ಕುಲಕಸಬು ಬಿಟ್ಟು ಬದುಕಲು
ಬೇರೆ ದಾರಿ ಹಿಡಿದಿದ್ದವನಿಗೆ
ಒಬ್ಬಾತ ಪ್ರಶ್ನೆ ಕೇಳಿದ
"ನೀನು ನಿಮ್ಮ ಹಿರಿಯರಂತೆ
ಆಗಬಹುದಿತ್ತಲ್ಲಾ ?".
ಅದಕೆ ಆತ ಉತ್ತರಿಸಿದ
"ಹಾಗೆ ಆಗಲು ನಾನೇನು
ಕಾಂಗ್ರೆಸ್ಸಿನ ರಾಹುಲ್ಲಾ ?"
………………………………….
ತುಂಡು ಬಟ್ಟೆ
"ಅತ್ಯಚಾರಕ್ಕೆಲ್ಲಾ ಕಾರಣ
"ಅತ್ಯಚಾರಕ್ಕೆಲ್ಲಾ ಕಾರಣ
ಹೆಣ್ಣುಮಕ್ಕಳು ಉಡುವ
ತುಂಡು ಬಟ್ಟೆ " ಎಂದು
ತುಂಡು ಬಟ್ಟೆ " ಎಂದು
ಬೆಳಗ್ಗೆಯೆಲ್ಲಾ
ಬಾಯಿ ಬಾಯಿ
ಬಡಿದುಕೊಂಡರು .
ಅವರೇ ರಾತ್ರಿ
ಟಿ ವಿ ಮುಂದೆ ,
ಕ್ಯಾಬರೆ ನೋಡಲು,
ಬಾಯಿ ಬಾಯಿ
ಬಿಟ್ಟುಕೊಂಡು ,
ಕೂತು ಕೊಂಡರು .
...............................................................................................................................
ಗಣಿ ಧಣಿ
ಹೋಗಲಾಡಿಸಲು
ತಮ್ಮ ಮೈಗೆ
ಅಂಟಿಕೊಂಡಿರುವ
ಗಣಿ ಧೂಳನ್ನು ,
ಗಣಿ ಧಣಿಗಳು
ಆರಿಸಿಕೊಂಡರು
ತಮ್ಮ ಪಕ್ಷದ ಚಿಹ್ನೆಯಾಗಿ
ಫ್ಯಾನ್ ಅನ್ನು
..........................................................................................................................
ರಾಜ "key "
ಎಗರುವ ಯುವಕರು,

ಮುದುರಿಕೊಂಡ ಮುದುಕರು ,
ಅ ಆ ಇ ಈ ಬಾರದವರು ,
slate ಹಿಡಿದು ಫೋಟೋ
ಹೊಡೆಸಿ ಕೊಂಡವರು ,
ಸತ್ತ ಗಂಡಂದಿರ ಹೆಸರಲ್ಲಿ
ವಿಧವೆಯರು ,
ಹಿಂದೆ ಗಂಡನಿಟ್ಟುಕೊಂಡು
ಮುಂದೆ ನಿಲ್ಲುವ ಹೆಂಡತಿಯರು ,
ಎಲ್ಲರು ಜಿಗಿಜಿಗಿದು
ಸೇರುವರು ರಾಜಕೀಯ .
ಏಕಂದರೆ
ತಮ್ಮದಾಗಿಸಿಕೊಳ್ಳಬಹುದಲ್ಲಾ
ಕೋಟಿಗಟ್ಟಲೆ ಇರುವ
ಖಜಾನೆಯ ರಾಜ "key "ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ