ಬುಧವಾರ, ಜನವರಿ 9, 2013

ತಲೆ ಹರಟೆ


ಮೋದಿ ಮೋಡಿ 
ಗುಜರಾತಿನಲ್ಲಿ 
ಮತದಾರರು 
ಈ ಬಾರಿಯೂ 
"ಕೈ" ಹಿಡಿದರು 
ಮೋದಿಗೆ.
"ಕಮಲದ " ಹೂ 
ಕಿವಿಗಿಟ್ಟ ರು 
ಕಾಂಗ್ರೆಸ್ಸಿಗರಿಗೆ 


    ಭಾರ 
ಈಗಿನ ಶಾಲೆಗಳಲ್ಲಿ 
ಮಕ್ಕಳಿಗಿಂತ ಮಕ್ಕಳು 
ಹೊರುವ ಪುಸ್ತಕಗಳ 
ಚೀಲವೇ  ಭಾರ ,
ಏಕಂದರೆ ಮುಂದೆ 
ಆತನ ಜೇಬು ಆಗದೆ  
ಹೋದರೂ ಭಾರ ,
ಆಗಬಹುದಲ್ಲ  ಆತ 
ಕೂಲಿಗಾರ .

 ಕತ್ತರಿ  
 ಸಂಬಳ  ಬಂದಾಗ 
ಹೆಂಡತಿ ಗಂಡನ 
ಜೇಬಿಗೆ ಹಾಕುವಳು 
ಕತ್ತರಿ ,
BONUS   ಬಂದಾಗ 
ಹೇಳುವಳು 
"ಯಾಕೋ ಖಾಲಿ 
ಅನಿಸುತಿದೆ ನನ್ನ 
ಕತ್ತು .... ರೀ "

P . ಉಷಾ 
ನನ್ನ ಕಣ್ಣುಗಳಿಗೆ 
ಪೀಯುಷ ,
ನಮ್ಮ  ಪಕ್ಕದಮನೆ 
P . ಉಷಾ .

 ಅಕ್ಷಿ 
ನಲ್ಲ ಹೇಳಿದನು 
"ನೋಡಿದೊಡನೆ 
ನಿನ್ನೆರಡು 
ಮೋಹಕ  ಅಕ್ಷಿ ,
ರೂಪು ತಳೆದಿತು 
ನನ್ನಲ್ಲಿ ಪ್ರೇಮ ಪಕ್ಷಿ ,
ಅದಕ್ಕೆ ನಿನ್ನ ಕೈಯಲ್ಲಿರುವ 
ನನ್ನ ಮಗುವೇ  ಸಾಕ್ಷಿ "


1 ಕಾಮೆಂಟ್‌:

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...