ಶುಕ್ರವಾರ, ಆಗಸ್ಟ್ 24, 2018

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ ಹಲಸಿ ಹೋಗಿರುವ ೧೦ ವರ್ಷದ ಹಿಂದಿನ ಬೇರೆ ಭಾಷೆಯ ರಿಮೇಕ್ ಚಿತ್ರಗಳ ಮಧ್ಯ ಒಂದಲ್ಲ ಎರಡಲ್ಲ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ . ರಾಮ ರಾಮ ರೇ ಅಂತಹ ಒಂದು ಮನಮುಟ್ಟುವ ಚಿತ್ರ ಕೊಟ್ಟ ಸತ್ಯಪ್ರಕಾಶ್ ತಂಡದ ಮೇಲೆ ಭಾರೀ ನಿರೀಕ್ಷೆ ಇತ್ತು . ಈ ಚಿತ್ರ ನೋಡಿದ ಮೇಲೆ ಅದು ಹುಸಿಯಾಗಿಲ್ಲ . 
ಬಾನು ಹುಡುಕುವ ಸಮೀರ ,ಸಮೀರ ಹಾಗು ಬಾನು ಹುಡುಕುತ್ತಿರುವವರ ಸುತ್ತ ನಡೆಯುವ ಕಥೆ ಇದು. ಚಿತ್ರದ್ದಲ್ಲಿ ಯಾವುದೇ ಸನ್ನಿವೇಶ ಆಗಲಿ , ಪಾತ್ರವನ್ನಾಗಲಿ ತುರುಕಿಲ್ಲ . ಪಾತ್ರಗಳು , ಸನ್ನಿವೇಶಗಳು ಕಥೆಗೆ ಪೂರಕವಾಗಿ ಇದ್ದು ,ಕಥೆಯನ್ನು ಮುಂದೆ ತಳ್ಳಿಕೊಂಡು ಹೋಗುತ್ತದೆ . ಚಿತ್ರದ ಹೈಲೈಟ್ ಸಮೀರ ಪಾತ್ರ ಮಾಡಿರುವ ಬಾಲಕ . ಮಾಸ್ಟರ್ ಮಂಜುನಾಥ್ ಹಾಗು ಮಾಸ್ಟರ್ ಆನಂದ್ ನೋಡಿದ ಹಾಗೆ ಆಗುತ್ತದೆ . ಚಿತ್ರದುದ್ದಕ್ಕೂ ತಿಳಿಹಾಸ್ಯವಿದ್ದು, ನಿರ್ದೇಶಕರು ಎಲ್ಲಿಯೂ ಪ್ರೇಕ್ಷಕನಿಗೆ ಮೆಸೇಜ್ ಅನ್ನು ನಮ್ಮ ಮಾಸ ಸಿನೆಮಾಗಳಂತೆ ಸಂಭಾಷಣೆ ಮೂಲಕ ಹೇಳದೇ ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿದ್ದಾರೆ . ಕಾಲ ಕೂಡಿಬಂದರೆ ಹಸುವು ಹುಲಿಯೂ ಒಟ್ಟಿಗೆ ಇರಬಹುದು ಅನ್ನುವ ದೃಶ್ಯ ಇದಕ್ಕೆ ಒಂದು ಉದಾಹರಣೆ . 
ಚಿಕ್ಕ ವಯಸ್ಸಿನ ಮಗ ಕಳೆದುಕೊಂಡ ಅಪ್ಪ ,ಮಕ್ಕಳ್ಳಿಲ್ಲದ ದಂಪತಿಯ ತೊಳಲಾಟ , ತಂದೆ ಹಾಗು ಮಗಳ ಆಸೆ ತೀರಿಸಲಾಗದೆ ನೋವುನ್ನುವ ತಂದೆ , ಪಕ್ಕದ ಮುಸ್ಲಿಮ್ ಮನೆಯ ಸಂಸಾರದ ಕಷ್ಟವನ್ನು ತಮ್ಮ ಮನೆಯ ಕಷ್ಟದಂತೆ ಕಾಣುವ ನೆರೆಯ ಹಿಂದೂ ದಂಪತಿ , ತನ್ನ ಬೇಳೆ ಬೇಯಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದ್ರೂ ಹೋಗುವ ಆಟೋ ಚಾಲಕ , ಹೊರಗೆ ಕಲ್ಲಿನಂತೆ ಕಂಡರೂ ಹೂವಿನಂತ ಮನಸ್ಸು ಇರುವ ಸಾಲ ಕೊಡುವವನು , ಮೆಕ್ಕಾಕ್ಕೆ ಹೋಗಬೇಕು ಎಂದಿರುವ ಅಜ್ಜ , ತಮ್ಮನನು ಕಳೆದುಕೊಂಡು ಕಣ್ಣೀರಿಡುವ ಅಕ್ಕ ಹೀಗೆ ಒಂದಕ್ಕಿಂತ ಒಂದು ಚೆಂದದ ಪಾತ್ರಗಳು ಚಿತ್ರದಲ್ಲಿ ಇವೆ . 
ನೊಬಿನ್ ಪಾಲ್ , ವಾಸುಕಿ ವೈಭವ್ ಸಂಗೀತ ಹಾಗು ಕ್ಯಾಮೆರಾ ವರ್ಕ್ ಕೂಡ ಸೊಗಸಾಗಿದೆ . ಸತ್ಯ ಪ್ರಕಾಶ್ ಸರ್ ಬರೆದಿರುವ ಸಾಹಿತ್ಯ ಅದ್ರಲ್ಲೂ ಕಾಡು ನುಂಗಿದ ಕಳ್ಳ ಊರಿದು , ಹುಡುಕಿದ್ರೆ ದೇವರೇ ಸಿಕ್ತಾನಂತೆ ಸಾಲುಗಳು ಸಿನಿಮಾ ಮುಗಿದ ಮೇಲೆಯೂ ಕಾಡುತ್ತದೆ . ೬ ಅಡಿ ಹೀರೋ ಗಳು ಇಲ್ಲದ ಈ ಚಿತ್ರದಲ್ಲಿ ಕಥೆಯೇ ಹೀರೋ . ಈ ವರ್ಷದಲ್ಲಿ ಬಂದ ಒಂದೊಳ್ಳೆಯ ಕನ್ನಡ ಚಲನಚಿತ್ರ . ಸಂಸಾರ ಸಮೇತ ಹೋಗಿ ನೋಡಿ . ಈ ಚಿತ್ರ ಗೆದ್ದರೆ ಇಂತಹ ಇನ್ನಷ್ಟು ಒಳ್ಳೆಯ ಚಿತ್ರಗಳು ಬರಲು ಸಾಧ್ಯ . ಕೊನೆಯದಾಗಿ ಹೆಬ್ಬುಲಿಯಂತ ಮಾಸ್ ಸಿನಿಮಾ ನಿರ್ಮಿಸದ ಸಂಸ್ಥೆ ಇಂತಹ ಒಂದು ಅರ್ಥಪೂರ್ಣ ಚಿತ್ರ ಮಾಡಲು ಮುಂದೆ ಬಂದಿದ್ದು ನಿಜವಾಗಲೂ ಪ್ರಶಂಸನೀಯ .

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...