ಅದು ಇನ್ಫೋಸಿಸ್ ಟ್ರೈನಿಂಗ್ ಗೆ ಎಂದು ಮೈಸೂರಿನಲ್ಲಿದ್ದ ಸಮಯ. ನಮ್ಮ ಕ್ಯಾಂಪಸ್ನಲ್ಲಿ ಜೊತೆ ಭಾರತದ ಮೂಲೆ ಮೂಲೆಯಿಂದ ಬಂದ ಅನೇಕ ಮಿತ್ರರಿದ್ದರು .ಅದರಲ್ಲಿ ಆಂಧ್ರ ಪ್ರದೇಶದ ಒಂದಿಷ್ಟು ಹುಡುಗರು ನನ್ನ ಜೊತೆ ಟ್ರೈನಿಂಗ್ ಅಟೆಂಡ್ ಮಾಡುತ್ತಿದ್ದರು. ಈ ಆಂಧ್ರದ ಜನರು ಸಾಮನ್ಯವಾಗಿ ಹೆಚ್ಚಾಗಿ ಇಷ್ಟಪಡುವುದು ಸಿನೆಮಾ ಹಾಗೂ ರಾಜಕೀಯ. ಒಂದಿಷ್ಟು ಆಂಧ್ರದ ಹುಡುಗರು ಸೇರಿದರೆ ಹೆಚ್ಚಾಗಿ ಮಾತಾನಾಡುವ ವಿಷಯ ಆಂದರೆ ಸಿನೆಮಾ. ಇದನ್ನು ಯಾಕೆ ಹೇಳುತ್ತಿದ್ದೀನಿ ಆಂದರೆ ನಾನು ಮೈಸೂರಿನಲ್ಲಿದ್ದಾಗ ಒಬ್ಬ ತೆಲಗು ಚಿತ್ರರಂಗದ ನಟನೊಬ್ಬನ ಮದುವೆ ನಡೆಯುತಿತ್ತು. ನನ್ನ ಆಂಧ್ರದ ಗೆಳೆಯನೊಬ್ಬ ಆಂಧ್ರದಲ್ಲಿ ಇದ್ದರೆ ಯಾವುದಾದರೂ ಲೋಕಲ್ ತೆಲಗು ಚಾನೆಲ್ನಲ್ಲಿ ನೋಡಬಹುದಿತ್ತು ಆದರೆ ಮೈಸೂರಿನಲ್ಲಿ ನೋಡಲಾಗುವುದಿಲ್ಲಾ ಏಂದು ತನ್ನ ಗೋಳು ಹೊಯ್ದುಕೊಳ್ಳುತ್ತಿದ್ದ.ಆದರೆ ಮಾರನೇ ದಿನ ಬಂದು ಅವನೊಂದು ಮಾತು ಹೇಳಿದಾಗ ನನಗೆ ಆದ ಮುಜುಗರ ಅಷ್ಟಿಷ್ಟಲ್ಲಾ.ಆವನು ತನ್ನ ತೆಲಗು ಹೀರೋ ಮದುವೆಯನ್ನು ನೋಡಿದ್ದ. ಯಾವುದರಲ್ಲಿ ಗೊತ್ತಾ.ಕರ್ನಾಟಕದಲ್ಲಿ ಪ್ರಸಾರವಾಗುವ ತೆಲಗು ಚಾನೆಲ್ಸ್ ನಲ್ಲಿ ಅಲ್ಲಾ.ಯಾಕಂದರೆ ಯಾವುದೇ ತೆಲಗು ಚಾನೆಲ್ಸ್ ನಲ್ಲಿ ಪ್ರಸಾರ ಮಾಡಿರಲಿಲ್ಲಽವನು ನೋಡಿದ್ದು ನಮ್ಮ ಕನ್ನಡ ನ್ಯೂಸ್ ಚಾನೆಲ್ ನಲ್ಲಿ.ಅವನು ನಗುತ್ತಾ "ನಿಮ್ಮ ಕನ್ನಡ ಚಾನೆಲ್ನಲ್ಲಿ ಯಾಕೆ ನಮ್ಮ ಸ್ಟಾರ್ ದು ಮದುವೆ ಹಾಕಿದ್ದ್ರು." ಹೇಳಿದ್ದ. ಅದರಲ್ಲಿ ತನ್ನ ಭಾಷೆಯ ಚಿತ್ರದ ಹೀರೊ ಕನ್ನಡ ಚಾನೆಲ್ನಲ್ಲಿ ಬಂತು ಎಂಬ ಖುಷಿಯಿತ್ತು. ಆದರೆ ನನಗೆ ಅದರಲ್ಲಿ ನಿಮ್ಮ ಕನ್ನಡ ನ್ಯೂಸ್ ಚಾನೆಲ್ನಲ್ಲಿ ನಿಮ್ಮವರ ವಿಷಯಕ್ಕಿಂತ ನಮ್ಮವರ ವಿಷಯಕ್ಕೇ ಪ್ರ್ರಾಮುಖ್ಯತೆ ಕೊಟ್ಟೀದ್ದೀರಿಲ್ಲಾ ಏಂಬ ಗೇಲಿ ಕಾಣುತಿತ್ತು.
ನಾನು ಚೆನ್ನೈನಲ್ಲಿದ್ದಾಗ ಅಲ್ಲಿಯ ಕೇಬಲ್ನಲ್ಲಿ ಕನ್ನಡ ಚಾನೆಲ್ ಗಳು ಬರುವುದೇ ಹೆಚ್ಚಿನ ಮಾತಾಗಿತ್ತು.ಇನ್ನೂ ಅಲ್ಲಿಯ ನ್ಯೂಸ್ ಚಾನೆಲ್ಗಳಲ್ಲಿ ನಮ್ಮವರ ಸುದ್ಧಿ ಕೇಳಲೇಬೇಡಿ. ಅಲ್ಲಿಯವರಿಗೆ ನಮ್ಮ ಒಬ್ಬ ನಟನ ಹೆಸರು ಗೊತ್ತಿಲ್ಲಾ. ಕಾರಣ ಅವರಿಗೆ ನಮ್ಮವರ ಸುದ್ಧಿಯೇ ಸಿಗುವುದಿಲ್ಲಾ. ಆದರೇ ನಮ್ಮ ಕನ್ನಡದವರಿಗೇ ಕೇಳಿ ನೋಡಿ,ಯಾವ ಭಾಷೆಯ ಚಲನಚಿತ್ರರಂಗದ ಬಗ್ಗೆ ಬೇಕಾದರು ಹೇಳುತ್ತಾರೆ.ನಮ್ಮ ಕನ್ನಡ್ ನ್ಯೂಸ್ ಚಾನೆಲ್ ಗಳಂತೂ ತಮಿಳು ,ತೆಲಗು ಒಂದು ಚಲನ್ ಚಿತ್ರ ರಿಲೀಸ್ ಆಗುವ ಹಾಗಿಲ್ಲಾ,ಬೇರೆ ಭಾಷೆಯಾ ನಟನೊಬ್ಬ ಹೂಸು ಬಿಡುವ ಹಾಗಿಲ್ಲಾ ಅದನ್ನೂ ವಿಶೇಷ ಕಾರ್ಯಕ್ರಮ ಮಾಡಿ ಪ್ರಸಾರ ಮಾಡುತ್ತಾರೆ.
ನಮ್ಮಲ್ಲಿರುವ ಕನ್ನಡ ನ್ಯೂಸ್ ಚಾನೆಲ್ ಗಳು ಮೂಲ ಕನ್ನಡ ಅಲ್ಲಾ. ಆದ್ದರಿಂದ ಅವುಗಳು ಇಂತಹ ಕೆಲಸ ಮಾಡುತ್ತವೆ ಅಂದರೆ ಹ್Yದು ಆನ್ನಬಹುದು.ಆದರೆ ಕನ್ನಡ ಮೂಲದಿಂದ ಬಂದ ಚಾನೆಲ್ ಕೊಲಾವೆರಿ ಡಿಯ ವಿಶೇಷ ಕಾರ್ಯಕ್ರಮವೊಂದು ಬೆಂಗಳೂರುನಲ್ಲಿ ನಡೆದಾಗ ಅದರ ಪ್ರಾಯೋಜಕತ್ವ ವಹಿಸಿದ್ದು ಮುಜುಗರದ ಸಂಗತಿ. ನನ್ನ ವಾದ ಇಷ್ಟೇ ನಮ್ಮ ಬಗ್ಗೆ ಅದೂ ಬಿಡಿ ನಾವು ಅಸ್ಥಿತ್ವದಲ್ಲಿಯೇ ಇಲ್ಲಾ ಎಂಬತೇ ಬದುಕುತ್ತಿರುವ ಬೇರೆಯವರಿಗಿಲ್ಲದ ಕಾಳಜಿ ನಮಗ್ಯಾಕೆ? ಕನ್ನಡ ಹಾಗು ಕನ್ನಡ ಕಲೆಯನ್ನು ಬೆಳೆಸಬೇಕಾಗಿರುವ ಕನ್ನಡ ಚಾನೆಲ್ಗಳಿಗೆ ಬೇರೆ ಭಾಷೆಯ ವ್ಯಾಮೋಹ ಯಾಕೆ?
ಇನ್ನೂ ನಮ್ಮ ನ್ಯೂಸ್ ಚಾನೆಲ್ ಗಳಲ್ಲಿ ಬರುವ ಕಾರ್ಯಕ್ರಮಗಳ ಕಡೆ ಕಣ್ಣು ಹಾಯಿಸೋಣ. ಒಬ್ಬ ನಟ ಅಥವಾ ನಟಿ ಎರಡನೇ ಮದುವೆ ಆಗುವ ಹಾಗಿಲ್ಲಾ ಅದನ್ನು ರಾಷ್ಟ್ರೀಯ ಸುದ್ದಿಯ ಥರಹ ಅದನ್ನೇ ಬೆಳಗ್ಗೆಯಿಂದ ರಾತ್ರಿ ತನಕ ತೋರಿಸುತ್ತಾರೆ.ಇನ್ನೂ ಸ್ವಾಮೀಜಿಯ ಯವುದಾದರೂ ರಾಸಲೀಲೆ ವೀಡಿಯೋ ಸಿಕ್ಕರಂತೂ ನಮಗೇ ದಿನವಿಡೀ ಅದರ ಬಿಟ್ಟಿ ದರ್ಶನ. ಇನ್ನೂ ಯಾರಾದ್ರೂ ಗಂಡ ಇನ್ನೊಬ್ಬ ಹೆಂಡತಿಯ ಜೊತೆ ಮಲಗಿದರೆ ಅದೇ ಬಿಸಿ ಸುದ್ದಿ. ಇಂತಹ ಯಾರದೋ ವ್ಯಯಕ್ತಿಕ ವಿಷಯಕ್ಕೇ ಲೈವ್ ರಿಪೋರ್ಟರ್, ಕೊನೆಗೆ ಅದಕ್ಕೇ ಪಾನೆಲ್ ಡಿಸ್ಕಶನ್, ಯವುದಾದರೂ ಹಸಿಬಿಸಿ ವಿಡಿಯೋ ಇದ್ದರಂತೂ ಅದನ್ನೇ ಜೂಮ್ ಮಾಡಿ ಮಾಡಿ ತೋರಿಸುತ್ತಾರೆ. ಕೆಲವು ಚಾನೆಲ್ ಗಳಂತೂ ವಾಕರಿಕೆ ಬಿಡುವ ತನಕ ಬಿಡುವುದಿಲ್ಲಾ. ಅವರ ಸ್ಟುಡಿಯೋ ದಲ್ಲಿ ನ್ಯಾಯಾಲಯವನ್ನೇ ಸೃಷ್ಟಿಸಿ ಕೊಂಡುಬಿಡುತ್ತಾರೆ. ನನಗೂ ಇನ್ನು ನೆನಪಿದೆ ಕರೀನಾ ಕಪೂರ್ ಮದುವೆಯಾದಾಗ ,ಅವಳು ಇಸ್ಲಾಂ ಗೆ ಮತಾಂತರವಾಗುತ್ತಿದ್ದಾಳೆ ಏಂಬ ವಿಷಯವನ್ನು ಹಿಡಿದುಕೊಂಡು "ಕರೀನಾ ಇದು ಸರೀನಾ " ಎಂಬ ಚರ್ಚಾ ಕಾರ್ಯಕ್ರಮ ಪ್ರಸಾರ ಮಾಡಿತ್ತು.
ನನ್ನ ಪ್ರಶ್ನೆ ಇಲ್ಲಿ ಯಾರದೋ ವೈಯಕ್ತಿಕ ಅದು ಒಂದು ಆರೋಗ್ಯಕರವಲ್ಲದ ವಿಷಯವನ್ನು ದಿನವಿಡೀ ತೋರಿಸುವ ಅಗತ್ಯವಾದರೂ ಏನು.ಕಪಟ ಸ್ವಾಮೀಜಿ ಅಥವಾ ಕಪಟ ರಾಜಕಾರಣಿಗಳು ಬಣ್ಣ ಬಯಲು ಮಾಡುತ್ತಿದ್ದೇವೆ ಏಂದು ಚಾನೆಲ್ ಗಳು ವಾದ ಮಾಡ್ಬಹುದು. ಆದರೆ ಸಿನೆಮಾ ನಟ ನಟಿಯರ ,ಯಾವುದೋ ಗಂಡ ಹೆಂಡಿರ ಕಳ್ಳ ಸಂಭಂದ ದಿಂದ ನಮಗಾಗುವ ಪ್ರಯೋಜನವಾದರೂ ಏನು?ಇನ್ನೂ ಕಪಟ ವ್ಯಕ್ತಿಗಳ ಬಣ್ಣ ಬಯಲು ಮಾಡುವುದು ಒಳ್ಳೆಯದೇ. ಆದರೆ ಅದಕ್ಕೇ ಅವರು ಹಾಸಿಗೆ ಮಾಡಿದ ಹೊಲಸನ್ನು ದಿನವಿಡೀ ತೋರಿಸುವ ಅಗತ್ಯವಿಲ್ಲಾ. ಅಪ್ಪ ಅಮ್ಮನಿಗೆ ಮಕ್ಕಳು ನಿಮ್ಮ ನ್ಯೂಸ್ ನೋಡಿ " ಅಮ್ಮ , ಮೈಸೂರು ಮಲ್ಲಿಗೆ ಎಮ್.ಎಮ್ .ಸ್ ಸ್ಕ್ಯಾಂಡಲ್ ಅಂದರೆ ಏನು "ಅಂತ ಕೇಳುವ ಹಾಗೆ ಆಗಬಾರದು. ಯಾರಾದ್ದಾದರೂ ವ್ಯಕ್ತಿಯ ವಿಷಯ ತೋರಿಸಿದರೆ ನೋಡುವವರಲ್ಲಿ ಸಕರಾತ್ಮಕ ಭಾವನೆಗಳು ಮೂಡಬೇಕು. ಆಂತಹ ಕಾರ್ಯಕ್ರಮಗಳ ಬಗ್ಗೆ ಗಮನ ಹರಿಸಬೇಕು.
ಇನ್ನೂ ಇದೆ ........
English summary: That was during my Infosys Training.One of my friend from Andhra was sad as he couldn't watch his Superstar's marriage as the telegu channel which was airing was not available in Karnataka.But next day he was happy and when I asked the reason,the answer he gave was really sad one.He saw his Telegu superstar's marriage live in one of the Kannada channel.He asked me the reason Kannada channel airing the Telegu superstar's marriage to which I remained silent.When I was In chennai,we were not even getting Kannada channels.But in Karnataka Kannada news channel air all programs related to tamil and telegu movies.Many of the Kannada news channel are not banglore based .So this may the reason for them to air these type of programs .But few days ago , pakka Kannada news channel aired a Special program and even hosted the program on why dis Kolaveri di.The quality of the programs these kannada channels show is very low.Recently one channel had panel discussion about Kareena's marriage.Most of the channels openly show the MMs and sex scenes just blurring some part.Whole day the same news will be there.News channel should stop worrying about TRP and should air good quality programs.
.
correct le shishya.
ಪ್ರತ್ಯುತ್ತರಅಳಿಸಿthanks kano..for reading it...
ಅಳಿಸಿGood one shravan. Nice points
ಪ್ರತ್ಯುತ್ತರಅಳಿಸಿ