ಸೋಮವಾರ, ನವೆಂಬರ್ 26, 2012

ಕವನಗಳ ಗೊಂಚಲು



ಮುತ್ತು 
ನೀ ಮೆಲ್ಲಗೆ ಗಲ್ಲಕ್ಕೆ 
ಮುದ್ದಿಸಿಟ್ಟ ಮುತ್ತು ,
ನನ್ನ 
ಮತಿಯೇ ಮರೆಸುವಂತೆ 
ಮಿತಿ ಮೀರಿಸಿದೆ  ಮತ್ತು .



ಗೆಳತಿ 
ಮಾತಿಗೂ ,ಮೌನಕ್ಕೂ 
 ವ್ಯತ್ಯಾಸವೇನು ಗೊತ್ತೇ ?
ನನ್ನ ಮಾತು ಎಲ್ಲರಿಗು
 ಅರ್ಥ ಆಗುತ್ತೆ ?
ಆದರೆ ನನ್ನ ಮೌನ 
ನಿನ್ನೊಬ್ಬಳಿಗೆ ಆರ್ಥವಾಗುತ್ತೆ ?


ಶಿಕ್ಷೆ 
ಕದ್ದವರಿಗೆಲ್ಲ ಶಿಕ್ಷೆ  ಆಗಲೇ  
ಬೇಕಂತಿದ್ದರೆ  ಚೆಲುವೆ ,
ನನ್ನ ಹೃದಯ ಕದ್ದ  ನಿನಗೂ 
ಶಿಕ್ಷೆ  ಆಗಲೇಬೇಕಲ್ಲವೆ .
ಅಂತದ್ದೇನಿಲ್ಲ ,
ಆಗು ನೀ ನನ್ನ ಮದುವೆ .

 ನಿನ್ನ ನಗು 
ಎಳೆಯ ತುದಿ 
ಮಂಜಿನ ಹನಿ 
ಬೀಗುತಿಹುದು ,
ಜಗತ್ತಿನ ಸೌಂದರ್ಯವೆಲ್ಲ 
ನನ್ನದೇ ಎಂದು ,
ನಕ್ಕು ನೀ ಒಮ್ಮೆ 
ತೋರಿಸು ಏಳು 
ಅಧ್ಬುತಗಳ ಸೌಂದರ್ಯವೂ 
ಮೀರಿದ್ದು ನಿನ್ನ ನಗುವೆಂದು .

ಕಪ್ಪು , ಬಿಳಿಪು 
ಕಪ್ಪು ಅನಿಷ್ಟ ,
ಬಿಳಿ ಶ್ರೇಷ್ಠ 
ಎಂಬ ಭಾವ 
ಪ್ರೀತಿಗಿದ್ದ ಮೇಲೆ ,
ಚಂದ್ರನಿಗೆ  ಕಪ್ಪು
 ಆಕಾಶದ ಮೇಲೆ,
 ಪ್ರೀತಿ ಮೂಡಿತು ಹೇಗೆ ?
ಚಪ್ಪರಿಸುವ ಸಿಹಿಗೆ 
ಕರಿ ನೇರಳೆಯಲ್ಲಿ ,
ಪ್ರೀತಿ ಮೂಡಿತು ಹೇಗೆ ?
ಸುಮಧುರ ಕಂಠಕ್ಕೆ 
ಕಪ್ಪು ಕೋಗಿಲೆಯಲ್ಲಿ 
 ಪ್ರೀತಿ ಮೂಡಿತು ಹೇಗೆ ?
ನನ್ನ ನಿನ್ನ ಪ್ರೇಮ 
ಕರಿಗುಡ್ಡೆ ಇರುವ ಕಣ್ಣಿನ ,
ಮೊದಲ ನೋಟದಲ್ಲಿ 
ಶುರುವಾಯಿತು ಹೇಗೆ ?





ಶನಿವಾರ, ನವೆಂಬರ್ 3, 2012

ಕಾದಿಹಳು


ಕಾದಿಹಳು ಕದಲದೆ ಕನವರಿಸುತಾ 
ಬಾಗಿಲ ಬಳಿಯಲಿ ,
ಗಡಿಯಲಿ ಗುಂಡಿಗೆ  ಗುಂಡಿಗೆಯೊಡ್ಡಿ 
ನಿಂತವನಿಗೆ ಇವಳಿಲ್ಲಿ .

ಸೆರಗಿನ ತುದಿಯನು 
ಬೆರಳಲ್ಲಿ ಆಡಿಸುತಾ ,
ಶಶಿಗೂ ,ಸೂರ್ಯನಿಗೂ 
ವಿರಹವ ವಿವರಿಸುತಾ.

ಚಿತೆಯಾಗದ ಚಿಂತೆಯ 
ಅಬ್ಬರಕ್ಕೆ ಅದರುತಾ,
ಕಣ್ಣಮುಂದೆ ಕ್ರಮಿಸಿದಂತೆ 
ಆಗುವ ಕಾಲನಿಗೆ ಹೆದರುತಾ .

ಕಹಿಸುಧ್ಧಿ ಕೇಳದ 
ನೆನ್ನಗಳ ನೆಮ್ಮದಿಯಲ್ಲಿ ನೂಕುತ ,
ನಲ್ಲನಿಲ್ಲದ್ದ ನಾಳೆಯು 
ಬೇಡವೆಂದು ಭಗವಂತನಲ್ಲಿ ಬೇಡುತಾ .

ಕಳೆದಿಹಳು ಇಂದು 
ಇನಿಯನ ಆಗಮನದ ನಿರೀಕ್ಷೆಯಲಿ ,
ಮಿಂಚಿನ ಬದಲು 
ನಿರೀಕ್ಷೆಗಳೇ ತುಂಬಿದೆ ನಯನಗಳಲಿ .
English summary: The poem is about the wife of soldier  who is waiting for him to return home fro the war . She is waiting for him in front of her door without moving a little bit.She has been expressing her pain to her two companions i.e sun and moon. Lady is happy about past days as she didn't hear any bad news from battle .She is praying to god ,so that in coming days she would meet her husband.She is spending all time waiting for her husband.Even the sparkles that used to lighten her eyes has been replaced by desire to meet her husband alive.

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...