ಭಾನುವಾರ, ಏಪ್ರಿಲ್ 29, 2018

ಅವಳು ದೂರವಾದಾಗ


ಹುಚ್ಚು ಮನಸು

ಹುಚ್ಚು ಮನಸು
ನನಗೇ ಅರಿವಿಲ್ಲದೇ
ನಿನ್ನ ತುಸು ಜಾಸ್ತಿಯೇ
ಹಚ್ಚಿಕೊಂಡಿದೆ .
ನೀ ಸ್ವಲ್ಪ ದೂರ ಸರಿದರೂ
ಹುಚ್ಚು ಹೆಚ್ಚಾಗಿ
ನೆಮ್ಮದಿ ನೆಲ ಕಚ್ಚುತಿದೆ .


ಸುಡುವುದು
ನಿನ್ನ ನೆನಪು ಸುಡಲಾಗದೇ
ಹೋದ ಸಿಟ್ಟಿಗೆ
ನಾ ಸುಟ್ಟಿದ್ದು ಹಲವಾರು
ಸಿಗರೇಟು


ನೆನಪು

ನೀ ಅಂದು ಮುತ್ತಿಕ್ಕಿದ್ದ
ತುಟಿಗಳಿಗೆ ,
ಈಗ ಬರಿ ನೆನಪುಗಳು
ಮುತ್ತಿಕ್ಕುತ್ತಿವೆ

ಸಮ್ಮೇಳನ

ಹಿತವೆನಿಸಿದ
ಅಂದು ನನ್ನೆದೆಯ ಮೇಲೆ
ನಿನ್ನ ತಲೆಯ ಭಾರದ
ಜಾಗದಲ್ಲಿ ,
ಇಂದು ಸತ್ತ ಸುಮಧುರ
ನೆನಪುಗಳ
ಸಮ್ಮೇಳನ.




Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...