ಮೋದಿ ಮೋಡಿ
ಗುಜರಾತಿನಲ್ಲಿ
ಮತದಾರರು
ಈ ಬಾರಿಯೂ
"ಕೈ" ಹಿಡಿದರು
ಮೋದಿಗೆ.
"ಕಮಲದ " ಹೂ
ಕಿವಿಗಿಟ್ಟ ರು
ಕಾಂಗ್ರೆಸ್ಸಿಗರಿಗೆ
ಭಾರ
ಈಗಿನ ಶಾಲೆಗಳಲ್ಲಿ
ಮಕ್ಕಳಿಗಿಂತ ಮಕ್ಕಳು
ಹೊರುವ ಪುಸ್ತಕಗಳ
ಚೀಲವೇ ಭಾರ ,
ಏಕಂದರೆ ಮುಂದೆ
ಆತನ ಜೇಬು ಆಗದೆ
ಹೋದರೂ ಭಾರ ,
ಆಗಬಹುದಲ್ಲ ಆತ
ಕೂಲಿಗಾರ .
ಕತ್ತರಿ
ಸಂಬಳ ಬಂದಾಗ
ಹೆಂಡತಿ ಗಂಡನ
ಜೇಬಿಗೆ ಹಾಕುವಳು
ಕತ್ತರಿ ,
BONUS ಬಂದಾಗ
ಹೇಳುವಳು
"ಯಾಕೋ ಖಾಲಿ
ಅನಿಸುತಿದೆ ನನ್ನ
ಕತ್ತು .... ರೀ "
P . ಉಷಾ
ನನ್ನ ಕಣ್ಣುಗಳಿಗೆ
ಪೀಯುಷ ,
ನಮ್ಮ ಪಕ್ಕದಮನೆ
P . ಉಷಾ .
ಅಕ್ಷಿ
ನಲ್ಲ ಹೇಳಿದನು
"ನೋಡಿದೊಡನೆ
ನಿನ್ನೆರಡು
ಮೋಹಕ ಅಕ್ಷಿ ,
ರೂಪು ತಳೆದಿತು
ನನ್ನಲ್ಲಿ ಪ್ರೇಮ ಪಕ್ಷಿ ,
ಅದಕ್ಕೆ ನಿನ್ನ ಕೈಯಲ್ಲಿರುವ
ನನ್ನ ಮಗುವೇ ಸಾಕ್ಷಿ "
Nice pa.... good one
ಪ್ರತ್ಯುತ್ತರಅಳಿಸಿ