ಸದಾ ನಗಿಸುವುದು ಅಥವಾ ನಗುವುದರಲ್ಲಿ ಚರ್ಚಿಸಿವುದು ಏನಿದೆ ಎಂದು ನಿಮಗೆ ಅನ್ನಿಸಬಹುದು .ನಕ್ಕರದೇ ಸ್ವರ್ಗ,ನಕ್ಕರೇ ಅರೋಗ್ಯ .ನಗು ನಗುತ್ತಾ ಇರಿ ಎಂದು ಶಾಲಾ ಪುಸ್ತಕದಿಂದ ಹಿಡಿದು ಅಂತರಜಾಲಗಳವರೆಗೂ,ಅಜ್ಜಿಯಿಂದ ಹಿಡಿದು ವೈದ್ಯರವರೆಗೂ ಹೀಗೆ ಏಲ್ಲಾ ಕಡೆ ನೋಡುತ್ತಲೇ ಇರುತ್ತೇವೆ ಅಥವಾ ಎಲ್ಲರ ಬಾಯಲ್ಲೂ ಕೇಳುತ್ತಲೇ ಇರುತ್ತೇವೆ.ಈಗಂತೂ ಜನರು ನಗೋದನ್ನೇ ಮರೆತು ಹೋಗಿ , ಲಾಫಿಂಗ್ ಕ್ಲಬ್ ಅಂತ ಮಾಡಿಕೊಂಡು ದುಡ್ದು ಕೊಟ್ಟು ನಗೋ ಜಮಾನ . ಆಂತ ಸಮಯದಲ್ಲಿ ನಾವು ಬೇರೆಯವರನ್ನು ಸದಾ ನಗಿಸುವುದು ,ಅದು ಬಿಟ್ಟಿ ಒಂದು ಥರಹ ಪುಣ್ಯಕರವಾದ ಕೆಲಸವಲ್ಲವೇ?ನಗಿಸುವುದು ಒಳ್ಳೆಯದೇ. ಹೀಗೆ ಇವೆರಡರಲ್ಲೂ ಎರಡನೆಯ ಮಾತಿಗೆ ಅವಕಾಶವೇ ಇಲ್ಲದಿರುವುದರಿಂದ ಇಲ್ಲೂ ಅದೇ ಪಿಟೀಲು ಬಾರಿಸುತ್ತಾನೆ ಎಂದುನಿಮಗೆ ಭಾಸವಾಗಬಹುದು . ಇಲ್ಲಿ ನಾನು ನಗುವವರ ಅಥವಾ ನಗುವುದರ ಬಗ್ಗೆ ಹೇಳಲು ಹೊರಟಿಲ್ಲಾ. ಇಲ್ಲಿ ನಗಿಸುವವರ ಲೋಕದ ಒಳಗಿರುವ ನೋವು ಹಾಗೂ ಅದರ ಹೊರಗಿನ ಜನ ಅಂದರೆ ಅವರನ್ನು ನೋಡಿ ನಗುವವರ ನಗುವಿನ ಬಗ್ಗೆ ನನಗನ್ನಿಸಿದ್ದನ್ನು ಹೇಳಲು ಪ್ರಯತ್ನಿಸಿದ್ದೇನೆ.ಆದ್ದರಿಂದ ನಗುವವರು,ನಗಿಸುವವರು ಎಲ್ಲರೂ ಓದಬಹುದು .
ನಗಿಸುವವರ(ಅದರಲ್ಲೂ ನಾನು ಒಬ್ಬ ) ಶಕ್ತಿಯೇ ಹಾಗೆ .ಎಲ್ಲಿಯೇ ಆದರೂ ಸರಿ ,ಎಲ್ಲಾದರು ಸರಿ ಯಾರನ್ನಾದರೂ ಮಾಯೆ ನಮಗಿರುತ್ತದೆ. ಕೆಲವೊಮ್ಮೆ ನಾವು ದುಃಖದ ಕಪಿ ಮುಷ್ಟಿಯಲ್ಲಿ ಇದ್ದರು,ಬೇರೆಯವರಿಗೆ ನಗುವೆಂಬ ಅಮೃತ ಉಣಿಸುವದರಲ್ಲಿ ಮಗ್ನರಾಗಿ ಬಿಡುತ್ತೇವೆ. ನಗುವವರಿಗಾದರೂ ಅಷ್ಟೇ ನಮ್ಮೊಂದಿಗೆ ಇದ್ದಾಗ ಅವರ ನೋವು,ಒತ್ತಡಗಳಿಗೆ ನಗುವೆಂಬ ಟಾನಿಕ್ ಸಿಗುತ್ತದಲ್ಲಾ ಅದಕ್ಕೆ ನಮ್ಮ ಸಂಗಡ ಅವರಿಗೆ ಮಂಡಿಗೆ ಊಟ ಇದ್ದ ಹಾಗೆ.ಅವರ ಸಮಯವನ್ನು ನಾವು ಕಳಿಯುವುದಲ್ಲಾ ,ಓಡಿಸುತ್ತೇವೆಽ ಆದರೆ ಇವೆಲ್ಲಾ ಎಷ್ಟರ ಮಟ್ಟಿಗೆ ಚೆನ್ನ?ನಾವು ಅವರ ಬೇಜಾರು ಆದಾಗ ಕೀಲಿ ಕೊಟ್ಟು ಮಜಾ ತೆಗೆದು ಕೊಳ್ಳುವ ಗೊಂಬೆ ಯಾಗದೇ ಇರುವ ತನಕ. ಕೆಲವೊಂದು ಉದಾಹರಣೆ ನನ್ನ ಹಾಗು ನಾನು ನೋಡಿರುವ ನನ್ನಂತೆ ನಗಿಸುವ ಜನಗಳ ಬದುಕಿಂದ.
* . ನಾನು ಜಾಸ್ತಿ ನನ್ನನ್ನು ಶಾಲೆಯಿಂದಲೂ ಕಾಲೇಜಿನವರೆಗೂ ಸ್ವಲ್ಪ ನಾಟಕ ,ಏಕಪಾತ್ರಭಿನಯದಲ್ಲಿ ಜಾಸ್ತಿ ತೊಡಗಿಸಿ ಕೊಂಡಿದ್ದರಿಂದ ,ಅದರಲ್ಲೂ ಸ್ವಲ್ಪ ಹಾಸ್ಯಕ್ಕೆ ಜಾಸ್ತಿ ಒತ್ತು ಕೊಟ್ಟಿರುವುದರಿಂದ ಜನ ನನ್ನ ತಪ್ಪು ತಿಳಿಯುವುದು ಜಾಸ್ತಿ .ಆದರಲ್ಲೂ ಕೆಲವೊಮ್ಮೆ ನಾನು ಒಂದು ಹಾಸ್ಯದ ವಸ್ತು ಎಂದು ಪರಿಗಣಿಸಿದಾಗ ಬೇಜಾರಾಗುತ್ತದೆ.ಒಮ್ಮೆ ಗೆಳಯನೊಬ್ಬ ತುಂಬಾ ದಿನಗಳ ನಂತರ ಫೋನ್ ಮಾಡಿದ್ದ
"ಲೋ ಶ್ರವಣ್ ಹೇಗಿದ್ಯಾ?"
"ಚೆನ್ನಾಗಿದೀನಿ,,ನೀನು ಏನು ಸಮಚಾರ "
" ಎನು ಇಲ್ಲ ಹೀಗೆ ಮಾಡಿದೆ.ಸಿಕ್ಕಾಪಟೆ ಬೋರು ಆಗ್ತಾ ಇತ್ತು ಅದಕ್ಕೆ ನಿಂಗೆ ಮಾಡಿದೆ"
"ಎನು"
"ನೀನು ತಮಾಷೆ ಅಲ್ವಾ? ಅದಕ್ಕೆ ಎನಾದರು ಜೋಕ್ ಮಾಡು"
ಇದು ಹೇಗೆ ಅಂದರೆ ಅವನು ಡ್ಯಾನ್ಸ್ ಬಾರ್ ಗೆ ಬಂದಿರುವ ಗಿರಾಕಿ,ಅವನು ದುಡ್ದು ಎಸೆದಾಗ ಕುಣಿಯುವ ನರ್ತಕಿ ನಾನು.ಈಗ ಅವನಿಗೆ ಬೇಜಾರು ಆಗಿದೆ.ನಾನು ಕುಣಿಬೇಕು.ನಾನು ಯಾವ ಪರಿಸ್ಥಿತಿ ಯಲ್ಲಿದೀನಿ ಅವನಿಗೆ ಬೇಡ.ನಾನು ಕುಣಿಬೇಕು ಅಷ್ಟೇ.
*ಬೆಂಗಳೂರಿನಲ್ಲಿರುವ ನನ್ನ ಬಾಲ್ಯದ ಗೆಳೆಯನೊಬ್ಬನ ಮನೆಗೆ ಹೋಗಿದ್ದೆ.ಆವನು ಹಾಗೂ ಅವನ ಎಂಜನೀಯರಿಂಗ್ ಕಾಲೇಜ್ ನ ಗೆಳೆಯರು ಸೇರಿ ಮನೆ ಮಾಡಿದ್ದರು.ಕೆಲವರಿಗೆ ಕೆಲಸ ಸಿಕ್ಕಿತ್ತು.ಕೆಲವರಿಗೆ ಇಲ್ಲ . ಆ ಸಿಗದ ಗುಂಪಿನಲ್ಲಿ ನನ್ನ ಗೆಳೆಯನು ಒಬ್ಬ .ವಾರಾಂತ್ಯ ಬಂತು ಎಂದರೆ ಸಾಕು ಎಲ್ಲರು ಸೇರಿ ಮನೆಯಲ್ಲಿ ಬಾರ್ ಓಪನ್ ಮಾಡಿಯೇ ಬಿಡುತ್ತಾರೆ.ಅದರಲ್ಲಿ ಯಾರೂ ಕುಡಿಯದಿದ್ದರೂ ಸರಿ ನನ್ನ ಗೆಳೆಯನಿಗೆ ಮಾತ್ರ ಕುಡಿಸದೇ ಬಿಡುವುದಿಲ್ಲಾ.ಕಾರಣ ಕುಡಿಯದ ನಾನೂ ಅ ದಿನ ಅವರು ಕುಡಿಯುವುದನ್ನು ನೋಡಿದಾಗ ತಿಳಿಯಿತು.ಯಾಕಂದರೆ ನನ್ನ ಗೆಳೆಯ ಕುಡಿದಾಗ ರತ್ನನ ಹಾಗೆ . ಕುಡಿದಾಗ ಅವನ ಮಾತಿಗೆ,ಅಟಾಟೋಪ ಉಲಿದವರಿಗೆ ಕಿಕ್ ಕೊಡುತಿತ್ತು.ಇಂದಿಗೂ ಆತ ಕೆಲಸ ಹುಡುಕಿಕೊಂಡಿಲ್ಲಾ ,ಆದರೆ ಆವರೆಲ್ಲಾ ಮುಂದೆ ಹಾಸ್ಯಾಸ್ಪದವಾಗಿಯೇ ಉಳಿದಿದ್ದಾನೆ.
*ನನ್ನ ಕಾಲೇಜಿನಲ್ಲಿ ಕ್ಯಾಂಪಸ್ ನಲ್ಲಿ ಕಂಪನಿಯೊಂದಕ್ಕೇ ಅಯ್ಕೆ ಆದಾಗ,ನನ್ನ ಗೆಳೆಯರಿಗೆಲ್ಲಾ ಮೊಬೈಲ್ ನ ಮೆಸೇಜ್ ಮುಖಾಂತರ ತಿಳಿಸಿದ್ದೆ. ಎಲ್ಲರೂ ಅದರಲ್ಲಿಯೇ ಶುಭಾಶಯ ಕಳಿಸಿದರೂ ಕೂಡಽಅದರೆ ಒಬ್ಬ ಗೆಳತಿ ಮಾರನೇ ದಿನ ಕರೆದು"ಲೋ ನೀನು ಸೆಲೆಕ್ಟ್ ಆದಿಯಾ?ನಂಬೋಕೆ ಆಗ್ತಾ ಇಲ್ಲಾ.ನೆನ್ನೆ ನೀನು ಮೆಸೇಜ್ ಮಾಡಿದಾಗ ಜೋಕ್ ಮಾಡ್ತಾ ಇದೀಯಾ ಅಂದುಕೊಂಡಿದ್ದೆ. ರೀಯಲಿ". ಅವಳು ನನ್ನನ್ನು ವೇದಿಕೆ ಮೇಲೆ ತಮಾಷೆ ಮಾಡುವುದನ್ನು ಎಷ್ಟು ಮಾರುಹೋಗಿದ್ದಳು ಅಂದರೆ,ನಿಜಾವಾದ ಜೇವನದಲ್ಲಿಯೂ ನಾನು ಎನೇ ಮಾಡಿದರು ಅವಳಿಗೆ ತಮಷೆಯಾಗಿ ಕಾಣುತಿತ್ತು.
*ಇನ್ನೂ ನಾವು ನಮ್ಮ ಕಂಪೆನಿಯಲ್ಲಿ ಊಟ ಆದ ಮೇಲೆ ,ಗೆಳೆಯರಲ್ಲಾ ಒಟ್ಟಿಗೆ ಕುಳಿತು ಒಂದು ಕಡೆ ಮಾತನಾಡುತ್ತಾ ಕೂರುವುದು ಒಂದು ರೂಢಿಽನಮ್ಮಲ್ಲಿ ಒಬ್ಬ ಹೀಗೆಯೇ ತಮಾಷೆ ಮಾಡುತ್ತಾ ಎಲ್ಲರನ್ನು ನಗಿಸುತ್ತಾ ಇರುತ್ತಿದ್ದ. ಅವನಿಗೆ ಎಲ್ಲರು "ಬಾಸ್ " ಎಂದು ಕರೆಯುತ್ತಿದ್ದರು.ಒಂದು ದಿನ ಆತ ಬರದೇ ಹೋದರೆ ಸಾಕು ಎಲ್ಲರ ಬಾಯಲ್ಲೂ ಅವನು ಬಂದಿಲ್ಲಾ ಎಂದು ಬೇಜಾರು ಮಾಡಿಕೊಳ್ಳುವುದಿಲ್ಲ,ನಗಿಸುವವರು ಇಲ್ಲಾ ಎಂದು ಗೊಣಗುತ್ತಿರುತ್ತಾರೆ.ಒಮ್ಮೆ ಆತ ಬಿದ್ದು ಕೈ ಕಾಲು ಮುರಿದುಕೊಂಡು ಬಂದಿದ್ದ.. ಆ ಪರಿಸ್ಥಿತಿ ನೋಡಿ ಅಂದು ನಕ್ಕವರೇ ಜಾಸ್ತಿ.
ಮೇಲಿನ ಕೆಲವೊಂದು ಉದಾಹರಣೆಗಳು ಅಷ್ಟೇ. ನಗಿಸುವವರು ಸ್ವಲ್ಪ ಗಮನದಲ್ಲಿಟ್ಟು ನೋಡಿದರೆ,ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತದೆ.ನನ್ನ ಪ್ರಕಾರ ಒಬ್ಬರಿಗೆ ಬೇಜಾರಾದಾಗ ನಾವು ನೆನಪಾಗಬೇಕು ಹೊರತು,ನಾವು ಮಾಡುವ ಹಾಸ್ಯ ಅಲ್ಲಾಽ ಆದ್ದರಿಂದ ಸ್ವಲ್ಪ ಎಚ್ಚೆತ್ತು ಕೊಌ.
ನಾನು ಕೊಟ್ಟಿರುವ ಮೇಲಿನ ಉದಾಹರಣೆಗಳಲ್ಲಿ ಎರಡು ವಿಧದ ವ್ಯಕ್ತಿಗಳನ್ನು ಕಾಣಬಹುದು.ಒಂದು ಹಾಸ್ಯವನ್ನು ವೃತ್ತಿಯನ್ನಾಗಿಸಿಕೊಂಡವರು.ಅಥವಾ ತಮ್ಮ ಕಲೆಗಳಲ್ಲಿ ಹಾಸ್ಯ ಉಣಬಡಿಸುವವರು.ಉದಾಹರಣೆಗೆ ಮೇಲಿನ ನನ್ನ ಉದಾಹರಣೆಗಳು.ಸಾಮನ್ಯವಾಗಿ ಜನ, ಹಾಸ್ಯ ಕಲಾವಿದರನ್ನು ಅವರ ವೃತ್ತಿಯಿಂದಾಚೆಯೂ ಕೂಡ ಹಾಗೆಯೇ ಇರುತ್ತಾರೆ ಏಂದು, ಅವರ ವ್ಯಕ್ತಿತ್ವವನ್ನು ತಪ್ಪಾಗಿ ತಿಳಿದು ಕೊಂಡಿರುತ್ತಾರೆ.ಹಾಸ್ಯ ಕಲಾವಿದರು ಹೊರಗೂ ಹಾಗೆಯೇ ಇರುವುದು ಅವರವರ ವ್ಯಕ್ತಿತ್ವದ ಮೇಲೆ ಅವಲಂಭಿಸಿರುತ್ತದೆ. ಅವರೂ ವೃತ್ತಿಯಿಂದಾಚೆ ಗಂಭೀರ ವ್ಯಕ್ತಿಯೂ ಆಗಿರಬಹುದು. ಹಾಸ್ಯ ಕಲಾವಿದರು ನಿಜ ಜೇವನದಲ್ಲ್ಲಯೂ ಹಾಗೆಯೇ ಇರುತ್ತಾರೆ ಎಂದುಕೊಳ್ಳುವುದು ,ಅವರು ಎನೂ ಮಾಡಿದರೂ ಹಾಸ್ಯದ ದೃಷ್ಟಿಯಿಂದಲೇ ನೋಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ನನ್ನ ಪ್ರಕಾರ ಕಲಾವಿದರು ಅಂತಹ ಸೂಕ್ಷ್ಮ ಅರಿಯದ ಜನರಿಂದ ದೂರ ಇಡುವುದು ಒಳಿತು.ನೆನೆಪಿರಲಿ ಅವರು ನಿಮ್ಮ ನಿಜವಾದ ಅಭಿಮಾನಿಗಳು ಅಲ್ಲಾ. ಜನರನ್ನೂ ಬದಲಿಸುವುದು ಕಷ್ಟ. ಆದ್ದರಿಂದ ಅಂತಹ ಜನರಿಂದ ದೂರ ಇದ್ದುಬಿಡಿ.ಅಷ್ಟೇ ಅಲ್ಲಾ ಕಲಾವಿದರು ತಮ್ಮ ಕಲೆಯನ್ನು ಬರೀ ವೇದಿಕೆಗೆ ಮೀಸಲಿಡಬೇಕು.ಚಪ್ಪಾಳೆ ತಟ್ಟುವವರು ಇದ್ದಾರೆ ಎಂದು ,ನಿಂತ ಕಡೆ ನೀವು ನಿಮ್ಮ
ನಾನು ಕೊಟ್ಟಿರುವ ಮೇಲಿನ ಉದಾಹರಣೆಗಳಲ್ಲಿ ಎರಡು ವಿಧದ ವ್ಯಕ್ತಿಗಳನ್ನು ಕಾಣಬಹುದು.ಒಂದು ಹಾಸ್ಯವನ್ನು ವೃತ್ತಿಯನ್ನಾಗಿಸಿಕೊಂಡವರು.ಅಥವಾ ತಮ್ಮ ಕಲೆಗಳಲ್ಲಿ ಹಾಸ್ಯ ಉಣಬಡಿಸುವವರು.ಉದಾಹರಣೆಗೆ ಮೇಲಿನ ನನ್ನ ಉದಾಹರಣೆಗಳು.ಸಾಮನ್ಯವಾಗಿ ಜನ, ಹಾಸ್ಯ ಕಲಾವಿದರನ್ನು ಅವರ ವೃತ್ತಿಯಿಂದಾಚೆಯೂ ಕೂಡ ಹಾಗೆಯೇ ಇರುತ್ತಾರೆ ಏಂದು, ಅವರ ವ್ಯಕ್ತಿತ್ವವನ್ನು ತಪ್ಪಾಗಿ ತಿಳಿದು ಕೊಂಡಿರುತ್ತಾರೆ.ಹಾಸ್ಯ ಕಲಾವಿದರು ಹೊರಗೂ ಹಾಗೆಯೇ ಇರುವುದು ಅವರವರ ವ್ಯಕ್ತಿತ್ವದ ಮೇಲೆ ಅವಲಂಭಿಸಿರುತ್ತದೆ. ಅವರೂ ವೃತ್ತಿಯಿಂದಾಚೆ ಗಂಭೀರ ವ್ಯಕ್ತಿಯೂ ಆಗಿರಬಹುದು. ಹಾಸ್ಯ ಕಲಾವಿದರು ನಿಜ ಜೇವನದಲ್ಲ್ಲಯೂ ಹಾಗೆಯೇ ಇರುತ್ತಾರೆ ಎಂದುಕೊಳ್ಳುವುದು ,ಅವರು ಎನೂ ಮಾಡಿದರೂ ಹಾಸ್ಯದ ದೃಷ್ಟಿಯಿಂದಲೇ ನೋಡುವುದು ಮೂರ್ಖತನದ ಪರಮಾವಧಿಯಾಗುತ್ತದೆ. ನನ್ನ ಪ್ರಕಾರ ಕಲಾವಿದರು ಅಂತಹ ಸೂಕ್ಷ್ಮ ಅರಿಯದ ಜನರಿಂದ ದೂರ ಇಡುವುದು ಒಳಿತು.ನೆನೆಪಿರಲಿ ಅವರು ನಿಮ್ಮ ನಿಜವಾದ ಅಭಿಮಾನಿಗಳು ಅಲ್ಲಾ. ಜನರನ್ನೂ ಬದಲಿಸುವುದು ಕಷ್ಟ. ಆದ್ದರಿಂದ ಅಂತಹ ಜನರಿಂದ ದೂರ ಇದ್ದುಬಿಡಿ.ಅಷ್ಟೇ ಅಲ್ಲಾ ಕಲಾವಿದರು ತಮ್ಮ ಕಲೆಯನ್ನು ಬರೀ ವೇದಿಕೆಗೆ ಮೀಸಲಿಡಬೇಕು.ಚಪ್ಪಾಳೆ ತಟ್ಟುವವರು ಇದ್ದಾರೆ ಎಂದು ,ನಿಂತ ಕಡೆ ನೀವು ನಿಮ್ಮ
ಕಲೆಯನ್ನು ಪ್ರದರ್ಶಿಸಿ ನಗಿಸಲು ಶುರು ಮಾಡಿದರೆ ನೀವು ಅವರ ಚಪಲ ತೀರಿಸುವ ವಸ್ತು ಆಗುತ್ತೀರಿ.ನಿಮ್ಮ ಕಲೆಯೂ ಕೂಡ ಬೀದಿಗೆ ಬಂದಂತಾಗುತ್ತದೆ.
ಇನ್ನು ನಾನು ಮೇಲೆ ಕೊಟ್ಟಿರುವ ಉದಾಹರಣೆಗಳಲ್ಲಿ ಬರುವ ಇನ್ನೊಂದು ಥರಹದ ವ್ಯಕ್ತಿಗಳಂದರೆ ,ತಮ್ಮ ವ್ಯಕ್ತಿತ್ವದಲ್ಲಿಯೇ ಹಾಸ್ಯ ಮೈಗೂಡಿಸಿಕೊಂಡವರು.ಬೇರೆಯವರನ್ನು ನಗಿಸುವುದು ಒಳ್ಳೆಯದೆ,ಆದರೆ ನಗುವವರು ನಿಮ್ಮ ನೋವನ್ನು ನೋಡಿ ನಗುವ ಹಾಗೆ ಆಗಬಾರದು.ನೀವು ನಗಿಸುವವರು ನಿಮ್ಮನ್ನು ಹೇಗೆ ಪರಿಗಣಿಸುತ್ತಾರೆ ಏಂಬುದು ಗಮನದಲ್ಲಿ ಇಟ್ಟುಕೊಳ್ಳಿ . ಮೊದಲು ನಿಮ್ಮ ಬದುಕೇ ಹಾಸ್ಯಾಸ್ಪದವಾಗದಂತೇ ಒಳ್ಳೆಯ ಬದುಕು ರೂಪಿಸಿಕೊಳ್ಳಿ. ಯಾಕಂದರೆ ನಿಮ್ಮ ಸೋಲಿನ ಬದುಕು ಅವರಿಗೆ ಹಾಸ್ಯದ ವಸ್ತು ಆಗಬಾರದು. .ಕೆಲವೊಮ್ಮೆ ನಿಮ್ಮ ಹಾಸ್ಯ ಎದುರಿನವರಿಗೆ ಇಷ್ಟ ಆಗದಿರಬಹುದುಽ . ಆಗ ಅವರ ಕಣ್ಣಿಗೆ ಕೀಲಾಗಿ ಕಾಣುತ್ತೀರಿ.ಪರಿಸ್ಥಿತಿಯನ್ನು ಕೆಲವೊಮ್ಮೆ ಗಮನಿಸಿ.ಎಲ್ಲಾ ಸಮಯದಲ್ಲೂ ನಗಿಸುವುದು ಸೂಕ್ತವೆನ್ನಿಸುವುದಿಲ್ಲಾ.ಎಲ್ಲರನ್ನು ನಗಿಸಲು ದೇವರು ನಿಮಗೆ ಕಾಂಟ್ರಾಕ್ಟ್ ಕೊಟ್ಟಿಲ್ಲ. ಬೇರೆಯವರನ್ನು ನಗಿಸಿ ,ಆದರೆ ನಗಿಸುತ್ತಾ ನಗಿಸುತ್ತಾ ನೀವೇ ನಗೆಪಾಟಲಾಗಬೇಡಿ.
ಮುಗಿಸುವ ಮುನ್ನ ಚಾರ್ಲಿ ಚಾಪ್ಲಿನ್ ಒಂದು ಮಾತು ನೆನಪಾಗುತ್ತಿದೆ.“I always like walking in the rain, so no one can see me crying.”ಅವನಿಗೂ ಒಂದು ಥರಹದ ನೋವು ಕಾಡುತಿತ್ತೆ.
Send this to any paper maga worth to be read by many ppl...:)
ಪ್ರತ್ಯುತ್ತರಅಳಿಸಿ