ಮಂಗಳವಾರ, ಡಿಸೆಂಬರ್ 9, 2014

ಕನಸುಗಳ ಬೆನ್ನುಹತ್ತಿ : ಮನಸಿನ ಪ್ರತಿಬಿಂಬ ತೋರಿಸಿದ ಮನೀಷೆ ಎಂಬ ಕನ್ನಡಿ



ಗಾಬರಿಯಿಂದ ಮುಖ ತೊಳೆಯುತ್ತಿರುವ ನಾಯಕನಿಗೆ ಏನೋ ಅರಿವಾದಂತಾಗಿ , ಮೆಲ್ಲಗೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ .ಈ ಸಲ ಅವನಿಗೆ ತನ್ನ ಪ್ರತಿಬಿಂಬ ಕಾಣುತ್ತದೆ . ಆಗ ನಾಯಕನಿಗೆ ತಾನು ಏನು ಕಳೆದುಕೊಂಡಿದ್ದೇನೆ ಎಂಬುದು ಅರಿವಾಗುತ್ತದೆ .ತನ್ನ ಹೆಂಡತಿಗೆ “ಸಿಕ್ತು ಬಿಡೆ “ ಎಂದು ಹೇಳಿ ಕನ್ನಡಿಯನ್ನೇ ನೋಡುತ್ತಾ ನಿಲ್ಲುತ್ತಾನೆ .ಮೆಲ್ಲಗೆ ಅವನ ಮುಖದಲ್ಲಿ ಮಂದಹಾಸ ಮೂಡುತ್ತದೆ .

         ಮನೀಷೆ ಕಿರುಚಿತ್ರ ನೋಡಿದ್ದರೆ ನಿಮಗೆ ಈ ದೃಶ್ಯ ಗೊತ್ತಿರುತ್ತದೆ . ನೋಡಿದವರಿಗೆಲ್ಲಾ ಈ ದೃಶ್ಯ ಅರ್ಥ ಆಗಿಲ್ಲ ಅನ್ನುವುದು ನಿಜ ಹಾಗೆಯೇ ಅವರಿಗೆ ಮನೀಷೆ ಚಿತ್ರವೂ ಇಷ್ಟ ಆಗಿಲ್ಲ . ನನಗೆ ಮನೀಷೆ ಚಿತ್ರಕ್ಕಿಂತ ,ಅನಿರೀಕ್ಷಿತ ಸಕತ್ ಆಗಿದೆ ಅಂತ ಹೇಳಿದವರಲ್ಲಿ ಶೇಕಡಾ ೭೦ ರಷ್ಟು ಜನ ಈ ವರ್ಗಕ್ಕೆ ಸೇರಿದವರು . ಇನ್ನುಳಿದವರು art ಸಿನಿಮಾ ಇಷ್ಟ ಪಡದೇ ಇರುವವರು .For them movie is just for entertainment. ನಾನು ಅವರುಗಳ ವಿರುಧ್ಧ ಅಲ್ಲ ಬಿಡಿ. ನನಗೆ ಕೇಳಿದರೆ,, ನನ್ನ ಮನಸಿಗೆ ಮನೀಷೆ ಕಿರುಚಿತ್ರ ತುಂಬಾ ಹತ್ತಿರ .ಕಾರಣಗಳು ಬಹಳಷ್ಟಿವೆ . ಮೊದಲನೆಯದಾಗಿ ನಾನು ಅಭಿನಯಿಸಿದ ಮೊದಲ ಅರ್ಥಪೂರ್ಣ ಚಿತ್ರ. ಅದರ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ . ಅದರ ಕಥೆ ಸ್ವಾರಸ್ಯಕರ . ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ .

       ಹೀಗೆ ಒಂದು ದಿನ office mail box ಗೆ .mail ಬಂತು . ನಾವು ಒಂದು ಕಿರುಚಿತ್ರ ಮಾಡುತ್ತಿದ್ದೇವೆ .ಎರಡು ಪಾತ್ರಕ್ಕೆ ನಟರು ಬೇಕಾಗಿದ್ದಾರೆ . ಶನಿವಾರ auditions ಇದೆ ಎಂದು . ನಾನು ಅದಕ್ಕೆ ಅಷ್ಟೊಂದು ಗಮನ ಕೊಡದೇ deleteಮಾಡಿದೆ.ಯಾಕಂದ್ರೆ ಅದಕ್ಕಿಂತ ಮುಂಚೆ ಹೋಗಿದ್ದಲೆಲ್ಲಾ ನನ್ನನ್ನು reject ಮಾಡಿದ್ದರು . ಕಾರಣ ನನ್ನ height ಹಾಗು ಮುಖ . ಆದರೆ ನನ್ನ ಇನ್ಫೋಸಿಸ್ ಸೀನಿಯರ್ ದರ್ಶನ್ ಒತ್ತಾಯದ ಮೇರೆಗೆ ಮನಸಿಲ್ಲದ ಮನಸಲ್ಲಿ ಹೋದೆ.

          ಅಲ್ಲಿ ಹೋದಾಗ ನನಗಿಂತ ಉದ್ದ ಇರುವವರು ,ಚೆನ್ನಾಗಿ ಇರುವವರು ಬಂದಿದ್ದರು . ನಾನು ಮನಸ್ಸೊಳಗೆ ನಾನು ಆದ ಹಾಗೆ ಸುಮ್ಮನೆ time ವೇಸ್ಟ್ ಅಂದುಕೊಂಡು ಅಲ್ಲಿ ಕೊಟ್ಟಿರುವ form ತುಂಬಿಸುತ್ತಾ ಅವರು practise ಮಾಡಲು ಹೇಳಿದ್ದ scene ಗಳನ್ನು ಹಾಗೆ ಯೋಚಿಸುತ್ತಿದ್ದೆ . ಸ್ವಲ್ಪ ಸಮಯದ ನಂತರ ನನ್ನ ಸರದಿ ಬಂತು . Audition mail ನಲ್ಲಿ ಮೂರೂ ಸನ್ನಿವೇಶಕ್ಕೆ ತಯಾರಾಗಲು ಹೇಳಿದ್ದರು .ಒಂದು ಏನೋ ಕಳೆದುಹೋಗಿರುತ್ತದೆ ,ಏನೆಂದು ನಮಗೆ ಗೊತ್ತಿರುವುದಿಲ್ಲ . ಎರಡನೆಯದು ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ಕಾಣಿಸುವುದಿಲ್ಲ .ಮೂರನೆಯದು ಒಂದು ಕಥೆ ಹೇಳುವುದು . ಅದೆನ್ನೆಲ್ಲ ಲೀಲಾಜಾಲವಾಗಿ ಮಾಡಿದೆ . ( ನಂಗೆ confidence ಅಂತ ಇರುವುದು ಅಭಿನಯದಲ್ಲಿ ಮಾತ್ರ ). ಅಲ್ಲಿದ್ದವರೆಲ್ಲರೂ ಚೆನ್ನಾಗಿದೆ , ಆಮೇಲೆ ಹೇಳ್ತೀವಿ ಅಂತ ಹೇಳಿ ಕಳುಹಿಸಿದರು . ನಾನು ನೀವು ಹೇಳಿದ ಹಾಗೆ ಬಿಡಿ, ಚೆನ್ನಾಗಿರೋರನ್ನು select ಮಾಡ್ತೀರ ಅಂತ ಮನಸಲ್ಲೇ ಅಂದುಕೊಂಡು ಹೊರಟೆ .

              ಎರಡು ದಿನದ ನಂತರ ಚಿತ್ರದ ನಿರ್ದೇಶಕರು ಮನೀಷ್ call ಮಾಡಿ ನಾನು select ಆಗಿದ್ದೀನಿ ,meet ಮಾಡಬೇಕು ಅಂದಾಗ ನನಗೆ ನಂಬಲೇ ಆಗಲಿಲ್ಲ. meet ಮಾಡಿದಾಗ ನಂಗೆ ಮನೀಷ್ ಕಥೆ ಹೇಳಿ, ನಂತರ ನಿನಗೆ car ಓಡಿಸಲು ಬರುತ್ತಾ? .ದೇವರು ದೊಡ್ಡವನು ಅನ್ನುವದು ಇದಕ್ಕೆ .ಆಗ ತಾನೇ classಗೆ ಸೇರಿಕೊಂಡಿದ್ದೆ . ಕಲಿತಾ ಇದೀನಿ ಅಂದೆ . ಮನೀಷ್ ಉಫ್ ಎಂದು ನಿಟ್ಟುಸಿರುಬಿಟ್ಟರು. ಹೀಗೆ ಮನೀಷ್ ಜೊತೆ ಮನೀಷೆ ಪ್ರಯಾಣ ಶುರುವಾಯಿತು . ವಸುಧೇಂದ್ರ ಅವರ ಕಥೆಗೆ ಜೀವ ಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದೆವು .ಚಿತ್ರ ಹೇಗೆ ಮೂಡಿ ಬರುತ್ತದೆ ಎಂಬುದು ನಮಗೂ ಗೊತ್ತಿರಲಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂಬ ನಂಬಿಕೆ ಯಿತ್ತು .

           ಸ್ವಲ್ಪ ದಿನ ರಿಹರ್ಸಲ್ಗಳು ನಡೆದವು . ಶೂಟಿಂಗ್ locations ಗಳಲ್ಲಿ ಮತ್ತೊಮ್ಮೆ ರಿಹೆರ್ಸಲ್ ನೆಡಯಿತು . ಅಂತೂ ಆ ದಿನ ಬಂದೇಬಿಟ್ಟಿತು . ಅದೇ ಶೂಟಿಂಗ್ ನ ಮೊದಲ ದಿನ . ಕ್ಯಾಮೆರಾ ಎದುರಿಸುವ ಮೊದಲ ದಿನ .ಹೇಗೆ ಮಾಡುತ್ತೇನೆ ,ನಿರ್ದೇಶಕರ expectations ಮುಟ್ಟುತ್ತೇನೆ ಇಲ್ಲವೋ ಎಂಬ ಭಯ ಇತ್ತು. ಆದರೆ ಇದೆಲ್ಲಕಿಂತ ದೊಡ್ಡ ವಿಘ್ನ ವೊಂದು ಕಾದಿತ್ತು. ನನ್ನ ಪತ್ನಿ ಮಾಡುವ ಪಾತ್ರದವಳು ಸಿಕ್ಕಿರಲಿಲ್ಲ . ಒಪ್ಪಿಕೊಂಡವಳು ಬಂದಿರಲಿಲ್ಲ. ಆಮೇಲೆ ಇನ್ನ್ಯಾರನ್ನೋ ಒಪ್ಪಿಸಿ ನಿರ್ದೇಶಕರು ಕರೆದುಕೊಂಡು ಬಂದರು . ಅವಳಿಗೆ ನಿರ್ದೇಶಕರು ನನ್ನ ಪರಿಚಯ ಮಾಡಿಸಿಕೊಟ್ಟ ೫ ನಿಮಿಷದಲ್ಲಿ ಮಾಯವಾದಳು . ಕಾರಣ ನನ್ನ ಮುಖ ಇರ್ಬೇಕು .ಪಾಪ ಅವರು ಜಾನ್ ಅಬ್ರಹಾಂ ತರಹ ನಾಯಕ ಇರುತ್ತಾನೆ ಅಂದುಕೊಂಡಿದ್ದ ರೇನೋ. ನಾನು ಒಳ್ಳೆ ಜಾಲಿ ಮುಳ್ಳು ಕೊಯ್ಯುವ್ವವನ ಹಾಗೆ ಇದ್ದೆ. ಕೊನೆಗೆ ಪ್ರೀತಿ ನಾಯಕಿಯಾಗಳು ಒಪ್ಪಿಕೊಂಡಳು .(ದೊಡ್ಡ ಮನಸ್ಸು ಅವಳದು ).ಶೂಟಿಂಗ್ ಶುರು ಆಯಿತು .

               ಮನೀಷೆ ಶೂಟಿಂಗ್ ವೇಳೆಯಲ್ಲಿ ನನಗೇ car ಹ್ಯಾಂಡಲ್ ಮಾಡುವುದೇ ಕಷ್ಟವಾಗಿತ್ತು . .car ಓಡಿಸಿವುದನ್ನು ಕಲಿತ್ತಿದ್ದೆ ಅದರೂ ಮನೀಷೆ ಅಲ್ಲಿ ಉಪಯೋಗಿಸಿದ್ದ car ಬೇರೆ , ಅಲ್ಲಿ ಕಲಿತಿದ್ದ car ಬೇರೆ. ಆದ್ದರಿಂದ car ಸನ್ನಿವೇಶಗಳಲ್ಲಿ ಸಣ್ಣ ಭಯ ಕಾಣಬಹುದು ನನ್ನ ಮುಖದಲ್ಲಿ . ಇನ್ನು ನಂಗೆ ಮನೀಷೆ ಶೂಟಿಂಗ್ ಸಮಯದಲ್ಲಿ ತುಂಬಾ ಕಾಡುವ ದಿನವೆಂದರೆ , ಕ್ಲೈಮಾಕ್ಸ್ ಶೂಟಿಂಗ್ ಮಾಡಿದ ದಿನ. ನಾನು ಅದೆಷ್ಟು ಬಾರಿ ಮುಖ ತೊಳೆದುಕೊಂದಿದ್ದೇನೋ ನನಗೆ ಗೊತ್ತಿಲ್ಲ . ಕ್ಯಾಮೆರಾ ಸ್ವಲ್ಪ ಅಲ್ಲಾಡಿದರೂ ನಾನು ಫ್ರೇಮ್ ನಿಂದ ಹೋಗುವ ಸಾಧ್ಯತೆ ಗಳಿತ್ತು .ಅದಕ್ಕೆ ಸಂತೋಷ್ ಅವರು ಕ್ಯಾಮೆರಾ ಕಣ್ಣಿಗೆ ಅವರು ಬೀಳದ ಹಾಗೆ, ನಾನು frameನ ಆಚೆ ಹೋಗದ ಹಾಗೆ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದರು .ನೆನಸಿಕೊಂಡರೆ ನಗು ಬರುತ್ತದೆ . ಈಗಲೂ ನೀವು ನಿರ್ದೇಶಕ ಮನೀಷ್ ಗೆ ಕೇಳಿದರೆ ಅವರು ಕ್ಲೈಮಾಕ್ಸ್ ನನ್ನ ಅಭಿನಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ . ಹೀಗೆ ,ಹೇಗೋ ಎಲ್ಲ ಶೂಟಿಂಗ್  ಮುಗಿದು ,  ಆಮೇಲೆ ಏನೇನೋ ಸಮಸ್ಯೆಗಳನ್ನೆಲ್ಲಾ ದಾಟಿ ,ಕಿರುಚಿತ್ರ ಬರುವ ಹೊತ್ತಿಗೆ ಸರಿಯಾಗಿ ಒಂದು ವರ್ಷ ಬೇಕಾಯಿತು .

ಮನೀಷೆ ಆಗಲೇ ಹೇಳಿದ ಹಾಗೆ, ನನ್ನ ಮನಸಿಗೆ ಹತ್ತಿರವಾದ ಚಿತ್ರ (ಅನಿರೀಕ್ಷಿತ ಕ್ಕಿಂತಲೂ ).ಯಾಕೆಂದರೆ ಮುಂದಿನ ದಿನಗಳಲ್ಲಿ ನಾನು ಮಾಡಬೇಕೆಂದುಕೊಂಡಿರುವ ಚಿತ್ರಗಳ ಪೈಕಿ ಅದು . ಅಲ್ಲಿ ಕಥೆ ನಾಯಕ ,ಪಾತ್ರಗಳಲ್ಲ . ಮತ್ತೆ ನಿರ್ದೇಶಕ ಮನೀಷ್ ಯಾವುದನ್ನು ವಿವರಿಸಿ ಹೇಳುವುದಿಲ್ಲ. ಪ್ರೇಕ್ಷಕರಿಗೆ ಬಿಟ್ಟು ಬಿಡುತ್ತಾರೆ . ಅದು ತುಂಬಾ ಜನಕ್ಕೆ ಇಷ್ಟವಾಗುವುದಿಲ್ಲ . ಆದರೆ ವ್ಯಯಕ್ತಿಕವಾಗಿ ನಾನು ನಿರ್ದೇಶಕ ಮನೀಷ್ ಶೈಲಿಯನ್ನು ಇಷ್ಟಪಡುತ್ತೇನೆ .ನನ್ನ ಪ್ರಕಾರ ಒಂದು ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಬೇಕು . ಮನೀಷೆ ಆ ನಿಟ್ಟಿನಲ್ಲಿ ಗೆದ್ದಿದೆ . ಕನ್ನಡಿ ನೋಡುವ ಸನಿವೇಶದಲ್ಲಿ ಸರಿಯಾಗಿ ಅಭಿನಯಿಸದೇ ಇರಬಹದು ಆದರೆ ಅಂದು ನಾನು ನನ್ನ ಜೀವನದಲ್ಲಿ ನನ್ನ ನಿಜವಾದ ಪ್ರತಿಬಿಂಬ ಕಂಡೆ.


ಕೊನೆಯದಾಗಿ ಮನೀಷ್ ,ಸಂತೋಷ್ ,ಗಣೇಶ್ ಹಾಗೂ ಮನೀಷೆ ಕಿರುಚಿತ್ರಕ್ಕೆ ಪ್ರೋತ್ಸಾಹ ನೀಡಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು .
Movie link :

https://www.youtube.com/maneeshe


English Summary :







While splashing water to his face,hero suddenly recognise something.Next instant he lifts his head gently and sees his face in mirror.This time he sees his reflection.And then he shouts at his wife " I got it ". A smile appears in his face .

Everyone who have seen Maneeshe short movie will know this scene.But I am damn sure all of them have not understood this scene. And out of the 70 percent audience who didn't like maneeshe belong to this category .Rest of them , consider maneeshe is an art movie and they expected more of entertainment.I am not against this group.But if u ask me my favourite movie out of anireekshita and maneeshe ,it's always maneeshe .There are many reasons for it .

Maneeshe is first meaningful short movie I did .The day when I gave auditions,I never expected that I would be part of this movie.Because many six pack ,tall handsome guys had attended. In my previous auditons I was always rejected due my short stature and ugly face.But when director Maneesh called me telling I was selected I had to pinch myself in order to check whether it was reality or dream.

I still remember two girls who accepted to  do my wife role didn't turn up .May be they saw my face, I guess.They were expecting some John abraham like figure whereas I was more like hobbit .Then Preethi accepted to do role and shooting started.After one year from the day shooting wrapped up , the movie got released.

Well now  u guys  have seen it and appreciated it .For me it was exciting journey .And in the climax scene even though I have not met the expectations of my director(acting wise ) ,in real life I found my right image .Well thanks for Maneesh ,santosh and ganesh for giving this wonderful opportunity.Thanks to you guys for supporting me.

ಗುರುವಾರ, ಡಿಸೆಂಬರ್ 4, 2014

ಕನಸುಗಳ ಬೆನ್ನು ಹತ್ತಿ ...: ಅನಿರೀಕ್ಷಿತ : ೧೦ ಸಾವಿರ ...



" ಇಲ್ಲಿ ನಾವು ಅಂದುಕೊಂಡ ಹಾಗೆಎಲ್ಲಾ ನಡೆಯುತ್ತೆ ಅಂತ ಅಂದುಕೊಂಡರೆ ಅದು ನಮ್ಮ ಮುಟ್ಟಾಳತನ ,ಯಾಕಂದ್ರೆ ಇಲ್ಲಿ ಎಲ್ಲವೂ ಅನಿರೀಕ್ಷಿತ "

ಹೌದಲ್ಲವಾ? ಇಲ್ಲಿ ಎಲ್ಲವೂ ಅನಿರೀಕ್ಷಿತ . ಮುಂದೆ ಏನು ಆಗುತ್ತದೆ ಅನ್ನುವುದು ನಮಗೆ ಗೊತ್ತಿಲ್ಲ . ಆದರೆ  ಮುಂದೆ ಒಳ್ಳೆಯದೇ ಆಗುತ್ತದೆ ಅಂದುಕೊಂಡು ಬದುಕಬೇಕಾಗಿರುವುದು ನಮ್ಮ ಧರ್ಮ . ಕ್ಷಮಿಸಿ ಈ ಲೇಖನ ಜೀವನದ ಬಗ್ಗೆ ಅಲ್ಲ .ನಮ್ಮ ಅನಿರೀಕ್ಷಿತ ೧೦ ಸಾವಿರ views ಮುಟ್ಟಿರುವ ಸಂಭ್ರಮದ ಹೊತ್ತಿನಲ್ಲಿ ಅದರ ಬಗ್ಗೆ ಒಂದಿಷ್ಟು ಬರೆಯಬೇಕು ಅನ್ನಿಸಿತು .

ಅನಿರೀಕ್ಷಿತ ಕಿರುಚಿತ್ರ ಶುರುವಾಗುವುದಕ್ಕೆ ಆಗ ನನ್ನ ಜೀವನದಲ್ಲಿ ನಡೆದ ಅನೇಕ ಕಹಿ ಘಟನೆಗಳೇ ಸ್ಫೂರ್ತಿ . ಹೌದು ಆ ಎಲ್ಲಾ negative ಗಳನ್ನೂಗುಣಿಸಿ positive ಮಾಡಿಕೊಂಡ ಹೆಮ್ಮೆ ನನಗಿದೆ . ಅನಿರೀಕ್ಷಿತ ಮಾಡುವ ಮುಂಚೆ ನನ್ನ ಮನೀಷೆ ಕಿರುಚಿತ್ರ ಚಿತ್ರೀಕರಣ ಅದಾಗಲೇ ಮುಗಿದುಹೋಗಿತ್ತು . ಆದರೆ ಅದು ಯಾಕೋ ಬಿಡುಗಡೆ ಆಗುವ ಲಕ್ಷಣಗಳು ತುಂಬಾ ಕಡಿಮೆ ಯಿತ್ತು . ಆಗ ನನಗೆ 'ಮೂರು ತಿಂಗಳು ಶೂಟ್ ಕಷ್ಟ ಪಟ್ಟು ಮಾಡಿರುವ ಚಿತ್ರ ಇಷ್ಟು ತಡ ಆಗುತ್ತ ಇದೆಯಲ್ಲಾ , ಅದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ' ಎಂದು ತುಂಬಾ ನೊಂದು ಕೊಳ್ಳುತ್ತಿದೆ . ಅದಕ್ಕೆ ತುಪ್ಪ ಹಾಕುವಂತೆ ಯಾವನೋ ಜ್ಯೋತಿಷಿನಿನ್ನ ಮುಖ ಇಟ್ಟುಕೊಂಡು ನೀನು ಫಿಲ್ಮ ಗೆ ಹೋದ್ರೆ ,ಉಧ್ಧಾರನೇ ಆಗೋಲ್ಲಾ, ನೀನು ನಟನಾಗಲೂ ಸಾಧ್ಯವೂ ಇಲ್ಲ ಅಂತ ಬೇರೆ ಹೇಳಿದ್ದ . ಅಯ್ಯೋ ಅದು ನಿಜ ಆಗುತ್ತಿದೆಯೆಲ್ಲಾ , ಅದು ಹಾಗಾಗಬಾರದು ನಾನು ಆ ಜ್ಯೋತಿಷಿ ಮಾತುಗಳನ್ನು ಸುಳ್ಳು ಮಾಡಲು ಏನಾದರು ಮಾಡಬೇಕೆಂದು ಪಣ ತೊಟ್ಟೆ .

ಅದೇ ಸಮಯಕ್ಕೆ ನಾನು ನನ್ನ ಕಂಪನಿಯಲ್ಲಿರುವ ಸಿನಿಮಾ ತಂಡ ವೊಂದಕ್ಕೆ ಕಥೆ ಹೇಳಿದ್ದೆ . ಅಷ್ಟೇ ಅಲ್ಲದೇ ಅದರಲ್ಲಿ ಬರುವ ನಾಯಕನಪಾತ್ರವನ್ನು ನನ್ನನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದೇನೆ . ಆದ್ದರಿಂದ ನಾನು ನಾಯಕನಾಗಳು ಇಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದೆ . ಆ ಕಥೆ ಕೇಳಿ ಯಾವನೋ  ಮೂಗಿನಲ್ಲಿ ಮತನಾಡುವನೊಬ್ಬ   ನಾನು ಇದನ್ನು ನಿರ್ದೇಶಿಸುತ್ತೇನೆ ಎಂದು ಮುಂದೆ ಬಂದ . ಆತನಿಗೆ ನಾನು ನಾಯಕನಾಗುವುದು ಸುತರಾಂ ಇಷ್ಟವಿರಲಿಲ್ಲ . ಕೊನೆಗೆ ನಂಗೆ ಗೊತ್ತಿಲ್ಲದ ಹಾಗೆ ,ನನಗಿಂತ ನೋಡಲು ಚೆನ್ನಾಗಿರುವವನನ್ನು ಕರೆದು ಅವನನ್ನು ನಾಯಕನನ್ನಾಗಿ ಮಾಡಿ ಚಿತ್ರೀ ಕರಿಸಿ ಬಿಟ್ಟರು . ನನಗೆ ಕಣ್ಣಲಿ ನೀರು . ನನ್ನ ಮಗು ಕಳೆದುಕೊಂಡಅನುಭವ .
      ಆಗ ನಾನು ಇನ್ನು ಕಥೆಗಳನ್ನು ಬೇರೆಯವರಿಗೆ ಕೊಟ್ಟು ನನ್ನನ್ನು ನಾಯಕನನ್ನಾಗಿ ಮಾಡಿ ಅಂದರೆ ನನ್ನ ಈ ನೇಪಾಳಿ ಮುಖ ಹಾಗು ದ್ವಾರಕೀಶ್ hieght ನೋಡಿ ಯಾರು ಕೊಡುವುದಿಲ್ಲ ಎಂಬ ಸತ್ಯ ಅರಿತುಕೊಂಡೆ . ಇನ್ನ್ಮೇಲೆ ನಾನೇ ನಿರ್ದೇಶಿಸಬೇಕು ಆದ್ರೆ ಈ ಸಲ ನನ್ನ ಕಥೆ ಬೇಡ ( ಯಾಕಂದ್ರೆ ಮತ್ತೆ ನನ್ನ ಕಥೆಕದಿ ಯುತ್ತಾರೆ ಎಂಬ ಭಯ   ಇತ್ತು ) ಇರುವ ಕಥೆಯನ್ನೇ ಮಾಡೋಣ ಅಂತ ತೀರ್ಮಾನಕ್ಕೆ ಬಂದೆ . ಆಗ ಗೆಳೆಯ ಲಿಂಗರಾಜ ತಾನು ಛಾಯಾಗ್ರಹಣ ಮಾಡಲು ಮುಂದೆ ಬಂದ .ನಾವಿಬ್ಬರು ಒಂದು horror ಮೂವಿ ಮಾಡುವ ಯೋಚನೆಯಲ್ಲಿದ್ದೆವು . ನಂತರ ಲವ್ ಸ್ಟೋರಿ ಹೀಗೆ.... ಎಷ್ಟು ಕಥೆ ಯೋಚಿಸಿದರೂ ಯಾವ ಕಥೆಯೂ ಮಾಡಲೇ ಬೇಕು ಅನ್ನಿಸುವಷ್ಟು ಹುಮ್ಮಸು ಬರಲಿಲ್ಲ . ಆಗ ನನ್ನ ಕ್ಯೂಬಿಕಲ್ ನಲ್ಲೆ ಕೆಲಸ ಮಾಡುತ್ತಿದ್ದ ಶ್ರೀ ಹರಿ ನನಗೇ ಪುಸ್ತಕವೊಂದನ್ನು ಕೊಟ್ಟರು ಅಲ್ಲಿ ಓದಿದ್ದೆ ಗಂಡಸ್ಕತ್ತ್ರಿ . ಬರೀ ಮೂರೇ ಜನ ಪಾತ್ರಧಾರಿ ಹಾಗು ಒಂದು ಮನೆಯಲ್ಲೇ ನಡೆಯುವ ನಾಟಕವನ್ನು ಸಿನಿಮಾ ಗೆ ಅಳವಡಿಸಿ ಕೊಂಡರೆ ಚೆನ್ನಾಗಿರುತ್ತದೆ , ಶೂಟಿಂಗ್ ಮಾಡಲು ಸುಲಭವೂ ಆಗುತ್ತದೆ ಅಂತ ಲಿಂಗರಾಜ್ ಗೆ ಹೇಳಿದೆ ಆತನು ಒಪ್ಪಿಕೊಂಡ . ಅಗ ಬರೆಯಲು ಶುರು ಮಾಡಿದ್ದು .

   ಮೊದಲಿನಿಂದಲೂ ಸಿನಿಮಾ ಮಾಡುವ ಹುಚ್ಚಿದ್ದರೂ  , ಮಾಡಲು ಹೋದಾಗ ಭಯ ಇತ್ತು ಏನಾದ್ರು ಅಡ್ಡ ಬರುತ್ತಿತ್ತು . ಆದರೆ ಈ ಚಿತ್ರ ಮಾಡಲೇಬೇಕು ಅನ್ನುವ ಹಠಬರಲು ಇನ್ನೊಂದು ಕಾರಣವು ಇತ್ತು . ಇವೆಲ್ಲವೂ ನಡೆಯುವ ಸ್ವಲ್ಪ ದಿನಗಳ ಹಿಂದೆ , ನಾ ಇಷ್ಟಪಟ್ಟ ಒಂದು ವಸ್ತು ನನಗೆ ಸಿಗುವುದಿಲ್ಲ ಎಂಬುದು ತಿಳಿದು ಬಂತು .ಆದರೆ ಆ ಕಟು ಸತ್ಯ ಒಪ್ಪಲು ನನಗೆ ಆಗದೆ ವಿಲವಿಲ ಒದ್ದಾಡುತ್ತಿದೆ . ಅದರಿಂದ ಹೊರಗೆ ಬರಲು ಒಂದೇ ದಾರಿ ನನಗೆ ಇಷ್ಟ ಇರುವ ಕೆಲಸ ಮಾಡುವುದು . ಇದು ನನಗೆ ಅನಿರೀಕ್ಷಿತ ಮಾಡಲು ಪ್ರೇರಿಪಿಸಿತು.

ಶೂಟಿಂಗ್ ಮಾಡಲು ವಾಸುಕಿ ಎಂಬ ಗೆಳಯನ ಮನೆಯ ಸಿಕ್ಕಿತು . ಇನ್ನು ಪಾತ್ರಧಾರಿಗಳು , ಸಂದೀಪ್ ಅಶ್ವಥ್ ಪಾತ್ರ ಮಾಡಲುಒಪ್ಪಿಕೊಂಡ . ಆದ್ರೆ ನಾಯಕಿ . ನನಗೆ ಬರಿ ಲಕ್ಷಣವಾಗಿರುವ ಹುಡುಗಿ ಬೇಕಾಗಿರಲಿಲ್ಲ . ಕಣ್ಣಲ್ಲೇ ಅಭಿನಯಿಸುವ ನಾಯಕಿ ಬೇಕಿತ್ತು . ಆಮೇಲೆ ನನ್ನ height ಗೆ ಸರಿಹೊಂದುವ ನಾಯಕಿಯೂ ಬೇಕಿತ್ತು . ಮನೀಷೆ ಯಲ್ಲಿ ಪ್ರೀತಿ ಅಭಿನಯ ನೋಡಿದ್ದೆ . ಆದರೆ ಅಷ್ಟೊಂದು ಪರಿಚಯ ವಿಲ್ಲದ ಕಾರಣ ಕೇಳುವುದುಕ್ಕೇ ಮುಜುಗರ ಪಡುತ್ತಿದ್ದೆ .ಗಟ್ಟಿ ಮನಸು ಮಾಡಿ ಕೇಳಿದಾಗ ನೆಗೆಟಿವ್ role ಅನ್ನು ಮಾಡಲು ಒಪ್ಪಿಕೊಂಡರು . ಅಲ್ಲಿಗೆ ಅನಿರೀಕ್ಷಿತ ಶುರು .

   ನನ್ನ ಮೊದಲ ಚಿತ್ರದ ನಿರ್ದೇಶಕರಾದ ಮನೀಷ್ ಅವರು ಶೂಟಿಂಗ್ ಶುರು ಮಾಡಿದ ಮೊದಮೊದಲು ಬಂದು ಸಹಾಯ ಮಾಡಿದರು. ಹೇಗೋ ಕಷ್ಟಪಟ್ಟು ಶೂಟಿಂಗ್ ಮುಗಿಸಿದೆವು . ನಂತರ ಸಂಕಲನ .ನನ್ನ ಗೆಳಯ ಜಗದೀಶ್ ಗೆ ಗೊತ್ತಿತ್ತಾದರೂ ಅವನು ಮೊದಮೊದಲು ಮಾಡಲು ಹಿಂಜರಿದ . ನಂತರ ಇಬ್ಬರೂ ಸೇರಿ ಬರೋಬ್ಬರಿ ಎರಡು ತಿಂಗಳು ಸಂಕಲನ ಮಾಡಿದೆವು . ನಂತರ ಮತ್ತೆರಡು ತಿಂಗಳು ಡಬ್ಬಿಂಗ್ . ಇನ್ನು ಉಳಿದದ್ದು ಹಿನ್ನಲೆ ಸಂಗೀತ . ನನ್ನ ಗೆಳೆಯನೊಬ್ಬ ಕೈಕೊಟ್ಟ ಕಾರಣ ಹೊಸ ಸಂಗೀತ ನಿರ್ದೇಶಕ ಹುಡುಕಬೇಕಾದ ಪರಸ್ಥಿತಿ ಬಂತು ಆಗ ಸಿಕ್ಕವ್ರೇ ರಾಜಾರಾಮ್ . ಅವರು ಸಂಗೀತ ಕೊಡಲು ಒಪ್ಪಿದ್ದಲ್ಲದೇ ತಮ್ಮ ಮದ್ರಾಸ್ಗೆಳೆಯನಾದ ಗಣೇಸನ್ ಗೋಪಾಲ್ ಅವರ ಕೈಯಲ್ಲಿ ಸೌಂಡ್ ಎಫೆಕ್ಟ್ಸ್ ಕೊಡಿಸಲು ಮುಂದಾದರು . ನಂತರ ಕಾವ್ಯ ಹಾಗು ಉಮಾಶಂಕರ್ ಅವರು ಚಿತ್ರದಲ್ಲಿ ಬರುವ ಕೊನೆಯ ಪೇಂಟಿಂಗ್ ಗಳಿಗೆ ಕೈ ಜೋಡಿಸಿದರು . ಅಂತೂ ಹೇಗೋ ಎಲ್ಲ ಕಷ್ಟಗಳನ್ನು ದಾಟಿ ಅನಿರೀಕ್ಷಿತ ನಿಮ್ಮ ಕಣ್ಣು ಮುಂದೆ ಬಂತು .

ಈ ಚಿತ್ರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು . ಇದೇ ಹುಮ್ಮಸ್ಸಿನಲ್ಲಿ ಕನ್ನಡ ದಲ್ಲಿ ಹೊಸ ಚಾನೆಲ್ ಒಂದನ್ನು ಶುರು ಮಾಡಿದ್ದೇವೆ . ಅದಕ್ಕೂ ನಿಮ್ಮ  ಸಹಕಾರ ಬೇಕು .

ಅನಿರೀಕ್ಷಿತ ಮಾಡುವಾಗ ನಾನು ಅನೇಕ ಪಾಠ ಗಳನ್ನು ಕಲಿತಿದ್ದೇನೆ .ತಾಳ್ಮೆ ಒಂದು . ಎಲ್ಲದಕ್ಕೂ ದಿಟ್ಟ ಮನಸ್ಸು ಇರಬೇಕು ಅನ್ನುವುದು ಇನ್ನೊಂದು .ಹಾಗೂ ಮನಸ್ಸಿನಿಂದ ನಾವು ಏನಾದರೂ ಇಷ್ಟ ಪಟ್ಟು ಮಾಡಿದರೆ , ಅದು ಪೂರ್ಣ ಗೊಳ್ಳಲು ಇಡೀ ಸಮಾಜವೇ ನಿಮಗೆ ಸಹಕರಿಸುತ್ತದೆ ಎಂಬ ಸತ್ಯ ಅರಿವು ಮೂಡಿಸಿದ್ದೆ  ಅನಿರೀಕ್ಷಿತ.

     Movie link:          https://www.youtube.com/watch?v=UBztWJFgs1o



English summary :



It’s our foolishness to assume that everything that happens here is certain (expectable), because all that happens is UNCERTAIN (UNEXPECTED).
     Yes it's true .In our life everything is unexpected.But it's our job to be optimistic and to believe something good is happening .This article is about the making of anireekshita as short movie has crossed 10 k views.
      Anireekhsita . How it started ? it's interesting .A series of negative events took place before the release of anireekshita and all those contributed to this movie .
My first movie maneeshe was not releasing even though shooting finished six months ago . At the same time one astrologer told me that I would be never an actor as I have don’t look .I was so frustrated and I thought I have to do something now and prove that astrologer by doing a short movie.

        At the same time , I had shared my story to one of the movie group in Infosys Mysore and also my intended to act as lead in it. One boy came forward to direct and I said yes as I was afraid that it would be difficult for me to direct. But the director didn’t like me to cast as hero as I was not good looking .Then the movie was shot without my notice and a handsome boy was casted as a hero .once again I was so sad.But then I decided not to share my story to anyone and I would direct my next movie whatever it takes. My friend Lingaraj said he would help me with camera .We were looking for a story which is good and easy to shoot.

   Then I came across t.P kailsam’s gandaskattri .We thought this story would make best thriller if it is modified little bit .

Even though I wanted to make short movie long time ago, there was no some force to push me into it .Before starting the shoot, one incident in my personal life left me shattered .I had come to know that one thing I love most doesn’t like me and I will be never getting that. I was in depression and I had to do something which I love most to come out of it .And this time I started doing short film .

We faced many problems while shooting and after shooting the movie. But the whole journey was a worth one .We learnt many things ,no wait the journey thought us many good lessons. All along the journey one thing was always getting proved again and again .If you are doing any work from heart ,the whole universe helps you in getting that work done.


















ಭಾನುವಾರ, ಆಗಸ್ಟ್ 10, 2014

ಕನಸ್ಸುಗಳ ಬೆನ್ನಹತ್ತಿ ...... : ಭಾಗ-೧



        ಕನಸು . ಬದುಕಿನ ಬಜಾರ್ ನಲ್ಲಿ ಬಹುಶಃ ಬಿಕಾರಿಗೂ ಬಿಟ್ಟಿಯಾಗಿ ಸಿಗೋ ಭಗವಂತನ ಕೆಲವು ಅದ್ಭುತ ಸೃಷ್ಟಿಗಳಲ್ಲಿ, ಕನಸು ಒಂದು . ಈ ಕನಸೆಂಬ ಮಾಯೆ ಬಗ್ಗೆ ಎಲ್ಲಾ ಹೇಳುವಷ್ಟು ಸುಂದರ ಪದಗಳು ನನ್ನ ಬತ್ತಳಿಕೆಯಿಲ್ಲ . ಆದರೆ ಒಂದಂತೂ ನಿಜ ಈ ಕನಸೇನೂ ನಮಗೆ ಬೀಳುವಷ್ಟು,ಸಲೀಸಾಗಿ ನೆನಸಾಗುವುದಿಲ್ಲ . ಈ ಕನಸನ್ನು ನನಸು ಮಾಡಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಿಲ್ಲ . ಮಾಡಿಕೊಂಡವರು ಎಲ್ಲರ ಹಾಗೆ ಸಾಮಾನ್ಯರಪಟ್ಟಿಯಲ್ಲಿ ಇಲ್ಲ .
           ಕನಸು ಗಳು, ನಕ್ಷತ್ರಗಳ ಹಾಗೆ . ನಾವು ಅದರ ಅಡಿಯಲಿ ಅದನ್ನು ತಲುಪುವ ಪ್ರಯತ್ನದಲ್ಲಿ ಇರುತ್ತೇವೆ . ಅದನ್ನು ತಲುಪುವಮಾರ್ಗವು ನಮಗೆ ತಿಳಿದಿರುತ್ತದೆ . ಆದರೂ ನಮ್ಮಲ್ಲಿ ಶೇಖಡ ೯೦ ಜನರಿಗೆ ಆ ನಕ್ಷತ್ರ ತಲುಪಲು ಆಗದಂತೆ ಏನೋ ನಮ್ಮನು ಹಿಡಿದಿಟ್ಟಿರುತ್ತದೆ . ಏನದು? ಈ ಪ್ರಶ್ನೆಗೆ ಲೇಖಕ PAUL COELHO ತನ್ನ "ALCHEMIST" ತುಂಬಾ ಮನೋಜ್ಞವಾಗಿ ಹೇಳಿದ್ದಾನೆ . ಅವನ ಪ್ರಕಾರ ಕನಸ್ಸನ್ನು ನನಸು ಮಾಡಿಕೊಳ್ಳುವ ಪ್ರತಿಯೊಬ್ಬನ ಹಾದಿಯಲ್ಲಿ ನಾಲ್ಕು ಅಡೆತಡೆಗಳು ಬರುತ್ತವೆ . ಅದನ್ನು ದಾಟಿ ಹೋದವನೇ ತನ್ನ ಕನಸ್ಸನ್ನು ನನಸು ಮಾಡಿಕೊಳ್ಳುವಗುರಿಯಲ್ಲಿ ಗೆಲ್ಲುತ್ತಾನೆ . ಆತ ಹೇಳಿರುವುದನ್ನೇ ನಾನಿಲ್ಲಿ ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸಿದ್ದೇನೆ .
                        ಮೊದಲನೆಯದು . ನಾವು ಚಿಕ್ಕವರಿದ್ದಾಗಿನಿಂದಲೂ ನಾವು ಉತ್ಸಾಹದಿಂದ ಏನೇ ಮಾಡಲು ಹೊರಟಾಗ, ನಮ್ಮ ಸುತ್ತ ಮುತ್ತ ಇರುವ ಜನಅದು ಅಸಾಧ್ಯ ಅಂತ ಹೇಳಿಕೊಂಡೇ ಬಂದಿರುತ್ತಾರೆ . ಇದು ನಮ್ಮ ಮೇಲೆ ಅದೆಷ್ಟು ಪ್ರಭಾವ ಬೀರಿರುತ್ತದೆ ಅಂದರೆ , ನಾವು ನಮ್ಮ ಕನಸಿನ ಬೆನ್ನು ಹತ್ತುವವಿಷಯಕ್ಕೆ ಬಂದಾಗ ,ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಕೈ ಕಟ್ಟಿ ಕೂರುವ ನಪುಂಸಕರಂತೆ ಆಗಿಬಿಡುತ್ತೇವೆ . ಕಾರಣ ನಮ್ಮ ಕನಸು ನಮ್ಮೊಳಗಿನಹೃದಯದಲ್ಲಿ ನಮಗೆ ಕಾಣದ ಹಾಗೆ ಹೂತು ಹೋಗಿರುತ್ತದೆ .ನಾವು ಮಾಡ ಬೇಕಾಗಿರುವುದು ಇಷ್ಟೇ . ಅದನ್ನು ಅಗೆದು ತೆಗೆಯಬೇಕು . ಅಂತಹ ಮೊದಲ ಪ್ರಯತ್ನ ಮಾಡಬೇಕಷ್ಟೆ .
                           ನಮ್ಮ ಕನಸ್ಸನ್ನು ಅಗೆದು ಹೊರತೆಗೆದವು ಅಂದುಕೊಳ್ಳಿ. ಆಗ ಇನ್ನೊಂದು ಪ್ರಶ್ನೆ ಎದುರಾಗುತ್ತದೆ .ಅದೇನಪ್ಪ ಅಂದರೆ, ನಾವು ಈ ಕನಸ್ಸಿನ ಬೆನ್ನು ಹತ್ತಿಏನೋ ಹೊರಟು ಹೋಗಿ ಬಿಡುತ್ತೇವೆ .ಆದರೆ ತಲಪುತ್ತೇವೋ, ತಲುಪಿದರೂ ಗೆಲ್ಲುತ್ತೇವೋ, ಅಥವಾ ದಾರಿಯ ಮಧ್ಯೆ ಎಲ್ಲಾ ಕಳೆದುಕೊಂಡು ಸೋತುಸುಣ್ಣವಾಗಿ ಬಿಡುತ್ತೇವೋ ಅನ್ನುವ ಪ್ರಶ್ನೆಗಳು ಹುಟ್ಟಿಕೊಳ್ಳಲು ಶುರುವಾಗಿ ಬಿಡುತ್ತದೆ . ಆದರೆ ಈ ಪ್ರಶ್ನೆಗಳಲ್ಲಿ ನಿಜವಾಗಿಯೂ ನಮ್ಮನ್ನು ಕಾಡುವ ಪ್ರಶ್ನೆಯಾವುದಂದರೆ , ನಾವು ನಮ್ಮ ಕನಸ್ಸಿನ ಹಿಂದೆ ಹೋಗುವ ನಮ್ಮ ಹುಚ್ಚಾಟ ದಲ್ಲಿ ಎಲ್ಲಿ ನಾವು ನಮ್ಮನ್ನು ಪ್ರೀತಿಸುವುವರಿಂದ ದೂರ ಆಗಿಬಿಡುತ್ತೇವೋಅನ್ನುವ ಪ್ರಶ್ನೆ . ಎಲ್ಲಿ ನಮ್ಮ ವರು ಅಂದರೆ ನಾವು ಪ್ರೀತಿಸುವವವರು ನಮಗೆ ಬೆಂಬಲವಾಗಿ ನಿಲ್ಲುವುದಿಲ್ಲ ಅನ್ನುವ ಭಯ . ನಿಜ ಹೇಳ ಬೇಕಂದರೆನಮ್ಮನ್ನು ನಿಜವಾಗಿಯೂ ಪ್ರೀತಿಸುವವರು ಎಂತಹ ಪರಿಸ್ಥಿತಿ ನಮ್ಮ ಕೈ ಬಿಡುವುದಿಲ್ಲ . ಅದನ್ನು ಅರಿತು ನಾವು ಮುಂದೆ ಹೋಗ ಬೇಕಷ್ಟೆ.
                                     ಇವೆರಡನ್ನೂ ದಾಟಿ ಮುಂದೆ ಹೋದಾಗ ನಮ್ಮ ಹಾದಿಯಲ್ಲಿ ಮೂರನೇ ಅಡೆತಡೆ ಬರುತ್ತದೆ . ಅದೇ ಸೋಲಿನ ಭಯ .ನಮ್ಮಂತೆಯೇಕನಸ್ಸಿನ ಹಿಂದೆ ಹೋಗಿ ಸೋತು ಹೋಗಿರುವ ಅನೇಕರ ನಿದರ್ಶನಗಳು ನಮ್ಮ ಭಯವನ್ನು ಇನ್ನಷ್ಟೂ ಹೆಚ್ಚಿಸುತ್ತದೆ . ಬದುಕೆಂಬ ಯುದ್ಧದಲ್ಲಿ ಕನಸ್ಸಿನಸಾಮ್ರಾಜ್ಯ ಗೆಲ್ಲುವ ಸೈನಿಕನಾಗಿ , ಯುದ್ಧ ಆರಂಭಿಸಿದ ಮೊದಮೊದಲು ಸೋಲುವುದು ಸರ್ವೇ ಸಾಮಾನ್ಯ . ಯಾಕಂದರೆ ನಾವು ಹೋಗುವ ದಾರಿಹೊಸತು . ಆದ್ದರಿಂದ ಸುಲಭ ಹಾದಿ ನಿರೀಕ್ಷೆಯಲ್ಲಿರುವುದು ನಮ್ಮ ದಡ್ಡತನ . ನಾವು ಹತ್ತು ಸಲ ಎಡವಿ ಬೀಳುವ ಲೆಕ್ಕ ಹಿಡಿಯುವ ಬದಲು ,ಹನ್ನೊಂದು ಸಲಮೈ ಕೊಡವಿ ಎದ್ದು ನಿಲ್ಲುವ ಲೆಕ್ಕವನ್ನು ನೆನಪು ಇಟ್ಟು ಕೊಳ್ಳಬೇಕು . ಸೋತಾಗ ಮನಸ್ಸು ಕುಗ್ಗುವುದು ಸಹಜ ,ಆದರೆ ಹಠ ಬಿಡದೇ ಅವುಗಳನ್ನು ದಾಟಿ ಗೆದ್ದಮೇಲೆ ಸಿಗುವ ಖುಷಿ ಅತ್ಯದ್ಭುತ .ಅದು ನಮ್ಮದಾಗ ಬೇಕು ಅಂದರೆ ನಾವು ಕುಗ್ಗದೇ, ಬಗ್ಗದೇ, ಜಗ್ಗದೇ ಮುನ್ನಡೆಯಬೇಕಷ್ಟೆ.
                                    ಹೂತಿಟ್ಟ ಕನಸ್ಸನ್ನು ಅಗೆದು ತೆಗದಾಯಿತು ,ನಮ್ಮ ಪ್ರೀತಿಸುವವರ ಮನ ಅರಿತು ಅಥವಾ ಮನವೊಲಿಸಿ ,ಎದುರಾದಸೋಲುಗಳಿಗೆ ಹೆದರದೇ ಮುಂದೆ ಹೋಗಿದ್ದು ಆಯಿತು . ಇಷ್ಟೆಲ್ಲಾ ಆದ ಮೇಲೆ ಇನ್ನೇನು ನಮ್ಮ ಗುರಿ ಅಂದರೆ ನಮ್ಮ ಕನಸು ಇನ್ನು ನಮ್ಮಿಂದ ಒಂದೇಗೇಣು ದೂರವಿದೆ ಅನ್ನುವಾಗ ನಾಲ್ಕನೆಯ ಸಮಸ್ಯೆ ,ಅಡೆತಡೆ ಎದುರಾಗುತ್ತ ದೆ. ಕನಸು ನೆನಸಾಗುವ ಕೊನೆಯ ಹೊತ್ತಿನಲ್ಲಿ ನಮಗೆ ದೊಡ್ಡ ಪ್ರಶ್ನೆಎದುರಾಗುತ್ತದೆ . ಅದೇ " ಇಷ್ಟೆಲ್ಲಾ ಪರಿಶ್ರಮ ಹಾಕಿ ನೆನಸಾಗುತ್ತಿರುವ ಕನಸು ನಿಜಾವಾಗಿಯೂ ಅಷ್ಟೊಂದು ಯೋಗ್ಯತೆಗೆ ಅರ್ಹವೇ ?" ಅನ್ನುವ ಪ್ರಶ್ನೆ .ಇದು ಕುರುಕ್ಷೇತ್ರದಲ್ಲಿ ಅರ್ಜುನ ನನಗೆ ಯುದ್ಧ ಬೇಡವೆಂದು ಕುಳಿತ ಹಾಗೆ .ನಮ್ಮ ಸುತ್ತ ನಮ್ಮಂತೆಯೇ ನುಗ್ಗಿ ಸೋತು ಹೋಗಿರುವ ಜನರ ನೋವು , ಈಕನಸ್ಸಿಗಾಗಿ ನಾವು ಮಾಡಿರುವ ತ್ಯಾಗಗಳು ಇವೆಲ್ಲ ಕೆಲವೊಮ್ಮೆ ಅದೆಷ್ಟು ಪ್ರಭಾವ ಬೀರುತ್ತದೆ ಅಂದರೆ , ನಮ್ಮ ಹೃದಯದಿಂದ ತೆಗದುಕೊಂಡ ಈನಿರ್ಧಾರ ತಪ್ಪು ಅನ್ನಿಸಿ, ನಾವು ಕೊನೆಯ ಘಳಿಗೆಯಲ್ಲಿ ಹುಚ್ಚು ತಪ್ಪುಗಳನ್ನು ಮಾಡಿ ಎಲ್ಲವನ್ನು ಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ . Oscar wildeಹೇಳಿದ ಹಾಗೆ 'each man kills the thing he loves’ .ಅದು ನಿಜ . ನಮ್ಮ ಮುಂದೆ ಮೊದಲಿಗೆ ಎದುರಾದ ಮೂರೂ ಸಮಸ್ಯೆ ಗಳಿಗಿಂತ ಈ ಸಮಸ್ಯೆಅತ್ಯಂತ ಅಪಾಯಕಾರಿಯಾದದ್ದು .ಇದಕೆ ಪರಿಹಾರ ನಾವು ನಮ್ಮ ಕನಸಿನ ಯೋಗ್ಯತೆಯ ಬಗ್ಗೆ ಒಂದು ಚೂರು ಸಂಶಯ ಪಡದೇ ,ನಾವು ಹೋಗುತ್ತಿರುವದಾರಿಯನ್ನು ಬಲವಾಗಿ ನಂಬುವುದು .

                 ಕನಸಿನ ಹಾದಿಯಷ್ಟು ಕಷ್ಟಕರವಾದದ್ದು ಬಹುಶಃ ಬೇರೊಂದು ಇಲ್ಲ . ಆದರೆ ಅದನ್ನು ಛಲ ಬಿಡದೆ ಮುನ್ನುಗ್ಗಿ ,ಸಮಸ್ಯಗಳಿಗೆಸಮಸ್ಯೆಯಾಗಿ ಗುರಿ ಮುಟ್ಟುವವನು ನಿಜವಾದ ಗೆಲುವಿನ ಸರದಾರ .ನಾವು ಹೋಗುತ್ತಿರುವ ದಾರಿಯಲ್ಲಿ ಸೋತಾಗ ತುಂಬಾ ಮನಸಿಗೆಘಾಸಿಯಾಗುತ್ತದೆ,ನೋವುಗಳು ಎದುರಾಗುತ್ತದೆ . ಅಲ್ಲಿ ಎದುರಾಗುವ ನೋವು ನಿಜವಾಗಿಯೂ ,ನಾವು ನಮ್ಮ ಕನಸ್ಸಿನ ಹಾದಿಯನ್ನು ಅರ್ಧದಲ್ಲಿ ಬಿಟ್ಟನೋವು ಅಥವಾ ಹಾದಿಯನ್ನು ಶುರು ಮಾಡದೇ ಇರುವ ನೋವುಗಳಿಗಿಂತಲೂ ದೊಡ್ಡದು .ಹಾಗೆಂದುಕೊಂಡು ನಾವು ನಮ್ಮ ಹಾದಿಯಲ್ಲಿ ಎದುರಾಗುವದೊಡ್ಡ ನೋವಿಗೆ ಹೆದರಿಕೊಂಡು, ಕನಸ್ಸಿನ ಹಾದಿಯನ್ನು ಅರ್ಧದಲ್ಲಿ ಬಿಟ್ಟ ಅಥವಾ ಹಾದಿಯನ್ನು ಶುರು ಮಾಡದೇ ಇರುವ ಚಿಕ್ಕ ನೋವುಗಳು ನಮ್ಮದಾಗಿರಲಿ ಎಂದು ಸುಮ್ಮನಾಗಬಹುದು .ನೆನಪಿರಲಿ ಅದು ಚಿಕ್ಕದಿರಬಹುದು. ಆದರೆ ಅದಕೆ ಸಾವಿಲ್ಲ . ಅದು ನೀವು ಸಾಯುವವರೆಗೂ ನಿಮ್ಮೊಂದಿಗೆಇರುತ್ತದೆ . ದಿನದಿಂದ ದಿನ ಆ ವಿಷದ ಗಿಡದ ಬೇರು ನಮ್ಮ ಹೃದಯದ ಒಳಗೇ ಹರಡಿಕೊಂಡು ನಮ್ಮ ನೆಮ್ಮದಿಯನ್ನು ಹೀರಲು ಶುರು ಮಾಡುತ್ತದೆ .
         PAUL COELHO ನ ಈ ಲೇಖನ ಅದೆಷ್ಟು ನನ್ನ ಮೇಲೆ ಪ್ರಭಾವ ಬೀರಿದೆಯೆಂದರೆ ,ನನ್ನ ಕನಸಿನ ಹಾದಿಯ ಮೊದಲ ಹೆಜ್ಜೆ ಶುರುಮಾಡಿದ್ದೇನೆ .ನೀವು ಇದರಿಂದ ಪ್ರೇರಣೆ ಗೊಂಡು ನಿಮ್ಮ ಕನಸಿನ ನಕ್ಷತ್ರವನ್ನು ಹಿಡಿಯಲು ಆರಂಭಿಸುತ್ತೀರಿ ಅನ್ನುವುದು  ನನ್ನ ಆಶಯ .

     .
Our Dreams are high in the sky just like twinkling stars,  but we are here beneath it. And we know the path to reach the star but for many of us including me, something is stopping us. Something is preventing us moving forward. What is that? Well many of us don’t know the answer even though its lying in front of us. But Paul Coelho the famous novelist, in his famous novel alchemist answers to this in an elegant manner. He states that any person in his journey of pursuing his dreams comes across four obstacles. Four. What are they? Can we overcome these obstacles and then pursue our dreams? Well here is the answer

The first and the foremost obstacle: We are told since from our childhood, that everything we want to do Is impossible. We grow up with this idea and as years accumulate so do the layers of prejudice, fear and guilt. When all these incidents keeps on happening, there comes a time when our “personal calling” is so deeply buried in our soul, it becomes almost invisible. But it’s still there. The only thing we need is   the courage to disinter our dream. That’s it.
Moving on to the second obstacle, Love. We know that what we want to do, but we are afraid of hurting those around us, by abandoning everything in order to pursue our dream. What we do not realize is that love is another impetus and not something that will prevent us going forward. We need to realize that, those who wish us well want us to be happy and are prepared to accompany us on our journey.
So, think that we have accepted this love is stimulus; we come up against the third obstacle. Fear of defeats that we will encounter on the path. When we are following the path of personal calling which is difficult than any other path, we suffer many defeats. But remember irrespective of how many defeats you suffer all along this difficult path, your heart will be accompanying you. We the warriors must be prepared to have patience in our difficult times and we have to believe that somehow the whole universe is conspiring in our favor.  Well, defeats necessary or not, they happen. When we first begin fighting for our dream, we have no experience and we make mistakes .But we should not stop because we have staked everything on it. Remember, each day and each hour is part of good fight. We have to keep going. Because once we overcome the defeats, we are filled with greater sense of euphoria and confidence.  Overcoming defeats will be lot more easier, if you understand the secrets of life, that is to fall seven times and get up eight times.
After all passing successfully through these three obstacles, we suddenly notice that what we always wanted is there, waiting for us, perhaps the very next day. Then we face the fourth obstacle: The fear of realizing the dream for which we fought all our lives. Oscar wilde said : each man kills the thing he loves’. And it’s true the mere possibility of getting what we want fills the soul of ordinary person with guilt .We look all around at all those who have failed to get what THEY WANT AND FEEL that we do not deserve to get what we want either. There are lot of people who came this so far forgets all the sufferings they faced and when their personal calling is within their grasp, commit series of stupid mistakes and never reached their goal. It is the most dangerous obstacle. But if you believe yourself worthy of the thing you fought so hard to get , then you are just little far away  from giving a treat to you soul.

Now I know the four obstacles in my path and I am fighting them and one day I will surely overcome them. If anyone of you still thinking to take this path,stop thinking, take it. If anyone has already taken the path, well don’t let these obstacles to defeat you. There may be intense, unexpected suffering in this path .But this suffering passes through more quickly. Don’t give up. Because the suffering after giving up is apparently bearable .But it remains with you for many years, eats your soul day by day without your notice and leaves behind the bitterness which stays with you for the rest of your lives.

ಶುಕ್ರವಾರ, ಆಗಸ್ಟ್ 1, 2014

REEL ಸನ್ನಿವೇಶಗಳು ,REAL ಸನ್ನಿವೇಶಗಳು ...



ಈ ಫಿಲಂನವರು ಕ್ಯಾಮೆರಾ ,ಕ್ಯಾಮೆರದೊಳಗೆ ರೀಲ್ ,ನಾಯಕ ಅವನ ಜೊತೆ ಒಂದು ಹೆಣ್ಣು ಜೀವ ನಾಯಕಿ , ಜೊತೆಗೆ ಎರಡೂವರೆ ಘಂಟೆ ,ಕಥೆ ,ಸಂಭಾಷಣೆನಾ ನೂರು ಕಡೆಯಿಂದ ಕದ್ದು ಒಂದು ಕಡೆ ದಬ್ಹಾಕೋ ಒಬ್ಬ ಕಥೆಗಾರ ,ಜೊತೆಗೆ ಒಬ್ಬ ನಿರ್ದೇಶಕ, ಅವನ ದುರುದ್ದೇಶಕ್ಕೆ ದುಡ್ಡು ಹಾಕೋ ದಡ್ಡ ನಿರ್ಮಾಪಕ ಸಿಕ್ಕಿಬಿಟ್ಟರೆ ಎನೇನೊ ಕಥೆ ಬರೆದು ಚಿತ್ರೀಕರಿಸಿ, ರೀಲಲ್ಲಿ ತುಂಬಿಸಿ ರಿಯಲ್ ತರಹ ತೋರಿಸಿ ಬಿಡ್ತಾರೆ . ಮೆದುಳಲ್ಲಿ ರಕ್ತಕಿಂತ ಯೌವ್ವನ ತುಂಬಿ ತುಳುಕಾಡುವ ನಮ್ಮಂತಹ ಹುಡಗರು ಸ್ವಲ್ಪ ಮಟ್ಟಿಗೆ ಅವುಗಳನ್ನು ನಂಬುವುದಂತೂ ನಿಜ . ಹೀಗೆಯೇ ಈ ನಾಯಕ ನಾಯಕಿಯ ಮಧ್ಯೆ ಪ್ರೀತಿ ಹುಟ್ಟುವ ಸನ್ನಿವೇಶಗಳನ್ನು ನಾನು ಬಹಳ ನಂಬಿದ್ದೆ .ತಪ್ಪು ನಂದಲ್ಲ , ನನ್ನ ವಯಸ್ಸಿನದು ಅನ್ನಿ . ನಮ್ಮ ಚಿತ್ರಗಳಲ್ಲಿ ನಾಯಕ ನಾಯಕಿ ಮಧ್ಯೆ ಪ್ರೀತಿ ಹುಟ್ಟುವ ಸನ್ನಿವೇಶಗಳನ್ನು ಒಮ್ಮೆ ನೆನಪಿಸ್ಕೊಳ್ಳಿ .

                ಒಂದೇ ಕ್ಷಣದಲ್ಲಿ ,ಮೊದಲ ನೋಟದಲ್ಲಿ ,ಥಟಕ್ಕನೆ, ಪಟಕ್ಕನೇ   ಪ್ರೇಮಾಂಕುರವಾಗುತ್ತದೆ .ಆದ್ರೆ ನಿಜ ಜೀವನದಲ್ಲಿ..ನಿಮಗೆ ಏನಾಗಿದೆಯೋ ಗೊತ್ತಿಲ್ಲ ,ಆದರೆ ನನ್ನ ಜೀವನದಲ್ಲಿ ... ಹ ಹ... ನೆನಸಿಕೊಂಡರೆ,ನಗು ಬರುತ್ತೆ . ಕೆಳಗೆ ನಮ್ಮ ಸಿನೆಮಾಗಳಲ್ಲಿನ ಸನ್ನಿವೇಶಗಳು ಹಾಗು ಅದೇ ನನ್ನ ಜೇವನದಲ್ಲಿ ನಡೆದಾಗ ಏನಾಯಿತು ಅನ್ನುವುದನ್ನು ಬರೆದಿದ್ದೇನೆ .

*********************************************************************************.

              ನಾಯಕ ಈ ಕಡೆಯಿಂದ ಬರುತ್ತಿರುತ್ತಾನೆ ,ನಾಯಕಿ ಆ ಕಡೆಯಿಂದ ಬರುತ್ತಿರುತ್ತಾಳೆ .ಅವನ ಕೈಯಲ್ಲಿ ಒಂದಿಷ್ಟು ಸಾಮಾನು ,ಅವಳ ಕೈಯಲ್ಲಿ ಒಂದಿಷ್ಟು ಲಗೇಜ್ . ಸ್ಲೋ ಮೋಶನ್ ಅಲ್ಲಿ ಇಬ್ಬರು ಡಿಕ್ಕಿ ಡಮಾರ್ .ನಾಯಕ ನಾಯಕಿ ಜೊತೆಗೆ ಸ್ಲೋ ಮೋಶನ್ ಅಲ್ಲಿ ಬೀಳುತ್ತಾರೆ .ಜೊತೆಗೆ ಅವರ ವಸ್ತುಗಳು .ಆಗ ಎರಡು ಸಾಧ್ಯತೆಗಳು

೧. ನಾಯಕ ನಾಯಕಿ ಇಬ್ಬು ತಮ್ಮ ತಮ್ಮ ವಸ್ತುಗಳನ್ನು ಎತ್ತಿ ಕೊಳ್ಳುತ್ತಿರುತ್ತಾರೆ .ಆಮೇಲೆ..

೨. ನಾಯಕ ,ಬಯ್ಯುತ್ತಿರುವ ನಾಯಕಿಯ ಸಾಮನುಗಳನ್ನು ಎತ್ತಿ ಕೊಡುವಲ್ಲಿ ಬ್ಯುಸಿ ಆಗಿರುತ್ತಾನೆ .ಆಗ ....

ಎರಡರಲ್ಲೂ ಆಮೇಲೆ ಒಂದೇ ತರಹ ಸನ್ನಿವೇಶ . ಹಂಸಲೇಖ ಮ್ಯೂಸಿಕ್  ಹಿನ್ನಲೆಯಲ್ಲಿ  , ನಾಯಕಿ ಸ್ಲೋ ಮೋಶನ್ ಅಲ್ಲಿ ತನ್ನ ಕೇಶ ರಾಶಿಯನ್ನು ಎತ್ತಿ ತನ್ನ ಮುಖವನ್ನು ತೋರಿಸುತ್ತಾಳೆ .ಆಗ ಮತ್ತೆ ಎರಡು ಸಾಧ್ಯತೆಗಳಿವೆ .

೧.ನಾಯಕನಿಗೆ ಮಾತ್ರ ನಾಯಕಿ ಮೇಲೆ ಲವ್ .(ಅವನು ದುನಿಯಾ ವಿಜಿ ರೇಂಜ್ ಗೆ ಇದ್ದರೆ )

೨. ನಾಯಕ ನಾಯಕಿಗೆ ಇಬ್ಬರಿಗೂ ಲವ್ @ ಮೊದಲ ನೋಟ .( ನಾಯಕ್ ದಿಗಂತ್ ರೇಂಜ್ ಗೆ ಇದ್ದರೆ)

ನಾಯಕಿಯೇನು ಐಶ್ವರ್ಯ ತರಹ ಇರಬೇಕಂತ ಇಲ್ಲ .ಬರೆಗೆಟ್ಟ ಯುವಕರಿಗೆ ಶೇಖಡಾ 99ರಷ್ಟು ಹುಡುಗಿಯರು ಚೆನ್ನಾಗಿ ಕಾಣಿಸುತ್ತಾರೆ .ಕೆಲವೊಂದು ಸಿನೆಮಾಗಳಲ್ಲಿ ಸ್ವಲ್ಪ ಚೇಂಜ್ ಇರಲಿ ನಾಯಕ ನಾಯಕಿಯನ್ನು ಗಾಡಿಯಲ್ಲಿ ಕೂರಿಸುತ್ತಾರೆ .ಮಜಾ ಏನಪ್ಪಾ ಅಂದರೆ ನಾನು ಇವೆಲ್ಲ ನೋಡಿ ನಿಜ ಅಂತ ಸೀರಿಯಸ್ ಆಗಿ ನಂಬಿದ್ದೆ .ನಂಗೂ ಯಾರಾದರೂ ಡಿಕ್ಕಿ ಹೊಡೆದರೆ ಈ ತರಹದ್ದೆ ಆಗುತ್ತೆ ಅಂತ ಕನಸು ಕಂಡಿದ್ದೆ .ಆದರೆ ಆಗಿದ್ದೆ ಬೇರೆ .ಕನಸು ಕಂಡಿದ್ದು ರವಿಚಂದ್ರನ್ ಸಾಂಗ್ ,ಆಗಿದ್ದು ಮಾತ್ರ ದುನಿಯಾ ending.

ನಾನು ಓದುತ್ತಿದ್ದ ಕಾಲೇಜ್ ನಲ್ಲಿ ಲೈಬ್ರರಿ ಇದೆ ಅಂತ ಗೊತ್ತಾಗಿದ್ದೆ ಒಂದು ವರ್ಷ ಆದ ಮೇಲೆ .ಆದಾದ ಮೂರು ವರ್ಷದ ನಂತರ ಅದಿರುವ ದಿಕ್ಕು ಗೊತ್ತಾಗಿ ಹೋಗುವ ದೊಡ್ಡ ಮನಸು ಮಾಡಿದ್ದೆ . ಹೋದಾಗ ಆಗಿದ್ದೆ ಈ scene. ಮೊದಲ ಸಲ ಎಂಟ್ರಿ ಹೊಡೆದಿದ್ದರಿಂದ ಲೈಬ್ರರಿ ಅಲ್ಲಿ ಯಾವ ಕಡೆಯೇನಿದೆ? ಎಲ್ಲಿಗೆ ಹೋಗಬೇಕು ?ಅನ್ನುವುದು ಗೊತ್ತಗದೇ , ಬಯಲು ದಾರಿ ಕಲ್ಪನಾ ತರಹ ಹೋಗುತ್ತಿದ್ದೆ . ಎದುರಿಗೆ ಅರ್ಧ ಡಜನ್ ಬುಕ್ ಹೊತ್ತುಕೊಂಡು ಬರುತ್ತಿದ್ದ ಹುಡುಗಿ ನೋಡದೆ ಡಮಾರ್ ಅಂತ ಡಿಕ್ಕಿ ಹೊಡೆದೆ .ಆಮೇಲೆ ಎಲ್ಲ ಸ್ಲೋ ಮೋಶನ್ .ನಾನು ಬಿದ್ದ ಬುಕ್ ತೆಗೆಯಲು ಬಗ್ಗಿದೆ .ಅವಳು ಸ್ಲೋ ಮೋಶನ್ ಅಲ್ಲಿ ತನ್ನ ಕೂದಲನ್ನು ಸರಿಸಿ ...ಅಮೇಲೆ ಹಿಗ್ಗಾಮುಗ್ಗ ಧಾರವಾಡ ಭಾಷೆಯಲ್ಲಿ ಉಗಿದಳು . ನಾನು ಕರ್ಚೀಫ್ ಇಲ್ಲದ ಕಾರಣ ಕೈಯಲ್ಲಿ ಮುಖ ಒರೆಸಿಕೊಳ್ಳುತ್ತಿದ್ದೆ .ಅವಳ ಸೌಂಡಿಗೆ ನಮ್ಮ ಲೈಬ್ರರಿಯನ್ ಬಂದು ಅವಳನ್ನು ಸಮಾಧಾನ ಮಾಡಿಸಿ ಬಾಯೋ ಮುಚ್ಚಿಸುವ ಬದಲು , ಯಾವತ್ತು ಲೈಬ್ರರಿ ಯಲ್ಲಿ ನನ್ನ ಮುಖ ನೋಡದ ಕಾರಣ ನಾನೇ ಪೋಲಿ ಕೆಲಸ ಮಾಡಿದ್ದೇನಿ ಅಂದುಕೊಂಡು ಕ್ಯಾಕರ್ಸಿ ಉಗಿದ . ಅಲ್ಲಿಗೆ “ಪ್ರಥಮ ಡಿಕ್ಕಿ , ಉಗುಳಿಂದ ಅಭಿಷೇಕ ಆಗಿರೋ ಮುಖ ತೊಳೆಕೋ ತಿಕ್ಕಿ “ಅಂದ ಹಾಗೆ ಆಯಿತು ....
************************************************************************

ಇನ್ನು ಈ ಫಿಲಂಗಳಲ್ಲಿ     ಇನ್ನೊಂದು ತರಹ ಲವ್ ಹುಟ್ಟುತ್ತೆ . Faceless ಲವ್ ಸ್ಟೋರಿ .ಅಂದರೆ ಮುಖ ನೋಡದೇ ಒಬ್ಬರಿಗೊಬ್ಬರು ಏಳು ಜನಮಕ್ಕು ಒಬ್ಬರಿಗೊಬ್ಬರನ್ನು ಬುಕ್ ಮಾಡಿಕೊಳ್ಳುವ ಲವ್ ಸ್ಟೋರಿ . ಒಂದಾ ನಾಯಕ ನಾಯಕಿ ಮೊಬೈಲ್ ಫೋನ್ ಎಕ್ಸ್ಚೇಂಜ್ ಆಗಿ ಕೊನೆಗೆ ಅದನ್ನು ವಾಪಸ್ಸು ಮಾಡುವ time ಅಲ್ಲಿ ನಮ್ಮ ಮನ್ಮಥ ರಾಜ ಬಾಣ ಬಿಟ್ಟಿರುತ್ತಾನೆ . ಇಲ್ಲಾ ಒಬ್ಬರಿಗೊಬ್ಬರು ಪತ್ರ ಬರ್ಕೊಂಡು ಅಥವಾ ಮೊಬೈಲ್ ಫೋನ್ ಅಲ್ಲಿ ಮಾತಾಡಿಕೊಂಡು ಅಥವಾ ಮೆಸೇಜ್ ಮಾಡಿಕೊಂಡು ಸಪ್ತ ಪದಿ ತುಳಿಯೋ ರೇಂಜ್ ತನಕ ಬಂದು ಬಿಡ್ತಾರೆ . ನಾನು ಅದಾದರೂ ಆಗುತ್ತಾ ಅಂದುಕೊಂಡಿದ್ದೆ . ಅದು ಆಗ್ಲಿಲ್ವೇ . ಅಲ್ಲ ಪತ್ರ ಬರೆದು ನಾನು ಹುಡುಗಿಯನ್ನು ಪಟಾಯಿಸುವ ಮಾತೇ ಇಲ್ಲ ಬಿಡಿ .ಯಾಕಂದ್ರೆ ನನ್ನ ಅಕ್ಷರ ಅದೆಷ್ಟು ಕೆಟ್ಟದ್ದು ಆಗಿದೆಯಂದರೆ ಬರೆದ ೫ ನಿಮಿಷದ ನಂತರ ನನಗೇ ಅದು ಯಾವ ಭಾಷೆ ಅಂತ ಅರ್ಥ ಆಗೋಲ್ಲ .ಇನ್ನು ಆ ಹುಡುಗಿ ಹುಚ್ಚಿ ಯಾಗಿ hospital ಗೆ ಸೇರಬೇಕು ಅಷ್ಟೇ.
       ಆದ್ರೆ ಒಂದು ಸಲ ನನ್ನ ಫೋನ್  ಎಕ್ಸ್ಚೇಂಜ್ ಆಯಿತು. ಆದರೆ meet ಆದಾಗ ಗೊತ್ತಾಗಿದ್ದು, ಆ ಕಡೆ ವ್ಯಕ್ತಿ   ಪುಲ್ಲಿಂಗ ಅಂತ . ಹಣೆ ಬರಹಕ್ಕೆ ಹೊಣೆ ಯಾರು .?ಇನ್ನು ಗ್ರಹಚಾರ ಅಂದರೆ, ಆ ಪುಲ್ಲಿಂಗ ನನ್ನ ಹಿಂದೆ ಬಿದ್ದಿದ್ದು, ಕೊನೆಗೆ ನಾನು “ ಆ ತರಹದವನಲ್ಲ “ ಅಂತ ಹೇಳಿ ಬಚಾವಾಗಿದ್ದು .


ಇನ್ನೂ ಇದೆ .....



English summary :
                   These movie makers fill the reels of camera in such a way , we tend to feel that those are real.I always used to get carried away with romantic movies or romantic scenes in our Indian cinemas. Have u seen those Yash raj romantic movies or Sharukh khan movies or any other romantic Indian movies?Just imagine.There hero and heroin falls in love at first sight ,within a second, sometimes even in strange places .As the testosterone  pumping in my body has not found its female hormone yet , I always used to believe these  filmy scenes may occur in my life and I may also fall in love. I believed in  the famous dialogue in bollywood " pyar ho jaata hai ".But when the same scenes occurred in my life it was entirely different.
                               Lets imagine the typical scene .Hero carrying some luggage coming in one direction and heroin carrying some luggage coming in another direction.Then out of all the people in the universe these two people hit each other and they fall .Now both starts to pick the things which fell.And then comes the typical Indian movie scene.Heroin lifts her hair in slow motion and hero sees the heroin .That s it love begins.But when the same scene happened in my life ,it was funny .Once I accidentally I hit a girl  in library.All the books she was carrying fell .Next......She scolded me in typical dharwad style.It can only be experienced not expressed.
                      In most of our movies ,another type of love story is "Face less story ".Hero and heroin never see each other but they fall in love just by writing letters,sending texts through mobile or just chatting in social website.There is no chance of girl falling in love by reading my hand written letter .Because my handwriting is so good ,even I can't make out which language it is after five minutes.
to be continued............

                   












ಸೋಮವಾರ, ಏಪ್ರಿಲ್ 14, 2014

ನಮ್ಮೊಳಗೆ ಇರುವ ಆ ವ್ಯಕ್ತಿಯ ಬಗ್ಗೆ



        ಹಿಂದಿನ ಲೇಖನದಲ್ಲಿ ಆ ನಮ್ಮೊಳಗಿರುವ ವ್ಯಕ್ತಿಯ ಬಗ್ಗೆ ಪರಿಚಯಿಸಿ ಅರ್ಧಕ್ಕೆ ನಿಲ್ಲಿಸಿದ್ದೆ .ನಾನು ಹಿಂದಿನ ಲೇಖನದಲ್ಲಿ ಪರಿಚಯಿಸಿದ್ದ ಆ ವ್ಯಕ್ತಿ ನಮ್ಮೊಳಗೆ ಎಷ್ಟೊಂದು ಜೀವಂತವಾಗಿ ಇದ್ದಾನೆ ಎಂಬುದು ನಾವಿಲ್ಲಿ ಗಮನ ಹರಿಸಬೇಕಾದ ವಿಷಯ .ನನ್ನ ಪ್ರಕಾರ ನಮ್ಮೆಲ್ಲರೊಳಗೂ ಈ ವ್ಯಕ್ತಿ ನಮ್ಮ ಹುಟ್ಟಿನಿಂದಲೇ ಇರುತ್ತಾನೆ .ಆದರೆ ದಿನದಂತೆ ದಿನ ಅವನು ಎಷ್ಟು ಸಕ್ರಿಯವಾಗಿರುತ್ತಾನೆ ,ಜೀವಂತವಾಗಿರುತ್ತಾನೆ ಅನ್ನುವದು ನಮ್ಮ ಬದುಕಿನ ಮೇಲೆ ಅವಲಂಭಿಸಿರುತ್ತದೆ .

         ನನ್ನ ಪ್ರಕಾರ ಈ ನಮ್ಮೊಳಗಿರುವ ವ್ಯಕ್ತಿ ನಮ್ಮೆಲ್ಲರಲ್ಲೂ ತುಂಬಾ ಸಕ್ರಿಯವಾಗಿರುವ ಕಾಲ ಅಂದರೆ ನಮ್ಮ ಬಾಲ್ಯ.ನೀವೇ ಯೋಚಿಸಿ , ನಮ್ಮ ಬಾಲ್ಯದಲ್ಲಿ ನಮ್ಮ ಮನಸಿಗೆ ಇಷ್ಟವಾಗಿದ್ದು ಮಾಡಲು ನಾವು ಎಷ್ಟು ಹಿಂಜರಿಯುತ್ತಿದ್ದೆವು ? ನಮ್ಮ ಕಣ್ಣಿಗೆ ಇಷ್ಟವಾಗುವ ಚಿಟ್ಟೆ ಹಿಡಿಯಲು ಆದೆಂತಹ ಸಾಹಸ ಮಾಡಲು ತಯಾರಾಗಿದ್ದೆವು . ಯಾರು ಎದುರಗಡೆ ಇರಲಿ,ಪರಿಸ್ಥಿತಿ ಹೇಗೆ ಇರಲಿ ನಮಗೆ ನಗು ಬರುವ ಹಾಗೆ ಇದ್ದರೆ ಒಮ್ಮೆ ಜೋರಾಗಿ ನಕ್ಕು ಬಿಡುತ್ತಿದ್ದೆವು .ನಮಗೆ ತಿನ್ನಲು ಬೇಕೆನಿಸಿದ್ದು ಕದ್ದು ತಿಂದಾದರೂ ಸರಿ ತಿಂದು ಖಿಷಿ ಪಡುತಿದ್ದೆವು. ಹೀಗೆ ನಮ್ಮೊಳಗೆ ಇದ್ದ ಆ ವ್ಯಕ್ತಿ ಆಗ ಹೇಳಿದ್ದು ನಾವು ಒಂದು ಚೂರು ಯೋಚಿಸದೆ ಪಟ್ ಅಂತ ಮಾಡುತ್ತಿದ್ದೆವು .

       ಅಯ್ಯೋ ಅದೆನ್ನೆಲ್ಲಾ ಈಗ ಮಾಡಲು ಆಗುತ್ತದಾ ಎಂದು ನೀವು ಕೇಳಬಹುದು .ಇಲ್ಲ . ಆಗುವುದಿಲ್ಲ .ನನ್ನ ಪ್ರಕಾರ ವಯಸ್ಸು ಆದಂತೆ ನಮ್ಮೊಳಗಿರುವ ವ್ಯಕ್ತಿ ಸ್ವಲ್ಪ ಬೆಳೆಯುತ್ತಾನೆ. ಅವನ ಸಲಹೆಗಳು ಅಂದರೆ ನಮ್ಮ ಮನಸಿನ ಮುದ ನೀಡುವ ಆ ಕಾರ್ಯಗಳು ಬದಲಾಗುತ್ತವೆ . ಬಾಲ್ಯದಲ್ಲಿ ಹಾಗು ಈಗ ನನ್ನ ಮನಸಿಗೆ ಮುದ ನೀಡುವ ಬದಲಾಗಿವೆ . ಹಾಗೆ ನಿಮ್ಮಲ್ಲೂ ಕೂಡ .
       ಆದರೆ ವಿಷಯ ಅದಲ್ಲ . ನಾವು ಬಾಲ್ಯದಲ್ಲಿ ಎಷ್ಟು ಸಲೀಸಾಗಿ ಅವನ ಮಾತು ಕೇಳುತ್ತಿದ್ದೆವು .ಆದರೆ ಬೆಳೆಯುತ್ತಾ ಬೆಳೆಯುತ್ತಾ .. ನೀವೇ ಯೋಚಿಸಿ ನೋಡಿ . ಇಲ್ಲಾ ಅವನ ಮಾತು ನಮ್ಮಲ್ಲಿ ಶೇಕಡ ೯೯ ಜನ ತಿರಸ್ಕರಿಸುತ್ತೇವೆ . ಅವನು ಹೇಳಿದಂತೆ ಮಾಡಿದರೆ ನಮಗೆ ಖುಷಿ ಸಿಗುವುದು ಎಂಬುದು ಗೊತ್ತು ಆದ್ರೆ ಅದನ್ನು ಮಾಡದೆ ಅದಕೆ ನೂರಾರು ಕಾರಣಗಳು ನೀಡುತ್ತೇವೆ .ಈಗ ಬೇಡ ಸ್ವಲ್ಪ ದಿನಗಳು ಕಳಿಯಲಿ ಆಮೇಲೆ ಮಾಡೋಣ ಎಂದು ಕೊಳ್ಳುತ್ತೇವೆ . ಅಯ್ಯೋ ನಮಗೆ ಮನಸಿಗೆ ಮುದ ಸಿಗುತ್ತದೆ ಅಂತ ಆ ಕೆಲಸಗಳನ್ನು ಮಾಡಿದರೆ ನಮ್ಮ ಸುತ್ತಮುತ್ತ ಜನ ಏನನ್ನುತ್ತಾರೋ ಎಂಬ ಭಯ ಬೆಳೆಸಿಕೊಂಡು ಬಿಡುತ್ತೇವೆ .ಹೀಗೆ ಸಂಸಾರ ತಾಪತ್ರ್ಯಗಳಲ್ಲಿ ನಮ್ಮೊಳಗಿರುವ ವ್ಯಕ್ತಿಯನ್ನು ಮರೆತು , ಪೋಷಿಸದೇ ಅವನನ್ನು ಮೆಲ್ಲಗೆ ಸಾಯಲು ಬಿಡುತ್ತೇವೆ .ನಮ್ಮ ಸಂತೋಷದ ಕ್ಷಣಗಳನ್ನು ನಮ್ಮಿಂದ ದೂರವಾಗಲೂ ನಾವೇ ಕಾರಣಕರ್ತರಾಗುತ್ತೇವೆ .
               ಜಗತ್ತು ಅದೊಂಥರಾ ವಿಚಿತ್ರ . ನಾವು ಏನೂ ಮಾಡಿದರೂ ಅದನ್ನು ಹೀಯಾಳಿಸುವವರು ಸಿಗುತ್ತಾರೆ . ಅವರಿಗೆ ಹೆದರಿ ನಮ್ಮೊಳಗಿರುವ ಈ ವ್ಯಕ್ತಿಯನ್ನು ಕೊಂದು ಬಿಟ್ಟರೆ ಎಗೆ ನಮಗೆ ಏನನ್ನಿಸುವುದಿಲ್ಲ . ಆದ್ರೆ ಅದೊಂದು ದಿನ ಬರುತ್ತದೆ .ನಮಗೆ ಎಲ್ಲವೂ ಸಾಕಾಗಿ ನಮ್ಮೊಳಗಿರುವ ವ್ಯಕ್ತಿಯ ಮಾತುಗಳು ಕೇಳಬೇಕೆಂದು ಅನಿಸುತ್ತದೆ .ಆದರೆ ನಮ್ಮೊಳಗೆ ಅವನಿರುವುದಿಲ್ಲ ,ಹೊರಗೆ ನಮಗೆ ಮಾಡಲು ಶಕ್ತಿ ಇರುವುದಿಲ್ಲ .ಆಗ ಬರಿಯ ಪಶ್ಚಾತ್ತಾಪ ಮಾತ್ರ ನಮ್ಮ ಹತ್ತಿರ ಇರುತ್ತದೆ .


ಅದು ನಮ್ಮನ್ನು ನಿಧಾನವಾಗಿ ಸುಡಲು ಶುರುಮಾಡುತ್ತದೆ . ಸುಟ್ಟು ಬೂದಿಯಾಗುವುದೊಂದೇ ಉಳಿಯುತ್ತದೆ .ಅದರ ಬದಲು ನಾವು ನಮ್ಮೊಳಗಿರುವ ಈ ವ್ಯಕ್ತಿಯ ಮಾತನ್ನು ಕೇಳಲು ಯಾಕೆ ಶುರು ಮಾಡಬಾರದು .ನಾನಂತೂ ಕೇಳೋಣ ಅಂತ ತೀರ್ಮಾನಕ್ಕೆ ಬಂದಿದ್ದೇನೆ .ನೀವು ?


English summary:
 The important thing we need to worry about the person who resides in us is how much he is alive inside us. The person who resides in us active during our childhood. 
Yes, just remember those days .We used to do anything that would make us happy when we were childhood .But as we grow old we start to avoid the person insides us.We start to give stupid reasons.Indirectly by doing that we refrain ourselves from the happiness.
Today we may don’t realize, but one day when we have don’t capacity to hear the person inside us. Moreover he may be not alive. Instead of that let’s start following the suggestion of the person inside us.

ಶನಿವಾರ, ಮಾರ್ಚ್ 29, 2014

ನಮ್ಮೊಳಗೆ ಇರುವ ಆ ವ್ಯಕ್ತಿಯ ಬಗ್ಗೆ



               ಇವತ್ತು ನಾನೊಬ್ಬ ವ್ಯಕ್ತಿಯ ಬಗ್ಗೆ ಬರೆಯುತ್ತಿದ್ದೇನೆ .ಇವನು ರಾಜಕಾರಣಿಯಲ್ಲ, ನಟನಲ್ಲ , ಆಟಗಾರನಲ್ಲ , ಶ್ರೀಮಂತನಲ್ಲ ,ಬಡವನಲ್ಲ ನಿಜ ಹೇಳಬೇಕಂದರೆ ಅವನು ಯಾವ ಪ್ರಸಿದ್ಧ ವ್ಯಕ್ತಿಯಲ್ಲ .ಯಾವುದೇ ಒಂದು ದೇಶಕ್ಕೆ ಅಥವಾ ಭಾಷೆಗೆ ಅಥವಾ ಯಾವುದೇ ಒಂದು ರಂಗಕ್ಕೆ ಸಂಭಂದ ಪಟ್ಟವನಲ್ಲ.ಆದರೆ ಅವನು ನಮ್ಮೆಲ್ಲರಿಗೂ ಸಂಭಂದ ಪಟ್ಟವನು.ಅವನು ನಮ್ಮಲ್ಲೇ ನಮ್ಮೊಳಗೇ ಇರುವವನು .ನಮ್ಮೊಳಗೇ ಇದ್ದು ವಿಚಿತ್ರ ಸಲಹೆ ಕೊಡುವವನು .

                     ಹೌದು . ನಮ್ಮೆಲ್ಲರ ಒಳಗೊಬ್ಬ ಅಂದರೆ ನಮ್ಮ ಮನಸಿನೊಳಗೆ ಆ ರೀತಿಯ ಸಲಹೆ ಕೊಡುವ ವ್ಯಕ್ತಿ ಇರುತ್ತಾನೆ. ನಮ್ಮ ಬಾಲ್ಯದಿಂದಲೂ ನಾವು ಸಾಯುವ ತನಕವೂ ಅವನು ನಮ್ಮ ಜೊತೆ ಇರುತ್ತಾನೆ .ಆ ವ್ಯಕ್ತಿ ಕೊಡುವ ಅ ರೀತಿಯ ಸಲಹೆಗಳು ಬಹು ವಿಚಿತ್ರವಾದದ್ದು. ಸ್ವಲ್ಪ ಹುಚ್ಚುತನ ಇರುತ್ತದೆ ,ಪೋಲಿತನ ಇರುತ್ತದೆ . ಲೋಕದವರು ಒಂದೆಡೆ ಸಾಗಿದರೆ ಇನ್ನೊಂದು ಕಡೆ ಹೋಗುವಂತ ಬಂಡತನ ಇರುತ್ತದೆ .ನಮ್ಮನ್ನೇ ನಾವು ಆವಲೋಕಿಸಿಕೊಳ್ಳುವ ಅವಕಾಶಗಳು ಇರುತ್ತವೆ .ಸ್ವಲ್ಪ ಅಪಾಯ ,ಅಷ್ಟೇ ಮಜಾ ಇರುತ್ತದೆ .ಆದರೆ ಅವೆಲ್ಲಾ ಜೊತೆಗೆ ಆ ಸಲಹೆಗಳಂತೆ ನಡೆದರೆ ಲೋಕದವರು ನಮ್ಮನ್ನು ಹುಚ್ಚರಂತೆ ಕಾಣುವ ಸಾಧ್ಯತೆಗಳು ಇರುತ್ತದೆ .

                       ಹೌದು ಮತ್ತಿನ್ನೇನು?ಆ ವ್ಯಕ್ತಿ ನಮ್ಮ ತಲೆಗೆ ತೂರಿಬಿಡುವ ಸಲಹೆಗಳೇ ಹಾಗಿರುತ್ತವೆ . ಅದೆಲ್ಲಿಯೂ ಯಾವುದೋ ಹಬ್ಬದಲ್ಲಿ ಡೊಳ್ಳು ಬಾರಿಸಿದರೆ ಹೋಗಿ ಮನದಣಿಯೆ ಕುಣಿ ಅನ್ನುತ್ತಾನೆ .ನಿಸರ್ಗದ ಮಡಿಲಲ್ಲಿ ಹೋಗಿ ಜೋರಾಗಿ ಏಳು ಸಲ ನಿನ್ನ ಹೆಸರನ್ನೇ ಜೋರಾಗಿ ಕೂಗಿ ಪ್ರತಿಧ್ವನಿಯನ್ನು ಕೇಳು ಅನ್ನುತ್ತಾನೆ .ಸಂಸಾರದ ಕಾಟ ನಮ್ಮನ್ನು ಕಾಡಿ ಕಾಡಿ ತಿನ್ನುತ್ತಿರುವಾಗ , ಎಲ್ಲವನ್ನು ಬಿಟ್ಟು ನಮ್ಮ ಗಾಡಿಯನ್ನು ಒಮ್ಮೆ ಹತ್ತಿ ಎಲ್ಲಾದರೂ ದೂರ ಹೋಗಿ ಸುಮ್ಮನೆ ಕೂತು ಬಿಡುವಂತೆ ಹೇಳಿಕೊಡುತ್ತಾನೆ .ಸಂತೆಯಲ್ಲೂ ಯಾರ ಪರಿವೆ ಇಲ್ಲದೇ ನಿದ್ದೆ ಮಾಡಲು ಹೇಳುತ್ತಾನೆ .ದೊಡ್ಡವರು ಬೈದು ಹೋದ ಮೇಲೆ ತಲೆ ಕೆಡಸಿಕೊಂಡು ಕೂತು ಅಳುವ ಬದಲು ಅವರನ್ನೇ ಹಾಸ್ಯ ಮಾಡಿ ನಮ್ಮ ಅಂಡು ಬಡಿದುಕೊಂಡು ನಗುವಂತೆ ಹೇಳಿಕೊಡುತ್ತಾನೆ .ರಾತ್ರಿ ನಕ್ಷತ್ರಗಳ ಅಡಿ ಕೂತು ಅವನ್ನೇ ಉಪ್ಪಿನಕಾಯಿಯ ಮಾವಿನ ಮಿಡಿಗಳಂತೆ ನೆಂಚಿಕೊಂಡು ಎಣ್ಣೆ ಹೊಡೆಯಲು ಹೇಳುತ್ತಾನೆ .ಸುಂದರವಾದವರು ಎಲ್ಲಾದರೂ ಎದುರಾದರೆ ಅವರನ್ನೇ ಕಿತ್ತು ತಿನ್ನುವಂತೆ ನೋಡು ಅನ್ನುತಾನೆ . ಹೀಗೆ ಒಂದೇ ಎರಡೇ .....

                                ವಿಚಿತ್ರ ಆಲ್ವಾ? ಆದರೆ ಆತ ಹೇಳಿದ ಕೆಲಸಗಳನೊಮ್ಮೆ ಮಾಡಿದರೆ ನಮ್ಮ ಮನಸಿಗೆ ಸಿಗುವ ತೃಪ್ತಿ ಇದೆಯಲ್ಲಾ ,ಅದು ಎಲ್ಲಿಯೂ ಸಿಗುವುದಿಲ್ಲ .ಏನೋ ಒಂದು ತರಹ ಖುಷಿ . ಅದನ್ನು ಹೇಳಲಾಗುವುದಿಲ್ಲ .Something that can’t be expressed ,but should be experienced. ನನ್ನ ಮೇಲಿನ ಉದಾಹರಣೆಗಳು ನನ್ನೊಳಗಿನ ವ್ಯಕ್ತಿಯ ಸಲಹೆಗಳ  ಪ್ರತಿಬಿಂಬಗಳಷ್ಟೆ.ನಿಮ್ಮೊಳಗೂ ಈ ತರಹದ ಸಲಹೆ ಕೊಡುವ ವ್ಯಕ್ತಿ ಇದ್ದೆ ಇರುತ್ತಾನೆ .ಇಲ್ಲ ಎನ್ನಲು ಸಾಧ್ಯವೇ ಇಲ್ಲ . ಅವನ ಸಲಹೆಗಳು ಬೇರೆಯಾದ್ದಾಗಿರ ಬಹುದಷ್ಟೆ.

                                    ಇಲ್ಲಿ ಮುಖ್ಯವಾಗಿ ನಾವು ಗಮನ ಹರಿಸಬೇಕಾಗಿರುವ ವಿಷಯ ಏನಂದರೆ ನಮ್ಮೊಳಗೇ ಈ ವ್ಯಕ್ತಿಯನ್ನು ಎಷ್ಟು ಜೀವಂತವಾಗಿ ಇಟ್ಟುಕೊಂಡಿದ್ದೇವೆ. ಹ್ಮ್ಮ್ಮಮ್.ಇದರ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಮಾತನಾಡೋಣ .
 ಇಂದಿಗೆ ಇಷ್ಟು ಸಾಕು .ಮತ್ತೆ ಮುಂದುವರಿಸೋಣ .

ವಿನಂತಿ :ನಿಮಗೆ ಈ ಲೇಖನ ಇಷ್ಟವಾದಲ್ಲಿ ದಯವಿಟ್ಟು facebook ಅಲ್ಲಿ ಅಥವಾ ಯಾವುದೇ ಸಾಮಾಜಿಕ ತಾಣದಲ್ಲಿ ಹಂಚಿ ..

English summary : This article is about a person.This person is not a famous actor,sports person or politician.He is neither a celebrity or the person  who bought change in history .But we all are related to this person somehow.Because this person is residing in all of us.Right from birth we have this person with us who gives us suggestion.
             The suggestions made by this person are not common .They are little bit crazy .They have naughtiness in them .They help us in looking ourselves deep inside .But the problem if we follow them , the world may consider  us as crazy .Why? Because the suggestions are like that.
                         He asks us to take nap in our busy schedule .And he asks to make fun of the elder people who always keep scolding us to improve.He even sometimes ask us to run away from all our daily life tensions and ask us to get lost in the beauty of nature and this goes on.
                        May be the above examples reflect the suggestion given by my inside person .The suggestions given by your inside person may be entirely different. But one thing what you can't refuse is that you don't have this person residing your  inside.
                     The question is how much alive this inside person is ?Let's talk about this, in next article.






ಬುಧವಾರ, ಮಾರ್ಚ್ 26, 2014

ಈ ರೋಗಕ್ಕೆ ಮದ್ದು ಏನು ?



        ಏನು ಮಾಡಿದರೂ ಅದು ನಿನಗೆ ಸಿಗುವುದಿಲ್ಲ ಎಂದು ಊರ ಜನ, ಅವನಿಗೆ ಬುದ್ಧಿವಾದ ಹೇಳುತ್ತಲೇ ಇದ್ದರು .ಆತನಿಗೂ ಆ ಸತ್ಯ ಗೊತ್ತಿತ್ತು . ಆದರೆ ಅವನು ಮಾತ್ರ ಹುಚ್ಚನಂತೆ ಅದರ ಹಿಂದೆ ಅಲೆದ .ಅಲ್ಲೆಯುತ್ತಲೇ ಇದ್ದ .ದಿನದಿಂದ ದಿನ , ಅ ವಸ್ತು ತನ್ನದಾಗಿಸಿಕೊಳ್ಳಬೇಕೆಂಬ ಆಸೆ ಬೆಳೆಯತೊಡಗಿತು . ಆ ಅಸೆ ಅದೆಷ್ಟು ಅಗಾಧವಾಗಿ ಬೆಳೆಯತೊಡಗಿತೆಂದರೆ ಅದು ಅವನ ಹೊರಗೆ ಹುತ್ತದಂತೆ ಬೆಳೆದು ಅವನನ್ನು ಮುಚ್ಚಲು ಶುರುವಾಯಿತು .ಮನಸು ಮಾಡಿದ್ದರೆ ಆತ ಅದನ್ನು ತಡೆಯಬಹುದಿತ್ತು .ಆ ವಸ್ತುವಿನ ಹಿಂದೆ ಹೋಗುವುದನ್ನು ನಿಲ್ಲಿಸಿದ್ದರೆ ಅದು ಆಗುತಿತ್ತು. ಆದರೆ ಆತ ಮುಂದುವರೆದ . ಕೊನೆಗೆ ಅತೃಪ್ತಿಯ ಹಾವಿಗೆ ಆಶ್ರಯ ಕೊಡುವ ಹುತ್ತವಾಗಿಬಿಟ್ಟ .
                ಕೆಲವೊಮ್ಮೆ ಜೀವನದಲ್ಲಿ ನಾವು ತೀರಾ ಇಷ್ಟ ಪಡುವ ವಸ್ತುಗಳು ,ಎಷ್ಟು ಇಷ್ಟ ಅಂದರೆ ಅದೊಂದು ಇದ್ದರೆ ನಮ್ಮ ಜೀವನದಲ್ಲಿ ಬೇರೆ ಏನು ಬೇಡ ಅನ್ನುವಷ್ಟು ಇಷ್ಟ ಪಡುವ ವಸ್ತುಗಳು ,ಏನೂ ಮಾಡಿದರೂ ಸಿಗುವುದಿಲ್ಲ ಅಂತ ನಮಗೆ ಅದಾಗಲೇ ಮನಸ್ಸಿನ ಮೂಲೆಯಲ್ಲಿ ಮೆಲ್ಲಗೆ ಹೊಗೆಯಾಡಲು ಶುರುವಾಗಿರುತ್ತದೆ .(ಅದು ಒಂದು ವಸ್ತುವೇ ಆಗ್ಬೇಕು ಎಂದೇನೂ ಇಲ್ಲ , ಒಂದು ವ್ಯಕ್ತಿ ಆಗಿರಬಹುದು,ಒಂದು ಹುಚ್ಚು ಕನಸು ಆಗಿರಬಹದು )ಆ ಕಟು ಸತ್ಯ ಕಾಡ್ಗಿಚ್ಚಿನಂತೆ ಉರಿದು ನಮ್ಮನ್ನು ಒಳಗೊಳಗೇ ಸುಡುತ್ತಿರುತ್ತದೆ. ಆದರೂ ನಾವು ಆ ವಸ್ತುಗಳು ಬೆನ್ನು ಹತ್ತಿ ಹೋಗುವುದನ್ನು ಬಿಡುವುದಿಲ್ಲ .
             ಅ ಮರೀಚಿಕೆಯ ಹಿಂದೆಯೇ ಹೋಗುತ್ತೇವೆ .ಅದನ್ನು ಪಡೆಯಲು ಇಲ್ಲದ ಲಾಭಿ ನಡೆಸುತ್ತಿರುತ್ತೇವೆ.ಹಗಲಿರಳೂ ಅದರದೇ ಲೆಕ್ಕಚಾರ . ಆ ವಸ್ತುವಿನ ವ್ಯಾಮೋಹ ನಮ್ಮನ್ನು ನಿಧಾನವಾಗಿ ಆವರಿಸಿಕೊಂಡು ,ನಮ್ಮನ್ನು ಒಳಗೊಳಗೇ ಬಡಿಬಡಿದು ಇಡುತ್ತದೆ .ನಮ್ಮ ಸುತ್ತ ಮುತ್ತ ಇರುವ ಜನರಿಗೆಲ್ಲಾ ನಾವು ಪಡುತ್ತಿರುವ ಪಾಡು ನೋಡಲಾಗದೇ ಆ ವಸ್ತುವಿನ ವ್ಯಾಮೋಹ ಬಿಟ್ಟು ಬಿಡುವಂತೆ ಸಲಹೆ ಕೊಡಲು ಶುರುಮಾಡುತ್ತಾರೆ .ಆದರೆ ನಮಗೇ ಅವರು ಬಿಟ್ಟಿ ಸಲಹೆ ಕೊಡುವ ಬಾದಷಾಗಳಂತೆ ಕಾಣುತ್ತಾರೆ.ನಿಜ ಹೇಳಬೇಕೆಂದರೆ ಆ ಕಟು ಸತ್ಯ ನಮಗೇ ಗೊತ್ತಿರುತ್ತದೆ .ಆ ಸತ್ಯ ನಮ್ಮೊಳಗೆ ಹೆಮ್ಮರವಾಗಿ ಬೆಳೆದಿರುತ್ತದೆ . ಆದರೆ ಅದನ್ನು ಕಡಿದು ಮುಂದೆ ಸಾಗುವ ಬದಲು ,ಆ ಮರದ ಸುಳ್ಳು ನೆರಳಲ್ಲಿ ಬದುಕುವುದನ್ನೇ ಚಟ ಮಾಡಿಕೊಂಡು ಬಿಡುತ್ತೇವೆ .
                    ಆ ವಸ್ತುವಿನ ವ್ಯಾಮೋಹ ಬಿಟ್ಟು , ಅದರ ಸುತ್ತ ಗಿರಕಿ ಹೊಡೆಯುವ ಸಮಯವನ್ನು ನಾವು ಅದೇ ಬೇರೆ ಕಡೆ ಉಪಯೋಗಿಸಿದರೆ ಬಾಳ ದಾರಿಯಲ್ಲಿ ಅದೆಷ್ಟೋ ಮುಂದೆ ಹೋಗುತ್ತೇವೆ .ಅದೆಷ್ಟೋ ಸಾಧಿಸುತ್ತೇವೆ .ಆದರೆ ಅದನ್ನು ಬಿಡುವುದು ಮಾತ್ರ ನಮ್ಮಿಂದ ಸಾಧ್ಯವಾಗುವುದಿಲ್ಲ .ಅದಕೆ ಕಾರಣ ನಮ್ಮ ಮನದಲ್ಲಿರುವ ಕೆಟ್ಟ ಆಶಯ. ಎಂದಾದರೂ ಒಂದು ದಿನ ಅ ವಸ್ತು ನಮ್ಮದಾಗಬಹುದೇನೋ ಎಂಬ ಕೆಟ್ಟ ಆಶಯ . ಅದು ಕೊನೆ ಕೊನೆಗೆ ,ಇನ್ನೂ ಸ್ವಲ್ಪ ಪ್ರಯತ್ನಿಸಿದರೆ ನಮ್ಮದಾಗಿಯೇ ಆಗುತ್ತದೆ ,ಬಿಡಬೇಡ ಅನ್ನುವ ಕೆಟ್ಟ ಹಠವಾಗಿ ಪರಿಣಮಿಸುತ್ತದೆ . ಆ ಹಠ ನಮ್ಮೊಳಗಿರುವ ಸತ್ಯವನ್ನು ಮುಳುಗಿಸುಬಿಡುತ್ತದೆ.ಆ ವ್ಯಾಮೋಹ ಜೇಡರ ಬಲೆಯಂತೆ ನಮ್ಮ ಸುತ್ತ ಬೆಳದು ,ಅದರೊಳಗಿಂದ ಹೊರ ಬರಲಾಗದೇ,ಒಳಗೇ ನೆಮ್ಮದಿಯಿಂದ ಇರಲಾಗದೆ ದಿನ ನಿತ್ಯವೂ ನರಳಾಡುತ್ತೇವೆ.
                  ಇದಕೆಲ್ಲಾ ಪರಿಹಾರವೆಂದರೆ ಒಂದೇ .ಅದೇ ತುಂಬಾ ಸುಲಭವಾದದ್ದು .ಆ ವ್ಯಾಮೋಹ ಬಿಟ್ಟು ,ಸತ್ಯವ ಅರಿತು ಇತರ ಕಡೆ ಗಮನ ಹರಿಸುವುದು. ಆದರೆ ಈ ಸುಲಭದ ಕಡಲೆ ನಮಗೆ ಕಬ್ಬಿಣ ಕಡಲೆಯಂತೆ ಕಾಣುತ್ತದೆ .ನಿಜ ಹೇಳಬೇಕೆಂದರೆ ಈ ವ್ಯಾಧಿಯ ಪರಿಹಾರದ ಬಗ್ಗೆ ನಾನು ಬರೆಯಲು ಇಷ್ಟ ಪಡುವುದಿಲ್ಲ .ಯಾಕೆಂದರೆ ಈ ರೋಗದಿಂದ ನರಳುತ್ತಿರುವ ರೋಗಿಗಳಲ್ಲಿ ನಾನು ಒಬ್ಬ ಎಂದು ಹೇಳುತ್ತಾ ಈ ಲೇಖನವನ್ನು ಅರ್ಧಕ್ಕೆ ನಿಲ್ಲಿಸುತ್ತಿದ್ದೇನೆ.ನಿಮಗೆ ಈ ರೋಗದ ಮದ್ದು ಗೊತ್ತಾದಲ್ಲಿ ಉತ್ತರ ಕಳುಹಿಸಿ ,Please.
English summary: The people around him suggested him to stop running behind that thing which he would never get .Even he knew the truth . But still day by day ,he got more obsessed . The obsession grew like a anthill around him.He could have stopped it .But he continued .At last he turned into a unsatisfied snake residing anthill .
                       In our life we run behind some things even though we know the truth that we are not getting that any cost.This thing even can be a person,a dream.The funny and dangerous thing about this is we know the truth.We know the truth that we will never own the thing and if we spend the same energy somewhere else we could succeed, but still we are not ready to admit it .Instead we spend our valuable time in running behind it ,thinking about that thing and making all attempts to own that thing.
      The simplest solution to this disease is just to stop running behind that thing .That's it .But we never do it . Why ? Even I don't know the answer . Even I am finding solution to this disease .If anyone of you know the answer ,please let me now.

ಶುಕ್ರವಾರ, ಜನವರಿ 10, 2014

ಭಯ



ಭಯ..ನಿಮ್ಮ ಮೇಲೆ ಸರಕ್ಕನೇ ಆಕ್ರಮಣ ಮಾಡುತ್ತಿದ್ದ ಹಾಗೆ ,ನಡುಕ ಮೆಲ್ಲನೇ ನಿಮ್ಮನ್ನು ಆವರಿಸಲು ಶುರುವಾಗುತ್ತದೆ. ಒಂದಿಷ್ಟು ಬೆವರಿನ ಹನಿಗಳು ಹಣೆಯ ಮೇಲೆ ಮೂಡಲು ಶುರುವಾಗುತ್ತದೆ. ಹುಬ್ಬುಗಳು ತಮ್ಮ ಇಷ್ಟದಂತೇ ವರ್ತಿಸಲು ಶುರುಮಾಡುತ್ತವೆ. ಬಾಯಲ್ಲಿ ತೊದಲು ಮಾತುಗಳು ನಲಿದಾಡುತ್ತವೆ .ಹುಡುಗರ ಭಾಷೆಯಲ್ಲಿ ಹೇಳಬೇಕಂದರೆ meter off .

          ಭಯ ಇಂತದ್ದಕ್ಕೇ ಅಂತ ಹೇಳಲು ಆಗುವುದಿಲ್ಲ.ಕೆಲವರಿಗೆ ದೆವ್ವ,ಭೂತ ಆಂದರೆ ಗಡ ಗಡ ನಡಗುತ್ತಾರೆ .ಕೆಲವರು ಗುಡಗು ಸಿಡಿಲು ಬಂದರೆ ಸಾಕು ಮುದುರಿಕೊಳ್ಳುತ್ತಾರೆ. ಕೆಲವರಿಗೆ ಕತ್ತಲೆಂದರೆ ಭಯ.ಕೆಲವರಿಗ ಎತ್ತರ ಅಂದರೆ ಭಯ.ಇನ್ನೂ ಕೆಲವರಿಗೆ ಜನರ ಗುಂಪು ನೋಡಿದರೆ ಭಯ.ಇನ್ನೂ ಕೆಲವರು ಜಿರಲೆ ಆಂತ ಕ್ರಿಮಿ ಕೀಟಗಳು ಕಂಡರೆ ಸಾಕು ಚಂಗನೇ ಎಗರಿ ಬಿಡುತ್ತಾರೆ.ಹೀಗೆ ಒಬ್ಬ ಒಬ್ಬರಿಗೆ ಒಂಥರಾ ಭಯ.

 ಇಂಥವರಿಗೇ ಇಂತದ್ದೇ ಭಯ ಅಂತ ಹೇಳಲು ಆಗುವುದಿಲ್ಲ. ಸಿಕ್ಷ್ ಪ್ಯಾಕ್ ಇರೋ ಹುಡುಗ ಸಣ್ಣ ಹಲ್ಲಿಗೆ ಹೆದರಬಹುದು.ಬಾಯಿಬಡಕಿ ಹುಡುಗಿ ವೇದಿಕೆ ಹತ್ತಿ ಮಾತನಾಡು ಅಂದರೆ ಹೆದರಿ ಮುರುಟಿಕೊಳ್ಳಬಹುದು.ಹೀಗೆ.ಆದರೆ ಇಂತಹ ಭಯಗಳು ನನ್ನ ಪ್ರಕಾರ ಅಂತಹ ದೊಡ್ಡ ಸಮಸ್ಯೆಗಳೇನೆಲ್ಲಾ.ಇವೆಲ್ಲಾದಕ್ಕಿಂತ ಒಂದು ಭಯ ಇದೆ .ನಮ್ಮಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಆ ಭಯ ಖಂಡಿತ ಇದ್ದೇ ಇರುತ್ತದೆ.ಯಾವುದು ಅಂತೀರಾ?

          ಅದೇ ನಮ್ಮೆಲ್ಲರ ಕನಸ್ಸಿನ ಹಿಂದೆ ಓಡಿಹೋಗದಂತೆ ತಡೆಹಿಡಿಯುವ ಭಯ. ಅರ್ಥ ಆಗುತ್ತಿಲ್ಲವಾ? ಹೇಳ್ತೀನಿ ಕೇಳಿ .ನಮ್ಮಲ್ಲಿ ತುಂಬಾ ಜನಕ್ಕೆ ಕನಸುಗಳು ಇರುತ್ತೆ. ಅದರಲ್ಲ್ಲಿ ತುಂಬಾ ಜನ ಕನಸುಗಳನ್ನು ಬಿಟ್ಟು ಹೊಟ್ಟೆ ಪಾಡಿನ ನೆಪ ಹೊತ್ತು ಬೇರೆಯದೇ ಮಾಡುತ್ತಿರುತ್ತೇವೆ. ಮಾಡುತ್ತಿರುವ ಕೆಲಸದಲ್ಲಿ ಮನಸ್ಸು ಇಲ್ಲ. ಆದರೆ ಕನಸುಗಳು ಬೆನ್ನು ಹತ್ತಿ ಹೋಗುವುದಕ್ಕೆ ಹೆದರಿಕೆ.ಎಲ್ಲಿ ಅಲ್ಲಿ ಸೋತು ಹೋಗುತ್ತೀವೋ ಅನ್ನುವುದು.ಸೋತು ಹೋದರೆ ಎಲ್ಲಿ ಹಾಸ್ಯಾಸ್ಪದವಾಗುತ್ತೀವೋ ಅನ್ನುವುದು. ಅದೇ ಭಯ.ಇದೊಂದು ಭಯ ನನ್ನಿಂದ ಹಿಡಿದು ತುಂಬಾ ಜನರಲ್ಲಿ ಇದೆ. ಈ ಭಯದಿಂದ ನಮ್ಮ ಕನಸಗಳನ್ನು ನೆನಸು ಮಾಡಿಕೊಳ್ಳಲಾಗದೆ,ದಿನವೂ ನರಳಾಡುತ್ತಿದ್ದೀವಿ. ನಮಗೇ ಕಂಫ಼ರ್ಟ್ ಜೋನ್ ನಲ್ಲಿ ಇರಬೇಕೆಂಬ ಆಸೆ. ಅದು ಬಿಟ್ತು  ಕನಸ್ಸನ್ನು ಚೇಸ್ ಮಾಡುವ ರಿಸ್ಕ್ ತೆಗದುಕೊಳ್ಳುವ ತನಕ ನಾವುಗಳು ನೆಮ್ಮದಿ ಕಾಣುವುದಿಲ್ಲ.

        ನೀವು ಸರಿಯಾಗಿ ಗಮನಿಸಿದರೆ ,ನಮ್ಮ ಸುತ್ತ ಮುತ್ತ ಲಿರುವ ಮಹಾನ್ ವ್ಯಕ್ತಿಗಳು, ಇಂತಹದ್ದು ಒಂದು ರಿಸ್ಕ್ ತೆಗದುಕೊಂಡಿದಕ್ಕೆ ತಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದ್ದು.ನಮ್ಮ ಕನಸುಗಳನ್ನು ಬೆನ್ನು ಹತ್ತಿ ಹೋಗಿ ಸೋತು ಹೋಗಬಹುದು ಎಂಬ ಭಯ ನಿಮ್ಮನ್ನು ಕಾಡುತ್ತಿರಬಹದು. ಹಾಗೆಂದುಕೊಂಡು ನೀವು ಕನಸುಗಳನ್ನು ಹಿಡಿಯಲು ಹೋಗದೇ ಇದ್ದರೆ ಬಾಳಿನಲ್ಲಿ ಒಂದ ಒಂದು ದಿನ ಪಶ್ಚಾತ್ತಾಪ ಪಟ್ಟೇಪಡುತ್ತೀರಿ.

           ಭಯವನ್ನು ನೀವು ಸೋಲಿಸಬೇಕೆಂದರೆ ,ಒಂದೇ ಮಾರ್ಗ. ಅದು ಭಯವನ್ನು ಎದುರಿಸುವುದು.ಭಯವನ್ನು ಎದುರಿಸುವುದೇ ಭಯವನ್ನು ಸೋಲಿಸುವ ಪರಿ.ಇದಕ್ಕೆ ಪೂರಕವಾಗಿ ಒಂದು ವಿವೇಕಾನಂದರ ಕಥೆ ಇದೆ.ಒಮ್ಮೆ ವಿವೇಕಾನಂದರು ಕಾಶಿಯಲ್ಲಿ ಹೋಗುವಾಗ ಒಂದಿಷ್ಟೂ ಕೋತಿಗಳು ಅಟ್ಟಿಸಿಕೊಂಡು ಬಂದವು. ಹೆದರಿದ ವಿವೇಕಾನಂದರು ಓಡಿ ಹೋಗಲು ಶುರು ಮಾಡಿದರು. ಅಮೇಲೆ ಏನನ್ನಿಸಿತೋ ಏನೋ ಹಿಂದುರಿಗಿ,ಕಲ್ಲನ್ನು ಎತ್ತಿ ಕೋತಿಗಳನ್ನು ಹೆದರಿಸಿದರು.ಅಗ ಕೋತಿಗಳು ಪರಾರಿ. ಹೀಗೆ ಭಯವನ್ನು ನೀವು ಗೆಲ್ಲಬೇಕಂದರೆ ಒಂದೇ ದಾರಿ,ಅದನ್ನು ಎದುರಿಸಿವುದು.

English Summary:Fear, When it attacks you a chill just pass through your spine. Forehead starts sweating. Hands and legs shivering and you start stammering. You lose control of yourself as fear takes the control. Each one will be having their own fear. A six pack guy may jump in fear when he sees a cockroach. A gal who never stops talking may shatter when you ask her to speak on stage. Some are afraid of dark, some are afraid of heights like this it goes on. But out of all these fears one fear is very dangerous. Yes, that one fear which stops you achieving from your dream. You have your own dream but you are not following it. Instead you are doing something in order to earn a bread. You are afraid to follow ur dreams as u are afraid of uncertainty. Because now u are in comfort zone. If u leave this and go behind ur dreams ,u are not sure whether u will succeed it. So, that fear keeps stopping u from achieving ur dreams. If u just check the great persons around u, u see one thing in common. All these people took risks. They came out of their comfort zone. According to me to outcome ur fear ,u have to just face it. I remember a small story of Swami Vivekananda. Once when he was in Kashi, a group of monkeys attacked him. He started to run. But after running a while he stopped and took a stone and started throwing at them.They ran away. Same way, stop running face ur fear.

ಶನಿವಾರ, ಜನವರಿ 4, 2014

ಹೊಸ ವರ್ಷದ ಶುಭಾಷಯಗಳು



ಹಳೇ ವರ್ಷ ಮುಗಿದು ,ಹೊಸ ವರ್ಷ ಬರುವ ಸಂಭ್ರಮ.ಎಲ್ಲರೂ ಸಂಭ್ರಮದಲ್ಲಿ ಮುಳುಗಿ, ಹಳೇದನ್ನು ನೆನಪಿನ ಬುತ್ತಿಯಲ್ಲಿ ಗಟ್ತಿಕೊಂಡು ,ಹೊಸದನ್ನು ಕೈ ಬೀಸಿ ಕರೆಯುತ್ತಿದ್ದಾರೆ. ಕೆಲವರು ಅವರ ಹತ್ತಿರದವರ ಜೊತೆಗೂಡಿ ಕುಣಿದು ಕುಪ್ಪಳಿಸಿದರೆ,ಕೆಲವರು ಹತ್ತಿರದವರನ್ನು ಶುಭ ಹಾರೈಸುವಲ್ಲಿ ಕಳೆಯುತ್ತಿದ್ದಾರೆ. ಕೆಲವರು ಅವರ ಸಂಗಾತಿಯನ್ನು ಗಟ್ಟಿ ತಬ್ಬಿ ಕೊಂಡು ಕಳೆದರೆ,ಕೆಲವರು ಉಡುಗೊರೆ ಹಂಚಿಕೊಂಡು ಸಂಭ್ರಮಿಸುತ್ತಿರುತ್ತಾರೆ. ಆದರೆ ಪ್ರತೀ ವರ್ಷ, ಆ ಹೊತ್ತಿಗೆ ಒಂಟಿ ಪಿಶಾಚಿ ತರಹ ಒಂದೆರಡು ಘಂಟೆಗಳ ಕಾಲ ಒಬ್ಬನೇ ಎಲ್ಲರಿಂದ ದೂರ ಹೋಗಿ ಯೋಚಿಸುತ್ತಾ ಕೂರುತ್ತೇನೆ.ಯಾಕೆ ಎಲ್ಲರೂ ಇಷ್ಟೊಂದು ಸಂತೋಷದಿಂದ ಕುಣಿಯುತ್ತಿದ್ದಾರೆ? ಎಂದು.

ಯಾಕೆ ? ನಿಮಗೆ ತಲೆ ಇಲ್ಲವೇ ,ಇದ್ದರೂ ಅದರಲ್ಲಿ ಬುಧ್ಧಿ ಇಲ್ಲವೇ? ಅಲ್ಲಾ ಹೊಸ ವರ್ಷ ಬರೋ ಹೊತ್ತಿಗೆ ಯಾಕೆ ಎಲ್ಲರೂ ಸಂತೋಷದಿಂದ ಇದ್ದಾರೆ ಅಂತ ಕೇಳುತ್ತೀರಲ್ಲಾ ? ಅಂತ ನೀವು ನನಗೆ ಕೇಳಬಹುದು.ನನ್ನ ವಾದ ಕೇಳಿ. ದಿನಗಳು ಕಳೆಯುತ್ತಿದೆ. ಆಯುಷ್ಯ ಕಡಿಮೆಯಾಗುತ್ತಿದೆ.ನಿಜ ಅದಲ್ಲವಾ? ಅದಕ್ಕೆ ಯಾಕೆ ಈ ತರಹ ಕುಣಿಯಬೇಕು?ಬೇರೆಯವರದು ಗೊತ್ತಿಲ್ಲಾ.ನನ್ನದು ಅಂತೂ ಮೂರು ಇಂಚು ಮುಂದು ಹೋಗಿಲ್ಲದ, ಆರಕ್ಕೆ ಏರದ ಮೂರಕ್ಕೆ ಇಳಿಯದ ಕೆಲಸ.ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ನನ್ನ ನಿರಾಕರಿಸುವ ಹುಡುಗಿಯರ ಸಂಖ್ಯೆ. ಅದರ ದುಪ್ಪಟ್ಟು ವೇಗದಲ್ಲಿ ಉದುರುತ್ತಿರುವ ಕೂದಲುಗಳು.ಸತ್ತರೂ ಎರಡು ಇಂಚು ಉದ್ದ ಆಗದ ದೇಹ.ಕರಗದ ಹೊಟ್ಟೆ. ಆಕಾಶದೆತ್ತರದ ಕನಸುಗಳು ,ಅದನ್ನು ಏರಲಾಗದಂತೆ ಹಿಡಿದಿಟ್ಟಿರುವ ಭಯ. ಬೆನ್ನಿಗೇ ಅಂಟಿಕೊಂಡಿರುವ ದುರಾದೃಷ್ಟ. (ನಿಮಗೆ ಎಲ್ಲರಿಗೂ ಇವೆಲ್ಲಾ ಇರದಿದ್ದರೂ ,ಈ ತರಹದ ಎಂದೂ ಬದಲಾಗದ ಒಂದಲಾ ಒಂದು ಸಮಸ್ಯೆ ಇರಬಹುದು.) ಇಷ್ಟೆಲ್ಲಾ ಸಮಸ್ಯೆ ಇದ್ದರೂ,ಇತ್ತ ಸಮಯ ನಮಗೇ ಕಾಯದೇ ಮುನ್ನುಗುತ್ತಿದೆ.ದಿನದಿಂದ ದಿನೇ ನಾವು ಚಿಕ್ಕವರಾಗದೇ ದೊಡ್ಡವರಾಗಿತ್ತಿದ್ದೇವೆ. ಹೀಗಿರುವಾಗ ಈ ಹೊಸ ವರ್ಷ ಬಂದಾಗ ಖುಷಿಯಿಂದ ಯಾಕೆ ಆಚರಿಸಬೇಕು?ಹೀಗೆ ಯೋಚನೆ ಮಾಡುವ ನನಗೇ ಈ ಹೊಸ ವರ್ಷ ಆಚರಿಸುವ ಈ ಜನರ ಮನಸ್ಸೇ ಅರ್ಥ ಆಗುವುದಿಲ್ಲಾ.

ನಾನು ಒಬ್ಬನೇ ಯಾಕೆ ಹೀಗೆ ಯೋಚನೆ ಮಾಡುತ್ತಿದ್ದೇನೆ. ಬಹುಶಃ ನನಗೇ ಅರ್ಥ ಆಗದ,ನನಗೇ ತಿಳಿಯದ ಮರ್ಮ ಅವರಿಗೆಲ್ಲಾ ತಿಳಿದಿರಬೇಕು.ಏನದು ? ಹೀಗೆ ಹೊಸ ವರ್ಷದ ಸಂಭ್ರಾಮಚರಣೆಯಲ್ಲಿ ಹುಚ್ಚನಂತೆ ಕುಣಿಯುತ್ತಿದ್ದ ಗೆಳಯನೊಬ್ಬನ ಕೇಳಿದೆ "ಏನೋ ಈ ಪಾಟಿ ಖುಷಿಯಾಗಿದಿಯಾ?" .ಯಾಕಂದರೆ ಎರಡು ದಿನದ ಹಿಂದೆ ಅವನ ಹುಡುಗಿ ಕೈ ಕೊಟ್ಟಳು ಅಂತ ಅಳುತಿದ್ದ ಅವನು.ಅವನ ಕೆಲಸವೂ ಆಗಲೂ ಈಗಲೂ ಹೋಗುವಂತಿತ್ತು. ಜೀವನವೇ ಮುಗಿದು ಹೋಯಿತು ಅನ್ನುತ್ತಿದ್ದ ಅವನು ಇಂದು ಕುಣಿಯುತ್ತಿದ್ದ್ದ. ಅವನಿಗೆ ಕೇಳಿದೆ" ಏನಾಗಿದೆ ,ಏನು ಒಳ್ಳೆಯದು ಆಗಿದೆ ಅಂತ ಈ ತರಹ ಕುಣಿಯುತ್ತಾ ಇದಿಯಾ? ". ಅದಕ್ಕೆ ಆತ " ಲೋ , ಆಗಿ ಹೋಗಿದ್ದು ಬಿಟ್ಟು ಹಾಕೋ.ಈ ವರ್ಷ ಎಲ್ಲಾ ಒಳ್ಳೆಯದಾಗುತ್ತೆ,ನೋಡುತ್ತಾ ಇರು" ಅಂದ.

ಆಗ ನನಗೇ ಅರ್ಥ ಆಯಿತು. ಗುಟ್ಟು ತಿಳಿಯಿತು. ಎಲ್ಲರೂ ಈ ಸಲ ಒಳ್ಳೆಯಾದುಗುತ್ತೆ ಅನ್ನೋ ಆಶಾಭಾವನೆಯಿಂದ ಇಷ್ಟೊಂದು ಸಂತೋಷವಾಗಿದ್ದಾರೆ. ಅದೇ ಗುಟ್ಟು.ನಿಜ ಅಲ್ಲವಾ? ಹಳೆಯದೂ ಏನೇ ಆಗಿರಲಿ, ಈ ವರ್ಷ ಒಳ್ಳೆಯಾದುಗುತ್ತೆ ಅನ್ನೋ ಆಸೆಯಲ್ಲಿ ಬದುಕೋ ಖುಷಿಯಿದೆ.ನಾನು ಮಾರನೇ ದಿನ ಅದೇ ಆಸೆಯಲ್ಲಿ ಎದ್ದೆ.ಹಳೇ ಸ್ನೇಹಿತರು ವಿಶ್ ಮಾಡಿದರೂ,ಜಗಳ ವಾಡಿ ಕೊಂಡು ಮುನಿಸಿಕೊಂಡು ಇದ್ದ ಕೆಲವರು ಎಲ್ಲಾದನ್ನೂ ಮರೆತು ಕಾಲ್ ಮಾಡಿದ್ದರು.ನಾನು ವಿಶ್ ಮಾಡಿ ,ಅವರ ಕಡೆಯಿಂದ ಉತ್ತರ ನಿರೀಕ್ಷಿಸಿದ ಕೆಲವು ಗೆಳೆಯರು ಕೂಡ ಮಾಡಿದ್ದರು.ಕೆಲಸದಲ್ಲೂ ಏನೋ ಹೊಸ ಭರವಸೆ ಮೂಡುವ ಹಾಗೆ ಇದೆ. ಹೀಗೆ ಎನೋ ಈ ವರ್ಷ ಒಳ್ಳೆಯದಾಗುತ್ತದೆ ಅನ್ನುವ ಆಶಾಭಾವನೆಯಲ್ಲಿ ಹೊಸ ವರ್ಷಕ್ಕೆ ಕಾಲಿಡುತ್ತಿದ್ದೇನೆ.ನಿಮಗೂ ಒಳ್ಳೆಯದಾಗಲೀ.ಈ ಹೊಸ ವರ್ಷ ಸುಖ ,ಸಂತೋಷ ತರಲಿ. ಮತ್ತೆ ಸಿಗೋಣ.
English summary: The old year is ending,the new one is arriving.Everyone  is happy about the the new year arrival and everyone celebrating in their own way.And this is the time,when everyone celebrating ,I go somewhere alone ans stat thinking " Why everyone is so happy about new year arrival?".You guys may think I am crazy to ask question like this. You may say"After  all, it's new year arrival ,chill dude".That's not my point.As days going we are getting aged.I mean getting nearer to die.I dont know about others.In my life nothing is going right whether its job,personal life or any other.The dreams are at high but can't reach them due to some personal commitment.So, when nothing is going right ,why the hell I need to be happy for the new arrival of the year.I asked the same question to one of my friend who was celebrating the new year and who was literally high.The reason i asked him was just few days ago he was broken as his girl friend ditched him.Even he had serious problems in his professional life.He told " dude this year everything will be good.see".At that time I realised why the people celebrate new year.It's because of hope ,the hope that this year everything will be good.A hope that keeps them alive and happy.After realizing this truth ,even I woke up with the hope that everything will be right.Happy new year guys.God bless u all.


Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...