ಅಂಗಿ
ನಿನ್ನ ನಗುವಿಗೆ
ನಾನಷ್ಟೇ ಕರಗಿಲ್ಲ
ಕೋಮಲಾಂಗಿ,
ಜೊತೆಗೆ ಕರಗಿದೆ
ಸಂಬಳ ಭಾರದಿಂದ
ತೂಗುತ್ತಿದ ಜೇಬು
ಇದ್ದ ಅಂಗಿ .
ಚಿತ್ರಾನ್ನ
ನನ್ನ ಪ್ರಿಯೆ
ಕಣ್ಣಿನಲ್ಲಿ ಬಡಿಸುತ್ತಾ
ಪ್ರೀತಿಯ ಪರಮಾನ್ನ ,
ತಟ್ಟೆಗೆ ಬಡಿಸಿದಳು
ತಂಗಳು ಚಿತ್ರಾನ್ನ .
ನಿನ್ನ ನಗು
ನಲ್ಲೆ
ನಗು ಕಾಣದ
ನಿನ್ನ ಕೆಂದುಟಿ ,
ಸಕ್ಕರೆ ಯಿಲ್ಲದ
ಕಾಫಿ -ಟೀ
ಮಾಡ್ರನ್ ಲವ್
ಈಗಿನ ಹುಡುಗ
ಹುಡುಗಿಯರದು
ಹುಸಿ ಪ್ರೇಮ ,
ಒಳಗಿನ ಗುಟ್ಟು
ಏನಿದ್ದರೂ ಕಾಮ ,
ಅದಕ್ಕೆ ಮದುವೆ
ಮುನ್ನ ,
ಸಂಸಾರದ list ಅಲ್ಲಿ
ಸೇರುವುದು "coma "
ಸರ್ಕಾರಿ ಕೆಲಸ
ಸರ್ಕಾರಿ ಕೆಲಸ
ಸಿಗಲು ಎರಡು ಬೇಕು ,
ಒಂದು ಹೆಸರು ಹಾಗು
ಜಾತಿ ತುಂಬುವ ಅರ್ಜಿ ,
ಇನ್ನೊಂದು ಲಂಚ
ಕೊಡುವಾಗ ಮುತುವರ್ಜಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ