ಭಾನುವಾರ, ಡಿಸೆಂಬರ್ 30, 2012

ಸ್ವಲ್ಪ ನಗಿ


ಅಂಗಿ 
ನಿನ್ನ ನಗುವಿಗೆ 
ನಾನಷ್ಟೇ ಕರಗಿಲ್ಲ 
ಕೋಮಲಾಂಗಿ,
ಜೊತೆಗೆ ಕರಗಿದೆ 
ಸಂಬಳ ಭಾರದಿಂದ 
ತೂಗುತ್ತಿದ ಜೇಬು 
ಇದ್ದ  ಅಂಗಿ . 


ಚಿತ್ರಾನ್ನ 
ನನ್ನ ಪ್ರಿಯೆ 
ಕಣ್ಣಿನಲ್ಲಿ ಬಡಿಸುತ್ತಾ 
 ಪ್ರೀತಿಯ ಪರಮಾನ್ನ ,
ತಟ್ಟೆಗೆ ಬಡಿಸಿದಳು 
ತಂಗಳು ಚಿತ್ರಾನ್ನ .

ನಿನ್ನ ನಗು 
ನಲ್ಲೆ 
ನಗು ಕಾಣದ 
ನಿನ್ನ ಕೆಂದುಟಿ ,
ಸಕ್ಕರೆ ಯಿಲ್ಲದ 
ಕಾಫಿ -ಟೀ 

ಮಾಡ್ರನ್ ಲವ್ 
ಈಗಿನ ಹುಡುಗ 
ಹುಡುಗಿಯರದು 
ಹುಸಿ ಪ್ರೇಮ ,
ಒಳಗಿನ ಗುಟ್ಟು 
ಏನಿದ್ದರೂ ಕಾಮ ,
ಅದಕ್ಕೆ ಮದುವೆ 
ಮುನ್ನ ,
ಸಂಸಾರದ list ಅಲ್ಲಿ 
ಸೇರುವುದು "coma "

ಸರ್ಕಾರಿ ಕೆಲಸ 
ಸರ್ಕಾರಿ ಕೆಲಸ 
ಸಿಗಲು ಎರಡು ಬೇಕು ,
ಒಂದು ಹೆಸರು ಹಾಗು 
ಜಾತಿ ತುಂಬುವ  ಅರ್ಜಿ ,
ಇನ್ನೊಂದು ಲಂಚ 
ಕೊಡುವಾಗ ಮುತುವರ್ಜಿ .

ಗುರುವಾರ, ಡಿಸೆಂಬರ್ 13, 2012

ಅವಳು




ನಿನ್ನ ನಗು 

 ಅದೇನೆಲ್ಲಾ  ಇದೆ 
ನಿನ್ನ ನಗುವಲ್ಲಿ ,
ಬಾಳುದ್ದಕ್ಕೂ ಕಾಡುವ 
ಬೆಚ್ಚನೆಯ ಬಿಸಿಯಿದೆ .
ತಿಂಗಳ ಬೆಳದಿಂಗಳ 
ತಂಪಿದೆ .
ನನ್ನ ಸೋಲಿಗೆ 
ಮುಂದೆ ಗೆಲುವಿದೆ 
ಎಂದು ಹೇಳುವ 
ಸ್ಫೂರ್ತಿಯಿದೆ.
ನನ್ನ ಪ್ರತಿ ಗೆಲುವಿಗೆ 
ಪ್ರೋತ್ಸಾಹ ನೀಡುವ 
ಬಹುಮಾನವಿದೆ .
ಈ ಬದುಕೆಂಬ 
ಸಂತೆಯಲ್ಲೂ ನನ್ನನ್ನು 
ಏಕಾಂಗಿಯನ್ನಾಗಿ ಮಾಡಬಲ್ಲ 
ಶಕ್ತಿಯಿದೆ .
ಏಕಾಂತದಲ್ಲೂ  ನನ್ನನ್ನು 
ಬಿಡದೆ ಕಾಡುವ 
ಮಾಯೆಯಿದೆ .
ನಿನ್ನೇ  ತುಂಬಿಕೊಂಡಿರುವ 
ಈ ಹೃದಯದ ಉಸಿರಿದೆ .

ದೂರವಾಗದಿರು 

ನೀ ಮುಡಿದ  ಮಲ್ಲಿಗೆ 
ಇನ್ನೇನು ಬಾಡುವೆ ಎಂದು 
ಮರಗುತಿಹುದು .
ನೀ ಸ್ನಾನ ಮಾಡುವಾಗ 
ತೆಗೆದಿಡುವ 
ಕೈ ಬಲೆ ,
ಕಿವಿಯ ಓಲೆ ,
ಕಾಲ್ಗೆಜ್ಜೆ 
ಆ ಸಮಯ 
ಬರದಿರಲೆಂದು 
ದೇವರ ಬೇಡುತಿಹುವು .
ಗಾಳಿ ಬಂದಾಗ 
ಕ್ಷಣಮಾತ್ರ 
ನಿನ್ನಿಂದ ದೂರವಾಗುವ,
ನಿನ್ನ ಕೆನ್ನೆ ಚುಂಬಿಸುವ 
ಮುಂಗುರುಳು ,
ನಿನ್ನೇ ಬಳಸಿರುವ  
ಸೀರೆಯ ಸೆರಗು ,
ಗಾಳಿಯನ್ನು 
ಶಪಿಸುತಿಹುವು .
ಜೀವವಿಲ್ಲದ ಈ ಜಡ ವಸ್ತುಗಳ
 ಕಥೆಯೇ ಹೀಗಿರುವಾಗ ,
ಜೀವವೇ ನೀನಾಗಿರುವ 
ಈ ಜೀವಿಯ ಜೀವವು 
ಕನಸಿನಲ್ಲೂ ನೀ ದೂರವಾಗದಂತೆ 
ಬಯಸುತಿಹುದು .

ನಿಶೆಯ ನಶೆ 

ನಿಶೆಯ ನಶೆಯು ಎಲ್ಲೆಲೂ 
ಹರಡಿರುವಾಗ ,
ಮಸಿ ಆಕಾಶದ ನಡುವೆಯೂ 
ಶಶಿ  ಮಧುವಿನಂತೆ ಬೆಳಕು 
ಚೆಲ್ಲುತ್ತಿರುವಾಗ ,
ಪ್ರೇಮಾನುಭವದ ಪರಕಾಷ್ಟೆಗೆಂದು 
ಏರು ಬಾ ಪ್ರಿಯೆ ಪಲ್ಲಂಗ.
ರಂಗುರಂಗಿನ ಪ್ರೇಮದ ಗುಂಗಿನಲ್ಲಿ 
ರತಿ ಮನ್ಮಥರನ್ನು ನಾಚಿಸುವಂತೆ 
ತಲುಪೋಣ ಪ್ರೇಮದ ಉತ್ತುಂಗ .

 Some kavanas (short poems in kannada) about my dream girl.

ಬುಧವಾರ, ಡಿಸೆಂಬರ್ 5, 2012

ಪ್ರಳಯ,ಪ್ರಳಯ and ಪ್ರಳಯ


NOTE :ನೋಡ್ರಪ್ಪ ನಂಗು ಮಾಡೋಕೆ ಬೇರೆ ಕೆಲಸ ಇಲ್ಲದೆ, ಸುಮ್ನೆ ಕೂರಕ್ಕೆ ಆಗದೆ ಬರೆದಿದೀನಿ.ನೀವು ಯಾವುದೇ logic ಹುಡುಕದೆ ಸುಮ್ನೆ side ಅಲ್ಲಿ ಕೂತು ಒಮ್ಮೆ ಓದಿ .ಚೆನ್ನಾಗಿದ್ರೆ ಹೇಳ್ರಿ .ಚೆನ್ನಾಗಿಲ್ಲ ಅಂದ್ರೆ ಕ್ಯಾಕರ್ಸಿ ಉಗೀರಿ BUT ಎಲ್ಲರ ಮುಂದೆ ಮಾತ್ರ ಬೇಡ ,ಕರೆದು side ಅಲ್ಲಿ ಉಗೀರಿ .

ಗೆಳಯ :hello ..ಮಚ್ಚಾ ಹೇಗಿದ್ಯಾ ?
ನಾನು:ಏನೋ ಇನ್ನು ಬದುಕಿದ್ಯಾ ? ಇಷ್ಟು ದಿನ ಆಯಿತು ಒಂದು message ಇಲ್ಲ,call ಇಲ್ಲ ..ಸತ್ತು ಹೋಗಿದ್ಯಾ ಅನ್ಕೊಂಡಿದ್ದೆ .(ನಾನು call ಮಾಡಿಲ್ಲ ,ಅದುಬೇರೆ ವಿಸ್ಯ ..ಆದ್ರೆ ಇದು ನಮ್ಮ common dialogue )
ಗೆಳಯ:ಅಯ್ಯೋ ಹಾಗೇನಿಲ್ಲ ಮಚ್ಚ ..ಒಂದು important ವಿಷ್ಯ,dec 2 ಕ್ಕೆ ನನ್ನ ಮದುವೆ ,ತಪ್ಪದೇ ಬಾರಪ್ಪ .
ನಾನು:ಲೋ ..ಏನೋ ಮೊನ್ನೆ ತಾನೇ ದೊಡ್ಡವನಾಗಿ ,ನೆನ್ನೆ ತಾನೇ ಗಡ್ಡ ಬಂದು,ಇವತ್ತು ದುಡಿಯೋಕೆ ಶುರುಮಾಡಿದ್ಯಾ ,ಆಗ್ಲೇ ಮದುವೆನಾ?
ಗೆಳಯ:ಮಚ್ಚ, dec 21 ಗೆ ಪ್ರಳಯ.ಅಷ್ಟರಲ್ಲಿ ಎಲ್ಲಾ ಮುಗಿಸ್ಕೋಬೇಕು.ನೀನು ಆಗೋ .
**********************************************************
ಯಾವುದೋ tvಅಲ್ಲಿ , ಮೊದಲೇ ವಿಚಿತ್ರ ವಾಗಿ ಇದ್ದ ನಿರೂಪಕ ,ಇನ್ನಷ್ಟು ಭಯ ಹುಟ್ಟಿಸುವಂತೆ dress ಹಾಕಿಕೊಂಡು ,ಕರ್ಕಷ ದನಿಯಲ್ಲಿ ಮಾತನಾಡುತ್ತಿದ್ದ ...
"ಅಫ್ರಿಕಾದ ಒಂದುಪುಟ್ಟ ಹಳ್ಳಿ ..ಅಲ್ಲಿ ಹೆಚ್ಚುಅಂದ್ರೆ 500 ಜನ ಇರಬಹುದು ..ಅಂತಹ ಹೇಳಿಕೊಳ್ಳುವಂತಹ ಊರು ಅಲ್ಲದ ಈ ಊರಿನಲ್ಲಿ, ಇಡೀ ಜಗತ್ತೇ ಅಚ್ಚರಿಪಡುವಂತಹ ಒಂದು ಘಟನೆ ನೆಡದಿದೆ .ಅದೇ ಇಲ್ಲಿನ ಒಂದು ನಾಯಿ ಜಗತ್ತಿನಲ್ಲಿ ಮುಂದಾಗಬಹುದಾದ ಒಂದು ಘಟನೆಗೆ ಸಾಕ್ಷಿ ಆಗಿದೆ..ಅದೇ ಸಾಮಾನ್ಯವಾಗಿ ಒಂದೇ ಕಾಲು ಎತ್ತಿ ಕಂಬಕ್ಕೆ ಮೂತ್ರಮಾಡಬೇಕಿದ್ದ ಈ ನಾಯಿ ,ತನ್ನ ಎರಡು ಕಾಲು ಎತ್ತಿ ಇಲ್ಲಿನ ಒಂದು ಮರದ ಮುಂದೆ ಮೂತ್ರ ಮಾಡಿದೆ...ನಾಯಿಯ ಈ ವಿಚಿತ್ರ ಪರಿ ಪ್ರಳಯದ ಮುನ್ಸೂಚನೆಯಾ ?dec 21 ಕ್ಕೆಪ್ರಳಯ fix ಹಾಗಾದ್ರೆ "(ಹಾಗೆಯೇ ಕೆಳಗಡೆ, ಅದೇ channelನಲ್ಲಿ "dec 21 ರಿಂದ ಹೊಸ ಕಾರ್ಯಕ್ರಮ ನಿರೀಕ್ಷಿಸಿ ನಮ್ಮ ವಾಹಿನಿಯಲ್ಲಿ " )
*********************************************************************************
paper ಓದುತ್ತಿದ್ದ ಅಜ್ಜ ,ಅಮೇರಿಕಾದ ಸ್ಯಾಂಡಿ ಚಂಡ ಮಾರುತದ ಅನಾಹುತ ಓದುತ್ತ ..."ಮಗ ಇದೇ ಪ್ರಳಯ..ಕಲಿಗಾಲ ಮುಗೀತಾ ಬಂತು..ಪಾಪಿಗಳ ಲೆಕ್ಕ ಎಲ್ಲ ಚುಕ್ತ ಆಗುತ್ತೆ...ಕಲಿ ಅವತಾರ ಎತ್ತಿ ವಿಷ್ಣು ಬರ್ತಾನೆ ....ಅಷ್ಟರೊಳಗೆ ಕಾಶಿಗೆ ಹೋಗ್ಬೇಕು ಮಗ ......ಮೊನ್ನೆ tv ಅಲ್ಲ ನೋಡಿಲ್ವಾ ಕುದುರೆಗೆ ಕೋಡು ಬಂದಿತ್ತಂತೆ ....ಈಗ ಕೃಷ್ಣ ರುಕ್ಮಿಣಿ ಧಾರವಾಹಿ time ಆಯ್ತಲ್ವಾ ...ಪ್ರಳಯಕ್ಕೆ ಮುಂಚೆ ಮುಗಿಸಬಹುದು .. tv ಹಾಕು ".
*********************************************************************************
Parkನಲ್ಲಿ   ಕಡಲೇಕಾಯಿ ತಿನ್ನುತ್ತಾ ,ಹುಡುಗಿಯರಿಗೆ ಗಾಳು ಹಾಕಿಕೊಂಡು ,ಅಲ್ಲೇ ಸುತ್ತಮುತ್ತ ತಬ್ಬಿಕೊಂಡು ಕೂತುಕೊಂಡಿರೋ ಪ್ರೇಮಿಗಳಿಗೆ ಮಾನಮರ್ಯಾದೆ ಇಲ್ಲ ಅಂತ ಬಯುತ್ತ (ನಿಜವಾಗಿ ಹೇಳಬೇಕಂದರೆ ನಮಗೆ ಯಾರು ಇಲ್ಲವಲ್ಲ ಅನ್ನೋ ಹೊಟ್ಟೆ ಉರಿ ) ಕೂತುಕೊಳ್ಳುವುದು ನನ್ನ ಹವ್ಯಾಸ ..ಆಗ ಒಂದಿಷ್ಟು laughing club ಗೆ ಅಂತಸೇರಿಕೊಂಡಿರೋ auntyಗಳ ಮಾತು ಕಿವಿಗೆ ಬಿತ್ತು ....
"ರೀ ನೆನ್ನೆ  program  ನೋಡಿದ್ರ ,ಜ್ಯೋತಿಷಿಗಳು ಏನು ಹೇಳಿದ್ರು ಅಂತ ..ಪ್ರಳಯ ಅಂತೆ ರೀ! "
"ಹೌದ ! ಏನ್ ರೀ ಗ್ರಹಚಾರ .."
"ಚೀನಾದಲ್ಲಿ ಪ್ರಳಯ ಆದಾಗ ಬಚಾವು ಆಗೋಕ್ಕೆ ಅಂತ ಒಂದು ಹಡಗು ಕಟ್ಟ್ತಾ ಇದಾರೆ ಅಂತೆ .. ಸಕತ್ ದೊಡ್ಡದು ಅಂತೆ..ಏನು ಆಗೋಲ್ಲ ಅಂತೆ "
"ಅಯ್ಯೋ ಅದೆಲ್ಲಾ ಬಿಡಿ ..ನೆನ್ನೆ ನಮ್ಮ ಸ್ವಾಮೀಜಿಗಳು ಹೇಳಿದ್ರು ಕುಂಡಲಿ ಮುಂಡಲಿ ಯಾಗ ಮಾಡಿಸಿದರೆ ಏನು ಆಗೋಲ್ಲ ಅಂತೆ..ಆ ಸಂಸಾರ ದೇವ್ರು ಕೃಪೆ ಇಂದ ಉಳ್ಕೋಳುತ್ತೆಅಂತೆ . ನಾವು 1 ಲಕ್ಷ ಖರ್ಚು ಮಾಡಿಸಿ , ಹೋಮ ಮಾಡಿಸ್ತಾ ಇದೀವಿ .ಯಾರಿಗೂ ಹೇಳ್ಬೇಡಿ "(ಹೆಣ್ಣ ಮಕ್ಕಳ common dialogue )
*********************************************************************************
ಕೊನೆದಾಗಿ, ಸಾಧನೆ ಮೊದಲು ಆಮೇಲೆ ಮದುವೆ ,ಲವ್ ,ಮಕ್ಕಳು ,ಹೆಂಡತಿ ಅಂತ ಇದ್ದ ನಾನು, ನನ್ನ friends ,ಪರಿಚಯ ಇರೋರು ಎಲ್ಲರು ಎದ್ದು ಬಿದ್ದು ಮದುವೆ ಆಗ್ತಾ ಇರೋದುನೋಡಿ , ನನ್ನ ನಿರ್ಧಾರ ಬದಲಾಯಿಸಿದೆ .ದೊಡ್ಡ ಧೈರ್ಯ ಮಾಡಿ ಅಪ್ಪನಿಗೆ application ಹಾಕಿದೆ.
ನಾನು :ಅಪ್ಪ friends ಎಲ್ಲ ಮದುವೆ ಆದರು..
ಅಪ್ಪ:(ಅರ್ಥ ಮಾಡಿಕೊಂಡರು ನಮ್ಮ ಅಪ್ಪ ಅಷ್ಟಕ್ಕೇ )ಅವರೆಲ್ಲ ಒಳ್ಳೇ marks ತೆಗದು ಒಳ್ಳೆ company ಅಲ್ಲಿ ನಿನಗಿಂತ ಜಾಸ್ತಿ ದುಡೀತಾ ಇದಾರೆ..ನೀನು just pass ಆಗಿದ್ಯಾ..ನಿನ್ನ ಅದೃಷ್ಟಕ್ಕೆ ಒಂದು companyಅಲ್ಲಿ ಕೆಲಸ ಸಿಕ್ಕಿ,ಏನೋ ಈಗ ಚೂರು ಪಾರು ಸಂಬಳ ಸಿಕ್ತ ಇದೆ...ಇಷ್ಟು ಬೇಗಲೇ ಮದುವೆನಾ ..ನೋಡೋಣ ..dec 21 ಕ್ಕೆ ಪ್ರಳಯ ಅಂತೆ..ಆಗೋದೇ ಆದ್ರೆ ಸುಮ್ನೆ ಅತುರ ಆತುರ ವಾಗಿ ಒಂದು ಹೆಣ್ಣು ಮಗು ಜೀವನ ಹಾಳು ಮಾಡಿದ್ದ ಪಾಪ ನನಗ್ಯಾಕೆ ..
(ತಗೋಳಪ್ಪ ..ಈ last ಸಂಭಾಷಣೆ ಇದಿಯಲ್ಲಾ ..ಅದು ನನಗೆ ಬಾರಿ ತಲೆ ಕೆಡಿಸಿದ್ದು ...ಅಲ್ಲಾ ಯಾವ ನನ್ನ ಮಗ ಈ ಪ್ರಳಯ, ಮಣ್ಣು ಮಸಿ ಅಂತ ಸುಧ್ಡಿ ಹಬ್ಬಿಸಿದ್ದು.ಸಿಗಬೇಕು ಗುರುನನ್ನ ಕೈಗೆ ,ಅಟ್ಟಾಡಿಸಿಕೊಂಡು ಹೊಡಿಬೇಕು ಅಂತ ಇದೀನಿ )

                        sms , facebook ಅಲ್ಲಿ ಓದಿದ್ದು ನೆನಪು.ನಾಳೆ ಬೆಳೆಗ್ಗೆ ಅಡುಗೆಗೆ ಅಂತ ಉದ್ದಿನ ಬೇಳೆ ಹಿಂದಿನ ರಾತ್ರಿ ನೆನೆ ಇಡುತ್ತೇವೆ .ನಾಳೆ ಎದ್ದರೆ ಇಡ್ಲಿ ,ಇಲ್ಲದೆ ಹೋದರೆ ತಿಥಿ ವಡೆ ಅನ್ನೋ ಅಷ್ಟುಅನಿಶ್ಚಿತತೆಯಿಂದ ಕೂಡಿದೆ ನಮ್ಮೆಲ್ಲರ SO CALLED MODERN LIFE .ಯಾವಾಗ ಏನು ಆಗುತ್ತೋ ಅಂತ ಹೇಳೋಕೆ ಆಗದೆ ಇರೋ ಇಂತಹ life ಅಲ್ಲಿ, ಮನುಷ್ಯ ಅಶಾವಾದಿಯಾಗಬೇಕೋ ಅಥವಾ ನಿರಾಶಾವಾದಿಯಾಗಾಬೇಕೋ .ಯೋಚಿಸಿ ನೋಡಿ .ಆಶಾವಾದಿಯಾಗಿರಬೇಕು ಕಾಣ್ರಿ . ಒಂಬತ್ತು ತಿಂಗಳು ತನ್ನ ಒಡಲಲ್ಲಿ ಮಗುನ ಕಾಪಾಡೋ ತಾಯಿ, ಅಷ್ಟು ಕಷ್ಟ ಅನುಭವಿಸೋದು,ನಾಳೆ ಹುಟ್ಟೋ ಮಗು ಒಬ್ಬ ದೊಡ್ಡ ಹೆಸರುವಾಸಿ ವ್ಯಕ್ತಿ ಆಗೋ ಆಗುತ್ತಾನೆ ಅನ್ನೋ ಬಯಕೆ ಇಂದ . ಒಬ್ಬ ಮನುಷ್ಯ ಹೆಂಡತಿ ,ಮಕ್ಕಳು ಅಂತಸಂಸಾರ ದೋಣಿ ನಡೆಸೋಕೆ ಕಷ್ಟ ಪಡೋದು ,ನೆಮ್ಮದಿಯ ನಾಳೆ ಒಂದು ಸಿಗುತ್ತೆ ಅಂತ .ಅಷ್ಟೇ ಯಾಕೆ ಮನೆ ಅಂತ ಮಾಡಿಕೊಳ್ಳೋದು ಇರಬಹುದು ಅಥವಾ LIC ಕಟ್ಟೋದುಇರಬಹುದು,ಎಲ್ಲದರಲ್ಲೂ ನಾವು ಇನ್ನು ಬದುಕ್ಕುತ್ತೇವೆ ,ನೆಮ್ಮದಿಯ ನಾಳೆ ನೋಡುತ್ತೇವೆ ಅನ್ನುವ ಹಂಬಲ ,ಆಶಾ ಮನೋಭಾವದಿಂದ .ಭದ್ರವಾದ ತಳವಿರುವ ನಾಳೆಕಟ್ಟಿಕೊಳ್ಳುತ್ತಿದ್ದೇನೆ ಅನ್ನೋ ಒಂದು ಭಾವನೆಯಲ್ಲೇ ,ಮನುಷ್ಯ ಇಂದಿನ ನೆಮ್ಮದಿ ಕಾಣುತ್ತಾನೆ .
               ಅದು ಬಿಟ್ಟು ಪ್ರಳಯ ,ಮಣ್ಣು ಮಸಿ ,ಜಗತ್ತೇ ಮುಗಿದು ಹೋಗುತ್ತೆ ,ಹೀಗೆ ನಾಳೆ ಶೂನ್ಯ ಅನ್ನೋ ಭಯ ಆವರಿಸಿಬಿಟ್ಟರೆ ಏನಾಗಬಹುದು ?ಬದುಕಲ್ಲಿ ನಾವೇನೆ ಮಾಡಿದ್ದರು ಅರ್ಥ ಸಿಗೋಲ್ಲ ."ಏನ್ ಮಾಡಿದರೇನು? ನಾಳೆ ಪ್ರಳಯ ಅಂತೆ , ಎಲ್ಲರು, ಎಲ್ಲಾನು ಹೊಗೆಹಾಕಿಸಿಕೊಳ್ಳುತ್ತೆ ಅಂತೆ " ಅಂತ ಜನ ಬದುಕಿನಲ್ಲಿ ನಿರಾಶಾವಾದಿ ಆಗಿ ಬಿಡುತ್ತಾನೆ . ಆಗ ಏನು ಮಜಾ ಇರುತ್ತೆ ಹೇಳಿ ?ಚೆನ್ನಾಗಿರೋ ನಾಳೆ ಕಟ್ಟಿಕೊಳ್ಳುತ್ತಿದ್ದೇನೆ ಎಂಬ ನಂಬಿಕೆಯಲ್ಲಿಇರುವುದು ನಿಜವಾದ ಇಂದಿನ ಸುಖ.
                   ಎಲ್ಲಿಯ ತನಕ currency ಹಾಕಿಸುತ್ತಿರೋ ,ಅಲ್ಲಿಯವರೆಗೂ ಹುಡಿಗೀರು mobileಅಲ್ಲಿ  ನಿಮ್ಮ  ಜೊತೆ ಮಾತಾಡುತ್ತಾರೆ (ಎಲ್ಲಿಯವರಗೆ ಟೋಪಿ ಹಾಕಿಸಿಕೊಳ್ಳುವವರು ಇರುತ್ತಾರೋ,ಅಲ್ಲಿಯವರೆಗೂ ಟೋಪಿ ಹಾಕುವವರು ಇರುತ್ತಾರೆ )ಅನ್ನೋ ಹಾಗೆ ,ಜನರ ಭಯ ,ಅಜ್ಞಾನ ಗಳನ್ನೂ ನಮ್ಮ ಪತ್ರಿಕಾ ಹಾಗು ದೃಶ್ಯ ಮಾಧ್ಯಮ ,ಜ್ಯೋತಿಷಿಗಳು ಅನ್ನೋಪ್ರಳಯಾಂತಕರು,ಕೆಲವೊಂದು ಹುಚ್ಚರು ENCASH ಮಾಡಿಕೊಳ್ಳುತ್ತಾ ಇದ್ದಾರೆ ಅಷ್ಟೇ .ಒಂದು ಚಾನೆಲ್ ನಲ್ಲಿ ಪ್ರಳಯದ ಬಗ್ಗೆ ಕಾರ್ಯಕ್ರಮಕ್ಕೆ ಹೆಚ್ಚು TRP ಬಂದ ಕೂಡಲೇ ,ಅದೇ ರೀತಿಯ ಇನ್ನಷ್ಟು ಭಯ ಹುಟ್ಟಿಸುವ ಕಾರ್ಯಕ್ರಮಗಳನ್ನು ಮಾಡುತ್ತಾ ಇದ್ದಾರೆ .ಪತ್ರಿಕಾ ಮಾಧ್ಯಮಗಳು ಅಷ್ಟೇ .ವಿಪರ್ಯಾಸವೆಂದರೆ ಇವುಗಳು ಆಕಾರ್ಯಕ್ರಮಗಳಲ್ಲಿ ತೋರಿಸುವುದು ತಲೆಹಿಡುಕ ಜ್ಯೋತಿಷಿಗಳನ್ನು ಹಾಗು ಹಲವು english ಚಲನ ಚಿತ್ರಗಳ ತುಣುಕುಗಳನ್ನು ,ಇಲ್ಲದೆ ಹೋದಲ್ಲಿ ಯಾವುದೋ english channelನ ಹಳೇ ಕಾರ್ಯಕ್ರಮಗಳನ್ನು ಅಥವಾ ತಲೆಕೆಟ್ಟ ಅಸ್ಸಾಮಿಗಳು ಸೃಷ್ಟಿಸಿರೋ web ಸೈಟ್ ಗಳ ಮಾಹಿತಿಯನ್ನು .ಕೆಲವರಂತೂ ಇದನ್ನು ಹೇಳಿ ಮುಗ್ದ ಜನರಲ್ಲಿ ಭಯ ಹೂಡಿಸಿ ,ದೇವರು ದಿಂಡರು ಹೆಸರಲ್ಲಿ ದರೋಡೆ ಮಾಡುತ್ತಾ ಇದ್ದಾರೆ .ಅದ್ದರಿಂದ ದಯವಿಟ್ಟು ಪ್ರಳಯ ಅನ್ನೋ ಸುದ್ಧಿ ಹುಟ್ಟು ಹಾಕುತ್ತಿರೋ ಪ್ರಳಯಾಂತಕರ ಮಾತಿಗೆ ಕಿವಿಯೊಡ್ಡಬೇಡಿ.ಇಷ್ಟೆಲ್ಲಾ ಮುಂದುವರೆದಿರುವ ವಿಜ್ಞಾನ ,ಪ್ರಳಯದ ಮುನ್ಸೂಚನೆ ಕೊಡೋದಿಲ್ಲವೇ ?ಅಯ್ಯೋ ಅವೆಲ್ಲೇ ಅದೆಲ್ಲಾ ಬಿಡಿ, ನಾವು ನೀವು ನಂಬಿರೋ ದೇವರು , ನಮ್ಮನು ಹಾಗೆ ಕೈ ಬಿಡ್ತಾನಾ?
                      ಕೊನೆಯದಾಗಿ ನಾನು ಹೇಳೋದು ಅಂದ್ರೆ (ನೀವು ಕೇಳಲೇಬೇಕು ಅಂತ ಏನಿಲ್ಲ )ಇಂತಹ ವಿಷಯ ಗಳಿಗೆ ಕಿವಿಗೊಡದೆ ,ಅಕಸ್ಮಾತ್ ಆಗಿ ಕೊಟ್ಟರೂ ಸೊಪ್ಪು ಹಾಕದೆ ,ನಮ್ಮ ಭಟ್ಟರು ಡ್ರಾಮಾ film ಅಲ್ಲಿ ಹೇಳಿದ ಹಾಗೆ "ಪ್ರಳಯ ಆದ್ರೆ ನೀರು ,ಇಲ್ಲದೆ ಹೋದ್ರೆ BEER ಉ " ಅಂತ ತಲೆಕೆಡಸಿಕೊಳ್ಳದೆ ಆರಾಮಾಗಿ ಇದ್ದು ಬಿಡೋಣ.ನೆನ್ನಗಳ ನೆನಪಲ್ಲಿ ,ಇಂದಿನ ಸವಿಅನುಭವಿಸುತಾ, ನಾಳಿನ ಕನಸುಗಳನ್ನು ಕಾಣುತಾ ನಮ್ಮಷ್ಟಕ್ಕೆ ನಾವೇ ಶಿವ ಅಂತ ಇದ್ದರೆ ,ಆಗ ಇಂತಹ ಪ್ರಳಯಾಂತಕರ ಸುಳ್ಳು ಪುಂಗಿ sound ಮಾಡುವುದಿಲ್ಲ .ಏನಂತೀರ ?

ಕೋಸಂಬರಿ ಪಂಚ್ : ನಮ್ಮ aunty ಮನೆಗೆ ಹೋದಾಗ ,ಅವರ ಮನೆಯಲ್ಲಿ ಇರುವ ಎಲ್ಲ ಮಂದಿ ಕೈಯಲ್ಲಿ ತಾಯ್ತ ಕತ್ತಿಕೊಂಡಿರುವುದು ಗಮನಿಸಿದೆ .ಕುತೂಹಲದಿಂದ ದರ ಬಗ್ಗೆ ವಿಚಾರಿಸಿದಾಗ aunty ಹೀಗೆ ಉತ್ತರಿಸಿದರು " ಪ್ರಳಯ ,ಎಲ್ಲ ಜಲಸಮಾಧಿ ಆಗುತ್ತೆ ಹಾಗೆ ಹೀಗೆ ಅಂತೆ ಎಲ್ಲ ಕಡೆ ನೋಡ್ತಾ ಇದ್ದೆ .ಇದರ ಬಗ್ಗೆ ನಮ್ಮ ಸ್ವಾಮೀಜಿ ವಿಚರಿಸಿದಾಗ ಅವರು ಈ ತಾಯ್ತ ಕಟ್ಟಿ ಕೊಂಡರೆ ಏನು ಆಗಲ್ಲ ಅಂತ ಹೇಳಿದ್ರು.ಅದಕ್ಕೆ ತಕ್ಷಣ ನಮ್ಮ ಮನೆಯಲ್ಲಿ ಎಲ್ಲರಿಗು ಮಾಡಿಸಿದೆ .ನಿನಗೂ ಬೇಕಾ .ಅರ್ಧ ಡಜನ್ ತಗೊಂಡ್ರೆ ಒಂದು FREE ಅಂತಹೇಳಿದ್ದರು .ಅದಕ್ಕೆ ಯಾವುದಕ್ಕೂ ಇರಲಿ ಅಂತ ತಗೊಂಡಿದ್ದೆ .ಎರಡು ಮೂರು ಉಳಿದಿದೆ.ಕೊಡ್ಲಾ ". ನಾನು "ನನಗ್ಯಾಕೆ ಬಿಡಿ aunty ..ನನಗೇನು ಆಗೋಲ್ಲ ..ನಾನು ಗಟ್ಟಿ ಪಿಂಡ "ಅಂತ ಹೇಳಿದೆ .ಮೂರನೇ ತರಗತಿಯಲ್ಲಿ ಓದುತಿದ್ದ aunty ಮಗ ,ಆ ಕಡೆ ಕೋಣೆಯಲ್ಲಿ ಕನ್ನಡದ ಗಾದೆಗಳನ್ನೂ ಜೋರಾಗಿ ಓದುತ್ತಿದ್ದ .ನಾನು ಹೀಗೆ ಹೇಳುವುದಕ್ಕೂ ಅವನು ಆಕಡೆಜೋರಾಗಿ "ಪಾಪಿ ಸಮುದ್ರಕ್ಕೂ ಹೋದರು ,ಮೊಣ ಕಾಲುದ್ದ ನೀರು " ಎಂದು ಓದುವುದಕ್ಕೂ ಸರಿಯಾಯಿತು .aunty ಗೊಳ್ಳನೆ ನಕ್ಕರು .
English Summary: Nowadays people are getting obsessed with the false rumour "DOOMS DAY".School kids,old people,neighbor aunties and even in news ,everyone keeps talking about this .But according to me there is nothing to worry about.The life is short .In this life instead of enjoying ,why we have to worry about such things .Funny and yet interesting fact is that we are not even sure whether its going to happen or not.All are information based upon some fake websites or news from news channels.The news channels are just telecasting these type of news just to increase their TRP ratings. Finally one thing ,stop worrying  about the DOOMS DAY,enjoy your present day


Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...