ಯಾವುದೇ ಒಂದು ವಿಷಯವನ್ನು ತುಂಬಾ ಚರ್ಚಿಸಬಾರದು .ಬೋರ್ ಹೊಡೆಯಲು ಶುರುವಾಗುತ್ತದೆ. ನಮ್ಮ್ ಹುಡುಗರ ಭಾಷೆಯಲ್ಲಿಹೇಳಬೇಕೆಂದರೆ ಕೊರೆತ ಆಗಿಬಿಡುತ್ತದೆ . ಹಾಗಂತ ಯಾವುದೇ ವಿಷಯವನ್ನು ಅರ್ಧಕ್ಕೆ ನಿಲ್ಲಿಸಬಾರದು . ಹಾಗಂತ ನಮ್ಮ ದೊಡ್ಡವರುಹೇಳಿದ್ದಾರೆ.ದೊಡ್ಡವರು ಮಾತು ಕೇಳ್ಬೇಕು ನೋಡಿ. ಅದಕ್ಕೆ ನಮ್ಮ software engineersಅ ವಿಷಯಕ್ಕೆ ಇಂದು ಇತಿಶ್ರೀ ಹೇಳಿಬಿಡೋಣ.
ಅದೇನೊ ಗೊತ್ತಿಲ್ಲಾ ನಮ್ಮ ಜನದ ಬಾಯಲ್ಲಿ ಇದೊಂದು ಕಾಮನ್ ಡೈಲಾಗ್ ನಲಿದಾಡುತ್ತಿರುತ್ತದೆ."ಮೊದಲೆಲ್ಲಾ ಹೀಗಿರಲಿಲ್ಲಾ,ಈ ಐ.ಟಿ ,ಬಿ.ಟಿ ಬಂದ ಮೇಲೇನೆ ಈ ಹುಡುಗಿಯರು ತುಂಡು ಬಟ್ಟೆ ಹಾಕಿಕೊಳ್ಳೋದು,ಈ ಪಬ್ ಸಂಸ್ಕೃತಿ,ಅನೈತಿಕ ಸಂಬಂಧಗಳು,ವಿವಾಹೇತರ ಸಂಬಂಧಗಳು ಜಾಸ್ತಿಯಾಗಿದೆ,.ನಮ್ಮ ಸಂಸ್ಕೃತಿನಾ ಹಾಳು ಮಾಡಿಬಿಟ್ಟರು. ಕನ್ನಡ ಬಂದ್ರೂ ಮಾತಾಡಲ್ಲಾ".ಹೀಗೆ ಒಂದಾಏರಡಾ .ಸಮಾಜದಲ್ಲಿರುವ ಸಕಲ ಅನಿಷ್ಟಕ್ಕೂ ನಾವೇ ಕಾರಣ ಏಂಬಂತೆ ಬಯ್ಯುತ್ತಾರೆ.
ಮೇಲಿನ ಯಾವುದನ್ನೂ ನಮ್ಮಲ್ಲಿ ಇಲ್ಲಾ ಅಥವಾ ನಮ್ಮವರು ಮಾಡಿಯೇ ಇಲ್ಲ ಎಂದು ಹೇಳುತ್ತಿಲ್ಲಾ. ಆದರೆ ಜನಮಾತಾನಾಡುವ ರೀತಿ ನೋಡಿದರೆ ,ಇವೆಲ್ಲಾ ನಮ್ಮಿಂದಲೇ ಶುರುವಾಗಿದ್ದು ಅಥವಾ ನಮ್ಮ ವೃತ್ತಿಯಲ್ಲಿ ಮಾತ್ರ ಎಂಬಂತೆ ಭಾಸವಾಗುತ್ತದೆ. (ನಿಜಹೇಳಬೇಕೆಂದರೆ ಇದನ್ನು ಹೇಳಿದವರು,ಹೇಳಿದ ನಂತರ ಸ್ವಲ್ಪ ಹೊತ್ತು ಯೋಚಿಸಿದರೆ ಏಷ್ಟೊಂದು ಬಾಲಿಶವಾಗಿ ಮಾತನಾಡಿದ್ದೇವೆ ಎಂದುಅವರಿಗೆ ಅನಿಸುತ್ತದೆ.) ಅದು ತಪ್ಪು . ಪಾಶ್ಚಾತ್ಯ ಸಂಸ್ಕೃತಿ ಪ್ರಭಾವ ,ಐ.ಟಿ ,ಬಿ.ಟಿ ಬರುವ ಮುಂಚೆ ಅಲ್ಲಾ ,ನಮ್ಮ ರಾಜಣ್ಣನ ಕಪ್ಪು ಬಿಳುಪುಚಿತ್ರದಿಂದಲೇ ಶುರುವಾಗಿತ್ತು.ಇನ್ನು ಪಬ್ ನಲ್ಲಿ ಬರಿ software engineer ಗಳು ಹೋಗುವುದಿಲ್ಲಾ . ಮೀಸೆ ಚಿಗುರದ ,ಜಡೆ ಕಟ್ಟಲು ಬಾರದ ಹದಿಹರೆಯದ ಹುಡುಗ ಹುಡುಗಿಯರು,ಆಲ್ಲಾಡುವ ಮುದುಕಮುದುಕಿಯರು, ಸುಣ್ಣದಂತೆ ಬಣ್ಣ ಬಳಿದು ಕೊಂಡು ಬರುವ ಆಂಟಿ ಅಂಕಲ್ ಗಳು,ವಾಂತಿ ಬದಲು ದುಡ್ಡು ಕಕ್ಕುವ ಸಾಹುಕಾರರು ,ಬೇರೆ ಬೇರೆ ವೃತ್ತಿಯಲ್ಲಿ ಇರುವವರು ಹೀಗೆ ಬೇರೆಯವರು ಬರುತ್ತಾರೆ. ಅವರೆಲ್ಲಾ ನಾವು ಆಹ್ವಾನಕೊಟ್ಟ ಮೇಲೆ ಬಂದವರಲ್ಲಾ.ಇನ್ನೂ ನಮ್ಮಲ್ಲಿ ಮಾತ್ರ ಅನೈತಿಕ ಸಂಭಂದಗಳು ,ವಿವಾಹೇತರ ಸಂಭಂದಗಳು ಜಾಸ್ತಿ ಅನ್ನುವವವರು ನಮ್ಮ ಕನ್ನಡನ್ಯೂಸ್ ಚಾನೆಲ್ಗಳನ್ನು ಒಮ್ಮೆ ಹಾಕಿ ನೋಡಿ. ಅಲ್ಲಿ ಅರ್ಧ ಘಂಟೆಗೆ ಒಮ್ಮೆ ನಮ್ಮ ಸರ್ಕಾರಿ ನೌಕರರ "ಇಬ್ಬರ ಹೆಂಡಿರ ಮುದ್ದಿನ ಗಂಡ"ಕಥೆಯನ್ನು ಜೂಮ್ ಮಾಡಿ ಮಾಡಿ ತೋರಿಸುತ್ತಾರೆ. ಮೇಲಿನ ಯಾವುದನ್ನೂ ಬರಿಯ software engineerಗಳು ಮಾಡಬೇಕು ಅಂತ ಇಲ್ಲಾ.ಬೇರೆ ವೃತ್ತಿಯಲ್ಲಿರುವ ಯಾವುದೇ ಉಪ್ಪು ಖಾರ ತಿನ್ನುವವನು ಮಾಡುತ್ತಾನೆ.ಆದರೂ ನಾವುಗಳೇ ಜನರ ನಾಲಿಗೆಗೆ ಯಾಕೆ ಆಹಾರ ಆಗುತ್ತೇವೆಆನ್ನುವುದು ನಾ ಕಾಣೆ.ಉದಾಹರಣೆಗೆ ನಮ್ಮ ಟಿ.ವಿ ಗಳಲ್ಲಿ ಬರುವ ಹಾಗೆ "ನಮ್ ಐ.ಟಿ ,ಬಿ.ಟಿ ಗಳು ಬಂದ ಮೇಲೆ ಬೆಂಗ್ಳೂರಲ್ಲಿ ತುಂಡು ಬಟ್ಟೆಹಾಕೋರು ಜಾಸ್ತಿಯಾದ್ರು."
ಇನ್ನು ಅದ್ಯಾಕೆ ನಮ್ಮ ಜನಕ್ಕೆ ನಮ್ಮ್ ಮೇಲೆ ದ್ವೇಷಾನೋ ನಾ ಕಾಣೆ. ಹೀಗೆ ನೀವೇ ಕಿವಿಗೊಟ್ಟು ಕೇಳ್ತಾ ಇರಿ, ಒಬ್ಬರಲ್ಲಾಒಬ್ಬರು"ಇನ್ನೇನ್ ರಿಸೆಷನ್ ಬರುತ್ತೆ,ಆಗ ಈ software engineer ಗಳು ಎಲ್ಲಾ ಬೀದಿಗೆ ಬರುತ್ತಾರೆ ನೋಡ್ತಾ ಇರಿ " ಆಂತ ಹೇಳುವುದನ್ನು ಪ್ರತಿಹತ್ತರಲ್ಲಿ ಒಬ್ಬ ಹದಿನೈದು ನಿಮಿಷಕ್ಕೆ ಶಾಪ್ ಹಾಕುವುದನ್ನು ಕೇಳುತ್ತೀರಿ.ಯಾಕೆ ಯಾರದರೂ ನೆಮ್ಮದಿಯಿಂದ ಬದುಕುತ್ತಿರುವವರು ಬೀದಿಗೆಬಂದರೆ ನಿಮ್ಮ ಹೊಟ್ಟೆ ತಂಪಾಗುತ್ತಾ?.
ನಿಜ ಹೇಳ್ಬೇಕು ಆಂದರೆ ನಿಯತ್ತಿನಿಂದ ವೃತ್ತಿಪರ ಕೋರ್ಸ್ ಗಳನ್ನು ಲಕ್ಷಗಟ್ಟಲೆ ಖರ್ಚು ಮಾಡಿ ಮುಗಿಸಿ, ನಂತರವೂ ಮೈಮೇಲೆ ಸಾಲ ಇದ್ದರೂ ನಿಯತ್ತಿನಿಂದ ಬದುಕುತ್ತಿರವರು ನಾವೇ ಕಾಣ್ರಿ.ಅದೆಷ್ಟೋ ಮಂದಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ,ಡಾಕ್ಟರ್ ಆದನಂತರ ಅದನ್ನು ತೀರಿಸಲು ಅಡ್ಡದಾರಿ ಹಿಡಿಯುತ್ತಾರೆ.ಕೋಟಿಗಟ್ಟಲೇ ಲಂಚ ಕೊಟ್ಟು ಸೇರುವ ಸರ್ಕಾರಿ ನೌಕರರು ಅದರ ದುಪ್ಪಟ್ಟು ಲಂಚ ತೆಗದುಕೊಳ್ಳುತ್ತಾರೆ. ಇಡೀ ದೇಶಕ್ಕೇ ಅತ್ಯಾಚಾರಿ ಆಂತ ಗೊತ್ತಿದರೂ ಅವರ ಪರ ವಾದ ಮಾಡುವ ವಕೀಲರಿದ್ದಾರೆ. ಆದ್ರೆ ನಾವು ಬರುವಸಂಬಳದಲ್ಲಿ ಇರೋ ಬರೋ ಟ್ಯಾಕ್ಸ್ ಕಟ್ಟಿ ಬದುಕುತ್ತಿದ್ದರೂ ನಮ್ಮ ಮೇಲೆ ನಿಮ್ಮ ಶಾಪಗಳು ಜಾಸ್ತಿ ಯಾಕೆ?
ಬಹುಷಃ ಇವೆನ್ನೆಲ್ಲಾ ನೋಡುತ್ತಿದ್ದಾಗ ನನಗೆ ಅನ್ನಿಸಿದ್ದು ಏನೆಂದರೆ ಈ ಥರಹ ಮಾತನಾಡುವ ಜನಕ್ಕೆ ನಾವುಗಳು ಏನುಮಾಡುತ್ತಿದ್ದೇವೆ ಅನ್ನುವುದು ಗೊತ್ತಿಲ್ಲಾ ,ಸಮಾಜಕ್ಕೆ ನಮ್ಮ ಕೊಡುಗೆ ಏನು ಇಲ್ಲಾ ಅಂದುಕೊಂಡು ಹೀಗೆ ಅನ್ನುತ್ತಿದ್ದಾರೆ ಅನ್ನಿಸುತ್ತದೆ. ಕೆಲಸದವಿಚಾರಕ್ಕೆ ಬಂದರೆ ನಮ್ಮ software ಗಳು ಇಲ್ಲದೇ ನಿಮ್ಮ ಬದುಕಿನಲ್ಲಿ ಎಷ್ಟು ಕಷ್ಟ ಯೊಚಿಸಿದ್ದೀರಾ?ಉದಾಹರಣೆಗೆ ನೀವು ದಿನಾಗಲೂಉಪಯೋಗಿಸುವ ವಸ್ತುಗಳ software ಕೆಟ್ಟು ಹೋಗಲಿ . ಆಗ ನಮ್ಮ ಬೆಲೆ ಅರ್ಥ ಆಗುತ್ತದೆ. ಕೆಲವರು ಅಯ್ಯೋ ಈ software ಬರೋ ಮುಂಚೆ ಮನುಷ್ಯ್ರು ಬದುಕ್ತಾ ಇರಲಿಲ್ವಾ ಮನುಷ್ಯರು ಅಂತ ವಿತಂಡ ವಾದ ಮಾಡ್ಬಹುದು. ಆಂತವರಿಗೆ ನಾನು ಹೇಳುವುದು ನನ್ನ ಚಿಕ್ಕ ಸವಾಲುsoftware ಇರುವಂತಹ ಅಥವಾ software ಗಳು ಉಪಯೋಗ ಪಡೆದುಕೊಂಡ ತಯರಾದ ವಸ್ತುಗಳನ್ನು ಬಿಟ್ಟು ಒಂದು ದಿನ ಬದುಕಿ ತೋರಿಸಿಆಂತ.ಈ ಟ್ರಾಫಿಕ್ ಮಯ ಯುಗದಲ್ಲಿ ,ದಿನದಿಂದೇ ದಿನ ಎಲ್ಲದಕ್ಕು ದೊಡ್ಡ ದೊಡ್ಡ ಕ್ಯೂಗಳು ಕಾಣಿಸುತ್ತಿರುವ ಈ ಜಮಾನದಲ್ಲಿ,ಹಗಲಿನಲ್ಲೂನೆಮ್ಮದಿಯಿಂದ ಹೆಣ್ಣುಮಕ್ಕಳು ಓಡಾಡಲು ಕಷ್ಟವಾಗಿರುವ ಈ ಕಾಲದಲ್ಲಿ ಕುಂತಲ್ಲಿಯೇ ನಿಮ್ಮ ಕೆಲಸಗಳನ್ನು ಮುಗಿಸುವಂತೆ ಮಾಡುವುದುನಮ್ಮ software ಗಳು.ನಮ್ಮ ಬಗ್ಗೆ ನಾವೇ ಹೊಗಳಿಕೊಳ್ಳಬಾರದು ಅದಕೆ ನಾನು ಇಲ್ಲಿ ಸಂಕ್ಷಿಪ್ತವಾಗಿ ಹೇಳಿದ್ದೇನೆ.
ಇದನ್ನು ಓದಿದ ಕೆಲವರಿಗೆ ತುಂಬಾ ಅತಿಯಾತು ಅನ್ನಿಸಬಹುದು. ಎದುರಾಳಿ ಪದೇ ಪದೇ ಏಟುಕೊಡುವಾಗ ನಾವು ಎದಿರೇಟು ಕೊಡಲೇಬೇಕುತ್ತದೆ. ಅದೇ ನಿಟ್ಟಿನಲಿ ಇದನ್ನು ಬರೆದಿದ್ದೇನೆ. ದಯವಿಟ್ಟು ತಪ್ಪು ತಿಳಿಯಬೇಡಿ.ನನ್ನ ಬೇಡಿಕೆ ಇಷ್ಟೇಯಾರನ್ನಾದರೂ ತೆಗಳುವ ಮುಂಚೆ ಸರಿಯಾಗಿ ಅವರ ಬಗ್ಗೆ ತಿಳಿದುಕೊಂಡು ಉಗಿಯಿರಿ. ಸುಮ್ಮನೇ ನನ್ನದು ಒಂದು ಇರಲಿ ಆಂತ ಮಾತನಾಡಬೇಡಿ.
English summary:The one thing I hear often people saying is " All these extra marital relationship,western culture,Pub culture started because of I T people .They are the threat to Indian culture".This is base less.All these started way back in 1980.Many people keep on cursing "Let the recession come,all these people will be on streets".Why is that so?Aren't u guys happy if someone is living happily.Actually we software engineers after spending lakhs together lead a honest life paying taxes .According to me the reason for this people's wrong perception is ,they really don't have single idea what we software engineers do? For those people I ask to spend a day without using any of our software or products which has software.Last but not least my point is talk only if u have idea ,just don't add up .
Good one.. :)
ಪ್ರತ್ಯುತ್ತರಅಳಿಸಿIts true ... !!!
ಪ್ರತ್ಯುತ್ತರಅಳಿಸಿ@gowtham ghatke and @veena:thanks
ಪ್ರತ್ಯುತ್ತರಅಳಿಸಿಸೂಪರ್ ಆಗಿದೆ ಸರ್ .... ಇಂಥಹ ಅನುಭವ ನನಗೂ ಆಗಿದೆ.. PGನಲ್ಲಿ ಮಾಡಿದ ತಪ್ಪಿಗೆ , ಕೆಂಗೇರಿ ಸ್ಟೇಷನ್ನಲ್ಲಿ ಒಬ್ಬ ಆಫೀಸರ್ ಬಾಯಿಂದ ಬಂದ ಮಾತು "ನನ್ನ ಮಕ್ಳಾ ನೀವೇ software engineer ಗಳು ಜಾಸ್ತಿ ಅಪರಾಧ ಮಾಡೋದು " ಅಂತ ಅಂದಬಿಟ್ಟ ... ಯಾಕೋ ಮನಸಿಗೆ ತುಂಬಾ ಬೇಸರ ಆಗಿತ್ತು .... ನಿಮ್ಮ ಈ ಲೇಖನ ಓದಿ ಮನಸಿಗೆ ಖುಷಿ & ಕೊಟ್ಟಿತು ಸರ್ ...
ಪ್ರತ್ಯುತ್ತರಅಳಿಸಿಸೂಪರ್ ಆಗಿದೆ ಸರ್ .... ಇಂಥಹ ಅನುಭವ ನನಗೂ ಆಗಿದೆ.. PGನಲ್ಲಿ yaaro ಮಾಡಿದ ತಪ್ಪಿಗೆ , ಕೆಂಗೇರಿ ಸ್ಟೇಷನ್ನಲ್ಲಿ ಒಬ್ಬ ಆಫೀಸರ್ ಬಾಯಿಂದ ಬಂದ ಮಾತು "ನನ್ನ ಮಕ್ಳಾ ನೀವೇ software engineer ಗಳು ಜಾಸ್ತಿ ಅಪರಾಧ ಮಾಡೋದು " ಅಂತ ಅಂದಬಿಟ್ಟ ... ಯಾಕೋ ಮನಸಿಗೆ ತುಂಬಾ ಬೇಸರ ಆಗಿತ್ತು .... ನಿಮ್ಮ ಈ ಲೇಖನ ಓದಿ ಮನಸಿಗೆ ಖುಷಿ ಕೊಟ್ಟಿತು ಸರ್ ..
ಪ್ರತ್ಯುತ್ತರಅಳಿಸಿ@gopal kagawad :thanks
ಪ್ರತ್ಯುತ್ತರಅಳಿಸಿ@gopal kagawad :thanks
ಪ್ರತ್ಯುತ್ತರಅಳಿಸಿ@Gopal.. Nice le But Finally U ppl proved.. ನಾವು Software Engineers :ನಾವು ಕೂಡ ನಿಮ್ಮ ಹಾಗೆ
ಪ್ರತ್ಯುತ್ತರಅಳಿಸಿAdre, Nimma baravanige yalli helida hage jasthi intha pravruthi irdou SOFTWARE ENGINEER gallale antha oppkondang aythalla.
ಪ್ರತ್ಯುತ್ತರಅಳಿಸಿOTHERS BLUNDER CANNOT BE A SHIELD FOR ONE's MISTAKE