ಗಾಬರಿಯಿಂದ ಮುಖ ತೊಳೆಯುತ್ತಿರುವ ನಾಯಕನಿಗೆ ಏನೋ ಅರಿವಾದಂತಾಗಿ , ಮೆಲ್ಲಗೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ .ಈ ಸಲ ಅವನಿಗೆ ತನ್ನ ಪ್ರತಿಬಿಂಬ ಕಾಣುತ್ತದೆ . ಆಗ ನಾಯಕನಿಗೆ ತಾನು ಏನು ಕಳೆದುಕೊಂಡಿದ್ದೇನೆ ಎಂಬುದು ಅರಿವಾಗುತ್ತದೆ .ತನ್ನ ಹೆಂಡತಿಗೆ “ಸಿಕ್ತು ಬಿಡೆ “ ಎಂದು ಹೇಳಿ ಕನ್ನಡಿಯನ್ನೇ ನೋಡುತ್ತಾ ನಿಲ್ಲುತ್ತಾನೆ .ಮೆಲ್ಲಗೆ ಅವನ ಮುಖದಲ್ಲಿ ಮಂದಹಾಸ ಮೂಡುತ್ತದೆ .
ಮನೀಷೆ ಕಿರುಚಿತ್ರ ನೋಡಿದ್ದರೆ ನಿಮಗೆ ಈ ದೃಶ್ಯ ಗೊತ್ತಿರುತ್ತದೆ . ನೋಡಿದವರಿಗೆಲ್ಲಾ ಈ ದೃಶ್ಯ ಅರ್ಥ ಆಗಿಲ್ಲ ಅನ್ನುವುದು ನಿಜ ಹಾಗೆಯೇ ಅವರಿಗೆ ಮನೀಷೆ ಚಿತ್ರವೂ ಇಷ್ಟ ಆಗಿಲ್ಲ . ನನಗೆ ಮನೀಷೆ ಚಿತ್ರಕ್ಕಿಂತ ,ಅನಿರೀಕ್ಷಿತ ಸಕತ್ ಆಗಿದೆ ಅಂತ ಹೇಳಿದವರಲ್ಲಿ ಶೇಕಡಾ ೭೦ ರಷ್ಟು ಜನ ಈ ವರ್ಗಕ್ಕೆ ಸೇರಿದವರು . ಇನ್ನುಳಿದವರು art ಸಿನಿಮಾ ಇಷ್ಟ ಪಡದೇ ಇರುವವರು .For them movie is just for entertainment. ನಾನು ಅವರುಗಳ ವಿರುಧ್ಧ ಅಲ್ಲ ಬಿಡಿ. ನನಗೆ ಕೇಳಿದರೆ,, ನನ್ನ ಮನಸಿಗೆ ಮನೀಷೆ ಕಿರುಚಿತ್ರ ತುಂಬಾ ಹತ್ತಿರ .ಕಾರಣಗಳು ಬಹಳಷ್ಟಿವೆ . ಮೊದಲನೆಯದಾಗಿ ನಾನು ಅಭಿನಯಿಸಿದ ಮೊದಲ ಅರ್ಥಪೂರ್ಣ ಚಿತ್ರ. ಅದರ ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ . ಅದರ ಕಥೆ ಸ್ವಾರಸ್ಯಕರ . ಅದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ .
ಹೀಗೆ ಒಂದು ದಿನ office mail box ಗೆ .mail ಬಂತು . ನಾವು ಒಂದು ಕಿರುಚಿತ್ರ ಮಾಡುತ್ತಿದ್ದೇವೆ .ಎರಡು ಪಾತ್ರಕ್ಕೆ ನಟರು ಬೇಕಾಗಿದ್ದಾರೆ . ಶನಿವಾರ auditions ಇದೆ ಎಂದು . ನಾನು ಅದಕ್ಕೆ ಅಷ್ಟೊಂದು ಗಮನ ಕೊಡದೇ deleteಮಾಡಿದೆ.ಯಾಕಂದ್ರೆ ಅದಕ್ಕಿಂತ ಮುಂಚೆ ಹೋಗಿದ್ದಲೆಲ್ಲಾ ನನ್ನನ್ನು reject ಮಾಡಿದ್ದರು . ಕಾರಣ ನನ್ನ height ಹಾಗು ಮುಖ . ಆದರೆ ನನ್ನ ಇನ್ಫೋಸಿಸ್ ಸೀನಿಯರ್ ದರ್ಶನ್ ಒತ್ತಾಯದ ಮೇರೆಗೆ ಮನಸಿಲ್ಲದ ಮನಸಲ್ಲಿ ಹೋದೆ.
ಅಲ್ಲಿ ಹೋದಾಗ ನನಗಿಂತ ಉದ್ದ ಇರುವವರು ,ಚೆನ್ನಾಗಿ ಇರುವವರು ಬಂದಿದ್ದರು . ನಾನು ಮನಸ್ಸೊಳಗೆ ನಾನು ಆದ ಹಾಗೆ ಸುಮ್ಮನೆ time ವೇಸ್ಟ್ ಅಂದುಕೊಂಡು ಅಲ್ಲಿ ಕೊಟ್ಟಿರುವ form ತುಂಬಿಸುತ್ತಾ ಅವರು practise ಮಾಡಲು ಹೇಳಿದ್ದ scene ಗಳನ್ನು ಹಾಗೆ ಯೋಚಿಸುತ್ತಿದ್ದೆ . ಸ್ವಲ್ಪ ಸಮಯದ ನಂತರ ನನ್ನ ಸರದಿ ಬಂತು . Audition mail ನಲ್ಲಿ ಮೂರೂ ಸನ್ನಿವೇಶಕ್ಕೆ ತಯಾರಾಗಲು ಹೇಳಿದ್ದರು .ಒಂದು ಏನೋ ಕಳೆದುಹೋಗಿರುತ್ತದೆ ,ಏನೆಂದು ನಮಗೆ ಗೊತ್ತಿರುವುದಿಲ್ಲ . ಎರಡನೆಯದು ಕನ್ನಡಿಯಲ್ಲಿ ನಮ್ಮ ಪ್ರತಿಬಿಂಬ ಕಾಣಿಸುವುದಿಲ್ಲ .ಮೂರನೆಯದು ಒಂದು ಕಥೆ ಹೇಳುವುದು . ಅದೆನ್ನೆಲ್ಲ ಲೀಲಾಜಾಲವಾಗಿ ಮಾಡಿದೆ . ( ನಂಗೆ confidence ಅಂತ ಇರುವುದು ಅಭಿನಯದಲ್ಲಿ ಮಾತ್ರ ). ಅಲ್ಲಿದ್ದವರೆಲ್ಲರೂ ಚೆನ್ನಾಗಿದೆ , ಆಮೇಲೆ ಹೇಳ್ತೀವಿ ಅಂತ ಹೇಳಿ ಕಳುಹಿಸಿದರು . ನಾನು ನೀವು ಹೇಳಿದ ಹಾಗೆ ಬಿಡಿ, ಚೆನ್ನಾಗಿರೋರನ್ನು select ಮಾಡ್ತೀರ ಅಂತ ಮನಸಲ್ಲೇ ಅಂದುಕೊಂಡು ಹೊರಟೆ .
ಎರಡು ದಿನದ ನಂತರ ಚಿತ್ರದ ನಿರ್ದೇಶಕರು ಮನೀಷ್ call ಮಾಡಿ ನಾನು select ಆಗಿದ್ದೀನಿ ,meet ಮಾಡಬೇಕು ಅಂದಾಗ ನನಗೆ ನಂಬಲೇ ಆಗಲಿಲ್ಲ. meet ಮಾಡಿದಾಗ ನಂಗೆ ಮನೀಷ್ ಕಥೆ ಹೇಳಿ, ನಂತರ ನಿನಗೆ car ಓಡಿಸಲು ಬರುತ್ತಾ? .ದೇವರು ದೊಡ್ಡವನು ಅನ್ನುವದು ಇದಕ್ಕೆ .ಆಗ ತಾನೇ classಗೆ ಸೇರಿಕೊಂಡಿದ್ದೆ . ಕಲಿತಾ ಇದೀನಿ ಅಂದೆ . ಮನೀಷ್ ಉಫ್ ಎಂದು ನಿಟ್ಟುಸಿರುಬಿಟ್ಟರು. ಹೀಗೆ ಮನೀಷ್ ಜೊತೆ ಮನೀಷೆ ಪ್ರಯಾಣ ಶುರುವಾಯಿತು . ವಸುಧೇಂದ್ರ ಅವರ ಕಥೆಗೆ ಜೀವ ಕೊಡುವ ಪ್ರಯತ್ನಕ್ಕೆ ಕೈ ಹಾಕಿದ್ದೆವು .ಚಿತ್ರ ಹೇಗೆ ಮೂಡಿ ಬರುತ್ತದೆ ಎಂಬುದು ನಮಗೂ ಗೊತ್ತಿರಲಿಲ್ಲ. ಆದರೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂಬ ನಂಬಿಕೆ ಯಿತ್ತು .
ಸ್ವಲ್ಪ ದಿನ ರಿಹರ್ಸಲ್ಗಳು ನಡೆದವು . ಶೂಟಿಂಗ್ locations ಗಳಲ್ಲಿ ಮತ್ತೊಮ್ಮೆ ರಿಹೆರ್ಸಲ್ ನೆಡಯಿತು . ಅಂತೂ ಆ ದಿನ ಬಂದೇಬಿಟ್ಟಿತು . ಅದೇ ಶೂಟಿಂಗ್ ನ ಮೊದಲ ದಿನ . ಕ್ಯಾಮೆರಾ ಎದುರಿಸುವ ಮೊದಲ ದಿನ .ಹೇಗೆ ಮಾಡುತ್ತೇನೆ ,ನಿರ್ದೇಶಕರ expectations ಮುಟ್ಟುತ್ತೇನೆ ಇಲ್ಲವೋ ಎಂಬ ಭಯ ಇತ್ತು. ಆದರೆ ಇದೆಲ್ಲಕಿಂತ ದೊಡ್ಡ ವಿಘ್ನ ವೊಂದು ಕಾದಿತ್ತು. ನನ್ನ ಪತ್ನಿ ಮಾಡುವ ಪಾತ್ರದವಳು ಸಿಕ್ಕಿರಲಿಲ್ಲ . ಒಪ್ಪಿಕೊಂಡವಳು ಬಂದಿರಲಿಲ್ಲ. ಆಮೇಲೆ ಇನ್ನ್ಯಾರನ್ನೋ ಒಪ್ಪಿಸಿ ನಿರ್ದೇಶಕರು ಕರೆದುಕೊಂಡು ಬಂದರು . ಅವಳಿಗೆ ನಿರ್ದೇಶಕರು ನನ್ನ ಪರಿಚಯ ಮಾಡಿಸಿಕೊಟ್ಟ ೫ ನಿಮಿಷದಲ್ಲಿ ಮಾಯವಾದಳು . ಕಾರಣ ನನ್ನ ಮುಖ ಇರ್ಬೇಕು .ಪಾಪ ಅವರು ಜಾನ್ ಅಬ್ರಹಾಂ ತರಹ ನಾಯಕ ಇರುತ್ತಾನೆ ಅಂದುಕೊಂಡಿದ್ದ ರೇನೋ. ನಾನು ಒಳ್ಳೆ ಜಾಲಿ ಮುಳ್ಳು ಕೊಯ್ಯುವ್ವವನ ಹಾಗೆ ಇದ್ದೆ. ಕೊನೆಗೆ ಪ್ರೀತಿ ನಾಯಕಿಯಾಗಳು ಒಪ್ಪಿಕೊಂಡಳು .(ದೊಡ್ಡ ಮನಸ್ಸು ಅವಳದು ).ಶೂಟಿಂಗ್ ಶುರು ಆಯಿತು .
ಮನೀಷೆ ಶೂಟಿಂಗ್ ವೇಳೆಯಲ್ಲಿ ನನಗೇ car ಹ್ಯಾಂಡಲ್ ಮಾಡುವುದೇ ಕಷ್ಟವಾಗಿತ್ತು . .car ಓಡಿಸಿವುದನ್ನು ಕಲಿತ್ತಿದ್ದೆ ಅದರೂ ಮನೀಷೆ ಅಲ್ಲಿ ಉಪಯೋಗಿಸಿದ್ದ car ಬೇರೆ , ಅಲ್ಲಿ ಕಲಿತಿದ್ದ car ಬೇರೆ. ಆದ್ದರಿಂದ car ಸನ್ನಿವೇಶಗಳಲ್ಲಿ ಸಣ್ಣ ಭಯ ಕಾಣಬಹುದು ನನ್ನ ಮುಖದಲ್ಲಿ . ಇನ್ನು ನಂಗೆ ಮನೀಷೆ ಶೂಟಿಂಗ್ ಸಮಯದಲ್ಲಿ ತುಂಬಾ ಕಾಡುವ ದಿನವೆಂದರೆ , ಕ್ಲೈಮಾಕ್ಸ್ ಶೂಟಿಂಗ್ ಮಾಡಿದ ದಿನ. ನಾನು ಅದೆಷ್ಟು ಬಾರಿ ಮುಖ ತೊಳೆದುಕೊಂದಿದ್ದೇನೋ ನನಗೆ ಗೊತ್ತಿಲ್ಲ . ಕ್ಯಾಮೆರಾ ಸ್ವಲ್ಪ ಅಲ್ಲಾಡಿದರೂ ನಾನು ಫ್ರೇಮ್ ನಿಂದ ಹೋಗುವ ಸಾಧ್ಯತೆ ಗಳಿತ್ತು .ಅದಕ್ಕೆ ಸಂತೋಷ್ ಅವರು ಕ್ಯಾಮೆರಾ ಕಣ್ಣಿಗೆ ಅವರು ಬೀಳದ ಹಾಗೆ, ನಾನು frameನ ಆಚೆ ಹೋಗದ ಹಾಗೆ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿದ್ದರು .ನೆನಸಿಕೊಂಡರೆ ನಗು ಬರುತ್ತದೆ . ಈಗಲೂ ನೀವು ನಿರ್ದೇಶಕ ಮನೀಷ್ ಗೆ ಕೇಳಿದರೆ ಅವರು ಕ್ಲೈಮಾಕ್ಸ್ ನನ್ನ ಅಭಿನಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ . ಹೀಗೆ ,ಹೇಗೋ ಎಲ್ಲ ಶೂಟಿಂಗ್ ಮುಗಿದು , ಆಮೇಲೆ ಏನೇನೋ ಸಮಸ್ಯೆಗಳನ್ನೆಲ್ಲಾ ದಾಟಿ ,ಕಿರುಚಿತ್ರ ಬರುವ ಹೊತ್ತಿಗೆ ಸರಿಯಾಗಿ ಒಂದು ವರ್ಷ ಬೇಕಾಯಿತು .
ಮನೀಷೆ ಆಗಲೇ ಹೇಳಿದ ಹಾಗೆ, ನನ್ನ ಮನಸಿಗೆ ಹತ್ತಿರವಾದ ಚಿತ್ರ (ಅನಿರೀಕ್ಷಿತ ಕ್ಕಿಂತಲೂ ).ಯಾಕೆಂದರೆ ಮುಂದಿನ ದಿನಗಳಲ್ಲಿ ನಾನು ಮಾಡಬೇಕೆಂದುಕೊಂಡಿರುವ ಚಿತ್ರಗಳ ಪೈಕಿ ಅದು . ಅಲ್ಲಿ ಕಥೆ ನಾಯಕ ,ಪಾತ್ರಗಳಲ್ಲ . ಮತ್ತೆ ನಿರ್ದೇಶಕ ಮನೀಷ್ ಯಾವುದನ್ನು ವಿವರಿಸಿ ಹೇಳುವುದಿಲ್ಲ. ಪ್ರೇಕ್ಷಕರಿಗೆ ಬಿಟ್ಟು ಬಿಡುತ್ತಾರೆ . ಅದು ತುಂಬಾ ಜನಕ್ಕೆ ಇಷ್ಟವಾಗುವುದಿಲ್ಲ . ಆದರೆ ವ್ಯಯಕ್ತಿಕವಾಗಿ ನಾನು ನಿರ್ದೇಶಕ ಮನೀಷ್ ಶೈಲಿಯನ್ನು ಇಷ್ಟಪಡುತ್ತೇನೆ .ನನ್ನ ಪ್ರಕಾರ ಒಂದು ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಬೇಕು . ಮನೀಷೆ ಆ ನಿಟ್ಟಿನಲ್ಲಿ ಗೆದ್ದಿದೆ . ಕನ್ನಡಿ ನೋಡುವ ಸನಿವೇಶದಲ್ಲಿ ಸರಿಯಾಗಿ ಅಭಿನಯಿಸದೇ ಇರಬಹದು ಆದರೆ ಅಂದು ನಾನು ನನ್ನ ಜೀವನದಲ್ಲಿ ನನ್ನ ನಿಜವಾದ ಪ್ರತಿಬಿಂಬ ಕಂಡೆ.
ಕೊನೆಯದಾಗಿ ಮನೀಷ್ ,ಸಂತೋಷ್ ,ಗಣೇಶ್ ಹಾಗೂ ಮನೀಷೆ ಕಿರುಚಿತ್ರಕ್ಕೆ ಪ್ರೋತ್ಸಾಹ ನೀಡಿದ ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು .
Movie link :
https://www.youtube.com/maneeshe
English Summary :
While splashing water to his face,hero suddenly recognise something.Next instant he lifts his head gently and sees his face in mirror.This time he sees his reflection.And then he shouts at his wife " I got it ". A smile appears in his face .
Everyone who have seen Maneeshe short movie will know this scene.But I am damn sure all of them have not understood this scene. And out of the 70 percent audience who didn't like maneeshe belong to this category .Rest of them , consider maneeshe is an art movie and they expected more of entertainment.I am not against this group.But if u ask me my favourite movie out of anireekshita and maneeshe ,it's always maneeshe .There are many reasons for it .
Maneeshe is first meaningful short movie I did .The day when I gave auditions,I never expected that I would be part of this movie.Because many six pack ,tall handsome guys had attended. In my previous auditons I was always rejected due my short stature and ugly face.But when director Maneesh called me telling I was selected I had to pinch myself in order to check whether it was reality or dream.
I still remember two girls who accepted to do my wife role didn't turn up .May be they saw my face, I guess.They were expecting some John abraham like figure whereas I was more like hobbit .Then Preethi accepted to do role and shooting started.After one year from the day shooting wrapped up , the movie got released.
Well now u guys have seen it and appreciated it .For me it was exciting journey .And in the climax scene even though I have not met the expectations of my director(acting wise ) ,in real life I found my right image .Well thanks for Maneesh ,santosh and ganesh for giving this wonderful opportunity.Thanks to you guys for supporting me.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ