Valentines day 3,part a:ಪ್ಯಾಂಟ್ tight ಆಗಿ ,ಗಾಳಿ ಆಡ್ಲಿ ಅಂತ shortsಗಳು ಹಾಕೋ ಕಾಲ
( "ನಾನು ಹಾಗು valentines dayಗಳು"trilogy ಯಾ ಕೊನೆಯ ಭಾಗ ಎರಡು ಹೋಳಾಗಿ ಬರುತ್ತಿದೆ .ಮೊದಲನೆಯ ಹೋಳು ಇಲ್ಲಿದೆ .)
ಈ ಹಾಳಾದ ಹೃದಯದ ಹಸಿವಿಗೆ ಪ್ರೀತಿ ಅನ್ನೋ pizza burger ಸಿಗದೇ ಹೋದ್ರೂ ,ನಮ್ಮ ದೇಹಕ್ಕೆ ಮಾತ್ರ ನಾಲ್ಕು ಹೊತ್ತು ಊಟ ಸರಿಯಾಗಿ ತಪ್ಪದೇ ಬೀಳುತ್ತಿದ್ದರಿಂದ ,ಹೇಗೋ ಇಂಜಿನಿಯರಿಂಗ್ ಮಾಡೋ ಅಷ್ಟು ಚಿಗುರಿಕೊಂಡ್ವಿ .ಅಪ್ಪ ತಂದು ಹಾಕ್ತಾ ಇದ್ರು,ಅಮ್ಮ ಮಾಡಿ ಹಾಕ್ತಾ ಇದ್ರು. ಇನ್ನು ಬದುಕೋಕೆ ಏನು ದಾಡಿ ನಮಗೆ . ಹಾಗೆಯೇ ಯೌವ್ವನವೂ ಸಿಕ್ಕಾಪಟ್ಟೆ ಜಾಸ್ತಿ ಆಗಿ, body ಅಲ್ಲಿ ಉಷ್ಣ ಜಾಸ್ತಿ ಆಗುತ್ತಿದ್ದರಿಂದ ,ಗಾಳಿ ಆಡಲು ಬಿಡುತ್ತಿದ್ದ shorts ಗಳೇ ಪ್ಯಾಂಟ್ಗಳಿಗಿಂತ ಹೆಚ್ಚು ಇಷ್ಟ ಆಗುತಿತ್ತು.
ಇದರ ಮಧ್ಯೆ ,Cet ಬರೆದು,ಒಳ್ಳೆ rank ಬರುತ್ತೆ ಅಂತ ಕನಸು ಕಾಣುತ್ತಾ , ಒಳ್ಳೊಳ್ಳೇ ಇಂಜಿನಿಯರಿಂಗ್ ಕಾಲೇಜುಗಳನ್ನು ಗುರುತು ಮಾಡಿ ಇಟ್ಟುಕೊಂಡಿದ್ದೆ .ಒಳ್ಳೊಳ್ಳೇ ಇಂಜಿನಿಯರಿಂಗ್ ಕಾಲೇಜ್ ಅಲ್ಲಿ fast forward ಹುಡುಗಿ ಇರ್ತಾರೆ ಅಂತ ಅಷ್ಟೇ .ಇನ್ನ್ಯಾವುದೇ ಕಾರಣಕ್ಕೆ ಅಲ್ಲಾ .ಆದರೆ ನಮ್ಮ ಹಣೆಬರಹವನ್ನು ದೇವರು ಎಡಗೈನ ತೊಳೆದುಕೊಳ್ಳದೇ ಬರೆದಿದ್ದ ನೋಡಿ ,ಹಾಗೆ ಆಗಿಲಿಲ್ಲಾ .ನನಗೆ government ಕಾಲೇಜ್ ನಲ್ಲಿ seat ಸಿಕ್ತು .ನಿಜವಾಗಿ ನಾನು ಹೋಗಬಾರದು ಅಂತ ಇದ್ದ list ನ ಮೊದಲ ಕಾಲೇಜ್ .ಎಲ್ಲಿಗೆ ಹೋಗಬಾರದು ಅಂತ ಇದ್ದನೋ ಅಲ್ಲಿಗೆ ಹೋದೆ .ಹಲವಾರು ಕಾರಣಗಳು ಇದ್ದವು ಅದಕ್ಕೆ .ನನಗೆ ಸಿಕ್ಕ rankಉ ,ಅದರಲ್ಲೂ ಪುಲ್ಚಾರಾಗಿ ಹುಟ್ಟಿದ್ದು ,ಅಷ್ಟೇ ಅಲ್ಲದೆ ಅಪ್ಪನಿಗೆ ನಿಮ್ಮ ಮಗ ನಿಮ್ಮೂರು ಬಿಟ್ಟು ಬೇರೆ ಕಡೆ ಓದಿದರೆ,ಯಾವುದಾದರು ಹುಡುಗಿ ಜೊತೆ ಓಡಿ ಹೋಗ್ತಾನೆ ಅಂತ ಯಾವುದೋ ಜ್ಯೋತಿಷಿ ಹೇಳಿದ್ದು,ನಮ್ಮ ಊರಲ್ಲಿ ಅದು ಒಂದೇ ಕಾಲೇಜ್ ಇದ್ದಿದ್ದು ..ಹೀಗೆ ಹತ್ತು ಹಲವು.ಕೊಡುವಾಗ ಸರಿಯಾಗಿ ಎಲ್ಲಿ ಅಂತ ನೋಡಿ ,ಎತ್ತಿ ಕೊಡ್ತಾನೆ ನಮ್ಮ ದೇವರು .ಅವನಿಗೆ ಅದರಲ್ಲೂ ನಮ್ಮ ಮೇಲೆ ಪ್ರೀತಿ ಸ್ವಲ್ಪ ಜಾಸ್ತಿ.ಆದ್ರೆ ಅವನು ಏನೇ ಮಾಡಿದ್ರೂ ಲೆಕ್ಕಾಚಾರ ಇಟ್ಟುಕೊಂಡೇ ಮಾಡಿರ್ತಾನೆ ಅಂತ ಆಮೇಲೆ ಗೊತ್ತಾಯ್ತು .ಯಾಕಂದ್ರೆ ಅವಳು ನಂಗೆ ಸಿಕ್ಕಿದ್ದು ಅದೇ ಕಾಲೇಜ್ ಅಲ್ಲಿ .ಅವಳದು ನನ್ನದು ,ಸ್ವಲ್ಪ special love story .
ನಿಜ ಹೇಳ್ಬೇಕು ಅಂದ್ರೆ ಮೊದ ಮೊದಲು ನಂಗೆ ಅವಳು ಕಂಡ್ರೆ ಆಗ್ತಾ ಇರಲಿಲ್ಲ.ಅವಳ ಪರಿಚಯ ಆಗಿದ್ದೆ ಜಗಳದಲ್ಲಿ .ನಾವು ಇಂಜಿನಿಯರಿಂಗ್ ಬಂದ ಮೇಲೆ ,blade ಹಾಕಿ ಬೋಳಿಸಿದರೂ ಬರ್ತಾ ಇದ್ದ ಮೀಸೆ ,ನಮಗೆ ಸ್ವಲ್ಪ ಗ್ಯಾಂಚಲಿ ಜಾಸ್ತಿ ಮಾಡಿಸಿತ್ತು .ಓದೋದು ಬಿಟ್ಟು ,ಬೇರೆ ಎಲ್ಲಾ ಮಾಡುತ್ತಾ ಇದ್ದೆವು.ಅದ್ರಲ್ಲಿ Classಗೆ ಬಂಕ್ ಹಾಕೋದು ಒಂದು .ಅದು common . ಆದ್ರೆ ನಾವು ,ನಾವೊಬ್ಬರೇ ಯಾಕೆ ಬೈಸ್ಕೋಬೇಕು,ಎಲ್ಲರು ಹಂಚಿಕೊಳ್ಳೋಣ(ಏನೇ ಆದ್ರೂ ಹಂಚಿಕೊಂಡು ತಿನ್ನು ಅಂತ ನಮ್ಮಮ್ಮಹೇಳಿಕೊಟ್ಟಿದಾರೆ ) ಎಂದು ಆದಷ್ಟು ಜನರನ್ನು ಎಳೆದುಕೊಂಡು ಹೋಗುತ್ತಿದ್ದೆವು .ನಮ್ಮ ಜೊತೆ ಬರದ .so called ಬುದ್ಧಿವಂತರ ಗುಂಪಿನ ,ಅವಿರೋಧ ನಾಯಕಿಯೇ ಅವಳಾಗಿದ್ದಳು .ಒಂದು ದಿನ ಒಂದಿಷ್ಟು ಹುಡುಗ ಹುಡುಗಿಯರು ರಜೆ ಹಾಕಿ, ಮುಂಗಾರು ಮಳೆ film ,ಪರ ಪರ scene ನೋಡಿ ಶಿಳ್ಳೆಹಾಕೋಣ ಅಂತ ಹೋಗಿದ್ದೆವು .ಮಾರನೇ ದಿನ ನಾವು ರಜ ಹಾಕಿ ಸಿನೆಮಾಕ್ಕೆ ಹೋಗಿರುವ ವಿಷ್ಯ, lectureಗೆ ಗೊತ್ತಾಗಿ ನಾವೇ ಪರ ಪರ ಕೆರೆದುಕೊಳ್ಳುವ ತರಹ ಆಗಿತ್ತು .ಅದೇನಾಗಿತ್ತು ಅಂದರೆ ನಾವು ರಜೆ ಹಾಕಿದಾಗ , lecture ಕ್ಲಾಸ್ಸಲ್ಲಿ ಬರೀ ನಾಲ್ಕೇ ತಲೆ ಇರೋದು ನೋಡಿ ಸಿಟ್ಟಿನಿಂದ "ಎಲ್ಲಿದ್ದಾರೆ ಉಳಿದೋರು ,ನಿಮಗೆ ಗೊತ್ತು ...ಹೇಳಿಲ್ಲ ಅಂದರೆ ಪಾಠ ಮಾಡೋಲ್ಲಾ" ಅಂತ ಗದರಿದ್ದಾರೆ .ಆಗ ನಮ್ಮ ಸತ್ಯ ಹರಿಶ್ಚಂದ್ರನ ಮೊಮ್ಮಗಳು, ೧೯೮೦ ಚಲನ ಚಿತ್ರಗಳಲ್ಲಿ ,ಅನ್ಯಾಯದ ವಿರುದ್ಧ ಸಿಡಿದೇಳುವ ನಾಯಕಿ ತರಹ ಎದ್ದು ನಿಜ ಬಾಯಿ ಬಿಟ್ಟಿದ್ದಾರೆ .ಮಾರನೇ ದಿನ ,ಈ ವಿಷ್ಯ ತಿಳಿದಿದ್ದೆ ತಿಳಿದಿದ್ದು ನಂಗೆ ಕೋಪ ತಾಪ ಎಲ್ಲವೂ ಏರಿ ,೫ ಅಡಿ ಇದ್ದರೂ ೬ ಅಡಿ angry young man ಅಮಿತಾಭ್ ಬಚ್ಚನ್ ತರಹ ಅವಳ ಹತ್ತಿರ ಹೋಗಿ "ಏನು ನೀನು ದೊಡ್ಡ ಲಾಡ ?ಸತ್ಯ ಹರಿಶ್ಚಂದ್ರ film ಒಂದಿಷ್ಟು ಸಲ ನೋಡಿಬಿಟ್ಟರೆ,ನೀನು ಅವಳ ಮೊಮ್ಮಗಳಾ,ಏನು ಮುಕ್ತ ಧಾರಾವಾಹಿ c .s .p ನಾ ? ನಾಚಿಕೆಯಾಗೊಲ್ಲಾ ಚಾಡಿ ಹೇಳೋಕೆ .ಇನ್ನೊಂದು ಸಲ ಹೀಗೆ ಮಾಡಿದ್ರೆ ಹುಷಾರು ,ನೆಟ್ಟಗೆ ಇರೋಲ್ಲಾ" ಅಂತ ಸ್ವಲ್ಪ ನಮ್ಮ sizeಗೂ ಮೀರಿ ಎಗಾರಾಡಿ ಬಿಟ್ಟಿದ್ದೆ .ಅಷ್ಟೇ ಅಲ್ಲದೇ ಹುಡುಗರು ಸಿಕ್ಕಾಪಟ್ಟೆ ಪಟ್ಟೆ ಸತಿ ಸಕ್ಕುಬಾಯಿ ,ಸತಿ ಸುಲೋಚನ ಅಂತ ಕಾಡಿಸಿ ಬಿಟ್ಟರು .ಆ ಗುಂಪಿನ ದಟ್ಟದರಿದ್ರ ನಾಯಕ ನಾನೇ ಅಂತ ನಿಮಗೆ ಹೇಳಬೇಕಾಗಿಲ್ಲ .ಆ ದಿನ ಹುಡುಗಿ ಜೋಗ ಜಲಪಾತ ತುಂಬುವಷ್ಟು ಕಣ್ಣೇರು ಹಾಕುತ್ತಾ ಮನೆಗೆ ಹೋಗಿದ್ದಾಳೆ.
ಹುಡುಗಿ ನಕ್ಕಿದ್ರೆ ಪ್ರಣಯ , ಅತ್ತರೆ ಪ್ರಳಯ .ಮಾರನೇ ದಿನ ನಮ್ಗೆ full ಹೊಗೆ . Hod ಕರೆದು ಕ್ಯಾಕರಿಸಿ ಏಳು ಜನ್ಮಕ್ಕಾಗುವಷ್ಟು ಉಗಿದರು ."ಏನೋ ,ರೌಡಿಸಂ ಮಾಡೋಕೆ ಬರ್ತೀಯಾ ? ಧಮಕಿ ಧಮಕಿ ಹಾಕ್ತೀಯಾ ?ಇವೆಲ್ಲಾ ನಾನು ಮಾಡಿಬಿಟ್ಟು ,ಆಮೇಲೆ hod ಆಗಿರೋದು .Field ಗೆ ಇಳಿದರೆ ಪಕ್ಕ local ನಾನು .ನನ್ನ ಹತ್ತಿರ ಇಟ್ಟುಕೋಬೇಡ ನೀನು .ಹುಷಾರ್ ,ಎಂಟು ವರ್ಷ ಓದಿದರೂ engineering ಮುಗಿಬಾರದು ಹಾಗೆ ಮಾಡ್ತೀನಿ." ಅಂತ ಒಂದು ಲೆಕ್ಕದಲ್ಲಿ ಅವಾಜ್ ಹಾಕಿದರು .ಅಪ್ಪಿ ತಪ್ಪಿ hod ಆದರಾ ಅನ್ನುವಷ್ಟು ಸಂಶಯ ಹುಟ್ಟಿತ್ತು ನಂಗೆ ಅ ದಿನ .ಆ ದಿನದಿಂದ ನಾನು ನಮ್ಮ ಕಾಲೇಜ್ ಅಲ್ಲಿ, ಅದರಲ್ಲೂ ನಮ್ಮ ಬ್ರಾಂಚ್ ಅಲ್ಲಿ lecturers ಪಾಲಿಗೆ punching bag .ಯಾರಿಗಾದ್ರೂ ,ಯಾವುದುಕ್ಕಾದ್ರು ಬಯ್ಯುವಾಗ , ನನ್ನನ್ನು ಸೇರಿಸಿಕೊಂಡು ಬಯ್ಯುತ್ತಿದ್ದರು . ಇದಕ್ಕೆಲ್ಲಾ ಅವಳೇ ಕಾರಣ ಅಂತ ನಂಗೆ ಅವಳ ಮೇಲೆ ದ್ವೇಷ ಹುಟ್ಟಿತ್ತು .
ಅದಾದ ಮೇಲೆ, ಹೀಗೆ ಒಂದು ದಿನ internal test ಮಾರ್ಕ್ಸ್ ನೋಡೋಣ ಅಂತ ಸರ್ ಆಫೀಸಿಗೆ ನಾವೆಲ್ಲಾ ಹುಡುಗರು ಹೋಗಿದ್ದೆವು .ಅಲ್ಲಿ ತನಕ ಹೋಗಿ ನೋಡಬೇಕು ಅನ್ನೋ ಉತ್ಸಾಹ ಅಲ್ಲ ,ಹೋಗದೆ ಇದ್ದರೆ ಕ್ಲಾಸ್ ಅಲ್ಲಿ ಎಲ್ಲರ ಮುಂದೆ ಪುಸ್ತಕ ಕೊಡುತ್ತಾ ಜೋರಾಗಿ ಮಾರ್ಕ್ಸ್ ಹೇಳುತ್ತಾರಲ್ಲಾ ,ಸುಮ್ನೆ ನಮ್ಮ ಮರ್ಯಾದೆನಾ ನಾವೇ ಯಾಕೆ market ಅಲ್ಲಿ ಹರಾಜಿಗಿಡೋದು ಅಂತ. ಅದಾಗಲೇ ಅವಳು ಹಾಗು ಅವಳ ಗುಂಪು ಬಂದಿದ್ದರು .ಅವಳು ಸರ್ ಹತ್ತಿರ ಏನೋ ಕೇಳುತ್ತಿದ್ದಳು .ಬಹುಶಃ ಇಪ್ಪ್ಪತ್ತೈದಕ್ಕೆ ಇಪ್ಪತ್ತನಾಲ್ಕು ಬಂದಿರಬೇಕು ,ಅರ್ಧ ಮಾರ್ಕ್ಸ್ ಎಲ್ಲಿ ಅಂತ ಕೇಳುತ್ತಿದ್ದಳೇನೋ .ನಾನು ಅವಳನ್ನು ನೋಡಿದ ಕೂಡಲೇ ನನ್ನ ಗೆಳಯರ ಹಿಂದೆ ಬಚ್ಚಿಕೊಂಡೆ .ಅವಳ ನೆರಳು ನನ್ನ ಮೈ ಮೇಲೆ ಬಿದ್ದರು ನಂಗೆ ಉರಿ ಹತ್ತಿದಂತಾಗುತಿತ್ತು.ಆಗ ನನ್ನ ನೋಡಿದ ಸರ್ "ಬಾರಪ್ಪ, ಯಾಕೆ ಹೀರೋ ಹಿಂದೆ ಸೇರಿಕೊಂಡೆ ?ಬೇರೆ ಮನೆಹಾಳ ವಿಷ್ಯಕ್ಕೆ ಎಲ್ಲಾ ಮುಂದಿರುತ್ತೀಯಾ .ಬಾ ಎಷ್ಟು ತೆಗದಿದ್ಯಾ ಅಂತ ನೋಡು " ಅಂತ ಹೇಳುತ್ತಾ ನನ್ನ ಪುಸ್ತಕ ಎತ್ತಿ ಹಿಡಿದರು .ಅದ್ರಲ್ಲಿ ನನ್ನ ಮಾರ್ಕ್ಸ್ ಇಪ್ಪತ್ತೈದಕ್ಕೆ ಎರಡು ಅಂತ ದೊಡ್ದಾದಾಗಿ ಕೆಂಪುಬಣ್ಣದ ಬರೆಯಲಾಗಿತ್ತು .ಬಹುಶಃ ಸರ್ ಅವರ ಹೆಂಡತಿ ಗೌರಮ್ಮನ ಬಿಂದಿ ನೆನಸಿಕೊಂಡರು ಬರೆದರೋ ಗೊತ್ತಿಲ್ಲಾ ."ಯಾಕೋ ನಿಮಗೆಲ್ಲಾ ಓದು ಬರಹ .ಅಪ್ಪ ಅಮ್ಮನ ದುಡ್ಡಲ್ಲಿ ಶೋಕಿ ಮಾಡೋಕೆ ಬರ್ತೀರಾ .ಹೋಗು ಅದೇ ದುಡ್ಡಲ್ಲಿ ಎಮ್ಮೆ ತಗೊಂಡು ಸಾಕು .ಒಳ್ಳೆ ಕಮಾಯಿ ಆದರು ಆಗುತ್ತೆ "ಅಂತ ಅಣುಕಿಸಿದರು .ಎಲ್ಲರು ಜೋರಾಗಿ ನಗಲು ಶುರು ಮಾಡಿದರು .ಉಗಿಸಿಕೊಂಡಿದಕ್ಕೆ ನಮಗೆ ಬೇಜಾರು ಆಗಲಿಲ್ಲಾ ,ಅದು common .ಹುಟ್ಟಿದಾಗಲೇ nurseಗೆ ಕಣ್ಣು ಹೊಡೆದು ಉಗಿಸಿಕೊಂಡವರು ನಾವು . ಒಂದು ದಿನ ಯಾರಾದ್ರೂ ನಮಗೆ ಉಗಿಲಿಲ್ಲ ಅಂದ್ರೆ , ಊಟ ನಿದ್ದೆ ಸರಿಯಾಗಿ ಆಗ್ತಾ ಇರಲಿಲ್ಲಾ .ಆದ್ರೆ ಈ ಸಲ ಅವಳ ಮುಂದೆ ಉಗಿದ್ರಲ್ಲಾ .ಅದನ್ನು ನೋಡಿ ಅವಳು ಕಿಸಿ ಕಿಸಿ ನಕ್ಕಿದ್ಳಲ್ಲಾ ..ಉರೀತು topಇಂದ bottom ವರೆಗೆ ,ಸಿಕ್ಕಾಪಟ್ಟೆ ಉರೀತು . ಅ ದಿನದಿಂದ ನಾವು ಇನ್ನಷ್ಟು ದುಶ್ಮನ್ ಗಳಾದೆವು .
ಅವಳು ನೋಕಿಯಾ ಆದ್ರೆ ನಾನು samsung .ಅವಳು java ಆದ್ರೆ , ನಾವು c programming.ಅವಳು bata ಆದ್ರೆ ,ನಾವು hawai .ಹೀಗೆ full ವಿರುದ್ಧ .ಏನೇ ಹೇಳಿ ನಾವೇನು ಕಿತ್ತು ಗುಡ್ಡೆ ಹಾಕಿದರೂ ,ಬೊಂಬೆ ಆಡಿಸೋನು ಮೇಲೆ ಕುಂತವ್ನೆ . ಅವನು ಹೆಂಗೆ ಬೇಕೋ ,ಹಂಗೆ ಅಡಿಸೋದು . ಏನಾದ್ರೂ ಕಿತಾಪತಿ ಮಾಡಿಯೇ ಮಾಡ್ತಾನೆ .ಅವನಿಗೂ time Pass ಆಗ್ಬೇಕಲ್ಲಾ
part b ಇನ್ನು ಇದೆ ..ಪ್ರೇಮಾನುಭವ .ಮೊದಲ ಚುಂಬನ ,ನವರಂಗಿ ಆಟ miss ಮಾಡ್ಕೋಬೇಡಿ ....
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ