ಈ ಫಿಲಂನವರು ಕ್ಯಾಮೆರಾ ,ಕ್ಯಾಮೆರದೊಳಗೆ ರೀಲ್ ,ನಾಯಕ ಅವನ ಜೊತೆ ಒಂದು ಹೆಣ್ಣು ಜೀವ ನಾಯಕಿ , ಜೊತೆಗೆ ಎರಡೂವರೆ ಘಂಟೆ ,ಕಥೆ ,ಸಂಭಾಷಣೆನಾ ನೂರು ಕಡೆಯಿಂದ ಕದ್ದು ಒಂದು ಕಡೆ ದಬ್ಹಾಕೋ ಒಬ್ಬ ಕಥೆಗಾರ ,ಜೊತೆಗೆ ಒಬ್ಬ ನಿರ್ದೇಶಕ, ಅವನ ದುರುದ್ದೇಶಕ್ಕೆ ದುಡ್ಡು ಹಾಕೋ ದಡ್ಡ ನಿರ್ಮಾಪಕ ಸಿಕ್ಕಿಬಿಟ್ಟರೆ ಎನೇನೊ ಕಥೆ ಬರೆದು ಚಿತ್ರೀಕರಿಸಿ, ರೀಲಲ್ಲಿ ತುಂಬಿಸಿ ರಿಯಲ್ ತರಹ ತೋರಿಸಿ ಬಿಡ್ತಾರೆ . ಮೆದುಳಲ್ಲಿ ರಕ್ತಕಿಂತ ಯೌವ್ವನ ತುಂಬಿ ತುಳುಕಾಡುವ ನಮ್ಮಂತಹ ಹುಡಗರು ಸ್ವಲ್ಪ ಮಟ್ಟಿಗೆ ಅವುಗಳನ್ನು ನಂಬುವುದಂತೂ ನಿಜ . ಹೀಗೆಯೇ ಈ ನಾಯಕ ನಾಯಕಿಯ ಮಧ್ಯೆ ಪ್ರೀತಿ ಹುಟ್ಟುವ ಸನ್ನಿವೇಶಗಳನ್ನು ನಾನು ಬಹಳ ನಂಬಿದ್ದೆ .ತಪ್ಪು ನಂದಲ್ಲ , ನನ್ನ ವಯಸ್ಸಿನದು ಅನ್ನಿ . ನಮ್ಮ ಚಿತ್ರಗಳಲ್ಲಿ ನಾಯಕ ನಾಯಕಿ ಮಧ್ಯೆ ಪ್ರೀತಿ ಹುಟ್ಟುವ ಸನ್ನಿವೇಶಗಳನ್ನು ಒಮ್ಮೆ ನೆನಪಿಸ್ಕೊಳ್ಳಿ .
ಒಂದೇ ಕ್ಷಣದಲ್ಲಿ ,ಮೊದಲ ನೋಟದಲ್ಲಿ ,ಥಟಕ್ಕನೆ, ಪಟಕ್ಕನೇ ಪ್ರೇಮಾಂಕುರವಾಗುತ್ತದೆ .ಆದ್ರೆ ನಿಜ ಜೀವನದಲ್ಲಿ..ನಿಮಗೆ ಏನಾಗಿದೆಯೋ ಗೊತ್ತಿಲ್ಲ ,ಆದರೆ ನನ್ನ ಜೀವನದಲ್ಲಿ ... ಹ ಹ... ನೆನಸಿಕೊಂಡರೆ,ನಗು ಬರುತ್ತೆ . ಕೆಳಗೆ ನಮ್ಮ ಸಿನೆಮಾಗಳಲ್ಲಿನ ಸನ್ನಿವೇಶಗಳು ಹಾಗು ಅದೇ ನನ್ನ ಜೇವನದಲ್ಲಿ ನಡೆದಾಗ ಏನಾಯಿತು ಅನ್ನುವುದನ್ನು ಬರೆದಿದ್ದೇನೆ .
*********************************************************************************.
ನಾಯಕ ಈ ಕಡೆಯಿಂದ ಬರುತ್ತಿರುತ್ತಾನೆ ,ನಾಯಕಿ ಆ ಕಡೆಯಿಂದ ಬರುತ್ತಿರುತ್ತಾಳೆ .ಅವನ ಕೈಯಲ್ಲಿ ಒಂದಿಷ್ಟು ಸಾಮಾನು ,ಅವಳ ಕೈಯಲ್ಲಿ ಒಂದಿಷ್ಟು ಲಗೇಜ್ . ಸ್ಲೋ ಮೋಶನ್ ಅಲ್ಲಿ ಇಬ್ಬರು ಡಿಕ್ಕಿ ಡಮಾರ್ .ನಾಯಕ ನಾಯಕಿ ಜೊತೆಗೆ ಸ್ಲೋ ಮೋಶನ್ ಅಲ್ಲಿ ಬೀಳುತ್ತಾರೆ .ಜೊತೆಗೆ ಅವರ ವಸ್ತುಗಳು .ಆಗ ಎರಡು ಸಾಧ್ಯತೆಗಳು
೧. ನಾಯಕ ನಾಯಕಿ ಇಬ್ಬು ತಮ್ಮ ತಮ್ಮ ವಸ್ತುಗಳನ್ನು ಎತ್ತಿ ಕೊಳ್ಳುತ್ತಿರುತ್ತಾರೆ .ಆಮೇಲೆ..
೨. ನಾಯಕ ,ಬಯ್ಯುತ್ತಿರುವ ನಾಯಕಿಯ ಸಾಮನುಗಳನ್ನು ಎತ್ತಿ ಕೊಡುವಲ್ಲಿ ಬ್ಯುಸಿ ಆಗಿರುತ್ತಾನೆ .ಆಗ ....
ಎರಡರಲ್ಲೂ ಆಮೇಲೆ ಒಂದೇ ತರಹ ಸನ್ನಿವೇಶ . ಹಂಸಲೇಖ ಮ್ಯೂಸಿಕ್ ಹಿನ್ನಲೆಯಲ್ಲಿ , ನಾಯಕಿ ಸ್ಲೋ ಮೋಶನ್ ಅಲ್ಲಿ ತನ್ನ ಕೇಶ ರಾಶಿಯನ್ನು ಎತ್ತಿ ತನ್ನ ಮುಖವನ್ನು ತೋರಿಸುತ್ತಾಳೆ .ಆಗ ಮತ್ತೆ ಎರಡು ಸಾಧ್ಯತೆಗಳಿವೆ .
೧.ನಾಯಕನಿಗೆ ಮಾತ್ರ ನಾಯಕಿ ಮೇಲೆ ಲವ್ .(ಅವನು ದುನಿಯಾ ವಿಜಿ ರೇಂಜ್ ಗೆ ಇದ್ದರೆ )
೨. ನಾಯಕ ನಾಯಕಿಗೆ ಇಬ್ಬರಿಗೂ ಲವ್ @ ಮೊದಲ ನೋಟ .( ನಾಯಕ್ ದಿಗಂತ್ ರೇಂಜ್ ಗೆ ಇದ್ದರೆ)
ನಾಯಕಿಯೇನು ಐಶ್ವರ್ಯ ತರಹ ಇರಬೇಕಂತ ಇಲ್ಲ .ಬರೆಗೆಟ್ಟ ಯುವಕರಿಗೆ ಶೇಖಡಾ 99ರಷ್ಟು ಹುಡುಗಿಯರು ಚೆನ್ನಾಗಿ ಕಾಣಿಸುತ್ತಾರೆ .ಕೆಲವೊಂದು ಸಿನೆಮಾಗಳಲ್ಲಿ ಸ್ವಲ್ಪ ಚೇಂಜ್ ಇರಲಿ ನಾಯಕ ನಾಯಕಿಯನ್ನು ಗಾಡಿಯಲ್ಲಿ ಕೂರಿಸುತ್ತಾರೆ .ಮಜಾ ಏನಪ್ಪಾ ಅಂದರೆ ನಾನು ಇವೆಲ್ಲ ನೋಡಿ ನಿಜ ಅಂತ ಸೀರಿಯಸ್ ಆಗಿ ನಂಬಿದ್ದೆ .ನಂಗೂ ಯಾರಾದರೂ ಡಿಕ್ಕಿ ಹೊಡೆದರೆ ಈ ತರಹದ್ದೆ ಆಗುತ್ತೆ ಅಂತ ಕನಸು ಕಂಡಿದ್ದೆ .ಆದರೆ ಆಗಿದ್ದೆ ಬೇರೆ .ಕನಸು ಕಂಡಿದ್ದು ರವಿಚಂದ್ರನ್ ಸಾಂಗ್ ,ಆಗಿದ್ದು ಮಾತ್ರ ದುನಿಯಾ ending.
ನಾನು ಓದುತ್ತಿದ್ದ ಕಾಲೇಜ್ ನಲ್ಲಿ ಲೈಬ್ರರಿ ಇದೆ ಅಂತ ಗೊತ್ತಾಗಿದ್ದೆ ಒಂದು ವರ್ಷ ಆದ ಮೇಲೆ .ಆದಾದ ಮೂರು ವರ್ಷದ ನಂತರ ಅದಿರುವ ದಿಕ್ಕು ಗೊತ್ತಾಗಿ ಹೋಗುವ ದೊಡ್ಡ ಮನಸು ಮಾಡಿದ್ದೆ . ಹೋದಾಗ ಆಗಿದ್ದೆ ಈ scene. ಮೊದಲ ಸಲ ಎಂಟ್ರಿ ಹೊಡೆದಿದ್ದರಿಂದ ಲೈಬ್ರರಿ ಅಲ್ಲಿ ಯಾವ ಕಡೆಯೇನಿದೆ? ಎಲ್ಲಿಗೆ ಹೋಗಬೇಕು ?ಅನ್ನುವುದು ಗೊತ್ತಗದೇ , ಬಯಲು ದಾರಿ ಕಲ್ಪನಾ ತರಹ ಹೋಗುತ್ತಿದ್ದೆ . ಎದುರಿಗೆ ಅರ್ಧ ಡಜನ್ ಬುಕ್ ಹೊತ್ತುಕೊಂಡು ಬರುತ್ತಿದ್ದ ಹುಡುಗಿ ನೋಡದೆ ಡಮಾರ್ ಅಂತ ಡಿಕ್ಕಿ ಹೊಡೆದೆ .ಆಮೇಲೆ ಎಲ್ಲ ಸ್ಲೋ ಮೋಶನ್ .ನಾನು ಬಿದ್ದ ಬುಕ್ ತೆಗೆಯಲು ಬಗ್ಗಿದೆ .ಅವಳು ಸ್ಲೋ ಮೋಶನ್ ಅಲ್ಲಿ ತನ್ನ ಕೂದಲನ್ನು ಸರಿಸಿ ...ಅಮೇಲೆ ಹಿಗ್ಗಾಮುಗ್ಗ ಧಾರವಾಡ ಭಾಷೆಯಲ್ಲಿ ಉಗಿದಳು . ನಾನು ಕರ್ಚೀಫ್ ಇಲ್ಲದ ಕಾರಣ ಕೈಯಲ್ಲಿ ಮುಖ ಒರೆಸಿಕೊಳ್ಳುತ್ತಿದ್ದೆ .ಅವಳ ಸೌಂಡಿಗೆ ನಮ್ಮ ಲೈಬ್ರರಿಯನ್ ಬಂದು ಅವಳನ್ನು ಸಮಾಧಾನ ಮಾಡಿಸಿ ಬಾಯೋ ಮುಚ್ಚಿಸುವ ಬದಲು , ಯಾವತ್ತು ಲೈಬ್ರರಿ ಯಲ್ಲಿ ನನ್ನ ಮುಖ ನೋಡದ ಕಾರಣ ನಾನೇ ಪೋಲಿ ಕೆಲಸ ಮಾಡಿದ್ದೇನಿ ಅಂದುಕೊಂಡು ಕ್ಯಾಕರ್ಸಿ ಉಗಿದ . ಅಲ್ಲಿಗೆ “ಪ್ರಥಮ ಡಿಕ್ಕಿ , ಉಗುಳಿಂದ ಅಭಿಷೇಕ ಆಗಿರೋ ಮುಖ ತೊಳೆಕೋ ತಿಕ್ಕಿ “ಅಂದ ಹಾಗೆ ಆಯಿತು ....
************************************************************************
ಇನ್ನು ಈ ಫಿಲಂಗಳಲ್ಲಿ ಇನ್ನೊಂದು ತರಹ ಲವ್ ಹುಟ್ಟುತ್ತೆ . Faceless ಲವ್ ಸ್ಟೋರಿ .ಅಂದರೆ ಮುಖ ನೋಡದೇ ಒಬ್ಬರಿಗೊಬ್ಬರು ಏಳು ಜನಮಕ್ಕು ಒಬ್ಬರಿಗೊಬ್ಬರನ್ನು ಬುಕ್ ಮಾಡಿಕೊಳ್ಳುವ ಲವ್ ಸ್ಟೋರಿ . ಒಂದಾ ನಾಯಕ ನಾಯಕಿ ಮೊಬೈಲ್ ಫೋನ್ ಎಕ್ಸ್ಚೇಂಜ್ ಆಗಿ ಕೊನೆಗೆ ಅದನ್ನು ವಾಪಸ್ಸು ಮಾಡುವ time ಅಲ್ಲಿ ನಮ್ಮ ಮನ್ಮಥ ರಾಜ ಬಾಣ ಬಿಟ್ಟಿರುತ್ತಾನೆ . ಇಲ್ಲಾ ಒಬ್ಬರಿಗೊಬ್ಬರು ಪತ್ರ ಬರ್ಕೊಂಡು ಅಥವಾ ಮೊಬೈಲ್ ಫೋನ್ ಅಲ್ಲಿ ಮಾತಾಡಿಕೊಂಡು ಅಥವಾ ಮೆಸೇಜ್ ಮಾಡಿಕೊಂಡು ಸಪ್ತ ಪದಿ ತುಳಿಯೋ ರೇಂಜ್ ತನಕ ಬಂದು ಬಿಡ್ತಾರೆ . ನಾನು ಅದಾದರೂ ಆಗುತ್ತಾ ಅಂದುಕೊಂಡಿದ್ದೆ . ಅದು ಆಗ್ಲಿಲ್ವೇ . ಅಲ್ಲ ಪತ್ರ ಬರೆದು ನಾನು ಹುಡುಗಿಯನ್ನು ಪಟಾಯಿಸುವ ಮಾತೇ ಇಲ್ಲ ಬಿಡಿ .ಯಾಕಂದ್ರೆ ನನ್ನ ಅಕ್ಷರ ಅದೆಷ್ಟು ಕೆಟ್ಟದ್ದು ಆಗಿದೆಯಂದರೆ ಬರೆದ ೫ ನಿಮಿಷದ ನಂತರ ನನಗೇ ಅದು ಯಾವ ಭಾಷೆ ಅಂತ ಅರ್ಥ ಆಗೋಲ್ಲ .ಇನ್ನು ಆ ಹುಡುಗಿ ಹುಚ್ಚಿ ಯಾಗಿ hospital ಗೆ ಸೇರಬೇಕು ಅಷ್ಟೇ.
ಆದ್ರೆ ಒಂದು ಸಲ ನನ್ನ ಫೋನ್ ಎಕ್ಸ್ಚೇಂಜ್ ಆಯಿತು. ಆದರೆ meet ಆದಾಗ ಗೊತ್ತಾಗಿದ್ದು, ಆ ಕಡೆ ವ್ಯಕ್ತಿ ಪುಲ್ಲಿಂಗ ಅಂತ . ಹಣೆ ಬರಹಕ್ಕೆ ಹೊಣೆ ಯಾರು .?ಇನ್ನು ಗ್ರಹಚಾರ ಅಂದರೆ, ಆ ಪುಲ್ಲಿಂಗ ನನ್ನ ಹಿಂದೆ ಬಿದ್ದಿದ್ದು, ಕೊನೆಗೆ ನಾನು “ ಆ ತರಹದವನಲ್ಲ “ ಅಂತ ಹೇಳಿ ಬಚಾವಾಗಿದ್ದು .
ಇನ್ನೂ ಇದೆ .....
English summary :
These movie makers fill the reels of camera in such a way , we tend to feel that those are real.I always used to get carried away with romantic movies or romantic scenes in our Indian cinemas. Have u seen those Yash raj romantic movies or Sharukh khan movies or any other romantic Indian movies?Just imagine.There hero and heroin falls in love at first sight ,within a second, sometimes even in strange places .As the testosterone pumping in my body has not found its female hormone yet , I always used to believe these filmy scenes may occur in my life and I may also fall in love. I believed in the famous dialogue in bollywood " pyar ho jaata hai ".But when the same scenes occurred in my life it was entirely different.
Lets imagine the typical scene .Hero carrying some luggage coming in one direction and heroin carrying some luggage coming in another direction.Then out of all the people in the universe these two people hit each other and they fall .Now both starts to pick the things which fell.And then comes the typical Indian movie scene.Heroin lifts her hair in slow motion and hero sees the heroin .That s it love begins.But when the same scene happened in my life ,it was funny .Once I accidentally I hit a girl in library.All the books she was carrying fell .Next......She scolded me in typical dharwad style.It can only be experienced not expressed.
In most of our movies ,another type of love story is "Face less story ".Hero and heroin never see each other but they fall in love just by writing letters,sending texts through mobile or just chatting in social website.There is no chance of girl falling in love by reading my hand written letter .Because my handwriting is so good ,even I can't make out which language it is after five minutes.
to be continued............

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ