ಅಂದು ಬಸ್ ಸ್ಟ್ರೈಕ್ ಇತ್ತು . ಆದ್ದರಿಂದ ಸ್ವಂತ ಗಾಡಿಯಿಲ್ಲದವರು ಆಫೀಸ್ ನಿಂದ ಮನೆಗೆ ,ಮನೆಯಿಂದ ಆಫೀಸಿಗೆ ಹೋಗಲು ಆಟೋ ವನ್ನೇ ಅವಲಂಭಿಸಿದ ಬೇಕಾದ ಪರಿಸ್ಥಿತಿ . ಅಂದು ಆಟೋ ಚಾಲಕರು ದುಪ್ಪಟ್ಟು ಹಣವನ್ನು ಕೇಳಿ ಒಂದು ತರಹದ ಹಗಲು ದರೋಡೆ ಮಾಡುತ್ತಿದರು.ಇದನ್ನು ಸಹಿಸಲಾಗದ ನನಂಗೆ ಒಬ್ಬ ಅಟೋ ಚಾಲಕನಿಗೆ ಕೇಳಿಯೇ ಬಿಟ್ಟೆ "ಏನ್ ಸರ್ ಇದ್ಯಾವ ನ್ಯಾಯ ?ಒಂದಕ್ಕೆ ಎರಡರಷ್ಟು ಕೇಳೋದಾ?". ಆಗ ಅವನಿಂದ ಬಂದ ಉತ್ತರ " software engineers. ನಿಮ್ಗೇನ್ ಕಮ್ಮಿ ಸಾರ್?ಇವತ್ತೊಂದಿನ ನಮ್ಗೆ ಚಾನ್ಸ್ ಸ್ವಲ್ಪ ದುಡ್ದು ಮಾಡುವುದಕ್ಕೆ".
.............................................................................................................................................................
ನಾನು ಜಿಮ್ ಗೆ ಹೋಗುತ್ತಿದ್ದ ಕಡೆ ಹುಡುಗನೊಬ್ಬ ಪರಿಚಯ ಆಗಿದ್ದ.ಕಷ್ಟ ಸುಖ ಆಗಾಗ ಇಬ್ಬರು ಹಂಚಿಕೊಳ್ಳುತ್ತಿದ್ದರಿಂದ ಸ್ವಲ್ಪ ಹತ್ತಿರವೂ ಆಗಿದ್ದ.ಒಂದು ದಿನ ಅದೇನೋ ಸಮಸ್ಯೆ ಹೇಳಿ ಐದು ಸಾವಿರ ನನ್ನ ಹತ್ತಿರ ಸಾಲ ತೆಗದುಕೊಂಡ.ಒಂದು ತಿಂಗಳಲ್ಲಿ ಕೊಡುತ್ತೀನಿ ಆಂತ ಹೇಳಿದ ಅಸ್ಸಾಮಿ ಆಮೇಲೆ ಆದರ ವಿಷಯದ ಬಗ್ಗೆ ಮಾತೇ ಇಲ್ಲಾ.ಕೊನೆಗೆ ದುಡ್ದು ಬೇಕೇ ಬೇಕು ಆಂತ ತುಂಬಾ ಹೇಳಿದ ನಂತರ ಹಾಗು ಹೀಗು ಮಾಡಿ ನಾಲ್ಕು ಸಾವಿರ ಕೊಟ್ಟು ಇನ್ನುಳಿದದ್ದು ಒಂದು ವಾರದ ನಂತರ ಕೊಡುವುದಾಗಿ ಹೇಳಿದ.ಒಂದು ವಾರದ ನಂತರ ಅವನ ಹತ್ತಿರ ದುಡ್ಡು ಕೇಳಿದಾಗ ಬಂದ ಉತ್ತರ "ಸಾರ್ ಅಷ್ಟೊಂದು ದುಡಿಯುತ್ತೀರಾ.ಒಂದು ಸಾವಿರ ಅಲ್ವಾ ಬಿಟ್ಟುಬಿಡಿ ಸಾರ್."
.............................................................................................................................................................
ಅದು ಹೇಗೋ ಕಷ್ಟ ಪಟ್ಟು ಚೆನ್ನೈನಿಂದ ನಾನು ಅಂದದ ಮೈಸೂರಿಗೆ ವರ್ಗಾವಣೆ ಮಾಡಿಸಿಕೊಂಡೆ.ಇದೀಗ ಉಳಿದುಕೊಳ್ಳಲು ಮನೆ ಹುಡುಕಬೇಕಾಗಿತ್ತು.ನಾಲ್ಕೈದು ಕಡೆ ಬಾಡಿಗೆ ಇದೆ ಆಂತ ಮನೆ ಮುಂದೆ ಬೋರ್ಡ್ ನೇತು ಹಾಕಿಕೊಂಡವರ ವಿಚಾರಿಸಲು ಹೋದೆ . ಅವರು ಮೊದಲು ಕೇಳುತ್ತಿದ್ದುದೇ"ಎನ್ ಕೆಲ್ಸಾ ಮಾಡ್ತೀರಾ?"."ನಾನು software engineer' ಅಂದ ಕೂಡಲೇ ಅಭೂತಪೂರ್ವ ಸ್ವಾಗತ ದೊರಕುತಿತ್ತು.(ಇಲ್ಲದಿದ್ದರೆ ಕೊಡೋಲ್ಲಾ ಅಂತ ಹೇಳಿ ಹಾಗೆಯೇ ಗೇಟ್ ಪಾಸ್ ಕೊಡುತ್ತಿದ್ದರು) ಮನಸ್ಸಿನೊಳಗೆ ಬೀಗುತ್ತಾ ನಾನು ಒಳಗೆ ಹೋಗಿ ಬಾಡಿಗೆ,ಮುಂಗಡ ಹಣ ಕೇಳಿದಾಗ ತಲೆತಿರುಗಿ ಬೀಳುವಂತಾಗುತ್ತಿತ್ತು.ಕುರಿ ಕಡಿಯುವ ಮುಂಚೆ ಹಾರ ಹಾಕಿ ಅಲಂಕಾರ ಮಾಡುವ ಆನುಭವ ಗೊತ್ತಾದುದ್ದೇ ಆಗ.ಒಂದು ದಿನ ತಲೆಕೆಟ್ಟು ಒಂದು ಟೀ ಕುಡಿಯೋಣ ಅಂತ ಒಂದು ಟೀ ಸ್ಟಾಲ್ಗೆ ಹೋಗಿ ಕೂತೆ.ಊರಿಗೆ ಹೊಸಬರಂತೆ ಕಂಡ ನನ್ನ ಟೀ ಮಾರುವವನು ಸಹಜವಾಗಿಯೇ ವಿಚಾರಿಸಿದ.ನಾನು ನನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು,ಯಾಕೆ ಇಷ್ಟು ದುಬಾರಿ ಆಂತ ಕೇಳಿದಾಗ ಅವನ ಉತ್ತರೆ ನನ್ನ ಮುಖಕ್ಕೆ ಹೊಡೆದ ಹಾಗಿತ್ತು. "ಅಯ್ಯೋ ಮೊದಲೆಲ್ಲಾ ಇಲ್ಲಿ ಕೇಳೋರು ಇರಲಿಲ್ಲಾ .ನೀವು software engineers ಬಂದ ಮೇಲೆ ಒಂದಕ್ಕೆ ಏರಡು ಕೊಟ್ಟು ಇಷ್ತು ಜಾಸ್ತಿ ಆಗಿರೋದು ನಿಮ್ಮಿಂದ ಬದುಕೋದೆ ಇಲ್ಲಿ ಕಷ್ಟ " ಅಂತ ಹೇಳಿ ನಾನು ಕೊಟ್ಟ ಹತ್ತು ರೂಪಾಯಿಗೆ ಚಿಲ್ಲರೆ ಇಲ್ಲಾ ಆಂತ ಹೇಳಿ ಸಾಗು ಹಾಕಿದ.
...................................................................................................................................................................
ಈ ಮೇಲಿನ ಉದಾಹರಣೆಗಳು ಯಾಕೆ ಕೊಡುತ್ತಿದ್ದೀನಿ ಅಂತ ನಮ್ಮ software engineers ಅದಾಗಲೇ ಗೊತ್ತಾಗಿರುತ್ತದೆ.ಉಳಿದವರಿಗೆ ಏನಿದು ಆನ್ನಿಸಬಹುದು. ಹೆಚ್ಚಿನ ಜನರಲ್ಲಿ software engineers ಅಂದರೆ ಹಣವೆಂಬ ಹೂವು ಬಿಡುವ ಗಿಡಗಳು ಎಂಬ ಭಾವ ಇದೆ. ಮೇಲೆ ನೋಡಿದ ಹಾಗೆ ಇನ್ನೂ ಕೆಲವರಿಗೆ ಹಣದುಬ್ಬರ ವಾಗಲೂ ಕಾರಣ ನಾವೇ ಎಂಬ ಅಭಿಪ್ರಾಯವೂ ಇದೆ. ಬೆಳಗ್ಗೆ ನಮ್ಮ ಹತ್ತಿರ ಆದಷ್ಟೂ ಹಣ ಕಸಿದುಕೊಳ್ಳುವ ಹೊಂಚು ಹಾಕಿವ ಜನ ,ರಾತ್ರಿ ಎಲ್ಲಾದಕ್ಕೂ ನಾವೇ ಕಾರಣ ಅಂತ ಹೇಳಿಕೊಂಡು ಮಲಗುತ್ತಾರೆ.
ನಮಗೆ ಕೈ ತುಂಬಾ ಸಂಬಳ ಬರುವುದೇನೋ ನಿಜ. ಸಂಬಳ ಅಂತ ಬಂದ ಮೇಲೆ ಮನೆ ಮಠ, ಖರ್ಚು ವೆಚ್ಚ ಗಳು ನಮಗೂ ಇದ್ದೇ ಇರುತ್ತದೆ. ಆರು ಸಾವಿರ ತರುವವನು ಅವನ ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡರೆ,ಅರವತ್ತು ಸಾವಿರ ಬರುವವನು ಒಂದಿಷ್ಟು ಗೇಣು ಹೊರಲಾಡಿಕೊಳ್ಳಲು ಜಾಗ ಇರುವ ಹಾಗೆ ದೊಡ್ಡ ,ಸ್ವಲ್ಪ ಐಷರಾಮಿ, ಒಳ್ಳೆಯ ಮೆತ್ತನೆ ದುಬಾರಿ ಹಾಸಿಗೆ ತಂದು ಕೊಳ್ಳುತ್ತಾನೆ. ಆದಾಯ ಜಾಸ್ತಿ ಆದ ಹಾಗೆ ಒಬ್ಬ ಮನುಷ್ಯನು ತನ್ನ ಆಸೆಗಳ ಸೀಮೆಯನ್ನು ಸ್ವಲ್ಪ ಸ್ವಲ್ಪವಾಗಿಯೇ ವಿಸ್ತರಿಸಿ ಕೊಳ್ಳುತ್ತಾ ಹೋಗುತ್ತಾನೆ. ಈ ಮನುಷ್ಯನ ಸಹಜಗುಣವನ್ನು ನಾನು ಯಾಕೆ ಹೇಳುತ್ತಿದ್ದೇನೆ ಆಂದರೆ ನೀವು ಆಂದುಕೊಂಡಿರುವ ಕೈ ತುಂಬಿ ತುಳುಕುವ ಷ್ಟು ಸಂಬಳ ಬರುವ software engineer ಗೆ ಕೂಡ ಅವರದ್ದೇ ಖರ್ಚು ವೆಚ್ಚ ಇರುತ್ತದೆ,ಅವರದ್ದೇ ಜೀವನ ಇರುತ್ತದೆ ಎಂದು ಹೇಳಲು.
ಕೈ ತುಂಬಾ ಸಂಬಳ ಬರುತ್ತದೆ ,ಅರಾಮಾಗಿ ಬದುಕುತ್ತಿದ್ದಾರೆ , ನಮಗೂ ಒಂದಿಷ್ಟು ಇರಲಿ ಅಂತ ನಮ್ಮ ಹತ್ತಿರ ಅನಾವಶ್ಯಕವಾಗಿ ಕಿತ್ತುಕೊಳ್ಳುವ ಜನಗಳು ನೋಡಿದಾಗ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ. ಹತ್ತು ರುಪಾಯಿ ಕೇಳುವ ಕಡೆ ಇಪ್ಪತ್ತು ರುಪಾಯಿ ಕೇಳುವ ಆಟೋದವರು, ಒಂದು ಎರಡೂ ರೂಪಾಯಿ ಇವರಿಗ್ಯಾವ ಲೆಕ್ಕ ಅಂತ ಚಿಲ್ಲರೆ ಕೊಡದೇ ಹೋಗುವ ಬಸ್ ಕಂಡಕ್ಟರ್ ಗಳು, ಲಕ್ಷ ಲಕ್ಷ ಮುಂಗಡ ಹಣ ತೆಗದುಕೊಳ್ಳುವ ಬಾಡಿಗೆ ದಾರರು ಹೀಗೆ ನಾವು software engineer ಅಂದ ಕೂಡಲೇ ಹಣ ಕೀಳುವ ಜನರಾಗಿ ಬಿಡುವವರನ್ನು ನೋಡಿದಾಗ ನಿಜಕ್ಕೂ ಮನಸ್ಸಿಗೆ ಬೇಜಾರಾಗುತ್ತದೆ.
ಇನ್ನೂ ನಮ್ಮಿಂದ ಬಾಡಿಗೆ, ಎಲ್ಲದರ ರೇಟ್ ಜಾಸ್ತಿ ಆಯಿತು ಅಂತ ಹೇಳುವವರಿಗೆ ಸಣ್ಣ ಉದಾಹರಣೆ ಕೊಡ ಬಯಸುತ್ತೇನೆ.ಒಂದು ಊರು ಇತ್ತು . ಊರ ಹೊರಗೆ ಒಂದೊಂದೇ ಕಂಪನಿಗಳು ತಲೆ ಎತ್ತಲು ಶುರುವಾಯಿತು .ಅದರ ಮೊದಲು ಊರ ಹೊರಗೆ ಮನೆಗಳೇ ಇರಲಿಲ್ಲ.ಇದ್ದರೂ ಬಾಡಿಗೆ ತುಂಬಾ ಕಡಿಮೆ. ಸಾಮನ್ಯವಾಗಿ ಕೆಲಸ ಮಾಡುವವರು ಕೆಲಸ ಜಾಗ ಮಾಡುವ ಹತ್ತಿರ ಮನೆ ಮಾಡುವುದರಿಂದ ಇಲ್ಲಿ ಮನೆಗಳಿಗೆ ಬೇಡಿಕೆ ಜಾಸ್ತಿ ಆಗಿದೆ. ಬೇಡಿಕೆ ಜಾಸ್ತಿ ಆದಂತೆ ಮನೆಗಳು ಕಟ್ಟಿ ಬಾಡಿಗೆಗೆ ಬಿಡುವವರು ಜಾಸ್ತಿ ಆಗಿದ್ದಾರೆ.ಹೊಸದಾಗಿ ಮನೆ ಮಾಡಬೇಕು ಎಂಬುವವರ ಪೈಕಿ ಜಾಸ್ತಿ ಊರ ಹೊರಗಿನವರು .ಭಾಷೆ ಗೊತ್ತಿಲ್ಲದ ಬೇರೆ ನಾಡಿನವರು ಬಂದಿದ್ದಾರೆ.ಎಲ್ಲಿಂದಲೋ ಬಂದವರಿಗೆ ಊರಿನ ಲೆಕ್ಕಾಚಾರಗಳ ಪರಿಚಯ ಕಮ್ಮಿ.ತಲೆ ಮೇಲೊಂದು ಸೂರು ಸಿಕ್ಕರೆ ಸಾಕು ಎಂದುಕೊಂಡು ಕೇಳಿದಷ್ಟು ಹಣ ಕೊಡುತ್ತಾ ಹೋಗಿದ್ದಾರೆ. ಕುರು ತಾನಾಗಿಯೇ ಕೊಬ್ಬಿ ,ತಾನಾಗಿಯೆ ಕುತ್ತಿಗೆ ನೀಡುತ್ತಿರುವುದನ್ನು ಜನ ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ . ಅಷ್ಟೇ ನಡೆದದ್ದು ಇದೀಗ ಇಲ್ಲಿ ಕಬ್ಬಿಣಕ್ಕೂ ಚಿನ್ನದ ಬೆಲೆ .

ನಮ್ಮಿಂದಲೇ ಎಲ್ಲಾ ದುಬಾರಿ ಯಾಯಿತು ಎಂದು ಹೇಳುವ ಜನ ಇಲ್ಲಿ ಸರಿಯಾಗಿ ಕಣ್ಣು ತೆರದು ನೋಡಬೇಕಾಗಿದೆ.ಹೊಸದಾಗಿ ಮನೆ ಮಾಡಬೇಕು ಎಂಬುವವರ ಪೈಕಿ ಜಾಸ್ತಿ ಊರ ಹೊರಗಿನವರು .ಭಾಷೆ ಗೊತ್ತಿಲ್ಲದವರು. ಅದೇ ಊರಿನವರು ಊರಿನ ಒಂದು ಭಾಗ ವಾಗಿ ಹೋಗಿರುವುದರಿಂದ ಹೊಸ ಮನೆ ಮಾಡುವ ಗೋಜಿಗೆ ಕೈ ಹಾಕುವುದು ಕಮ್ಮಿ. ಅವರಿಗೆ ಅದು ಸಮಸ್ಯೆ ಅಲ್ಲಾ.ಉದಾಹರಣೆಗೆ ಆಟೋದವನಿಗೆ ಎಲ್ಲಿಗೋ ಹೋಗಬೇಕು ಏಷ್ಟಾಗುತ್ತದೆ ಆಂತ ಕೇಳಿದಾಗ ಅವನು ಮೊದಲು ಇದೇ ಊರಿನವರಾ ಅಥವ ಬೇರೆ ಊರಿನವರಾ ಅಂತ ನೋಡುತ್ತಾನೆ. ಹೊಸಬರಾದರೆ ಆತ ಹೇಳಿದ್ದೇ ರೇಟ್.. .ಗೊತ್ತಿಲ್ಲದ ಜನ ಸುಮ್ಮನೆ ಕೊಟ್ಟು ಹೋಗುತ್ತಾರೆ.ಆದರೆ ಅದೇ ಊರಿನವರಾದರೆ "ನಾವು ಇದೇ ಊರಿನವರು.ನಮಗೆ ನಾಮ ಹಾಕಬೇಡ" ಅಂತ ಹೇಳಿ ಚ್Yಕಾಶಿ ಮಡಲು ನಿಲ್ಲುತ್ತಾರೆ.ಇಲ್ಲೂ ಅದೇ ಆಗಿದ್ದು .ಎಲ್ಲಿಂದಲೋ ಬಂದ ಹೊಸಬರು ಮೊದಮೊದಲು ಒಂಥರಾ uncomfort zone ನಲ್ಲಿಯೇ ಇರುತ್ತಾರೆ. ಆದಷ್ಟು ಬೇಗ ಮನೆ ಮಾಡಿಕೊಳ್ಳುವ ಆತುರದಲ್ಲಿರುತ್ತಾರೆ.ಏಷ್ಟಾದರೂ ಸರಿ ಸಿಕ್ಕರೆ ಸಾಕು ಅನ್ನುವವರನ್ನು ಕೆಲವರು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಐ ಟಿ ಕಂಪನಿಗಳು ಎದ್ದಿರುವ ಎಲ್ಲಾ ಕಡೆಯಲ್ಲೂ ಇದನ್ನು ಗಮನಿಸಬಹುದು.
Demand ಜಾಸ್ತಿ ಆದ ಹಾಗೆ supply ಮಾಡುವವರು ಜಾಸ್ತಿ ಆಗಿದ್ದಾರೆ . Demand ಮಾಡುವವರು ಜಾಸ್ತಿಯೇ ಇರುವದರಿಂದ supply ಮಾಡುವವರು ಲಾಭ ಮಾಡಿಕೊಂಡಿದ್ದಾರೆ ಅಂತ ಹೇಳಿ ನಾನು ಇಲ್ಲಿಯವರೆಗೂ ಹೇಳಿದನ್ನು ಸಾರ ಸಗಟವಗಿ ಕೆಲವರು ತಿರಸ್ಕರಿಸಬಹುದು. ಆದರೆ ನನ್ನ ಉದ್ದೇಶ buyers ಪಡುತ್ತಿರುವ ಪಾಡನ್ನು ಇಲ್ಲಿ ತೋರಿಸುವುದು.ಐ ಟಿ ನವರು ಬರುತ್ತಾರೆ ,ಕೇಳಿದಷ್ಟು ಹಣ ಕೊಡುತ್ತಾರೆ ಅಂತ ಆಂದುಕೊಂಡು ಕೋಟಿಗಟ್ಟಲೇ ಸಾಲ ಮಾಡಿ ,ಬ್ಯಾಂಕ್ ಸಾಲದ ಕಂತು ತೀರಿಸಲು ನಮಗೇ ಕತ್ತರಿ ಹಾಕುವುದು ಏಷ್ಟು ಸರಿ.
ಕೆಲವೊಮ್ಮೆ ನಮ್ಮನ್ನು ಹಣದ ಮೊಟ್ಟೆ ಇಡುವ ಕೋಳಿ ಅಂತ ತಿಳಿದುಕೊಳ್ಳುವ ಜನರ ತಪ್ಪು ಅಭಿಪ್ರಾಯಗಳಿಂದ ನಾವುಗಳು ತುಂಬಾ ಸಮಸ್ಯೆ ಎದುರಿಸಬೇಕಾಗಿದೆ . ಐ ಟಿ ಕಂಪನಿಗಳಿರುವ ಕಡೆ software engineer ಗಳ ದರೋಡೆ ದಿನದಿಂದ ದಿನೇ ಹೆಚ್ಚುತಿದೆ. ಸುಮ್ಮಸುಮ್ಮನೇ software engineer ಗಳ ಗಾಡಿಗೆ ಡಿಕ್ಕಿ ಹೊಡೆದು ಅವರನ್ನು ಹೆದರಿಸಿ ,ಬೆದರಿಸಿ ದುಡ್ಡು ಕಿತ್ತುಕೊಳ್ಳುವುದು,ಅಲ್ಲಿ ಸಂಚರಿಸುವ ಬಸ್ ಗಳಲ್ಲಿ ಅವರ ಜೇಬಿಗೆ ಕನ್ನ ಹಾಕುವುದು ,ಡ್ರಾಪ್ ಕೊಡುವ ನೆಪದಲ್ಲಿ ಅವರನ್ನು ಕಿಡ್ನ್ಯಾಪ್ ಮಾಡುವ ಉದಾಹರಣೆಗಳು ಜಾಸ್ತಿ ಆಗುತ್ತಿದೆ.ಕೆಲವೊಮ್ಮೆ ನಮಗೆ ನ್ಯಾಯ ಕೊಡಿಸಬೇಕಾದ ಪೋಲಿಸ್ ಗಳು ನಮ್ಮನು ಎ ಟಿ ಎಮ್ ಅಂತೆ ನೋಡುತ್ತಾರೆ. ಒಮ್ಮೆ ನನ್ನ ಗೆಳೆಯನೊಬ್ಬ ಗಾಡಿಗೆ ಡಿಕ್ಕಿ ಹೊಡೆದು ಜನ ದುಡ್ಡು ಕೇಳಲು ಶುರು ಮಾಡಿದರು.ಕೊನೆಗೆ ಪೋಲಿಸ್ ಠಾಣೆ ಮೆಟ್ಟಿಲು ಹತ್ತಿದಾಗ ಪೋಲಿಸ್ ಹೇಳಿದ್ದನ್ನು ಗೊತ್ತೇ " ಪಾಪ, ಬಿಡಿ ಸಾರ್ ಅವರು ನೀವೇ ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡು ಕೊಟ್ಟುಬಿಡಿ.ಎನಂತೀರಾ ಇದಕ್ಕೆ ?
ನಮ್ಮ ಬಗ್ಗೆ ಜನರಲ್ಲಿರುವ ತಪ್ಪು ಅಭಿಪ್ರಾಯಗಳಿಂದ ನಮಗೆ ಅಗುತ್ತಿರುವ ತೊಂದರೆಗಳನ್ನು ಹೇಳುವ ಸಣ್ಣ ಪ್ರಯತ್ನ ಇಲ್ಲಿ ಮಾಡಿದ್ದೇನೆ ಅಷ್ಟೆ.ನಮ್ಮನ್ನು ನಾವು ಎತ್ತಿ ಕಟ್ಟಿಕೊಳ್ಳುವ ಅಥವಾ ಯಾರನ್ನೂ ಕೀಳಾಗಿ ನೋಡುವ ಉದ್ದೇಶ ನನ್ನದಲ್ಲ.ನಿಮ್ಮ ಜೊತೆ ಹಂಚಿಕೊಳ್ಳುವುದು ಇನ್ನು ಇದೆ. ಮತ್ತೇ ಬರುತ್ತೇನೆ.