ಆಗ್ಹೋಗಿದಕ್ಕೆ
ಎಳ್ಳು ನೀರು ಬಿಟ್ಟು ,
ಇನ್ನ್ಮುಂದೆ ಆಗೋದನ್ನು
ಜುಟ್ಟುಗೆ ಬಿಟ್ಟು,ಹಾಯಾಗಿರೋ ತಮ್ಮ
ಇಂದು ನೀ ಚಿಂತೆ ಬದಿಗಿಟ್ಟು ,
ನಗುನಗುತಾ ಇರೋದೇ
ಸುಖ ಸಂಸಾರದ ಗುಟ್ಟು .
ಇದ್ದಿದ್ದೆ ಸಾವು,ಹುಟ್ಟು,
ಇದ್ದಿದೆ ಸಿಟ್ಟು,ಪೆಟ್ಟು,
ಹೆಂಡತಿ ಮಕ್ಕಳಿಗೆ ತಲೆಕೊಟ್ಟು
ಹೋಗಬೇಡ ತಲೆಕೆಟ್ಟು
ಹಾಯಾಗಿ ಬದುಕೋ ತಮ್ಮ ನೀ
ರಗಳೆ,ಬೊಗಳೆ ಎಲ್ಲ ಪಕ್ಕಕಿಟ್ಟು.
ಹೊಟ್ಟೆಗೆ ಹಿಡಿಯಷ್ಟು ಹಿಟ್ಟು ,
ಮುಚ್ಚಿಕೊಳ್ಳೋಕೆ ತುಂಡುಬಟ್ಟೆ ತೊಟ್ಟು
ಇಲ್ಲದೆ ಇರೋದರ ಚಿಂತೆ ಬಿಟ್ಟು ,ಮೀಸೆ ತಿರುವುತ್ತಾ ಬದುಕೋ ತಮ್ಮ
ನೀನು ಆಸೆ ಪಕ್ಕಕಿಟ್ಟು.
ಬರಲ್ಲಿಲ್ಲ ಬಟ್ಟೆ ತೊಟ್ಟು
ಹೋಗೋಲ್ಲ ಬಟ್ಟೆ ತೊಟ್ಟು,
ಮತ್ತ್ಯಾಕೋ ಮಧ್ಯದಲ್ಲಿ
ಹಣ ,ಹೆಣ್ಣಿಗಾಗಿ ಪೆಟ್ಟು ,
ದನಿಕಾನೋ ,ಮುರುಕಾನೋ
ಕೊನೆಗೆ ಸಿಗೋದ್ ಮಾತ್ರ
ಮೂರು ಆರರ ಚೌಕಟ್ಟು .
ಕೊನೆಗೆ ಸಿಗೋದ್ ಮಾತ್ರ
ಮೂರು ಆರರ ಚೌಕಟ್ಟು .
English summary: stop worrying about the past things ,leave the future to the astrologer ,just enjoy the present.Birth and death are beyond your limit.Tension ,quarrel are common in daily life.Keep all those aside and start enjoying the present.What do we need for living? Bread and some piece of clothes to cover your body.Stop worrying about those luxurious things which cause burden instead of making your lives comfortable.While birth we were naked and we will be naked when we are dead.Then why we have to fight in between for all these tangible things?Whether you are rich or poor doesn't matter when you are dead. At last what u going to get is a piece of land to bury your dead body.