" ಇಲ್ಲಿ ನಾವು ಅಂದುಕೊಂಡ ಹಾಗೆಎಲ್ಲಾ ನಡೆಯುತ್ತೆ ಅಂತ ಅಂದುಕೊಂಡರೆ ಅದು ನಮ್ಮ ಮುಟ್ಟಾಳತನ ,ಯಾಕಂದ್ರೆ ಇಲ್ಲಿ ಎಲ್ಲವೂ ಅನಿರೀಕ್ಷಿತ "
ಹೌದಲ್ಲವಾ? ಇಲ್ಲಿ ಎಲ್ಲವೂ ಅನಿರೀಕ್ಷಿತ . ಮುಂದೆ ಏನು ಆಗುತ್ತದೆ ಅನ್ನುವುದು ನಮಗೆ ಗೊತ್ತಿಲ್ಲ . ಆದರೆ ಮುಂದೆ ಒಳ್ಳೆಯದೇ ಆಗುತ್ತದೆ ಅಂದುಕೊಂಡು ಬದುಕಬೇಕಾಗಿರುವುದು ನಮ್ಮ ಧರ್ಮ . ಕ್ಷಮಿಸಿ ಈ ಲೇಖನ ಜೀವನದ ಬಗ್ಗೆ ಅಲ್ಲ .ನಮ್ಮ ಅನಿರೀಕ್ಷಿತ ೧೦ ಸಾವಿರ views ಮುಟ್ಟಿರುವ ಸಂಭ್ರಮದ ಹೊತ್ತಿನಲ್ಲಿ ಅದರ ಬಗ್ಗೆ ಒಂದಿಷ್ಟು ಬರೆಯಬೇಕು ಅನ್ನಿಸಿತು .
ಅನಿರೀಕ್ಷಿತ ಕಿರುಚಿತ್ರ ಶುರುವಾಗುವುದಕ್ಕೆ ಆಗ ನನ್ನ ಜೀವನದಲ್ಲಿ ನಡೆದ ಅನೇಕ ಕಹಿ ಘಟನೆಗಳೇ ಸ್ಫೂರ್ತಿ . ಹೌದು ಆ ಎಲ್ಲಾ negative ಗಳನ್ನೂಗುಣಿಸಿ positive ಮಾಡಿಕೊಂಡ ಹೆಮ್ಮೆ ನನಗಿದೆ . ಅನಿರೀಕ್ಷಿತ ಮಾಡುವ ಮುಂಚೆ ನನ್ನ ಮನೀಷೆ ಕಿರುಚಿತ್ರ ಚಿತ್ರೀಕರಣ ಅದಾಗಲೇ ಮುಗಿದುಹೋಗಿತ್ತು . ಆದರೆ ಅದು ಯಾಕೋ ಬಿಡುಗಡೆ ಆಗುವ ಲಕ್ಷಣಗಳು ತುಂಬಾ ಕಡಿಮೆ ಯಿತ್ತು . ಆಗ ನನಗೆ 'ಮೂರು ತಿಂಗಳು ಶೂಟ್ ಕಷ್ಟ ಪಟ್ಟು ಮಾಡಿರುವ ಚಿತ್ರ ಇಷ್ಟು ತಡ ಆಗುತ್ತ ಇದೆಯಲ್ಲಾ , ಅದು ನಾನು ನಾಯಕನಾಗಿ ಅಭಿನಯಿಸಿರುವ ಮೊದಲ ಚಿತ್ರ' ಎಂದು ತುಂಬಾ ನೊಂದು ಕೊಳ್ಳುತ್ತಿದೆ . ಅದಕ್ಕೆ ತುಪ್ಪ ಹಾಕುವಂತೆ ಯಾವನೋ ಜ್ಯೋತಿಷಿನಿನ್ನ ಮುಖ ಇಟ್ಟುಕೊಂಡು ನೀನು ಫಿಲ್ಮ ಗೆ ಹೋದ್ರೆ ,ಉಧ್ಧಾರನೇ ಆಗೋಲ್ಲಾ, ನೀನು ನಟನಾಗಲೂ ಸಾಧ್ಯವೂ ಇಲ್ಲ ಅಂತ ಬೇರೆ ಹೇಳಿದ್ದ . ಅಯ್ಯೋ ಅದು ನಿಜ ಆಗುತ್ತಿದೆಯೆಲ್ಲಾ , ಅದು ಹಾಗಾಗಬಾರದು ನಾನು ಆ ಜ್ಯೋತಿಷಿ ಮಾತುಗಳನ್ನು ಸುಳ್ಳು ಮಾಡಲು ಏನಾದರು ಮಾಡಬೇಕೆಂದು ಪಣ ತೊಟ್ಟೆ .
ಅದೇ ಸಮಯಕ್ಕೆ ನಾನು ನನ್ನ ಕಂಪನಿಯಲ್ಲಿರುವ ಸಿನಿಮಾ ತಂಡ ವೊಂದಕ್ಕೆ ಕಥೆ ಹೇಳಿದ್ದೆ . ಅಷ್ಟೇ ಅಲ್ಲದೇ ಅದರಲ್ಲಿ ಬರುವ ನಾಯಕನಪಾತ್ರವನ್ನು ನನ್ನನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದೇನೆ . ಆದ್ದರಿಂದ ನಾನು ನಾಯಕನಾಗಳು ಇಷ್ಟ ಪಡುತ್ತಿದ್ದೇನೆ ಎಂದು ಹೇಳಿದ್ದೆ . ಆ ಕಥೆ ಕೇಳಿ ಯಾವನೋ ಮೂಗಿನಲ್ಲಿ ಮತನಾಡುವನೊಬ್ಬ ನಾನು ಇದನ್ನು ನಿರ್ದೇಶಿಸುತ್ತೇನೆ ಎಂದು ಮುಂದೆ ಬಂದ . ಆತನಿಗೆ ನಾನು ನಾಯಕನಾಗುವುದು ಸುತರಾಂ ಇಷ್ಟವಿರಲಿಲ್ಲ . ಕೊನೆಗೆ ನಂಗೆ ಗೊತ್ತಿಲ್ಲದ ಹಾಗೆ ,ನನಗಿಂತ ನೋಡಲು ಚೆನ್ನಾಗಿರುವವನನ್ನು ಕರೆದು ಅವನನ್ನು ನಾಯಕನನ್ನಾಗಿ ಮಾಡಿ ಚಿತ್ರೀ ಕರಿಸಿ ಬಿಟ್ಟರು . ನನಗೆ ಕಣ್ಣಲಿ ನೀರು . ನನ್ನ ಮಗು ಕಳೆದುಕೊಂಡಅನುಭವ .
ಆಗ ನಾನು ಇನ್ನು ಕಥೆಗಳನ್ನು ಬೇರೆಯವರಿಗೆ ಕೊಟ್ಟು ನನ್ನನ್ನು ನಾಯಕನನ್ನಾಗಿ ಮಾಡಿ ಅಂದರೆ ನನ್ನ ಈ ನೇಪಾಳಿ ಮುಖ ಹಾಗು ದ್ವಾರಕೀಶ್ hieght ನೋಡಿ ಯಾರು ಕೊಡುವುದಿಲ್ಲ ಎಂಬ ಸತ್ಯ ಅರಿತುಕೊಂಡೆ . ಇನ್ನ್ಮೇಲೆ ನಾನೇ ನಿರ್ದೇಶಿಸಬೇಕು ಆದ್ರೆ ಈ ಸಲ ನನ್ನ ಕಥೆ ಬೇಡ ( ಯಾಕಂದ್ರೆ ಮತ್ತೆ ನನ್ನ ಕಥೆಕದಿ ಯುತ್ತಾರೆ ಎಂಬ ಭಯ ಇತ್ತು ) ಇರುವ ಕಥೆಯನ್ನೇ ಮಾಡೋಣ ಅಂತ ತೀರ್ಮಾನಕ್ಕೆ ಬಂದೆ . ಆಗ ಗೆಳೆಯ ಲಿಂಗರಾಜ ತಾನು ಛಾಯಾಗ್ರಹಣ ಮಾಡಲು ಮುಂದೆ ಬಂದ .ನಾವಿಬ್ಬರು ಒಂದು horror ಮೂವಿ ಮಾಡುವ ಯೋಚನೆಯಲ್ಲಿದ್ದೆವು . ನಂತರ ಲವ್ ಸ್ಟೋರಿ ಹೀಗೆ.... ಎಷ್ಟು ಕಥೆ ಯೋಚಿಸಿದರೂ ಯಾವ ಕಥೆಯೂ ಮಾಡಲೇ ಬೇಕು ಅನ್ನಿಸುವಷ್ಟು ಹುಮ್ಮಸು ಬರಲಿಲ್ಲ . ಆಗ ನನ್ನ ಕ್ಯೂಬಿಕಲ್ ನಲ್ಲೆ ಕೆಲಸ ಮಾಡುತ್ತಿದ್ದ ಶ್ರೀ ಹರಿ ನನಗೇ ಪುಸ್ತಕವೊಂದನ್ನು ಕೊಟ್ಟರು ಅಲ್ಲಿ ಓದಿದ್ದೆ ಗಂಡಸ್ಕತ್ತ್ರಿ . ಬರೀ ಮೂರೇ ಜನ ಪಾತ್ರಧಾರಿ ಹಾಗು ಒಂದು ಮನೆಯಲ್ಲೇ ನಡೆಯುವ ನಾಟಕವನ್ನು ಸಿನಿಮಾ ಗೆ ಅಳವಡಿಸಿ ಕೊಂಡರೆ ಚೆನ್ನಾಗಿರುತ್ತದೆ , ಶೂಟಿಂಗ್ ಮಾಡಲು ಸುಲಭವೂ ಆಗುತ್ತದೆ ಅಂತ ಲಿಂಗರಾಜ್ ಗೆ ಹೇಳಿದೆ ಆತನು ಒಪ್ಪಿಕೊಂಡ . ಅಗ ಬರೆಯಲು ಶುರು ಮಾಡಿದ್ದು .
ಮೊದಲಿನಿಂದಲೂ ಸಿನಿಮಾ ಮಾಡುವ ಹುಚ್ಚಿದ್ದರೂ , ಮಾಡಲು ಹೋದಾಗ ಭಯ ಇತ್ತು ಏನಾದ್ರು ಅಡ್ಡ ಬರುತ್ತಿತ್ತು . ಆದರೆ ಈ ಚಿತ್ರ ಮಾಡಲೇಬೇಕು ಅನ್ನುವ ಹಠಬರಲು ಇನ್ನೊಂದು ಕಾರಣವು ಇತ್ತು . ಇವೆಲ್ಲವೂ ನಡೆಯುವ ಸ್ವಲ್ಪ ದಿನಗಳ ಹಿಂದೆ , ನಾ ಇಷ್ಟಪಟ್ಟ ಒಂದು ವಸ್ತು ನನಗೆ ಸಿಗುವುದಿಲ್ಲ ಎಂಬುದು ತಿಳಿದು ಬಂತು .ಆದರೆ ಆ ಕಟು ಸತ್ಯ ಒಪ್ಪಲು ನನಗೆ ಆಗದೆ ವಿಲವಿಲ ಒದ್ದಾಡುತ್ತಿದೆ . ಅದರಿಂದ ಹೊರಗೆ ಬರಲು ಒಂದೇ ದಾರಿ ನನಗೆ ಇಷ್ಟ ಇರುವ ಕೆಲಸ ಮಾಡುವುದು . ಇದು ನನಗೆ ಅನಿರೀಕ್ಷಿತ ಮಾಡಲು ಪ್ರೇರಿಪಿಸಿತು.
ಶೂಟಿಂಗ್ ಮಾಡಲು ವಾಸುಕಿ ಎಂಬ ಗೆಳಯನ ಮನೆಯ ಸಿಕ್ಕಿತು . ಇನ್ನು ಪಾತ್ರಧಾರಿಗಳು , ಸಂದೀಪ್ ಅಶ್ವಥ್ ಪಾತ್ರ ಮಾಡಲುಒಪ್ಪಿಕೊಂಡ . ಆದ್ರೆ ನಾಯಕಿ . ನನಗೆ ಬರಿ ಲಕ್ಷಣವಾಗಿರುವ ಹುಡುಗಿ ಬೇಕಾಗಿರಲಿಲ್ಲ . ಕಣ್ಣಲ್ಲೇ ಅಭಿನಯಿಸುವ ನಾಯಕಿ ಬೇಕಿತ್ತು . ಆಮೇಲೆ ನನ್ನ height ಗೆ ಸರಿಹೊಂದುವ ನಾಯಕಿಯೂ ಬೇಕಿತ್ತು . ಮನೀಷೆ ಯಲ್ಲಿ ಪ್ರೀತಿ ಅಭಿನಯ ನೋಡಿದ್ದೆ . ಆದರೆ ಅಷ್ಟೊಂದು ಪರಿಚಯ ವಿಲ್ಲದ ಕಾರಣ ಕೇಳುವುದುಕ್ಕೇ ಮುಜುಗರ ಪಡುತ್ತಿದ್ದೆ .ಗಟ್ಟಿ ಮನಸು ಮಾಡಿ ಕೇಳಿದಾಗ ನೆಗೆಟಿವ್ role ಅನ್ನು ಮಾಡಲು ಒಪ್ಪಿಕೊಂಡರು . ಅಲ್ಲಿಗೆ ಅನಿರೀಕ್ಷಿತ ಶುರು .
ನನ್ನ ಮೊದಲ ಚಿತ್ರದ ನಿರ್ದೇಶಕರಾದ ಮನೀಷ್ ಅವರು ಶೂಟಿಂಗ್ ಶುರು ಮಾಡಿದ ಮೊದಮೊದಲು ಬಂದು ಸಹಾಯ ಮಾಡಿದರು. ಹೇಗೋ ಕಷ್ಟಪಟ್ಟು ಶೂಟಿಂಗ್ ಮುಗಿಸಿದೆವು . ನಂತರ ಸಂಕಲನ .ನನ್ನ ಗೆಳಯ ಜಗದೀಶ್ ಗೆ ಗೊತ್ತಿತ್ತಾದರೂ ಅವನು ಮೊದಮೊದಲು ಮಾಡಲು ಹಿಂಜರಿದ . ನಂತರ ಇಬ್ಬರೂ ಸೇರಿ ಬರೋಬ್ಬರಿ ಎರಡು ತಿಂಗಳು ಸಂಕಲನ ಮಾಡಿದೆವು . ನಂತರ ಮತ್ತೆರಡು ತಿಂಗಳು ಡಬ್ಬಿಂಗ್ . ಇನ್ನು ಉಳಿದದ್ದು ಹಿನ್ನಲೆ ಸಂಗೀತ . ನನ್ನ ಗೆಳೆಯನೊಬ್ಬ ಕೈಕೊಟ್ಟ ಕಾರಣ ಹೊಸ ಸಂಗೀತ ನಿರ್ದೇಶಕ ಹುಡುಕಬೇಕಾದ ಪರಸ್ಥಿತಿ ಬಂತು ಆಗ ಸಿಕ್ಕವ್ರೇ ರಾಜಾರಾಮ್ . ಅವರು ಸಂಗೀತ ಕೊಡಲು ಒಪ್ಪಿದ್ದಲ್ಲದೇ ತಮ್ಮ ಮದ್ರಾಸ್ಗೆಳೆಯನಾದ ಗಣೇಸನ್ ಗೋಪಾಲ್ ಅವರ ಕೈಯಲ್ಲಿ ಸೌಂಡ್ ಎಫೆಕ್ಟ್ಸ್ ಕೊಡಿಸಲು ಮುಂದಾದರು . ನಂತರ ಕಾವ್ಯ ಹಾಗು ಉಮಾಶಂಕರ್ ಅವರು ಚಿತ್ರದಲ್ಲಿ ಬರುವ ಕೊನೆಯ ಪೇಂಟಿಂಗ್ ಗಳಿಗೆ ಕೈ ಜೋಡಿಸಿದರು . ಅಂತೂ ಹೇಗೋ ಎಲ್ಲ ಕಷ್ಟಗಳನ್ನು ದಾಟಿ ಅನಿರೀಕ್ಷಿತ ನಿಮ್ಮ ಕಣ್ಣು ಮುಂದೆ ಬಂತು .
ಈ ಚಿತ್ರಕ್ಕೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು . ಇದೇ ಹುಮ್ಮಸ್ಸಿನಲ್ಲಿ ಕನ್ನಡ ದಲ್ಲಿ ಹೊಸ ಚಾನೆಲ್ ಒಂದನ್ನು ಶುರು ಮಾಡಿದ್ದೇವೆ . ಅದಕ್ಕೂ ನಿಮ್ಮ ಸಹಕಾರ ಬೇಕು .
ಅನಿರೀಕ್ಷಿತ ಮಾಡುವಾಗ ನಾನು ಅನೇಕ ಪಾಠ ಗಳನ್ನು ಕಲಿತಿದ್ದೇನೆ .ತಾಳ್ಮೆ ಒಂದು . ಎಲ್ಲದಕ್ಕೂ ದಿಟ್ಟ ಮನಸ್ಸು ಇರಬೇಕು ಅನ್ನುವುದು ಇನ್ನೊಂದು .ಹಾಗೂ ಮನಸ್ಸಿನಿಂದ ನಾವು ಏನಾದರೂ ಇಷ್ಟ ಪಟ್ಟು ಮಾಡಿದರೆ , ಅದು ಪೂರ್ಣ ಗೊಳ್ಳಲು ಇಡೀ ಸಮಾಜವೇ ನಿಮಗೆ ಸಹಕರಿಸುತ್ತದೆ ಎಂಬ ಸತ್ಯ ಅರಿವು ಮೂಡಿಸಿದ್ದೆ ಅನಿರೀಕ್ಷಿತ.

Movie link: https://www.youtube.com/watch?v=UBztWJFgs1o
English summary :
It’s our foolishness to assume that everything that happens here is certain (expectable), because all that happens is UNCERTAIN (UNEXPECTED).
Yes it's true .In our life everything is unexpected.But it's our job to be optimistic and to believe something good is happening .This article is about the making of anireekshita as short movie has crossed 10 k views.
Anireekhsita . How it started ? it's interesting .A series of negative events took place before the release of anireekshita and all those contributed to this movie .
My first movie maneeshe was not releasing even though shooting finished six months ago . At the same time one astrologer told me that I would be never an actor as I have don’t look .I was so frustrated and I thought I have to do something now and prove that astrologer by doing a short movie.
At the same time , I had shared my story to one of the movie group in Infosys Mysore and also my intended to act as lead in it. One boy came forward to direct and I said yes as I was afraid that it would be difficult for me to direct. But the director didn’t like me to cast as hero as I was not good looking .Then the movie was shot without my notice and a handsome boy was casted as a hero .once again I was so sad.But then I decided not to share my story to anyone and I would direct my next movie whatever it takes. My friend Lingaraj said he would help me with camera .We were looking for a story which is good and easy to shoot.
Then I came across t.P kailsam’s gandaskattri .We thought this story would make best thriller if it is modified little bit .
Even though I wanted to make short movie long time ago, there was no some force to push me into it .Before starting the shoot, one incident in my personal life left me shattered .I had come to know that one thing I love most doesn’t like me and I will be never getting that. I was in depression and I had to do something which I love most to come out of it .And this time I started doing short film .
We faced many problems while shooting and after shooting the movie. But the whole journey was a worth one .We learnt many things ,no wait the journey thought us many good lessons. All along the journey one thing was always getting proved again and again .If you are doing any work from heart ,the whole universe helps you in getting that work done.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ