ಇವತ್ತು ನಾನೊಬ್ಬ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದೇನೆ .ಇವನು ರಾಜಕಾರಣಿಯಲ್ಲ, ನಟನಲ್ಲ , ಆಟಗಾರನಲ್ಲ , ಶ್ರೀಮಂತನಲ್ಲ ,ಬಡವನಲ್ಲ ನಿಜ ಹೇಳಬೇಕಂದರೆ ಅವನು ಯಾವ ಪ್ರಸಿದ್ಧ ವ್ಯಕ್ತಿಯಲ್ಲ .ಯಾವುದೇ ಒಂದು ದೇಶಕ್ಕೆ ಅಥವಾ ಭಾಷೆಗೆ ಅಥವಾ ಯಾವುದೇ ಒಂದು ರಂಗಕ್ಕೆ ಸಂಭಂದ ಪಟ್ಟವನಲ್ಲ.ಆದರೆ ಅವನು ನಮ್ಮೆಲ್ಲರಿಗೂ ಸಂಭಂದ ಪಟ್ಟವನು.ಅವನು ನಮ್ಮಲ್ಲೇ ನಮ್ಮೊಳಗೇ ಇರುವವನು .ನಮ್ಮೊಳಗೇ ಇದ್ದು ವಿಚಿತ್ರ ಸಲಹೆ ಕೊಡುವವನು .
ಹೌದು . ನಮ್ಮೆಲ್ಲರ ಒಳಗೊಬ್ಬ ಅಂದರೆ ನಮ್ಮ ಮನಸಿನೊಳಗೆ ಆ ರೀತಿಯ ಸಲಹೆ ಕೊಡುವ ವ್ಯಕ್ತಿ ಇರುತ್ತಾನೆ. ನಮ್ಮ ಬಾಲ್ಯದಿಂದಲೂ ನಾವು ಸಾಯುವ ತನಕವೂ ಅವನು ನಮ್ಮ ಜೊತೆ ಇರುತ್ತಾನೆ .ಆ ವ್ಯಕ್ತಿ ಕೊಡುವ ಅ ರೀತಿಯ ಸಲಹೆಗಳು ಬಹು ವಿಚಿತ್ರವಾದದ್ದು. ಸ್ವಲ್ಪ ಹುಚ್ಚುತನ ಇರುತ್ತದೆ ,ಪೋಲಿತನ ಇರುತ್ತದೆ . ಲೋಕದವರು ಒಂದೆಡೆ ಸಾಗಿದರೆ ಇನ್ನೊಂದು ಕಡೆ ಹೋಗುವಂತ ಬಂಡತನ ಇರುತ್ತದೆ .ನಮ್ಮನ್ನೇ ನಾವು ಆವಲೋಕಿಸಿಕೊಳ್ಳುವ ಅವಕಾಶಗಳು ಇರುತ್ತವೆ .ಸ್ವಲ್ಪ ಅಪಾಯ ,ಅಷ್ಟೇ ಮಜಾ ಇರುತ್ತದೆ .ಆದರೆ ಅವೆಲ್ಲಾ ಜೊತೆಗೆ ಆ ಸಲಹೆಗಳಂತೆ ನಡೆದರೆ ಲೋಕದವರು ನಮ್ಮನ್ನು ಹುಚ್ಚರಂತೆ ಕಾಣುವ ಸಾಧ್ಯತೆಗಳು ಇರುತ್ತದೆ .
ಹೌದು ಮತ್ತಿನ್ನೇನು?ಆ ವ್ಯಕ್ತಿ ನಮ್ಮ ತಲೆಗೆ ತೂರಿಬಿಡುವ ಸಲಹೆಗಳೇ ಹಾಗಿರುತ್ತವೆ . ಅದೆಲ್ಲಿಯೂ ಯಾವುದೋ ಹಬ್ಬದಲ್ಲಿ ಡೊಳ್ಳು ಬಾರಿಸಿದರೆ ಹೋಗಿ ಮನದಣಿಯೆ ಕುಣಿ ಅನ್ನುತ್ತಾನೆ .ನಿಸರ್ಗದ ಮಡಿಲಲ್ಲಿ ಹೋಗಿ ಜೋರಾಗಿ ಏಳು ಸಲ ನಿನ್ನ ಹೆಸರನ್ನೇ ಜೋರಾಗಿ ಕೂಗಿ ಪ್ರತಿಧ್ವನಿಯನ್ನು ಕೇಳು ಅನ್ನುತ್ತಾನೆ .ಸಂಸಾರದ ಕಾಟ ನಮ್ಮನ್ನು ಕಾಡಿ ಕಾಡಿ ತಿನ್ನುತ್ತಿರುವಾಗ , ಎಲ್ಲವನ್ನು ಬಿಟ್ಟು ನಮ್ಮ ಗಾಡಿಯನ್ನು ಒಮ್ಮೆ ಹತ್ತಿ ಎಲ್ಲಾದರೂ ದೂರ ಹೋಗಿ ಸುಮ್ಮನೆ ಕೂತು ಬಿಡುವಂತೆ ಹೇಳಿಕೊಡುತ್ತಾನೆ .ಸಂತೆಯಲ್ಲೂ ಯಾರ ಪರಿವೆ ಇಲ್ಲದೇ ನಿದ್ದೆ ಮಾಡಲು ಹೇಳುತ್ತಾನೆ .ದೊಡ್ಡವರು ಬೈದು ಹೋದ ಮೇಲೆ ತಲೆ ಕೆಡಸಿಕೊಂಡು ಕೂತು ಅಳುವ ಬದಲು ಅವರನ್ನೇ ಹಾಸ್ಯ ಮಾಡಿ ನಮ್ಮ ಅಂಡು ಬಡಿದುಕೊಂಡು ನಗುವಂತೆ ಹೇಳಿಕೊಡುತ್ತಾನೆ .ರಾತ್ರಿ ನಕ್ಷತ್ರಗಳ ಅಡಿ ಕೂತು ಅವನ್ನೇ ಉಪ್ಪಿನಕಾಯಿಯ ಮಾವಿನ ಮಿಡಿಗಳಂತೆ ನೆಂಚಿಕೊಂಡು ಎಣ್ಣೆ ಹೊಡೆಯಲು ಹೇಳುತ್ತಾನೆ .ಸುಂದರವಾದವರು ಎಲ್ಲಾದರೂ ಎದುರಾದರೆ ಅವರನ್ನೇ ಕಿತ್ತು ತಿನ್ನುವಂತೆ ನೋಡು ಅನ್ನುತಾನೆ . ಹೀಗೆ ಒಂದೇ ಎರಡೇ .....
ವಿಚಿತ್ರ ಆಲ್ವಾ? ಆದರೆ ಆತ ಹೇಳಿದ ಕೆಲಸಗಳನೊಮ್ಮೆ ಮಾಡಿದರೆ ನಮ್ಮ ಮನಸಿಗೆ ಸಿಗುವ ತೃಪ್ತಿ ಇದೆಯಲ್ಲಾ ,ಅದು ಎಲ್ಲಿಯೂ ಸಿಗುವುದಿಲ್ಲ .ಏನೋ ಒಂದು ತರಹ ಖುಷಿ . ಅದನ್ನು ಹೇಳಲಾಗುವುದಿಲ್ಲ .Something that can’t be expressed ,but should be experienced. ನನ್ನ ಮೇಲಿನ ಉದಾಹರಣೆಗಳು ನನ್ನೊಳಗಿನ ವ್ಯಕ್ತಿಯ ಸಲಹೆಗಳ ಪ್ರತಿಬಿಂಬಗಳಷ್ಟೆ.ನಿಮ್ಮೊಳಗೂ ಈ ತರಹದ ಸಲಹೆ ಕೊಡುವ ವ್ಯಕ್ತಿ ಇದ್ದೆ ಇರುತ್ತಾನೆ .ಇಲ್ಲ ಎನ್ನಲು ಸಾಧ್ಯವೇ ಇಲ್ಲ . ಅವನ ಸಲಹೆಗಳು ಬೇರೆಯಾದ್ದಾಗಿರ ಬಹುದಷ್ಟೆ.
ಇಲ್ಲಿ ಮುಖ್ಯವಾಗಿ ನಾವು ಗಮನ ಹರಿಸಬೇಕಾಗಿರುವ ವಿಷಯ ಏನಂದರೆ ನಮ್ಮೊಳಗೇ ಈ ವ್ಯಕ್ತಿಯನ್ನು ಎಷ್ಟು ಜೀವಂತವಾಗಿ ಇಟ್ಟುಕೊಂಡಿದ್ದೇವೆ. ಹ್ಮ್ಮ್ಮಮ್.ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಮಾತನಾಡೋಣ .
ಇಂದಿಗೆ ಇಷ್ಟು ಸಾಕು .ಮತ್ತೆ ಮುಂದುವರಿಸೋಣ .
ವಿನಂತಿ :ನಿಮಗೆ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು facebook ಅಲ್ಲಿ ಅಥವಾ ಯಾವುದೇ ಸಾಮಾಜಿಕ ತಾಣದಲ್ಲಿ ಹಂಚಿ ..
English summary : This article is about a person.This person is not a famous actor,sports person or politician.He is neither a celebrity or the person who bought change in history .But we all are related to this person somehow.Because this person is residing in all of us.Right from birth we have this person with us who gives us suggestion.
The suggestions made by this person are not common .They are little bit crazy .They have naughtiness in them .They help us in looking ourselves deep inside .But the problem if we follow them , the world may consider us as crazy .Why? Because the suggestions are like that.
He asks us to take nap in our busy schedule .And he asks to make fun of the elder people who always keep scolding us to improve.He even sometimes ask us to run away from all our daily life tensions and ask us to get lost in the beauty of nature and this goes on.
May be the above examples reflect the suggestion given by my inside person .The suggestions given by your inside person may be entirely different. But one thing what you can't refuse is that you don't have this person residing your inside.
The question is how much alive this inside person is ?Let's talk about this, in next article.