ಸೂಚನೆ :ಇಲ್ಲಿ ಬರುವ ಎಲ್ಲಾಪಾತ್ರಗಳು ಕೇವಲ ಕಾಲ್ಪನಿಕ .ಅದರಲ್ಲೂ ನನ್ನ character ಸುಮ್ನೆ ತಮಾಷೆಗೆ .ನಾನು ತುಂಬಾ ಒಳ್ಳೆಯವನು .ಇದನ್ನು ಓದಿ ಮಹಿಳಾಭಿಮಾನಿಗಳು ತಪ್ಪು ತಿಳಿಯದಿದ್ದರೆ ಸಾಕು .ಇನ್ನು ಯಾವುದೇ ಪಾತ್ರ ,ನಿಮಗೆ ಹೋಲಿಕೆಯಾಗಿದ್ದಲ್ಲಿ ,ಅದು ನಿಮ್ಮ ಹಣೆಬರಹ
Valentines day ಭಾಗ ೧:ಚಡ್ಡಿ ಗೆ ಬೈ ಬೈ, ಪ್ಯಾಂಟ್ ಗೆ ಹಾಯ್ ಹಾಯ್
ಈ ಹಾಳಾದ ದೇಹದೊಳಗೆ ಸಿಕ್ಕಾಪಟ್ಟೆ produce ಆಗೋ harmones ಗಳ ಫಲವೇನೋ,ಅಥವಾ ನಮ್ಮ ಗುರು ರವಿಚಂದ್ರನ್ ಫಿಲಂ ಗಳ side effectಅ ಅಥವಾ ಅವಳೋ...ನನಗೇನೋ ಅದೆಕ್ಕೆಲ್ಲಾ ಕಾರಣ ಅವಳೇ ಇರಬೇಕು ಅನ್ನಿಸುತ್ತೆ ... .ಮತ್ತಿನ್ನೇನು? ಹತ್ತನೇ class ಅಲ್ಲಿ,ತಲೆಗೆ ಹೊಕ್ಕದೆ ಇರೋ BIOLOGY subjectಅನ್ನು ಉರುವು ಹೊಡೆಯೋ ಮುಂಚೇನೆ ನಮಗೆ ಹೆಂಗೆಂಗೋ ಆಗ್ತಾ ಇತ್ತು ಅಂದ್ರೆ ಅದೆಕೆಲ್ಲಾ ಅವಳ ಮಾಯೆಯೇ ಕಾರಣ . "ಹೆಂಗೆಂಗೋ ನಾ . ಹಾಗಂದ್ರೆ?"ಅಂತ ಕೇಳ್ತೀರಾ ಅಂತ ಗೊತ್ತು .ಆ ಭಾವನೆಗಳಿಗೆ ಸ್ಪಷ್ಟವಾಗಿ ಒಂದು ರೂಪು ಕೊಡೋದು ಅಥವಾ ಅರ್ಥ ಕೊಡೋದು ಕಷ್ಟ ಕಾಣ್ರೀ .ಯಾಕಂದ್ರೆ ಆಗ ತಾನೇ ನಮಗೆ ಅದು ಮೊದಲ ಮೆಟ್ಟಿಲು ,ಮೊದಲ ಕನಸು ,ಮೊದಲ ಪ್ರೇಮ ,ಮೊದಮೊದಲು ಸ್ಕೂಲ್ ಅಲ್ಲಿ pant ಬೇರೆ .ಪ್ರೇಮ ಅನ್ನುವುದಿಕ್ಕಿಂತಲೂ ಬಹುಶಃ ಅದನ್ನು crush ಅಂತ ಕರೆದರೆ ಸೂಕ್ತ ..ಎಲ್ಲಾ ಮೊದಲಾಗಿದ್ದರಿಂದ ,ಎಲ್ಲಾ ಅನುಭವಗಳು ಹೊಸತು .ಹತ್ತನೇ class ಆದ್ರೂ ಕೂಡ , ಈ ವಿಷಯದಲ್ಲಿ ನಾವು ಆಗಿನ್ನೂ lkg .
ಇರಲಿ ಬಿಡಿ, ಆ ಹುಡುಗಿ ವಿಷ್ಯಕ್ಕೆ ಬರೋಣ .ಹುಡುಗ ಹುಡುಗ ಅಥವಾ ಹುಡುಗಿ ಹುಡುಗಿ ಒಟ್ಟಿಗೆ ಕೂತರೆ ಗಲಾಟೆ ಮಾಡ್ತಾರೆ ಅಂತ, ಹುಡುಗ ಹುಡುಗಿನ ಜೊತೆಗೆ ಕೂರಿಸೋರು ನಮ್ಮmiss .ನಮ್ಮ height ಗೆ ಅವಳ height ಸರಿಯಾಗುತ್ತಿದ್ದರಿಂದ ನನ್ನ ಪಕ್ಕದಲ್ಲೇ ಅವಳನ್ನು ಕೂರಿಸುತ್ತಿದರು .ನಾನು ಅವಳು ಎಷ್ಟು close ಅಂತೀರಾ ?ನಾನು ,ಅವಳುperiodಗಳ ಮಧ್ಯೆ ಮಾತಾಡೋದೇನು.ಅವಳ ಮನೆಯಿಂದ ನಂಗೆ ತಿಂಡಿ ತಂದು ಕೊಡೋದೇನು.ನಾನು pen ತಂದಿದ್ದರೂ ಅವಳ ಹತ್ತಿರ pen ಇದೀಯ ಅಂತ ಕೇಳೋದೇನು .ನನ್ನ ಕವನ ಓದಿ ಅವಳು ನನ್ನ ಹೊಗಳುವುದೇನು .Homework ಮಾಡೋಕೆ ಅಂತ ಅವಳ ಮನಗೆ ಹೋಗೋದೇನು .ಕಾಲಲ್ಲಿ ಹೊಡೆದಾಡಿ ಕೊಳ್ಳೋದೇನು.ಪುಸ್ತಕದ ಕೊನೆ ಪುಟಗಳಲ್ಲಿ ಚುಕ್ಕಿ ಚುಕ್ಕಿ ಆಟ ಆಡೋದೇನು ,ಚಿತ್ತಾರಗಳನ್ನು ಬರೆಯೊದೇನು.ಕೇಳಬೇಡಿ ನಮ್ಮ ಆಟ . ಹೀಗೆ ಸಾಗುತ್ತಿದ್ದಾಗ ಮನೆಹಾಳ ಗೆಳಯನೊಬ್ಬ ಕಿವಿಗೆ ಪೀಪಿ ಊದಿದ "ಇದು ಅದೇ ".ನಾನು"ಅದೆ ಅಂದ್ರೆ ಏನೋ ?"ಅಂತ ಕೇಳಿದೆ ."ಲೋ ಅದೇ ಕಾಣೋ ಫಿಲಂ ಅಲ್ಲಿ hero heroin ಮಾಡಲ್ವಾ ......."ಮುಂದೆ ಹೇಳ್ಬೇಕಾ ನಿಮಗೆ .
ಥತ್.. ಅದೇನು ತಲೆಗೆ ಹುಳ ಬಿಟ್ಟನೋ , ಹಾವಾಗಿ ಅಲ್ಲೇ ಹುತ್ತ ಮಾಡಿಕೊಂಡು ಬುಸ್ಸ್ ಬುಸ್ಸ್ ಅನ್ನೋಕೆ ಶುರು ಇಡ್ತು .ನನ್ನ ಮಗಂದು ಮಾತು ಕೇಳಿ ಈ valentines day ಗೆ ಅವಳಿಗೆ propose ಮಾಡೋಣ ಅಂತ decide ಆಗಿಬಿಟ್ಟೆ .ಆಗಿನ್ನೂ ಮೊಬೈಲ್ ಎಲ್ಲ ಇರಲಿಲ್ಲ .ರಾತ್ರಿ ಎಲ್ಲ ರವಿಚಂದ್ರನ್ ಮಲ್ಲ song ನೋಡಿ ,ಬೆಳಗ್ಗೆ ಒಂದು ಕವನ ಬರೆದು valentines dayಗೆ ready ಆದೆ .ಬರೆಯೋದೇನೋ ಬರೆದೆ ,ಕೊಡೋದು ಹೇಗೆ ? Notes ಅಲ್ಲಿ ಇಟ್ಟು ಕೊಡ್ಲಾ? ತಿಂಡಿ box ಅಲ್ಲಿ ಇಡ್ಲಾ ? chocolate ಅಂತ ಕೊಟ್ಟು ಅದರ cover ಒಳಗೆ ಇಡ್ಲಾ ?ಅಥವಾ separate ಆಗಿ ಕರೆದು ಪ್ರೇಮ ನಿವೇದನೆ ಮಾಡಿಕೊಳ್ಳಲಾ ?ಥತ್ ..ಅವತ್ತು ಪಾಠ ಕೇಳೋದು ಬಿಟ್ಟು ಇದೇ ಚಿಂತೆ.
ಹೀಗೆ ನನ್ನದೇ ಕನಸ್ಸಿನ ಲೋಕದಲ್ಲಿ ಮುಳಗಿ ಹೋಗಿದ್ದಾಗ ತಕ್ಷಣ "you ..get up "ಅಂತ ಕೂಗಿದ್ದು ಕೇಳಿಸಿತು .ನಂಗೆ ಯಾರೋ ಕೂಗುತ್ತಾ ಇದ್ದಾರೆ ಅಂತ ವಾಪಾಸ್ ವಾಸ್ತವಕ್ಕೆ ಬಂದ್ರೆ ,ಅಲ್ಲಿ ಕಥೇನೆ ಬೇರೆ .ಯಾವ್ದೋ ನಮ್ಮಕ್ಲಾಸ್ ಹುಡುಗ ಕಾಶೀನಾಥ್ ಫಿಲಂ ಜಾಸ್ತಿ ನೋಡಿದ್ದ ಅನಿಸುತ್ತೆ .ನಮ್ಮನ್ನೂ ಮೀರಿ ಅದಾಗಲೇ ಒಂದು ಹುಡುಗಿಗೆ love letter ಜೊತೆಗೆ "kismi" chocolate ಕೊಟ್ಟಿದ್ದ. ಆ ಹುಡುಗಿ chocolate ತಿಂದು ,ಆಮೇಲೆ principal ಹತ್ತಿರ ಗೊಳೋ ಅಂತ ಅತ್ತಿದ್ದಳು .Principal ಕ್ಲಾಸ್ ಗೆ ಬಂದು ಆ ಹುಡುಗನಿಗೆ "ನೆಟ್ಟಗೆ pant ಗೆ zip ಹಾಕೋಕೆ ಬರೋಲ್ಲ ,ಇಂತಹ ಕೆಲಸ ಮಾಡ್ತೀಯಾ?"ಅಂತ ಕೆಪ್ಪಗೆ ನಾಲ್ಕು ಬಾರಿಸಿ .ಎಳೆದುಕೊಂಡು ಹೋಗಿ class ಮುಂದೆ ಮಂಡಿಯೂರಿ ಕೂರಲು ಹೇಳಿದರು .ಇದ್ದನ್ನೆಲ್ಲಾ ನೋಡುತ್ತಿದ್ದ ನಂಗೆ ಅಲ್ಲೇ fuse out .ತಲೆಯಲ್ಲಿ ಇದ್ದ ಹಾವು ,ಹಾಗೆ pant ಇಂದ ಕಳಗೆ ಜಾರಿ ಹೋಯ್ತು .So ಅಲ್ಲಿಗೆ ನಮ್ಮ class ನಲ್ಲಿ ಹುಡುಗ ಹುಡುಗಿಯರನ್ನು ಒಟ್ಟಿಗೆ ಕೂರಿಸುವುದು ನಿಲ್ಲಿಸಿದರು .ಹಾಗೆ ನಮ್ಮಮೊದಲ valentine s day ಕಥೆನೂ ಮುಗಿಯಿತು .
ಇನ್ನೂ ಇದೆ..... ಪ್ಯಾಂಟ್ ಹಾಕಿಕೊಳ್ಳೋದು ಅಭ್ಯಾಸ ಆದ್ಮೇಲಿನ ಕಥೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Ondalla Erdalla Kannada Movie Review
ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...
-
ಹಳೇ ವರ್ಷ ಮುಗಿದು ,ಹೊಸ ವರ್ಷ ಬರುವ ಸಂಭ್ರಮ.ಎಲ್ಲರೂ ಸಂಭ್ರಮದಲ್ಲಿ ಮುಳುಗಿ, ಹಳೇದನ್ನು ನೆನಪಿನ ಬುತ್ತಿಯಲ್ಲಿ ಗಟ್ತಿಕೊಂಡು ,ಹೊಸದನ್ನು ಕೈ ಬೀಸಿ ಕರೆಯುತ್ತಿದ್ದಾರೆ...
-
ಇಂತಹ ಘಟನೆಗಳು ಬರೀ ನನ್ನ ಜೀವನದಲ್ಲಿ ನಡೆಯುತ್ತದೋ ಅಥವಾ ಎಲ್ಲರ ಜೀವನದಲ್ಲಿ ನಡೆಯುತ್ತದೋ ಗೊತ್ತಿಲ್ಲಾ.ನಾನು ಒಂಟಿ ಗೂಬೆ ,ಬೇರೆಯವರೆಲ್ಲಾ ಜೋಡಿ ಹಕ್ಕಿಗಳು ಎಂ...
-
ಗಾಬರಿಯಿಂದ ಮುಖ ತೊಳೆಯುತ್ತಿರುವ ನಾಯಕನಿಗೆ ಏನೋ ಅರಿವಾದಂತಾಗಿ , ಮೆಲ್ಲಗೆ ತನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾನೆ .ಈ ಸಲ ಅವನಿಗೆ ತನ್ನ ಪ್ರತಿಬಿಂಬ ಕಾಣ...
Hi Shravan,
ಪ್ರತ್ಯುತ್ತರಅಳಿಸಿarticle is really awesome.
Today I came to know about your blog through Facebook. And your blog is bookmarked in my browser :).
You are really very talented and the use of words in your article are next to none.
Keep it up.
And Whatever you told about "NAGEPAATALU" is very true.
Keep writing....
By the way, if you remember, i am your senior in BDT college (E & I Branch).
Rgds
Harsha
@harsha banakar: thanku so much..I am very happy ..I try my level best...
ಪ್ರತ್ಯುತ್ತರಅಳಿಸಿ