ಮುತ್ತು
ನೀ ಮೆಲ್ಲಗೆ ಗಲ್ಲಕ್ಕೆ
ಮುದ್ದಿಸಿಟ್ಟ ಮುತ್ತು ,
ನನ್ನ
ಮತಿಯೇ ಮರೆಸುವಂತೆ
ಮಿತಿ ಮೀರಿಸಿದೆ ಮತ್ತು .
ಗೆಳತಿ
ಮಾತಿಗೂ ,ಮೌನಕ್ಕೂ
ವ್ಯತ್ಯಾಸವೇನು ಗೊತ್ತೇ ?
ನನ್ನ ಮಾತು ಎಲ್ಲರಿಗು
ಅರ್ಥ ಆಗುತ್ತೆ ?
ಆದರೆ ನನ್ನ ಮೌನ
ನಿನ್ನೊಬ್ಬಳಿಗೆ ಆರ್ಥವಾಗುತ್ತೆ ?
ಶಿಕ್ಷೆ
ಕದ್ದವರಿಗೆಲ್ಲ ಶಿಕ್ಷೆ ಆಗಲೇ
ಬೇಕಂತಿದ್ದರೆ ಚೆಲುವೆ ,
ನನ್ನ ಹೃದಯ ಕದ್ದ ನಿನಗೂ
ಶಿಕ್ಷೆ ಆಗಲೇಬೇಕಲ್ಲವೆ .
ಅಂತದ್ದೇನಿಲ್ಲ ,
ಆಗು ನೀ ನನ್ನ ಮದುವೆ .
ನಿನ್ನ ನಗು
ಎಳೆಯ ತುದಿ
ಮಂಜಿನ ಹನಿ
ಬೀಗುತಿಹುದು ,
ಜಗತ್ತಿನ ಸೌಂದರ್ಯವೆಲ್ಲ
ನನ್ನದೇ ಎಂದು ,
ನಕ್ಕು ನೀ ಒಮ್ಮೆ
ತೋರಿಸು ಏಳು
ಅಧ್ಬುತಗಳ ಸೌಂದರ್ಯವೂ
ಮೀರಿದ್ದು ನಿನ್ನ ನಗುವೆಂದು .
ಕಪ್ಪು , ಬಿಳಿಪು
ಕಪ್ಪು ಅನಿಷ್ಟ ,
ಬಿಳಿ ಶ್ರೇಷ್ಠ
ಎಂಬ ಭಾವ
ಪ್ರೀತಿಗಿದ್ದ ಮೇಲೆ ,
ಚಂದ್ರನಿಗೆ ಕಪ್ಪು
ಆಕಾಶದ ಮೇಲೆ,
ಪ್ರೀತಿ ಮೂಡಿತು ಹೇಗೆ ?
ಚಪ್ಪರಿಸುವ ಸಿಹಿಗೆ
ಕರಿ ನೇರಳೆಯಲ್ಲಿ ,
ಪ್ರೀತಿ ಮೂಡಿತು ಹೇಗೆ ?
ಸುಮಧುರ ಕಂಠಕ್ಕೆ
ಕಪ್ಪು ಕೋಗಿಲೆಯಲ್ಲಿ
ಪ್ರೀತಿ ಮೂಡಿತು ಹೇಗೆ ?
ನನ್ನ ನಿನ್ನ ಪ್ರೇಮ
ಕರಿಗುಡ್ಡೆ ಇರುವ ಕಣ್ಣಿನ ,
ಮೊದಲ ನೋಟದಲ್ಲಿ
ಶುರುವಾಯಿತು ಹೇಗೆ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ