ಗುರುರ್ ಬ್ರಹ್ಮ
ಗುರುರ್ ವಿಷ್ಣು
ಗುರುರ್ ದೇವೋ ಮಹೇಶ್ವರಃ
ಗುರುರ್ ಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರುವೇ ನಮಃ
ಒಬ್ಬ ಗುರುವು ತನ್ನ ಶಿಷ್ಯನಲ್ಲಿ ಜ್ಞಾನದ ಬೀಜ ಬಿತ್ತಿ ,ಜ್ಞಾನದ ಹುಟ್ಟಿಗೆ ಕಾರಣನಾಗುತ್ತಾನೆ . ಆದ್ದರಿಂದ ಆತ ಬ್ರಹ್ಮ. ಗುರುವು ತನ್ನ ಶಿಷ್ಯನನ್ನು ಸರಿಯಾದ ದಾರಿಯಲ್ಲಿ ಅಂದರೆ ಕತ್ತಲಿಂದ ಬೆಳಕಿನೆಡೆಗೆ ಕೈ ಹಿಡಿದು ನಡೆಸುತ್ತಾನೆ. ಚಿಗುರಿನಂತಿರುವ ಆತನನ್ನು ಸರಿಯಾಗಿ ಪೋಷಿಸಿ ಫಲ ನೀಡುವ ಮರವಾಗುವ ಹಾಗೆ ನೋಡಿಕೊಳ್ಳುತ್ತಾನೆ. ಆದ್ದರಿಂದ ಆತ ವಿಷ್ಣು . ಒಬ್ಬ ಗುರುವು ತನ್ನ ಶಿಷ್ಯನಲ್ಲಿರುವ ಕಾಮ ,ಕ್ರೋಧ ,ಮದ ,ಮತ್ಸರ,ಮೋಹ ,ಲೋಭಗಳನ್ನು ನಾಶ ಮಾಡುತ್ತಾನೆ . ಆದ್ದರಿಂದ ಅವನೇ ಶಿವ . ಹೀಗೆ ತ್ರಿಮೂರ್ತಿಗಳನ್ನು ಒಳಗೊಂಡಿರುವ ಆತನೇ ಪರಬ್ರಹ್ಮ ಅಂದರೆ ಅತೀ ದೊಡ್ಡ ಶಕ್ತಿ .ಅಂತಹ ಗುರುವಿಗೆ ನಾನು ನಮಿಸುತ್ತೇನೆ.
ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಒಂದು ಮಹೋನ್ನತ ಸ್ಥಾನವಿದೆ. ಮಾತೃದೇವೋ ಭವ,ಪಿತೃ ದೇವೋ ಭ್ಹವ,ಆಚಾರ್ಯ ದೇವೋ ಭವ ಹೀಗೆ ತಾಯಿ,ತಂದೆ ನಂತರದ ಸ್ಠಾನ ಗುರುವಿಗೆ ನೀಡಲಾಗಿದೆ.ಯಾಕಂದರೆ ದೇಶದ ಮುಂದಿನ ಪೀಳಿಗೆ, ಅಂದರೆ ಕಲ್ಲಿನಂತಿರುವ ಮಕ್ಕಳನ್ನು ಮೂರ್ತಿಯಂತೆ ರೂಪು ಕೊಡುವಲ್ಲಿ ಗುರುಗಳದ್ದು ಮಹತ್ತರ ಪಾತ್ರ.ಹಾಗೆಯೇ ನನ್ನ ಬಾಳಲ್ಲಿ ಕೂಡ.
ಅಂದು ಅವರು ಧಾರೆಯೆರದ ಜ್ಞಾನ ಇಂದು ನನ್ನ ಹೊಟ್ಟೆಗೆ ಹಿಟ್ಟು ,ಮಾನ ಮುಚ್ಚಲು ಬಟ್ಟೆ ನೀಡುತ್ತಿದೆ.ಆಷ್ಟೇ ಅಲ್ಲಾ
ಆಂದು ನಾನು ತಪ್ಪು ಮಾಡಿದಾಗ ಕಿವಿ ಹಿಡಿದು ತಿದ್ದಿದ್ದಿಕ್ಕೆ,ಇಂದು ನಾನು ತಪ್ಪು ಮಾಡುವ ಮುಂಚೆ ನನ್ನ ಆತ್ಮಾಸಾಕ್ಷಿ ನನ್ನ ತಡೆ ಹಿಡಿಯುತ್ತದೆ.ಆಂದು ಅವರು ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಇಂದು ನನಗೆ ನನ್ನ ಬಾಳಲ್ಲಿ ಆತ್ಮ ವಿಶ್ವಾಸದಿಂದ ಮುನ್ನುಗ್ಗಲು ಸಾಧ್ಯಾವಾಗಿದೆ. ಇಂದಿನ ನನ್ನ ಸಾರ್ಥಕ ಜೀವನಕ್ಕೆ ನನ್ನ ಎಲ್ಲಾ ಗುರುಗಳು ಕಾರಣ. ಅವರ ಬಗ್ಗೆ ಬರೆಯುತ್ತಾ ಹೋದರೆ ಅದು ಮುಗಿಯುವುದಿಲ್ಲ. ಆದ್ದರಿಂದ ಕೆಲವರ ಬಗ್ಗೆ ಬರೆದಿದ್ದೇನೆ.
ತಾಯಿಯೇ ಮೊದಲ ಗುರು. ಹೌದು ಇಂದು ನಾನು ವೇದಿಕೆ ಮೇಲೆ ನಿಂತು ಉದ್ದುದ್ದ ಸಂಭಾಷಣೆ ಹೊಡೆದು ಜನರಿಂದ ಚಪ್ಪಾಳೆ ಹೊಡೆಸಿಕೊಳ್ಳತ್ತಿದ್ದೇನೆಂದರೆ ಕಾರಣ ನನ್ನ ತಾಯಿ .ನನಗೆ ಬಾಲ್ಯದಲ್ಲಿ 'ರ' ಉಚ್ಚಾರ ಬರುತ್ತಿರಲಿಲ್ಲ , 'ಸ''ಷ'ಶ' 'ಲ''ಳ' ಇವುಗಳ ನಡುವೆ ವ್ಯತ್ಯಾಸವೇ ಗೊತ್ತಿರಲಿಲ್ಲ. ಒಂದು ದಿನ ನನ್ನ ನೆಂಟರು ನನ್ನನ್ನು ಈ ವಿಷಯಕ್ಕಾಗಿ ಗೇಲಿ ಮಾಡಿ ನಕ್ಕಿದ್ದು ಇನ್ನೂ ನೆನಪಿದೆ. ಅಮ್ಮ ನನ್ನ ತಿದ್ದಲು ಪಟ್ಟ ಕಷ್ಟ ಅಷ್ಟಿಷ್ಟಲ್ಲಾ.ನಾನು ಅವರ ಕೈಯಿಂದ ತಿಂದ ಪೆಟ್ಟು ಅಷ್ಟಿಷ್ಟಲ್ಲಾ. ಅವೆಲ್ಲಾ ಇಂದು ನನಗೆ ಚಪ್ಪಾಳೆಯಾಗಿ ಕೇಳಿಬರುತ್ತಿದೆ.
ಇನ್ನು ಇಂದು ನಾನು ಗಣಿತವನ್ನು ಸರಾಗವಾಗಿ ಮಾಡುತ್ತೇನೆ,ಏಂತಹ ದಡ್ಡನಿಗೂ ಸುಲಭವಾಗಿ ಅರ್ಥವಾಗುವಂತೆ ಹೇಳಿ ಕೊಡುತ್ತೇನೆ ಅಂದರೆ ನನ್ನ ತಂದೆ ಕಾರಣ.ನಿಜ ಹೇಳಬೇಕಂದರೆ ನನ್ನ ತಂದೆ ಓದಿದ್ದೂ ಹತ್ತನೇ ತರಗತಿ,ಕನ್ನಡ ಮಾಧ್ಯಮದಲ್ಲಿ . ಆದರೆ ನನ್ನ ತಂದೆ ನನಗೆ c.b.s.e ಲೆಕ್ಕಗಳನ್ನು ಹತ್ತನೇ ತರಗತಿಯವರೆಗೆ ಹೇಳಿಕೊಡುತ್ತಿದ್ದರು.ನಿಜ ಹೇಳಬೇಕೆಂದರೆ c.b.s.e ಲೆಕ್ಕಗಳು ಸುಲಭದ ತುತ್ತಲ್ಲಾ.ಮೊದಲಿಂದಲೂ ಆಂಗ್ಲ ಮಾಧ್ಯಮದಲ್ಲಿ ಓದಿದ ನನಗೇ ಇಂದು ಕೆಲವೊಂದು ಲೆಕ್ಕಗಳು ಅರ್ಥ ಆಗುವುದು ಕಷ್ಟ.ನಮ್ಮ ಅಪ್ಪನನ್ನು ನೋಡಿದಾಗ ನನಗೆ ಈಗಲೂ ಹೆಮ್ಮೆಯಾಗುತ್ತದೆ. ಹಾಗೆಯೇ ನನ್ನ ಗಣಿತದ ಅಂಕಗಳನ್ನು ನೋಡಿದಾಗಲೂ ಕೂಡ.
ನಾನು ಪ್ರತಿ ಸಾರಿಯೂ ವೇದಿಕೆಯನ್ನು ಯಾವುದೇ ಭಯವಿಲ್ಲದೆ ಹತ್ತುವಾಗ ನನಗೆ ನೆನಪಾಗುವುದು ನನ್ನ ಸ್ಕೂಲಿನಲ್ಲಿದ್ದ ಕಲಾವತಿ ಮೇಡಂ ಹಾಗು ವಿದ್ಯಾ ಮೇಡಂ .ಕಲಾವತಿ ಮೇಡಂ ಒಂದು ಪಾಠ ಮುಗಿಯುತ್ತಿದ್ದಂತೆಯೇ ಅದನ್ನು ನಮಗೆ ನಾಟಕದ ಮೂಲಕ ಅಭಿನಯಿಸಿ ತೋರಿಸಲು ಹೇಳುತ್ತಿದ್ದರು. ಆಗ ನಾನು ನಾಟಕಗಳನ್ನು ನಿರ್ದೇಶಿಸಿ,ಆಭಿನಯಿಸುತ್ತಿದ್ದೆ. ನನ್ನಲ್ಲಿನ ಸೃಜನ ಶೀಲತೆಯನ್ನು ಮೊದಮೊದಲು ಪೋಷಿಸಿದ ವ್ಯಕ್ತಿ ಅವರೇ ಆಂದರೆ ತಪ್ಪಾಗಲಾಗದು.ಇನ್ನು ವಿದ್ಯಾ ಮೇಡಂ ಅವರ ಪ್ರತಿ ಕ್ಲಾಸ್ನಲ್ಲಿಯೂ self expression ಎಂದು ಮಾಡಿಸುತ್ತಿದ್ದರು.ಪ್ರತಿಯೊಬ್ಬರೂ ಒಂದೊಂದು ದಿನ ಎನಾದರೂ ಅವರಗನ್ನಿಸಿದ್ದನ್ನು ಎಲ್ಲರ ಮುಂದೆ ಮಾಡಬೇಕಿತ್ತು. ನನ್ನಲ್ಲಿರುವ stage fear ತೊಡೆದುಹಾಕಲು ಅದು ಬಹಳ ಸಹಕಾರಿಯಾಗಿತ್ತು.
ನನ್ನನು ಅತಿಯಾಗಿ ಕಾಡುವ ಇನ್ನೊಬ್ಬ ಮೇಷ್ಟ್ರು ಅಂದರೆ ,ಸ್ವರ್ಗವಾಸಿಯಾಗಿರುವ ನನ್ನ ಪ್ರೀತಿಯ ತಿಪ್ಪೇಶ್ ಸರ್. ಸ್ಕೂಲಿನಲ್ಲಿದ್ದಾಗ ನಾನು ನಾಟಕ,ಮಿಮಿಕ್ರಿ ಮಾಡಿಕೊಂಡು ಸ್ವಲ್ಪ ಹೆಸರು ವಾಸಿಯಾಗಿದ್ದೆ.ಯಾರಾದರೂ ಚಪ್ಪಾಳೆ ತಟ್ಟುತ್ತಾರೆ ಅಂದರೆ ಸಾಕು ಬೀದಿ ಬೀದಿಯಲ್ಲಿ ನಿಂತು ಅವರು ಹೇಳಿದಂತೆ ಕುಣಿಯುತ್ತಿದ್ದೆ.ಒಂದು ದಿನ ತಿಪ್ಪೇಶ್ ಸರ್ ನನ್ನನ್ನು ಕರೆದು ಹಾಗೆ ಬೀದಿ ಬೀದಿಯಲ್ಲಿ ಯಾರೋ ಹೇಳಿದರು ಅಂತ ಮಾಡಿದರೆ ,ಜನ ನಿನ್ನನ್ನು ಬೀದಿಯಲ್ಲಿ ಪೈಸೆಗೆ ಕುಣಿಯುವ ಮಂಗನಂತೆ ನೋಡುತ್ತಾರೆ.ನಿನ್ನ ಕಲೆಗೂ ಬೆಲೆ ಇರುವುದಿಲ್ಲಾ.ವೇದಿಕೆಯಲ್ಲಿ ಮಾತ್ರ ನಿನ್ನ ಕಲೆಯನ್ನು ತೋರಿಸು ಅಂತ ಬುದ್ಧಿವಾದ ಹೇಳಿದ್ದರು.ಇನ್ನೂ ನಾನು ಸ್ಕೂಲಿನಲ್ಲಿ ನಾಟಕಗಳಲ್ಲಿ ಅಭಿನಯಿಸುವಾಗ ಚಲನಚಿತ್ರದ ನಟರನ್ನು ತುಂಬಾ ಅನುಕರಿಸುತ್ತಿದ್ದೆ. ಚಪ್ಪಾಳೆ ಗಿಟ್ಟಿಸುವುದೇ ನನ್ನ ಉದ್ದೇಶವಾಗಿತ್ತು. ಒಮ್ಮೆ ನನ್ನ ಕರೆದು ಅದೇ ಸರ್ ಬೇರೆಯವರನ್ನು ಅನುಕರಿಸಬೇಡ .ನಿನ್ನ ಅಭಿನಯದಲ್ಲಿ ಸ್ವಂತಿಕೆಯನ್ನು ರೂಡಿಸಿಕೋ ಎಂದು ಬುದ್ಧಿವಾದ ಹೇಳಿದ್ದರು. ಈಗಲೂ ನನಗೇ ಆ ಮಾತುಗಳು ಕಿವಿಯಲ್ಲಿ ಗುಂಯ್ ಗುಡುತ್ತಿರುತ್ತದೆ.
ಮೇಲೆ ಕೆಲವರ ಉದಾಹರಣೆ ಕೊಟ್ಟಿದ್ದೇನೆ ಅಷ್ಟೆ.ನನ್ನ ಪ್ರತಿಯೊಬ್ಬ ಗುರುಗಳು ಒಂದಲ್ಲಾ ಒಂದು ರೀತಿ ನನ್ನ ಬಾಳಲ್ಲಿ ತಮ್ಮ ಛಾಪನ್ನು ಒತ್ತಿದ್ದಾರೆ.ನಿಮ್ಮ ಬಾಳಲ್ಲಿಯೂ ಕೂಡ ಇಂತಹ ಗುರುಗಳು ಇದ್ದರು ಅಂದುಕೊಂಡಿರುತ್ತೇನೆ. ಹಾಗಿದ್ದಲ್ಲಿ ಒಮ್ಮೆ ಅವರನ್ನು ಸ್ಮರಿಸಿಕೊಳ್ಳಿ . ಅಲ್ಲಿಂದಲ್ಲಿಯೇ ಅವರಿಗೊಂದು ಪ್ರಮಾಣ ಮಾಡಿ.
English summary : Guru is Brahma.Because he is the one who is the responsible for the birth of the sapling called knowledge in his student.Guru is vishnu because he is the one who nourishes that plant in student.Guru is Shiva because he is the one who destroys the evils in his students.So,guru is the almighty "parabrahma".
In my life teachers have played important role .First one is my mom.Today if I get claps for my dialogue delivery on stage,its because of her.She was the one who corrected my pronunciation in my childhood days.Second is my father.Today whenever I see my marks of mathematics of my school days,I feel happy.And all these because of my dad.Eventhough he was from kannada medium and studied till 10 th he used to teach me maths of C.B.S.E.Such a genius he was.Last but not least Tippesh sir.During my childhood days ,whenever I used to act I used to imitate many kannada actors.He was the one who called me and asked to stop imitating others and cultivate style of my own.
I think even in ur life teachers played important role.If so now its time to remember them.

Neat and cute narration. Congrats. Ramachandran Satyanarayana on Face Book
ಪ್ರತ್ಯುತ್ತರಅಳಿಸಿ