ಹಿಂದಿನ ಲೇಖನದಲ್ಲಿ ಆ ನಮ್ಮೊಳಗಿರುವ ವ್ಯಕ್ತಿಯ ಬಗ್ಗೆ ಪರಿಚಯಿಸಿ ಅರ್ಧಕ್ಕೆ ನಿಲ್ಲಿಸಿದ್ದೆ .ನಾನು ಹಿಂದಿನ ಲೇಖನದಲ್ಲಿ ಪರಿಚಯಿಸಿದ್ದ ಆ ವ್ಯಕ್ತಿ ನಮ್ಮೊಳಗೆ ಎಷ್ಟೊಂದು ಜೀವಂತವಾಗಿ ಇದ್ದಾನೆ ಎಂಬುದು ನಾವಿಲ್ಲಿ ಗಮನ ಹರಿಸಬೇಕಾದ ವಿಷಯ .ನನ್ನ ಪ್ರಕಾರ ನಮ್ಮೆಲ್ಲರೊಳಗೂ ಈ ವ್ಯಕ್ತಿ ನಮ್ಮ ಹುಟ್ಟಿನಿಂದಲೇ ಇರುತ್ತಾನೆ .ಆದರೆ ದಿನದಂತೆ ದಿನ ಅವನು ಎಷ್ಟು ಸಕ್ರಿಯವಾಗಿರುತ್ತಾನೆ ,ಜೀವಂತವಾಗಿರುತ್ತಾನೆ ಅನ್ನುವದು ನಮ್ಮ ಬದುಕಿನ ಮೇಲೆ ಅವಲಂಭಿಸಿರುತ್ತದೆ .
ನನ್ನ ಪ್ರಕಾರ ಈ ನಮ್ಮೊಳಗಿರುವ ವ್ಯಕ್ತಿ ನಮ್ಮೆಲ್ಲರಲ್ಲೂ ತುಂಬಾ ಸಕ್ರಿಯವಾಗಿರುವ ಕಾಲ ಅಂದರೆ ನಮ್ಮ ಬಾಲ್ಯ.ನೀವೇ ಯೋಚಿಸಿ , ನಮ್ಮ ಬಾಲ್ಯದಲ್ಲಿ ನಮ್ಮ ಮನಸಿಗೆ ಇಷ್ಟವಾಗಿದ್ದು ಮಾಡಲು ನಾವು ಎಷ್ಟು ಹಿಂಜರಿಯುತ್ತಿದ್ದೆವು ? ನಮ್ಮ ಕಣ್ಣಿಗೆ ಇಷ್ಟವಾಗುವ ಚಿಟ್ಟೆ ಹಿಡಿಯಲು ಆದೆಂತಹ ಸಾಹಸ ಮಾಡಲು ತಯಾರಾಗಿದ್ದೆವು . ಯಾರು ಎದುರಗಡೆ ಇರಲಿ,ಪರಿಸ್ಥಿತಿ ಹೇಗೆ ಇರಲಿ ನಮಗೆ ನಗು ಬರುವ ಹಾಗೆ ಇದ್ದರೆ ಒಮ್ಮೆ ಜೋರಾಗಿ ನಕ್ಕು ಬಿಡುತ್ತಿದ್ದೆವು .ನಮಗೆ ತಿನ್ನಲು ಬೇಕೆನಿಸಿದ್ದು ಕದ್ದು ತಿಂದಾದರೂ ಸರಿ ತಿಂದು ಖಿಷಿ ಪಡುತಿದ್ದೆವು. ಹೀಗೆ ನಮ್ಮೊಳಗೆ ಇದ್ದ ಆ ವ್ಯಕ್ತಿ ಆಗ ಹೇಳಿದ್ದು ನಾವು ಒಂದು ಚೂರು ಯೋಚಿಸದೆ ಪಟ್ ಅಂತ ಮಾಡುತ್ತಿದ್ದೆವು .
ಅಯ್ಯೋ ಅದೆನ್ನೆಲ್ಲಾ ಈಗ ಮಾಡಲು ಆಗುತ್ತದಾ ಎಂದು ನೀವು ಕೇಳಬಹುದು .ಇಲ್ಲ . ಆಗುವುದಿಲ್ಲ .ನನ್ನ ಪ್ರಕಾರ ವಯಸ್ಸು ಆದಂತೆ ನಮ್ಮೊಳಗಿರುವ ವ್ಯಕ್ತಿ ಸ್ವಲ್ಪ ಬೆಳೆಯುತ್ತಾನೆ. ಅವನ ಸಲಹೆಗಳು ಅಂದರೆ ನಮ್ಮ ಮನಸಿನ ಮುದ ನೀಡುವ ಆ ಕಾರ್ಯಗಳು ಬದಲಾಗುತ್ತವೆ . ಬಾಲ್ಯದಲ್ಲಿ ಹಾಗು ಈಗ ನನ್ನ ಮನಸಿಗೆ ಮುದ ನೀಡುವ ಬದಲಾಗಿವೆ . ಹಾಗೆ ನಿಮ್ಮಲ್ಲೂ ಕೂಡ .
ಆದರೆ ವಿಷಯ ಅದಲ್ಲ . ನಾವು ಬಾಲ್ಯದಲ್ಲಿ ಎಷ್ಟು ಸಲೀಸಾಗಿ ಅವನ ಮಾತು ಕೇಳುತ್ತಿದ್ದೆವು .ಆದರೆ ಬೆಳೆಯುತ್ತಾ ಬೆಳೆಯುತ್ತಾ .. ನೀವೇ ಯೋಚಿಸಿ ನೋಡಿ . ಇಲ್ಲಾ ಅವನ ಮಾತು ನಮ್ಮಲ್ಲಿ ಶೇಕಡ ೯೯ ಜನ ತಿರಸ್ಕರಿಸುತ್ತೇವೆ . ಅವನು ಹೇಳಿದಂತೆ ಮಾಡಿದರೆ ನಮಗೆ ಖುಷಿ ಸಿಗುವುದು ಎಂಬುದು ಗೊತ್ತು ಆದ್ರೆ ಅದನ್ನು ಮಾಡದೆ ಅದಕೆ ನೂರಾರು ಕಾರಣಗಳು ನೀಡುತ್ತೇವೆ .ಈಗ ಬೇಡ ಸ್ವಲ್ಪ ದಿನಗಳು ಕಳಿಯಲಿ ಆಮೇಲೆ ಮಾಡೋಣ ಎಂದು ಕೊಳ್ಳುತ್ತೇವೆ . ಅಯ್ಯೋ ನಮಗೆ ಮನಸಿಗೆ ಮುದ ಸಿಗುತ್ತದೆ ಅಂತ ಆ ಕೆಲಸಗಳನ್ನು ಮಾಡಿದರೆ ನಮ್ಮ ಸುತ್ತಮುತ್ತ ಜನ ಏನನ್ನುತ್ತಾರೋ ಎಂಬ ಭಯ ಬೆಳೆಸಿಕೊಂಡು ಬಿಡುತ್ತೇವೆ .ಹೀಗೆ ಸಂಸಾರ ತಾಪತ್ರ್ಯಗಳಲ್ಲಿ ನಮ್ಮೊಳಗಿರುವ ವ್ಯಕ್ತಿಯನ್ನು ಮರೆತು , ಪೋಷಿಸದೇ ಅವನನ್ನು ಮೆಲ್ಲಗೆ ಸಾಯಲು ಬಿಡುತ್ತೇವೆ .ನಮ್ಮ ಸಂತೋಷದ ಕ್ಷಣಗಳನ್ನು ನಮ್ಮಿಂದ ದೂರವಾಗಲೂ ನಾವೇ ಕಾರಣಕರ್ತರಾಗುತ್ತೇವೆ .
ಜಗತ್ತು ಅದೊಂಥರಾ ವಿಚಿತ್ರ . ನಾವು ಏನೂ ಮಾಡಿದರೂ ಅದನ್ನು ಹೀಯಾಳಿಸುವವರು ಸಿಗುತ್ತಾರೆ . ಅವರಿಗೆ ಹೆದರಿ ನಮ್ಮೊಳಗಿರುವ ಈ ವ್ಯಕ್ತಿಯನ್ನು ಕೊಂದು ಬಿಟ್ಟರೆ ಎಗೆ ನಮಗೆ ಏನನ್ನಿಸುವುದಿಲ್ಲ . ಆದ್ರೆ ಅದೊಂದು ದಿನ ಬರುತ್ತದೆ .ನಮಗೆ ಎಲ್ಲವೂ ಸಾಕಾಗಿ ನಮ್ಮೊಳಗಿರುವ ವ್ಯಕ್ತಿಯ ಮಾತುಗಳು ಕೇಳಬೇಕೆಂದು ಅನಿಸುತ್ತದೆ .ಆದರೆ ನಮ್ಮೊಳಗೆ ಅವನಿರುವುದಿಲ್ಲ ,ಹೊರಗೆ ನಮಗೆ ಮಾಡಲು ಶಕ್ತಿ ಇರುವುದಿಲ್ಲ .ಆಗ ಬರಿಯ ಪಶ್ಚಾತ್ತಾಪ ಮಾತ್ರ ನಮ್ಮ ಹತ್ತಿರ ಇರುತ್ತದೆ .
ಅದು ನಮ್ಮನ್ನು ನಿಧಾನವಾಗಿ ಸುಡಲು ಶುರುಮಾಡುತ್ತದೆ . ಸುಟ್ಟು ಬೂದಿಯಾಗುವುದೊಂದೇ ಉಳಿಯುತ್ತದೆ .ಅದರ ಬದಲು ನಾವು ನಮ್ಮೊಳಗಿರುವ ಈ ವ್ಯಕ್ತಿಯ ಮಾತನ್ನು ಕೇಳಲು ಯಾಕೆ ಶುರು ಮಾಡಬಾರದು .ನಾನಂತೂ ಕೇಳೋಣ ಅಂತ ತೀರ್ಮಾನಕ್ಕೆ ಬಂದಿದ್ದೇನೆ .ನೀವು ?
English summary:
The important
thing we need to worry about the person who resides in us is how much he is
alive inside us. The person who resides in us active during our childhood. Yes, just remember those days .We used to do anything that would make us happy when we were childhood .But as we grow old we start to avoid the person insides us.We start to give stupid reasons.Indirectly by doing that we refrain ourselves from the happiness.
Today we may don’t realize, but one day when we have don’t capacity to hear the person inside us. Moreover he may be not alive. Instead of that let’s start following the suggestion of the person inside us.