ಬೇಡ ಬೇಡ ಅಂದರೂ ಎರಡು ವರ್ಷ ಆಯ್ತು .Second p u c ಗೆ ಪ್ಯಾಂಟ್ ಹಾಕಿಕೊಳ್ಳೋದು ಅಭ್ಯಾಸ ಆಗಿತ್ತು . ಹಾಗೆಯೇ ಯೌವ್ವನದ ಹೊಳೆಯಲ್ಲಿ ಈಜಾಡುವುದು ಒಂಥರಾ ಮಜಾ ಅನ್ನಿಸುತಿತ್ತು.ಓದುವ tension ,c.e.t tension,,special class ,tuition ಹೀಗೆ ಇಷ್ಟೊಂದು ಜಂಜಾಟಗಳ ಮಧ್ಯೆ hormones ಉತ್ಪತ್ತಿ ಮಾತ್ರ ಹಾಗೆಯೇ ಸಾಗಿತ್ತು .ಅದೇ ಸಮಸ್ಯೆ ಆಗಿದ್ದು ನೋಡಿ .ನಮ್ಮ classಅಲ್ಲಿ ಅದೊಂದು ಹುಡುಗಿ ಇದ್ದಳು.ಅವಳು schoolಅಲ್ಲೂ ನನ್ನ ಜೊತೇನೆ ಓದಿದ್ದು .ನಾನು ಅವಳ ಕಡೆ ನೋಡ್ಲಿಲ್ಲವೋ ಅಥವಾ ಆಗ ಅವಳು ನೋಡಿದರೂ ಮತ್ತೆ ನೋಡ್ಬೇಕು ಅನ್ನೋ ಹಾಗೆ ಇರಲಿಲ್ಲವೋ ,ಗೊತ್ತಿಲ್ಲ .ಆದ್ರೆ ಈಗ ನೋಡಿದರೆಮಾತ್ರ ನಮ್ಮ control ಇಲ್ಲದೆ ,ನಮ್ಮದೇ ಒಂದು ಕಣ್ಣು ಅದಾಗಿಯೇ ಅದು ಮುಚ್ಚಿ ಕೊಳ್ಳುವಂತಿದ್ದಳು .ಈ ಹುಡುಗಿಯರೇ ಹಾಗೆ schoolಅಲ್ಲಿ ಜುಟ್ಟುಗಳು ಇದ್ದ ಹಾಗೆ ಇರುತ್ತಾರೆ ,ಆದರೆ collegeಗೆ ಬರುತ್ತಾ ಹುಡುಗರು ನೆಮ್ಮದಿ ದೋಚುವ ಕಳ್ಳಿಯಾಗಿ ಬಿಡುತ್ತಾರೆ .
ಅವಳು ಹಾಗೆ ಇದ್ದಳು . ಎಂತಹವರನ್ನು ಕೊಲ್ಲುವ ಕಣ್ಣುಗಳು ,ಮತ್ತೆ ಮತ್ತೆ ನೋಡಬೇಕೆನ್ನಿಸುವ ಆ ಸುಂದರ ಮುಖ ,ಒಳ್ಳೇ chocolate ಮೈ ಬಣ್ಣ ,ತಲೆ ತುಂಬಾ ಕೇಶ ರಾಶಿ .ಅಲ್ಲಲ್ಲಿ ಅಂಕುಡೊಂಕುಗಳು. ಸಕತ್ ಆಗಿ ಹಾಡು ಹೇಳ್ತಾ ಇದ್ದಳು .ನರಸಿಂಹಸ್ವಾಮಿ ಅವರ ಭಾವಗೀತೆ ಅಥವಾ ಹಳೇ ಹಿಂದಿ romantic songs ಹೇಳುತ್ತಿದ್ದರೇ, ಆಹಾ ಸ್ವರ್ಗಕ್ಕೆ ಮೂರೇ ಮೀಟರ್ ಅಂತರ . ಓದಿಕೊಳ್ಳೋಕೆ ಆರು subjects ಇದ್ದರೂ ಕೂಡ, ಹಾಳಾದ ಮನಸು ಅವಳ ಕಡೆ ವಾಳುತಿತ್ತು .ಹಾಗಿದ್ದಳು ಅವಳು.
ನನ್ನ ಹಾಗು ಅವಳ ಒಡನಾಟವು ಕೂಡ ಚೆನ್ನಾಗಿಯೇ ಇತ್ತು .ನಮ್ಮ college ಅಲ್ಲಿ ,ಮಕ್ಕಳಲ್ಲಿ ಸ್ಪರ್ಧಾ ಮೊನೋಭಾವ ಬೆಳೆಸಲು ಒಂದು ತರಗತಿಯನ್ನು ನಾಲ್ಕು ಗುಂಪುಗಳನ್ನಾಗಿ ಮಾಡಿ ,ಅವುಗಳ ಮಧ್ಯೆ ಅನೇಕ ಸ್ಪರ್ಧೆ ಏರ್ಪಡಿಸುತ್ತಿದರು .ನಾನು ಅವಳು ಒಂದೇ ಗುಂಪಿನಲ್ಲಿ ಇದ್ದ ಕಾರಣ ನಾಟಕ ,ನೃತ್ಯ,ರಸಪ್ರಶ್ನೆ ಹೀಗೆ ಎಲ್ಲ ಸ್ಪರ್ಧೆಯಲ್ಲೂ ಜೊತೆಯಾಗಿ ಭಾಗವಹಿಸುತ್ತಿದ್ದೆವು .ನಮ್ಮಿಬ್ಬರ ಮನೆ ಹತ್ತಿರ ಇದ್ದದ್ದರಿಂದ ಒಟ್ಟಿಗೆ collegeಗೆ ಹೋಗಿ ಬರುವುದು ಮಾಡುತ್ತಿದ್ದೆವು .Project ,ಮಣ್ಣು ಮಸಿ ಅಂತ ಆಗಾಗ ಅವಳು ನಮ್ಮ ಮನೆಗೆ ,ನಾನು ಅವಳ ಮನೆಗೆ ಹೋಗುತ್ತಿದ್ದೆ .ತುಂಬಾ ಹರಟೆ ಹೊಡೆಯುತ್ತಿದ್ದೆವು .ನನ್ನ ಪ್ರತಿಯೊಂದು ವಿಷಯ ಅವಳಿಗೆ ಹೇಳುತ್ತಿದೆ. ಆಕೆಯೂ ಕೂಡ .ಅವಳ ಮಾತು ಕೇಳುತ್ತಾ ನಾನೆಲ್ಲಾ ಮರೆತುಬಿಡುತ್ತಿದ್ದೆ .ನನ್ನದೇ ಕನಸ್ಸಿನ ಲೋಕಕ್ಕೆ ಜಾರಿ ಬಿಡುತ್ತಿದ್ದೆ .
ಹೀಗಿರುವಾಗ ನನ್ನ classನಲ್ಲಿ ಕೋಲ್ಯ ಹಾಗು ಕಮಲಿಯ ಪ್ರೀತಿಯ ಯಶೋಗಾತೆಯ ಪಿಸು ಪಿಸು ಕಥೆಗಳು ಎಲ್ಲರ ಬಾಯಿ ಹರಿದಾಡುತ್ತಿದ್ದವು .ಮೊದಮೊದಲು ಒಟ್ಟಿಗೆ ಓಡಾಡುತ್ತಿದ್ದರಂತೆ.ಇಬ್ಬರು close up toothpaste ಉಪಯೋಗಿಸುತ್ತಿದ್ದರಿಂದ ,ಹಾಗೆ close ಆದರಂತೆ .ಒಂದು ದಿನ ಕೋಲ್ಯ ಕಮಲಿಗೆ "I love you " ಅಂದನಂತೆ .ಕಮಲಿ ಆಯ್ತು ಅಂದಳಂತೆ .ಇದಾದ ಮೇಲಂತೂ ,ಇನ್ನಷ್ಟು ಜಾಸ್ತಿ ಜಾಸ್ತಿ ಒಟ್ಟೊಟ್ಟಿಗೆ ಓಡಾಡುತ್ತಿದಾರಂತೆ .ನಮ್ಮ ಊರಿನ ಹತ್ತಿರದ hill station ,ಬಾತಿಗು trip ಒಂದೆರಡು ಸಲ bikeಅಲ್ಲಿ ಹೋಗಿ ಬಂದಿದ್ದರಂತೆ.ಹೀಗೆ ಬಾನಲ್ಲೂ ಭುವಿಯಲ್ಲೂ , tuition ಅಲ್ಲೂ ,class ಅಲ್ಲೂ ,canteen ಅಲ್ಲೂ ,ಹುಡುಗೀರ ಕಟ್ಟೆಯಲ್ಲೂ ,ಹುಡುಗರ ಅಡ್ದಾದಲ್ಲೂ ಬರೀ ಕೋಲ್ಯ ,ಕಮಲಿಯ ಕಥೆಗಳದೇ ಕಾರುಬಾರು .one side lover boyಗಳಿಗೆ ಆತ ಹೀರೋ ಆಗಿದ್ದ .
ಆಗ ನನ್ನ ಮನೆಹಾಳ ಗೆಳೆಯ ಮತ್ತೆ ಬಂದು "ನೋಡು ನಿನ್ನ ಕಥೆಯು ಹೀಗೆ ಆಗಬಹುದು ,ಆದ್ರೆ ನೀನು ಅವಳಿಗೆ propose ಮಾಡಬೇಕು ಅಷ್ಟೇ .ಲೋ ಕೈಗೆ ಬಂದಿರೋ ತುತ್ತು ಬಿಡಬೇಡ .ಹುಡುಗಿಯರು ಹೇಳಲ್ಲಾ ,ಅವರಿಗೆ ಜಂಭ ಜಾಸ್ತಿ .ಹುಡುಗರೇ ಹೇಳಲಿ ಅಂತ ಕಾಯ್ತಾ ಇರ್ತಾರೆ .ಹೋಗು ಮಚಾ propose ಮಾಡು " ಅಂತ ಮತ್ತೊಮ್ಮೆ ತನ್ನ ಬಾಣ ಬಿಟ್ಟ .ಈ ಸಲ ಬಾಣ ನನ್ನ ಎದೆಗೆ ತಾಕಿ ,ಅಲ್ಲಿ ಗಾಯ ಆಗಿ ,ಅದರಿಂದ ರಕ್ತ ಬದಲು ಬರೀ ಅವಳ ಹೆಸರೇ ಬಂತು .ಈ ಸಲ valentines day ಹೀಗೆ ಬಿಟ್ಟರೆ ಅರೋಗ್ಯ ಕೆಡುತ್ತೆ ಅದರ ಬದಲು ಈ ಸಲ valentines dayಗೆ ಒಂದು ಕೈ ನೋಡಿಯೇ ಬಿಡೋಣ ಅಂತ ತೀರ್ಮಾನಿಸಿದೆ .
ಈ ಸಲ ಕವನ ಬೇಡ ಪ್ರೇಮ ಪತ್ರ ಬರೆಯೋಣ ಅಂತ ತೀರ್ಮಾನಿಸಿದೆ .ಅಂಬರೀಷ್ style ತರ ರಕ್ತದಲ್ಲಿ ಬರೆದು ಕೊಡುವ ಅಂತ ಒಂದು ಕ್ಷಣ idea ಬಂತಾದರೂ , ನಾವು crazy star ಅಭಿಮಾನಿ ಆದ ಕಾರಣ rebel star ಕಾಪಿ ಹೊಡೆಯೋದು ಬೇಡ ಅನ್ನಿಸಿ ಮಧ್ಯದಲ್ಲೇ ಕೈ ಬಿಟ್ಟೆ.(ನಿಜ ಏನು ಅಂತ ನಿಮಗೆ ಗೊತ್ತಾಗಿರಬಹುದು )',ನಾಳೆ practical book submission ಇದೆ ,ಅದಕ್ಕೆ ರಾತ್ರಿಯೆಲ್ಲ ಕೂತು ಬರೀಬೇಕು ಅಂತ ಅಪ್ಪ ಅಮ್ಮನಿಗೆ ಹೇಳಿ, practical book ಮಧ್ಯೆ ಖಾಲಿ ಖಾಗದ ಇಟ್ಟು ಪ್ರೇಮ ಪತ್ರ ಬರೆಯೋಕೆ ಶುರು ಹಚ್ಚಿಕೊಂಡೆ .ಪಕ್ಕದ ಮನೆ ಹುಡುಗ ಜೋರಾಗಿ ಹಾಡು ಹಾಕಿದ್ದ ,ಅದು ನನ್ನ roomನವರೆಗೂ ಕೇಳಿಸುತಿತ್ತು .ನಮ್ಮ ಅಣ್ಣ ರವಿದು ಚೆಲ್ಲಿತು ಚೆಲ್ಲಿತು ಪಾಯಸ ಚೆಲ್ಲಿತು ಹಾಡು ಬರ್ತಾ ಇದ್ದ ಹಾಗೆ ಪೆನ್ ಅದಾಗಿಯೇ ಓಡಿತು.Valentines ದಿನದ ಬೆಳಗ್ಗೆ ಚೆನ್ನಾಗಿ ಸ್ನಾನ ಮಾಡಿ ,pond s powder ಅರ್ಧ ಡಬ್ಬಿ ಮುಖಕ್ಕೆ ಬಳಿದುಕೊಂಡು, ಮನೆಯ ತೋಟದಿಂದ ಕೆಂಪು ಗುಲಾಬಿ ಕಿತ್ತಿಟ್ಟುಕೊಂಡು ಪ್ರೇಮಪತ್ರದ ಜೊತೆ ತಯಾರಾದೆ .ನಾನು ಅವಳು ದಿನ ಕಾಲೇಜ್ಗೆ ಹೋಗುವ ದಾರಿಯಲ್ಲಿ ಸಿಗುವ industrial area ದಲ್ಲಿ ನನ್ನ ಮನಸ್ಸನ್ನು ತೆರದಿಡಬೇಕಂದು ತೀರ್ಮಾನಿಸಿದ್ದೆ .ಯಾಕಂದೆರೆ ಅಲ್ಲಿ ಜನ ಸ್ವಲ್ಪ ಕಡಿಮೆ .ಕಪಾಳಕ್ಕೆ ಹೊಡೆದರೂ ಯಾರಿಗೂ ಗೊತ್ತಗಲ್ಲಾ ಅದಕ್ಕೆ .ಅವಳ ಮನೆಗೆ ಹೊರಟೆ ,ನನಗೇ ಕಾಯುತ್ತಿದ್ದ ಅವಳು ಹೊರಗೆ ಬಂದಳು .ಆಹಾ ಏನು ಚೆನ್ನಾಗಿ ಕಾಣಿಸ್ತಾಳೆ?."ಇವಳೇ ನಿನ್ನ ಕನಸಿನ ರಾಣಿ" ಅಂತ ಪದೇ ಪದೇ ನನ್ನ ಮನೆಹಾಳ ಗೆಳಯ ಬಂದು ಕಿವಿಗೆ ಹೇಳಿದ ಹಾಗೆ ಆಗುತಿತ್ತು.ಇಬ್ಬರೂ ಹೊರೆಟೆವು .
ನಮ್ಮ ಕನ್ನಡ ಧಾರಾವಾಹಿಯಲ್ಲಿ matter ಗೆ ಬರುವ ಮುನ್ನ ಒಂದು ನೂರು zoom ಶಾಟ್ ಗಳು ಹಾಕುವ ಹಾಗೆ ,ನಾವು ನೇರವಾಗಿ ಬರದೆ ತಿಂಡಿ ತೀರ್ಥ ,homework ಬಗ್ಗೆ ಮಾತಾಡುತ್ತಾ ಸ್ವಲ್ಪ ದೂರ ಹೋದೆವು . ಅವಳು "ನಿನಗೊಂದು surprise ಕೊಡಬೇಕು " ಅಂತ ಹೇಳಿ ನಿಂತು ಬಿಟ್ಟಳು.Surprise ಹಾ !ಏನಿರಬಹುದು.ಅವಳು ನನ್ನ ಹಾಗೆ ಯೋಚಿಸಿದ್ದಾಳಾ ? .ಅವಳೇ "i love you "ಅಂತಾಳಾ ?ಬಹುಶಃ ಇವಳು ನನ್ನ ಮನೆಹಾಳ ಗೆಳೆಯ ಹೇಳಿದ ಜಂಭದ ಹುಡುಗಿ ಇರಲಿಕ್ಕಿಲ್ವಾ ?ಮಲೆ ಮಾದೇಶ ನಮ್ಮ ಮೇಲೆ ಕರುಣೆ ತೋರಿಸಿ ,ಇವಳ ಮನಸಿನಲ್ಲಿ ಪ್ರೀತಿ ಬೀಜ ಬಿತ್ತಿದ್ನಾ ?ಅಥವಾ ನಾ ಅಷ್ಟೊಂದು ಚೆನ್ನಾಗಿದೀನಾ (over acting ನಮ್ಮ್ manufacturing defect , adjust ಮಾಡಿಕೊಳ್ಳಿ )?ಹೀಗೆ ಪ್ರಶ್ನೆಗಳು ಉದ್ಭವಿಸತೊಡಗಿದಾಗ, ಅವಳು ಒಂದು ಪುಸ್ತಕವನ್ನು ತನ್ನ ಚೀಲದಿಂದ ತೆಗದು ನನ್ನ ಕೈಗೆ ಇಟ್ಟಳು ."ನೆನ್ನೆ ಹೀಗೆ ಅಂಗಡಿಗೆ ಹೋದಾಗ ,ಈ ಪುಸ್ತಕ ನೋಡಿದೆ .ಚೆನ್ನಾಗಿತ್ತು .ನೀನು ಕವನ ಎಲ್ಲೆಲ್ಲಿಯೋ ಬರೆಯುತ್ತೀಯಾ.ಇನ್ಮೇಲೆ ಇದ್ರಲ್ಲಿ ಬರಿ .ನನ್ನ gift .open ಮಾಡು "ಅಂತ ಹೇಳಿದಳು .ಯಾವತ್ತೂ ಇಲ್ಲದೆ ಇರೋದು ಇವತ್ತೇ ಅದು February ೧೪ gift ಕೊಟ್ಟು ,book open ಮಾಡು ಅಂತ ಇದಾಳೆ ಅಂದ್ರೆ ಏನೋ ಇದೆ ?ಸುಮ್ನೆ ಕವನ ಗಿವನ ಅಂತ ಓಳು ಬಿಡ್ತಾ ಇದಾಳೆ ,ಮಳ್ಳಿ ! ನಂಗೆ ಗೊತ್ತು ,ಇದು ಅದೇ ಅಂತ ನಾನು ಮನಸ್ಸಿನಲ್ಲಿಯೇ ಬಿಟ್ಟಿ ಬೆಣ್ಣೆ ದೋಸೆ ತಿಂದಷ್ಟು ಖುಷಿಯಾಗುತ್ತಾ ಪುಸ್ತಕ ತೆರದೆ . ಮೊದಲ ಪುಟದಲ್ಲಿ "ನನ್ನ ಪ್ರೀತಿಯ ಶ್ರವಣನಿಗೆ ,ಪ್ರೀತಿಯ ಕಾಣಿಕೆ " ಅಂತ ಬರೆದಿತ್ತು .
ಹಾಗೆ ನಾಲ್ಕೈದು zoom shot ,back ground ಅಲ್ಲಿ romantic song ,ಬೇಸಿಗೆ ಕಾಲದಲ್ಲೂ ಇದ್ದಕ್ಕಿದ್ದ ಹಾಗೆ ಮಳೆ ,ಅದೆಲ್ಲಿಂದಲೋ ಹಾರಿಕೊಂಡು ಬರುವ love birds ,ಹಾಗೆ ನಾನು ಖುಷಿಯಾಗಿ ಅವಳನ್ನು ತಬ್ಬಿಕೊಂಡು... ಹಾಗೆ etc etc .ರೀ ಅದೆಲ್ಲಾ film ಅಲ್ಲಿ .ನಮ್ಮ ಹಾಳಾದ practical life ಅಲ್ಲಿ ಅಲ್ಲಾ ಕಾಣ್ರೀ .twist ಇನ್ನು ಇದೆ . ಅಲ್ಲೇ ಅದೇ ಸಾಲಿನ ಕೆಳಗೆ "ಇಂತಿ ನಿನ್ನ ಪ್ರೀತಿಯ ತಂಗಿ "ಅಂತ ಬರೆದಿದ್ದಳು .ಅಲ್ಲಿಗೆ ನಮ್ಮ ಎರಡನೇ ಅಧ್ಯಾಯ ಮುಗಿಯಿತು .
ಇನ್ನೂ ಇದೆ
ಮುಂದಿನ ಸಲ "ಪ್ಯಾಂಟ್ tight ಆಗಿ ,ಗಾಳಿ ಆಡ್ಲಿ ಅಂತ shortsಗಳು ಹಾಕೋ ಕಾಲ "ದಲ್ಲಿ ಭೇಟಿಯಾಗೋಣ .ಅಲ್ಲಿ ತನಕ ನಗು ನಗುತಾ ಇರಿ .
channagide:)
ಪ್ರತ್ಯುತ್ತರಅಳಿಸಿ