ಭಯ..ನಿಮ್ಮ ಮೇಲೆ ಸರಕ್ಕನೇ ಆಕ್ರಮಣ ಮಾಡುತ್ತಿದ್ದ ಹಾಗೆ ,ನಡುಕ ಮೆಲ್ಲನೇ ನಿಮ್ಮನ್ನು ಆವರಿಸಲು ಶುರುವಾಗುತ್ತದೆ. ಒಂದಿಷ್ಟು ಬೆವರಿನ ಹನಿಗಳು ಹಣೆಯ ಮೇಲೆ ಮೂಡಲು ಶುರುವಾಗುತ್ತದೆ. ಹುಬ್ಬುಗಳು ತಮ್ಮ ಇಷ್ಟದಂತೇ ವರ್ತಿಸಲು ಶುರುಮಾಡುತ್ತವೆ. ಬಾಯಲ್ಲಿ ತೊದಲು ಮಾತುಗಳು ನಲಿದಾಡುತ್ತವೆ .ಹುಡುಗರ ಭಾಷೆಯಲ್ಲಿ ಹೇಳಬೇಕಂದರೆ meter off .
ಭಯ ಇಂತದ್ದಕ್ಕೇ ಅಂತ ಹೇಳಲು ಆಗುವುದಿಲ್ಲ.ಕೆಲವರಿಗೆ ದೆವ್ವ,ಭೂತ ಆಂದರೆ ಗಡ ಗಡ ನಡಗುತ್ತಾರೆ .ಕೆಲವರು ಗುಡಗು ಸಿಡಿಲು ಬಂದರೆ ಸಾಕು ಮುದುರಿಕೊಳ್ಳುತ್ತಾರೆ. ಕೆಲವರಿಗೆ ಕತ್ತಲೆಂದರೆ ಭಯ.ಕೆಲವರಿಗ ಎತ್ತರ ಅಂದರೆ ಭಯ.ಇನ್ನೂ ಕೆಲವರಿಗೆ ಜನರ ಗುಂಪು ನೋಡಿದರೆ ಭಯ.ಇನ್ನೂ ಕೆಲವರು ಜಿರಲೆ ಆಂತ ಕ್ರಿಮಿ ಕೀಟಗಳು ಕಂಡರೆ ಸಾಕು ಚಂಗನೇ ಎಗರಿ ಬಿಡುತ್ತಾರೆ.ಹೀಗೆ ಒಬ್ಬ ಒಬ್ಬರಿಗೆ ಒಂಥರಾ ಭಯ.
ಇಂಥವರಿಗೇ ಇಂತದ್ದೇ ಭಯ ಅಂತ ಹೇಳಲು ಆಗುವುದಿಲ್ಲ. ಸಿಕ್ಷ್ ಪ್ಯಾಕ್ ಇರೋ ಹುಡುಗ ಸಣ್ಣ ಹಲ್ಲಿಗೆ ಹೆದರಬಹುದು.ಬಾಯಿಬಡಕಿ ಹುಡುಗಿ ವೇದಿಕೆ ಹತ್ತಿ ಮಾತನಾಡು ಅಂದರೆ ಹೆದರಿ ಮುರುಟಿಕೊಳ್ಳಬಹುದು.ಹೀಗೆ.ಆದರೆ ಇಂತಹ ಭಯಗಳು ನನ್ನ ಪ್ರಕಾರ ಅಂತಹ ದೊಡ್ಡ ಸಮಸ್ಯೆಗಳೇನೆಲ್ಲಾ.ಇವೆಲ್ಲಾದಕ್ಕಿಂತ ಒಂದು ಭಯ ಇದೆ .ನಮ್ಮಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಆ ಭಯ ಖಂಡಿತ ಇದ್ದೇ ಇರುತ್ತದೆ.ಯಾವುದು ಅಂತೀರಾ?
ಅದೇ ನಮ್ಮೆಲ್ಲರ ಕನಸ್ಸಿನ ಹಿಂದೆ ಓಡಿಹೋಗದಂತೆ ತಡೆಹಿಡಿಯುವ ಭಯ. ಅರ್ಥ ಆಗುತ್ತಿಲ್ಲವಾ? ಹೇಳ್ತೀನಿ ಕೇಳಿ .ನಮ್ಮಲ್ಲಿ ತುಂಬಾ ಜನಕ್ಕೆ ಕನಸುಗಳು ಇರುತ್ತೆ. ಅದರಲ್ಲ್ಲಿ ತುಂಬಾ ಜನ ಕನಸುಗಳನ್ನು ಬಿಟ್ಟು ಹೊಟ್ಟೆ ಪಾಡಿನ ನೆಪ ಹೊತ್ತು ಬೇರೆಯದೇ ಮಾಡುತ್ತಿರುತ್ತೇವೆ. ಮಾಡುತ್ತಿರುವ ಕೆಲಸದಲ್ಲಿ ಮನಸ್ಸು ಇಲ್ಲ. ಆದರೆ ಕನಸುಗಳು ಬೆನ್ನು ಹತ್ತಿ ಹೋಗುವುದಕ್ಕೆ ಹೆದರಿಕೆ.ಎಲ್ಲಿ ಅಲ್ಲಿ ಸೋತು ಹೋಗುತ್ತೀವೋ ಅನ್ನುವುದು.ಸೋತು ಹೋದರೆ ಎಲ್ಲಿ ಹಾಸ್ಯಾಸ್ಪದವಾಗುತ್ತೀವೋ ಅನ್ನುವುದು. ಅದೇ ಭಯ.ಇದೊಂದು ಭಯ ನನ್ನಿಂದ ಹಿಡಿದು ತುಂಬಾ ಜನರಲ್ಲಿ ಇದೆ. ಈ ಭಯದಿಂದ ನಮ್ಮ ಕನಸಗಳನ್ನು ನೆನಸು ಮಾಡಿಕೊಳ್ಳಲಾಗದೆ,ದಿನವೂ ನರಳಾಡುತ್ತಿದ್ದೀವಿ. ನಮಗೇ ಕಂಫ಼ರ್ಟ್ ಜೋನ್ ನಲ್ಲಿ ಇರಬೇಕೆಂಬ ಆಸೆ. ಅದು ಬಿಟ್ತು ಕನಸ್ಸನ್ನು ಚೇಸ್ ಮಾಡುವ ರಿಸ್ಕ್ ತೆಗದುಕೊಳ್ಳುವ ತನಕ ನಾವುಗಳು ನೆಮ್ಮದಿ ಕಾಣುವುದಿಲ್ಲ.
ನೀವು ಸರಿಯಾಗಿ ಗಮನಿಸಿದರೆ ,ನಮ್ಮ ಸುತ್ತ ಮುತ್ತ ಲಿರುವ ಮಹಾನ್ ವ್ಯಕ್ತಿಗಳು, ಇಂತಹದ್ದು ಒಂದು ರಿಸ್ಕ್ ತೆಗದುಕೊಂಡಿದಕ್ಕೆ ತಮ್ಮ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗಿದ್ದು.ನಮ್ಮ ಕನಸುಗಳನ್ನು ಬೆನ್ನು ಹತ್ತಿ ಹೋಗಿ ಸೋತು ಹೋಗಬಹುದು ಎಂಬ ಭಯ ನಿಮ್ಮನ್ನು ಕಾಡುತ್ತಿರಬಹದು. ಹಾಗೆಂದುಕೊಂಡು ನೀವು ಕನಸುಗಳನ್ನು ಹಿಡಿಯಲು ಹೋಗದೇ ಇದ್ದರೆ ಬಾಳಿನಲ್ಲಿ ಒಂದ ಒಂದು ದಿನ ಪಶ್ಚಾತ್ತಾಪ ಪಟ್ಟೇಪಡುತ್ತೀರಿ.
ಭಯವನ್ನು ನೀವು ಸೋಲಿಸಬೇಕೆಂದರೆ ,ಒಂದೇ ಮಾರ್ಗ. ಅದು ಭಯವನ್ನು ಎದುರಿಸುವುದು.ಭಯವನ್ನು ಎದುರಿಸುವುದೇ ಭಯವನ್ನು ಸೋಲಿಸುವ ಪರಿ.ಇದಕ್ಕೆ ಪೂರಕವಾಗಿ ಒಂದು ವಿವೇಕಾನಂದರ ಕಥೆ ಇದೆ.ಒಮ್ಮೆ ವಿವೇಕಾನಂದರು ಕಾಶಿಯಲ್ಲಿ ಹೋಗುವಾಗ ಒಂದಿಷ್ಟೂ ಕೋತಿಗಳು ಅಟ್ಟಿಸಿಕೊಂಡು ಬಂದವು. ಹೆದರಿದ ವಿವೇಕಾನಂದರು ಓಡಿ ಹೋಗಲು ಶುರು ಮಾಡಿದರು. ಅಮೇಲೆ ಏನನ್ನಿಸಿತೋ ಏನೋ ಹಿಂದುರಿಗಿ,ಕಲ್ಲನ್ನು ಎತ್ತಿ ಕೋತಿಗಳನ್ನು ಹೆದರಿಸಿದರು.ಅಗ ಕೋತಿಗಳು ಪರಾರಿ. ಹೀಗೆ ಭಯವನ್ನು ನೀವು ಗೆಲ್ಲಬೇಕಂದರೆ ಒಂದೇ ದಾರಿ,ಅದನ್ನು ಎದುರಿಸಿವುದು.
English Summary:Fear, When it attacks you a chill just pass through your spine. Forehead starts sweating. Hands and legs shivering and you start stammering. You lose control of yourself as fear takes the control. Each one will be having their own fear. A six pack guy may jump in fear when he sees a cockroach. A gal who never stops talking may shatter when you ask her to speak on stage. Some are afraid of dark, some are afraid of heights like this it goes on. But out of all these fears one fear is very dangerous. Yes, that one fear which stops you achieving from your dream. You have your own dream but you are not following it. Instead you are doing something in order to earn a bread. You are afraid to follow ur dreams as u are afraid of uncertainty. Because now u are in comfort zone. If u leave this and go behind ur dreams ,u are not sure whether u will succeed it. So, that fear keeps stopping u from achieving ur dreams. If u just check the great persons around u, u see one thing in common. All these people took risks. They came out of their comfort zone. According to me to outcome ur fear ,u have to just face it. I remember a small story of Swami Vivekananda. Once when he was in Kashi, a group of monkeys attacked him. He started to run. But after running a while he stopped and took a stone and started throwing at them.They ran away. Same way, stop running face ur fear.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ