ಮಂಗಳವಾರ, ಫೆಬ್ರವರಿ 26, 2013

ರಾಜಕೀಯ

ಕುಲಕಸಬು 
ಕುಲಕಸಬು ಬಿಟ್ಟು ಬದುಕಲು
ಬೇರೆ ದಾರಿ ಹಿಡಿದಿದ್ದವನಿಗೆ
ಒಬ್ಬಾತ  ಪ್ರಶ್ನೆ ಕೇಳಿದ
"ನೀನು ನಿಮ್ಮ ಹಿರಿಯರಂತೆ
ಆಗಬಹುದಿತ್ತಲ್ಲಾ ?".
ಅದಕೆ  ಆತ ಉತ್ತರಿಸಿದ
 "ಹಾಗೆ ಆಗಲು ನಾನೇನು
ಕಾಂಗ್ರೆಸ್ಸಿನ ರಾಹುಲ್ಲಾ ?"
………………………………….
ತುಂಡು ಬಟ್ಟೆ
"ಅತ್ಯಚಾರಕ್ಕೆಲ್ಲಾ  ಕಾರಣ 
ಹೆಣ್ಣುಮಕ್ಕಳು ಉಡುವ 
ತುಂಡು ಬಟ್ಟೆ " ಎಂದು
ಬೆಳಗ್ಗೆಯೆಲ್ಲಾ 
ಬಾಯಿ ಬಾಯಿ
ಬಡಿದುಕೊಂಡರು .
ಅವರೇ ರಾತ್ರಿ 
ಟಿ ವಿ ಮುಂದೆ ,
ಕ್ಯಾಬರೆ ನೋಡಲು,
ಬಾಯಿ ಬಾಯಿ 
ಬಿಟ್ಟುಕೊಂಡು ,
ಕೂತು ಕೊಂಡರು .
...............................................................................................................................
ಗಣಿ  ಧಣಿ

ಹೋಗಲಾಡಿಸಲು
ತಮ್ಮ ಮೈಗೆ
ಅಂಟಿಕೊಂಡಿರುವ
ಗಣಿ ಧೂಳನ್ನು ,
ಗಣಿ  ಧಣಿಗಳು
ಆರಿಸಿಕೊಂಡರು
ತಮ್ಮ ಪಕ್ಷದ ಚಿಹ್ನೆಯಾಗಿ
ಫ್ಯಾನ್ ಅನ್ನು
..........................................................................................................................
ರಾಜ "key "
ಎಗರುವ  ಯುವಕರು,
ಮುದುರಿಕೊಂಡ ಮುದುಕರು ,
ಅ ಆ ಇ  ಈ  ಬಾರದವರು , 
slate ಹಿಡಿದು ಫೋಟೋ 
ಹೊಡೆಸಿ ಕೊಂಡವರು ,
ಸತ್ತ  ಗಂಡಂದಿರ ಹೆಸರಲ್ಲಿ 
ವಿಧವೆಯರು ,
ಹಿಂದೆ ಗಂಡನಿಟ್ಟುಕೊಂಡು 
ಮುಂದೆ ನಿಲ್ಲುವ ಹೆಂಡತಿಯರು ,
ಎಲ್ಲರು ಜಿಗಿಜಿಗಿದು 
ಸೇರುವರು ರಾಜಕೀಯ .
ಏಕಂದರೆ 
ತಮ್ಮದಾಗಿಸಿಕೊಳ್ಳಬಹುದಲ್ಲಾ 
ಕೋಟಿಗಟ್ಟಲೆ ಇರುವ 
ಖಜಾನೆಯ ರಾಜ "key "ಯ.

ಬುಧವಾರ, ಫೆಬ್ರವರಿ 20, 2013

ನಾನು ಹಾಗು valentines dayಗಳು:2

                                         Valentines day ೨:ಪ್ಯಾಂಟ್ಗಳ ಕಾಲ 

         ಬೇಡ ಬೇಡ ಅಂದರೂ ಎರಡು ವರ್ಷ ಆಯ್ತು .Second p u c ಗೆ ಪ್ಯಾಂಟ್ ಹಾಕಿಕೊಳ್ಳೋದು ಅಭ್ಯಾಸ ಆಗಿತ್ತು . ಹಾಗೆಯೇ ಯೌವ್ವನದ ಹೊಳೆಯಲ್ಲಿ ಈಜಾಡುವುದು ಒಂಥರಾ ಮಜಾ ಅನ್ನಿಸುತಿತ್ತು.ಓದುವ tension ,c.e.t tension,,special class ,tuition ಹೀಗೆ ಇಷ್ಟೊಂದು ಜಂಜಾಟಗಳ ಮಧ್ಯೆ hormones ಉತ್ಪತ್ತಿ ಮಾತ್ರ ಹಾಗೆಯೇ ಸಾಗಿತ್ತು .ಅದೇ ಸಮಸ್ಯೆ ಆಗಿದ್ದು ನೋಡಿ .ನಮ್ಮ classಅಲ್ಲಿ ಅದೊಂದು ಹುಡುಗಿ ಇದ್ದಳು.ಅವಳು schoolಅಲ್ಲೂ ನನ್ನ ಜೊತೇನೆ ಓದಿದ್ದು .ನಾನು ಅವಳ ಕಡೆ ನೋಡ್ಲಿಲ್ಲವೋ ಅಥವಾ ಆಗ ಅವಳು ನೋಡಿದರೂ ಮತ್ತೆ ನೋಡ್ಬೇಕು ಅನ್ನೋ ಹಾಗೆ ಇರಲಿಲ್ಲವೋ ,ಗೊತ್ತಿಲ್ಲ .ಆದ್ರೆ ಈಗ ನೋಡಿದರೆಮಾತ್ರ ನಮ್ಮ control ಇಲ್ಲದೆ ,ನಮ್ಮದೇ ಒಂದು ಕಣ್ಣು ಅದಾಗಿಯೇ ಅದು ಮುಚ್ಚಿ ಕೊಳ್ಳುವಂತಿದ್ದಳು .ಈ ಹುಡುಗಿಯರೇ ಹಾಗೆ schoolಅಲ್ಲಿ ಜುಟ್ಟುಗಳು ಇದ್ದ ಹಾಗೆ ಇರುತ್ತಾರೆ ,ಆದರೆ collegeಗೆ ಬರುತ್ತಾ ಹುಡುಗರು ನೆಮ್ಮದಿ ದೋಚುವ ಕಳ್ಳಿಯಾಗಿ ಬಿಡುತ್ತಾರೆ .
               ಅವಳು ಹಾಗೆ ಇದ್ದಳು . ಎಂತಹವರನ್ನು ಕೊಲ್ಲುವ ಕಣ್ಣುಗಳು ,ಮತ್ತೆ ಮತ್ತೆ ನೋಡಬೇಕೆನ್ನಿಸುವ ಆ ಸುಂದರ ಮುಖ ,ಒಳ್ಳೇ chocolate ಮೈ ಬಣ್ಣ ,ತಲೆ ತುಂಬಾ ಕೇಶ ರಾಶಿ .ಅಲ್ಲಲ್ಲಿ ಅಂಕುಡೊಂಕುಗಳು. ಸಕತ್ ಆಗಿ ಹಾಡು ಹೇಳ್ತಾ ಇದ್ದಳು .ನರಸಿಂಹಸ್ವಾಮಿ ಅವರ ಭಾವಗೀತೆ ಅಥವಾ ಹಳೇ ಹಿಂದಿ romantic songs ಹೇಳುತ್ತಿದ್ದರೇ, ಆಹಾ ಸ್ವರ್ಗಕ್ಕೆ ಮೂರೇ ಮೀಟರ್ ಅಂತರ . ಓದಿಕೊಳ್ಳೋಕೆ ಆರು subjects ಇದ್ದರೂ ಕೂಡ, ಹಾಳಾದ ಮನಸು ಅವಳ ಕಡೆ ವಾಳುತಿತ್ತು .ಹಾಗಿದ್ದಳು ಅವಳು.
               ನನ್ನ ಹಾಗು ಅವಳ ಒಡನಾಟವು ಕೂಡ ಚೆನ್ನಾಗಿಯೇ ಇತ್ತು .ನಮ್ಮ college ಅಲ್ಲಿ ,ಮಕ್ಕಳಲ್ಲಿ ಸ್ಪರ್ಧಾ ಮೊನೋಭಾವ ಬೆಳೆಸಲು ಒಂದು ತರಗತಿಯನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ ,ಅವುಗಳ ಮಧ್ಯೆ ಅನೇಕ ಸ್ಪರ್ಧೆ ಏರ್ಪಡಿಸುತ್ತಿದರು .ನಾನು ಅವಳು ಒಂದೇ ಗುಂಪಿನಲ್ಲಿ ಇದ್ದ ಕಾರಣ ನಾಟಕ ,ನೃತ್ಯ,ರಸಪ್ರಶ್ನೆ ಹೀಗೆ ಎಲ್ಲ ಸ್ಪರ್ಧೆಯಲ್ಲೂ ಜೊತೆಯಾಗಿ ಭಾಗವಹಿಸುತ್ತಿದ್ದೆವು .ನಮ್ಮಿಬ್ಬರ ಮನೆ ಹತ್ತಿರ ಇದ್ದದ್ದರಿಂದ ಒಟ್ಟಿಗೆ collegeಗೆ ಹೋಗಿ ಬರುವುದು ಮಾಡುತ್ತಿದ್ದೆವು .Project ,ಮಣ್ಣು ಮಸಿ ಅಂತ ಆಗಾಗ ಅವಳು ನಮ್ಮ ಮನೆಗೆ ,ನಾನು ಅವಳ ಮನೆಗೆ ಹೋಗುತ್ತಿದ್ದೆ .ತುಂಬಾ ಹರಟೆ ಹೊಡೆಯುತ್ತಿದ್ದೆವು .ನನ್ನ ಪ್ರತಿಯೊಂದು ವಿಷಯ ಅವಳಿಗೆ ಹೇಳುತ್ತಿದೆ. ಆಕೆಯೂ ಕೂಡ .ಅವಳ ಮಾತು ಕೇಳುತ್ತಾ ನಾನೆಲ್ಲಾ ಮರೆತುಬಿಡುತ್ತಿದ್ದೆ .ನನ್ನದೇ ಕನಸ್ಸಿನ ಲೋಕಕ್ಕೆ ಜಾರಿ ಬಿಡುತ್ತಿದ್ದೆ .
                       ಹೀಗಿರುವಾಗ ನನ್ನ classನಲ್ಲಿ ಕೋಲ್ಯ ಹಾಗು ಕಮಲಿಯ ಪ್ರೀತಿಯ ಯಶೋಗಾತೆಯ ಪಿಸು ಪಿಸು ಕಥೆಗಳು ಎಲ್ಲರ ಬಾಯಿ ಹರಿದಾಡುತ್ತಿದ್ದವು .ಮೊದಮೊದಲು ಒಟ್ಟಿಗೆ ಓಡಾಡುತ್ತಿದ್ದರಂತೆ.ಇಬ್ಬರು close up toothpaste ಉಪಯೋಗಿಸುತ್ತಿದ್ದರಿಂದ ,ಹಾಗೆ close ಆದರಂತೆ .ಒಂದು ದಿನ ಕೋಲ್ಯ ಕಮಲಿಗೆ "I love you " ಅಂದನಂತೆ .ಕಮಲಿ ಆಯ್ತು ಅಂದಳಂತೆ .ಇದಾದ ಮೇಲಂತೂ ,ಇನ್ನಷ್ಟು ಜಾಸ್ತಿ ಜಾಸ್ತಿ ಒಟ್ಟೊಟ್ಟಿಗೆ ಓಡಾಡುತ್ತಿದಾರಂತೆ .ನಮ್ಮ ಊರಿನ ಹತ್ತಿರದ hill station ,ಬಾತಿಗು trip ಒಂದೆರಡು ಸಲ bikeಅಲ್ಲಿ ಹೋಗಿ ಬಂದಿದ್ದರಂತೆ.ಹೀಗೆ ಬಾನಲ್ಲೂ ಭುವಿಯಲ್ಲೂ , tuition ಅಲ್ಲೂ ,class ಅಲ್ಲೂ ,canteen ಅಲ್ಲೂ ,ಹುಡುಗೀರ ಕಟ್ಟೆಯಲ್ಲೂ ,ಹುಡುಗರ ಅಡ್ದಾದಲ್ಲೂ ಬರೀ ಕೋಲ್ಯ ,ಕಮಲಿಯ ಕಥೆಗಳದೇ ಕಾರುಬಾರು .one side lover boyಗಳಿಗೆ ಆತ ಹೀರೋ ಆಗಿದ್ದ .
                               ಆಗ ನನ್ನ ಮನೆಹಾಳ ಗೆಳೆಯ ಮತ್ತೆ ಬಂದು "ನೋಡು ನಿನ್ನ ಕಥೆಯು ಹೀಗೆ ಆಗಬಹುದು ,ಆದ್ರೆ ನೀನು ಅವಳಿಗೆ propose ಮಾಡಬೇಕು ಅಷ್ಟೇ .ಲೋ ಕೈಗೆ ಬಂದಿರೋ ತುತ್ತು ಬಿಡಬೇಡ .ಹುಡುಗಿಯರು ಹೇಳಲ್ಲಾ ,ಅವರಿಗೆ ಜಂಭ ಜಾಸ್ತಿ .ಹುಡುಗರೇ ಹೇಳಲಿ ಅಂತ ಕಾಯ್ತಾ ಇರ್ತಾರೆ .ಹೋಗು ಮಚಾ propose ಮಾಡು " ಅಂತ ಮತ್ತೊಮ್ಮೆ ತನ್ನ ಬಾಣ ಬಿಟ್ಟ .ಈ ಸಲ ಬಾಣ ನನ್ನ ಎದೆಗೆ ತಾಕಿ ,ಅಲ್ಲಿ ಗಾಯ ಆಗಿ ,ಅದರಿಂದ ರಕ್ತ ಬದಲು ಬರೀ ಅವಳ ಹೆಸರೇ ಬಂತು .ಈ ಸಲ valentines day ಹೀಗೆ ಬಿಟ್ಟರೆ ಅರೋಗ್ಯ ಕೆಡುತ್ತೆ ಅದರ ಬದಲು ಈ ಸಲ valentines dayಗೆ ಒಂದು ಕೈ ನೋಡಿಯೇ ಬಿಡೋಣ ಅಂತ ತೀರ್ಮಾನಿಸಿದೆ .
                    ಈ ಸಲ ಕವನ ಬೇಡ ಪ್ರೇಮ ಪತ್ರ ಬರೆಯೋಣ ಅಂತ ತೀರ್ಮಾನಿಸಿದೆ .ಅಂಬರೀಷ್ style ತರ ರಕ್ತದಲ್ಲಿ ಬರೆದು ಕೊಡುವ ಅಂತ ಒಂದು ಕ್ಷಣ idea ಬಂತಾದರೂ , ನಾವು crazy star ಅಭಿಮಾನಿ ಆದ ಕಾರಣ rebel star ಕಾಪಿ ಹೊಡೆಯೋದು ಬೇಡ ಅನ್ನಿಸಿ ಮಧ್ಯದಲ್ಲೇ ಕೈ ಬಿಟ್ಟೆ.(ನಿಜ ಏನು ಅಂತ ನಿಮಗೆ ಗೊತ್ತಾಗಿರಬಹುದು )',ನಾಳೆ practical book submission ಇದೆ ,ಅದಕ್ಕೆ ರಾತ್ರಿಯೆಲ್ಲ ಕೂತು ಬರೀಬೇಕು ಅಂತ ಅಪ್ಪ ಅಮ್ಮನಿಗೆ ಹೇಳಿ, practical book ಮಧ್ಯೆ  ಖಾಲಿ ಖಾಗದ ಇಟ್ಟು ಪ್ರೇಮ ಪತ್ರ ಬರೆಯೋಕೆ ಶುರು ಹಚ್ಚಿಕೊಂಡೆ .ಪಕ್ಕದ ಮನೆ ಹುಡುಗ ಜೋರಾಗಿ ಹಾಡು ಹಾಕಿದ್ದ ,ಅದು ನನ್ನ roomನವರೆಗೂ ಕೇಳಿಸುತಿತ್ತು .ನಮ್ಮ ಅಣ್ಣ ರವಿದು ಚೆಲ್ಲಿತು ಚೆಲ್ಲಿತು ಪಾಯಸ ಚೆಲ್ಲಿತು ಹಾಡು ಬರ್ತಾ ಇದ್ದ ಹಾಗೆ ಪೆನ್ ಅದಾಗಿಯೇ ಓಡಿತು.Valentines ದಿನದ ಬೆಳಗ್ಗೆ ಚೆನ್ನಾಗಿ ಸ್ನಾನ ಮಾಡಿ ,pond s powder ಅರ್ಧ ಡಬ್ಬಿ ಮುಖಕ್ಕೆ ಬಳಿದುಕೊಂಡು, ಮನೆಯ ತೋಟದಿಂದ ಕೆಂಪು ಗುಲಾಬಿ ಕಿತ್ತಿಟ್ಟುಕೊಂಡು ಪ್ರೇಮಪತ್ರದ ಜೊತೆ ತಯಾರಾದೆ .ನಾನು ಅವಳು ದಿನ ಕಾಲೇಜ್ಗೆ ಹೋಗುವ ದಾರಿಯಲ್ಲಿ ಸಿಗುವ industrial area ದಲ್ಲಿ ನನ್ನ ಮನಸ್ಸನ್ನು ತೆರದಿಡಬೇಕಂದು ತೀರ್ಮಾನಿಸಿದ್ದೆ .ಯಾಕಂದೆರೆ ಅಲ್ಲಿ ಜನ ಸ್ವಲ್ಪ ಕಡಿಮೆ .ಕಪಾಳಕ್ಕೆ ಹೊಡೆದರೂ ಯಾರಿಗೂ ಗೊತ್ತಗಲ್ಲಾ ಅದಕ್ಕೆ .ಅವಳ ಮನೆಗೆ ಹೊರಟೆ ,ನನಗೇ ಕಾಯುತ್ತಿದ್ದ ಅವಳು ಹೊರಗೆ ಬಂದಳು .ಆಹಾ ಏನು ಚೆನ್ನಾಗಿ ಕಾಣಿಸ್ತಾಳೆ?."ಇವಳೇ ನಿನ್ನ ಕನಸಿನ ರಾಣಿ" ಅಂತ ಪದೇ ಪದೇ ನನ್ನ ಮನೆಹಾಳ ಗೆಳಯ ಬಂದು ಕಿವಿಗೆ ಹೇಳಿದ ಹಾಗೆ ಆಗುತಿತ್ತು.ಇಬ್ಬರೂ ಹೊರೆಟೆವು .
                            ನಮ್ಮ ಕನ್ನಡ ಧಾರಾವಾಹಿಯಲ್ಲಿ matter ಗೆ ಬರುವ ಮುನ್ನ ಒಂದು ನೂರು zoom ಶಾಟ್ ಗಳು ಹಾಕುವ ಹಾಗೆ ,ನಾವು ನೇರವಾಗಿ ಬರದೆ ತಿಂಡಿ ತೀರ್ಥ ,homework ಬಗ್ಗೆ ಮಾತಾಡುತ್ತಾ ಸ್ವಲ್ಪ ದೂರ ಹೋದೆವು . ಅವಳು "ನಿನಗೊಂದು surprise ಕೊಡಬೇಕು " ಅಂತ ಹೇಳಿ ನಿಂತು ಬಿಟ್ಟಳು.Surprise ಹಾ !ಏನಿರಬಹುದು.ಅವಳು ನನ್ನ ಹಾಗೆ ಯೋಚಿಸಿದ್ದಾಳಾ ? .ಅವಳೇ "i love you "ಅಂತಾಳಾ ?ಬಹುಶಃ ಇವಳು ನನ್ನ ಮನೆಹಾಳ ಗೆಳೆಯ ಹೇಳಿದ ಜಂಭದ ಹುಡುಗಿ ಇರಲಿಕ್ಕಿಲ್ವಾ ?ಮಲೆ ಮಾದೇಶ ನಮ್ಮ ಮೇಲೆ ಕರುಣೆ ತೋರಿಸಿ ,ಇವಳ ಮನಸಿನಲ್ಲಿ ಪ್ರೀತಿ ಬೀಜ ಬಿತ್ತಿದ್ನಾ ?ಅಥವಾ ನಾ ಅಷ್ಟೊಂದು ಚೆನ್ನಾಗಿದೀನಾ (over acting ನಮ್ಮ್ manufacturing defect , adjust ಮಾಡಿಕೊಳ್ಳಿ )?ಹೀಗೆ ಪ್ರಶ್ನೆಗಳು ಉದ್ಭವಿಸತೊಡಗಿದಾಗ, ಅವಳು ಒಂದು ಪುಸ್ತಕವನ್ನು ತನ್ನ ಚೀಲದಿಂದ ತೆಗದು ನನ್ನ ಕೈಗೆ ಇಟ್ಟಳು ."ನೆನ್ನೆ ಹೀಗೆ ಅಂಗಡಿಗೆ ಹೋದಾಗ ,ಈ ಪುಸ್ತಕ ನೋಡಿದೆ .ಚೆನ್ನಾಗಿತ್ತು .ನೀನು ಕವನ ಎಲ್ಲೆಲ್ಲಿಯೋ ಬರೆಯುತ್ತೀಯಾ.ಇನ್ಮೇಲೆ ಇದ್ರಲ್ಲಿ ಬರಿ .ನನ್ನ gift .open ಮಾಡು "ಅಂತ ಹೇಳಿದಳು .ಯಾವತ್ತೂ ಇಲ್ಲದೆ ಇರೋದು ಇವತ್ತೇ ಅದು February ೧೪ gift ಕೊಟ್ಟು ,book open ಮಾಡು ಅಂತ ಇದಾಳೆ ಅಂದ್ರೆ ಏನೋ ಇದೆ ?ಸುಮ್ನೆ ಕವನ ಗಿವನ ಅಂತ ಓಳು ಬಿಡ್ತಾ ಇದಾಳೆ ,ಮಳ್ಳಿ ! ನಂಗೆ ಗೊತ್ತು ,ಇದು ಅದೇ ಅಂತ ನಾನು ಮನಸ್ಸಿನಲ್ಲಿಯೇ ಬಿಟ್ಟಿ ಬೆಣ್ಣೆ ದೋಸೆ ತಿಂದಷ್ಟು ಖುಷಿಯಾಗುತ್ತಾ ಪುಸ್ತಕ ತೆರದೆ . ಮೊದಲ ಪುಟದಲ್ಲಿ "ನನ್ನ ಪ್ರೀತಿಯ ಶ್ರವಣನಿಗೆ ,ಪ್ರೀತಿಯ ಕಾಣಿಕೆ " ಅಂತ ಬರೆದಿತ್ತು .
                    ಹಾಗೆ ನಾಲ್ಕೈದು zoom shot ,back ground ಅಲ್ಲಿ romantic song ,ಬೇಸಿಗೆ ಕಾಲದಲ್ಲೂ ಇದ್ದಕ್ಕಿದ್ದ ಹಾಗೆ ಮಳೆ ,ಅದೆಲ್ಲಿಂದಲೋ ಹಾರಿಕೊಂಡು ಬರುವ love birds ,ಹಾಗೆ ನಾನು ಖುಷಿಯಾಗಿ ಅವಳನ್ನು ತಬ್ಬಿಕೊಂಡು... ಹಾಗೆ etc etc .ರೀ ಅದೆಲ್ಲಾ film ಅಲ್ಲಿ .ನಮ್ಮ ಹಾಳಾದ practical life ಅಲ್ಲಿ ಅಲ್ಲಾ ಕಾಣ್ರೀ .twist ಇನ್ನು ಇದೆ . ಅಲ್ಲೇ ಅದೇ ಸಾಲಿನ ಕೆಳಗೆ "ಇಂತಿ ನಿನ್ನ ಪ್ರೀತಿಯ ತಂಗಿ "ಅಂತ ಬರೆದಿದ್ದಳು .ಅಲ್ಲಿಗೆ ನಮ್ಮ ಎರಡನೇ ಅಧ್ಯಾಯ ಮುಗಿಯಿತು .
                                                                         ಇನ್ನೂ ಇದೆ 
ಮುಂದಿನ ಸಲ "ಪ್ಯಾಂಟ್ tight ಆಗಿ ,ಗಾಳಿ ಆಡ್ಲಿ ಅಂತ shortsಗಳು ಹಾಕೋ ಕಾಲ "ದಲ್ಲಿ ಭೇಟಿಯಾಗೋಣ .ಅಲ್ಲಿ ತನಕ ನಗು ನಗುತಾ ಇರಿ .

ಬುಧವಾರ, ಫೆಬ್ರವರಿ 13, 2013

ನಾನು ಹಾಗು valentines dayಗಳು

ಸೂಚನೆ :ಇಲ್ಲಿ ಬರುವ ಎಲ್ಲಾಪಾತ್ರಗಳು ಕೇವಲ ಕಾಲ್ಪನಿಕ .ಅದರಲ್ಲೂ ನನ್ನ character ಸುಮ್ನೆ ತಮಾಷೆಗೆ .ನಾನು ತುಂಬಾ ಒಳ್ಳೆಯವನು .ಇದನ್ನು ಓದಿ ಮಹಿಳಾಭಿಮಾನಿಗಳು ತಪ್ಪು ತಿಳಿಯದಿದ್ದರೆ ಸಾಕು .ಇನ್ನು ಯಾವುದೇ ಪಾತ್ರ ,ನಿಮಗೆ ಹೋಲಿಕೆಯಾಗಿದ್ದಲ್ಲಿ ,ಅದು ನಿಮ್ಮ ಹಣೆಬರಹ


                        Valentines day ಭಾಗ ೧:ಚಡ್ಡಿ ಗೆ ಬೈ ಬೈ, ಪ್ಯಾಂಟ್ ಗೆ ಹಾಯ್ ಹಾಯ್

         ಈ ಹಾಳಾದ ದೇಹದೊಳಗೆ ಸಿಕ್ಕಾಪಟ್ಟೆ produce ಆಗೋ harmones ಗಳ ಫಲವೇನೋ,ಅಥವಾ ನಮ್ಮ ಗುರು ರವಿಚಂದ್ರನ್ ಫಿಲಂ ಗಳ side effectಅ ಅಥವಾ ಅವಳೋ...ನನಗೇನೋ ಅದೆಕ್ಕೆಲ್ಲಾ ಕಾರಣ ಅವಳೇ ಇರಬೇಕು ಅನ್ನಿಸುತ್ತೆ ... .ಮತ್ತಿನ್ನೇನು? ಹತ್ತನೇ class ಅಲ್ಲಿ,ತಲೆಗೆ ಹೊಕ್ಕದೆ ಇರೋ BIOLOGY subjectಅನ್ನು ಉರುವು ಹೊಡೆಯೋ ಮುಂಚೇನೆ ನಮಗೆ ಹೆಂಗೆಂಗೋ ಆಗ್ತಾ ಇತ್ತು ಅಂದ್ರೆ ಅದೆಕೆಲ್ಲಾ ಅವಳ ಮಾಯೆಯೇ ಕಾರಣ . "ಹೆಂಗೆಂಗೋ ನಾ . ಹಾಗಂದ್ರೆ?"ಅಂತ ಕೇಳ್ತೀರಾ ಅಂತ ಗೊತ್ತು .ಆ ಭಾವನೆಗಳಿಗೆ ಸ್ಪಷ್ಟವಾಗಿ ಒಂದು ರೂಪು ಕೊಡೋದು ಅಥವಾ ಅರ್ಥ ಕೊಡೋದು ಕಷ್ಟ ಕಾಣ್ರೀ .ಯಾಕಂದ್ರೆ ಆಗ ತಾನೇ ನಮಗೆ ಅದು ಮೊದಲ ಮೆಟ್ಟಿಲು ,ಮೊದಲ ಕನಸು ,ಮೊದಲ ಪ್ರೇಮ ,ಮೊದಮೊದಲು ಸ್ಕೂಲ್ ಅಲ್ಲಿ pant ಬೇರೆ .ಪ್ರೇಮ ಅನ್ನುವುದಿಕ್ಕಿಂತಲೂ ಬಹುಶಃ ಅದನ್ನು crush ಅಂತ ಕರೆದರೆ ಸೂಕ್ತ ..ಎಲ್ಲಾ ಮೊದಲಾಗಿದ್ದರಿಂದ ,ಎಲ್ಲಾ ಅನುಭವಗಳು ಹೊಸತು .ಹತ್ತನೇ class ಆದ್ರೂ ಕೂಡ , ಈ ವಿಷಯದಲ್ಲಿ ನಾವು ಆಗಿನ್ನೂ lkg .

             ಇರಲಿ ಬಿಡಿ, ಆ ಹುಡುಗಿ ವಿಷ್ಯಕ್ಕೆ ಬರೋಣ .ಹುಡುಗ ಹುಡುಗ ಅಥವಾ ಹುಡುಗಿ ಹುಡುಗಿ ಒಟ್ಟಿಗೆ ಕೂತರೆ ಗಲಾಟೆ ಮಾಡ್ತಾರೆ ಅಂತ, ಹುಡುಗ ಹುಡುಗಿನ ಜೊತೆಗೆ ಕೂರಿಸೋರು ನಮ್ಮmiss .ನಮ್ಮ height ಗೆ ಅವಳ height ಸರಿಯಾಗುತ್ತಿದ್ದರಿಂದ ನನ್ನ ಪಕ್ಕದಲ್ಲೇ ಅವಳನ್ನು ಕೂರಿಸುತ್ತಿದರು .ನಾನು ಅವಳು ಎಷ್ಟು close ಅಂತೀರಾ ?ನಾನು ,ಅವಳುperiodಗಳ ಮಧ್ಯೆ ಮಾತಾಡೋದೇನು.ಅವಳ ಮನೆಯಿಂದ ನಂಗೆ ತಿಂಡಿ ತಂದು ಕೊಡೋದೇನು.ನಾನು pen ತಂದಿದ್ದರೂ ಅವಳ ಹತ್ತಿರ pen ಇದೀಯ ಅಂತ ಕೇಳೋದೇನು .ನನ್ನ ಕವನ ಓದಿ ಅವಳು ನನ್ನ ಹೊಗಳುವುದೇನು .Homework ಮಾಡೋಕೆ ಅಂತ ಅವಳ ಮನಗೆ ಹೋಗೋದೇನು .ಕಾಲಲ್ಲಿ ಹೊಡೆದಾಡಿ ಕೊಳ್ಳೋದೇನು.ಪುಸ್ತಕದ ಕೊನೆ ಪುಟಗಳಲ್ಲಿ ಚುಕ್ಕಿ ಚುಕ್ಕಿ ಆಟ ಆಡೋದೇನು ,ಚಿತ್ತಾರಗಳನ್ನು ಬರೆಯೊದೇನು.ಕೇಳಬೇಡಿ ನಮ್ಮ ಆಟ . ಹೀಗೆ ಸಾಗುತ್ತಿದ್ದಾಗ ಮನೆಹಾಳ ಗೆಳಯನೊಬ್ಬ ಕಿವಿಗೆ ಪೀಪಿ ಊದಿದ "ಇದು ಅದೇ ".ನಾನು"ಅದೆ ಅಂದ್ರೆ ಏನೋ ?"ಅಂತ ಕೇಳಿದೆ ."ಲೋ ಅದೇ ಕಾಣೋ ಫಿಲಂ ಅಲ್ಲಿ hero heroin ಮಾಡಲ್ವಾ ......."ಮುಂದೆ ಹೇಳ್ಬೇಕಾ ನಿಮಗೆ .


            ಥತ್.. ಅದೇನು ತಲೆಗೆ ಹುಳ ಬಿಟ್ಟನೋ , ಹಾವಾಗಿ ಅಲ್ಲೇ ಹುತ್ತ ಮಾಡಿಕೊಂಡು ಬುಸ್ಸ್ ಬುಸ್ಸ್ ಅನ್ನೋಕೆ ಶುರು ಇಡ್ತು .ನನ್ನ ಮಗಂದು ಮಾತು ಕೇಳಿ ಈ valentines day ಗೆ ಅವಳಿಗೆ propose ಮಾಡೋಣ ಅಂತ decide ಆಗಿಬಿಟ್ಟೆ .ಆಗಿನ್ನೂ ಮೊಬೈಲ್ ಎಲ್ಲ ಇರಲಿಲ್ಲ .ರಾತ್ರಿ ಎಲ್ಲ ರವಿಚಂದ್ರನ್ ಮಲ್ಲ song ನೋಡಿ ,ಬೆಳಗ್ಗೆ ಒಂದು ಕವನ ಬರೆದು valentines dayಗೆ ready ಆದೆ .ಬರೆಯೋದೇನೋ ಬರೆದೆ ,ಕೊಡೋದು ಹೇಗೆ ? Notes ಅಲ್ಲಿ ಇಟ್ಟು ಕೊಡ್ಲಾ? ತಿಂಡಿ box ಅಲ್ಲಿ ಇಡ್ಲಾ ? chocolate ಅಂತ ಕೊಟ್ಟು ಅದರ cover ಒಳಗೆ ಇಡ್ಲಾ ?ಅಥವಾ separate ಆಗಿ ಕರೆದು ಪ್ರೇಮ ನಿವೇದನೆ ಮಾಡಿಕೊಳ್ಳಲಾ ?ಥತ್ ..ಅವತ್ತು ಪಾಠ ಕೇಳೋದು ಬಿಟ್ಟು ಇದೇ ಚಿಂತೆ.


                    ಹೀಗೆ ನನ್ನದೇ ಕನಸ್ಸಿನ ಲೋಕದಲ್ಲಿ ಮುಳಗಿ ಹೋಗಿದ್ದಾಗ ತಕ್ಷಣ "you ..get up "ಅಂತ ಕೂಗಿದ್ದು ಕೇಳಿಸಿತು .ನಂಗೆ ಯಾರೋ ಕೂಗುತ್ತಾ ಇದ್ದಾರೆ ಅಂತ ವಾಪಾಸ್ ವಾಸ್ತವಕ್ಕೆ ಬಂದ್ರೆ ,ಅಲ್ಲಿ ಕಥೇನೆ ಬೇರೆ .ಯಾವ್ದೋ ನಮ್ಮಕ್ಲಾಸ್ ಹುಡುಗ ಕಾಶೀನಾಥ್ ಫಿಲಂ ಜಾಸ್ತಿ ನೋಡಿದ್ದ ಅನಿಸುತ್ತೆ .ನಮ್ಮನ್ನೂ ಮೀರಿ ಅದಾಗಲೇ ಒಂದು ಹುಡುಗಿಗೆ love letter ಜೊತೆಗೆ "kismi" chocolate ಕೊಟ್ಟಿದ್ದ. ಆ ಹುಡುಗಿ chocolate ತಿಂದು ,ಆಮೇಲೆ principal ಹತ್ತಿರ ಗೊಳೋ ಅಂತ ಅತ್ತಿದ್ದಳು .Principal ಕ್ಲಾಸ್ ಗೆ ಬಂದು ಆ ಹುಡುಗನಿಗೆ "ನೆಟ್ಟಗೆ pant ಗೆ zip ಹಾಕೋಕೆ ಬರೋಲ್ಲ ,ಇಂತಹ ಕೆಲಸ ಮಾಡ್ತೀಯಾ?"ಅಂತ ಕೆಪ್ಪಗೆ ನಾಲ್ಕು ಬಾರಿಸಿ .ಎಳೆದುಕೊಂಡು ಹೋಗಿ class ಮುಂದೆ ಮಂಡಿಯೂರಿ ಕೂರಲು ಹೇಳಿದರು .ಇದ್ದನ್ನೆಲ್ಲಾ ನೋಡುತ್ತಿದ್ದ ನಂಗೆ ಅಲ್ಲೇ fuse out .ತಲೆಯಲ್ಲಿ ಇದ್ದ ಹಾವು ,ಹಾಗೆ pant ಇಂದ ಕಳಗೆ ಜಾರಿ ಹೋಯ್ತು .So ಅಲ್ಲಿಗೆ ನಮ್ಮ class ನಲ್ಲಿ ಹುಡುಗ ಹುಡುಗಿಯರನ್ನು ಒಟ್ಟಿಗೆ ಕೂರಿಸುವುದು ನಿಲ್ಲಿಸಿದರು .ಹಾಗೆ ನಮ್ಮಮೊದಲ valentine s day ಕಥೆನೂ ಮುಗಿಯಿತು .

                                ಇನ್ನೂ ಇದೆ..... ಪ್ಯಾಂಟ್ ಹಾಕಿಕೊಳ್ಳೋದು ಅಭ್ಯಾಸ ಆದ್ಮೇಲಿನ ಕಥೆ

ಬುಧವಾರ, ಫೆಬ್ರವರಿ 6, 2013

ಸಣ್ಣ ಕಥೆಗಳು


ಎಂದಿನಂತೆ ಅವರಿಬ್ಬರೂ  ಆ ರಾತ್ರಿಯೂ  ಕೂಡ  ಅದೇ  ಹೋಟೆಲ್ ನಲ್ಲಿ ,ಅದೇ ಜಾಗದಲ್ಲಿ ಕುಳಿತು ಊಟ ಮಾಡುತ್ತಿದ್ದರು .ಆದರೆ ಆತ  ಮಾತ್ರ  ತನ್ನ ಮನಸ್ಸಿನ  ಆಸೆಯನ್ನು ಇವತ್ತು ಹೇಳಿಯೇ ತೀರಬೇಕೆಂದು ತೀರ್ಮಾನಿಸಿಬಿಟ್ಟಿದ್ದ  .ತಕ್ಷಣವೇ ಮಂಡಿಯೂರಿ ,ತನ್ನ ಜೇಬಿನೊಳಗಿದ್ದ ಸಣ್ಣ ಡಬ್ಬಿಯಿಂದ ಉಂಗುರ  ತೆಗದವನೇ "ನಾ ನಿನ್ನ ಪ್ರೀತಿಸುತ್ತೇನೆ,ನನ್ನ ಮದುವೆಯಾಗುತ್ತೀಯಾ ? "ಎಂದು ಕೇಳಿಯೇ ಬಿಟ್ಟ ."ಹೌದು ,ನಾನು ಕೂಡ ನಿನ್ನನು ಪ್ರೀತಿಸುತ್ತೇನೆ "ಎಂದು ಸಂತೋಷದಿಂದ ಎದುರಿಗಿದ್ದವನು ಒಪ್ಪಿಗೆ ನೀಡಿದ .
****************************************************************************************************
ಆ ರಾತ್ರಿ ಪಾರ್ಟಿ ಮುಗಿಯುವುದು ತಡವಾದ್ದರಿಂದ ,ಅವಳು ಒಬ್ಬಳೇ ಹೋಗುವುದು ಒಳಿತಲ್ಲ ಎಂದು ಕೊಂಡಳು .ಅದೇ ಪಾರ್ಟಿಗೆ ಬಂದಿದ್ದ  ಗೆಳಯನೊಬ್ಬನಿಗೆ , ತನ್ನನ್ನು ಮನಗೆ ಬಿಡುವಂತೆ ಕೇಳಿಕೊಂಡಳು .ಆತ ಒಪ್ಪಿಕೊಂಡ .ಕೂಡಲೇ ಅವನ ಗಾಡಿ ಹತ್ತಿ ಇಬ್ಬರೂ ಅವಳ ಮನೆಗೆ  ಹೊರಟರು .ಸ್ವಲ್ಪ ದೂರ ಚಲಿಸುತ್ತಿದ್ದಂತೆಯೇ  ನಿರ್ಜನ ರಸ್ತೆಯಲ್ಲಿ ಗಾಡಿ ಸರಕ್ಕನೆ ನಿಂತು ಬಿಟ್ಟಿತು .ಆಕೆ ಏನಾಯ್ತು ಎಂದು ಕೇಳುವ ಹೊತ್ತಿಗೆ , ಆತನ ಕೈ ಅವಳ ಎದೆಯ ಮೇಲೆ ಇತ್ತು .
 .***************************************************************************************************
ಇಬ್ಬರು ಚಿಕ್ಕ ವಯಸ್ಸಿನ ಪುಟಾಣಿ ಮಕ್ಕಳು ಒಬ್ಬರಿಗೊಬ್ಬರು ಹೊಡೆದಾಡಿ ಕೊಂಡು ,ಅವರವರ ಮನೆಗೆ ಅಳುತ್ತಾ ಹೋದರು .ಒಂದು ಮಗುವಿನ  ಮನೆಯಲ್ಲಿ ,ಅದರ ತಾಯಿ ಅವನನ್ನು ಅಪ್ಪಿಕೊಂಡು ಮುದ್ದಾಡಿ ಸಮಾಧಾನ ಮಾಡಿ ಇನ್ನು ಮುಂದೆ ಹುಷಾರಾಗಿರುವುದಕ್ಕೆ ಹೇಳಿದಳು .ಇನ್ನೊಂದು ಮಗು ಮನೆಗೆ ಹೋಗಿ ನಡೆದಿದ್ದೆಲ್ಲಾ ಹೇಳುತ್ತಲೇ ಅದರ ತಂದೆ "ಯಾವ ಬೋಳಿಮಗನೋ  ಹೊಡೆದಿದ್ದು ,ಕೈ ಕಾಲು ಮುರೀತೀನಿ " ಎಂದು ಕೂಗಾಡಿದನು .
******************************************************************************************************


ಆತ ಎಂದಿನಂತೆ ಆ ಮಧ್ಯಾಹ್ನ ಕೂಡ ತನ್ನ ಮನೆಗೆ ಹೊರಡುವ ಬಸ್ ಗಾಗಿ ಆ ಜಾಗದಲ್ಲಿ ಕಾಯುತ್ತಿದ್ದ .ಆಗ ಯಾವುದೋ ಭಿಕ್ಷುಕನೊಬ್ಬ ಇವನ ಹತ್ತಿರ ಬಂದು  " ಅಣ್ಣ ..ಭಿಕ್ಷೆ ಹಾಕಿ "ಎಂದು ಬೇಡತೊಡಗಿದ .ಮೊದಮೊದಲು ಭಿಕ್ಷುಕನ  ಕಡೆ ಗಮನ ಕೊಡದಂತೆ ಆತ  ನಟಿಸಿದ.ಆದರೆ ಭಿಕ್ಷುಕ ಪದೇ ಪದೇ ಪೀಡಿಸ ತೊಡಗಿದಾಗ ,ತನ್ನ ಜೇಬಿನಿಂದ ೫ ರುಪಾಯಿ ತೆಗದು ಆತನಿಗೆ ನೀಡಿ" ಇಷ್ಟೇ ಇರೋದು, ಹೋಗು ಇಲ್ಲಿಂದ "ಅಂತ ಗದರಿದ .
 ಸ್ವಲ್ಪ ದಿನಗಳ ನಂತರ ಆತ ಮತ್ತದೇ ಬಸ್ಗಾಗಿ ಅದೇ ಜಾಗದಲ್ಲಿ  ಕಾಯುತ್ತಿದ್ದ .ಆದರೆ ಆ ಮಧ್ಯಾಹ್ನ ವಿಪರೀತ ಬಿಸಿಲು ಇದ್ದರಿಂದ ಅವನಿಗೆ ಬಾಯಾರಿಕೆ ಆಗಿ ಏನಾದರೂ ಕುಡಿಯಬೇಕು ಎನಿಸಿತು .ಆದರೆ ಬಸ್ ಟಿಕೆಟ್ ಗೆ ಬೇಕಾಗಿದ್ದ ದುಡ್ಡು ಮಾತ್ರ ಇದ್ದದರಿಂದ ತೆಪ್ಪಗೆನಿಂತಿದ್ದ .ಆಗ ಇವನ ಮುಂದೆ  ಸ್ವಲ್ಪ ದಿನಗಳ ಹಿಂದೆ ಸಿಕ್ಕ ಅದೇ ಭಿಕ್ಷುಕ  ಐಸ್ ಕ್ಯಾಂಡಿ ನೆಕ್ಕುತ್ತ ಹೊರಟ .
************************************************************************************


.

ಭಾನುವಾರ, ಫೆಬ್ರವರಿ 3, 2013

ಹಾಗೆ ಸುಮ್ಮನೆ


ವಿಶ್ವರೂಪಂ
ಕಮಲ್
ತಯಾರಿಸಿದರು ವಿಶ್ವರೂಪಂ
ಸುರಿದು ಕೋಟಿ  ಕೋಟಿ ನೋಟು ,
ತಡೆ ಹಿಡಿದರು ಜಯಾ 
ಚಲನಚಿತ್ರವನ್ನು ,
ಆಕರ್ಷಿಸಲು
ಮುಂದಿನ ಚುನಾವಣೆಗೆ
ಮೈನಾರಿಟಿ ವೋಟು .

ಹುಷಾರ್
ಪ್ರೇಮಿಗಳೇ
ಮೈ ಮನ ಮರೆಯದಿರಿ
 ಪ್ರೇಮಿಗಳ ದಿನದಂದು ,
ಇಲ್ಲದಿದ್ದಲ್ಲಿ  ಒಂಭತ್ತು
ತಿಂಗಳ ನಂತರ ,
ಆಡಿಸಬೇಕಾದೀತು
ಕೈಯಲ್ಲಿ ಮಗುವೊಂದು  .

ನಲ್ಲೆ
  ಗಂಡೆದೆಯ ಗಂಡನ್ನು 
ಸೋಲಿಸಲು ಅದೇಕೆ ಬೇಕು 
ಚೂರಿ,ಚೈನು ,  ಚಾಕು 
ಅಥವಾ ತುಪಾಕಿ ,ಬಂದೂಕು ,
ಬರೀ
ನಿನ್ನ ನಗುವೊಂದೇ ಸಾಕು

ತಾಳ್ಮೆ
ಅಂಗೈನ ಐದು ಬೆರಳು ,
ಸಮವಾಗಿರುವುದಿಲ್ಲ ನೀ ಕೇಳು ,
ಹಾಗೆಯೇ ಮನುಷ್ಯನ ಬಾಳು ,
ಕುಗದ್ದಿರು  ಎದುರಾದಾಗ
ಸಾಲು ಸಾಲು  ಸೋಲು ,
 ಒಂದಲ್ಲ ಒಂದು ದಿನ ಸಿಕ್ಕೇ
ಸಿಗುವುದು ಗೆಲುವಿನ ಪಾಲು ,
ಅಲ್ಲಿ ತನಕ ತಾಳ್ಮೆಯಿಂದ ನೀ ತಾಳು


ಗೆಳಯರು 

ಹಣ ಇರುವಾಗ 
ಗೆಳಯರಂತೆ ಇರುವವರೆಲ್ಲಾ 
ಗೆಳಯರೆಲ್ಲಾ ,
ಹೇಗೆ ಇರುವೆ 
ಮುಟ್ಟುವುದು ಬೆಲ್ಲ 
ಹಾಗೆಯೆ ಅವರೆಲ್ಲಾ 






Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...