ಇಂದು ಗಾಂಧಿ ಜಯಂತಿ .ನಮ್ಮ ದೇಶದ ಪಿತಾಮಹ. ನನಗೆ ವ್ಯಯಕ್ತಿಕವಾಗಿ ಗಾಂಧೀಜಿ ಯವರನ್ನು ಕಂಡರೆ ಅಷ್ಟಕ್ಕಷ್ಟೇ . ಆದರೆ ದೇಶವೇ ಒಬ್ಬನನ್ನು ನಾಯಕನನ್ನಾಗಿ ಒಪ್ಪಿಕೊಂಡ ಮೇಲೆ ಆ ವ್ಯಕ್ತಿಯಲ್ಲಿ ಆಂತದ್ದೇನೋ ಶಕ್ತಿ ಇರುವುದು ನಿಜ.ಅದಕ್ಕೇ ನಮ್ಮ ದೇಶದ ಗಡಿಯಾಚೆಗೂ ಅವರ ಅಭಿಮಾನಿಗಳು ಇದ್ದಾರೆ. ಅವರನ್ನು ಹಾಡಿ ಹೊಗಳುವವರಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವರಲ್ಲಿ ಗಾಂಧೀಜಿಯವರು ಪ್ರಮುಖ ಪಾತ್ರ ವಹಿಸಿದ್ದರು(ಅವರೇ ತಂದುಕೊಟ್ಟರು ಎಂದು ಒಪ್ಪಿಕೊಳ್ಳುವುದು ನನಗೇ ಕಷ್ಟ,ಆದರೆ ಅವರ ಹುಟ್ಟುಹಬ್ಬದ ದಿನದಂದು, ಸುಮ್ಮನೇ ಇಲ್ಲದೇ ಇರೋದನ್ನು ಯಾಕೆ ಕೆದುಕೋದು?).ಆದೊಂದೇ ಆಗಿದ್ದರೆ ನಾವು ಗಾಂಧೀಜಿಯವರನ್ನು ಮರೆತು ಹೋಗುತ್ತಿದ್ದೆವು ಅನಿಸುತ್ತದೆ.
ಆದರೆ ಗಾಂಧೀಜಿಯವರು ಇಂದಿಗೂ ಪ್ರಸ್ತುತ ಅನ್ನಿಸುವುದಕ್ಕೆ ,ಇನ್ನೂ ಅನೇಕ ಕಾರಣಗಳಿವೆ. ಅದು ಅವರ ಖಾದಿಮಯ ಸರಳ ಜೀವನವಿರಬಹುದು. ಬಂದೂಕು ಹಿಡಿದವರ ಮುಂದೆ ಅಹಿಂಸೆಯೆಂಬ ಅಸ್ತ್ರ ಉಪಯೋಗಿಸಿದ ರೀತಿ ಇರಬಹುದು. ಅಥವಾ ಒಂದು ವರ್ಷದ ಹಿಂದೆ ದೇಶದ ಜನರನ್ನು ಬಡಿದೆಬ್ಬಿಸಿದ ಲೋಕಪಾಲ ಮಸೂದೆಗಾಗಿ ನಡೆದ ಸತ್ಯಾಗ್ರಹ ಇರಬಹುದು. ಜಾತಿ ಪದ್ಧತಿ ,ವರ್ಣ ಭೇದ ವಿರುದ್ಧ ಅವರ ನಿಲುವುಇರಬಹುದು . (ಅಂಬೇಡ್ಕರ ತರಹ ಹಿಂದು ಧರ್ಮ ಬಿಡದೇ ,ಹಿಂದು ಧರ್ಮದಲ್ಲಿ ಇದ್ದುಕೊಂಡೇ ಅದನ್ನು ತಿದ್ದಲು ಹೋದ ರೀತಿಯನ್ನು ನಾವಿಲ್ಲಿ ಗಮನಿಸಬೇಕಾಗಿದೆ)." ಹೆಣ್ಣು ಒಬ್ಬಳು ಮಧ್ಯರಾತ್ರಿ ಸ್ವತಂತ್ರವಾಗಿ ಓಡಾದಿದ ದಿನ, ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕ ದಿನ" ಏಂದು ಅವರು ಹೇಳಿರುವ ಮಾತು ಇಂದು ನಮ್ಮ ಕಿವಿಗೆ ಬಿದ್ದರೆ ನಮಗೇ ನಾಚಿಕೆಯಾಗುತ್ತದೆ.
ಗಾಂಧೀಜಿಯವರು ಸರಳವಾಗಿಯೇ ಬದುಕುತ್ತಾ , ಬದುಕಿನ ಮೌಲ್ಯಗಳನ್ನು ಸರಳವಾಗಿಯೇ ನಮಗೇ ತಿಳಿಹೇಳಿದ್ದಾರೆ. ಅದರಲ್ಲಿ ಅವರು ಪಾಲಿಸುತ್ತಿದ್ದ ಮೂರು ಮಂಗಗಳ ನೀತಿ ನನಗೇ ಬಹು ಹತ್ತಿರವಾದದ್ದು. ಈ ಮೂರು ಮಂಗಗಳಲ್ಲಿ ಒಂದು ತನ್ನ ಬಾಯಿ ಮುಚ್ಚಿಕೊಂಡಿರುತ್ತದೆ,ಇನ್ನೊಂದು ಕಿವಿ ಹಾಗು ಇನ್ನೊಂದು ಕಣ್ಣು ಮುಚ್ಚಿಕೊಂಡಿರುತ್ತದೆ. ನೋಡಿದಾಗ ನಮಗೇ ಇದರಲ್ಲಿ ಅಂತದ್ದೇನಿದೆ ಅನ್ನಿಸಬಹುದು. ಆದರೆ ಕೆಟ್ಟದ್ದನ್ನು ನೋಡಬೇಡಿ,ಕೆಟ್ಟದನ್ನು ಕೇಳಬೇಡಿ,ಕೆಟ್ಟದನ್ನು ಮಾತನಾಡಬೇಡಿ ಏಂಬ ಈ ಮಂಗಗಳ ತತ್ವ,ಈಗಿನ ನಮ್ಮ ಶಿಥಿಲ ಸಮಾಜವನ್ನು ಮತ್ತೆ ಸರಿಯಾದ ಹಳಿಯಲ್ಲಿ ತರುವ ನಿಟ್ಟಿನಲ್ಲಿ ನೋಡಿದಾಗ ಬಹಳ ಮಹತ್ವದೆನಿಸುತ್ತದೆ.
ಗಾಂಧೀಜಿ ಇಂದು ನಮ್ಮೊಂದಿಗೆ ಇಲ್ಲಾ. ಆವರ ನೆನಪು ನಮ್ಮಲ್ಲಿ ಸದಾ ಇರಲಿ ಎಂದೇನೋ ಅವರ ಮೂರ್ತಿಯನ್ನು ಕೆತ್ತಿ ಕೆತ್ತಿ ಏಲ್ಲಿ ಬೇಕೆಂದರಲ್ಲಿ ಇಡಲಾಗಿದೆ. ಅವರ ಫೋಟೊಗಳನ್ನು ಪ್ರತಿ ಸರ್ಕಾರಿ ಕಛೇರಿಗಳಲ್ಲಿ ,ಶಾಲಾ ಕಾಲೇಜುಗಳಲ್ಲಿ ಇಡಲಾಗಿವೆ. ಗಾಂಧೀಜಿ ಹೆಸರಲ್ಲಿ ರಸ್ತೆಗಳಿವೆ,ಶಾಲ್ಗಳಿವೆ,ಆಶ್ರಮಗಳಿವೆ,ನಗರಗಳಿವೆ. ಆಷ್ಟೇ ಏಕೆ ನಮ್ಮ ನೋಟುಗಳಲ್ಲಿ ಕೂಡ ನಗುವ ಬಾಪುವನ್ನು ನೋಡುತ್ತೇವೆ. ಆದರೆ ಇಷ್ಟೆಲ್ಲಾ ಇದ್ದರೂ ಗಾಂಧೀಜಿಯವರ ಆತ್ಮಕ್ಕೆ ಇನ್ನೂ ಶಾಂತಿ ಸಿಕ್ಕಿಲ್ಲ .ಯಾಕೆ ಗೊತ್ತಾ?
ನಾವುಗಳು ಬರಿಯ ಜೀವವಿಲ್ಲದ ಅವರ ಮೂರ್ತಿಗಳನ್ನು ಅಥವಾ ಫೋಟೋಗಳನ್ನು ಇಟ್ಟುಕೊಂಡಿದ್ದೇವೆ.ಅಥವಾ ಜೀವವಿಲ್ಲದ ಕಟ್ಟಡಗಳಿಗೆ,ರಸ್ತೆಗಳಿಗೆ ಅವರ ಹೆಸರನ್ನು ಇಟ್ಟಿದ್ದೇವೆ . ಆದರೆ ಎಲ್ಲಿಯೂ ಅವರ ತತವಗಳನ್ನೂ ಪಾಲಿಸುವ ಗೋಜಿಗೆ ಹೋಗಿಲ್ಲ. ಮಹಾತ್ಮ ಗಾಂಧಿ ರಸ್ತೆಯಲ್ಲಿಯೇ ಹೆಣ್ಣು ಮಕ್ಕಳ ಅತ್ಯಾಚಾರ ನಡೆಯುತ್ತದೆ,ಅಲ್ಲಿಯೇ ಮಧ್ಯಪಾನ ಮಾರುವ ಅಂಗಡಿಗಳು ಇರುತ್ತವೆ,ಕೊಲೆ ಸುಲಿಗೆಗಳು ನಡೆಯುತ್ತವೆ.ಇನ್ನು ಸರ್ಕಾರಿ ಕಛೇರಿಗಳಲ್ಲಿ ಅವರ ಛಾಯಾಚಿತ್ರದ ಮುಂದೆಯೇ ಅವ್ಯವಹಾರಗಳು ನಡೆಯುತ್ತವೆ. ಹೀಗೆ ಒಂದೇ ಎರಡೇ. ಅವರ ತತ್ವಗಳನ್ನು ಪಾಲಿಸದೇ ಹೋದರೆ ಅವರ ಮೊರ್ತಿಗಳು,ಛಾಯಚಿತ್ರಗಳಿದ್ದರೆ ಏನು ಪ್ರಯೋಜನ?ನಿಜವಾಗಿಯೂ ಅವು ಬೇರೆ ಜೀವವಿಲ್ಲದ ವಸ್ತುಗಳಿಗ ಸಮ ಎನಿಸುತ್ತದೆ.
ಒಂದರ್ಥದಲ್ಲಿ ಕೆಟ್ಟದ್ದನ್ನು ನೋಡಬೇಡಿ,ಕೆಟ್ಟದನ್ನು ಕೇಳಬೇಡಿ,ಕೆಟ್ಟದನ್ನು ಮಾತನಾಡಬೇಡಿ ಎಂದು ಹೇಳಿಕೊಟ್ಟ ಗಾಂಧೀಜಿಗೆ ನಾವು ಹೀಗೆಯೇ ನಮ್ಮ ಕರ್ಮ ಕಾಂಡಗಳನ್ನು ಮುಂದುವರೆಸುತ್ತೇವೆ. ನೀವೇ ನೋಡುವುದು ,ಕೇಳುವುದು ಅಥವಾ ಮಾತನಾಡುವುದು ಬಿಟ್ಟು ಬಿಡಿ ಎಂಬ ಅರ್ಥದಲ್ಲಿ ನಮ್ಮ ಬದುಕು ನಡೆಸುತ್ತಿದ್ದೇವೆ.
ಇದೆಲ್ಲಾ ಯಾಕೆ ನೆನಪಾಯಿತು ಅಂದರೆ ಮೊನ್ನೆ ನಮ್ಮ ಕಂಪನಿಯಲ್ಲಿ ಗಾಂಧಿ ಸರ್ಕಲ್ ಎಂಬ mimes ಮಾಡಿದ್ದೆವು. ಅದರ ಕಥೆ ನಾನು ಇಲ್ಲಿವರೆಗೂ ಹೇಳಿದ ವಿಷಯಗಳನ್ನೇ ಅವಲಂಭಿಸಿತ್ತು. ತುಂಬಾ ದಿನಗಳ ಹಿಂದೆಯೇ ನಾನು ಈ mimes ನಿರ್ದೇಶಿಸಿ ,ಅನೇಕ ಬಾರಿ ಮಾಡಿದ್ದರೂ ಕೂಡ ಅದರ ವಿಡಿಯೋ ನನ್ನ ಹತ್ತಿರ ಇರಲಿಲ್ಲ. ಇದೀಗ ಸಿಕ್ಕಿದೆ..ಗಾಂಧಿ ಜಯಂತಿಯಂದು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.
https://www.youtube.com/watch?v=wc4KeebSqd8
ನನ್ನ ಬೇರೆ ವೀಡಿಯೋಗಳು ಕೆಳಗೆ ಇವೆ ನೋಡಿ ಆನಂದಿಸಿ
https://www.youtube.com/watch?v=wc4KeebSqd8
ನನ್ನ ಬೇರೆ ವೀಡಿಯೋಗಳು ಕೆಳಗೆ ಇವೆ ನೋಡಿ ಆನಂದಿಸಿ
https://www.youtube.com/watch?v=K62O-1E3rnU
English summary: Gandhi circle(mime) directed by Shravan Narayan.It focuses on the present day situation in India regarding people's view on Mahatma Gandhiji's principle.Mahatma Gandhiji,considered father of our nation preached us not to see bad ,not to speak bad and not to talk bad.Today after his death ,we have Gandhiji everwhere in india .We have Gandhiji 's statue,Gandhiji's photo almost in every organisation.We even have circles,road,schools,hospitals named after him.But what's missing in them all? gandhiji principles.We do all shameful acts in front of him . These acts are like we telling him not to see us,not to hear us and stop preaching us.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ