ಭಾನುವಾರ, ಡಿಸೆಂಬರ್ 20, 2015

ಆಗಂತುಕ : ತೆರೆಯ ಹಿಂದೆ

ಆಗಂತುಕ ಚಿತ್ರದ ಕಥೆಯನ್ನು ನನ್ನ ಗೆಳಯನೊಬ್ಬನಿಗೆ ಹೇಳಿ, ಇದನ್ನು ದೀಪಾವಳಿಗೆ ರಿಲೀಸ್ ಮಾಡಬೇಕು ಅಂದಾಗ “ಲೋ ,ಈ ತರದ್ದ ಕಥೆ ಆಗಲೇ ಸಾಕಷ್ಟು ಬಂದಿದೆ ?” . ಆಗ ನಾನು “ ನನಗೆ ಗೊತ್ತಿರೋ ಹಾಗೆ ಕನ್ನಡದಲ್ಲಿ ಬಂದಿಲ್ಲವಲ್ಲಾ ?ಅದರಲ್ಲೂ ದೀಪಾವಳಿ theme ಹಾಗು ಈ themeಇಟ್ಟಕೊಂಡು ಮಾಡಿದ್ರೆ ಜನ ಇಷ್ಟ ಪಡ್ತಾರೆ .” ಹಬ್ಬಗಳ background ಇಟ್ಟುಕೊಂಡು ಬೇರೆ ಭಾಷೆಯಲ್ಲಿ video ಮಾಡುವುದು ತುಂಬಾ ಹಳೆಯ ವಿಷಯ . ಹಾಗೆ ಕನ್ನಡದಲ್ಲಿ ಒಂದು ಮಾಡಿದರೆ ಜನರ ಮನಸ್ಸು ಗೆಲ್ಲಬಹುದು ನನ್ನ ಲೆಕ್ಕಾಚಾರ ( ಆದರೆ ಈ ಲೆಕ್ಕಾಚಾರ ಗಳೆಲ್ಲಾ ಉಲ್ಟಾ ಆಗಿ video flopಆಗಿದ್ದು ಬೇರೆ ವಿಚಾರ ). ಗೆಳಯ ಬೇಡ ಅಂದರೂ , ನನಗೆ ಒಂದು ಹಠ ಇತ್ತು . ಮಾಡಿಯೇ ತೀರಬೇಕೆಂದು, ಶುರು ಮಾಡಿದೆ .

ಯಾವುದೇ ಕೆಲಸ ಅಂದುಕೊಂಡದ್ದು ಸುಲಭವಾಗಿ ಆಗಿದ್ದು , ಅದರಲ್ಲಿ ನಾನು ಅಂದುಕೊಂಡಿದ್ದು ಆಗಿಯೇ ಇಲ್ಲ . ಅದೇ ಮಜಾ ಅನ್ನಿ . ಆಗಲೇ ತುಂಬಾ ಕಲಿಯುವುದಕ್ಕೆ ಸಿಗುವುದು . ಅದು ಬೇರೆ ವಿಷಯ .ಒಟ್ಟಿನಲ್ಲಿ ಒಂದರ ಮೇಲೆ ಒಂದು ಸಮಸ್ಯೆಗಳು ಎದುರಾದವು . ಹಾಸನದಲ್ಲಿ ಶೂಟ್ ಮಾಡಬೇಕು ಅಂದುಕೊಂಡಿದ್ದು , ಕೊನೆಗೆ ಹೇಗೋ ಬೆಂಗಳೂರು ಶೂಟ್ ಮಾಡಿದ್ದು .ನನ್ನ height ಗೆ, acting ಗೊತ್ತಿರುವ ಸರಿಯಾದ ನಾಯಕಿ ಹುಡುಕುವುದು. ಇಡೀ ವಾರ softwareಕೆಲಸದಲ್ಲಿ , weekend ನಲ್ಲಿ ಮಾತ್ರ ಆಗ ಈಗ ಸಿಗುವ actors ಹಾಗು team ಅನ್ನು ಒಂದೇ ಕಡೆ ಕೂಡಿಸುವುದು . ಹೀಗೆ ಒಂದಾ ಎರಡಾ . ಕೊನೆಗೆ ಹೇಗೋ ಎಲ್ಲವನ್ನು ಮೀರಿ ಶೂಟಿಂಗ್ ಮುಗಿಸಿ ,ಚಿತ್ರ ಹೊರಗಡೆ ತಂದಿದ್ದಾಯಿತು .

ಈ ಸಮಯದಲ್ಲಿ ನನ್ನ ತಂಡದ ಸದಸ್ಯರ ಹೆಸರು ಹೇಳಲೇಬೇಕು . ರಜತ್ , ಭಾರದ್ವಾಜ್ , ಸಂದೀಪ್ ಈ ಸಲ ಬರೀ ನಟನೆ ಅಲ್ಲದೇ ಈ ಸಲ production managers ಆಗಿ ತುಂಬಾ ಅಚ್ಚಕಟ್ಟಾಗಿ ಕೆಲಸ ನಿಭಾಯಿಸಿದರು . ಶೂಟಿಂಗ್ ಗೆ ಬೇಕಾದ ಮನೆ ಹುಡುಕುವಲ್ಲಿ ಭಾರದ್ವಾಜ್ ಹಾಗೂ ರಜತ್ ಪ್ರಯತ್ನ ನಿಜವಾಗಲೂ ಶ್ಲಾಘನೀಯ . ಇನ್ನು ಹೊರಾಂಗಣ ಚಿತ್ರೀಕರಣ ಮಾಡಿದ , ಮೈಸೂರ್ ನಿಂದ ಬಂದು ಮನೀಷ್ ಅವರಿಗಂತೂ ನಾನು ಚಿರಋಣಿ . ಇನ್ನೂ ಈ ಸಲ ನಮ್ಮ ತಂಡಕ್ಕೆ ಹೊಸದಾಗಿ ಬಂದ ನಮ್ಮ ಸಂಕಲನ ಕಾರ ಸಂದೀಪ್ k s ,ತನ್ನ ಕೆಲಸವನ್ನು ತುಂಬಾ ಚೆನ್ನಾಗಿ ಮಾಡಿದ್ದಾನೆ . ಈ ಸಲ ಆಗಂತುಕ ಚಿತ್ರದಲ್ಲಿ ಗ್ರಾಫಿಕ್ಸ್ ವರ್ಕ್ ತುಂಬಾ ಚೆನ್ನಾಗಿ ಇತ್ತು .ಅದನ್ನು ಅಷ್ಟೇ ಸುಲಭವಾಗಿ ಹಾಗೂ ತುಂಬಾ ಚೆನ್ನಾಗಿ ನಿಭಾಯಿಸಿದ್ದಾನೆ . ಚಿತ್ರ ಬಂದಾಗ ,ಎಲ್ಲರೂ ಹೊಗಳಿದ್ದು ಹೆಚ್ಚಾಗಿ ಹಿನ್ನಲೆ ಸಂಗೀತ ,ಅದಕ್ಕೆ ಕಾರಣ ಹಿನ್ನಲೆ ಸಂಗೀತ ಮಹೇಶ್ ಜೂಡ್ . ಇನ್ನೂ ಶಬ್ದ ವಿನ್ಯಾಸ ಮಾಡಿರುವ ಗಣೇಸನ್ ಗೋಪಾಲ್ಅವರನ್ನು ಎಷ್ಟು ಹೊಗಳಿದರೂ ಸಾಧ್ಯವಿಲ್ಲ .ಇಡೀ ಚಿತ್ರಕ್ಕೆ follytrack ಕೊಟ್ಟಿರುವ ಗಣೇಸನ್ , ಎಲ್ಲಾ ಶಬ್ದಗಳನ್ನು ಹೊಸದಾಗಿ ರೆಕಾರ್ಡ್ ಮಾಡಿದ್ದರೆಂದು ಹೇಳಿದಾಗ ನನಗೆ ಮಾತೇ ಹೊರಡಲಿಲ್ಲ .ಯಾಕೆ ಅಂದರೆ ಅವರು ನಮಗೆ ಶಬ್ದ ವಿನ್ಯಾಸ ಮಾಡಿಕೊಡಲು ಅವರು ನಯಾ ಪೈಸೆ ತೆಗದು ಕೊಂಡಿರಲಿಲ್ಲ .

ಈಗ ಆ ವಿಷಯಗಳನ್ನು ಬಿಟ್ಟು ,ಈ ಚಿತ್ರವನ್ನು ನಾನು ನಿರ್ದೇಶಕನಾಗಿ ಯಾಕೆ ಮಾಡಿದ್ದು ಅನ್ನೋದನ್ನು ಬರೆಯಲೇಬೇಕು ( ಅದನ್ನು ಓದುವುದು ನಿಮ್ಮ ಕರ್ಮ ಅಂದುಕೊಳ್ಳಿ). ಅದೇನೋ ಇತ್ತೀಚಿಗೆ ಧರ್ಮ ಅಸಹಿಷ್ಣುತೆ ಜಾಸ್ತಿ ಆಗ್ತಾ ಅಂತ ತುಂಬಾ ಕಡೆ ಕೇಳಿ ಬರುತ್ತಿದೆ .ಅದೇನೋ ಗೊತ್ತಿಲ್ಲ ನಾನಂತೂ ಚಡ್ಡಿ ಹಾಕೊಳೋಕೆ ಹಠ ಮಾಡ್ತಾ ಇದ್ದ ಟೈಮ್ ನಿಂದ ಹಿಡಿದು , ಮೀಸೆ ಗಡ್ಡ ತೆಗೆಯೋ ಟೈಮ್ ತನಕ ಧರ್ಮದಲ್ಲಿ ಹೆಸರಲ್ಲಿ ಹೊಡೆದಾಡುತ್ತಿರುವುದನ್ನು ನೋಡುತ್ತಲೇ ಇದ್ದೇನೆ .ಅದ್ದರಿಂದ ನಮ್ಮವರು ಎಲ್ಲಿಯ ತನಕ ಧರ್ಮದ ಹೆಸರಿನಲ್ಲಿ ಹೊಡೆದಾಡುತ್ತಾ ಇರುತ್ತಾರೋ , ಅಲ್ಲಿಯ ತನಕ ಆಗಂತುಕ ತರಹದ ಚಿತ್ರಗಳು, ಜನಗಳ ಮನಸಿನಲ್ಲಿ ಜಾಗೃತಿ ಮೂಡಿಸುವ ಬರಹಗಳು ಹೀಗೆ ಹತ್ತು ಹಲವು ಬರುತ್ತಲೇ ಇರಬೇಕು. ಜನ ಧರ್ಮ ದ ಹೆಸರಲ್ಲಿ ಕಿತ್ತಾಡುತ್ತಾ ಇರೋ ತನಕ ಅದು ಹಳೆಯ ವಿಷಯ ಅನ್ನಿಸದೇ ,ಪ್ರಸ್ತುತ ಅನ್ನಿಸುತ್ತದೆ .

ಇನ್ನು ಇತ್ತೀಚಿನ ದಿನಗಳಲ್ಲಿ ಜನ ಒಂದು ವಿಷಯವನ್ನು ಕೇಳಿದ ಕೂಡಲೇ ,ಆ ವಿಷಯದಲ್ಲಿ ಎಷ್ಟು ಸತ್ಯ ಅಡಗಿದೆ ಅನ್ನುವ ಪರಿಗೆ ಹೋಗದೇ ತಮ್ಮ ನಿರ್ಧಾರಕ್ಕೆ ಬಂದು ಬಿಡುತ್ತಾರೆ .ಅದರಲ್ಲೂ ಈ face book,twitter,watsapp ಯುಗದಲ್ಲಿ ಜನ ಸಾಮಾಜಿಕ ಜಾಲತಾಣಗಳಲ್ಲಿ ಬಂದ ಪೋಸ್ಟ್ ಗಳೇ ನಿಜ ಅಂದುಕೊಳ್ಳುತ್ತಾರೆ . ಅಷ್ಟೇ ಅಲ್ಲಾ ತಮ್ಮ ಅಭಿಪ್ರಾಯವನ್ನು ತುಂಬಾ ಸಲೀಸಾಗಿ ಹೇಳಬಹುದಾಗಿ ಬಂದಿರುವದರಿಂದ , ಅದರಲ್ಲೂ ಪೋಸ್ಟ್ ಮಾಡಿದರೆ ಪ್ರಸ್ತುತ ಅನ್ನಿಸಿಕೊಳ್ಳುತ್ತೇವೆ ಅನ್ನುವ ಕಾರಣಕ್ಕೆ ಜನ ಯೋಚನೆ ಮಾಡುವುದನ್ನೇ ಬಿಟ್ಟಿದ್ದಾರೆ. ಇದು ಮೊದಲಿಂದಲೂ ಮಾನವನಲ್ಲಿ ಬಂದಿದೆ . ಮೇಲಿನದು ಪ್ರಸ್ತುತ ಉದಾಹರಣೆ ಅಷ್ಟೇ . ಇದರ ಹಳೆಯ ಅವತರಣಿಕೆ ಒಬ್ಬ ಮನುಷ್ಯನ ರೂಪ ನೋಡಿ ಅವನ ಗುಣ ಅಳಿಯುವುದು. ಉದಾಹರಣೆಗೆ ಒಬ್ಬ ಕಪ್ಪಿಗಿದ್ದರೆ ಕಳ್ಳ , ಕುಳ್ಳಗಿದ್ದರೆ ಅಪಹಾಸ್ಯದ ವಸ್ತುವಿನ ಹಾಗೆ .ಜನ ಒಬ್ಬ ಮನುಷ್ಯನ ವ್ಯಕ್ತಿತ್ವದ ಮಾನದಂಡವನ್ನು ಬರಿಯ ರೂಪಕ್ಕೆ ಸೀಮಿತಗೊಳಿಸದೇ ಮನದೊಳಗೆ ಇಳಿಯಬೇಕು. ಆಗಲೇ ಅದಕ್ಕೆ ಒಂದು ಅರ್ಥ ಬರುವುದು. ಇದೇನಮ್ಮ ಆಗಂತುಕ ಚಿತ್ರದ ಸಂದೇಶ .

ಇಲ್ಲಿ ಮುಸ್ಲಿಂ ಗಡ್ಡ ದಾರಿ ನೋಡಿ ,ತನ್ನದೇ ಲೆಕ್ಕ ಚಾರಗಳಲ್ಲಿ ನಾಯಕ ಮುಳುಗಿ ಹೋಗಿರುತ್ತಾನೆ . ಸುತ್ತ ಮುತ್ತ ನಡೆಯುತ್ತಿರುವ ಸನ್ನಿವೇಶಗಳ ಆಧಾರದ ಮೇಲೆ ಗಡ್ಡ ಧಾರಿಯನ್ನು ಕೆಟ್ಟವನಂತೇ ನೋಡುತ್ತಿರುತ್ತಾನೆ . ಅದಕ್ಕೆ ಪೂರಕವೆಂಬಂತೆ tv ಯಲ್ಲಿ ಬರುವ ಕಾರ್ಯಕ್ರಮಗಳು ಅವನ ಸಂದೇಹದ ಹೋಳಿಗೆಗೆ ಹೂರಣ ತುಂಬಿಸುವ ಕಾಯಕ ಮಾಡುತ್ತಿರುತ್ತದೆ .ಇತ್ತೀಚಿನ tv ಕಾರ್ಯಕ್ರಮಗಳು ಬರಿ ಮನರಂಜನೆ , ಸುದ್ದಿ ಬಿತ್ತರಿಸದೆ ಭಯ ಬಿತ್ತರಿಸುತ್ತಿವೆ . ಅದಕ್ಕೆ tv ನ್ಯೂಸ್ ಆಗಂತುಕದಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.

ಒಟ್ಟಿನಲ್ಲಿ ಇನ್ನು ನಿರ್ದೇಶಕನಾಗಿ ನನಗೆ ಆಗಂತುಕ ಚಿತ್ರ ೫೦ ಪರ್ಸೆಂಟ್ ಅಷ್ಟೇ ಸಮಾಧಾನ ಕೊಟ್ಟಿದೆ .ಕಾರಣಾಂತರ ಗಳಿಂದಾಗಿ ನಾನು ಅಂದುಕೊಂಡ ಕೆಲವು ಅಂಶಗಳು ಅಳವಡಿಸಿಕೊಳ್ಳಲು ಆಗಲಿಲ್ಲ. ಇರಲಿ ಒಳ್ಳೆಯ ಕಿರುಚಿತ್ರ ಕೊಡಲು ನಾನು ಪ್ರಯತ್ನಿಸುತ್ತೇ ಇರುತ್ತೇನೆ ನಿಮ್ಮಸಹಕಾರ ಬೇಕು ಅಷ್ಟೇ.
Youtube link ..
https://www.youtube.com/watch?v=0zPakyqLRpA







English Summary ;
When I first narrated the story of Agantuka to my close friend, he didn't like the story .He told that this is an old story and asked me to drop the idea. But t I had already made my decision in my heart ,that I would go with this movie .What I had in my mind was short films with festival background are very less in Kannada .So,  releasing a short movie with festival background and a social message would be  a great idea.And people may like it and it may create sensation.(Later ,all my calculations went wrong).
                  I would like to thank all my team who worked for this movie .As a director , why I  chose agantuka ? There are many reasons. Movie which preaches not to fight in name of religion will be never never become cliche ,until people stop fighting in name of religion. And nowadays people are growing so impatience ,especially in social media ,they are reacting towards a matter without even checking authencity of the posts.TV channels are busy in promoting negativity .Somewhere, we are strongly becoming  victims of prejudice.And sometimes this is leading to communal tensions.
So, Agantuka movie tries to deliver a message by telling the lamp should be lit inside our heart and come out of prejudice fort .




ಮಂಗಳವಾರ, ಜನವರಿ 6, 2015

ನಾಣಿ ಕಂಡಂತೆ MR AND MRS ರಾಮಾಚಾರಿ

  ಈ ಲೇಖನ ಓದುವ ಮುಂಚೆ ನಿಮಗೆ ಒಂದು ಮಾತು ಹೇಳಿಬಿಡುತ್ತೇನೆ MR AND MRS  ರಾಮಾಚಾರಿ ಕಳೆದ ವರ್ಷ ಬಂದ ಅತ್ತ್ಯುತ್ತಮ ಮಾಸ್ ಚಿತ್ರಗಳಲ್ಲಿ ಒಂದು . ಮನೆಮಂದಿ ಎಲ್ಲರು ಒಟ್ಟಿಗೇ ಕೂತುಕೊಂಡು ನೋಡಬಹುದಾದ ಚಿತ್ರ .
                       ಆದರೆ ನಮ್ಮ  ನಾಣಿ ಇದಾನಲ್ಲ  ಅವನ ನಾಲಿಗೆ ಸುಮ್ನಿರಲ್ಲ . ಅದಕ್ಕೆ ಏನಾದ್ರೂ ಕಮೆಂಟ್ ಮಾಡ್ಲಿಲ್ಲ ಅಂದರೆ ಸಮಾಧಾನ ಅನ್ನೋದೇ ಇಲ್ಲ . ನಾಣಿಯ ನಾಲಿಗೆ ಯಿಂದ ಬರೋ ಕಾಮೆಂಟ್ಸ್ ಕೇಳ್ತಾ ಇದ್ದರೆ ಕೇಳ್ತಾ ಇರ್ಬೇಕು ಅನ್ನಿಸುತ್ತೆ . ಅದರಲ್ಲೂ ಆತ ಎಣ್ಣೆ ಹೊಡೆದಾಗ ,ಅವನ ಬಾಯಿಂದ ಬರೋ ಮಾತುಗಳು ಚಿಕನ್ ವಿಂಗ್ಸ್ ಗಿಂತ ಜಾಸ್ತಿ TASTY ಇರುತ್ತೆ .
*************************************************************************

       JOCKEY ಬಾಕ್ಸರ್ ಹಾಕಿಕೊಂಡು ,ತನ್ನ ತೋರು ಹೊಟ್ಟೆಯನ್ನು ಸಿಕ್ಸ್ ಪ್ಯಾಕ್ ರೇಂಜ್ ಗೆ ತೋರಿಸಿಕೊಂಡು ತನ್ನ ರೂಮಿನಲ್ಲಿ ಎಣ್ಣೆ ಹೊಡೆಯಲು ಶುರು ಮಾಡಿದ್ದ .   ಜೊತೆಗೆ ನೆಂಚಿ ಕೊಳ್ಳೋಕೆ  ಪಕ್ಕದ ಬೀದಿಯಲ್ಲಿ ಸಿಗುವ ಗೋಬಿ ಮಂಚೂರಿ    ಹಾಗು ಎಣ್ಣೆಗೆ ಸಾಥ್ ಕೊಡಲು ಅವನ ಗೆಳೆಯ ಮಾಣಿ . ಒಂದನೇ ಗ್ಲಾಸ್ ಇಳಿಸು ವಷ್ಟ್ರಲ್ಲಿ ಮಾಣಿ ಪ್ರಶ್ನೆಯ ಬಾಣ ಬಿಟ್ಟ .

ಮಾಣಿ : ಅಣ್ಣ , ಹೆಂಗಿದೆ ಫಿಲಂ ..?

ನಾಣಿ : ಚೆನ್ನಾಗಿದೆ ಕಾನ್ಲಾ...
  (ಮಾಣಿ ಗೆ ಆಶ್ಚರ್ಯ ಆಯಿತು ..ಏನು ಇಷ್ಟಕ್ಕೆ ನಿಲ್ಲಿಸಿ ಬಿಟ್ಟನಲ್ಲ ಅಂತ ..ಆದರೆ ನಾಣಿ ಇನ್ನು ಮುಗಿಸಿರಿಲ್ಲ )
 ಅದೇ ಲವ್ ಸ್ಟೋರಿ , ನಮ್ಮವುಕೆ ಅದು ಬಿಟ್ಟರೆ ಬೇರೆ ದೇನು ಬರುತ್ತೆ ಹೇಳು ... ಸ್ಯಾಂಡಲ್ ವುಡ್ ನಲ್ಲಿ   ಇರೋದೇ ಮೂರು ಕಥೆ ಲವ್ ಸ್ಟೋರಿ , ರೆಬೆಲ್ ಸ್ಟೋರಿ ಇಲ್ಲ ರಿವೆಂಜ್ ಸ್ಟೋರಿ ..ಇವನ್ನೇ ಇಟ್ಟಕೊಂಡು ತಿರುಗ ಮುರಗ ಮಾಡಿ , ಸ್ವಲ್ಪ ಮಸಾಲೆ ಹಾಕಿ  , ಬೇರೆ   ನಾಯಕ ನಾಯಕಿ ನ ಹಾಕಿಕೊಂಡು , ಬೇರೆ ಬೇರೆ  location  ಅಲ್ಲಿ ತೆಗೀತಾರೆ. ಒಬ್ಬರು ಗರಂ ಮಸಾಲೆ ಹಾಕಿದ್ರೆ ,ಇನ್ನೊಬ್ಬರು    ರುಬ್ಬಿ ಹಾಕಿ ಮಾಡ್ತಾರೆ .
   ಇಲ್ಲಿ ಮಸಾಲೆ ಏನಪ್ಪಾ ಅಂದರೆ ನಾಯಕ  ವಿಷ್ಣು ಅದರಲ್ಲೂ ನಾಗರಹಾವು ರಾಮಚಾರಿ ಅಭಿಮಾನಿ . ಉಳಿದೆದ್ದಲ್ಲ ಅದೇ ಕಥೆ, ಅದೇ ವ್ಯಥೆ .ಪಾಪ ,ನಮ್ಮ ವಿಷ್ಣು ದಾದ ಹಣೆ ಬರಹ ನೋಡು .

ಮಾಣಿ : ಯಾಕಣ್ಣ ?

ನಾಣಿ :ವಿಷ್ಣು  ಅಭಿಮಾನಿಯಾಗಿ  ಇರೋ  ನಾಯಕ ಚಿತ್ರಗಳಲ್ಲಿ ನಾಯಕರನ್ನು ಒಂದು ಸಲ ಗಮನಿಸು . ವಿಷ್ಣುವರ್ಧನ್ ಫಿಲಂ ಅಲ್ಲಿ ಸುದೀಪ್ ನೋಡು ಕೆಲ್ಸಕ್ಕೆ ಬಾರದೆ ಇರೂ ಪುಂಡ ಪೋಕರಿ . ಇನ್ನು ಈ ಚಿತ್ರದಲ್ಲಿ ಅಷ್ಟೇ ,ಜೀವನದಲ್ಲಿ ಉದ್ಧಾರ ಆಗೋದಕ್ಕಿಂತ ನಾಯಕನಿಗೆ ಪ್ರೀತಿ ಯಲ್ಲಿ ಗೆಲ್ಲೋದು ಮುಖ್ಯ . ಪಾಪ, ನಮ್ಮ ವಿಷ್ಣು ದಾದ ಒಳ್ಳೆ ಆದರ್ಶ ಪುರುಷ ತರಹ ಬದುಕ್ಕಿದ್ದ್ರು .  ಆದರೆ ಚಿತ್ರಗಳಲ್ಲಿ  ಅವ್ರ ಅಭಿಮಾನಿಗಳನ್ನು ಅದ್ಯಾಕೆ ಹಂಗೆ ತೋರಿಸ್ತಾರೋ .. ಇನ್ನೊಂದು ಗೊತ್ತಾ  ಅವರು ಹೆಸರು ಹೇಳ್ಕೊಂಡು ಫಿಲ್ಮ ಮಾಡಿ ಕಾಸು ಮಾಡ್ತಾರೆ  ,ಆದ್ರೆ ಅವರ ಸಮಾಧಿ ಕಟ್ಟಿಸೋಕೆ ಆಗ್ತಾ ಇರೋ ತೊಂದರೆಗೆ ಯಾವನೂ ಮುಂದೆ ಬರೋಲ್ಲ ..

ಮಾಣಿ : ಈ ಯಶ್ ಗೂಗ್ಲಿ ಯಲ್ಲಿ ಶಂಕರ್ ಅಭಿಮಾನಿ , ಕಿರಾತಕದಲ್ಲಿ ಅಂಬಿ ಅಭಿಮಾನಿ ,ಗಜಕೇಸರಿ ಯಲ್ಲಿ ರಾಜಣ್ಣ ನ ಅಭಿಮಾನಿ ,ಇದ್ರಲ್ಲಿ ವಿಷ್ಣು ದಾದಾ ಅಭಿಮಾನಿ . ಆ ನಟರ fans ಸೆಳೆಯೋಕೆ ತಂತ್ರ ಅನ್ನಿಸಲ್ವಾ .. ಬರೀ ಬೇರೆ ನಾಯಕ ನಟರ ಹೆಸರು ಹೇಳ್ಕೊಂಡು ಹಿಟ್ ಕೊಡ್ತಾನೆ  ಅಂತಾರೆ ..

ನಾಣಿ : ಆ ನಟರ fans ಸೆಳೆಯೋಕೆ ತಂತ್ರ ಇರಬಹುದೇನೋ . ಆದ್ರೆ ನಟರ ಹೆಸರು ಹೇಳ್ಕೊಂಡು ಬದುಕ್ತಾನೆ ಅನ್ನೋದು ತಪ್ಪು ... ಹಾಗೆ ನೋಡಿದ್ರೆ ಅಂಬರೀಷ ಯಾಕೆ ಫ್ಲಾಪ್ ಆಯಿತು ...ಹುಡುಗ ಬೆಳಿತಾವನಲ್ಲ ಅದಕ್ಕೆ ಸಹಿಸ ಕೊಳ್ಳೋಕೆ ಆಗದೆ ಆಡ್ತಾ ಇರೂ ಮಾತು .. ಹಾಗಿದ್ದರು ಏನು ತಪ್ಪು .. ಫಿಲಂ ಹಿಟ್ ಆಗ್ತಾ ಇದ್ಯಲ್ಲ . ಅದು ಮುಖ್ಯ ... ಬ್ರಾಂಡ್ ಯಾವುದಾದ್ರೆ    ಏನ್ಲಾ ಎಣ್ಣೆದು , ಕಿಕ್ ಕೊಡೋದು ಮುಖ್ಯ ..

                                   ಆದ್ರೆ ಇದ್ಯಾವ್ದುಕ್ಕೆ ತಲೆ ಕೆಡಸಿತಾ ಇಲ್ಲ ಅನಿಸುತ್ತೆ ಯಶ್ . ತನ್ನ ಪಾಡಿಗೆ ತಾನು ಒಳ್ಳೆ ಚಿತ್ರ ಮಾಡಿ .ಒಂದರ ಹಿಂದೆ ಇನ್ನೊಂದು ಹಿಟ್ ಕೊಡ್ತಾ ತನ್ನ ವಿರೋಧಿಗಳ ಬಾಯಿ ಮುಚ್ಚಿಸಿದಾನೆ . ಅವ್ರಿಗೆ  ಟಾಂಗ್ ಕೊಡೋಕೆ   ಅಂತ ಒಂದಿಷ್ಟು  dialogue  ಇಟ್ಟಿದಾನೆ .


ಮಾಣಿ   : ಹೌದ ,ಯಾವುದಣ್ಣ?

ನಾಣಿ : " ಹೊಸಬರ ಬರಬೇಕೂ ".... ತಾವೇ ದೊಡ್ಡ ಸ್ಟಾರ್ಸ್ ಅಂತ ಅನ್ನಕೊಂಡು ಮೆರಿತಾ ಇರೋ ಹಳೆ ಸ್ಟಾರ್ಸ್ ಗೆ ,  " ಜಲೀಲ ನಾನೆ , ರಾಮಾಚಾರಿನೂ ನಾನೆ " "ನಾವು ಕ್ಲಾಸ್ ಅಲ್ಲಾ ಮಾಸ್ ",  " ನಾನು ಬಾರೋ ತನಕ ಬೇರೆಯವರ ಹವಾ "     ..  ನಾವು ಮಾಸ್ ಸ್ಟಾರ್ ಅಂತ ಹೇಳಿಕೊಂಡು ಓಡಾಡೋ ರಿಗೆ ಟಾಂಗ್ ಕೊಟ್ಟಿದಾನೆ .
ಅಷ್ಟೇ ಯಾಕೆ  "ನಾವಿಬ್ಬರೂ ಲವರ್ಸ್ , ಅದನ್ನವರು ಕೇಳಬಾರದು ,..." ಡೈಲಾಗ್   ರಾಧಿಕಾ ಹಾಗು ಯಶ್ ನಡುವೆ ಏನೋ ಇದೆ ಅಂತ   ಹೇಳುವವರಿಗೆ  ತಲೆಯಲ್ಲಿ ಹುಳ ಬಿಟ್ಟ ಹಾಗೂ ಆಗಿದೆ  ಜೊತೆಗೆ ನಿಮ್ಮಷ್ಟಕ್ಕೆ ನಿಮ್ಮ ಕೆಲಸ ನೋಡ್ಕೊಳ್ಳಿ ಅನ್ನೋ ಹಾಗೂ ಆಗಿದೆ ...

ಮಾಣಿ : ಹೌದಲ್ಲ ..ನಮಗೆ ಇದೆಲ್ಲ ತಲೆಗೆ ಹೋಗಲಿಲ್ಲ .. ಅದೇನೂ ರಾಷ್ಟ್ರ ಗೀತೆ ಇದೆ ಅಂತೆ ಮಧ್ಯೆ..


ನಾಣಿ : ಅದು ಏನಾಗಿದೆ ಇತ್ತೀಚಿಗೆ  ಪ್ರೇಕ್ಷಕರು ಜಾಣರು ಆಗ್ಬಿಟ್ಟಿದಾರೆ.. ಹಾಗೆ ಹೇಳೋದಕ್ಕಿಂತ ಈ ಮಾಮುಲು ಸ್ಟೋರಿ ನೋಡಿ ನೋಡಿ  used to  ಆಗ್ಬಿಟ್ಟಿದಾರೆ .. ಫಿಲಂ ಶುರು ಆಗಿ ೧೫ ನಿಮಿಷಕ್ಕೆ ಮುಂದೆ ಇದೇ ಕಥೆ ಅಂತ ಹೇಳೂ ಜನ , ಇದ್ರಲ್ಲಿ ಸ್ಪೆಷಲ್ ಏನೂ ಇಲ್ಲ atleast ಕೊಟ್ಟಿರೋ ಕಾಸಿಗೆ ac ಅಲ್ಲಿ ಒಳ್ಳೆ ನಿದ್ದೆ ಮಾಡೋಣ ಅಂತ ನಿದ್ದೆ ಹೋಗ್ಬಿಡ್ತಾರೆ . ಅದಕ್ಕೆ ಇದನ್ನರಿತ ನಮ್ಮ ನಿರ್ದೇಶಕರು ಅಂತವರನ್ನು ನಿದ್ದೆಯಿಂದ ಬಡಿದೆಬ್ಬಿಸೋಕೆ ಮಾಡಿರೋ ಐಡಿಯಾ ಇದು .ಸಾಮನ್ಯವಾಗಿ ನಿದ್ದೆ ಹೋಗಬಾರದು ಅಂತ  ಒಂದು   ಒಳ್ಳೆ ಐಟಂ ಸಾಂಗ್ ಅಥವ ಚಳಿ ಸಾಂಗ್ ಇಟ್ಟಿರ್ತಾರೆ. ಎಲ್ಲಿ ಫ್ಯಾಮಿಲಿ ಆಡಿಯನ್ಸ್ ಮಿಸ್ ಆಗ್ತಾರೋ ಅಂತ ಈ ತರಹ ಐಡಿಯಾ ನಮ್ಮ ನಿರ್ದೇಶಕರು ಮಾಡಿದಾರೆ .
     ಮೊದಲೆಲ್ಲ ನಮ್ಮ  ರಾಜಣ್ಣ time ಅಲ್ಲಿ ನಿದ್ದೆ ಬಿಟ್ಟು ಜನ ಟಿಕೆಟ್ ತಗೋತ ಇದ್ದರು .. ಈಗ ಟಿಕೆಟ್ ತಗೊಂಡು ಬಂದು ಒಳಗೇ ಕೂತೋರಿಗೆ  ನಿದ್ದೆಯಿಂದ  ಎಬ್ಬಿಸೋಕೆ ಏನೆಲ್ಲಾ ಪ್ಲಾನ್ ಮಾಡ್ಬೇಕು ನೋಡಿ ....

ಮಾಣಿ : ನನಗೇನೋ ದೇಶ ಭಕ್ತಿ ಮೆರ್ಯೋಕೆ ಹಾಕಿದರೆ ಅನಿಸುತ್ತೆ ...

ನಾಣಿ : ಸುಮ್ನಿರೋಲೆ ... ಆ  scene ಸರಿ ನೋಡಿದೆಯ ... ರಾಷ್ಟ್ರ ಗೀತೆ ಬರುತ್ತಾ ಇರುತ್ತೆ .. ಅಲ್ಲಿ  ನಾಯಕಿ ಗೆ ಲವ್ at first sight ,hero villian ಗಳು ಸ್ಕೆಚ್ ಹಾಕ್ತ ಇರ್ತಾರೆ ... ಇದಕ್ಕಾ  ಬೇಕು ರಾಷ್ಟ್ರಗೀತೆ ... ಪಾಪ ಎಣ್ಣೆ ಹೊಡ್ಕೊಂಡು ಹೋಗಿದ್ದ ನಮ್ಮ ಹುಡುಗ್ರು ಬ್ಯಾಲೆನ್ಸ್ ಮಾಡಿ ನಿಂತು ಕೊಳೋಕೆ ಆಗದೆ ಬಿದ್ದು ಒಂದಿಷ್ಟು ಜನಾದ್ದು ಹಲ್ಲು ಮುರಿದು  ಹೋಯಿತು ..
      ಆದರೂ   ಏನೇ ಹೇಳು ಅಲ್ಲಿ  ಇದ್ದಿದ್ದ  ಹಾಡುಗಳಲ್ಲಿ ಕೇಳೋ ಹಾಗೆ ಇದ್ದಿದ್ದು  ಅದೇ ಅನಿಸುತ್ತೆ ..

ಮಣಿ: ಯಾಕಣ್ಣ ?

ನಾಣಿ: ಹಂಸಲೇಖ ಮಾತನ್ನು ಹಾಡು ಮಾಡೋ ಶಕ್ತಿ ಇತ್ತು..ಈ ಹರಿ ಕೃಷ್ಣ ಎಲ್ಲಾ ಹಾಡನ್ನು ಮಾತು ತರಹ ಮಾಡ್ತಾನೆ ...ಅದೇ  ತಲೆ ಬುಡ ಇಲ್ಲದ ಲಿರಿಕ್ಸ್ .. ಅದೇ ಒಂದಿಷ್ಟು ನಾಲ್ಕೈದು ಟ್ಯೂನ್ ..ಕೇಳಿ ಕೇಳಿ ಸಾಕಾಗಿ ಹೋಗಿದೆ .. " lifebouy ಎಲಿದ್ಯೋ ಅಲ್ಲಿದೆ ಆರೋಗ್ಯ , ನೀನು ಸಿಕ್ಕೊರೋದು ನನ್ನ ಭಾಗ್ಯ " ... ಇಂತಹ ಲಿರಿಕ್ಸ್ ಕೇಳ್ತಾ ಇರೋದು ನಮ್ಮ ದೌರ್ಭಾಗ್ಯ ...

ಮಣಿ : ಈ ಫಿಲ್ಮ ಓಡ್ತಾ ಇದ್ಯಲ್ಲ .. ಹಿಟ್ ಆದ ಮೇಲೆ ಏನಾದರೂ  ಟ್ರೆಂಡ್ ಸೆಟ್ ಮಾಡುತ್ತೆ ಅಂತೀರಾ ?

ನಾಣಿ :ಹ್ಮ್ಮ್ ಇನ್ನೊಂದಿಷ್ಟು  ವಿಷ್ಣುವರ್ಧನ್ ಹೆಸರು ಹೇಳಿಕೊಂಡು ಫಿಲ್ಮಗಳು ಬರುತ್ತೆ ... ಅಪ್ಪ ಮಗಂದು ಸೆಂಟಿಮೆಂಟ್ ಹಿಟ್ ಆಗಿದೆ .. ಬಹುಷಃ ಪ್ರೇಂ ತಾಯಿ ಸೆಂಟಿಮೆಂಟ್ ಬಿಟ್ಟು ಈ ಟ್ರೆಂಡ್ ಫಾಲೋ ಮಾಡಬಹುದೇನೋ ... ಅಯ್ಯೋ ಏನೇ ಅದರೂ ನಮ್ಗ್ಯಾಕಾಪ್ಪ .?
ನೋಡು ಮೂರು  ತರಹ ಒಳ್ಳೆ ಸಿನಿಮಾಗಳು ಇರುತ್ತೆ
ಒಂದನೇದು ,  ಕನ್ನಡ ಚಲನಚಿತ್ರಕ್ಕೆ ಹೆಸರು  ತರೋ  ಫಿಲ್ಮಗಳು , ಅದು ಈಗ ಬರ್ತಾ ಇಲ್ಲ ,ಬಂದ್ರು  ನಮ್ಮವರು ಹತ್ತು ವರ್ಷ ಆದ ಮೇಲೆ ಬೇರೆ ಸಿನಿಮಾ ದವರು ಕಾಪಿ ಮಾಡಿದ ಮೇಲೇನೆ ಗುರುತಿಸೋದು ...
ಎರಡನೇದು  ಪ್ರಶಸ್ತಿ ತಂದುಕೊಡೋ ಸಿನಿಮಾಗಳು , ಅದನ್ನು ನೋಡೋಲ್ಲ ..
ಕೊನೆದಾಗಿ ಪ್ರೇಕ್ಷಕರಿಗೆ ಮೋಸ ಮಾಡದೇ ಇರೋ ಸಿನಿಮಾಗಳು ...ಮೂರನೇ ಪೈಕಿ ಸಿನಿಮಾ MR AND MRS  ರಾಮಾಚಾರಿ.



English summary : Naani is a fictonal character created by me who comments on  Kannada movies that is sandalwood movies . His comments become better  when he is drunk  . Maani ,his friend  who keeps asking questions about movies.
                                                                           This time they took dig at kannada movie yash and radhika starrer , MR and MRS ramachari. Naani found it's a good entertainer and mass movie and suitable to family audience .Even though story was the normal love story , the essence of vishnuvardhan's ramachari concept  added a new flavour to it . He was pissed off by the idea of adding national anthem ,  repetitive music and bad lyrics. He also praises about the rocking star yash's  stardom which is increasing day by day .










Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...