ ತಿಳಿದಿಲ್ಲ.ನನ್ನ ಬರವಣಿಗಯಲ್ಲಿ ಭಾರತದ ಜನಸಂಖ್ಯೆಗಿಂತಲೂ ಜಾಸ್ತಿ ಲೋಪ ದೋಷಗಳನ್ನು ಹುಡುಕಬಹುದು.ಒಂದು ಒಳ್ಳೆಯ ಬರವಣಿಗೆಗೆ ಇರಬೇಕಾದ ಯಾವುದೇ ಲಕ್ಷಣಗಳು ನನ್ನದರಲ್ಲಿ ಕಾಣುವುದಿಲ್ಲಾ. ಆದರೂ ಅದನ್ನೆಲ್ಲಾ ಹೊಟ್ಟೆಗೆ ಹಾಕಿಕೊಂಡು ,ಇಲ್ಲಿ ಚೆನ್ನಾಗಿರುವ ಅಂಶಗಳನ್ನು ಮಾತ್ರ ಗುರುತಿಸಿದ ನಿಮ್ಮ ದೊಡ್ಡ ಗುಣಕ್ಕೆ ನಾನು  ಚಿರ ಋಣಿ.
                      ಚಿಕ್ಕವನಿದ್ದಾಗಿನಿಂದಲೂ ನನಗೆ "center of attraction " ಆಗುವ ಗೀಳು ಹಿಡಿದು ಕೊಂಡುಬಿಟ್ಟಿದೆ. ಅದಕ್ಕೇ ಏನೋ ನನ್ನ ಹವ್ಯಾಸಗಳು ,ನನ್ನ ಕನಸುಗಳು ,ನನ್ನ ಬದುಕಿನ ಶೈಲಿ ಎಲ್ಲಾದರ ಮೇಲೂ   ಈ "center of attraction " ಆಗೋ ಹುಚ್ಚು ಪ್ರಭಾವ ಬೀರಿದೆ. ಅದಕ್ಕೇ ಎನೋ ಚಿಕ್ಕಂದಿನಿಂದಲೂ ಕವನ ,ಕಥೆ ಬರೆಯುವುದನ್ನು ಮೈಗೂಡಿಸಿಕೊಂಡೆ. ಮೊದಮೊದಲು ಬೇರೆಯವರ ಮೆಚ್ಚಿಸಲು ಬರೆಯುತ್ತಿದ್ದವನು ,ನಂತರ ನನ್ನ ಮನಸ್ಸಿನ ಸಮಧಾನಕ್ಕೆ ಬರೆಯತೊಡಗಿದೆ. ಈ ನನ್ನ ಬರೆಯುವ ಹುಚ್ಚು ಜಾಸ್ತಿ ಆಗಿ , ನಿಮಗೆ ಹುಚ್ಚು ಹಿಡಿಸುವ ಯೋಚನೆಯೊಂದು ಬಂದಾಗ ಹುಟ್ಟಿದ್ದೇ "ಕೋಸಂಬರಿ ಪಾನಕ". ಬ್ಲಾಗ್ ಬರೆದರೆ ತುಂಬಾ ಜನ ಓದುತ್ತಾರೆ, ಆಗ ಜನ ನನ್ನನ್ನು ಗುರುತ್ತಿಸುತ್ತಾರೆ ಅನ್ನೋದು ನನ್ನ ಅನಿಸಿಕೆ.
                ಹಾಗೂ ಹೀಗೂ ಓಂದು ಒಳ್ಳೆಯ ಮುಹೂರ್ತ ನೋಡಿ, ಬ್ಲಾಗ್ ಶುರು ಮಾಡಿ,  ಬ್ಲಾಗ್ ನಲ್ಲಿ ಒಂದು  ಪೋಸ್ಟ್  ಬರೆದು  ಮೇಲೆ ಪ್ರತಿಕ್ರಿಯೆಗಳಿಗೆ ಕಾಯುತ್ತಾ ಇದ್ದೆ. ಮನದಲ್ಲಿ ಎನೋ ಕುತೂಹಲ.ಜನ ಏನು ಬರೆಯಬಹುದು ,ಯಾರಾದರೂ ಓದುತ್ತಾರೋ ಇಲ್ಲವೋ,ಹೀಗೆ.ಒಂದು ದಿನದ ನಂತರ ಮೊದಲ ಪ್ರತಿಕ್ರಿಯೆ ಬಂದೇ ಬಿಟ್ಟಿತು."ಲೋ ಯಾಕಾದ್ರೂ ನಿಮ್ಮಂತವರು ಬರೀತಿರಾ?ಕುವೆಂಪು,ಕಾರಂತರು ದೊಡ್ಡವರು ಬರೆದಿರೋ ಈ ಕನ್ನಡ ಭಾಷೆನಾ ಹಾಳು ಮಾಡ್ಬೇಡ.ಒಟ್ಟಿನಲ್ಲಿ ನೀ ಬರೆದಿರೋ ಲೇಖನ ಎಲ್ಲಿಂದಾನೋ ಎಲ್ಲಿಗೆ ಹೋಗಿ ಸಖತ್ ಬೋರ್ ಹೊಡೆಸುತ್ತೆ.ದಯವಿಟ್ಟು ಸ್ಟಾಪ್ ಮಾಡಿ". ಕುವೆಂಪು ಮಟ್ಟಿಗೆ ಯಾರಾದರೂ ಹೊಗಳುತ್ತಾರೆ ಆಂತ ಕಾಯುತ್ತಾ ಕುಳಿತವನಿಗೆ , ಇದನ್ನು ಓದಿದಾಗ ಸಗಣಿಯುಂಡೆ ಮಾಡಿ ಹೊಡೆದಂತಾಯಿತು.ಇಂತಹ ಅನುಭವ ಆದ ಮೇಲೂ ಇನ್ನು ಬದುಕಿರಬಾರದು ಏಂದು, ನಾನು ಆತ್ಮಹತ್ಯೆ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದೆ.
                              ಆತ್ಮಹತ್ಯೆ ಮಾಡಿಕೊಳ್ಳಲು ಸೂಕ್ತ ಸ್ಥಳ ಹಾಗು ಸೂಕ್ತ ಮಾರ್ಗದ ಬಗ್ಗೆ ಯೋಚಿಸಲು ಕುಳಿತೆ .ತಲೆ ಓಡಲಿಲ್ಲ.ಕೊನೆಗೆ ಮನೆ ಎದುರುಗಡೆ ಇರುವ ಟೀ ಆಂಗಡಿಗೆ ಹೋಗಿ ಟೀ ಕುಡಿಯುತ್ತಾ ಕುಳಿತೆ. ಆಗ ಟೀ ಮಾರುವವನು ತನ್ನ ಕೆಲಸದವನಿಗೆ ಬಯ್ಯುವುದು ಕಿವಿಗೆ ಬಿತ್ತು "ಹಲ್ಕ ನನ್ನ್ ಮಗನೇ, ಕೆಲ್ಸ ಮಾಡೋಕೆ ಬರೊಲ್ಲಾ ,ಯಾಕೆ ಬದುಕಿದ್ಯಾ?ಚಾಮುಂಡಿ ಬೆಟ್ಟದಿಂದ ಬಿದ್ದು ಸಾಯಿ". ಆಹ್ಹ! ಮುಳುಗದೇ ಸಾಯುತ್ತಿದ್ದ ನನಗೇ   ಒಂದು ಟೀ ಮಾರುವ ಆಂಗಡಿಯಲ್ಲಿ ಮುಳುಗುವ ದಾರಿ ಗೊತ್ತಾಯಿತು.ಖುಷಿಯಲ್ಲಿ   ಅವನಿಗೆ ಎರಡು ರೂಪಾಯಿ ಟೀ ಗೆ ಹತ್ತು ರೂಪಾಯಿ ಕೊಟ್ಟು ಹೊರಟು ಹೋದೆ.ಸಾಯುವ ಮೊದಲು ಎಲ್ಲರಿಗೂ ವಿದಾಯ ಹೇಳಿಬಿಡೋಣ ಎಂದುಕೊಂಡು ಫ಼ೀಸ್ಬುಕ್ ನಲ್ಲಿ "ಎಲ್ಲರಿಗೂ ಟಾಟ" ಎಂದು ಸ್ಟೇಟಸ್ ಅಪ್ಡೇಟ್ ಮಾಡಿದೆ.ನಿಜ ಹೇಳ್ಬೇಕು ಆಂದರೆ  ಯಾರಾದರೂ ಏನಾಯಿತು ಅಂತ ಕೇಳಿ ,ಸಮಧಾನ ಮಾಡುತ್ತಾರೆ ಏಂಬ ಆಸೆಯಿಂದ ಮಾಡಿದೆ.ಸ್ಟೇಟಸ್ ಅಪ್ಡೇಟ್ ಮಾಡಿ ಅರ್ಧ ದಿನ ಆದರೂ ಒಬ್ಬರು ಏನೂ ಪ್ರತಿಕ್ರಯಿಸಲಿಲ್ಲ. ಅದೇ ಸುಮ್ಮನೆ ಬೇಸರದ ಮುಖದ ಸ್ಮೈಲಿ ಹಾಕಿಕೊಂಡಿದ್ದ ಹುಡುಗಿಗೆ ಅರ್ಧ ಘಂಟೆಯಲ್ಲಿ ಒಂದು ಸಾವಿರಕ್ಕೂ ಜಾಸ್ತಿ  ಪ್ರತಿಕ್ರಿಯೆಗಳು ಬಂದಿದ್ದವು. ಅದರಲ್ಲಿ ನೂರು ಜನ ಏನಾಯಿತು ಅಂತ ತಲೆಕೆಡಿಸಿಕೊಂಡವರು ಇದ್ದರೆ,ಇನ್ನೊಂದಿಷ್ಟು ಜನ "ಎಲ್ಲಿದ್ದಿಯಾ ಬರಲಾ".ಹೀಗೆ ಇದು  ದೇಶದ ಅತೀ ದೊಡ್ಡ ಸಮಸ್ಯೆಯೆಂಬಂತೆ ಪ್ರತಿಕ್ರಯಿಸುತ್ತಿದ್ದರು.ಅದೇ ನನಗೇ  ನನ್ನ ಮೂರು ಜನ ಗೆಳಯರು ಮಾತ್ರ ಪ್ರತಿಕ್ರಯಿಸಿದ್ದರು.ಒಬ್ಬ "ಟಾಟ" ಅಂತ,ಇನ್ನೊಬ್ಬ "ಪಾರ್ಟಿ" " ಅಂತ ,ಇನ್ನೊಬ್ಬ "ಮಗ ಒಳ್ಳೆಯದಾಗಲಿ" ಆಂತ ಪ್ರತಿಕ್ರಯಿಸಿದ್ದರು.ನಮ್ಮ ಭಾರತದಲ್ಲಿ ಬದುಕಲು ದಾರಿ ಹೇಳಿಕೊಡುವ ಮಂದಿ ಸಿಗದೇ ಇರಬಹುದು,ಸಾಯಲು ಉತ್ತೇಜಿಸುವ ಜನ ಬಹಳ ಇದ್ದಾರೆ.ಛೇ! ಗಂಡುಮಕ್ಕಳ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲ ಅಂದುಕೊಂಡು ,ಸಾಯುಲೇಬೇಕು ಆಂತ ತೀರ್ಮಾನ ಮಾಡಿದೆ.
       ಚಾಮುಂಡಿ ಬೆಟ್ಟ ಹತ್ತಿ ಇನ್ನೇನು ಸಾಯಬೇಕು ಅಂತ ನಿಂತಾಗ ,ಕಾಲಿಗೆ ಎನೋ ಚುಚ್ಚಿದಂತಾಗಿ ಆಕಡೆ  ಒಂದು ಗಿಡದ ಮುಳ್ಳು. ನಾನು ಒಂದು ಗಿಡವನ್ನು ತುಳಿದಿದ್ದೆ. ಆ ಗಿಡದ ಮೈ ತುಂಬಾ ಮುಳ್ಳು. ಆದ್ರೂ ಆ ಗಿಡ ಒಂದು ಸುಂದರವಾದ  ಹೂ ಬಿಟ್ಟಿತ್ತು.ತಕ್ಷಣ ಅಲ್ಲಿಂದ ಹಾದಿ ಹೋಗುತ್ತಿದ್ದ ಯಾರೋ ಅದೇ ಗಿಡದ ಹೂವನ್ನು ನೋಡುತ್ತಾ "ನೋಡಿ ,ಆ ಗಿಡದ ಹೂವನ್ನು . ಗಿಡದ ತುಂಬಾ ಮುಳ್ಳು ತುಂಬಿಕೊಂಡಿದ್ದರೂ ಎಂತಹ ಸುಂದರವಾದ ಹೂವು ಬಿಟ್ಟಿದೆ ಆಂತ". ಈ ಮಾತುಗಳನ್ನು  ಕೇಳಿದ ನಂತರ ನಂಗೇನೋ ಹೊಳೆದಂತಾಯಿತು. ಆ ಹೂವು ಚೆನ್ನಾಗಿದ್ದಿರಬಹುದು ಆದರೆ ಅದರೆ ಜೊತೆಗಿನ ಮುಳ್ಳು ಎಷ್ಟು ಕೆಟ್ಟದಾಗಿತ್ತೆಂದರೆ ,ನೋಡಿದವರಿಗೆ ಹೂವು ಇನ್ನಷ್ಟು ಚೆನ್ನಾಗಿ ಕಾಣುವಂತೆ ಮಾಡಿತ್ತು.
ಹೌದಲ್ಲವಾ. ಜಗತ್ತಿನಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದರೆ, ಎಕಾತನತೆ ಇರುತಿತ್ತು. ಅಲ್ಲವಾ. ಒಂದು ಆಟದಲ್ಲಿ ಗೆಲ್ಲಬೇಕಂದರೆ ಇನ್ನೆಲ್ಲರೂ ಸೋಲಬೇಕು. ಎಲ್ಲರೂ ಗೆದ್ದರೇ ಅದು ಗೆಲುವೇ ಅಲ್ಲಾ.ಎಲ್ಲವೂ ಚೆನ್ನಾಗಿದ್ದರೆ ಹಾಗೆಯೇ ಆಗುವುದು. ಅದಕೆ ಕನ್ನಡದ ಸಾಹಿತ್ಯದಲ್ಲಿ ಕೆಟ್ಟ ಸಾಹಿತ್ಯದ ನಿದರ್ಶನವಾಗಿ ನನ್ನ ಸಾಹಿತ್ಯ ಯಾಕಿರಬಾರದು ? ಜನರ ಬಾಯಲ್ಲಿ ನಾನು ಕೊನೆ ತನಕ ಉಳಿಯಬಹುದು. ಹೇಗೆ ಅಂತೀರಾ?ಉದಾಹರಣೆಗೆ  "ಲೋ ನಿನ್ನ ಮುಖ ಎಷ್ಟು ಕೆಟ್ಟದಾಗಿದೆಯೆಂದರೆ,ಒಳ್ಳೇ ಶ್ರವಣ್ ಬರೆದಿರೋ ಲೇಖನ ಇದ್ದ ಹಾಗಿದೆ". "ಕನ್ನಡದಲ್ಲಿ ಎರಡು ಥರಹ ಸಾಹಿತ್ಯ ಇದೆ ಒಂದು ಒಳ್ಳೆಯ ಸಾಹಿತ್ಯ,ಇನ್ನೊಂದು ಶ್ರವಣನ ಸಾಹಿತ್ಯ" ಹೀಗೆ. ಜನ  ದೇವರ ಜೊತೆ ರಾಕ್ಷಸರ ನೆನಪು ಇಟ್ಟು ಕೊಂಡ ಹಾಗೆ. ಅದಕ್ಕೆ ನಾನು ಸಾಯುವುದು ಬಿಟ್ಟು ಮತ್ತೆ ಬರೆಯಲು ಶುರು ಮಾಡಿದೆ.ಛೇ ! ಅಂತ ನೀವು ಬಯ್ಯತ್ತಾ ಕುಳಿತಿರಬಹುದು. ಆದ್ರೆ ಏನು ಮಾಡುವುದು ನಾನು ಒಂದು ಸಲ ಕಮಿಟ್ ಆದ್ರೆ ನನ್ನಮಾತು ನಾನೇ ಕೇಳುವುದಿಲ್ಲಾ.
English summary: First year anniversary to my Kannada blog.I am grateful to u all for reading my blog.First of all I know I am not such a good writer.I know there are so many grammatical mistakes, spelling mistakes. In spite of all that u have embraced my writing.After starting a blog and posting my first post,I was very keen to read my first comment.But after reading my first comment in which the reader scolded me for bad writing I thought of committing suicide.I went to Chamundi hills to commit suicide.When I was about to jump I heard someone saying "see this plant,Its full of thorns.yet the flower is beautiful". Then a thought flashed across my mind.The flower is beautiful but the thorns added to it's beauty.Then I thought I  may be not the flower ,but I am thorn.May be my literature get considered as bad literature in Kannada Language. Whatever I will remain in people mind.So,I dropped the idea of committing suicide and then came back.Now I have decided that I will continue with my blog.

ಬುಧವಾರ, ಸೆಪ್ಟೆಂಬರ್ 18, 2013

ನಾವು Software Engineers :ನಾವು ಕೂಡ ನಿಮ್ಮ ಹಾಗೆ


                ಯಾವುದೇ ಒಂದು ವಿಷಯವನ್ನು ತುಂಬಾ ಚರ್ಚಿಸಬಾರದು .ಬೋರ್ ಹೊಡೆಯಲು ಶುರುವಾಗುತ್ತದೆ. ನಮ್ಮ್ ಹುಡುಗರ ಭಾಷೆಯಲ್ಲಿಹೇಳಬೇಕೆಂದರೆ ಕೊರೆತ ಆಗಿಬಿಡುತ್ತದೆ . ಹಾಗಂತ ಯಾವುದೇ ವಿಷಯವನ್ನು ಅರ್ಧಕ್ಕೆ ನಿಲ್ಲಿಸಬಾರದು . ಹಾಗಂತ ನಮ್ಮ ದೊಡ್ಡವರುಹೇಳಿದ್ದಾರೆ.ದೊಡ್ಡವರು ಮಾತು ಕೇಳ್ಬೇಕು ನೋಡಿ. ಅದಕ್ಕೆ ನಮ್ಮ software engineersಅ ವಿಷಯಕ್ಕೆ ಇಂದು ಇತಿಶ್ರೀ ಹೇಳಿಬಿಡೋಣ.

              ಅದೇನೊ ಗೊತ್ತಿಲ್ಲಾ ನಮ್ಮ ಜನದ ಬಾಯಲ್ಲಿ ಇದೊಂದು ಕಾಮನ್ ಡೈಲಾಗ್ ನಲಿದಾಡುತ್ತಿರುತ್ತದೆ."ಮೊದಲೆಲ್ಲಾ ಹೀಗಿರಲಿಲ್ಲಾ,ಈ ಐ.ಟಿ ,ಬಿ.ಟಿ ಬಂದ ಮೇಲೇನೆ ಈ ಹುಡುಗಿಯರು ತುಂಡು ಬಟ್ಟೆ ಹಾಕಿಕೊಳ್ಳೋದು,ಈ ಪಬ್ ಸಂಸ್ಕೃತಿ,ಅನೈತಿಕ ಸಂಬಂಧಗಳು,ವಿವಾಹೇತರ ಸಂಬಂಧಗಳು ಜಾಸ್ತಿಯಾಗಿದೆ,.ನಮ್ಮ ಸಂಸ್ಕೃತಿನಾ ಹಾಳು ಮಾಡಿಬಿಟ್ಟರು. ಕನ್ನಡ ಬಂದ್ರೂ ಮಾತಾಡಲ್ಲಾ".ಹೀಗೆ ಒಂದಾಏರಡಾ .ಸಮಾಜದಲ್ಲಿರುವ ಸಕಲ ಅನಿಷ್ಟಕ್ಕೂ ನಾವೇ ಕಾರಣ ಏಂಬಂತೆ ಬಯ್ಯುತ್ತಾರೆ.

                 ಮೇಲಿನ ಯಾವುದನ್ನೂ ನಮ್ಮಲ್ಲಿ ಇಲ್ಲಾ ಅಥವಾ ನಮ್ಮವರು ಮಾಡಿಯೇ ಇಲ್ಲ ಎಂದು ಹೇಳುತ್ತಿಲ್ಲಾ. ಆದರೆ ಜನಮಾತಾನಾಡುವ ರೀತಿ ನೋಡಿದರೆ ,ಇವೆಲ್ಲಾ ನಮ್ಮಿಂದಲೇ ಶುರುವಾಗಿದ್ದು ಅಥವಾ ನಮ್ಮ ವೃತ್ತಿಯಲ್ಲಿ ಮಾತ್ರ ಎಂಬಂತೆ ಭಾಸವಾಗುತ್ತದೆ. (ನಿಜಹೇಳಬೇಕೆಂದರೆ ಇದನ್ನು ಹೇಳಿದವರು,ಹೇಳಿದ ನಂತರ ಸ್ವಲ್ಪ ಹೊತ್ತು ಯೋಚಿಸಿದರೆ ಏಷ್ಟೊಂದು ಬಾಲಿಶವಾಗಿ ಮಾತನಾಡಿದ್ದೇವೆ ಎಂದುಅವರಿಗೆ ಅನಿಸುತ್ತದೆ.) ಅದು ತಪ್ಪು . ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ,ಐ.ಟಿ ,ಬಿ.ಟಿ ಬರುವ ಮುಂಚೆ ಅಲ್ಲಾ ,ನಮ್ಮ ರಾಜಣ್ಣನ ಕಪ್ಪು ಬಿಳುಪುಚಿತ್ರದಿಂದಲೇ ಶುರುವಾಗಿತ್ತು.ಇನ್ನು ಪಬ್ ನಲ್ಲಿ ಬರಿ software engineer ಗಳು ಹೋಗುವುದಿಲ್ಲಾ . ಮೀಸೆ ಚಿಗುರದ ,ಜಡೆ ಕಟ್ಟಲು ಬಾರದ ಹದಿಹರೆಯದ ಹುಡುಗ ಹುಡುಗಿಯರು,ಆಲ್ಲಾಡುವ ಮುದುಕಮುದುಕಿಯರು, ಸುಣ್ಣದಂತೆ ಬಣ್ಣ ಬಳಿದು ಕೊಂಡು ಬರುವ ಆಂಟಿ ಅಂಕಲ್ ಗಳು,ವಾಂತಿ ಬದಲು ದುಡ್ಡು ಕಕ್ಕುವ ಸಾಹುಕಾರರು ,ಬೇರೆ ಬೇರೆ ವೃತ್ತಿಯಲ್ಲಿ ಇರುವವರು ಹೀಗೆ ಬೇರೆಯವರು ಬರುತ್ತಾರೆ. ಅವರೆಲ್ಲಾ ನಾವು ಆಹ್ವಾನಕೊಟ್ಟ ಮೇಲೆ ಬಂದವರಲ್ಲಾ.ಇನ್ನೂ ನಮ್ಮಲ್ಲಿ ಮಾತ್ರ ಅನೈತಿಕ ಸಂಭಂದಗಳು ,ವಿವಾಹೇತರ ಸಂಭಂದಗಳು ಜಾಸ್ತಿ ಅನ್ನುವವವರು ನಮ್ಮ ಕನ್ನಡನ್ಯೂಸ್ ಚಾನೆಲ್ಗಳನ್ನು ಒಮ್ಮೆ ಹಾಕಿ ನೋಡಿ. ಅಲ್ಲಿ ಅರ್ಧ ಘಂಟೆಗೆ ಒಮ್ಮೆ ನಮ್ಮ ಸರ್ಕಾರಿ ನೌಕರರ "ಇಬ್ಬರ ಹೆಂಡಿರ ಮುದ್ದಿನ ಗಂಡ"ಕಥೆಯನ್ನು ಜೂಮ್ ಮಾಡಿ ಮಾಡಿ ತೋರಿಸುತ್ತಾರೆ. ಮೇಲಿನ ಯಾವುದನ್ನೂ ಬರಿಯ software engineerಗಳು ಮಾಡಬೇಕು ಅಂತ ಇಲ್ಲಾ.ಬೇರೆ ವೃತ್ತಿಯಲ್ಲಿರುವ ಯಾವುದೇ ಉಪ್ಪು ಖಾರ ತಿನ್ನುವವನು ಮಾಡುತ್ತಾನೆ.ಆದರೂ ನಾವುಗಳೇ ಜನರ ನಾಲಿಗೆಗೆ ಯಾಕೆ ಆಹಾರ ಆಗುತ್ತೇವೆಆನ್ನುವುದು ನಾ ಕಾಣೆ.ಉದಾಹರಣೆಗೆ ನಮ್ಮ ಟಿ.ವಿ ಗಳಲ್ಲಿ ಬರುವ ಹಾಗೆ "ನಮ್ ಐ.ಟಿ ,ಬಿ.ಟಿ ಗಳು ಬಂದ ಮೇಲೆ ಬೆಂಗ್ಳೂರಲ್ಲಿ ತುಂಡು ಬಟ್ಟೆಹಾಕೋರು ಜಾಸ್ತಿಯಾದ್ರು."

                ಇನ್ನು ಅದ್ಯಾಕೆ ನಮ್ಮ ಜನಕ್ಕೆ ನಮ್ಮ್ ಮೇಲೆ ದ್ವೇಷಾನೋ ನಾ ಕಾಣೆ. ಹೀಗೆ ನೀವೇ ಕಿವಿಗೊಟ್ಟು ಕೇಳ್ತಾ ಇರಿ, ಒಬ್ಬರಲ್ಲಾಒಬ್ಬರು"ಇನ್ನೇನ್ ರಿಸೆಷನ್ ಬರುತ್ತೆ,ಆಗ ಈ software engineer ಗಳು ಎಲ್ಲಾ ಬೀದಿಗೆ ಬರುತ್ತಾರೆ ನೋಡ್ತಾ ಇರಿ " ಆಂತ ಹೇಳುವುದನ್ನು ಪ್ರತಿಹತ್ತರಲ್ಲಿ ಒಬ್ಬ ಹದಿನೈದು ನಿಮಿಷಕ್ಕೆ ಶಾಪ್ ಹಾಕುವುದನ್ನು ಕೇಳುತ್ತೀರಿ.ಯಾಕೆ ಯಾರದರೂ ನೆಮ್ಮದಿಯಿಂದ ಬದುಕುತ್ತಿರುವವರು ಬೀದಿಗೆಬಂದರೆ ನಿಮ್ಮ ಹೊಟ್ಟೆ ತಂಪಾಗುತ್ತಾ?.

ನಿಜ ಹೇಳ್ಬೇಕು ಆಂದರೆ ನಿಯತ್ತಿನಿಂದ ವೃತ್ತಿಪರ ಕೋರ್ಸ್ ಗಳನ್ನು ಲಕ್ಷಗಟ್ಟಲೆ ಖರ್ಚು ಮಾಡಿ ಮುಗಿಸಿ, ನಂತರವೂ ಮೈಮೇಲೆ ಸಾಲ ಇದ್ದರೂ ನಿಯತ್ತಿನಿಂದ ಬದುಕುತ್ತಿರವರು ನಾವೇ ಕಾಣ್ರಿ.ಅದೆಷ್ಟೋ ಮಂದಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ,ಡಾಕ್ಟರ್ ಆದನಂತರ ಅದನ್ನು ತೀರಿಸಲು ಅಡ್ಡದಾರಿ ಹಿಡಿಯುತ್ತಾರೆ.ಕೋಟಿಗಟ್ಟಲೇ ಲಂಚ ಕೊಟ್ಟು ಸೇರುವ ಸರ್ಕಾರಿ ನೌಕರರು ಅದರ ದುಪ್ಪಟ್ಟು ಲಂಚ  ತೆಗದುಕೊಳ್ಳುತ್ತಾರೆ. ಇಡೀ ದೇಶಕ್ಕೇ ಅತ್ಯಾಚಾರಿ ಆಂತ ಗೊತ್ತಿದರೂ ಅವರ ಪರ ವಾದ ಮಾಡುವ ವಕೀಲರಿದ್ದಾರೆ. ಆದ್ರೆ ನಾವು ಬರುವಸಂಬಳದಲ್ಲಿ ಇರೋ ಬರೋ ಟ್ಯಾಕ್ಸ್ ಕಟ್ಟಿ ಬದುಕುತ್ತಿದ್ದರೂ ನಮ್ಮ ಮೇಲೆ ನಿಮ್ಮ ಶಾಪಗಳು ಜಾಸ್ತಿ ಯಾಕೆ?
            ಬಹುಷಃ ಇವೆನ್ನೆಲ್ಲಾ ನೋಡುತ್ತಿದ್ದಾಗ ನನಗೆ ಅನ್ನಿಸಿದ್ದು ಏನೆಂದರೆ ಈ ಥರಹ ಮಾತನಾಡುವ ಜನಕ್ಕೆ ನಾವುಗಳು ಏನುಮಾಡುತ್ತಿದ್ದೇವೆ ಅನ್ನುವುದು ಗೊತ್ತಿಲ್ಲಾ ,ಸಮಾಜಕ್ಕೆ ನಮ್ಮ ಕೊಡುಗೆ ಏನು ಇಲ್ಲಾ ಅಂದುಕೊಂಡು ಹೀಗೆ ಅನ್ನುತ್ತಿದ್ದಾರೆ ಅನ್ನಿಸುತ್ತದೆ. ಕೆಲಸದವಿಚಾರಕ್ಕೆ ಬಂದರೆ ನಮ್ಮ software ಗಳು ಇಲ್ಲದೇ ನಿಮ್ಮ ಬದುಕಿನಲ್ಲಿ ಎಷ್ಟು ಕಷ್ಟ ಯೊಚಿಸಿದ್ದೀರಾ?ಉದಾಹರಣೆಗೆ ನೀವು ದಿನಾಗಲೂಉಪಯೋಗಿಸುವ ವಸ್ತುಗಳ software ಕೆಟ್ಟು ಹೋಗಲಿ . ಆಗ ನಮ್ಮ ಬೆಲೆ ಅರ್ಥ ಆಗುತ್ತದೆ. ಕೆಲವರು ಅಯ್ಯೋ ಈ software ಬರೋ ಮುಂಚೆ ಮನುಷ್ಯ್ರು ಬದುಕ್ತಾ ಇರಲಿಲ್ವಾ ಮನುಷ್ಯರು ಅಂತ ವಿತಂಡ ವಾದ ಮಾಡ್ಬಹುದು. ಆಂತವರಿಗೆ ನಾನು ಹೇಳುವುದು ನನ್ನ ಚಿಕ್ಕ ಸವಾಲುsoftware ಇರುವಂತಹ ಅಥವಾ software ಗಳು ಉಪಯೋಗ ಪಡೆದುಕೊಂಡ ತಯರಾದ ವಸ್ತುಗಳನ್ನು ಬಿಟ್ಟು ಒಂದು ದಿನ ಬದುಕಿ ತೋರಿಸಿಆಂತ.ಈ ಟ್ರಾಫಿಕ್ ಮಯ ಯುಗದಲ್ಲಿ ,ದಿನದಿಂದೇ ದಿನ ಎಲ್ಲದಕ್ಕು ದೊಡ್ಡ ದೊಡ್ಡ ಕ್ಯೂಗಳು ಕಾಣಿಸುತ್ತಿರುವ ಈ ಜಮಾನದಲ್ಲಿ,ಹಗಲಿನಲ್ಲೂನೆಮ್ಮದಿಯಿಂದ ಹೆಣ್ಣುಮಕ್ಕಳು ಓಡಾಡಲು ಕಷ್ಟವಾಗಿರುವ ಈ ಕಾಲದಲ್ಲಿ ಕುಂತಲ್ಲಿಯೇ ನಿಮ್ಮ ಕೆಲಸಗಳನ್ನು ಮುಗಿಸುವಂತೆ ಮಾಡುವುದುನಮ್ಮ software ಗಳು.ನಮ್ಮ ಬಗ್ಗೆ ನಾವೇ ಹೊಗಳಿಕೊಳ್ಳಬಾರದು ಅದಕೆ ನಾನು ಇಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ.
           ಇದನ್ನು ಓದಿದ ಕೆಲವರಿಗೆ ತುಂಬಾ ಅತಿಯಾತು ಅನ್ನಿಸಬಹುದು. ಎದುರಾಳಿ ಪದೇ ಪದೇ ಏಟುಕೊಡುವಾಗ ನಾವು ಎದಿರೇಟು ಕೊಡಲೇಬೇಕುತ್ತದೆ. ಅದೇ ನಿಟ್ಟಿನಲಿ ಇದನ್ನು ಬರೆದಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ.ನನ್ನ ಬೇಡಿಕೆ ಇಷ್ಟೇಯಾರನ್ನಾದರೂ ತೆಗಳುವ ಮುಂಚೆ ಸರಿಯಾಗಿ ಅವರ ಬಗ್ಗೆ ತಿಳಿದುಕೊಂಡು ಉಗಿಯಿರಿ. ಸುಮ್ಮನೇ ನನ್ನದು ಒಂದು ಇರಲಿ ಆಂತ  ಮಾತನಾಡಬೇಡಿ.
English summary:The one thing I hear often people saying is " All these extra marital relationship,western culture,Pub culture started because of I T people .They are the threat to Indian culture".This is base less.All these started way back in 1980.Many people keep on cursing "Let the recession come,all these people will be on streets".Why is that so?Aren't u guys happy if someone is living happily.Actually we software engineers after spending lakhs together lead a honest life paying taxes .According to me the reason for this people's wrong perception is ,they really don't have single idea what we software engineers do? For those people  I ask to spend a day without using any of our software or products which has software.Last but not least my point is talk only if u have idea ,just don't add up .




ಶನಿವಾರ, ಸೆಪ್ಟೆಂಬರ್ 14, 2013

ಅರ್ಥ ಕಳೆದುಕೊಳ್ಳುತ್ತಿರುವ ಗಣೇಶ ಚತುರ್ಥಿ ಆಚರಣೆಗಳು

ಇಂದು ಬೀದಿಬೀದಿಗಳಲ್ಲಿ ,ಗಲ್ಲಿಗಲ್ಲಿಗಳಲ್ಲಿ ಎಲ್ಲೆಂದರಲ್ಲಿ ಗಣೇಶನ ಮೂರ್ತಿ ಇರುವ ಪೆಂಡಾಲುಗಳು ಕಾಣುತ್ತಿದ್ದೆ.ಮೂಷಿಕವಾಹನದ ಮೇಲೆ ಕೂರುವ ಗಣಪತಿಯಿಂದ ಹಿಡಿದು ಮೈಕಲ್ ಜಾಕ್ಸನ್ ಗಣಪತಿಯ ತನಕ ಸಾವಿರಾರು ರೂಪದಲ್ಲಿ ಗಣಪತಿಯನ್ನು ಕಾಣಬಹುದು.ಹೇಳಬೇಕಂದರೆ,ದೇವರಲ್ಲಿ ನಮ್ಮ ಗಣಪತಿಯು ಕ್ರಿಕೆಟ್ ಆಟದಲ್ಲಿ ಬರುವ ಗ್ಯಾಲರಿ ಪ್ಲೇಯರ್ ಇದ್ದ ಹಾಗೆ. ಕ್ರಿಕೆಟ್ನಲ್ಲಿ ಗ್ಯಾಲರಿ ಪ್ಲೇಯರ್ ಅನ್ನಿಸಿಕೊಂಡ ಆಟಗಾರ ಆಟದ ಮೈದಾನದಲ್ಲಿ ಇರುವವರೆಗೂ ಹೇಗೆ ಬೌಂಡರಿಗಳ ಸುರಿಮಳೆ ಸುರಿದು ವೀಕ್ಷಕರ ಮನದಣಿಸುತ್ತಾನೋ,ಹಾಗೆಯೇ ನಮ್ಮ ಗಣಪನೂ ಇದ್ದಷ್ಟೂ ದಿನ ನಮಲ್ಲಿ ಉತ್ಸಾಹ ತುಂಬಿ ತುಳುಕುವಂತೆ ನೋಡಿಕೊಳ್ಲುತ್ತಾನೆ. ಒಟ್ಟಿನಲ್ಲಿ ಹೇಳ್ಬೇಕೆಂದರೆ ನಮ್ಮ ಗಣೇಶ ಮಾಸ್ ಹೀರೊ.

        ಸಾರ್ವಜನಿಕ ವಲಯದಲ್ಲಿ ಗಣೇಶ ಚತುರ್ಥಿ ಆಚರಣೆ ಈ ಮಟ್ಟಿಗೆ ಆಚರಣೆಗೊಳ್ಳಲು ಕಾರಣ ನಮ್ಮ ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕರು. ಸ್ವಾತಂತ್ರ್ಯ ಪೂರ್ವದಲ್ಲಿ ಗಣೇಶ ಹಬ್ಬ ಮನೆಮನೆಗಳಿಗೆ ಸೀಮಿತ ವಾಗಿತ್ತು. ಗಣೇಶನ ಜನಪ್ರಿಯತೆಯನ್ನು ಕಂಡ ತಿಲಕರು ಅದನ್ನು ದೇಶದ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಒಗ್ಗೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರನ್ನು ಬ್ರಿಟಿಷರ ವಿರುದ್ಧ ಎತ್ತಿ ಕಟ್ಟಲು ಗಣೇಶ ಚತುರ್ಥಿಯನ್ನು ಸಾರ್ವಜನಿಕವಾಗಿ ಆಚರಿಸಲು ಶುರು ಮಾಡಿದರು. ದೊಡ್ದ ದೊಡ್ಡ ಗಣೇಶ ಮೂರ್ತಿಗಳನ್ನು ಇಡುವುದು,ಕೆರೆಗಳಲ್ಲಿ ಮುಳುಗಿಸುವ ಪದ್ಧತಿಗಳನ್ನು ಶುರು ಮಾಡಿದ್ದು ಲೋಕಮಾನ್ಯ ತಿಲಕರು.

     ಅಂದಿನಿಂದ ಶುರುವಾದ ಈ ಪದ್ಧತಿ ಸ್ವಾತಂತ್ರ್ಯದ ನಂತರವೂ ಮುಂದುವರೆದುಕೊಂಡು ಬಂದಿದೆ.ಆದರೆ ಈಗಿನ ಆಚರಣೆಗಳು ಎಲ್ಲೋ ಅರ್ಥಕೊಳ್ಳುತ್ತಿದೆ ಅನ್ನಿಸುತ್ತಿದೆ.ಮೊದಲನೆಯದಾಗಿ ಗಣೇಶ ಹಬ್ಬದ ಆಚರಣೆ ಇಂದು ಪ್ರತಿಷ್ಠೆಯ ಪ್ರತೀಕವಾಗಿಬಿಟ್ಟಿದೆ.ಅದಕ್ಕೆ ಎನೋ ಈ ಸಲ ಈ ಬೀದಿಯಲ್ಲಿ ಗಣೇಶ ಇಟ್ಟರು ಅಂತ ಮುಂದಿನ ವರ್ಷ ಇನ್ನೊಂದು ಬೀದಿಯಲ್ಲಿ ಗಣೇಶ,ಈ ಸಂಘದವರು ಇಟ್ಟರು ಆಂತ ಇನ್ನೊಂದು ಸಂಘ ಹೀಗೆ ವರ್ಷದಿಂದ ವರ್ಷ ಈ ಸಂಖ್ಯೆ ಬೆಳೆಯುತ್ತಲೇ ಹೋಗುತ್ತಿದೆ.ಕಾಲ ಬದಲಾದಂತೆ ನಾವು ಇದರಿಂದಾಗುವ ಸಮಸ್ಯೆಗಳನ್ನು ನೋಡಬೇಕಾಗಿದೆ.

        ಈಗಂತೂ ಎಲ್ಲೆಂದರಲ್ಲಿ ರೋಡನ್ನು ಬ್ಲಾಕ್ ಮಾಡಿ ಗಣೇಶನನ್ನು ನಿಲ್ಲಿಸಲಾಗುತ್ತದೆ .ಹಬ್ಬದ ಆಸುಪಾಸು ದಿನಗಳು ಇದರಿಂದಾಗಿ ಟ್ರಾಫಿಕ್ ಸಮಸ್ಯೆ ದೊಡ್ಡ ದೊಡ್ಡ ಊರುಗಳಲ್ಲಿ ಸರ್ವೇ ಸಾಮನ್ಯ.ಇದರಿಂದಾಗಿ ಅಷ್ಟು ದಿನಗಳೂ ಜನರಿಗೆ ಹಬ್ಬ ಯಾಕಾದರೂ ಬಂದಿದೆ ಆನ್ನಿಸಿಬಿಡುತ್ತದೆ.ಇನ್ನೂ ಕೆಲವು ಕಡೆಯಂತೂ ಕಿವಿ ಹರಿದು ಹೋಗುವ ಹಾಗೆ ಮೈಕ್ ಸೆಟ್ ನಲ್ಲಿ ಹಾಡು ಅಥವಾ ಕಾರ್ಯಕ್ರಮ ನಡೆಸುತ್ತಿರುತ್ತಾರೆ. ಗಣೇಶ ವಿನೋದ ಪ್ರಿಯ. ಹಾಗೆ ಅವನ ಹೆಸರಲ್ಲಿ ಒಂದಿಷ್ಟು ಕಾರ್ಯಕ್ರಮ ಮಾಡಿ ನಾಲ್ಕೈದು ಜನ ಸೇರಿದರೆ ಏನು ತಪ್ಪು ಆಂತ ಪ್ರಶ್ನೆ ನೀವು ಕೇಳಬಹುದು.ನಿಜ ಹೇಳಬೇಕೆಂದರೆ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಏನು ತಪ್ಪಿಲ್ಲ. ಹೊರಗೆ ಒಂದಿಷ್ಟು ಜನ ಸೇರಲು ಸಹಾಯವಾಗುತ್ತದೆ.ಇದರಿಂದ ಸಮಾಜದ ಸ್ವಾಸ್ಥ್ಯ ಹೆಚ್ಚಾಗುತ್ತದೆ.ಆಷ್ಟೇ ಅಲ್ಲಾ ಇಲ್ಲಿನ ವೇದಿಕೆಗಳು ಕೆಲವೊಮ್ಮೆ ಅದೆಷ್ಟೋ ಟಾಲೆಂಟ್ಸ್ ಗಳನ್ನು ಬೆಳಕಿಗೆ ತರುತ್ತದೆ.

   ಆದರೆ ಇತ್ತೀಚೆಗೆ ಈ ಕಾರ್ಯಕ್ರಮಗಳನ್ನು ನೋಡಿದಾಗ ನಿಜವಾಗಲೂ ಮೇಲಿನ ಸದುದ್ದೇಶಗಳು ಕಾಣ ಸಿಗುವುದೇ ಇಲ್ಲಾ. ಗಣೇಶನ ಪೆಂಡಾಲ್ಗಳಲ್ಲಿ ಹಾಡುವ ಹಾಡುಗಳು ನಿಜವಾಗಲೂ ಗಣೇಶ ಕೇಳಿಸಿಕೊಂಡರೆ ಕಿವಿಮುಚ್ಚುಕೊಳುತ್ತಾನೆ. ರವಿಚಂದ್ರನ್ ಚಿತ್ರದ ಯಮ್ಮೊ ಯಮ್ಮೋ, ಭಟ್ಟರ ಹಳೇ ಪಾತ್ರೆ ಯಂತಹ ಪೋಲಿ ಹಾಡುಗಳು,ಹಿಂದಿ ಚಿತ್ರದ ಹೆಣ್ನನ್ನು ಕಾಮ ದೃಷ್ಟಿಯಲ್ಲಿ ನೋಡುವ ಮುನ್ನಿ,ಶೀಲಾ ಹಾಡುಗಳು.ಇನ್ನೂ ವೇದಿಕೆಗಳಲ್ಲಿ ಕೆಲವೊಮ್ಮೆ ನಡೆಯುವ ಕಾರ್ಯಕ್ರಮಗಳು ಅಂತೂ ಕೇಳಬೇಡಿ.ದ್ವಂದಾರ್ಥಗಲು ಇರುವ ಹಾಸ್ಯಗಳು,ಅರಬರೆ ಬಟ್ಟೆಯ ಫ಼್ಯಾಷನ್ ಶೋಗಳು,ಕ್ಯಾಬರೆ ಹಾಡುಗಳ ಅರ್ಥ ತಿಳಿಯದೆ ಕುಣಿಯುವ ಚಿಕ್ಕ ಮಕ್ಕಳು,ಪುಟ್ಟ ಹುಡುಗಿಯರು. ಇವೆಲ್ಲಾ ಬಿಟ್ಟು ಸಂಸ್ಕೃತಿ ಉಳಿಸುವ ಕಾರ್ಯಕ್ರಮಗಳು ಮತ್ತು ಮನೋರಂಜನೆಯ ಎಲ್ಲೆ ಮೀರದ ಕಾರ್ಯಕ್ರಮಗಳು ನಡೆಯಬೇಕು ಎಂಬುದು ನನ್ನ ವಾದ.

     ಇನ್ನೂ ಗಣೇಶನನ್ನು ಮುಳುಗಿಸುವ ನೆಪದಲ್ಲಿ ನಡೆಯುವ ಧಾಂದಲೆಗಳು ,ಕೊಳ,ನದಿಗಳ ಮಾಲಿನ್ಯ .ಇವುಗಳ ಬಗ್ಗೆ ಸ್ವಲ್ಪ ನಿಗಾ ವಹಿಸಲಾಗಿದೆ ಆದರೂ ನೀರಿಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲಾ ಅನ್ನುವುದು ಬೇಜರ.ಕೆಲವೊಮ್ಮೆ ಈ ಗಣೇಶ ಪೆಂಡಾಲ್ಗಳು ಕುಡುಕರ ಅಡ್ಡೆಯಾಗಿ ಬಿಡುತ್ತದೆ. ಹೆಣ್ಣುಮಕ್ಕಳು ಒಡಾಡುವುದು ಯೋಗ್ಯವಲ್ಲದ ಪೋಲಿಗಳ ಅಡ್ಡೆಯಾಗಿಬಿಡುತ್ತದೆ.ದೇವರ ಹೆಸರಲ್ಲಿ ಇವೆಲ್ಲಾ ಯಾಕೆ?

   ನಾನು ಒಬ್ಬ ಹಿಂದುವಾಗಿ ಗಣೇಶ ಹಬ್ಬದ ಆಚರಣೆಯನ್ನು ವಿರೋಧಿಸುತ್ತಿದ್ದೇನೆಂದು ನನ್ನನ್ನು ಹಿಂದು ವಿರೋಧಿ ಗುಂಪಿಗೆ ಸೇರಿಸಿಕೊಳ್ಳಬೇಡಿ.ಸ್ವಾತಂತ್ರ್ಯ ತಂದುಕೊಡಲು ಸಹಕರಿಯಾದ ಗಣೇಶನ ಹುಟ್ಟು ಹಬ್ಬಕ್ಕೆ ನಮ್ಮ ಸಮಾಜದಲ್ಲಿ ಒಂದು ವಿಶೇಷ ಸ್ಥಾನಮಾನವಿದೆ.ಅದಕ್ಕೆ ವಿದೇಶದಲ್ಲಿಯೂ ಈ ಹಬ್ಬವನ್ನೂ ಆಚರಿಸಲಾಗುತ್ತದೆ.ಇಂತಹ ಒಂದು ಹಬ್ಬ ದಿನದಿಂದ ದಿನೇ ಅರ್ಥ ಕಳೆದುಕೊಳ್ಳದೇ ನಮ್ಮ ಸಂಸ್ಕೃತಿ ಬೆಳಸುವ, ಸೌಹಾರ್ದತೆ ಮೆರೆಯುವ ಅರ್ಥಪೂರ್ಣ ಹಬ್ಬವಾಗಿರಲಿ ಎಂಬುದು ನನ್ನ ಆಶಯ.
English summary: When its comes to popularity in Indian gods,Ganesh is the mass entertainer. Before Independence Ganesh festival used to get  celebrated only in homes.Later lokamaanya tilak   started to celebrate the ganesh festival In public places.He is used address the social gatherings and bring awareness in people about the bad consequences of Britishrule. Post Independence Ganesh festivals changed a lot.Nowadays they are loosing its importance and erecting ganesh pendals have been matter of prestige.Water pollution is getting increased during the immersion of ganesh. So ,Ganesh chaturthi celebration
which have historical importance should be celebrated in a such way so that they don't loose importance. 

ಶನಿವಾರ, ಸೆಪ್ಟೆಂಬರ್ 7, 2013

ತಸ್ಮೈಶ್ರೀ ಗುರುವೇ ನಮಃ



ಗುರುರ್ ಬ್ರಹ್ಮ

ಗುರುರ್ ವಿಷ್ಣು

ಗುರುರ್ ದೇವೋ ಮಹೇಶ್ವರಃ

ಗುರುರ್ ಸಾಕ್ಷಾತ್ ಪರಬ್ರಹ್ಮ

ತಸ್ಮೈಶ್ರೀ ಗುರುವೇ ನಮಃ

              ಒಬ್ಬ ಗುರುವು ತನ್ನ ಶಿಷ್ಯನಲ್ಲಿ ಜ್ಞಾನದ ಬೀಜ ಬಿತ್ತಿ ,ಜ್ಞಾನದ ಹುಟ್ಟಿಗೆ ಕಾರಣನಾಗುತ್ತಾನೆ . ಆದ್ದರಿಂದ ಆತ ಬ್ರಹ್ಮ. ಗುರುವು ತನ್ನ ಶಿಷ್ಯನನ್ನು ಸರಿಯಾದ ದಾರಿಯಲ್ಲಿ ಅಂದರೆ ಕತ್ತಲಿಂದ ಬೆಳಕಿನೆಡೆಗೆ ಕೈ ಹಿಡಿದು ನಡೆಸುತ್ತಾನೆ. ಚಿಗುರಿನಂತಿರುವ ಆತನನ್ನು ಸರಿಯಾಗಿ ಪೋಷಿಸಿ ಫಲ ನೀಡುವ ಮರವಾಗುವ ಹಾಗೆ ನೋಡಿಕೊಳ್ಳುತ್ತಾನೆ. ಆದ್ದರಿಂದ ಆತ ವಿಷ್ಣು . ಒಬ್ಬ ಗುರುವು ತನ್ನ ಶಿಷ್ಯನಲ್ಲಿರುವ ಕಾಮ ,ಕ್ರೋಧ ,ಮದ ,ಮತ್ಸರ,ಮೋಹ ,ಲೋಭಗಳನ್ನು ನಾಶ ಮಾಡುತ್ತಾನೆ . ಆದ್ದರಿಂದ ಅವನೇ ಶಿವ . ಹೀಗೆ ತ್ರಿಮೂರ್ತಿಗಳನ್ನು ಒಳಗೊಂಡಿರುವ ಆತನೇ ಪರಬ್ರಹ್ಮ ಅಂದರೆ ಅತೀ ದೊಡ್ಡ ಶಕ್ತಿ .ಅಂತಹ ಗುರುವಿಗೆ ನಾನು ನಮಿಸುತ್ತೇನೆ.
        ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಒಂದು ಮಹೋನ್ನತ ಸ್ಥಾನವಿದೆ. ಮಾತೃದೇವೋ ಭವ,ಪಿತೃ ದೇವೋ ಭ್ಹವ,ಆಚಾರ್ಯ ದೇವೋ ಭವ ಹೀಗೆ ತಾಯಿ,ತಂದೆ ನಂತರದ ಸ್ಠಾನ ಗುರುವಿಗೆ ನೀಡಲಾಗಿದೆ.ಯಾಕಂದರೆ ದೇಶದ ಮುಂದಿನ ಪೀಳಿಗೆ, ಅಂದರೆ ಕಲ್ಲಿನಂತಿರುವ ಮಕ್ಕಳನ್ನು ಮೂರ್ತಿಯಂತೆ ರೂಪು ಕೊಡುವಲ್ಲಿ ಗುರುಗಳದ್ದು ಮಹತ್ತರ ಪಾತ್ರ.ಹಾಗೆಯೇ ನನ್ನ ಬಾಳಲ್ಲಿ ಕೂಡ.
     ಅಂದು ಅವರು  ಧಾರೆಯೆರದ ಜ್ಞಾನ ಇಂದು ನನ್ನ ಹೊಟ್ಟೆಗೆ ಹಿಟ್ಟು ,ಮಾನ ಮುಚ್ಚಲು ಬಟ್ಟೆ ನೀಡುತ್ತಿದೆ.ಆಷ್ಟೇ ಅಲ್ಲಾ
ಆಂದು ನಾನು ತಪ್ಪು ಮಾಡಿದಾಗ ಕಿವಿ ಹಿಡಿದು ತಿದ್ದಿದ್ದಿಕ್ಕೆ,ಇಂದು ನಾನು ತಪ್ಪು ಮಾಡುವ ಮುಂಚೆ ನನ್ನ ಆತ್ಮಾಸಾಕ್ಷಿ ನನ್ನ ತಡೆ ಹಿಡಿಯುತ್ತದೆ.ಆಂದು ಅವರು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಇಂದು ನನಗೆ ನನ್ನ ಬಾಳಲ್ಲಿ ಆತ್ಮ ವಿಶ್ವಾಸದಿಂದ ಮುನ್ನುಗ್ಗಲು ಸಾಧ್ಯಾವಾಗಿದೆ. ಇಂದಿನ ನನ್ನ ಸಾರ್ಥಕ ಜೀವನಕ್ಕೆ ನನ್ನ ಎಲ್ಲಾ ಗುರುಗಳು ಕಾರಣ. ಅವರ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯುವುದಿಲ್ಲ. ಆದ್ದರಿಂದ ಕೆಲವರ ಬಗ್ಗೆ ಬರೆದಿದ್ದೇನೆ.
          ತಾಯಿಯೇ ಮೊದಲ ಗುರು. ಹೌದು ಇಂದು ನಾನು ವೇದಿಕೆ ಮೇಲೆ ನಿಂತು ಉದ್ದುದ್ದ ಸಂಭಾಷಣೆ ಹೊಡೆದು ಜನರಿಂದ ಚಪ್ಪಾಳೆ ಹೊಡೆಸಿಕೊಳ್ಳತ್ತಿದ್ದೇನೆಂದರೆ ಕಾರಣ ನನ್ನ ತಾಯಿ .ನನಗೆ ಬಾಲ್ಯದಲ್ಲಿ 'ರ' ಉಚ್ಚಾರ ಬರುತ್ತಿರಲಿಲ್ಲ , 'ಸ''ಷ'ಶ' 'ಲ''ಳ' ಇವುಗಳ ನಡುವೆ ವ್ಯತ್ಯಾಸವೇ ಗೊತ್ತಿರಲಿಲ್ಲ. ಒಂದು ದಿನ ನನ್ನ ನೆಂಟರು ನನ್ನನ್ನು ಈ ವಿಷಯಕ್ಕಾಗಿ ಗೇಲಿ ಮಾಡಿ ನಕ್ಕಿದ್ದು ಇನ್ನೂ ನೆನಪಿದೆ. ಅಮ್ಮ ನನ್ನ ತಿದ್ದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲಾ.ನಾನು ಅವರ ಕೈಯಿಂದ ತಿಂದ ಪೆಟ್ಟು ಅಷ್ಟಿಷ್ಟಲ್ಲಾ. ಅವೆಲ್ಲಾ ಇಂದು ನನಗೆ ಚಪ್ಪಾಳೆಯಾಗಿ ಕೇಳಿಬರುತ್ತಿದೆ.
               ಇನ್ನು ಇಂದು ನಾನು ಗಣಿತವನ್ನು ಸರಾಗವಾಗಿ ಮಾಡುತ್ತೇನೆ,ಏಂತಹ ದಡ್ಡನಿಗೂ ಸುಲಭವಾಗಿ ಅರ್ಥವಾಗುವಂತೆ ಹೇಳಿ ಕೊಡುತ್ತೇನೆ ಅಂದರೆ ನನ್ನ ತಂದೆ ಕಾರಣ.ನಿಜ ಹೇಳಬೇಕಂದರೆ ನನ್ನ ತಂದೆ ಓದಿದ್ದೂ ಹತ್ತನೇ ತರಗತಿ,ಕನ್ನಡ ಮಾಧ್ಯಮದಲ್ಲಿ . ಆದರೆ ನನ್ನ ತಂದೆ ನನಗೆ c.b.s.e ಲೆಕ್ಕಗಳನ್ನು ಹತ್ತನೇ ತರಗತಿಯವರೆಗೆ ಹೇಳಿಕೊಡುತ್ತಿದ್ದರು.ನಿಜ ಹೇಳಬೇಕೆಂದರೆ c.b.s.e ಲೆಕ್ಕಗಳು ಸುಲಭದ ತುತ್ತಲ್ಲಾ.ಮೊದಲಿಂದಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ನನಗೇ ಇಂದು ಕೆಲವೊಂದು ಲೆಕ್ಕಗಳು ಅರ್ಥ ಆಗುವುದು ಕಷ್ಟ.ನಮ್ಮ ಅಪ್ಪನನ್ನು ನೋಡಿದಾಗ ನನಗೆ ಈಗಲೂ ಹೆಮ್ಮೆಯಾಗುತ್ತದೆ. ಹಾಗೆಯೇ ನನ್ನ ಗಣಿತದ ಅಂಕಗಳನ್ನು ನೋಡಿದಾಗಲೂ ಕೂಡ.
                ನಾನು ಪ್ರತಿ ಸಾರಿಯೂ ವೇದಿಕೆಯನ್ನು ಯಾವುದೇ ಭಯವಿಲ್ಲದೆ ಹತ್ತುವಾಗ ನನಗೆ ನೆನಪಾಗುವುದು ನನ್ನ ಸ್ಕೂಲಿನಲ್ಲಿದ್ದ ಕಲಾವತಿ ಮೇಡಂ ಹಾಗು ವಿದ್ಯಾ ಮೇಡಂ .ಕಲಾವತಿ ಮೇಡಂ ಒಂದು ಪಾಠ ಮುಗಿಯುತ್ತಿದ್ದಂತೆಯೇ ಅದನ್ನು ನಮಗೆ ನಾಟಕದ ಮೂಲಕ ಅಭಿನಯಿಸಿ ತೋರಿಸಲು ಹೇಳುತ್ತಿದ್ದರು. ಆಗ ನಾನು ನಾಟಕಗಳನ್ನು ನಿರ್ದೇಶಿಸಿ,ಆಭಿನಯಿಸುತ್ತಿದ್ದೆ.  ನನ್ನಲ್ಲಿನ ಸೃಜನ ಶೀಲತೆಯನ್ನು ಮೊದಮೊದಲು ಪೋಷಿಸಿದ ವ್ಯಕ್ತಿ ಅವರೇ ಆಂದರೆ ತಪ್ಪಾಗಲಾಗದು.ಇನ್ನು ವಿದ್ಯಾ ಮೇಡಂ ಅವರ ಪ್ರತಿ ಕ್ಲಾಸ್ನಲ್ಲಿಯೂ self expression ಎಂದು ಮಾಡಿಸುತ್ತಿದ್ದರು.ಪ್ರತಿಯೊಬ್ಬರೂ ಒಂದೊಂದು ದಿನ ಎನಾದರೂ ಅವರಗನ್ನಿಸಿದ್ದನ್ನು ಎಲ್ಲರ ಮುಂದೆ ಮಾಡಬೇಕಿತ್ತು. ನನ್ನಲ್ಲಿರುವ stage fear ತೊಡೆದುಹಾಕಲು ಅದು ಬಹಳ ಸಹಕಾರಿಯಾಗಿತ್ತು.
    ನನ್ನನು ಅತಿಯಾಗಿ ಕಾಡುವ ಇನ್ನೊಬ್ಬ ಮೇಷ್ಟ್ರು ಅಂದರೆ ,ಸ್ವರ್ಗವಾಸಿಯಾಗಿರುವ ನನ್ನ ಪ್ರೀತಿಯ ತಿಪ್ಪೇಶ್ ಸರ್. ಸ್ಕೂಲಿನಲ್ಲಿದ್ದಾಗ ನಾನು ನಾಟಕ,ಮಿಮಿಕ್ರಿ ಮಾಡಿಕೊಂಡು ಸ್ವಲ್ಪ ಹೆಸರು ವಾಸಿಯಾಗಿದ್ದೆ.ಯಾರಾದರೂ ಚಪ್ಪಾಳೆ ತಟ್ಟುತ್ತಾರೆ ಅಂದರೆ ಸಾಕು ಬೀದಿ ಬೀದಿಯಲ್ಲಿ ನಿಂತು ಅವರು ಹೇಳಿದಂತೆ ಕುಣಿಯುತ್ತಿದ್ದೆ.ಒಂದು ದಿನ ತಿಪ್ಪೇಶ್ ಸರ್ ನನ್ನನ್ನು ಕರೆದು ಹಾಗೆ ಬೀದಿ ಬೀದಿಯಲ್ಲಿ ಯಾರೋ ಹೇಳಿದರು ಅಂತ ಮಾಡಿದರೆ ,ಜನ ನಿನ್ನನ್ನು ಬೀದಿಯಲ್ಲಿ ಪೈಸೆಗೆ ಕುಣಿಯುವ ಮಂಗನಂತೆ ನೋಡುತ್ತಾರೆ.ನಿನ್ನ ಕಲೆಗೂ ಬೆಲೆ ಇರುವುದಿಲ್ಲಾ.ವೇದಿಕೆಯಲ್ಲಿ ಮಾತ್ರ ನಿನ್ನ ಕಲೆಯನ್ನು ತೋರಿಸು ಅಂತ ಬುದ್ಧಿವಾದ ಹೇಳಿದ್ದರು.ಇನ್ನೂ ನಾನು ಸ್ಕೂಲಿನಲ್ಲಿ ನಾಟಕಗಳಲ್ಲಿ ಅಭಿನಯಿಸುವಾಗ ಚಲನಚಿತ್ರದ ನಟರನ್ನು ತುಂಬಾ ಅನುಕರಿಸುತ್ತಿದ್ದೆ. ಚಪ್ಪಾಳೆ ಗಿಟ್ಟಿಸುವುದೇ ನನ್ನ ಉದ್ದೇಶವಾಗಿತ್ತು. ಒಮ್ಮೆ ನನ್ನ ಕರೆದು ಅದೇ ಸರ್ ಬೇರೆಯವರನ್ನು ಅನುಕರಿಸಬೇಡ .ನಿನ್ನ ಅಭಿನಯದಲ್ಲಿ ಸ್ವಂತಿಕೆಯನ್ನು ರೂಡಿಸಿಕೋ ಎಂದು ಬುದ್ಧಿವಾದ ಹೇಳಿದ್ದರು. ಈಗಲೂ ನನಗೇ ಆ ಮಾತುಗಳು ಕಿವಿಯಲ್ಲಿ ಗುಂಯ್ ಗುಡುತ್ತಿರುತ್ತದೆ.
           ಮೇಲೆ ಕೆಲವರ ಉದಾಹರಣೆ ಕೊಟ್ಟಿದ್ದೇನೆ ಅಷ್ಟೆ.ನನ್ನ ಪ್ರತಿಯೊಬ್ಬ ಗುರುಗಳು ಒಂದಲ್ಲಾ ಒಂದು ರೀತಿ ನನ್ನ ಬಾಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.ನಿಮ್ಮ ಬಾಳಲ್ಲಿಯೂ ಕೂಡ ಇಂತಹ ಗುರುಗಳು ಇದ್ದರು ಅಂದುಕೊಂಡಿರುತ್ತೇನೆ. ಹಾಗಿದ್ದಲ್ಲಿ ಒಮ್ಮೆ ಅವರನ್ನು ಸ್ಮರಿಸಿಕೊಳ್ಳಿ . ಅಲ್ಲಿಂದಲ್ಲಿಯೇ ಅವರಿಗೊಂದು ಪ್ರಮಾಣ ಮಾಡಿ.
English summary : Guru is Brahma.Because he is the one who is the responsible for the birth of the sapling called knowledge in his student.Guru is vishnu because he is the one who nourishes that plant in student.Guru is Shiva because he is the one who destroys the evils in his students.So,guru is the almighty "parabrahma".
 In my life teachers have played important role .First one is my mom.Today if I get claps for my dialogue delivery on stage,its because of her.She was the one who corrected my pronunciation in my childhood days.Second is my father.Today whenever I see my marks of mathematics of my school days,I feel happy.And all these because of my dad.Eventhough he was from kannada medium and studied till 10 th he used to teach me maths of C.B.S.E.Such a genius he was.Last but not least Tippesh sir.During my childhood days ,whenever I used to act I used to imitate many kannada actors.He was the one who called me and asked to stop imitating others and cultivate style of my own.
I think even in ur life teachers played important role.If so now its time to remember them.

ಬುಧವಾರ, ಆಗಸ್ಟ್ 21, 2013

ನಾವು software engineers : ATM Machineಗಳಲ್ಲ



            ಅಂದು ಬಸ್ ಸ್ಟ್ರೈಕ್ ಇತ್ತು . ಆದ್ದರಿಂದ ಸ್ವಂತ ಗಾಡಿಯಿಲ್ಲದವರು ಆಫೀಸ್ ನಿಂದ ಮನೆಗೆ ,ಮನೆಯಿಂದ ಆಫೀಸಿಗೆ ಹೋಗಲು ಆಟೋ ವನ್ನೇ ಅವಲಂಭಿಸಿದ ಬೇಕಾದ ಪರಿಸ್ಥಿತಿ . ಅಂದು ಆಟೋ ಚಾಲಕರು ದುಪ್ಪಟ್ಟು ಹಣವನ್ನು ಕೇಳಿ ಒಂದು ತರಹದ ಹಗಲು ದರೋಡೆ ಮಾಡುತ್ತಿದರು.ಇದನ್ನು ಸಹಿಸಲಾಗದ ನನಂಗೆ ಒಬ್ಬ ಅಟೋ ಚಾಲಕನಿಗೆ ಕೇಳಿಯೇ ಬಿಟ್ಟೆ "ಏನ್ ಸರ್ ಇದ್ಯಾವ ನ್ಯಾಯ ?ಒಂದಕ್ಕೆ ಎರಡರಷ್ಟು ಕೇಳೋದಾ?". ಆಗ ಅವನಿಂದ ಬಂದ ಉತ್ತರ " software engineers. ನಿಮ್ಗೇನ್ ಕಮ್ಮಿ ಸಾರ್?ಇವತ್ತೊಂದಿನ ನಮ್ಗೆ ಚಾನ್ಸ್ ಸ್ವಲ್ಪ ದುಡ್ದು ಮಾಡುವುದಕ್ಕೆ".
.............................................................................................................................................................
              ನಾನು ಜಿಮ್ ಗೆ ಹೋಗುತ್ತಿದ್ದ ಕಡೆ ಹುಡುಗನೊಬ್ಬ ಪರಿಚಯ ಆಗಿದ್ದ.ಕಷ್ಟ ಸುಖ ಆಗಾಗ ಇಬ್ಬರು ಹಂಚಿಕೊಳ್ಳುತ್ತಿದ್ದರಿಂದ ಸ್ವಲ್ಪ ಹತ್ತಿರವೂ ಆಗಿದ್ದ.ಒಂದು ದಿನ ಅದೇನೋ ಸಮಸ್ಯೆ ಹೇಳಿ ಐದು ಸಾವಿರ ನನ್ನ ಹತ್ತಿರ ಸಾಲ ತೆಗದುಕೊಂಡ.ಒಂದು ತಿಂಗಳಲ್ಲಿ ಕೊಡುತ್ತೀನಿ ಆಂತ ಹೇಳಿದ ಅಸ್ಸಾಮಿ ಆಮೇಲೆ ಆದರ ವಿಷಯದ ಬಗ್ಗೆ ಮಾತೇ ಇಲ್ಲಾ.ಕೊನೆಗೆ ದುಡ್ದು ಬೇಕೇ ಬೇಕು ಆಂತ ತುಂಬಾ ಹೇಳಿದ ನಂತರ ಹಾಗು ಹೀಗು ಮಾಡಿ ನಾಲ್ಕು ಸಾವಿರ ಕೊಟ್ಟು ಇನ್ನುಳಿದದ್ದು ಒಂದು ವಾರದ ನಂತರ ಕೊಡುವುದಾಗಿ ಹೇಳಿದ.ಒಂದು ವಾರದ ನಂತರ ಅವನ ಹತ್ತಿರ ದುಡ್ಡು ಕೇಳಿದಾಗ ಬಂದ ಉತ್ತರ "ಸಾರ್ ಅಷ್ಟೊಂದು ದುಡಿಯುತ್ತೀರಾ.ಒಂದು ಸಾವಿರ ಅಲ್ವಾ ಬಿಟ್ಟುಬಿಡಿ ಸಾರ್."
.............................................................................................................................................................
                              ಅದು ಹೇಗೋ ಕಷ್ಟ ಪಟ್ಟು ಚೆನ್ನೈನಿಂದ ನಾನು ಅಂದದ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡೆ.ಇದೀಗ ಉಳಿದುಕೊಳ್ಳಲು ಮನೆ ಹುಡುಕಬೇಕಾಗಿತ್ತು.ನಾಲ್ಕೈದು ಕಡೆ ಬಾಡಿಗೆ ಇದೆ ಆಂತ ಮನೆ ಮುಂದೆ ಬೋರ್ಡ್ ನೇತು ಹಾಕಿಕೊಂಡವರ ವಿಚಾರಿಸಲು ಹೋದೆ . ಅವರು ಮೊದಲು ಕೇಳುತ್ತಿದ್ದುದೇ"ಎನ್ ಕೆಲ್ಸಾ ಮಾಡ್ತೀರಾ?"."ನಾನು software engineer' ಅಂದ ಕೂಡಲೇ ಅಭೂತಪೂರ್ವ ಸ್ವಾಗತ ದೊರಕುತಿತ್ತು.(ಇಲ್ಲದಿದ್ದರೆ ಕೊಡೋಲ್ಲಾ ಅಂತ ಹೇಳಿ ಹಾಗೆಯೇ ಗೇಟ್ ಪಾಸ್ ಕೊಡುತ್ತಿದ್ದರು) ಮನಸ್ಸಿನೊಳಗೆ ಬೀಗುತ್ತಾ ನಾನು ಒಳಗೆ ಹೋಗಿ ಬಾಡಿಗೆ,ಮುಂಗಡ ಹಣ ಕೇಳಿದಾಗ ತಲೆತಿರುಗಿ ಬೀಳುವಂತಾಗುತ್ತಿತ್ತು.ಕುರಿ ಕಡಿಯುವ ಮುಂಚೆ ಹಾರ ಹಾಕಿ ಅಲಂಕಾರ ಮಾಡುವ ಆನುಭವ ಗೊತ್ತಾದುದ್ದೇ ಆಗ.ಒಂದು ದಿನ  ತಲೆಕೆಟ್ಟು ಒಂದು  ಟೀ ಕುಡಿಯೋಣ ಅಂತ ಒಂದು ಟೀ ಸ್ಟಾಲ್ಗೆ ಹೋಗಿ ಕೂತೆ.ಊರಿಗೆ ಹೊಸಬರಂತೆ ಕಂಡ ನನ್ನ ಟೀ ಮಾರುವವನು ಸಹಜವಾಗಿಯೇ ವಿಚಾರಿಸಿದ.ನಾನು ನನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು,ಯಾಕೆ ಇಷ್ಟು ದುಬಾರಿ ಆಂತ ಕೇಳಿದಾಗ ಅವನ ಉತ್ತರೆ ನನ್ನ ಮುಖಕ್ಕೆ ಹೊಡೆದ ಹಾಗಿತ್ತು. "ಅಯ್ಯೋ ಮೊದಲೆಲ್ಲಾ ಇಲ್ಲಿ ಕೇಳೋರು ಇರಲಿಲ್ಲಾ .ನೀವು software engineers ಬಂದ ಮೇಲೆ ಒಂದಕ್ಕೆ ಏರಡು ಕೊಟ್ಟು ಇಷ್ತು ಜಾಸ್ತಿ ಆಗಿರೋದು ನಿಮ್ಮಿಂದ ಬದುಕೋದೆ ಇಲ್ಲಿ ಕಷ್ಟ " ಅಂತ ಹೇಳಿ ನಾನು ಕೊಟ್ಟ ಹತ್ತು ರೂಪಾಯಿಗೆ ಚಿಲ್ಲರೆ ಇಲ್ಲಾ ಆಂತ ಹೇಳಿ ಸಾಗು ಹಾಕಿದ.

...................................................................................................................................................................


   ಈ ಮೇಲಿನ ಉದಾಹರಣೆಗಳು ಯಾಕೆ ಕೊಡುತ್ತಿದ್ದೀನಿ ಅಂತ ನಮ್ಮ software engineers ಅದಾಗಲೇ ಗೊತ್ತಾಗಿರುತ್ತದೆ.ಉಳಿದವರಿಗೆ ಏನಿದು ಆನ್ನಿಸಬಹುದು. ಹೆಚ್ಚಿನ ಜನರಲ್ಲಿ software engineers ಅಂದರೆ ಹಣವೆಂಬ ಹೂವು ಬಿಡುವ ಗಿಡಗಳು ಎಂಬ ಭಾವ ಇದೆ. ಮೇಲೆ ನೋಡಿದ ಹಾಗೆ ಇನ್ನೂ ಕೆಲವರಿಗೆ ಹಣದುಬ್ಬರ ವಾಗಲೂ ಕಾರಣ ನಾವೇ ಎಂಬ ಅಭಿಪ್ರಾಯವೂ ಇದೆ. ಬೆಳಗ್ಗೆ ನಮ್ಮ ಹತ್ತಿರ ಆದಷ್ಟೂ ಹಣ ಕಸಿದುಕೊಳ್ಳುವ ಹೊಂಚು ಹಾಕಿವ ಜನ ,ರಾತ್ರಿ ಎಲ್ಲಾದಕ್ಕೂ ನಾವೇ ಕಾರಣ ಅಂತ ಹೇಳಿಕೊಂಡು ಮಲಗುತ್ತಾರೆ.

            ನಮಗೆ ಕೈ ತುಂಬಾ ಸಂಬಳ ಬರುವುದೇನೋ ನಿಜ. ಸಂಬಳ ಅಂತ ಬಂದ ಮೇಲೆ ಮನೆ ಮಠ, ಖರ್ಚು ವೆಚ್ಚ ಗಳು ನಮಗೂ ಇದ್ದೇ ಇರುತ್ತದೆ. ಆರು ಸಾವಿರ ತರುವವನು ಅವನ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡರೆ,ಅರವತ್ತು ಸಾವಿರ ಬರುವವನು ಒಂದಿಷ್ಟು ಗೇಣು ಹೊರಲಾಡಿಕೊಳ್ಳಲು ಜಾಗ ಇರುವ ಹಾಗೆ ದೊಡ್ಡ ,ಸ್ವಲ್ಪ ಐಷರಾಮಿ, ಒಳ್ಳೆಯ ಮೆತ್ತನೆ ದುಬಾರಿ ಹಾಸಿಗೆ ತಂದು ಕೊಳ್ಳುತ್ತಾನೆ. ಆದಾಯ ಜಾಸ್ತಿ ಆದ ಹಾಗೆ ಒಬ್ಬ ಮನುಷ್ಯನು ತನ್ನ ಆಸೆಗಳ ಸೀಮೆಯನ್ನು ಸ್ವಲ್ಪ ಸ್ವಲ್ಪವಾಗಿಯೇ ವಿಸ್ತರಿಸಿ ಕೊಳ್ಳುತ್ತಾ ಹೋಗುತ್ತಾನೆ. ಈ ಮನುಷ್ಯನ ಸಹಜಗುಣವನ್ನು ನಾನು ಯಾಕೆ ಹೇಳುತ್ತಿದ್ದೇನೆ ಆಂದರೆ ನೀವು ಆಂದುಕೊಂಡಿರುವ ಕೈ ತುಂಬಿ ತುಳುಕುವ ಷ್ಟು ಸಂಬಳ ಬರುವ software engineer ಗೆ ಕೂಡ ಅವರದ್ದೇ ಖರ್ಚು ವೆಚ್ಚ ಇರುತ್ತದೆ,ಅವರದ್ದೇ ಜೀವನ ಇರುತ್ತದೆ ಎಂದು ಹೇಳಲು.

                         ಕೈ ತುಂಬಾ ಸಂಬಳ ಬರುತ್ತದೆ ,ಅರಾಮಾಗಿ ಬದುಕುತ್ತಿದ್ದಾರೆ , ನಮಗೂ ಒಂದಿಷ್ಟು ಇರಲಿ ಅಂತ ನಮ್ಮ ಹತ್ತಿರ ಅನಾವಶ್ಯಕವಾಗಿ ಕಿತ್ತುಕೊಳ್ಳುವ ಜನಗಳು ನೋಡಿದಾಗ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಹತ್ತು ರುಪಾಯಿ ಕೇಳುವ ಕಡೆ ಇಪ್ಪತ್ತು ರುಪಾಯಿ ಕೇಳುವ ಆಟೋದವರು, ಒಂದು ಎರಡೂ ರೂಪಾಯಿ ಇವರಿಗ್ಯಾವ ಲೆಕ್ಕ ಅಂತ ಚಿಲ್ಲರೆ ಕೊಡದೇ ಹೋಗುವ ಬಸ್ ಕಂಡಕ್ಟರ್ ಗಳು, ಲಕ್ಷ ಲಕ್ಷ ಮುಂಗಡ ಹಣ ತೆಗದುಕೊಳ್ಳುವ ಬಾಡಿಗೆ ದಾರರು ಹೀಗೆ ನಾವು software engineer ಅಂದ ಕೂಡಲೇ ಹಣ ಕೀಳುವ ಜನರಾಗಿ ಬಿಡುವವರನ್ನು ನೋಡಿದಾಗ ನಿಜಕ್ಕೂ ಮನಸ್ಸಿಗೆ ಬೇಜಾರಾಗುತ್ತದೆ.

                           ಇನ್ನೂ ನಮ್ಮಿಂದ ಬಾಡಿಗೆ, ಎಲ್ಲದರ ರೇಟ್ ಜಾಸ್ತಿ ಆಯಿತು ಅಂತ ಹೇಳುವವರಿಗೆ ಸಣ್ಣ ಉದಾಹರಣೆ ಕೊಡ ಬಯಸುತ್ತೇನೆ.ಒಂದು ಊರು ಇತ್ತು . ಊರ ಹೊರಗೆ ಒಂದೊಂದೇ ಕಂಪನಿಗಳು ತಲೆ ಎತ್ತಲು ಶುರುವಾಯಿತು .ಅದರ ಮೊದಲು ಊರ ಹೊರಗೆ ಮನೆಗಳೇ ಇರಲಿಲ್ಲ.ಇದ್ದರೂ ಬಾಡಿಗೆ ತುಂಬಾ ಕಡಿಮೆ. ಸಾಮನ್ಯವಾಗಿ ಕೆಲಸ ಮಾಡುವವರು ಕೆಲಸ ಜಾಗ ಮಾಡುವ ಹತ್ತಿರ ಮನೆ ಮಾಡುವುದರಿಂದ ಇಲ್ಲಿ ಮನೆಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಬೇಡಿಕೆ ಜಾಸ್ತಿ ಆದಂತೆ ಮನೆಗಳು ಕಟ್ಟಿ ಬಾಡಿಗೆಗೆ ಬಿಡುವವರು ಜಾಸ್ತಿ ಆಗಿದ್ದಾರೆ.ಹೊಸದಾಗಿ ಮನೆ ಮಾಡಬೇಕು ಎಂಬುವವರ ಪೈಕಿ ಜಾಸ್ತಿ ಊರ ಹೊರಗಿನವರು .ಭಾಷೆ ಗೊತ್ತಿಲ್ಲದ ಬೇರೆ ನಾಡಿನವರು ಬಂದಿದ್ದಾರೆ.ಎಲ್ಲಿಂದಲೋ ಬಂದವರಿಗೆ ಊರಿನ ಲೆಕ್ಕಾಚಾರಗಳ ಪರಿಚಯ ಕಮ್ಮಿ.ತಲೆ ಮೇಲೊಂದು ಸೂರು ಸಿಕ್ಕರೆ ಸಾಕು ಎಂದುಕೊಂಡು ಕೇಳಿದಷ್ಟು ಹಣ ಕೊಡುತ್ತಾ ಹೋಗಿದ್ದಾರೆ. ಕುರು ತಾನಾಗಿಯೇ ಕೊಬ್ಬಿ ,ತಾನಾಗಿಯೆ ಕುತ್ತಿಗೆ ನೀಡುತ್ತಿರುವುದನ್ನು ಜನ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ . ಅಷ್ಟೇ ನಡೆದದ್ದು ಇದೀಗ ಇಲ್ಲಿ ಕಬ್ಬಿಣಕ್ಕೂ ಚಿನ್ನದ ಬೆಲೆ .
                              ನಮ್ಮಿಂದಲೇ ಎಲ್ಲಾ ದುಬಾರಿ ಯಾಯಿತು ಎಂದು ಹೇಳುವ ಜನ ಇಲ್ಲಿ ಸರಿಯಾಗಿ ಕಣ್ಣು ತೆರದು ನೋಡಬೇಕಾಗಿದೆ.ಹೊಸದಾಗಿ ಮನೆ ಮಾಡಬೇಕು ಎಂಬುವವರ ಪೈಕಿ ಜಾಸ್ತಿ ಊರ ಹೊರಗಿನವರು .ಭಾಷೆ ಗೊತ್ತಿಲ್ಲದವರು. ಅದೇ ಊರಿನವರು ಊರಿನ ಒಂದು ಭಾಗ ವಾಗಿ ಹೋಗಿರುವುದರಿಂದ ಹೊಸ ಮನೆ ಮಾಡುವ ಗೋಜಿಗೆ ಕೈ ಹಾಕುವುದು ಕಮ್ಮಿ. ಅವರಿಗೆ ಅದು ಸಮಸ್ಯೆ ಅಲ್ಲಾ.ಉದಾಹರಣೆಗೆ ಆಟೋದವನಿಗೆ ಎಲ್ಲಿಗೋ ಹೋಗಬೇಕು ಏಷ್ಟಾಗುತ್ತದೆ ಆಂತ ಕೇಳಿದಾಗ ಅವನು ಮೊದಲು ಇದೇ ಊರಿನವರಾ ಅಥವ ಬೇರೆ  ಊರಿನವರಾ ಅಂತ ನೋಡುತ್ತಾನೆ. ಹೊಸಬರಾದರೆ ಆತ ಹೇಳಿದ್ದೇ ರೇಟ್‌.. .ಗೊತ್ತಿಲ್ಲದ ಜನ ಸುಮ್ಮನೆ ಕೊಟ್ಟು ಹೋಗುತ್ತಾರೆ.ಆದರೆ ಅದೇ ಊರಿನವರಾದರೆ "ನಾವು ಇದೇ ಊರಿನವರು.ನಮಗೆ ನಾಮ ಹಾಕಬೇಡ" ಅಂತ ಹೇಳಿ ಚ್Yಕಾಶಿ ಮಡಲು ನಿಲ್ಲುತ್ತಾರೆ.ಇಲ್ಲೂ ಅದೇ ಆಗಿದ್ದು .ಎಲ್ಲಿಂದಲೋ ಬಂದ ಹೊಸಬರು ಮೊದಮೊದಲು ಒಂಥರಾ uncomfort zone ನಲ್ಲಿಯೇ ಇರುತ್ತಾರೆ. ಆದಷ್ಟು ಬೇಗ ಮನೆ ಮಾಡಿಕೊಳ್ಳುವ ಆತುರದಲ್ಲಿರುತ್ತಾರೆ.ಏಷ್ಟಾದರೂ ಸರಿ ಸಿಕ್ಕರೆ ಸಾಕು ಅನ್ನುವವರನ್ನು ಕೆಲವರು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಐ ಟಿ ಕಂಪನಿಗಳು ಎದ್ದಿರುವ ಎಲ್ಲಾ ಕಡೆಯಲ್ಲೂ   ಇದನ್ನು  ಗಮನಿಸಬಹುದು.

                                 Demand ಜಾಸ್ತಿ ಆದ ಹಾಗೆ supply ಮಾಡುವವರು ಜಾಸ್ತಿ ಆಗಿದ್ದಾರೆ . Demand ಮಾಡುವವರು ಜಾಸ್ತಿಯೇ ಇರುವದರಿಂದ supply ಮಾಡುವವರು ಲಾಭ ಮಾಡಿಕೊಂಡಿದ್ದಾರೆ ಅಂತ ಹೇಳಿ ನಾನು ಇಲ್ಲಿಯವರೆಗೂ ಹೇಳಿದನ್ನು ಸಾರ ಸಗಟವಗಿ ಕೆಲವರು ತಿರಸ್ಕರಿಸಬಹುದು. ಆದರೆ ನನ್ನ ಉದ್ದೇಶ buyers ಪಡುತ್ತಿರುವ ಪಾಡನ್ನು    ಇಲ್ಲಿ ತೋರಿಸುವುದು.ಐ ಟಿ ನವರು ಬರುತ್ತಾರೆ ,ಕೇಳಿದಷ್ಟು ಹಣ ಕೊಡುತ್ತಾರೆ ಅಂತ ಆಂದುಕೊಂಡು ಕೋಟಿಗಟ್ಟಲೇ ಸಾಲ ಮಾಡಿ ,ಬ್ಯಾಂಕ್ ಸಾಲದ ಕಂತು ತೀರಿಸಲು ನಮಗೇ ಕತ್ತರಿ ಹಾಕುವುದು ಏಷ್ಟು ಸರಿ.
                   ಕೆಲವೊಮ್ಮೆ ನಮ್ಮನ್ನು ಹಣದ ಮೊಟ್ಟೆ ಇಡುವ ಕೋಳಿ ಅಂತ ತಿಳಿದುಕೊಳ್ಳುವ ಜನರ ತಪ್ಪು ಅಭಿಪ್ರಾಯಗಳಿಂದ ನಾವುಗಳು ತುಂಬಾ ಸಮಸ್ಯೆ ಎದುರಿಸಬೇಕಾಗಿದೆ . ಐ ಟಿ ಕಂಪನಿಗಳಿರುವ ಕಡೆ software engineer ಗಳ ದರೋಡೆ ದಿನದಿಂದ ದಿನೇ ಹೆಚ್ಚುತಿದೆ. ಸುಮ್ಮಸುಮ್ಮನೇ software engineer ಗಳ ಗಾಡಿಗೆ ಡಿಕ್ಕಿ ಹೊಡೆದು ಅವರನ್ನು ಹೆದರಿಸಿ ,ಬೆದರಿಸಿ ದುಡ್ಡು ಕಿತ್ತುಕೊಳ್ಳುವುದು,ಅಲ್ಲಿ ಸಂಚರಿಸುವ ಬಸ್ ಗಳಲ್ಲಿ ಅವರ ಜೇಬಿಗೆ ಕನ್ನ ಹಾಕುವುದು ,ಡ್ರಾಪ್ ಕೊಡುವ ನೆಪದಲ್ಲಿ ಅವರನ್ನು ಕಿಡ್ನ್ಯಾಪ್ ಮಾಡುವ ಉದಾಹರಣೆಗಳು ಜಾಸ್ತಿ ಆಗುತ್ತಿದೆ.ಕೆಲವೊಮ್ಮೆ ನಮಗೆ ನ್ಯಾಯ ಕೊಡಿಸಬೇಕಾದ ಪೋಲಿಸ್ ಗಳು ನಮ್ಮನು ಎ ಟಿ ಎಮ್ ಅಂತೆ ನೋಡುತ್ತಾರೆ. ಒಮ್ಮೆ ನನ್ನ ಗೆಳೆಯನೊಬ್ಬ ಗಾಡಿಗೆ ಡಿಕ್ಕಿ ಹೊಡೆದು ಜನ ದುಡ್ಡು ಕೇಳಲು ಶುರು ಮಾಡಿದರು.ಕೊನೆಗೆ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದಾಗ ಪೋಲಿಸ್ ಹೇಳಿದ್ದನ್ನು ಗೊತ್ತೇ " ಪಾಪ, ಬಿಡಿ ಸಾರ್ ಅವರು ನೀವೇ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕೊಟ್ಟುಬಿಡಿ.ಎನಂತೀರಾ ಇದಕ್ಕೆ ?
    ನಮ್ಮ ಬಗ್ಗೆ ಜನರಲ್ಲಿರುವ ತಪ್ಪು ಅಭಿಪ್ರಾಯಗಳಿಂದ ನಮಗೆ ಅಗುತ್ತಿರುವ ತೊಂದರೆಗಳನ್ನು ಹೇಳುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ ಅಷ್ಟೆ.ನಮ್ಮನ್ನು ನಾವು ಎತ್ತಿ ಕಟ್ಟಿಕೊಳ್ಳುವ  ಅಥವಾ ಯಾರನ್ನೂ ಕೀಳಾಗಿ ನೋಡುವ ಉದ್ದೇಶ ನನ್ನದಲ್ಲ.ನಿಮ್ಮ ಜೊತೆ ಹಂಚಿಕೊಳ್ಳುವುದು ಇನ್ನು ಇದೆ. ಮತ್ತೇ ಬರುತ್ತೇನೆ.

ಮಂಗಳವಾರ, ಆಗಸ್ಟ್ 13, 2013

ನಾವು software engineers....aliens ಗಳಲ್ಲ.....

                 


                       ಇದರ ಬಗ್ಗೆ ಬರೆಯಬೇಕು ಅಂತಾ ತುಂಬಾ ದಿನದಿಂದ ಕಾಯುತ್ತಾ ಇದ್ದೆ .ಆದ್ರೆ ಈಗ ಕಾಲ ಕೂಡಿ ಬಂದಿದೆ .ಇದು ಹಾಸ್ಯ ಲೇಖನ ಅಂತೂ ಅಲ್ಲವೇ ಅಲ್ಲಾ. ಆದ್ದರಿಂದ ಇದನ್ನು ಓದಿ ನಗುವ ಪ್ಲಾನ್ ಹಾಕಿಕೊಂಡಿದ್ದರೆ ದಯವಿಟ್ಟು ಒದೋಕೆ ಹೋಗಬೇಡಿ. ಈ ಲೇಖನವನ್ನು ನನ್ನ ಸುತ್ತಮುತ್ತ ಜನರಲ್ಲಿ software engineers ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು ದಿನವೂ ನೋಡಿ ಸಹಿಸಲಾಗದೇ ಬರೆಯುತ್ತಿರುವ ಲೇಖನ ಇದು . ಆದ್ದರಿಂದ software ಅಲ್ಲದೇ ಇರೋರು , ಅದರಲ್ಲ್ಲೂ ಅವರನ್ನು ಅಣಿಕಿಸುವವರು ಓದಲೇಬೇಕಾದ ಲೇಖನ.ನಿಮಗೆ ಸ್ವಲ್ಪ ನಿಮ್ಮ ಮುಖಕ್ಕೆ ಉಗಿದ ಹಾಗೆ ಆಗಬಹುದು ಆದರು ಸ್ವಲ್ಪ ಸುಧಾರಿಸಿಕೊಂಡು ಓದಿ.ಇಲ್ಲಿ ಯಾರನ್ನು ಎತ್ತಿ ಕಟ್ಟುತ್ತಿಲ್ಲಾ ,ಯಾರನ್ನು ಹೀನಾಯವಾಗಿ ನೋಡುತ್ತಾ ಇಲ್ಲ.ವಾಸ್ತವಕ್ಕೆ ಕನ್ನಡಿ ಹಿಡಿಯುವ ಸಣ್ಣ ಪ್ರಯತ್ನ ಅಷ್ಟೇ .

                              Software engineers ಅಂದಕೂಡಲೇ ಮೆದುಳ ಸಹಾಯವು ಇಲ್ಲದೆ ಎಲ್ಲರ ನಾಲಿಗೆಯಲ್ಲಿ ಮೊದಲು ಬರುವುದು "ನಿಮ್ದೇನ್ ಬಿಡಿ ಸಾರ್,ಐಷರಾಮಿ ಜೀವನ , ಕೈ ತುಂಬಾ ಸಂಬಳ ಬರುತ್ತೆ.ಎಷ್ಟು ಬೇಕಾದ್ರೂ ಖರ್ಚು ಮಾಡ್ತೀರಾ?".ಇದು ಓಕೆ ಆದರೆ ಮುಂದೆ ಹೇಳುವ ಮಾತಿದೆಯಲ್ಲಾ ಅದು ನಮ್ಮ ಜೇಬಿಗೆ ಕತ್ತರಿ ಅದೇ"ನಿಮ್ಗೇನ್ ಕಮ್ಮಿ ,ಜಾಸ್ತೀನೇ ಕೊಡಿ ಸಾರ್?". ಇಲ್ಲಿ ಹೇಳಬೇಕಾಗಿರುವುದು ಮತ್ತೆ ಗಮನಿಸಬೇಕಾಗಿರುವುದು ತುಂಬಾ ಇದೆ.

      ಸಾಮನ್ಯವಾಗಿ ಈ ವೃತ್ತಿಯಲ್ಲಿ ಸಂಬಳ ಜಾಸ್ತಿಯೇ(ತೀರಾ ಜಾಸ್ತಿಯೆನಲ್ಲಾ ,ಈಗ ಇದಕ್ಕಿಂತ ಜಾಸ್ತಿ ದುಡಿಯುವವರು ಬೇರೆ ಕೆಲಸದಲ್ಲಿ ಎಲ್ಲೆಂದರಲ್ಲಿ ಸಿಗುತ್ತಾರೆ). ಆದರೂ ಜನ ಪ್ರಕಾರ software engineersಗೆ ಜಾಸ್ತಿ .ಇರಲಿ ಒಬ್ಬ ಚೆನ್ನಾಗಿ ದುಡೀತಾ ಇದ್ದಾನೆ ಅಂದ ಮೇಲೆ ಆತ ಒಳ್ಳೆಯ ಜೀವನ ನಡೆಸಿದರೆ ತಪ್ಪೇ?ಅಥವಾ ಹೇಳುವವರ ಕಣ್ಣು ಕುಕ್ಕಿದಾಗ ಬಂದ ಮಾತುಗಳಾ ಇವು?ಸ್ವಲ್ಪ ಶ್ರಮ ವಹಿಸಿದರೆ ಎಂಜಿನೀಯರ್ ಗಳು ಸಾಮನ್ಯವಾಗಿ ಬೇಗನೆ ಒಳ್ಳೆಯ ಸಂಪಾದನೆ ಮಾಡಬಹುದಾದ್ದರಿಂದ ಇದೀಗ ಗಲ್ಲಿಗೆ ನೂರರಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಅದರಲ್ಲಿ ಸ್ವಲ್ಪ ನನ್ನಂತ ಆಕಾಶದಷ್ಟು ಆಸೆ ಹೊತ್ತ ಮಧ್ಯ್ಮಮ ವರ್ಗದ ಜನ ಜಾಸ್ತಿ.ಎನೋ ಸ್ವಲ್ಪ ಕೈಗೆ ಕಾಸು ಬಂದಾಗ ಮಜಾ ಮಾಡಿದ್ರೆ ತಪ್ಪೇ?...ಸಾರ್ ನಾವು ಕಷ್ಟಪಟ್ಟು ದುಡಿದ ದುಡ್ದೇ ಇದು.
               ಕಷ್ಟಪಟ್ಟು ದುಡಿದ ದುಡ್ಡು ಅಂದಾಗ ನೆನಪಾಯಿತು.ನಮ್ಮ ಸುತ್ತಮುತ್ತಲಿನಲ್ಲಿರುವ ಜನ ನಮಗೆ ಹೇಳುವ ಇನ್ನೊಂದು ಮಾತು"ನೀವು ಬಿಡಿ , ಏ ಸಿ ರೂಮ್ನಲ್ಲಿ ಕೂತುಕೊಂಡು ಕೆಲಸ ಮಾಡ್ತೀರಾ,ಆರಾಮ ಜೀವನ".ಹೋಗಲಿ ಬಿಡಿ ಅಂತ ಸುಮ್ಮನೆ ಇದ್ದರೆ ಆಗಲೇ ಇನ್ನೊಂದಿಷ್ಟು ಜನ "ತುಂಬಾ stress ಅಲ್ಲಾ ,ನಿಮ್ಮ ಕೆಲ್ಸದಲ್ಲಿ. ನೋಡ್ತಾ ಇರ್ತೀವಲ್ಲಾ ನ್ಯೂಸ್ ಅಲ್ಲಿ . ನಿಮ್ಮೋರು ಎಷ್ಟು ಜನ ಆತ್ಮಹತ್ಯೆ ಮಾಡಿಕೊಳ್ಳತ್ತಾರೆ ಅಂತ.ನಮಗೆ ಈ ಜೀವನ ಬೇಡಪ್ಪಾ".

                              ನಿಜ ಹೇಳಬೇಕಂದರೆ ಅಂದು ಕೊಂಡಷ್ಟು ಸುಲಭದ ಕೆಲಸ ಅಲ್ಲಾ.ನಾವು ನಾಲ್ಕು ಗೋಡೆಯ ಮೇಲೆ ಕೂತುಕೊಂಡು ,ಸಾವಿರಾರು ಲೈನ್ ಕೋಡ್ ಬರೆಯಬೇಕು.ಕೂತಲ್ಲೇ ಕೂತು ದೇಹ ಜಡಗಟ್ಟಿದಂತಾದರೂ ನಮ್ಮ ಮೆದುಳು ಅದರ ನೂರು ಪಟ್ಟು ಕೆಲಸ ಮಾಡುತ್ತಲಿರುತ್ತದೆ.ಕೆಲವೊಮ್ಮೆ ಶನಿವಾರ ಭಾನುವಾರ, ಹಗಲು ರಾತ್ರಿ ,ಮದುವೆ ಮುಂಜಿ,ಹಬ್ಬ ಹರಿದಿನ ಅಂತ ನಾವು ಕೆಲಸ ಮಾಡುತ್ತೇವೆ.ಇನ್ನೂ ನಮ್ಮ ಕೆಲಸದಲ್ಲಿ ಜಾಸ್ತಿ ಒತ್ತಡ ಇದೆ ಅನ್ನುವವರಿಗೆ ಒಂದು ಪ್ರಶ್ನೆ.ಯಾರದೇ ತಲೆ ಹೊಡೆಯದೇ ,ಕೈ ತುಂಬಾ ಸಂಬಳ ಬರುವ ಕೆಲಸ ತೋರಿಸಿ ನೋಡೋಣ.ಕೈ ತುಂಬಾ ಸಂಪಾದನೆ ಮಾಡುವವನಿರಲಿ,ಕೂಲಿ ಮಾಡುವವನಿರಲಿ ಎಲ್ಲರಿಗೂ ಅವರವರ ಕೆಲಸದಲ್ಲಿ ಅವರದೇ ಆದ ಸಮಸ್ಯೆಗಳು.ಒತ್ತಡಗಳು ಇರುತ್ತದೆ.ಇನ್ನೂ ಅತ್ಮಹತ್ಯೆ ವಿಷಯಕ್ಕೆ ಬಂದರೆ ರೈತನೂ ಆತ್ಮಹತ್ಯೆ ಮಾಡಿಕೊಳುತ್ತಾನೆ,ಕೂಲಿಕಾರನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ, ವೈದ್ಯ ,ಸರ್ಕಾರಿ ನೌಕರನೂ ಮಾಡಿಕೊಳ್ಳುತ್ತಾನೆ. ಆದರೆ ಇದು software ಯುಗ ನೋಡಿ ಅದಕ್ಕೆ ನಮ್ಮ ಪ್ರಾಣಕ್ಕೆ ಬೆಲೆ ಜಾಸ್ತಿ.ಅಂದ ಹಾಗೆ Software engineer ವಿಷಯಕ್ಕೆ ಬಂದಾಗ ಅತ್ಮಹತ್ಯೆ ,ಒತ್ತಡ ಜೀವನವನ್ನು ಸಂಪೂರ್ಣವಾಗಿ ನಾನು ಅಲ್ಲಗೆಳೆಯುವುದಿಲ್ಲಾ.
                                     ಅದನ್ನೇ ಎತ್ತಿಕಟ್ಟಿ ಬೇರೆ ಎಲ್ಲೂ ಆಗುತ್ತಿಲ್ಲಾ ಎಂಬಂತೆ ಒಂದು ವೃತ್ತಿಗೆ ಕಳಂಕ ತರುವುದು ಎಷ್ಟು ಸರಿ ಎಂಬುವುದು ನನ್ನ ವಾದ. ಇನ್ನೊಂದು ವಿಷಯ .ಈ ಥರಹ ಹೇಳುವವರಲ್ಲಿ ಸಾಕಷ್ಟು ಜನರ ಹತ್ತಿರದವರು ಎಷ್ಟೇ ಪ್ರಯತ್ನ ಪಟ್ಟರೂ software engineer ಆಗಿರುವುದಿಲ್ಲಾ . ಒಂಥರಾ ಸಿಗದ ದ್ರಾಕ್ಷಿ ಹುಳಿಯೆಂಬಂತೆ ಇರುತ್ತದೆ ಅವರ ಮಾತು .ಅದೇ ಅವರ ಮನೆಯಲ್ಲೀ ಯಾರದರೂ software engineer ಆಗಿ ಕೈ ತುಂಬಾ ಸಂಬಳ ತಂದುಕೊಡಲಿ ಆಗ ಇವರ ವರಸೆಯೇ ಬದಲಾಗುತ್ತದೆ.



ಹೀಗೆ ನಮ್ಮ software engineers ನೋವುಗಳು ತುಂಬಾ ಇದೆ. ಇನ್ನೂ ಒಂದಿಷ್ಟು ವಿಷಯಗಳ ಜೊತೆ ಮತ್ತೆ ಬರುತ್ತೀನಿ. ಅಲ್ಲಿಯವರೆಗೂ ಬೈ ಬೈ

































ಶುಕ್ರವಾರ, ಆಗಸ್ಟ್ 9, 2013

ನಾ ಮೆಚ್ಚಿದ ಕಾದಂಬರಿ:The fourth estate



         " The fourth estate ".. ಜೆಫ್ರಿ ಆರ್ಚರ್ ಬರೆದಿರುವ ಈ ಇಂಗ್ಲಿಷ್ ಕಾದಂಬರಿ ನಾನು ಇತ್ತೀಚಿನ ದಿನಗಳಲ್ಲಿ ಓದಿರುವ ಅದ್ಭುತ ಕಾದಂಬರಿಗಳಲ್ಲಿ ಒಂದು.ಆದೇನೋ ಈ ಕಾದಂಬರಿ ಓದಿದಾಗಿನಿಂದಲೂ ನನಗೆ ಇದರ ಬಗ್ಗೆ ಬರೆಯಬೇಕು ಅನ್ನಿಸಿತ್ತು .ಈಗ ಕಾಲ ಕೂಡಿ ಬಂದಿದೆ. ಪುಸ್ತಕದ ಬಗ್ಗೆ ನನಗನ್ನಿಸಿದ್ದನ್ನು ಇಲ್ಲಿ ಬರೆದಿದ್ದೇನೆ ಅಷ್ಟೇ.

          ಮೊದಲಿಗೆ The fourth estate ಅಂದರೇನು ಎಂದು ಗೊತ್ತಿಲ್ಲದವರಿಗೆ ಅದರ ಬಗ್ಗೆ ಕಿರು ಪರಿಚಯ . ಯುರೋಪ್ ನ ಮಧ್ಯ ಕಾಲೀನ ಹಾಗು ಪೂರ್ವ ಆಧುನಿಕ ಯುಗದಲ್ಲಿ ಸಮಾಜವನ್ನು ಸಾಮನ್ಯ ವಾಗಿ ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗುತಿತ್ತು . ಚರ್ಚ್ ನ ಧಾರ್ಮಿಕ ಗುರುಗಳು,ಸಮಾಜದಲ್ಲಿ ಹೆಚ್ಚು ಸುಖ ಅನುಭವಿಸುವ ಶ್ರೀಮಂತರರು ಹಾಗು ಸಾಮಾನ್ಯ ಜನರನ್ನು ಮೂರು ಎಸ್ಟೇಟ್ ಗಳನ್ನಾಗಿ ಪರಿಗಣಿಸಲಾಗುತಿತ್ತು. ಈ ಮೂರು ಸರಿಯಾದ ದಾರಿಯಲ್ಲಿ ಹೋಗುವ ಹಾಗೆ ನೋಡಿಕೊಳ್ಳುವ ಜವಬ್ದಾರಿ ಅದೇ ನಾಲ್ಕನೇ ಎಸ್ಟೇಟ್ ನದು. ಅದುವೇ ಪತ್ರಿಕೋದ್ಯಮ.

                    ಈ ಕಾದಂಬರಿ ಅದೇ ಪ್ರಭಾವಿ ಪತ್ರಿಕೋದ್ಯಮದ ಬಗ್ಗೆ, ಪಿಸ್ತೂಲು ಹಿಡಿದ ಸೈನಿಕರಷ್ಟೇ ಶಕ್ತಿ ಇರುವ ಪೆನ್ನು ಹಿಡಿಯುವ ಪತ್ರಕರ್ತರ ಆ ಸಾಮ್ರಾಜ್ಯವನ್ನು ಗೆಲ್ಲಲು ಹೊರಟ ಇಬ್ಬರು ವ್ಯಕ್ತಿಗಳ ಬಗ್ಗೆ.

            ಈ ಇಬ್ಬರು ವ್ಯಕ್ತಿಗಳು ಅಂದರೆ ರಿಚರ್ಡ್ ಆರ್ಮ್ ಸ್ಟ್ರಾಂಗ್ ಹಾಗು ಕೇತ್ ಟ್Yನ್ಸ್ಂಡ್ ರವರದು ಒಂದೇ ಆಸೆ . ಪತ್ರಿಕಾ ಸಾಮ್ರಾಜ್ಯದ ಗಾದಿ ಏರುವುದು .ಗಾದಿ ಏರುವುದು ಆಂದ ಮೇಲೆ ಸುಲಭ ಅಲ್ಲಾ . ಆಷ್ಟೇ ಅಲ್ಲಾ ಸಿಂಹಾಸನ ಒಬ್ಬರಿಗೆ ಮಾತ್ರ ಸೀಮಿತ . ಹೇಗೆ ಈ ಇಬ್ಬರು ಅಧಿಪತಿಯಾಗಲು ಎನೆಲ್ಲಾ ಹರಸಾಹಸ ಪಡುತ್ತಾರೆ , ಒಬ್ಬರು ಇನ್ನೊಬ್ಬರ ಕಾಲು ಹೇಗೆ ಎಳೆಯುತ್ತಾರೆ,ಕೊನೆಗೆ ಯಾರು ಗೆಲ್ಲುತ್ತಾರೆ ಏಂಬುದನ್ನು ಲೇಖಕ ಇಲ್ಲಿ ಬಹು ರೋಚಕವಾಗಿ ಕಥೆ ಕಟ್ಟಿದ್ದಾನೆ. ಜೆಫ್ರಿ ಆರ್ಚರ್ ಶಕ್ತಿಯೇ ಅಂಥದ್ದು .

                  ಕಥೆಯಲ್ಲಿ ಇನ್ನೊಂದು ವಿಶಿಷ್ಟ ಏನಂದರೆ ಸಿಂಹಾಸನದ ಮೇಲೆ ಕಣ್ಣು ಇಟ್ತಿರುವ ಈ ಇಬ್ಬರ ವಯಕ್ತಿತ್ವ ಸಂಪೂರ್ಣ ಬೇರೆ ಬೇರೆಯದ್ದು. ರಿಚರ್ಡ್ ಒಬ್ಬ ಸೈನಿಕ ರಾಜನಾಗಲು ಬಯಸುವ ವ್ಯಕ್ತಿ ಆದರೆ, ಕೇಥ್ ತನ್ನ ತಂದೆ ಕಟ್ಟಿರುವ ಸಾಮ್ರಾಜ್ಯವನ್ನು ವಿಸ್ತರಿಸಲು ಹೊರಟ ಯುವರಾಜ.ರಿಚರ್ಡ್ ಒಬ್ಬ ಓದು ಬರಹ ಬರದ ಬಡತನ ಕಿತ್ತು ತಿನ್ನುತ್ತಿರುವ ರೈತನ ಮಗ.ಇನ್ನೊಂದೆಡೆ ಕೇಥ್ ಹುಟ್ತುತ್ತಲೇ ಚಿನ್ನದ ಬಟ್ಟಲಲ್ಲಿ ಹಾಲು ಕುಡಿದು ಬೆಳದಂತವನು . ರಿಚರ್ಡ್ಗೆ ಜ್ಞಾನವನ್ನು ಬದುಕೇ ಹೇಳಿ ಕೊಟ್ಟರೆ , ಕೇಥ್ ಅದನ್ನು ಲಂಡನ್ ನ ಪ್ರತಿಷ್ಟಿತ ಕಾಲೇಜುವೊಂದರಲ್ಲಿ ಕಲಿಯುತ್ತಾನೆ.

                                     ಕಥೆಯು ಶುರುವಾಗುವುದು ಈ ಇಬ್ಬರ ಹುಟ್ಟಿನಿಂದ . ಮನೆ ತುಂಬಾ ಮಕ್ಕಳಿರುವ ನಾಲ್ಕು ಗೋಡೆ ಇರುವ ಯುರೋಪ್ ನ ಪುಟ್ಟ ಮನೆಯಲ್ಲಿ ಬೆಟ್ಟದಷ್ಟು ಕನಸ್ಸು ಹೊತ್ತಿರುವ ರಿಚರ್ಡ್ ಹುಟ್ಟುತ್ತಾನೆ. ತಾನು ತಲೆಯತ್ತಿ ಬಾಳುವಂತಾಗಬೇಕು ಎಂಬ ಕನಸ್ಸು ಹೊತ್ತ ಆತ ,ಗಾಳಿ ಬಂದಾಗ ಎಣ್ಣೆ ತೂರಿಕೋ ಎಂಬಂತೆ ಅವಕಾಶ ಸಿಕ್ಕಲೆಲ್ಲಾ ವ್ಯಾಪಾರ ಜ್ಞಾನ ಕಲಿಯುತ್ತಾ ಹೋಗುತ್ತಾನೆ. ಎರಡನೇ ಮಹಾಯುದ್ಧದ ಸಂಧರ್ಭದಲ್ಲ್ರಂತೂ ಕ್ರೂರಿ ಹಿಟ್ಲರ್ ಯಹೂದಿಗಳ ಮಾರಣಹೋಮ ನೆಡೆಸಿದಾಗ ತನ್ನ ಮನೆಯವರನ್ನೆಲ್ಲಾ ಕಳೆದುಕೊಂಡು,ಜೀವ ಉಳಿಸಿಕೊಳ್ಳಲು ದೇಶದಿಂದ ದೇಶ ತನ್ನ ಹೆಸರು ಬದಲಾಯಿಸಿಕೊಂಡು ಕೊನೆಗೆ ಇಂಗ್ಲೆಂಡ್ ಗೆ ಬರುತ್ತಾನೆ.ಆಲ್ಲಿ ಹೇಗೊ ಇಂಗ್ಲಿಷ್ ಕಲಿತು ,ಎಲ್ಲರ ಮೆಚ್ಚುಗೆಗೆ ಪಾತ್ರವಾಗಿ ಹಿಟ್ಲೆರ್ ವಿರುಧ್ದ ಹೋರಾಡಲು ಸೈನ್ಯ ಸೇರುತ್ತಾನೆ.ರಣರಂಗದಲ್ಲಿ ತನ್ನ ಶೌರ್ಯ ಮೆರದು ಆಂಗ್ಲರ ಮೆಚ್ಚುಗೆಗೆ ಪಾತ್ರವಾಗುತ್ತಾನೆ . ಯುಧ್ದ ಮುಗಿದ ನಂತರ ಅಲ್ಲಿಯ ಪತ್ರಿಕಾ ಸಂಸ್ಥೆಯೊಂದನ್ನು ನೋಡಿಕೊಳ್ಳುವ ಜವಬ್ದಾರಿ ಸಿಗುತ್ತದೆ .ಆಲ್ಲಿಂದ ಶುರು ಅವನ ಕಾರುಬಾರು .

                                     ಇನ್ನೊಂದೆಡೆ ಮಹಾಯುದ್ಧ ಎಂಬುದು ಬರಿಯ ಸುದ್ಧಿ ಮಾತ್ರ ವಾಗಿರುವ ಆಸ್ಟ್ರೇಲಿಯಾದಲ್ಲಿ ಕೇಥ್ ನದ್ದು ಐಷರಾಮಿ ಬದುಕು .ಪತ್ರಿಕಾ ಲೋಕಕ್ಕೂ ಆತನಿಗೂ ಹುಟ್ಟುತ್ತಲೇ ನಂಟು.ಏಕೆಂದರೆ ಆತ ತಂದೆ ಹಲವು ಪತ್ರಿಕೆಯ ಒಡೆಯನಾಗಿರುತ್ತಾರೆ. ತಂದೆ ಸಮಯ ಸಿಕ್ಕಗಲೆಲ್ಲಾ ತನ್ನ ಜ್ಞಾನವನ್ನು ಮಗನಿಗೆ ಧಾರೆ ಎರೆಯುತ್ತಿರುತ್ತಾನೆ.ಕೇಥ್ ತನ್ನ ಕಾಲೇಜು ದಿನಗಳಲ್ಲಿ ತನ್ನ ಕಾಲೇಜಿನ ಮ್ಯ್ಯಾಗ ಜಿನ್ ಗೆ ಸಂಪಾದಕನಾಗಲು ಒಂದಿಷ್ಟು ಕಸರತ್ತು ನಡೆಸಬೇಕಾಗುತ್ತದೆ. ಆಷ್ಟೇ ಅಲ್ಲಾ oxford ಕಾಲೇಜಿನಲ್ಲಿ ಸೀಟು ಪಡೆಯಲು ತನಗಿಷ್ಟವಾಗದ ಪ್ರಾಂಶುಪಾಲರ ಹತ್ತಿರ ವ್ಯವಹಾರ ನಡೆಸಬೇಕಾಗಿ
ಬರುತ್ತದೆ.ಇದರ್ ಮಧ್ಯೆ ಪ್ರಾಂಶುಪಾಲರ ಮಗಳ ಜೊತೆ ಕ್ರಿಕೆಟ್ ಪೆವಲಿಯನ್ನಲ್ಲಿ ಕಾಮ ಕೇಳಿಯಾಟ,ಇನ್ನೊಂದು ಹುಡುಗಿಯ ಜೊತೆ ಸರಸ ,ಕುದುರೆ ಆಟದ ಹುಚ್ಚು ಹಾಗು ಕೊನೆಗೆ ಅದೇ ಪ್ರಾಂಶುಪಾಲರ ಮಗಳು ಬಸುರಿಯಾದಾಗ ಕಾಲೇಜಿನಲ್ಲಿ ನಡೆಯುವ ವಿಚಾರಣೆ ಬಂದು ಹೋಗುತ್ತದೆ. ನಂತರ oxford ಕಾಲೇಜಿನಲ್ಲಿ ಓದುವಾಗ ಆತನ ಗಮನ ಸ್ವಲ್ಪ ರಾಜಕೀಯದ ಕಡೆ ಗಮನ ಹೋದರೂ ಅದರಲ್ಲಿ ಯಶಸ್ಸು ಕಾಣದ ನಂತರ ಅದರ ಆಸೆ ಅಲ್ಲಿಯೆ ಬಿಡುತ್ತಾನೆ. ಆತ ಮರಳಿ ಮನೆಗೆ ಬರುವ ಹೊತ್ತಿಗೆ ತಂದೆ ತೀರಿ ಹೋಗಿರುತ್ತಾರೆ.ತನ್ನ ತಂದೆಯ ಆಸೆಯಂತೆ ,ತಾಯಿಯ ವಿರುದ್ಧವಾಗಿ ಪತ್ರಿಕಾ ಲೋಕಕ್ಕೆ ಕಾಲಿಡುತ್ತಾನೆ.
         ಈ ಇಬ್ಬರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುವಾಗ ಒಬ್ಬರೊನ್ನಬ್ಬರು ಮುಖಾಮುಖಿಯಾಗುತ್ತಾರೆ. ಆಗ ಕಥೆ ಇನ್ನಷ್ಟೂ ರೋಚಕತೆ ಪಡೆಯುತ್ತದೆ."everything is fair under love and war " ಎಂಬ ಸಿಧ್ಧಾಂತಕ್ಕೆ ಬಧ್ಧರಾದಂತೆ ಕಾಣುವ ಇಬ್ಬರಿಗೆ ಗೆಲುವು ಮಾತ್ರ ಮುಖ್ಯವಾಗುತ್ತಾ ಹೋಗುತ್ತದೆ. ಏದುರಾಳಿಯನ್ನು ಸೋಲಿಸಲು ಏಂತಹ ಅಪಾಯಕಾರಿ ಕೆಲಸಕ್ಕೂ ಕೈ ಹಾಕಲು ಸಿಧ್ಧರಿರುತ್ತಾರೆ.ಹೀಗೆ ಸಾಗುವಾಗ ಒಬ್ಬರು ಒಮ್ಮೆ ಗೆದ್ದರೆ ಇನ್ನೊಬರು ಇನ್ನೊಮ್ಮೆ ಗೆಲ್ಲುತ್ತಾರೆ. ಒಬ್ಬನು ಇನ್ನೊಬ್ಬನಿಗೆ ಒಂದು ಸಲ ಮಣ್ಣು ಮುಕ್ಕಿಸಿದರೆ ಇನ್ನೊಬ್ಬ ಇನ್ನೊಂದು ಸಲ ಅದರ ದುಪ್ಪಟ್ಟು ಮಣ್ಣುಮುಕ್ಕಿಸುತ್ತಾನೆ.ಓದುವವನಂತೂ ಮುಂದೆ ಎನಾಗುತ್ತದೆ ಎಂಬ ಕುತೂಹದಲ್ಲಿ ಸಿಲುಕಿಕೊಂಡಿರುತ್ತಾನೆ.ಕೊನೆಗೆ ಎನಾಗುತ್ತದೆ ಎಂದು ಇಲ್ಲಿ ಹೇಳುವುದಕ್ಕಿಂತ ನೀವು ಓದಿದರೆ ಚೆನ್ನ.

                      ಮೊದಮೊದಲು ಮುಖ್ಯಪಾತ್ರಗಳ ಪೂರ್ವಾಪರ ಅಂದರೆ ಬಾಲ್ಯ,ಯೌವ್ವನ ಓದುವಾಗ ಕೆಲವರಿಗೆ ಬೋರಾಗಬಹುದು ಅಥವಾ ಅನಾವಶ್ಯಕ ಅನ್ನಿಸಬಹುದು. ಆದರೆ ಅದು ಜೆಫ್ರಿಯ ಶೈಲಿ. ಈ ಕಥೆಯಲ್ಲಿ ಇಬ್ಬರು ಮುಖ್ಯ ಪಾತ್ರದ ಜೀವನ ಶೈಲಿಯ ಮೇಲೆ ಪೂರ್ವಾಪರ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಕಥೆ ಓದುವಾಗ ಗೊತ್ತಾಗುತ್ತದೆ. ಬಾಳಿನಲ್ಲಿ ಹಿಂದೆ ಮಾಡಿದ ಸಣ್ಣ ಸಣ್ಣ ತಪ್ಪುಗಳು ಹಾಗು ಅದರಿಂದ ಆದ ಅನುಭವ ಮುಂದೆ ವರವಾಗಿ ಪರಿಣಮಿಸುವ ರೀತಿ ಅದ್ಭ್ಹುತ. ಗೆಲ್ಲಲು ತನ್ನ ಗುರುತನ್ನೇ ಬದಲಿಸಿಕೊಳ್ಳುವ ರಿಚರ್ಡ್ ಹಾಗು ಬೇರೆಯವರ ಮಾತಿಗೆ ಬೆಲೆಕೊಡದೆ ತನಗೆ ಸರಿ ಅನ್ನಿಸಿದ್ದನ್ನು ಮಾಡೂವ ಕೇಥ್ ಇವರಿಬ್ಬರ ಪಾತ್ರವನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾನೆ.

                      ನಿಜವಾಗಿಯೂ ಒಂದು ಒಳ್ಳೆಯ ಪುಸ್ತಕಕ್ಕೆ ತಲೆ ಕೆಡಿಸಿಕೊಳ್ಳುತ್ತಿದ್ದರೆ ಈ ಪುಸ್ತಕವನ್ನು ಓದಿ.

























ಶುಕ್ರವಾರ, ಜುಲೈ 26, 2013

ಒಂದಿಷ್ಟು ಕವನಗಳು



SORRY

ಮುನಿಸಿಕೊಂಡ

ನನ್ನವಳನ್ನು ತಣಿಸಲು ,

ಸಾಲದುಕೇಳಿದರೆ

ಬರೀ sorry ,

ತಂದುಕೊಡಲೇಬೇಕು

ಮಲ್ಲಿಗೆ ,ಮೈಸೂರ್ ಪಾಕ್

ಜೊತೆಗೆ ಒಂದು

ಸಿಲ್ಕ್ ಸ್ಯಾರೀ (saree).



ಮೋಡಿ


ನಿನ್ನ ಚೆಂದುಟಿಯ

ಮೇಲಿನ ಕಪ್ಪುಚುಕ್ಕಿ

ನನನ್ನು ಹುಚ್ಚನಂತೆ ಮಾಡಿ ,

ಗಹಿಗಹಿಸಿ ನಗುತಿದೆ

ನನ್ನ ಮೋಡಿ

ಮಾಡಲಾಗದ

ಬಾನಂಗಳದ ಸಹಸ್ರಾರು

ಚುಕ್ಕಿಗಳ ನೋಡಿ.


ಅಳಿಸಿರುವೆ ಹೆಸರನ್ನೇ

ದಂಡೆಯ ಮುದ್ದಾಡಲು

ದೌಡಾಯಿಸುವ ಅಲೆಗಳು

ಅಣುಕಿಸುತಿವೆ ನನ್ನ

ಏಕಾಂತವನ್ನೇ,

ಗೆಳಯ ಗೆಳತಿ

ಇಬ್ಬರೂ ಕೂಡಿ

ಮಾಡಿಟ್ಟ ಮರಳುಗೂಡುಗಳು

ಕೇಳುತಿವೆ

''ಎಲ್ಲಿ ನಿನ್ನ ಮನದನ್ನೆ ",

ಪಡುವಣ ಸೂರ್ಯ

ಸಾರಿ ಸಾರಿ ಕೇಳುತಿಹನು

"ಕೆಂಪಗಿದೆಯೇ ನನ್ನಷ್ಟೇ

ನಿನ್ನಾಕೆಯ ಕೆನ್ನೆ"

ಬೀಸುಗಾಳಿ ಜೊತೆ

ಗುದ್ದಾಡಿ ಗೆದ್ದು

ಸೋಲುತಿಹ

ನ್Yಕೆಗಳು ನೆನೆಪಿಸುತಿವೆ

ನಮ್ಮಿಬ್ಬರ ಸರಸವಿರಸವನ್ನೆ .

ಅವುಗಳಿಗೆ ಅರಿವಿಲ್ಲಾ

ಅದಾಗಲೆ ಅಲೆಗಳು

ಮರಳ ಮೇಲಿನ ಹೆಸರು

ಆಳಿಸುವಂತೆ ಅಳಿಸಿ

ಹಾಕಿರುವೆ ನೀನು ನಿನ್ನ

ಹೃದಯದಿಂದ ನನ್ನ ಹೆಸರನ್ನೇ





























ಸೋಮವಾರ, ಜೂನ್ 17, 2013

ನಮ್ಮ so called ಕನ್ನಡ ನ್ಯೂಸ್ ಚಾನೆಲ್ಗಳು :2



ಸುದ್ಧಿ ವಾಹಿನಿಗಳು ಅತ್ಯಂತ ಪ್ರಭಾವೀ ಮಾಧ್ಯಮಗಳು. ಆದ್ದರಿಂದ ಬಿತ್ತರಿಸಲಾಗುತ್ತಿರುವ ಸುದ್ಧಿಗಳ ಬಗ್ಗೆ ಹಾಗು ಸುದ್ದಿಯನ್ನು ಹೇಳುವಾಗ ಯಾವ ದೃಷ್ಟಿ ಕೋನದಲ್ಲಿ ಹೇಳುತ್ತಾರೆ ,ಅದನ್ನು ಪುಷ್ಟಿಕರಿಸಲು ಏನೇನು ಉಪಯೋಗಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ .

ನಮ್ಮ ಕನ್ನಡ ನ್ಯೂಸ್ ಚಾನೆಲ್ಗಳು ಒಂದು ಸುದ್ದಿಯನ್ನು ಅಥವಾ ಘಟನೆಯನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ. ನಟಿಯೊಬ್ಬಳಿಗೆ ನಾಯಿ ಕಚ್ಚಿದೆ .ನಮ್ಮ ಚಾನೆಲ್ ನವರಿಗೆ ಇದೇ ದೊಡ್ದ ವಿಷಯ.

ಸುದ್ಧಿ ಓದುತ್ತಿರುವರು:

ಈದೀಗ ಬಂದ ಸುದ್ದಿ, ಹೆಸರಾಂತ ನಟಿಯೊಬ್ಬರಿಗೆ ಕಾಮಿನಿಯವರಿಗೆ ನಾಯಿ ಕಚ್ಚಿರುವ ವರದಿಯಾಗಿದೆ."ಓಡಿ ಹೋದ ತಂಗಿ" ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟಿಗೆ ಬೀದಿ ನಾಯಿ ಕಚ್ಚಿದೆ.ನಮಗೆ ವರದಿ ಬಂದ ಪ್ರಕಾರ ಕಪ್ಪು ವರ್ಣದ ಬೀದಿ ನಾಯಿಯೊಂದು ಕಾಮಿನಿಯವರ ಮಂಡಿಯ ಮೇಲಿನ ಭಾಗಕ್ಕೆ ಕಚ್ಚಿದೆ . ಕಾಮಿನಿಯವರನ್ನು ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗೆ ನಮ್ಮ ಸ್ಥಳೀಯ ವರದಿಗಾರ ತಿಪೇಶ್ ರವರನ್ನು ಮಾತನಾಡಿಸೋಣ.ತಿಪ್ಪೇಶ್ ರವರೇ ಹೇಳಿ ಅಲ್ಲಿನ ಪರಿಸ್ಥಿತಿ ಹೇಗಿದೆ.

ತಿಪ್ಪೇಶ್:

ಓಡಿ ಹೋದ ತಂಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಕಾಮಿನಿಯವರಿಗೆ ಕಚ್ಚ್ಚಿದೆ. ಕೂಡಲೇ ಅವ್ರನ್ನು ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಲಾಗಿದೆ.

ಸುದ್ಧಿ ಓದುತ್ತಿರುವರು:

ಆ ನಾಯಿ ಯಾವ ವರ್ಣದ್ದು ಮತ್ತು ಎಲ್ಲಿ ಕಚ್ಚಲಾಗಿದೆ ಅಂತ ಹೇಳಬಹುದಾ?

ತಿಪ್ಪೇಶ್: ಆ ನಾಯಿ ಕಪ್ಪು ಬಣ್ಣದ್ದೂ ಹಾಗು ಅದು ಅವರ ಮಂಡಿಯ ಮೇಲ್ಭಾಗಕ್ಕೆ ಕಚ್ಚಲಾಗಿದೆ .

ಸುದ್ಧಿ ಓದುತ್ತಿರುವರು: ಹಲೋ ಇದೀಗ ಆಸ್ಪತ್ರೆ ಯಲ್ಲಿ ಪರಿಸ್ಥಿತಿ ಹೇಗಿದೆ? ಹಲೋ ಹಲೋ .ಎಲ್ಲಿದೀರಾ . ಕಾರಣಾಂತರಗಳಿಂದ ತಿಪ್ಪೇಶ ರವರ್ ಜೊತೆ ಸಂಪರ್ಕ ಸಾಧ್ಯವಾಗುತ್ತಿಲ್ಲಾ....

ಇಲ್ಲಿ ಕೆಲವು ಗಮನಿಸಬೇಕಾದ ಅಂಶಗಳು ಇವೆ. ಮೊದಲನೆಯದಾಗಿ ಅವರು ಆರಿಸಿಕೊಂಡಿರುವ ವಿಷಯ.ಓಕೆ ನಾನಿಲ್ಲಿ ಕೊಟ್ಟಿರುವ ಉದಾಹರಣೆ ನಿಮಗೇ ಬಾಲಿಶ ಅನ್ನಿಸಬಹುದು. ಆದರೆ ಇಂತಹ ತೀರಾ ಬಾಲಿಶ ಅನ್ನುವಂತ ವಿಷಯಗಳು ನಮ್ಮಲ್ಲಿ ಪ್ರಸಾರವಾಗುತ್ತದೆ ಅನ್ನುವುದಂತೂ ನಿಜ . ಸಾಮನ್ಯವಾಗಿ ಸ್ಥಳೀಯ ವರದಿಗಾರರನ್ನು ಫೋನ್ ಅಲ್ಲಿ ಮಾತನಾಡಿಸಿ , ಅಲ್ಲಿ ನಡೆಯುತ್ತಿರುವುದು ಏನು ಎಂದು ಕೇಳುವುದು ಘಟನೆ ನಡೆಯುತ್ತಿರುವ ಜಾಗದ ಬಗ್ಗೆ ಪೂರ್ತಿ ಮಾಹಿತಿ ಸಿಗದಾಗ. ಆದರೆ ಮೇಲೆ ನಾವು ನೋಡಿದಂತೆ ಸ್ಥಳೀಯ ವರದಿಗಾರ ಹೊಸದನ್ನು ಏನು ಹೇಳುವುದಿಲ್ಲ. ಹಾಗೆಯೇ ನಮ್ಮ ಚಾನೆಲ್ ನಲ್ಲಿ ಕೂಡ ಸುಮ್ಮನೆ ಸ್ಥಳೀಯ ವರದಿಗಾರರನ್ನು ಮಾತು ಮಾತಿಗೂ ಫೋನ್ ನಲ್ಲಿ ಮಾತನಾಡಿಸಿ ಕೊನೆಗೆ ಹೇಳಿದನ್ನೆ ಹೇಳುವುದು ನಿಜವಾಗಲೂ ನಗು ತರಿಸುತ್ತದೆ. ಚಾನೆಲ್ ಗಳು ಈ ವಿಚಾರದಲ್ಲಿ ಸ್ವಲ್ಪ ಗಮನಿಸಬೇಕು.

ಇನ್ನೂ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳು ಜ್ಯೋತಿಷ್ಯದ ಬ್ರಾಂಡ್ ಅಂಬಾಸಡರ್ ಗಳಾಗಿವಬಿಟ್ಟಿವೆ. ಜ್ಯೋತಿಷ್ಯ ನಮ್ಮ ಭಾರತ ಸಂಸ್ಕೃತಿಯ ಭಾಗ. ಅದನ್ನು ಪ್ರ್ರೋತ್ಸಾಹಿಸುವುದು ಒಳ್ಳೆಯದೇ. ಆದರೆ ಧೂದ್ ಪೇಡ ಸಿಹಿ ಅಂತ ಅದನ್ನೇ ಜಾಸ್ತಿ ತಿಂದರೆ ನಾಳೆ ಹೊಟ್ಟೆ ಕೆಡೋದು ಗ್ಯಾರಂಟಿ.ಬೆಳಗ್ಗೆ ಒಂದು ಸಲ ಜ್ಯೋತಿಷ್ಯ ಸರಿ ಆದರೆ ದಿನವಿಡೀ ಉಂಡಿದ್ದು ಉರಚಿದಕ್ಕೆ ಅದನ್ನೇ ಅವಲ್ಂಭಿಸಿದರೆ ಅದನ್ನು ನಂಬಿಕೆ ಅನ್ನುವುದಿಲ್ಲಾ ಅದನ್ನು ಮೂಢ ನಂಬಿಕೆ ಅನ್ನುತ್ತಾರೆ. ಒಮ್ಮೆ ಚಾನೆಲ್ನಲ್ಲಿ ನೋಡಿದ್ದು ನೆನೆಪು. ಯಾವ ರಾಜಕಾರಣಿಗಳು ಯಾವ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಅನ್ನುವುದಕ್ಕೆ ಸರ್ವೇ ಅನ್ನು ಅವಲಂಭಿಸುವುದು ಬಿಟ್ಟು ರಾಜಕಾರಣಿಗಳ ಕುಂಡಲಿಯನ್ನು ನೋಡಿ ವರದಿ ಕೊಡುತ್ತಿದ್ದರು.ಇನ್ನೂ ಈ ಚಾನೆಲ್ ಗಳಲ್ಲಿ ಬರುವ ಜ್ಯೋತಿಷಿಗಳಾದರು ಎಂಥವರು. ಜನರಲ್ಲಿ ಬರೀ ಭಯ ಹುಟ್ಟಿಸುವಂತರು. ಪ್ರಳಯ ಆಗುತ್ತದೆ....ಕಲ್ಲು ಕುದುರೆಗೆ ಜೀವ ಬರುತ್ತದೆ ಎಂದು ನಂಬಿಸುವವರು.

ಒಂದು ಚಾನೆಲ್ ನಲ್ಲಿ ,ಸ್ವಲ್ಪ ದಿನಗಳ ಹಿಂದೆ ಒಬ್ಬ ಸ್ವಾಮೀಜಿಯ ವಿರುದ್ಧ ಎತ್ತಿಕಟ್ಟಲು ಭಾರೀ ಮಾತನಾಡುವ ಇನ್ನೊಬ್ಬ ಸ್ವಾಮೀಜಿಯನ್ನು ಎತ್ತಿ ಹಿಡಿಯಲಾಯಿತು. ಎತ್ತಿ ಹಿಡಿದ ಸ್ವಾಮಿಜಿಯನ್ನಂತೂ ಹೀರೋ ಥರಹ ಸಣ್ಣ ಪುಟ್ಟ ವಿಚಾರಗಳಿಗೂ ತರಲಾಯಿತು.ಕೊನೆಗೆ ಆ ಸ್ವಾಮೀಜಿಯಾ ಕಳ್ಳನೆಂದು ಗೊತ್ತದಾಗ ಆ ಚಾನೆಲ್ ಮತ್ತದೇ ಸ್ವಾಮೀಜಿಯನ್ನು ಕರೆದು ಸಂದರ್ಶನ ಮಾಡಿ ಅವನ ಕಾವಿ ಬಿಚ್ಚಿಸಿ ತನ್ನ ಮರ್ಯಾದೆ ಉಳಿಸಿಕೊಂಡಿತು. ಒಬ್ಬರನ್ನು ಎತ್ತಿ ಹಿಡಿಯುವ ಮುಂಚೆ ಅವರ ಬಗ್ಗೆ ಸರಿಯಾಗಿ ತಿಳಿದು ಕೊಳ್ಳದ ಚಾನೆಲ್ ಏಷ್ಟರ ಮಟ್ಟಿಗೆ ನಮಗೆ ನ್ಯಾಯ ಒದಗಿಸಬಹುದು.

ಇನ್ನೂ ಕ್ರೈಂ ತೋರಿಸುವ ಚಾನೆಲ್ ಪ್ರೋಗ್ರಾಮಗಳಂತೂ ನಿಜವಾಗಿಯೂ ಭಯ ಹುಟ್ಟಿಸುವಂತದ್ದು. ಯಾರದ್ದಾದರೂ ಕೊಲೆಯಾದರೆ ಅಥವಾ ಅತ್ಯಾಚಾರ ಆದರೆ ನಮ್ಮ ಚಾನೆಲ್ ಗಳಿಗೆ ಅದು ರೋಚಕ ಕಥೆ. ಅವರು ಆ ಆ ಹೀನಾಯ ಕೃತ್ಯ ಗಳನ್ನು ನಿರೂಪಿಸುವ ಶೈಲಿಯಂತೂ ವಿಚಿತ್ರ. ಕೊಲೆಯ ಹಿಂದಿನ ಸಂಚನ್ನು ರೋಚಕ ಎಂದು, ಅತ್ಯಾಚಾರ ನಡೆದ ಕುತೂಹಲ ಕಥೆಯಂದು ಬಿಂಬಿಸುತ್ತವೆ. ಆ ಕಾರ್ಯಕ್ರಮ ನೋಡಿದವನು ಒಂದು ಹೆದರಿ ಮುದುರಿ ಕೊಳ್ಳಬೇಕು, ಇಲ್ಲದಿದ್ದಲ್ಲಿ ವಾಂತಿ ಮಾಡ್ಬೇಕು . ತಲೆ ಕೆಟ್ಟ ಕೆಲವರು ತಪ್ಪು ಎಲ್ಲೆಲ್ಲಿ ಮಾಡ್ಬಾರದು ಏಂದು ಈ ಕಾರ್ಯಕ್ರಮಗಳ ಮೂಲಕ ತಿಳಿದುಕೊಂಡೂ ಇನ್ನೊಂದು ಕ್ರೈಂ ಮಾಡಿರುವ ಇತಿಹಾಸವೂ ಇದೆ.

ಕೊನೆಯದಾಗಿ ಹೇಳುವುದೇನೆಂದರೆ ಬರೀ ಟಿ.ಆರ್. ಪಿ ಹಿಂದೆ ನ್ಯೂಸ್ ಚಾನೆಲ್ಗಳು ಬೀಳಬಾರದು .ಜ಼ನರಿಗೆ ಭಯ ಹುಟ್ಟಿಸುವಂತ,ಕ್ರೈಂ ಗಳನ್ನು ವೈಭೀಕರಿಸುವಂತ, ತಲೆ ಬುಡ ಇಲ್ಲದ ಮೂಢ ನಂಬಿಕೆಯನ್ನು ಪ್ರೋತ್ಸಾಹಿಸುವಂತಹ ,ಸಾಕ್ಷ್ಯ ಇಲ್ಲದ ಸುದ್ದಿಗಳನ್ನು ತೋರಿಸದೆ ಒಳ್ಳೆಯ ಸಕರಾತ್ಮಕ ನೆಲಗಟ್ಟಿನಲ್ಲಿ ಸುದ್ದಿಯನ್ನು ಜನರಿಗೆ ಮುಟ್ಟಿಸಬೇಕು.















ಮಂಗಳವಾರ, ಜೂನ್ 11, 2013

ನಮ್ಮ SO CALLED ಕನ್ನಡ NEWS CHANNEL ಗಳು .


                       ಅದು ಇನ್ಫೋಸಿಸ್ ಟ್ರೈನಿಂಗ್ ಗೆ ಎಂದು ಮೈಸೂರಿನಲ್ಲಿದ್ದ ಸಮಯ. ನಮ್ಮ ಕ್ಯಾಂಪಸ್ನಲ್ಲಿ ಜೊತೆ ಭಾರತದ ಮೂಲೆ ಮೂಲೆಯಿಂದ ಬಂದ ಅನೇಕ ಮಿತ್ರರಿದ್ದರು .ಅದರಲ್ಲಿ ಆಂಧ್ರ ಪ್ರದೇಶದ ಒಂದಿಷ್ಟು ಹುಡುಗರು ನನ್ನ ಜೊತೆ ಟ್ರೈನಿಂಗ್ ಅಟೆಂಡ್ ಮಾಡುತ್ತಿದ್ದರು. ಈ ಆಂಧ್ರದ ಜನರು ಸಾಮನ್ಯವಾಗಿ ಹೆಚ್ಚಾಗಿ ಇಷ್ಟಪಡುವುದು ಸಿನೆಮಾ ಹಾಗೂ ರಾಜಕೀಯ. ಒಂದಿಷ್ಟು ಆಂಧ್ರದ ಹುಡುಗರು ಸೇರಿದರೆ ಹೆಚ್ಚಾಗಿ ಮಾತಾನಾಡುವ ವಿಷಯ ಆಂದರೆ ಸಿನೆಮಾ. ಇದನ್ನು ಯಾಕೆ ಹೇಳುತ್ತಿದ್ದೀನಿ ಆಂದರೆ ನಾನು ಮೈಸೂರಿನಲ್ಲಿದ್ದಾಗ ಒಬ್ಬ ತೆಲಗು ಚಿತ್ರರಂಗದ ನಟನೊಬ್ಬನ ಮದುವೆ ನಡೆಯುತಿತ್ತು. ನನ್ನ ಆಂಧ್ರದ ಗೆಳೆಯನೊಬ್ಬ ಆಂಧ್ರದಲ್ಲಿ ಇದ್ದರೆ ಯಾವುದಾದರೂ ಲೋಕಲ್ ತೆಲಗು ಚಾನೆಲ್ನಲ್ಲಿ ನೋಡಬಹುದಿತ್ತು ಆದರೆ ಮೈಸೂರಿನಲ್ಲಿ ನೋಡಲಾಗುವುದಿಲ್ಲಾ ಏಂದು ತನ್ನ ಗೋಳು ಹೊಯ್ದುಕೊಳ್ಳುತ್ತಿದ್ದ.ಆದರೆ ಮಾರನೇ ದಿನ ಬಂದು ಅವನೊಂದು ಮಾತು ಹೇಳಿದಾಗ ನನಗೆ ಆದ ಮುಜುಗರ ಅಷ್ಟಿಷ್ಟಲ್ಲಾ.ಆವನು ತನ್ನ ತೆಲಗು ಹೀರೋ ಮದುವೆಯನ್ನು ನೋಡಿದ್ದ. ಯಾವುದರಲ್ಲಿ ಗೊತ್ತಾ.ಕರ್ನಾಟಕದಲ್ಲಿ ಪ್ರಸಾರವಾಗುವ ತೆಲಗು ಚಾನೆಲ್ಸ್ ನಲ್ಲಿ ಅಲ್ಲಾ.ಯಾಕಂದರೆ ಯಾವುದೇ ತೆಲಗು ಚಾನೆಲ್ಸ್ ನಲ್ಲಿ ಪ್ರಸಾರ ಮಾಡಿರಲಿಲ್ಲಽವನು ನೋಡಿದ್ದು ನಮ್ಮ ಕನ್ನಡ ನ್ಯೂಸ್ ಚಾನೆಲ್ ನಲ್ಲಿ.ಅವನು ನಗುತ್ತಾ "ನಿಮ್ಮ ಕನ್ನಡ ಚಾನೆಲ್ನಲ್ಲಿ ಯಾಕೆ ನಮ್ಮ ಸ್ಟಾರ್ ದು ಮದುವೆ ಹಾಕಿದ್ದ್ರು." ಹೇಳಿದ್ದ. ಅದರಲ್ಲಿ ತನ್ನ ಭಾಷೆಯ ಚಿತ್ರದ ಹೀರೊ ಕನ್ನಡ ಚಾನೆಲ್ನಲ್ಲಿ ಬಂತು ಎಂಬ ಖುಷಿಯಿತ್ತು. ಆದರೆ ನನಗೆ ಅದರಲ್ಲಿ ನಿಮ್ಮ ಕನ್ನಡ ನ್ಯೂಸ್ ಚಾನೆಲ್ನಲ್ಲಿ ನಿಮ್ಮವರ ವಿಷಯಕ್ಕಿಂತ ನಮ್ಮವರ ವಿಷಯಕ್ಕೇ ಪ್ರ್ರಾಮುಖ್ಯತೆ ಕೊಟ್ಟೀದ್ದೀರಿಲ್ಲಾ ಏಂಬ ಗೇಲಿ ಕಾಣುತಿತ್ತು.

               ನಾನು ಚೆನ್ನೈನಲ್ಲಿದ್ದಾಗ ಅಲ್ಲಿಯ ಕೇಬಲ್ನಲ್ಲಿ ಕನ್ನಡ ಚಾನೆಲ್ ಗಳು ಬರುವುದೇ ಹೆಚ್ಚಿನ ಮಾತಾಗಿತ್ತು.ಇನ್ನೂ ಅಲ್ಲಿಯ ನ್ಯೂಸ್ ಚಾನೆಲ್ಗಳಲ್ಲಿ ನಮ್ಮವರ ಸುದ್ಧಿ ಕೇಳಲೇಬೇಡಿ. ಅಲ್ಲಿಯವರಿಗೆ ನಮ್ಮ ಒಬ್ಬ ನಟನ ಹೆಸರು ಗೊತ್ತಿಲ್ಲಾ. ಕಾರಣ ಅವರಿಗೆ ನಮ್ಮವರ ಸುದ್ಧಿಯೇ ಸಿಗುವುದಿಲ್ಲಾ. ಆದರೇ ನಮ್ಮ ಕನ್ನಡದವರಿಗೇ ಕೇಳಿ ನೋಡಿ,ಯಾವ ಭಾಷೆಯ ಚಲನಚಿತ್ರರಂಗದ ಬಗ್ಗೆ ಬೇಕಾದರು ಹೇಳುತ್ತಾರೆ.ನಮ್ಮ ಕನ್ನಡ್ ನ್ಯೂಸ್ ಚಾನೆಲ್ ಗಳಂತೂ ತಮಿಳು ,ತೆಲಗು ಒಂದು ಚಲನ್ ಚಿತ್ರ ರಿಲೀಸ್ ಆಗುವ ಹಾಗಿಲ್ಲಾ,ಬೇರೆ ಭಾಷೆಯಾ ನಟನೊಬ್ಬ ಹೂಸು ಬಿಡುವ ಹಾಗಿಲ್ಲಾ ಅದನ್ನೂ ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡುತ್ತಾರೆ.

           ನಮ್ಮಲ್ಲಿರುವ ಕನ್ನಡ ನ್ಯೂಸ್ ಚಾನೆಲ್ ಗಳು ಮೂಲ ಕನ್ನಡ ಅಲ್ಲಾ. ಆದ್ದರಿಂದ ಅವುಗಳು ಇಂತಹ ಕೆಲಸ ಮಾಡುತ್ತವೆ ಅಂದರೆ ಹ್Yದು ಆನ್ನಬಹುದು.ಆದರೆ ಕನ್ನಡ ಮೂಲದಿಂದ ಬಂದ ಚಾನೆಲ್ ಕೊಲಾವೆರಿ ಡಿಯ ವಿಶೇಷ ಕಾರ್ಯಕ್ರಮವೊಂದು ಬೆಂಗಳೂರುನಲ್ಲಿ ನಡೆದಾಗ ಅದರ ಪ್ರಾಯೋಜಕತ್ವ ವಹಿಸಿದ್ದು ಮುಜುಗರದ ಸಂಗತಿ. ನನ್ನ ವಾದ ಇಷ್ಟೇ ನಮ್ಮ ಬಗ್ಗೆ ಅದೂ ಬಿಡಿ ನಾವು   ಅಸ್ಥಿತ್ವದಲ್ಲಿಯೇ      ಇಲ್ಲಾ ಎಂಬತೇ ಬದುಕುತ್ತಿರುವ ಬೇರೆಯವರಿಗಿಲ್ಲದ ಕಾಳಜಿ ನಮಗ್ಯಾಕೆ? ಕನ್ನಡ ಹಾಗು ಕನ್ನಡ ಕಲೆಯನ್ನು ಬೆಳೆಸಬೇಕಾಗಿರುವ ಕನ್ನಡ ಚಾನೆಲ್ಗಳಿಗೆ ಬೇರೆ ಭಾಷೆಯ ವ್ಯಾಮೋಹ ಯಾಕೆ?

                       ಇನ್ನೂ ನಮ್ಮ ನ್ಯೂಸ್ ಚಾನೆಲ್ ಗಳಲ್ಲಿ ಬರುವ ಕಾರ್ಯಕ್ರಮಗಳ ಕಡೆ ಕಣ್ಣು ಹಾಯಿಸೋಣ. ಒಬ್ಬ ನಟ ಅಥವಾ ನಟಿ ಎರಡನೇ ಮದುವೆ ಆಗುವ ಹಾಗಿಲ್ಲಾ ಅದನ್ನು ರಾಷ್ಟ್ರೀಯ ಸುದ್ದಿಯ ಥರಹ ಅದನ್ನೇ ಬೆಳಗ್ಗೆಯಿಂದ ರಾತ್ರಿ ತನಕ ತೋರಿಸುತ್ತಾರೆ.ಇನ್ನೂ ಸ್ವಾಮೀಜಿಯ ಯವುದಾದರೂ ರಾಸಲೀಲೆ ವೀಡಿಯೋ ಸಿಕ್ಕರಂತೂ ನಮಗೇ ದಿನವಿಡೀ ಅದರ ಬಿಟ್ಟಿ ದರ್ಶನ. ಇನ್ನೂ ಯಾರಾದ್ರೂ ಗಂಡ ಇನ್ನೊಬ್ಬ ಹೆಂಡತಿಯ ಜೊತೆ ಮಲಗಿದರೆ ಅದೇ ಬಿಸಿ ಸುದ್ದಿ. ಇಂತಹ ಯಾರದೋ ವ್ಯಯಕ್ತಿಕ ವಿಷಯಕ್ಕೇ ಲೈವ್ ರಿಪೋರ್ಟರ್, ಕೊನೆಗೆ ಅದಕ್ಕೇ ಪಾನೆಲ್ ಡಿಸ್ಕಶನ್, ಯವುದಾದರೂ ಹಸಿಬಿಸಿ ವಿಡಿಯೋ ಇದ್ದರಂತೂ ಅದನ್ನೇ ಜೂಮ್ ಮಾಡಿ ಮಾಡಿ ತೋರಿಸುತ್ತಾರೆ. ಕೆಲವು ಚಾನೆಲ್ ಗಳಂತೂ ವಾಕರಿಕೆ ಬಿಡುವ ತನಕ ಬಿಡುವುದಿಲ್ಲಾ. ಅವರ ಸ್ಟುಡಿಯೋ ದಲ್ಲಿ   ನ್ಯಾಯಾಲಯವನ್ನೇ ಸೃಷ್ಟಿಸಿ ಕೊಂಡುಬಿಡುತ್ತಾರೆ. ನನಗೂ ಇನ್ನು ನೆನಪಿದೆ ಕರೀನಾ ಕಪೂರ್ ಮದುವೆಯಾದಾಗ ,ಅವಳು ಇಸ್ಲಾಂ ಗೆ ಮತಾಂತರವಾಗುತ್ತಿದ್ದಾಳೆ ಏಂಬ ವಿಷಯವನ್ನು ಹಿಡಿದುಕೊಂಡು "ಕರೀನಾ ಇದು ಸರೀನಾ " ಎಂಬ ಚರ್ಚಾ ಕಾರ್ಯಕ್ರಮ ಪ್ರಸಾರ ಮಾಡಿತ್ತು.

                  ನನ್ನ ಪ್ರಶ್ನೆ ಇಲ್ಲಿ ಯಾರದೋ ವೈಯಕ್ತಿಕ ಅದು ಒಂದು ಆರೋಗ್ಯಕರವಲ್ಲದ ವಿಷಯವನ್ನು ದಿನವಿಡೀ ತೋರಿಸುವ ಅಗತ್ಯವಾದರೂ ಏನು.ಕಪಟ ಸ್ವಾಮೀಜಿ ಅಥವಾ ಕಪಟ ರಾಜಕಾರಣಿಗಳು ಬಣ್ಣ ಬಯಲು ಮಾಡುತ್ತಿದ್ದೇವೆ ಏಂದು ಚಾನೆಲ್ ಗಳು ವಾದ ಮಾಡ್ಬಹುದು. ಆದರೆ ಸಿನೆಮಾ ನಟ ನಟಿಯರ ,ಯಾವುದೋ ಗಂಡ ಹೆಂಡಿರ ಕಳ್ಳ ಸಂಭಂದ ದಿಂದ ನಮಗಾಗುವ ಪ್ರಯೋಜನವಾದರೂ ಏನು?ಇನ್ನೂ ಕಪಟ ವ್ಯಕ್ತಿಗಳ ಬಣ್ಣ ಬಯಲು ಮಾಡುವುದು ಒಳ್ಳೆಯದೇ. ಆದರೆ ಅದಕ್ಕೇ ಅವರು ಹಾಸಿಗೆ ಮಾಡಿದ ಹೊಲಸನ್ನು ದಿನವಿಡೀ ತೋರಿಸುವ ಅಗತ್ಯವಿಲ್ಲಾ. ಅಪ್ಪ ಅಮ್ಮನಿಗೆ ಮಕ್ಕಳು ನಿಮ್ಮ ನ್ಯೂಸ್ ನೋಡಿ " ಅಮ್ಮ , ಮೈಸೂರು ಮಲ್ಲಿಗೆ ಎಮ್.ಎಮ್ .ಸ್ ಸ್ಕ್ಯಾಂಡಲ್ ಅಂದರೆ ಏನು "ಅಂತ ಕೇಳುವ ಹಾಗೆ ಆಗಬಾರದು. ಯಾರಾದ್ದಾದರೂ ವ್ಯಕ್ತಿಯ ವಿಷಯ ತೋರಿಸಿದರೆ ನೋಡುವವರಲ್ಲಿ ಸಕರಾತ್ಮಕ ಭಾವನೆಗಳು ಮೂಡಬೇಕು. ಆಂತಹ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಬೇಕು.


                              ಇನ್ನೂ ಇದೆ ........ 
English summary: That was during my Infosys Training.One of my friend from Andhra was sad as he couldn't watch his Superstar's marriage as the telegu channel which was airing was not available in Karnataka.But next day he was happy and when I asked the reason,the answer he gave was really sad one.He saw his Telegu superstar's marriage live in one of the Kannada channel.He asked me the reason Kannada channel airing the Telegu superstar's marriage to which I remained silent.When I was In chennai,we were not even getting Kannada channels.But in Karnataka Kannada news channel air all programs related to tamil and telegu movies.Many of the Kannada news channel are not banglore based .So this may the reason  for them to air these type of programs .But few days ago , pakka Kannada news channel aired a Special program and even hosted the program on why dis Kolaveri di.The quality of the programs these kannada channels show is very low.Recently one channel had panel discussion about Kareena's marriage.Most of the channels openly show the MMs and sex scenes just blurring some part.Whole day the same news will be there.News channel should stop worrying about TRP and should air good quality programs.
.

ಶನಿವಾರ, ಜೂನ್ 8, 2013

ನಾವೆಲ್ಲಾ ಕುರುಡರು ... ಇಲ್ಲಿದೇ ಸಾಕ್ಷಿ ...


             ಏನಿದು? ಎನಾದರೂ ಬರೆಯಬೇಕು ಅಂತ ಎನೇನೋ ಬರೆದು ನಮ್ಮ ತಲೆ ಕೆಡಿಸುತ್ತಿದ್ದಾನೆ ಅಂತ ಮನಸಿನಲ್ಲಿಯೇ ಅಂದುಕೊಳ್ಳಬೇಡಿ..ಹಾಗೇನು ಇಲ್ಲಾ. ನಾವು ವಾದ ಮಾಡೋಕೆ ನಿಂತರೇ ಮುಕ್ತ ಮುಕ್ತ ಧಾರವಾಹಿ ಸಿ.ಎಸ್.ಪಿ ಇದ್ದ ಹಾಗೆ .ಒಮ್ಮೆ ಇದನ್ನು ಓದಿ ನೋಡಿ.

                ಒಮ್ಮೆ ಅಕ್ಬರ್ ಆಸ್ಥಾನದಲ್ಲಿ ಯಾರೋ ಒಬ್ಬಾ ಮೇಧಾವಿಯೊಬ್ಬ "ನಾವೆಲ್ಲಾ ಕುರುಡರು ,ಈ ಆಸ್ಥಾನದಲ್ಲಿ ಇರುವ ಒಬ್ಬ ಸಣ್ಣ ಸೈನಿಕನಿಂದ ಹಿಡಿದು ರಾಜನಿಂದ ಎಲ್ಲರು ಕುರುಡರು ,ಕಣ್ಣಿದ್ದೂ ಕುರುಡರು. ಇದನ್ನು ನಿರೂಪಿಸುವಿರಾ ?" ಎಂದು ಸವಾಲು ಹಾಕಿದನು . ಇದನ್ನು ಕೇಳಿದ ಅಕ್ಬರ್ ಮೇಧಾವಿಗೆ ತಲೆ ಕೆಟ್ಟಿದೆ,ಅದಕ್ಕೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾನೆ ಎಂದು ಕೋಪಗೊಂಡು ಅವನನ್ನು ಶಿಕ್ಷಿಸಲು ಮುಂದಾದನು .ಆಗ ಅಲ್ಲಿಯೇ ಇದ್ದ ಬೀರಬಲ್ " ಇದು ನಿಜ ,ಅವನು ಹೇಳಿದ ಪ್ರತಿಯೊಂದು ಮಾತು ಸತ್ಯ . ಇದನ್ನು ಸತ್ಯ ಎಂದು ನಿರೂಪಿಸಲು ನನಗೆ ಸ್ವಲ್ಪ ಕಾಲಾವಕಾಶ ಕೋರುತ್ತೇನೆ ಕೋಪದಲ್ಲಿ ರಾಜ ಯಾವುದೇ ತೀರ್ಮಾನ ತೆಗದು ಕೊಳ್ಳುವುದು ಸೂಕ್ತ ಅಲ್ಲಾ " ಎಂದು ಹೇಳಿ ಆ ಮೇಧಾವಿಗೆ ಶಿಕ್ಷೆ ಆಗುವುದನ್ನು ತಪ್ಪಿಸಿ ಅಲ್ಲಿಂದ ಹೊರಟು ಹೋದನು .

                      ಮಾರನೇ ದಿನ ಬೀರಬಲ್ ಆಸ್ಥಾನಕ್ಕೆ ಬರದೇ ಇರುವದನ್ನು ಗಮನಿಸಿ ತನ್ನ ಸೈನಿಕರಿಗೆ ಎನ್ನಗಿದೆ ಎಂದು ವಿಚಾರಿಸಿಕೊಂಡು ಬರಲು ಹೇಳಿದನು .ಸ್ವಲ್ಪ ಹೊತ್ತಿನ ನಂತರ ಸೈನಿಕರು ಬೀರಬಲ್ ತಮನ್ನೇ ಅಲ್ಲಿಗೆ ಬರಲು ಹೇಳುತ್ತಿದ್ದಾರೆ ಎಂದು ಹೇಳಿದಾಗ ಅಕ್ಬರ್ ಪಿತ್ತ ನತ್ತಿಗೇರಿದಂತಾಗಿ ಬೀರಬಲ್ ಇರುವ ಕಡೆ ಬಂದನು .ಬೀರಬಲ್ ಗಂಗಾ ತೀರದಲ್ಲಿ ಚಪ್ಪಲಿ ಹೊಲೆಯುತ್ತ ಕೂತಿದ್ದ . ಅದನ್ನು ನೋಡಿದ ಅಕ್ಬರ್ " ಬೀರಬಲ್ ,ಏನು ಮಾಡುತ್ತಿರುವೆ ? " ಎಂದು ಕೇಳಿದನು . ಬೀರಬಲ್ ಸುಮ್ಮನೆ ರಾಜನನ್ನು ಒಮ್ಮೆ ನೋಡಿ ,ಮತ್ತೇ ತನ್ನ ಕೆಲಸವನ್ನು ಮುಂದುವರಿಸಿದನು . ಅಗ ಇನ್ನಷ್ಟು ಕೋಪಗೊಂಡ ರಾಜ "ಬೀರಬಲ್ ,ಏನು ಮಾಡುತ್ತಿರುವೆ ಎಂದು ಬೊಗಳು ,ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲಾ " ಎಂದು ಬೊಬ್ಬೆಯಿಡುತ್ತಾನೆ . ಆಗ ಬೀರಬಲ್ " ರಾಜ , ಅಲ್ಲಿಗೆ ನೆನ್ನೆ ಮೇಧಾವಿ ಹೇಳಿದ್ದು ನಿಜ ಆಯಿತು " ಎಂದು ಹೇಳಿ ಅಲ್ಲಿಂದ ಎದ್ದೇಳುತ್ತಾನೆ . ಏನು ತಿಳಿಯದ ರಾಜ ಅದನ್ನು ವಿವರಿಸಲು ಹೇಳಿದಾಗ ಬೀರಬಲ್ ಹೀಗೆ ಹೇಳುತ್ತಾನೆ " ನೀವು ಬಂದು ನಾನು ಚಪ್ಪಲಿ ಹೊಲೆಯುತ್ತಿರುವುದನ್ನು ನೋಡಿಯೂ ಕೂಡ ಏನು ಮಾಡುತ್ತಿದ್ದೇನೆಂದು ಕೇಳಿದಿರಿ .ಯಾಕೆ ನಿಮ್ಮ ಕಣ್ಣಿಗೆ ಕಾಣಿಸಲಿಲ್ಲವೇ?ಅಂದ ಮೇಲೆ ಮೇಧಾವಿ ಹೇಳಿದ್ದು ನಿಜ ಅಲ್ಲವೇ? " . ಆಕ್ಬರಿಗೆ ಆಗ ತನ್ನ ತಪ್ಪಿನ ಅರಿವಾಗಿತ್ತದೆ .

                  ಮೇಲಿನ ಕಥೆ ನಮ್ಮ ಅಥವಾ ನಮ್ಮ ಸುತ್ತಮುತ್ತಲಲ್ಲಿರುವವರ ಕುರುಡುತನಕ್ಕೆ ಒಂದು ಸಾಕ್ಷಿ ಅಷ್ಟೇ.ನಿಮ್ಮ ದೈನಂದಿನ ಬದುಕನ್ನು ಸರಿಯಾಗಿ ನೀವುಗಮನಿಸಿದರೆ ಇದಕ್ಕೆ ಅನೇಕ ಸಾಕ್ಷಿಗಳು ಸಿಗುತ್ತವೆ .ಒಮ್ಮೆ ನಿಮ್ಮ ಬಾಲ್ಯ ನೆನಪಿಸಿಕೊಳ್ಳಿ . ನೀವು ಆರಾಮಾಗಿ,ಸೊಫಾದಲ್ಲಿ ಕಾಲು ಚಾಚಿ ಕೊಂಡು ಟಿವಿ ಕೂತಿರುತ್ತೀರಾ. ಆಗ ನಿಮ್ಮ ಅಪ್ಪನೋ ,ಅಮ್ಮನೋ ಬಂದು " ಎನು ಮಾಡುತ್ತಾ ಇದಿಯಾ?" ಅಂತ ಕೇಳುತ್ತಾರೆ.ನಾವು ಟಿ.ವಿ ನೋಡುತ್ತಾ ಇದೀವಿ ಅಂದರೆ "ಲೋಫ಼ರ್,ಎನಾದ್ರು ಒದ್ಕೋಳೋದು ಬಿಟ್ಟು ಟಿ.ವಿ ನೋಡ್ತಾ ಇರೋದಲ್ಲದೇ ,ಅದನ್ನಾ ಬಾಯಿ ಬಿಟ್ಟು ಹೇಳತೀಯಾ ,ನಾಚಿಕೆ ಇಲ್ವಾ " ಅಂತಾ ಉಗಿಯುತ್ತಾರೆ.ಯಾಕೆ ಕಾಣಿಸ್ತಾ ಇರಲಿಲ್ಲವಾ ಅವರಿಗೆ?ಕಂಡರೂ ಕೇಳೋದ್ಯಾಕೆ. ಕೇಳಿ ಉಗಿಯೋದ್ಯಾಕೆ?

          ಇನ್ನು ಶಾಲೆಯ ದಿನಗಳನ್ನು ನೆನಪಿಸಿಕೊಳ್ಳಿ . ಮನೆಯಲ್ಲಿ ಅಮ್ಮ ಅಡುಗೆ ಮಾಡಿ ಡಬ್ಬಿಯಲ್ಲಿ ತುಂಬಿಸಿ ಕೊಟ್ಟಿರುತ್ತಾಳೆ . ಗಡದ್ದಾಗಿ ತಿಂದು ಕ್ಲಾಸಿನಲ್ಲಿ ಪಾಠ ಕೇಳಲು ಕೂತ ನೀವು ನಿದ್ರಾ ದೇವಿಯನ್ನು ಆಹ್ವಾನಿಸಿಕೊಂಡಿರುತ್ತೀರಿ . ಆಗ ನೀವು ನಿದ್ದೆ ಮಾಡುತ್ತಿರುವುದನ್ನು ನೋಡಿ ಮೇಷ್ಟ್ರು ನಿಮ್ಮತ್ತ ಚಾಕ್ ಪೀಸ್ ಎಸೆದು"ಬಡವ ಎನೋ ಮಾಡುತ್ತಾ ಇದೀಯಾ ? ಬೊಗಳೋ " ಅಂತ ಕೇಳುತ್ತಾರೆ . ಅಗ ನೀವು ನಿದ್ದೆ ಮಾಡುತ್ತಿದ್ದೆ ಅಂತ ಹೇಳಿದರೂ ಹೊಡೆತ ಜಾಸ್ತಿ ಬೀಳುತಿತ್ತು,ಸುಮ್ಮನೇ ಹಾಗೆಯೇ ನಿಂತರೂ ಹೊಡೆತ ಜಾಸ್ತಿ ಬೀಳುತಿತ್ತು .ಆಗ ನಿಮ್ಮ ಮನಸಿನಲ್ಲಿ ಉದ್ಭವ ಆಗಿದ್ದ ಕಟ್ಟ ಕಡೆಯ ಪ್ರಶ್ನೆ"ಯಾಕೆ ಇವರಿಗೆ ಕಣ್ಣು ಕಾಣಿಸೊಲ್ವಾ?". ಕೇಳುವ ಬದಲು ಅವರೇ ಮೊದಲೇ ಒಂದಿಷ್ಟು ಹೊಡದರೆ ಮುಗೀತಪ್ಪಾ ಅಂತ ಅಗೆಲ್ಲಾ ನಿಮಗೆ ಅನ್ನಿಸದೇ ಇರುವುದಿಲ್ಲಾ.

         ನಮ್ಮ ದಿನನಿತ್ಯ ಬದುಕಿನಲ್ಲಿ ಈ ಥರಹದ ಪ್ರಶ್ನೆಗಳನ್ನು ನಮಗೇ ಯಾರೋ ಕೇಳಿರುತ್ತಾರೆ ಅಥವಾ ನಾವೇ ಯಾರಿಗೋ ಕೇಳಿರುತ್ತೆವೆ. ತಟ್ಟೆ ಹಿಡಿದು ಊಟ ಮಾಡುವಾಗ ಯಾವನಿಗೋ "ಊಟ ಮಾಡುತ್ತಾ ಇದೀಯಾ? " ಆಂತ ಪ್ರಶ್ನೆ ಹಾಕುತ್ತೇವೆ. ದೇವಸ್ಥಾನಕ್ಕೆ ಬಂದಿರುವವರನ್ನು "ಎನು ದೇವಸ್ಥಾನಕ್ಕಾ?" ಎಂದು ಕೇಳುತ್ತೇವೆ. ಅಥವಾ ಬಾತ್ ರೂಮಿನಲ್ಲಿ ನಿಮ್ಮ ಕೆಲಸ ನೇವು ಮಾಡುತ್ತಿರುವಾಗ ,ಯಾರಾದರೂ ನಿಮಗೆ "ಎನ್ ಸಾರ್,ಪಿಚ್ಕಾರಿನಾ?" ಅಂತಾ ಕೇಳುತ್ತಾರೆ. ಹೇಳುತ್ತಾ ಹೋದರೆ ಮುಗಿಯುವುದೇ ಇಲ್ಲಾ.

           ಮೇಲಿನ ಉದಾಹರಣೆಗಳಲ್ಲಿ ಕಾಣಬಹುದಾದ ಕೆಲವು ಉದಾಹರಣೆಗಳಲ್ಲಿನ ಕುರುಡು ಸಾಮನ್ಯವಾಗಿ ಮುಂದಿನ ನಿರ್ಧಾರ ತೆಗದುಕೊಳ್ಳಲು ಜನ ತಮಗೆ ತಾವೇ ಸೃಷ್ಟಿಕೊಂಡಿರುವ ಕುರುಡು.ಉದಾಹರಾಣೆಗೆ ಮೇಲಿನ ಉದಾಹರಣೆಗಳಲ್ಲಿ ನಮ್ಮ ಹಿರಿಯರು ನಾವುಗಳು ಸಿಕ್ಕಿ ಹಾಕಿಕೊಂಡಾಗ ಕೇಳುವ ಪ್ರಶ್ನೆಗಳು.ನಮ್ಮ ಉತ್ತರದ ಮೇಲೆ ಅವರ ಮುಂದಿನ ನಡೆಗಳನ್ನು ನಿರ್ಧರಿಸುತ್ತಾರೆ.ಉದಾಹರಣೆಗೆ ಮೇಲೆ ಸ್ವಲ್ಪ ಬಯ್ಯಬೇಕೋ ಅಥವಾ ಜಾಸ್ತಿ ಬಯ್ಯಬೇಕೋ ಎಂಬುದು ನಮ್ಮ ಉತ್ತರದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ ಊಟ ಮಾಡುತ್ತಿದ್ದಾಗ ಊಟ ಆಯ್ತಾ ಎಂದು ಕೇಳುವುದು ಪೆದ್ದುತನದ ಕುರುಡು.ಸಾಮಾನ್ಯವಾಗಿ ಯಾರ ಹತ್ತಿರವಾದರೂ ಮತು ಶುರು ಮಾಡಭೇಕಾದಾಗ ಕೇಳುವ ಪ್ರಶ್ನೆಗಳು. ಉದಾಹರಣೆಗೆ ತುಂಬಾ ದಿನದಿಂದ ಮಾತನಾಡಿಸಬೇಕೆಂದಿದ್ದ ಹುಡುಗಿ ಎದುರು ಬಂದಾಗ ಇಂತಹ ಪ್ರಶ್ನೆಗಳನ್ನು ನಿಮ್ಮ ಬಾಯಿಂದ ಬರುವುದು ಸಾಮಾನ್ಯ.

         ಇನ್ನೊಂದು ತರಹದ ಕುರುಡು ಇದೆ. ಜಾಣತನದ ಕುರುಡು. ನಮಗೆ ಇಷ್ಟವಾಗದ ಜನರಿಂದ ತಪ್ಪಿಸಿಕೊಳ್ಳಲು ಅಥವಾ ನಮಗೆ ಇಷ್ಟವಾಗದ ಪರಿಸ್ಥಿತಿಯಿಂದ ಪಾರಾಗಲು ನಾವು ಉಪಯೋಗಿಸುವ ಕುರುಡು.ನೀವು ಹೋಗುವ ದಾರಿಯಲ್ಲಿ ನಿಮಗೆ ಇಷ್ಟ ಆಗದ ವ್ಯಕ್ತಿಯೊಬ್ಬ ನಿಂತಿದ್ದಾನೆ ಉದಾಹರಣೆಗೆ ನೀವು ಸಾಲ ತೆಗದುಕೊಂಡ ವ್ಯಕ್ತಿ. ಅವನು ಇನ್ನು ನಿಮ್ಮನ್ನು ನೋಡಿರುವುದಿಲ್ಲಾ.ನಿಮಗೆ ಆ ದಾರಿಯಲ್ಲಿ ಹೋಗದೇ ಬೇರೆ ದಾರಿಯಿಲ್ಲಾ, ಅಗ ನೀವು ಅವನನ್ನು ಕಂಡು ಕಾಣದ ಹಾಗೆ ಹೋಗುತ್ತೀರಿ.ಈ ಥರಹದ ಜನರ ಕುರುಡುತನ ಕೆಲವೊಮ್ಮೆ ಸುತ್ತಮುತ್ತಲಿನಲ್ಲಿರುವ ಜನರಲ್ಲಿ ಬೇಸರ ಮೂಡಿಸುವುದು. ಉದಾಹರಣೆಗೆ ಧೀಡೀರ್ ಏಂದು ಸಾಹುಕಾರನಾದ ವ್ಯಕ್ತಿ ತನ್ನ ಹಳೆಯ ಬಡ ಮಿತ್ರರನ್ನು ಕಂಡು ಕಾಣದಂತೆ ಹೋದಾಗ ಆಗುವ ನೋವು,ಇಲ್ಲವೇ ನಿಮ್ಮಿಂದ ದೂರವಾದ ನೀವು ಪ್ರೀತಿಸುತ್ತಿದ್ದ ಹಳೆಯ ವ್ಯಕ್ತಿ ತುಂಬಾ ದಿನವಾದ ಮೇಲೆ ನಿಮ್ಮ ಮುಂದೆ ಸಿಕ್ಕಿ,ನಿಮ್ಮನ್ನು ಗುರುತೇ ಇಲ್ಲದವರಂತೇ ನಟಿಸಿದಾಗ ಆಗುವ ದುಃಖ .

        ಆದರೆ ಇನ್ನೊಂದು ತರಹದ ಅತೇ ಸಾಮಾನ್ಯವಾಗಿ ಕಂಡು ಬರುವ ಕುರುಡು ಇದೆ . ಅದು ತುಂಬಾ ಅಪಾಯಕಾರಿಯದದ್ದು. ಅದೇ ನಿರ್ಲಕ್ಷ್ಯದ ಕುರುಡು.ಅಸಡ್ದೆಯ ಕುರುಡು.ಉದಾಹರಣೆಗೆ ದಾರಿಯಲ್ಲಿ ಯಾವುದೋ ಅಪಘಾತವಾಗಿ ಜನ ರಕ್ತದ ಮಡುವಿನಲ್ಲಿ ಬಿದ್ದಿರುತ್ತಾರೆ . ಕೆಲವು ಜ಼ನ ಅದನ್ನೂ ನೋಡಿಯೂ ,ಅಲ್ಲಿ ಬಿದ್ದಿರುವ ಜನಕ್ಕೇ ಸಹಾಯ ಬೇಕೆಂದು ಗೊತ್ತಿದ್ದರೂ , ಹಾಗೆಯೇ ಕುರುಡರಂತೇ ಹೋಗುತ್ತಾರೆ.ಈ ಥರಹದ ಕುರುಡು ನಾವು ತುಂಬಾ ಕಡೆ ನೋಡಬಹುದು . ಚುಣಾವಣೆಯಲ್ಲಿ ಗೆಲ್ಲುವ ಮೊದಲು ಜನರ ಪಾದ ನೆಕ್ಕುವ ರಾಜಕಾರಣಿಗಳು ,ಗೆದ್ದ ಮೇಲೆ ಅದೆ ಜನರು ಒಂಟಿ ಕಾಲಲ್ಲಿ ನಿಂತು ತಮ್ಮ ಗೋಳು ಹೇಳಿಕೊಂಡರೂ ಕಾಣದ ಹಾಗೇ ಇರುವ ರಾಜಕಾರಣಿಗಳ ಕುರುಡು ಕೂಡ ಇದಕ್ಕೇ ಒಂದು ಉದಾಹರಣೆ. ಇಲ್ಲಿ ನಾನು ಕೊಟ್ಟಿರುವುದು ದೊಡ್ದ ದೊಡ್ದ ಉದಾಹರಣೆಗಳು. ಹಾಗೆ ನೋಡಿದರೇ ಈ ಕುರುಡು ನಮ್ಮಲ್ಲಿಯೂ ಇದೇ. ನಾವು ಇದನ್ನು ಚೆನ್ನಾಗಿಯೇ ಉಪಯೋಗಿರುಸುತ್ತೇವೆ. ಉದಾಹರಣೆಗೆ ಇಲ್ಲಿ ಉಗಿಯಬೇಡಿ ಆಂತ ಬರೆದಿದ್ದರೂ ಅಲ್ಲಿಯೇ ಉಗಿಯುವುದು, ಸಾಲಾಗಿ ಬನ್ನಿ ಏಂದು ಬರದಿದ್ದರೂ ನುಗ್ಗುವುದು .ಅಪ್ಪ ಅಮ್ಮನ ಕಷ್ಟಗಳು ಕಾಣಿಸುತ್ತಿದ್ದರೂ ಮಜಾ ಉಡಾಯಿಸುವ ಮಕ್ಕಳು, ವೃದ್ಧ ತಂದೆ ತಾಯಿಗಳ ಪರಿಸ್ಥಿತಿಯನ್ನೂ ನೋಡಿಯೂ ಕೂಡ ಅವರನ್ನು ವೃದ್ಢಾಶ್ರಮಕ್ಕೆ ತಳ್ಳುವ ಮಕ್ಕಳು ಇದೇ ತರಹದ ಕುರುಡರು.

         ಮಾನವೀಯತೆ ಸತ್ತ ಜನರು, ಸ್ವಾರ್ಥದಿಂದ ತುಂಬಿ ತುಳುಕುವ ಜನ,ದೇಶ ಪ್ರೇಮ ಸತ್ತ ಜನರಲ್ಲಿ ಕಾಣುವ ಕುರುಡಿದು .
ಇದು ಸಮಾಜಕ್ಕೆ ಹಾನಿಕಾರಿ.ಇದು ದೇಹದ ಸಮಸ್ಯೆ ಅಲ್ಲಾ,ಮನಸ್ಸಿನ ರೋಗ. ಇದು ಜನರಲ್ಲಿ ವಾಸಿಯಾಗುವ ತನಕ ಸಮಾಜ ಉಧ್ಧಾರ ಕಾಣುವುದಿಲ್ಲಾ.ಇದರಿಂದ ಹೊರಗೆ ಬರಲು ಒಂದೇ ದಾರಿ.ನಾನು ನನ್ನದು ಬಿಟ್ಟು ನಾವು ನಮ್ಮದು ಏಂದು ನಾವು ಯೋಚಿಸಲು ಶುರು ಮಾಡಿದಾಗ .

            ಜಾಸ್ತಿ ಬುದ್ಧಿ ಹೇಳುವುದು ನನಗೆ ಸರಿ ಕಾಣುವುದಿಲ್ಲ. ಅದರೆ ಒಂದಂತೂ ಸತ್ಯ ನಾವೆಲ್ಲಾ ಕುರುಡರು ಅನ್ನುವದಕ್ಕೇ ನಾನಂತೂ ಸಾಕಷ್ಟು ಉದಾಹರಣೆಗಳನ್ನು ನೀಡಿದ್ದೇನೆ.ಇದರಲ್ಲಿರುವ ಯಾವುದೇ ತರಹದ ಕುರುಡಿನಿಂದ ನಾನು ಬಳಲುತ್ತಿಲ್ಲಾ ಅಂದರೇ ನಾನು ಹೇಳುವುದು ಇಷ್ಟೇ ."ನಿಮ್ಮ ಪಾದಾನ ಜೆರಾಕ್ಷ್ ಗೆ ಕೊಡ್ತೀರಾ "

Once in Akbar’s empire, an intellectual from another empire challenged the ministers of Akbar’s court telling them to prove that everyone is  blind. One by one , ministers in the court started to hang their head in shame as they did not know the answer except Birbal. Birbal asked the intellectual that he would be proving his words tomorrow and left the court room. Next day everyone was waiting how Birbal would prove but to their surprise Birbal didn’t show up. Akbar now feeling little bit shamed in front of the intellectual asked his soldiers to look for Birbal. After a while the soldiers returned and said that Birbal was on banks of Yamuna river and has asked them to come and see him there. Akbar knew that this was some part of plan .So he along with intellectual and other ministers went to see Birbal and they were surprised when they saw what Birbal was doing. He was making chappals on the bank of Yamuna river. First Akbar asked “Birbal what are u doing?”. Birbal didn’t replied and just showed chappals and needle. This repeated for a while till the intellectual got furious and asked the Birbal “ what the hell are you doing?”.Birbal stood and answered calmly “Hence I proved ur point.” Everyone was flabbergasted and they were looking at Birbal. Birbal said “All of you were able to see that what I was making chappals .But still you guys kept on asking what am I doing? Hope that is enough to prove the point” .And this time intellectual hung his head in shame as he lost challenge.

We all are blind. You guys may be surprised and most of them even disagree. But I stand strong with my word because I am pretty confident that you all will find yourself the victim of either one of this or all three types of the blindness which I am going to introduce

First one Stupid blindness.
 Imagine you are coming inside to theatre carrying popcorn and suddenly you come across another friend inside theater who is so happy and surprised to see you and the next thing he asks you is  “what are you doing here man?”. Well there is no need of Sherlock homes science deduction to understand what you were doing with popcorn inside theater .But still why your friend couldn’t see it. Often in our day to day life we come across this irritating type of people who asks this types of question. And according to me they all suffer from a blindness called stupid blindness. Ya the situation where people act like blind due to their stupidity. The notable feature of this blindness is as stupidity increase the irritation increases. An example would help you understand this. One of my friend’s dad expired and I went there and I was standing outside the house .Dead body was lying and everyone was crying around it .The whole situation was pretty clear to state that someone is dead. Suddenly a passerby comes, looks at everything and asks me “Is someone dead?”. You get so irritated at these type of situation and even me at that point and I felt saying “No the guy is sleeping from past two days .We are just trying him to wake him up.” Actually there is no harm in this blindness as far as I know except irritation and the cure to this blindness is simple, think before you speak.
Keeping that in mind let’s move to the next blindness called smart blindness. Let me give you an example to illustrate where do we use it. Imagine a situation where to do you realize that the next instant you will come across a person whom you don’t want meet to .That person may be ur ex ,or the person whom you have taken loan or ur Project manager etc. What will you do? You just pretend you have not seen them and just take deroute so that you avoid them. Even though if you meet them what will you say? “ oh you were here .I didn’t see you at all.” See that is called smart blindness. Sometimes this even gets better when your elder people use it .let me give you an example .Just imagine those old school days. On one lazy weekend you are laying on sofa and seeing tv watching your favorite program. There comes your dad and asks “ what you doing?”. Now there comes the biggest difficulty, what to answer ?.It’s like answering yakshaprashn. If you turn of the tv and just go ,you will get scolding “Where are you going ? Answer me you pervert ?don’t you have respect “. If you answer to the question “ I was seeing tv “,then also you will get scolding “ I work and spend my life to educate you and you are spending time ..seeing tv ?”. Funny right .It’s like you are under gunpoint of some bad guy who has decided to kill you even after you answer to his questions. It’s a trap .No escape. That’s why it’s called smart blindness.

Well we all use it to escape some bad situation so smart blindness not an issue. It’s good.

Apart from these two blindness we have another blindness about which we all need to think about .Third blindness .A blindness which is not only harmful to individual but individual to the whole society .It’s called Inner blindness. What is it?Inner Blindness is that when a grown up sun sends his parents to old age who can’t see their love.  This is that blindness when you can’t see the person who is caring so much about you standing in front of you  and you keep on ignoring him .Inner blindness is that when a success full person who forgets his past and forgets the person who were reason for his success. Inner blindness is when we see a corporation tap is open and the water is flowing, but still we go as if we don’t care. Inner[S1]  blindness that one when a nation is asking you to be a part of revolution but you pretend you don’t see it .Inner blindness is that one where you see only your rights but not your duties towards country .Inner blindness is that one where your friend is in some problem and you can help him but you don’t .Like this there are many examples for this blindness .some of them are around us, some of them we are part of it .Believe me this is the dangerous blindness. This is blindness which comes when we forget the humane values .those humane values like love, friendship, trust, kindness etc etc .A real blind individual with humane values is more useful than the individual with inner blindness. Some of you may thinking this is just a problem of individual .Remember drops make Ocean, Individuals make society .So how the society will be if it is full this individuals. Well the cure is simple Make your heart a garden of humane values not a jungle of inhumane values.
Now I have presented you three type of blindness and it’s left you to associate with which type of blindness you suffer and if you think it’s the harmful one, then how to come out of it. Thank you


















Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...