ದೃಶ್ಯ ೧: ಕರ್ನಾಟಕದ ಒಂದು ಊರು. ಜನ ಥಿಯೇಟರ್ ಮುಂದೆ ಜಾತ್ರೆ ಅನ್ನುವಂತೆ ಸೇರಿದ್ದಾರೆ. ಎಲ್ಲರಿಗೂ ಮೊದಲ ಶೋ ನೋಡುವ ತವಕ.ತುಂಬಾ ಜನಕೆ ಸಿಗುವುದಿಲ್ಲಾ ಎಂಬುದು ಗೊತ್ತು. ಆದರೂ ಮುಂದಿನ ಶೋಗಾದ್ರು ಸಿಗಲಿ ಎಂದು ನಿಂತಿದ್ದಾರೆ. ಥಿಯೇಟರ್ ನಲ್ಲಿ ಪ್ರದರ್ಶನವಾಗುತ್ತಿದ್ದುದು ಮಾತ್ರ ಕನ್ನಡೇತರ ಚಿತ್ರ.
ದೃಶ್ಯ ೨: ತಮಿಳು ನಾಡಿನಲ್ಲಿ ಕೆಲಸದ ಮೇಲೆ ೧೧ ತಿಂಗಳು ಇದ್ದೆ. ಹೀಗೆ ಒಂದು ದಿನ ನನ್ನ ತಮಿಳು ಗೆಳೆಯನೊಬ್ಬನ ಜೊತೆ ಮಾತನಾಡುತ್ತಿದ್ದಾಗ ವಿಷಯ ಚಿತ್ರರಂಗದ ಕಡೆ ಹೊರಳಿತು.ಅವರ ಚಿತ್ರರಂಗದ ಬಗ್ಗೆ ಸ್ವಲ್ಪ ಮಾತನಾಡಿದ ಮೇಲೆ, ನಾನು ನಮ್ಮ ಚಿತ್ರರಂಗದ ನಿಮ್ಮ ಬಗ್ಗೆ ಎಷ್ಟು ಗೊತ್ತು ಅಂತಕೇಳಿದೆ. ಆತನಿಗೆ ನಮ್ಮ ಕನ್ನಡ ಚಿತ್ರರಂಗದ ಬಗ್ಗೆ ಸ್ವಲ್ಪವೂ ಗೊತ್ತಿರಲಿಲ್ಲ. ನಂಬಿದರೆ ನಂಬಿ ನನಗೇ ಅವರ ಭಾಷೆಯ ಪುಟಗೋಸಿ ಕಲಾವಿದರ ಬಗ್ಗೆಯೂತಿಳಿದಿತ್ತು ,ಆತನಿಗೆ ಕಡೇಪಕ್ಷ ನಮ್ಮ ರಾಜಣ್ಣ ,ವಿಷ್ಣು ದಾದಾನ ಬಗ್ಗೆ ಅರಿವೇ ಇರಲಿಲ್ಲ.
ದೃಶ್ಯ ೩ : ನಮ್ಮ ದಾವಣಗೆರೆ ,ಕರ್ಣಾಟಕದ ಮಧ್ಯಭಾಗ .ನೆರೆ ರಾಜ್ಯಗಳಿಂದ ಭೌಗೋಳಿಕವಾಗಿ ಸ್ವಲ್ಪ ದೂರವೇ ಉಳಿದಿದೆ. ಹೀಗೆ ದಾವಣಗೆರೆಯಲ್ಲಿ ಗೆಳೆಯನೊಬ್ಬನ ಹಾಸ್ಟೆಲ್ಗೆ ಹೋಗಿದ್ದೆ. ಅಲ್ಲಿ ಹುಡುಗರೆಲ್ಲರೂ ಗುಂಪು ಕಟ್ಟಿ ತೆಲಗು ಚಿತ್ರವೊಂದನ್ನು ನೋಡುತ್ತಿದ್ದರು . ಚಿತ್ರದ ಮಧ್ಯೆ ಎಲ್ಲರೂ ತೆಲಗು ಭಾಷೆಯಲ್ಲಿಯೀಕಾಮೆಂಟ್ ಹೊಡೆಯುತ್ತಿದ್ದರು. ನನ್ನ ಗೆಳೆಯನಿಗೆ ಇವರೆಲ್ಲರೂ ಆಂಧ್ರದವರಾ ಅಂತ ಕೇಳಿದೆ. ಆತ ಇಲ್ಲಾ ಅವರೆಲ್ಲರೂ ಅಪ್ಪಟ ಕನ್ನಡಗಿರೆಂದು , ಆದರೆತಮಿಳು ,ತೆಲಗು ಚಿತ್ರ ಗಳನ್ನು ಅದೆಷ್ಟು ನೋಡಿದ್ದಾರೆ ಆಂದರೆ ಆ ಭಾಷಿಕರಷ್ಟೇ ಚೆನ್ನಾಗಿ ಮಾತನಾಡುತ್ತಾರೆ ಎಂದು ಹೇಳಿದಾಗ ನನಗೆ ಪರಮಾಶ್ಚರ್ಯ .
ದೃಶ್ಯ ೩.: ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದಾಗ ನನಗೆ ನಮ್ಮ ಕಂಪೆನಿಯಲ್ಲಿಯೇ ಕೆಲಸ ಮಾಡುತ್ತಿದ್ದ ನೆರೆ ರಾಜ್ಯದವರು ಪರಿಚಯ ಆದರು. ಹೀಗೆ ಒಮ್ಮೆಅವರಿಗೆ ಎಷ್ಟು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದೀರಿ ಅಂತ ಕೇಳಿದಾಗ ಅವರ ಉತ್ತರ ಕೇಳಿದ ನಾನು ನಿಜವಾಗಲೂ ಕಕ್ಕಾಬಿಕ್ಕಿ. ಯಾಕಂದರೆ ಆತಆರು ವರ್ಷದಿಂದ ಕರ್ನಾಟಕದಲ್ಲಿ ಕೆಲಸ ಮಾಡುತ್ತಿದ್ದರೂ ಕನ್ನಡ ಮಾತನಾಡಲು ಒಂದು ಪದ ಬರುತ್ತಿರಲಿಲ್ಲ.
ಮೇಲಿನ ಮೊದಲೆರಡು ಉದಾಹರಣೆಗಳು ನಮಗೆ ಬೇರೆ ಭಾಷೆಯ ಮೇಲಿರುವ ವ್ಯಾಮೋಹ ,ಅವರಿಗೆ ನಮ್ಮ ಭಾಷೆಯ ಬಗ್ಗೆ ಇರುವ ಅಸಡ್ಡೆ ಯನ್ನುತೋರಿಸುತ್ತದೆ. ಚಲನಚಿತ್ರದ ವಿಷಯ ಬರಿಯ ಉದಾಹರಣೆ ಅಷ್ಟೇ. ನಿಜ ಹೇಳಬೇಕೆಂದರೆ ನಮ್ಮವರಿಗೆ ಅಸಡ್ಡೆ ಜಾಸ್ತಿ. ಚಲನಚಿತ್ರ ಅಥವಾ ಕನ್ನಡದಪುಸ್ತಕಗಳ ವಿಷಯವನ್ನೇ ತೆಗೆದುಕೊಳ್ಳಿ . ನಮ್ಮವರು ಎಷ್ಟು ನೋಡುತ್ತೇವೆ.ನಮ್ಮಲ್ಲಿ ಒಳ್ಳೆಯ ಚಿತ್ರಗಳ ಸಂಖ್ಯೆ ಕಡಿಮೆ ನಿಜ .ಬಂದ ಒಳ್ಳೆಯಚಿತ್ರಗಳನ್ನಾದರೂ ಅಂದರೆ ಬಯ್ಯುವವರು ಎಲ್ಲಿ ನೋಡುತ್ತಾರೆ? ನಿಜ ಹೇಳಬೇಕಂದರೆ ನಮ್ಮಲ್ಲಿ, ತುಂಬಾ ಜನರು ಪಕ್ಕದ ಮನೆಯಲ್ಲಿ ದಿನಾಗಲೂ ಉಪ್ಪಿಟ್ಟು ಮಾಡಿದರೂ ಚೆನ್ನಾಗಿದೆ ಅಂದು ತಿನ್ನುವವರಿದ್ದಾರೆ. ಅದೇ ಉಪ್ಪಿಟ್ಟು ಅಥವಾ ಆಗೊಮ್ಮೆ ಈಗೊಮ್ಮೆ ವಿಶೇಷ ತಿಂಡಿ ನಮ್ಮ ಮನೆಯಲ್ಲಿ ಮಾಡಿದರೆಅವರು ಅದನ್ನು ಹೊಗಳುವುದು ಇರಲಿ ಅದನ್ನು ಬಾಯಿಗೆ ಹಾಕಿಕೊಂಡು ನೋಡುವ ಗೋಜಿಗೂ ಹೋಗುವುದಿಲ್ಲ. ಚಲನಚಿತ್ರದ ವಿಷಯ ಹಾಗಿರಲಿ ನಮ್ಮಲ್ಲಿಒಳ್ಳೆಯ ಪುಸ್ತಕಗಳು ಬರುತ್ತಿಲ್ಲ ಅಂದರೆ ನಿಜವಾಗಲೂ ನಂಬಲು ಅಸಾಧ್ಯ. ಹಾಗೆ ಹೇಳುವವರು ನಿಜಾವಾಗಲೂ ಎನೂ ಅರಿಯದವರು.ನಾವುಗಳುಓದುತ್ತಿಲ್ಲ ಅನ್ನುವುದು ನಿಜ. ಬೇರೆ ಭಾಷೆ ಕಲಿಯುವ ಆಸಕ್ತಿಯ ಕಾಲು ಭಾಗ ನಮ್ಮ ಪುಸ್ತಕಗಳನ್ನು ಓದುವುದರಲ್ಲಿ ಇದ್ದರೆ ನಮ್ಮ ಕನ್ನಡದ ಬರಹಗಾರರು ಎರಡು ಹೊತ್ತು ಊಟ ಮಾಡುತ್ತಿದ್ದರು . ಯಾವುದೇ ಇರಲಿ ಮೊದಲು ನಮ್ಮ ಕನ್ನಡ ಭಾಷೆಗೆ ಪ್ರಾಮುಖ್ಯತೆ ಕೊಡೋಣ ,ನಂತರ ಬೇರೆ ಭಾಷೆ.
ಅದ್ಯಾಕೆ ನಾವುಗಳು ಬೇರೆಯವರ ಭಾಷೆಯನ್ನು ಪಟ್ಟನೆ ಕಲಿತು ,ಅವರ ಹತ್ತಿರ ಅದೇ ಭಾಷೆಯಲ್ಲಿ ಮಾತನಾಡುವುದರಲ್ಲಿ ತೋರುವ ಆಸಕ್ತಿನಮ್ಮ ಭಾಷೆಯನ್ನೂ ಅವರಿಗೆ ಕಲಿಸುವುದರಲ್ಲಿ ತೋರಿಸುವುದಿಲ್ಲ. ಅದು ನಮ್ಮ ಕನ್ನಡಿಗರಲ್ಲಿ ಮಾತ್ರ ಜಾಸ್ತಿ ಯಾಕೆ? ಇನ್ನೂ ತಿಳಿಯದ ವಿಷಯವಾಗಿದೆ.ನಾನು ಬೇರೆ ಬಾಷೆಯನ್ನು ಕಲಿಯುವುದೇ ತಪ್ಪು, ಅವರನ್ನು ಹೊಡೆದು ಹಾಕಿ ಕನ್ನಡದ ಬಾವುಟ ನೆಟ್ಟಬೇಕು ಎಂದು ಹೇಳುತ್ತಿಲ್ಲ. ಅದು ನಮ್ಮವರ ಸಂಸ್ಕೃತಿಯೂ ಅಲ್ಲಾ. ಉದಾಹರಣೆಗೆ ನಮ್ಮಲ್ಲಿ ತುಳು ,ಕೊಡವ ಭಾಷಿಕರನ್ನು ಕನ್ನಡಿಗರಂತೆಯೇ ನೋಡುತ್ತೇವೆಯೇ ಹೊರತು ಹೊರಗಿನವರ ಹಾಗೆ ಅಲ್ಲ. ಬೇರೆ ಭಾಷೆಯ ಜನರಲ್ಲಿರುವ ಭಾಷಾಭಿಮಾನ ನಮ್ಮಲ್ಲಿ ಯಾಕೆ ಕಮ್ಮಿ . ಅವರೆಲ್ಲಾ ಯಾಕೆ ಹಾಗೆ .?ನಾವು ಮಾತ್ರ ಯಾಕೆ ಹೀಗೆ ? ಎಂಬುದು ನನ್ನ ಪ್ರಶ್ನೆ
English summary: Kannadigas always lag behind when it comes to the matter of pride about their own mother tongue,when compared to other people from different states.Many of Kannadigas term this this lack of pride to friendliness nature.Here in Karnataka ,every language movie runs 100 days.We know each and everything about other language movies.But its not the same case with neighbouring states.Even after staying so many days in Karnataka,many of non-kannadigas don't know Kannada.Because we don't show the same interest in teaching Kannada that we show in learning other languages.Point is here I am not asking to disrespect the other language but to give priority to our mother tongue first ,when it comes to respect.
ಪರಭಾಷಾಭಿಮಾನದಲ್ಲಿ ನಮ್ಮವರೇ ಯಾವಾಗಲೂ ಮುಂದೆ ನಿಲ್ಲುತ್ತಾರೆ
ಪ್ರತ್ಯುತ್ತರಅಳಿಸಿಸ್ವಾಭಿಮಾನಿ ಕನ್ನಡಿಗನಾಗಿ,ಪರ ಭಾಷೆ ಗೊತ್ತಿದ್ದರೂ ಕನ್ನಡದಲ್ಲೇ ಮಾತನಾಡಿಸಿ ಕನ್ನಡ ಕಲಿಸಿ.
ಪ್ರತ್ಯುತ್ತರಅಳಿಸಿಮಾಸ್ಟರ್ ಹಿರಣ್ಣಯ್ಯನವರು ಒಮ್ಮೆ ಭಾಷಣ ಮಾಡುತ್ತಾ ಹೀಗೆ ಹೇಳಿದ್ದು ಜ್ಞಾಪಕಕ್ಕೆ ಬಂತು, ನಿಮ್ಮ ಬರಹ ಓದಿ. ಅವರು ಹೇಳಿದ್ದು ಹೀಗೆ,
ಪ್ರತ್ಯುತ್ತರಅಳಿಸಿ"ತಮಿಳರು ಭಾಷಾ ದುರಭಿಮಾನಿಗಳು, ಆಂಧ್ರದವರು ತಮ್ಮ ಭಾಷಾ ಅಭಿಮಾನಿಗಳು, ಕನ್ನಡಿಗರು ನಿರಭಿಮಾನಿಗಳು"
ಮತ್ತೊಂದು ಸಂದರ್ಭದಲ್ಲಿ ಹಿರಿಯ ನಾಯಕ ನಟ ದಿವಂಗತ ಉದಯ್ ಕುಮಾರ್ ಅವರು, ಕನ್ನಡಿಗರಿಗೆ ಬುದ್ಧಿ ಹೇಳೋದೂ ಒಂದೇ ಗೊಮ್ಮಟೇಶ್ವರನಿಗೆ ಚಡ್ಡಿ ಹೊಲಿಸೋದೂ ಒಂದೇ ಎಂದು ನೊಂದು ನುಡಿದಿದ್ದರು. ರಾತ್ರಿಯೆಲ್ಲಾ ನಿಂತು ನಮ್ಮ ಭಾಷಣ ಕೇಳುತ್ತಾರೆ ಬೆಳಗಾನೆದ್ದು ಪರಭಾಷಾ ಚಿತ್ರ ನೋಡುತ್ತಾರೆ ಎನ್ನುವ ಸಂದರ್ಭದಲ್ಲಿ ಹೇಳಿದ ಮಾತಿದು.
neevugalu ee lekhanavannu oodiddakke,dhanyvadagalu
ಪ್ರತ್ಯುತ್ತರಅಳಿಸಿತುಂಬಾ ಒಳ್ಳೆಯ ಚಿಂತನೆ ಶ್ರವಣ್.
ಪ್ರತ್ಯುತ್ತರಅಳಿಸಿಕನ್ನಡದ ಈ ಸಮಸ್ಯೆ ಇಂದು ನಿನ್ನೆಯದಲ್ಲ. ಪೂರ್ವದಲ್ಲಿ ಕನ್ನಡಿಗರು ಸಂಸ್ಕ್ರತದ ಮೋಹಕ್ಕೆ ಬಲಿಯಾಗಿದ್ದರೆ, ಸ್ವಾತಂತ್ರ್ಯಾನಂತರದಲ್ಲಿ ಇಂಗ್ಲೀಷಿಗೆ, ಮತ್ತಿತರ ಭಾಷೆಗಳಿಗೆ. ಅದು ಕನ್ನಡಿಗರ ಉದಾರತೆಯೋ ಅಸಡ್ಡೆಯೊ ಭಗವಂತನೇ ಬಲ್ಲ.