ಮಂಗಳವಾರ, ಜನವರಿ 6, 2015

ನಾಣಿ ಕಂಡಂತೆ MR AND MRS ರಾಮಾಚಾರಿ

  ಈ ಲೇಖನ ಓದುವ ಮುಂಚೆ ನಿಮಗೆ ಒಂದು ಮಾತು ಹೇಳಿಬಿಡುತ್ತೇನೆ MR AND MRS  ರಾಮಾಚಾರಿ ಕಳೆದ ವರ್ಷ ಬಂದ ಅತ್ತ್ಯುತ್ತಮ ಮಾಸ್ ಚಿತ್ರಗಳಲ್ಲಿ ಒಂದು . ಮನೆಮಂದಿ ಎಲ್ಲರು ಒಟ್ಟಿಗೇ ಕೂತುಕೊಂಡು ನೋಡಬಹುದಾದ ಚಿತ್ರ .
                       ಆದರೆ ನಮ್ಮ  ನಾಣಿ ಇದಾನಲ್ಲ  ಅವನ ನಾಲಿಗೆ ಸುಮ್ನಿರಲ್ಲ . ಅದಕ್ಕೆ ಏನಾದ್ರೂ ಕಮೆಂಟ್ ಮಾಡ್ಲಿಲ್ಲ ಅಂದರೆ ಸಮಾಧಾನ ಅನ್ನೋದೇ ಇಲ್ಲ . ನಾಣಿಯ ನಾಲಿಗೆ ಯಿಂದ ಬರೋ ಕಾಮೆಂಟ್ಸ್ ಕೇಳ್ತಾ ಇದ್ದರೆ ಕೇಳ್ತಾ ಇರ್ಬೇಕು ಅನ್ನಿಸುತ್ತೆ . ಅದರಲ್ಲೂ ಆತ ಎಣ್ಣೆ ಹೊಡೆದಾಗ ,ಅವನ ಬಾಯಿಂದ ಬರೋ ಮಾತುಗಳು ಚಿಕನ್ ವಿಂಗ್ಸ್ ಗಿಂತ ಜಾಸ್ತಿ TASTY ಇರುತ್ತೆ .
*************************************************************************

       JOCKEY ಬಾಕ್ಸರ್ ಹಾಕಿಕೊಂಡು ,ತನ್ನ ತೋರು ಹೊಟ್ಟೆಯನ್ನು ಸಿಕ್ಸ್ ಪ್ಯಾಕ್ ರೇಂಜ್ ಗೆ ತೋರಿಸಿಕೊಂಡು ತನ್ನ ರೂಮಿನಲ್ಲಿ ಎಣ್ಣೆ ಹೊಡೆಯಲು ಶುರು ಮಾಡಿದ್ದ .   ಜೊತೆಗೆ ನೆಂಚಿ ಕೊಳ್ಳೋಕೆ  ಪಕ್ಕದ ಬೀದಿಯಲ್ಲಿ ಸಿಗುವ ಗೋಬಿ ಮಂಚೂರಿ    ಹಾಗು ಎಣ್ಣೆಗೆ ಸಾಥ್ ಕೊಡಲು ಅವನ ಗೆಳೆಯ ಮಾಣಿ . ಒಂದನೇ ಗ್ಲಾಸ್ ಇಳಿಸು ವಷ್ಟ್ರಲ್ಲಿ ಮಾಣಿ ಪ್ರಶ್ನೆಯ ಬಾಣ ಬಿಟ್ಟ .

ಮಾಣಿ : ಅಣ್ಣ , ಹೆಂಗಿದೆ ಫಿಲಂ ..?

ನಾಣಿ : ಚೆನ್ನಾಗಿದೆ ಕಾನ್ಲಾ...
  (ಮಾಣಿ ಗೆ ಆಶ್ಚರ್ಯ ಆಯಿತು ..ಏನು ಇಷ್ಟಕ್ಕೆ ನಿಲ್ಲಿಸಿ ಬಿಟ್ಟನಲ್ಲ ಅಂತ ..ಆದರೆ ನಾಣಿ ಇನ್ನು ಮುಗಿಸಿರಿಲ್ಲ )
 ಅದೇ ಲವ್ ಸ್ಟೋರಿ , ನಮ್ಮವುಕೆ ಅದು ಬಿಟ್ಟರೆ ಬೇರೆ ದೇನು ಬರುತ್ತೆ ಹೇಳು ... ಸ್ಯಾಂಡಲ್ ವುಡ್ ನಲ್ಲಿ   ಇರೋದೇ ಮೂರು ಕಥೆ ಲವ್ ಸ್ಟೋರಿ , ರೆಬೆಲ್ ಸ್ಟೋರಿ ಇಲ್ಲ ರಿವೆಂಜ್ ಸ್ಟೋರಿ ..ಇವನ್ನೇ ಇಟ್ಟಕೊಂಡು ತಿರುಗ ಮುರಗ ಮಾಡಿ , ಸ್ವಲ್ಪ ಮಸಾಲೆ ಹಾಕಿ  , ಬೇರೆ   ನಾಯಕ ನಾಯಕಿ ನ ಹಾಕಿಕೊಂಡು , ಬೇರೆ ಬೇರೆ  location  ಅಲ್ಲಿ ತೆಗೀತಾರೆ. ಒಬ್ಬರು ಗರಂ ಮಸಾಲೆ ಹಾಕಿದ್ರೆ ,ಇನ್ನೊಬ್ಬರು    ರುಬ್ಬಿ ಹಾಕಿ ಮಾಡ್ತಾರೆ .
   ಇಲ್ಲಿ ಮಸಾಲೆ ಏನಪ್ಪಾ ಅಂದರೆ ನಾಯಕ  ವಿಷ್ಣು ಅದರಲ್ಲೂ ನಾಗರಹಾವು ರಾಮಚಾರಿ ಅಭಿಮಾನಿ . ಉಳಿದೆದ್ದಲ್ಲ ಅದೇ ಕಥೆ, ಅದೇ ವ್ಯಥೆ .ಪಾಪ ,ನಮ್ಮ ವಿಷ್ಣು ದಾದ ಹಣೆ ಬರಹ ನೋಡು .

ಮಾಣಿ : ಯಾಕಣ್ಣ ?

ನಾಣಿ :ವಿಷ್ಣು  ಅಭಿಮಾನಿಯಾಗಿ  ಇರೋ  ನಾಯಕ ಚಿತ್ರಗಳಲ್ಲಿ ನಾಯಕರನ್ನು ಒಂದು ಸಲ ಗಮನಿಸು . ವಿಷ್ಣುವರ್ಧನ್ ಫಿಲಂ ಅಲ್ಲಿ ಸುದೀಪ್ ನೋಡು ಕೆಲ್ಸಕ್ಕೆ ಬಾರದೆ ಇರೂ ಪುಂಡ ಪೋಕರಿ . ಇನ್ನು ಈ ಚಿತ್ರದಲ್ಲಿ ಅಷ್ಟೇ ,ಜೀವನದಲ್ಲಿ ಉದ್ಧಾರ ಆಗೋದಕ್ಕಿಂತ ನಾಯಕನಿಗೆ ಪ್ರೀತಿ ಯಲ್ಲಿ ಗೆಲ್ಲೋದು ಮುಖ್ಯ . ಪಾಪ, ನಮ್ಮ ವಿಷ್ಣು ದಾದ ಒಳ್ಳೆ ಆದರ್ಶ ಪುರುಷ ತರಹ ಬದುಕ್ಕಿದ್ದ್ರು .  ಆದರೆ ಚಿತ್ರಗಳಲ್ಲಿ  ಅವ್ರ ಅಭಿಮಾನಿಗಳನ್ನು ಅದ್ಯಾಕೆ ಹಂಗೆ ತೋರಿಸ್ತಾರೋ .. ಇನ್ನೊಂದು ಗೊತ್ತಾ  ಅವರು ಹೆಸರು ಹೇಳ್ಕೊಂಡು ಫಿಲ್ಮ ಮಾಡಿ ಕಾಸು ಮಾಡ್ತಾರೆ  ,ಆದ್ರೆ ಅವರ ಸಮಾಧಿ ಕಟ್ಟಿಸೋಕೆ ಆಗ್ತಾ ಇರೋ ತೊಂದರೆಗೆ ಯಾವನೂ ಮುಂದೆ ಬರೋಲ್ಲ ..

ಮಾಣಿ : ಈ ಯಶ್ ಗೂಗ್ಲಿ ಯಲ್ಲಿ ಶಂಕರ್ ಅಭಿಮಾನಿ , ಕಿರಾತಕದಲ್ಲಿ ಅಂಬಿ ಅಭಿಮಾನಿ ,ಗಜಕೇಸರಿ ಯಲ್ಲಿ ರಾಜಣ್ಣ ನ ಅಭಿಮಾನಿ ,ಇದ್ರಲ್ಲಿ ವಿಷ್ಣು ದಾದಾ ಅಭಿಮಾನಿ . ಆ ನಟರ fans ಸೆಳೆಯೋಕೆ ತಂತ್ರ ಅನ್ನಿಸಲ್ವಾ .. ಬರೀ ಬೇರೆ ನಾಯಕ ನಟರ ಹೆಸರು ಹೇಳ್ಕೊಂಡು ಹಿಟ್ ಕೊಡ್ತಾನೆ  ಅಂತಾರೆ ..

ನಾಣಿ : ಆ ನಟರ fans ಸೆಳೆಯೋಕೆ ತಂತ್ರ ಇರಬಹುದೇನೋ . ಆದ್ರೆ ನಟರ ಹೆಸರು ಹೇಳ್ಕೊಂಡು ಬದುಕ್ತಾನೆ ಅನ್ನೋದು ತಪ್ಪು ... ಹಾಗೆ ನೋಡಿದ್ರೆ ಅಂಬರೀಷ ಯಾಕೆ ಫ್ಲಾಪ್ ಆಯಿತು ...ಹುಡುಗ ಬೆಳಿತಾವನಲ್ಲ ಅದಕ್ಕೆ ಸಹಿಸ ಕೊಳ್ಳೋಕೆ ಆಗದೆ ಆಡ್ತಾ ಇರೂ ಮಾತು .. ಹಾಗಿದ್ದರು ಏನು ತಪ್ಪು .. ಫಿಲಂ ಹಿಟ್ ಆಗ್ತಾ ಇದ್ಯಲ್ಲ . ಅದು ಮುಖ್ಯ ... ಬ್ರಾಂಡ್ ಯಾವುದಾದ್ರೆ    ಏನ್ಲಾ ಎಣ್ಣೆದು , ಕಿಕ್ ಕೊಡೋದು ಮುಖ್ಯ ..

                                   ಆದ್ರೆ ಇದ್ಯಾವ್ದುಕ್ಕೆ ತಲೆ ಕೆಡಸಿತಾ ಇಲ್ಲ ಅನಿಸುತ್ತೆ ಯಶ್ . ತನ್ನ ಪಾಡಿಗೆ ತಾನು ಒಳ್ಳೆ ಚಿತ್ರ ಮಾಡಿ .ಒಂದರ ಹಿಂದೆ ಇನ್ನೊಂದು ಹಿಟ್ ಕೊಡ್ತಾ ತನ್ನ ವಿರೋಧಿಗಳ ಬಾಯಿ ಮುಚ್ಚಿಸಿದಾನೆ . ಅವ್ರಿಗೆ  ಟಾಂಗ್ ಕೊಡೋಕೆ   ಅಂತ ಒಂದಿಷ್ಟು  dialogue  ಇಟ್ಟಿದಾನೆ .


ಮಾಣಿ   : ಹೌದ ,ಯಾವುದಣ್ಣ?

ನಾಣಿ : " ಹೊಸಬರ ಬರಬೇಕೂ ".... ತಾವೇ ದೊಡ್ಡ ಸ್ಟಾರ್ಸ್ ಅಂತ ಅನ್ನಕೊಂಡು ಮೆರಿತಾ ಇರೋ ಹಳೆ ಸ್ಟಾರ್ಸ್ ಗೆ ,  " ಜಲೀಲ ನಾನೆ , ರಾಮಾಚಾರಿನೂ ನಾನೆ " "ನಾವು ಕ್ಲಾಸ್ ಅಲ್ಲಾ ಮಾಸ್ ",  " ನಾನು ಬಾರೋ ತನಕ ಬೇರೆಯವರ ಹವಾ "     ..  ನಾವು ಮಾಸ್ ಸ್ಟಾರ್ ಅಂತ ಹೇಳಿಕೊಂಡು ಓಡಾಡೋ ರಿಗೆ ಟಾಂಗ್ ಕೊಟ್ಟಿದಾನೆ .
ಅಷ್ಟೇ ಯಾಕೆ  "ನಾವಿಬ್ಬರೂ ಲವರ್ಸ್ , ಅದನ್ನವರು ಕೇಳಬಾರದು ,..." ಡೈಲಾಗ್   ರಾಧಿಕಾ ಹಾಗು ಯಶ್ ನಡುವೆ ಏನೋ ಇದೆ ಅಂತ   ಹೇಳುವವರಿಗೆ  ತಲೆಯಲ್ಲಿ ಹುಳ ಬಿಟ್ಟ ಹಾಗೂ ಆಗಿದೆ  ಜೊತೆಗೆ ನಿಮ್ಮಷ್ಟಕ್ಕೆ ನಿಮ್ಮ ಕೆಲಸ ನೋಡ್ಕೊಳ್ಳಿ ಅನ್ನೋ ಹಾಗೂ ಆಗಿದೆ ...

ಮಾಣಿ : ಹೌದಲ್ಲ ..ನಮಗೆ ಇದೆಲ್ಲ ತಲೆಗೆ ಹೋಗಲಿಲ್ಲ .. ಅದೇನೂ ರಾಷ್ಟ್ರ ಗೀತೆ ಇದೆ ಅಂತೆ ಮಧ್ಯೆ..


ನಾಣಿ : ಅದು ಏನಾಗಿದೆ ಇತ್ತೀಚಿಗೆ  ಪ್ರೇಕ್ಷಕರು ಜಾಣರು ಆಗ್ಬಿಟ್ಟಿದಾರೆ.. ಹಾಗೆ ಹೇಳೋದಕ್ಕಿಂತ ಈ ಮಾಮುಲು ಸ್ಟೋರಿ ನೋಡಿ ನೋಡಿ  used to  ಆಗ್ಬಿಟ್ಟಿದಾರೆ .. ಫಿಲಂ ಶುರು ಆಗಿ ೧೫ ನಿಮಿಷಕ್ಕೆ ಮುಂದೆ ಇದೇ ಕಥೆ ಅಂತ ಹೇಳೂ ಜನ , ಇದ್ರಲ್ಲಿ ಸ್ಪೆಷಲ್ ಏನೂ ಇಲ್ಲ atleast ಕೊಟ್ಟಿರೋ ಕಾಸಿಗೆ ac ಅಲ್ಲಿ ಒಳ್ಳೆ ನಿದ್ದೆ ಮಾಡೋಣ ಅಂತ ನಿದ್ದೆ ಹೋಗ್ಬಿಡ್ತಾರೆ . ಅದಕ್ಕೆ ಇದನ್ನರಿತ ನಮ್ಮ ನಿರ್ದೇಶಕರು ಅಂತವರನ್ನು ನಿದ್ದೆಯಿಂದ ಬಡಿದೆಬ್ಬಿಸೋಕೆ ಮಾಡಿರೋ ಐಡಿಯಾ ಇದು .ಸಾಮನ್ಯವಾಗಿ ನಿದ್ದೆ ಹೋಗಬಾರದು ಅಂತ  ಒಂದು   ಒಳ್ಳೆ ಐಟಂ ಸಾಂಗ್ ಅಥವ ಚಳಿ ಸಾಂಗ್ ಇಟ್ಟಿರ್ತಾರೆ. ಎಲ್ಲಿ ಫ್ಯಾಮಿಲಿ ಆಡಿಯನ್ಸ್ ಮಿಸ್ ಆಗ್ತಾರೋ ಅಂತ ಈ ತರಹ ಐಡಿಯಾ ನಮ್ಮ ನಿರ್ದೇಶಕರು ಮಾಡಿದಾರೆ .
     ಮೊದಲೆಲ್ಲ ನಮ್ಮ  ರಾಜಣ್ಣ time ಅಲ್ಲಿ ನಿದ್ದೆ ಬಿಟ್ಟು ಜನ ಟಿಕೆಟ್ ತಗೋತ ಇದ್ದರು .. ಈಗ ಟಿಕೆಟ್ ತಗೊಂಡು ಬಂದು ಒಳಗೇ ಕೂತೋರಿಗೆ  ನಿದ್ದೆಯಿಂದ  ಎಬ್ಬಿಸೋಕೆ ಏನೆಲ್ಲಾ ಪ್ಲಾನ್ ಮಾಡ್ಬೇಕು ನೋಡಿ ....

ಮಾಣಿ : ನನಗೇನೋ ದೇಶ ಭಕ್ತಿ ಮೆರ್ಯೋಕೆ ಹಾಕಿದರೆ ಅನಿಸುತ್ತೆ ...

ನಾಣಿ : ಸುಮ್ನಿರೋಲೆ ... ಆ  scene ಸರಿ ನೋಡಿದೆಯ ... ರಾಷ್ಟ್ರ ಗೀತೆ ಬರುತ್ತಾ ಇರುತ್ತೆ .. ಅಲ್ಲಿ  ನಾಯಕಿ ಗೆ ಲವ್ at first sight ,hero villian ಗಳು ಸ್ಕೆಚ್ ಹಾಕ್ತ ಇರ್ತಾರೆ ... ಇದಕ್ಕಾ  ಬೇಕು ರಾಷ್ಟ್ರಗೀತೆ ... ಪಾಪ ಎಣ್ಣೆ ಹೊಡ್ಕೊಂಡು ಹೋಗಿದ್ದ ನಮ್ಮ ಹುಡುಗ್ರು ಬ್ಯಾಲೆನ್ಸ್ ಮಾಡಿ ನಿಂತು ಕೊಳೋಕೆ ಆಗದೆ ಬಿದ್ದು ಒಂದಿಷ್ಟು ಜನಾದ್ದು ಹಲ್ಲು ಮುರಿದು  ಹೋಯಿತು ..
      ಆದರೂ   ಏನೇ ಹೇಳು ಅಲ್ಲಿ  ಇದ್ದಿದ್ದ  ಹಾಡುಗಳಲ್ಲಿ ಕೇಳೋ ಹಾಗೆ ಇದ್ದಿದ್ದು  ಅದೇ ಅನಿಸುತ್ತೆ ..

ಮಣಿ: ಯಾಕಣ್ಣ ?

ನಾಣಿ: ಹಂಸಲೇಖ ಮಾತನ್ನು ಹಾಡು ಮಾಡೋ ಶಕ್ತಿ ಇತ್ತು..ಈ ಹರಿ ಕೃಷ್ಣ ಎಲ್ಲಾ ಹಾಡನ್ನು ಮಾತು ತರಹ ಮಾಡ್ತಾನೆ ...ಅದೇ  ತಲೆ ಬುಡ ಇಲ್ಲದ ಲಿರಿಕ್ಸ್ .. ಅದೇ ಒಂದಿಷ್ಟು ನಾಲ್ಕೈದು ಟ್ಯೂನ್ ..ಕೇಳಿ ಕೇಳಿ ಸಾಕಾಗಿ ಹೋಗಿದೆ .. " lifebouy ಎಲಿದ್ಯೋ ಅಲ್ಲಿದೆ ಆರೋಗ್ಯ , ನೀನು ಸಿಕ್ಕೊರೋದು ನನ್ನ ಭಾಗ್ಯ " ... ಇಂತಹ ಲಿರಿಕ್ಸ್ ಕೇಳ್ತಾ ಇರೋದು ನಮ್ಮ ದೌರ್ಭಾಗ್ಯ ...

ಮಣಿ : ಈ ಫಿಲ್ಮ ಓಡ್ತಾ ಇದ್ಯಲ್ಲ .. ಹಿಟ್ ಆದ ಮೇಲೆ ಏನಾದರೂ  ಟ್ರೆಂಡ್ ಸೆಟ್ ಮಾಡುತ್ತೆ ಅಂತೀರಾ ?

ನಾಣಿ :ಹ್ಮ್ಮ್ ಇನ್ನೊಂದಿಷ್ಟು  ವಿಷ್ಣುವರ್ಧನ್ ಹೆಸರು ಹೇಳಿಕೊಂಡು ಫಿಲ್ಮಗಳು ಬರುತ್ತೆ ... ಅಪ್ಪ ಮಗಂದು ಸೆಂಟಿಮೆಂಟ್ ಹಿಟ್ ಆಗಿದೆ .. ಬಹುಷಃ ಪ್ರೇಂ ತಾಯಿ ಸೆಂಟಿಮೆಂಟ್ ಬಿಟ್ಟು ಈ ಟ್ರೆಂಡ್ ಫಾಲೋ ಮಾಡಬಹುದೇನೋ ... ಅಯ್ಯೋ ಏನೇ ಅದರೂ ನಮ್ಗ್ಯಾಕಾಪ್ಪ .?
ನೋಡು ಮೂರು  ತರಹ ಒಳ್ಳೆ ಸಿನಿಮಾಗಳು ಇರುತ್ತೆ
ಒಂದನೇದು ,  ಕನ್ನಡ ಚಲನಚಿತ್ರಕ್ಕೆ ಹೆಸರು  ತರೋ  ಫಿಲ್ಮಗಳು , ಅದು ಈಗ ಬರ್ತಾ ಇಲ್ಲ ,ಬಂದ್ರು  ನಮ್ಮವರು ಹತ್ತು ವರ್ಷ ಆದ ಮೇಲೆ ಬೇರೆ ಸಿನಿಮಾ ದವರು ಕಾಪಿ ಮಾಡಿದ ಮೇಲೇನೆ ಗುರುತಿಸೋದು ...
ಎರಡನೇದು  ಪ್ರಶಸ್ತಿ ತಂದುಕೊಡೋ ಸಿನಿಮಾಗಳು , ಅದನ್ನು ನೋಡೋಲ್ಲ ..
ಕೊನೆದಾಗಿ ಪ್ರೇಕ್ಷಕರಿಗೆ ಮೋಸ ಮಾಡದೇ ಇರೋ ಸಿನಿಮಾಗಳು ...ಮೂರನೇ ಪೈಕಿ ಸಿನಿಮಾ MR AND MRS  ರಾಮಾಚಾರಿ.



English summary : Naani is a fictonal character created by me who comments on  Kannada movies that is sandalwood movies . His comments become better  when he is drunk  . Maani ,his friend  who keeps asking questions about movies.
                                                                           This time they took dig at kannada movie yash and radhika starrer , MR and MRS ramachari. Naani found it's a good entertainer and mass movie and suitable to family audience .Even though story was the normal love story , the essence of vishnuvardhan's ramachari concept  added a new flavour to it . He was pissed off by the idea of adding national anthem ,  repetitive music and bad lyrics. He also praises about the rocking star yash's  stardom which is increasing day by day .










ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...