ಬುಧವಾರ, ಸೆಪ್ಟೆಂಬರ್ 19, 2012

ಕೋಸಂಬರಿ ಪಾನಕ



    ಸತ್ಯ ಯುಗ,ತ್ರೇತಾ ಯುಗ,ದ್ವಾಪರ ಯುಗ ,ಈಗ (ಸಾರೀ ನಾಟ್ ಸುದೀಪ್ ಈಗ,ಕನ್ನಡದ ಈಗ) ಕಲಿಯುಗ ಅಲ್ಲಾ ಅಲ್ಲಾ ಇದನ್ನ NETಯುಗ ,ಅಥವಾ ELEಯುಗ ಅಲಿಯಾಸ್ MECHANICಯುಗ ಅಂತಾನು ಕರೀಬಹುದು.ಯಾಕಂದ್ರೆ ಇಂದಿನ.ನಮ್ಮ ಈ ಜೀವನವನ್ನು , ಜೀವವಿಲ್ಲದ ಈ electronic , mechanic ಸಾಧನಗಳು ಇಲ್ಲದೆ ಒಂದು ನಿಮಿಷವೂ ನೆನಸಿಕೊಳ್ಳುವುದಕ್ಕೂ ಸಾಧ್ಯ ಇಲ್ಲ . Heroin ಇಲ್ಲದೆ ಇರೋ ರವಿಚಂದ್ರನ್ ಫಿಲಂ,talktime ಇಲ್ಲದೆ ಇರೋ simಗಳ ಥರಹ ಅನಿಸಿ ಬಿಡುತ್ತದೆ .

            ಒಂದು button ಒತ್ತಿದರೆ ಮೂರ್ಖರ ಪೆಟ್ಟಿಗೆ ಟಿವಿಯಲ್ಲಿ ,ಅಂತರ್ಜಾಲದಲ್ಲಿ ಅದೂ ನೇರ ಪ್ರಸಾರದಲ್ಲಿ ಪಾರ್ಲಿಮೆಂಟ್ ಹಾಲಲ್ಲಿ ನಮ್ಮ ರಾಜಕೀಯದವರು ಏನ್ ಮಾಡ್ತಾ ಇದ್ದಾರೆ (ಏನು ನೋಡ್ತಾ ಇದ್ದಾರೆ),ಲಾರ್ಡ್ಸ್ ಮೈದಾನದಲ್ಲಿ ಏನು ಆಟ ಆಡುತ್ತ ಇದ್ದಾರೆ, ಕಾಶಿ ಅಲ್ಲಿ ವಿಶ್ವನಾಥನ ದರ್ಶನ ( ಅಷ್ಟೇ ಯಾಕೆ ರೂಂ ಅಲ್ಲಿ ನಿತ್ಯಾನಂದನ ರಾಸ ಲೀಲೆ) ನೋಡಬಹುದು.ನಮ್ಮ ಅಂತರ್ಜಾಲದಲ್ಲಿ ಜೀವ ಸೃಷ್ಟಿಸುವ ಮಾಹಿತಿಯಿಂದ ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದರ ಬಗ್ಗೆ, ಸಾರಿನಪುಡಿ ತಯಾರಿಸುವುದರಿಂದ ಸೀರೆ ನೆರಿಗೆ ಹಾಕಿಕೊಳ್ಳುವ ದರ ಬಗ್ಗೆ, ಅಷ್ಟೇ ಯಾಕೆ ಬಾಂಬ್ ತಯಾರಿಸುವ ಬಗ್ಗೆಯೂ ಮಾಹಿತಿ ಸಿಗುತ್ತದೆ .ಇನ್ನು ಮೊಬೈಲ್ ಅಲ್ಲಿ ಜಗತ್ತಿನ ಯಾವ ಮೂಲೆ ಅಲ್ಲಿ ಇರುವವರನ್ನು ಮಾತಾನಾಡಿಸಬಹುದು ,ನೋಡಬಹುದು . ಈಗಿನ ಕಾಲೇಜ್ ನ ಹುಡುಗ ಹುಡುಗಿಯರ ತರಹ ಲವ್ ಮಾಡಬಹುದು ,ಸರಸಾನು ಆಡಬಹುದು . ಹೊರಗಡೆ ಹೋಗಿ ಶಾಪಿಂಗ್ ಮಾಡೋದೇ ಬೇಡ,ಮನೆಯಲ್ಲಿ ಕೂತ್ಕೊಂಡು ತರಕಾರಿ ಇಂದ ಮನೆ ತನಕ (ಅಪ್ಪ ಅಮ್ಮ ಬಿಟ್ಟು ) ಖರೀದಿಸಬಹುದು .ಇನ್ನು ಒಂದು button ಒತ್ತಿದರೆ ಸಾಕು ac ಅಲ್ಲಿ ವಾಯು ದೇವರನ್ನು ತಂಪಾಗಿಯು ಸೃಷ್ಟಿಸಬಹುದು ,ಬಿಸಿಯಾಗಿಯು ಸೃಷ್ಟಿಸಬಹುದು . Aqua guardಅಲ್ಲಿ ಕೊಳಕಾಗಿರೋ ತುಂಗಾ ಜಲವನ್ನೇ ಮತ್ತೆ ಶುದ್ಧ ಮಾಡಿ ,ತುಂಗಾ ಪಾನಕ್ಕಾಗಿ ಉಪಯೋಗಿಸಬಹುದು . ಹೊರಗಡೆ jogging ಓಡೋ ಬದಲು ಒಳಗಡೆ ಮನೆಯಲ್ಲಿ machine ಮೇಲೆ ನಿಂತು ಕೊಂಡರೆ ಸಾಕು, ಅದೇ ನಮ್ಮನ್ನು ಓಡಿಸುತ್ತೆ . ಅಷ್ಟೇ ಯಾಕೆ ಹೆರಿಗೆ ಇಲ್ಲದೆ ಹಾಗೆ ಮಗು ಹುಟ್ಟಿಸಬಹುದು .ಹೀಗೆ ಈಗ ಎಲ್ಲದನ್ನು ತಿನ್ನೋದನ್ನು,ತೊಳ್ಕೊಳ್ಳೋದನ್ನು ,ಕೆರ್ಕೊ ಳ್ಳೋದನ್ನು , ಹುಡ್ಕೋದನ್ನು ,ಹೊಡ್ಕೊಳ್ಳೋದನ್ನು ,ಕೊನೆಗೆ ಯೋಚಿಸೋದನ್ನು ಸುಲಭ ವಾಗಿ ಮಾಡಿದೆ. ಅದರಲ್ಲೂ ಈಗಿನ ಜನಾಂಗ ಬಯಸುವಂತೆ fast food ತರ fast ಆಗಿ ಎಲ್ಲವು ನಡೆಯುತ್ತಿದೆ .

           ಆದರೆ ಎಲ್ಲ ಸುಲಭ ,ತುಂಬಾ ಬೇಗ ಹಾಗು ವೇಗವಾಗಿ ಓಡುವ ಈ ಕಾಲದಲ್ಲಿ,ಮನುಷ್ಯನ ಬದುಕಿನಲ್ಲಿ ನೆಮ್ಮದಿ ಜಾಸ್ತಿ ಆಗಬೇಕಾದ ಬದಲು ಒತ್ತಡ ಅಷ್ಟೇ ವೇಗವಾಗಿ ಜಾಸ್ತಿ ಆಗ್ತಾ ಇದೆ . ಕೆಲಸ ಇಲ್ಲದವರಿಗೆ ಕೆಲಸ ಹುಡ್ಕೋ ಒತ್ತಡ ,ಕೆಲಸ ಇರೋರಿಗೆ ಕೆಲಸ ಉಳಿಸ್ಕೊಳ್ಳೋ ಒತ್ತಡ,ಮದುವೆ ಆಗಿರೋರಿಗೆ ಸಂಸಾರದ ದೋಣಿ ಕಾಪಾಡೋ ಒತ್ತಡ ,girl friend ಇರೋರಿಗೆ ದುಡ್ಡು ಖರ್ಚು ಮಾಡೋ ಒತ್ತಡ,ಇನ್ನು ಇಲ್ಲದೆ ಇರೋರಿಗೆ ಅವರದ್ದೇ ಆದ ಒತ್ತಡ(ಒತ್ತು daa ) .ಮೊದಲೆಲ್ಲ ವಿಧ್ಯಾರ್ಥಿ ಜೀವನ ದಲ್ಲಿ ಅಂದ್ರೆ ಬಾಲ್ಯದಲ್ಲಿ ಒತ್ತಡ ಕಮ್ಮಿ ಅಂತ ಹೇಳ್ತಾ ಇದ್ದರು ,ಆದ್ರೆ ಈಗ tonne ಗಟ್ಟಲೆ ಬ್ಯಾಗ್ ಹೊರೋದ್ರಿಂದ ದೇಹಕ್ಕೆ ಒತ್ತಡ.ಅಷ್ಟೇ ಅಲ್ಲ ಪಕ್ಕದ್ಮನೆ ,ಎದುರುಮನೆ ಹುಡುಗರನ್ನು ಸ್ಪರ್ಧೆ ಅಲ್ಲಿ ಸೋಲಿಸ ಬೇಕು ಅನ್ನುವ ಮಾನಸಿಕ ಒತ್ತಡ."ನೋಡು ಅವನ/ಅವಳು ನೋಡಿ ಸ್ವಲ್ಪ ಕಲಿ " (ಆ ವಯಸ್ಸಿನಲ್ಲಿ ಏನು ನೋಡ್ ಬೇಕು ಅಂತಾನು ಗೊತ್ತಿರಲ್ಲ )ಅಂತಾ ಬಯ್ತಾನೆ ಇರ್ತಾರೆ.ಹೀಗೆ ಸಿಕ್ಕಾಪಟ್ಟೆ ಒತ್ತಡ ,stress ಜಾಸ್ತಿ ಆಗಿ ಮನುಷ್ಯ ಈಗ ಎಲ್ಲೆಲ್ಲೋ ಕೆರ್ಕೊಳ್ಳೋಕ್ಕೆ ಶುರು ಮಾಡಿ,ಕೊನೆಗೆ ದಿಕ್ಕೇ ತೋಚದೆ ಆತ್ಮಹತ್ಯೆಗೆ ಶರಣು ಆಗುತ್ತಾ ಇದ್ದಾರೆ .ಆಗಾಗ ಮರ ,ಟ್ಯಾಂಕ್ ,ಸಿಕ್ಕಸಿಕ್ಕಿದ್ದ ಹತ್ತಿ ಆತ್ಮಹತ್ಯೆ ಮಾಡ್ಕೊತೀನಿ ಅನ್ನೋ ದೃಶ್ಯಗಳನ್ನು , ನೇರ ಪ್ರಸಾರದಲ್ಲಿ ನಮ್ಮ tv9 ಅಲ್ಲಿ ಆಗಾಗ (ನಿಜವಾಗಿ ಅಂದ್ರೆ ಯಾವಾಗಲೂ ) ನೋಡಬಹುದು.
               ಈ ಸ್ಪರ್ಧಾತ್ಮಕ ಜಗತ್ತಿನ್ನಲ್ಲಿ, ನಮ್ಮನ್ನು ಉಳಿಸಿಕೊಳ್ಳುವ ಜಂಜಾಟದಲ್ಲಿ ,ನಿಮಗೆ ಎಲ್ಲೋ ನಮ್ಮ ಮನಸ್ಸಿಗೆ ಬೇಕಾದ ನೆಮ್ಮದಿ ಕಡಿಮೆ ಆಗ್ತಾ ಇದೆ ಅನ್ನಿಸುತ್ತಾ ಇಲ್ವಾ?ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ಹೌದು. ಆದರೆ ಅದೇ ತುತ್ತು ಅನ್ನ ತಿನ್ನುವಾಗ , ಬಟ್ಟೆ ಹಾಕಿಕೊಳ್ಳುವಾಗ ಅಥವಾ ನಂತರ ಎಷ್ಟು ಖುಷಿಯಿಂದ,ನೆಮ್ಮದಿಯಿಂದ ಇರುತ್ತೇವೆ ,ಯೋಚಿಸಿದ್ದೀರಾ? ಅಂದ್ರೆ ನನ್ನ ಮಾತಿನ ಅರ್ಥ ,ಆ ಸಮಯದಲ್ಲೂ ನಮಗೆ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ಉಳಿಸಿಕೊಳ್ಳುವ ಚಿಂತೆ ಆವರಿಸುರತ್ತದೆ .ಅದು ಒಂದು ಮಾಯೆಯಂತೆ ನಮ್ಮ ಹೆಗಲೇರಿ ಕೂತುಕೊಂಡಿರುತ್ತದೆ . ಒಮ್ಮೊಮ್ಮೆ ಈ ಜಂಜಾಟಗಳನ್ನು ಬಿಟ್ಟು ಎಲ್ಲಾದರು ಓಡಿಹೋಗೋಣ ಅನ್ನಿಸಿಬಿಡುವುದಿಲ್ಲವೆ?(ಆದರೆ ಓಡಿಹೋಗೋಕೆ ಸಾಧ್ಯ ಇಲ್ಲ )
               "ಅಲ್ಲಾ.. ಈ ನನ್ನ ಮಗ ಕೋಸಂಬರಿ ಪಾನಕ ಅಂತಾ ಬ್ಲಾಗ್ ಹೆಸರು ಇಟ್ಟುಕೊಂಡು,ಒತ್ತಡದ ಜೀವನದ ಮಧ್ಯೆ ಕೋಸಂಬರಿ ಪಾನಕ ಅಂತ ಇಟ್ಟಕೊಂಡು ,ಇಲ್ಲಿ ನೋಡಿದರೆ ಒತ್ತಡ ,ಒತ್ತು Daa ಅಂತ ಕೊರೀತಾ ಇದಾನೆ"ಅಂತ ಬಯ್ಕೋಬೇಡಿ .ದೇಶದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹಗರಣಗಳಿಗೂ ,ಕರ್ಮಕಾಂಡಗಳಿಗೂ ,ಪ್ರತಿಪಕ್ಷಗಳು ಪ್ರತಿಸಾರಿಯೂ ಇದಕ್ಕೆಲ್ಲ ಕಾರಣಕರ್ತಾರಾದ ಪ್ರಧಾನಿ ರಾಜೀನಾಮೆ ಕೊಡಲಿ ಅಂತ ಕೂಗಿಕೊಳ್ಳೋದಕ್ಕೂ(ಅದರಲ್ಲೂ ಈಗಿನ rubber stamp ಮನಮೋಹನ್ ಸಿಂಗ್ ಜಸ್ಟ್ ಗೊಂಬೆ ಅಷ್ಟೇ )ಎತ್ತಣಿಂದ ಎತ್ತ ಸಂಭಂದವಯ್ಯ ಅನ್ನೋ ಹಾಗೆ ,ಕೋಸಂಬರಿ ಪಾನಕಕ್ಕೂ ,ಒತ್ತಡಕ್ಕೂ ಏನ್ರೀ ಸಂಭಂದ ಅಂತ ನೀವು ಒತ್ತಡಕ್ಕೆ ಒಳಗಾಗಬೇಡಿ .ನಾನು ಇಷ್ಟೋ ತನಕ ಬರೆದಿದ್ದಕ್ಕೂ ,ಕೋಸಂಬರಿ ಪಾನಕಕ್ಕೂ ಸಂಭಂದ ಇದೆ .
              ಒಮ್ಮೆ ನಮ್ಮ ರಾಮನವಮಿ ನೆನಪಿಸಿಕೊಳ್ಳಿ .ತಕ್ಷಣ ನೆನಪಿಗೆ ಬರುವುದು ರಾಮ,ಆಮೇಲೆ ಆವತ್ತು ಪ್ರಸಾದ ಎಂದು ಕೊಡುವ ಕೋಸಂಬರಿ ಪಾನಕ(ನಂಗೆ ಮೊದಲು ನೆನಪಿಗೆ ಬರುವುದು ಕೋಸಂಬರಿ ಪಾನಕ ಆಮೇಲೆ ರಾಮ).ಪ್ರಸಾದ ಕೊಡ್ತಾರೆ ಅಂತ ಗೊತ್ತಾದ ಕ್ಷಣಾರ್ಧದಲ್ಲೇ ಅಲ್ಲಿ ಉದ್ದವಾದ ಸಾಲು ಕಾಣುವಿರಿ .ಚಡ್ಡಿ ಹಾಕಿಕೊಂಡಿರುವ ಹುಡುಗರದೇ ಮೇಲುಗೈ ಆದರೂ, ಹಾಗಂತ ಅವರೇ ಇರುವುದಿಲ್ಲ .ಅಲ್ಲಿ ಎಲ್ಲಾ ವಯೋಮಾನದವರು ಇರುತ್ತಾರೆ.ಆ ಸಾಲಿನಲ್ಲಿ, ಆ ನೂಕು ನುಗ್ಗಲಿನಲ್ಲಿ ,ಹಿಂದೆ ನಮ್ಮನ್ನು ದಬ್ಬುತ್ತಿರುವವರ ಸೇಡಿಗೆ ಮುಂದೆ ಇರುವವರನ್ನು ದಬ್ಬುತ್ತಾ ,ಚೈತ್ರ ಮಾಸದ ಬಿಸಿಲಿನಲ್ಲಿ ,ಸ್ವಲ್ಪಅವಕಾಶ ಸಿಕ್ಕಿದರೆ ಸಾಕು ಮುಂದೆ ಹೋಗುವ ಸಂಚು ಮಾಡುತ್ತಾ ನಿಂತಿರುತ್ತೇವೆ . ನಮ್ಮೆಲ್ಲರ ದೃಷ್ಟಿ ,ಯೋಚನೆ ಆಗಂತೂ ಕೋಸಂಬರಿ ಪಾನಕದ ಮೇಲೆ ಇರುತ್ತದೆ .ಪ್ರತಿ ಹೆಜ್ಜೆಗೂ ನಾವು ಎಷ್ಟು ದೂರ ಇದ್ದೀವಿ ,ನಮ್ಮ ಮುಂದೆ ಎಷ್ಟು ಜನ ಇದ್ದಾರೆ ಅನ್ನೋ ಲೆಕ್ಕಾಚಾರದಲ್ಲಿ,ನಮ್ಮ ಸರದಿ ಬಂದಾಗ ಕೋಸಂಬರಿ ಪಾನಕ ಖಾಲಿ ಆಗಿಬಿಟ್ಟರೆ ಅನ್ನುವ ಭಯದಲ್ಲೇ ಮುನ್ನುಗ್ಗುತಿರುತ್ತೇವೆ.ಒಮ್ಮೆ ಕೋಸಂಬರಿ ಪಾನಕ ಸಿಕ್ಕರೆ ಸಾಕು ಅನಿಸುತ್ತಾ ಇರುತ್ತದೆ.ಸಣ್ಣ ಮಕ್ಕಳು ಇವನ್ನೆಲ್ಲಾ ತೋರಿಸಿಕೊಳ್ಳುತ್ತಾರೆ ,ದೊಡ್ಡವರು ಒಳಗೆ ಎಲ್ಲಾ ಮಾಡುತ್ತಿರುತ್ತಾರೆ .(ಇಲ್ಲ ಎಂದವರಿಗೆ ಒಮ್ಮೆ ಹೊರಗಡೆ ಬಂದು ಬೇರೆಯವರಿಗೆ ಜಾಗ ಕೊಡಲು ಹೇಳಿ,ಗೊತ್ತಾಗುತ್ತದೆ ).ಇನ್ನೇನು ನಮ್ಮ ಮುಂದೆ ಇಬ್ಬರೇ ಇಬ್ಬರು ಇದ್ದಾರೆ ,ಒಬ್ಬನೇ ಇದ್ದಾನೆ ಅನ್ನುವಾಗಂತೂ ಮನಸಿನಲ್ಲಿ ಏನೋ ಹೇಳಿಕೊಳ್ಳಲಾಗದ ಖುಷಿ.ಆಗಲೇ ಕೈ ಒಡ್ಡಿ ಬಿಟ್ಟಿರುತ್ತೇವೆ.ಒಮ್ಮೆ ಸಿಕ್ಕರೆ ಸಾಕು,ಸ್ಪರ್ಧೆಯಲ್ಲಿ ಗೆದ್ದು ಸಿಕ್ಕ ಟ್ರೋಫಿಯಂತೆ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು,೧೦೦೦ ವಾಟ್ಸ್ ಬಿಲ್ಬ್ ಅನ್ನು ಮೀರಿಸವ ನಗೆ ಬೀರುತ್ತೇವೆ.ಹಾಗೆಯೇ ಸಾಲಲ್ಲಿ ಇನ್ನು ನಿಂತು ಕಾಯುತ್ತಿರುವ ಜನರನ್ನುನೋಡಿ ಪಾಪ ಎಂದು ಅವರ ಕಡೆ ಗೆಲುವಿನ ನಗೆ ಹಾಗೆ ಬಿಸಾಕುತ್ತೇವೆ .ಒಬ್ಬರೇ ಯಾರಿಗೂ ಒಂದು ಕಾಳೂ,ಒಂದು ಹನಿಯು ಕೊಡದಂತೆ ಕೋಸಂಬರಿ ಪಾನಕ ತಿಂದು ಪಾನಕ ಕುಡಿದರೆ ಆಹಾ ಏನ್ ಮಜಾ,ಸಂತೋಷ ,ಪರಮಾನಂದ(ನಿತ್ಯಾನಂದ ಬೇಡ).ಇನ್ನೊಮ್ಮೆ ಹೋಗಿ ,ಪ್ರಸಾದ ತಗೋಬೇಕು ಅಂತ ಮನಸ್ಸೊಳಗೆ sketch ಶುರು ಆಗಿರುತ್ತದೆ ಮನಸ್ಸಿನಲ್ಲಿ .ಇಲ್ಲಿ ನಾನು ಕೊಟ್ಟಿರುವುದು ಬರಿ ಒಂದು ಸಣ್ಣ ಉದಾಹರಣೆ .ಇಂತಹ ಅನಭವ ಸಾಮಾನ್ಯವಾಗಿ ನೀವು ಎಲ್ಲ(ಹೀಗೂ ಉಂಟೆ ಕಾರ್ಯಕ್ರಮದಲ್ಲಿ ಬಂದಂತಹ ) ದೇವಸ್ಥಾನದಲ್ಲಿ ,ಬರಿ ಪ್ರಸಾದಕ್ಕಲ್ಲ ಕೆಲವೊಮ್ಮೆ ದೇವರ ದರ್ಶನದ ಸಮಯದಲ್ಲೂ ಆಗಿರುತ್ತದೆ.
                 ಈಗ ವಿಷಯಕ್ಕೆ ಬರೋಣ .ನಮ್ಮ ಜೀವನ ನಾವು ಪ್ರಸಾದಕ್ಕೆ ನಿಂತಿರುವ ಸಾಲೆಂದು ಕೊಳ್ಳೋಣ,ನಾವು ಪ್ರತಿದಿನ ಅನುಭವಿಸುವ ಒತ್ತಡಗಳು ಆ ಸಾಲಿನಲ್ಲಿ ನಿಂತಾಗ ಅನುಭವಿಸುವ ನೂಕು ನುಗ್ಗಾಲಾಟ ಇತರೆ ಕಷ್ಟಗಳು ಎಂದುಕೊಳ್ಳೋಣ.ಹಾಗಾದರೆ ಈ ಕೋಸಂಬರಿ ಪಾನಕ ಏನು ?ನಮ್ಮ ಜೀವನದಲ್ಲಿ ಒತ್ತಡಗಳ ಮಧ್ಯೆ, ಆಗಾಗ ನಮ್ಮ ಮನಸ್ಸಿಗೆ ಮುದ ನೀಡುವ ಚಿಕ್ಕಪುಟ್ಟ ಸಂತೋಷಗಳೇ ಈ ಕೋಸಂಬರಿ ಪಾನಕ .ಉದಾಹರಣೆಗೆ ಎಲ್ಲಾ ಮರೆತು ನಮ್ಮ ಸಂಗಾತಿಯೊಡನೆ ನಿಶ್ಯಬ್ದವಾದ ಸ್ಥಳದಲ್ಲಿ ಕೂತು ಕೈ ಹಿಡಿದಾಗ ಆಗುವ ರೋಮಾಂಚನ , ನಮ್ಮ ಮನಮೆಚ್ಚಿದ ಗೆಳಯರ ಜೊತೆ ಪ್ರವಾಸಕ್ಕೆ ಹೋಗಿ ಮನದಣಿಯೆ ಮಜಾ ಮಾಡಿದ್ದ ಅನುಭವ.ಅಥವಾ ನಮ್ಮ ನೆಚ್ಚಿನ ನಾಯಕ(ನಾಯಕಿ sunny leone ಆಗಿರಬಹುದು ಹಿ ಹಿ ) ಚಲನಚಿತ್ರಕ್ಕೆ ಹೋಗಿ ಸಿಕ್ಕಾಪಟ್ಟೆ ಶೀಟಿ ಹೊಡೆದು ಹೊರಗೆ ಬಂದಂತೆ ಆಗುವ ಸಂತೋಷ ಹೀಗೆ ಹತ್ತು ಹಲವು .ಕೋಸಂಬರಿ ಸಿಕ್ಕಾಗ ಸಾಲಿನಲ್ಲಿ ನಿಂತಾಗ ಪಟ್ಟ ಪಾಡುಗಳನ್ನೆಲ್ಲಾ ಮೆರೆತು ಖುಷಿಯಿಂದ ತಿಂದ ಮೇಲೆ ಒಂದು ಸಂತೃಪ್ತಿ ಭಾವ ಆವರಿಸುತ್ತದೆ ,ಹಾಗೆಯೇ ನಮಗೆ ಮುದ ನೀಡುವ ಯಾವುದೇ ಚಟುವಟಿಕೆಗಳು ಮಾಡುವಾಗ ಎಲ್ಲ ಮರೆತು , ಸಂತೋಷದಿಂದ ಭಾಗವಹಿಸಿದ ಮೇಲೆ ಒಂದು ರೀತಿಯ ನೆಮ್ಮದಿ ಆವರಿಸುತ್ತದೆ .ಆ ಘಳಿಗೆ ಮತ್ತೊಮ್ಮೆ ಯಾವಾಗ ಬರುವುದೋ ಅಂತ ಚಡಪಡಿಸುತ್ತಲೇ ಇರುತ್ತದೆ ನಮ್ಮ ಮನಸ್ಸು .ಒಂದೇ ಒಂದು ವ್ಯತ್ಯಾಸವೆಂದರೆ ಕೋಸಂಬರಿ ಪಾನಕ ಅಥವಾ ಯಾವುದೇ ಪ್ರಸಾದ ನಮಗೆ ಬೇಕು ಬೇಕು ಅಂದಾಗಲೆಲ್ಲಾ ಅಥವಾ ನಮಗೆ ಬೇಕಾದಷ್ಟು ಸಿಗುವುದಿಲ್ಲ .ಆದರೆ ನಿಜವಾದ ಜೀವನದಲ್ಲಿ ನಾವು ಮನಸ್ಸು ಮಾಡಿದರೆ ,ಸರಿಯಾಗಿ ಸಮಯವನ್ನು ಸದುಪಯೋಗ ಪಡಿಸಿಕೊಂಡರೆ ಆಗಾಗ್ಗೆ ಕೋಸಂಬರಿ ಪಾನಕ ಸವಿರುಚಿ ಕಾಣಬಹುದು.ಇಲ್ಲದೆ ಹೋದರೆ ಈ ಯಾಂತ್ರಿಕ ಯುಗದಲ್ಲಿ ನಮ್ಮ ಬದುಕು ಯಂತ್ರಮಯವಾಗಿ ಬಿಡುತ್ತದೆ .ನಮ್ಮ ಬದುಕಿನಲ್ಲಿ ನಮಗೆ ಅಂದರೆ ,ನಮ್ಮ ಮನಸ್ಸಿನ ನೆಮ್ಮದಿಗೆ ಸಮಯ ಇಲ್ಲದೆ ಇದ್ದರೆ ಹೊಟ್ಟೆಗೆ ,ಬಟ್ಟೆಗೆ ಎಷ್ಟೇ ಮಾಡಿಕೊಂಡರೂ ಏನು ಪ್ರಯೋಜನ? ನೀವೇ ಹೇಳಿ.ಕೋಟ್ಯಾಧಿಪತಿ ಹತ್ತಿರ ಕೈ ತುಂಬಾ ಹಣ ಇದ್ದರು ,ಮೈತುಂಬಾ ಇರುವ ರೋಗದಿಂದಾಗಿ ಬಾಯಿಗೆ ರುಚಿ ಅನ್ನಿಸುವ ಊಟಕ್ಕೆ ಬದಲು ಕಹಿ ಔಷಧಕ್ಕೆ ದುಡ್ಡು ಖರ್ಚು ಮಾಡಿದ ಹಾಗಾಗುತ್ತದೆ .
            ಬ್ಲಾಗ್ ಬರೆಯಬೇಕೆಂಬ ಆಸೆ ನನಗೆ ತುಂಬ ದಿನದಿಂದ ಇತ್ತು.ಆದರೆ ನಾನು ಬರದರೆ ಜನ ಓದುತ್ತಾರೋ ಇಲ್ಲವೋ ಎಂಬ ಪ್ರಶ್ನೆಯು ನನ್ನಲ್ಲಿರುವ ಆಸೆಗೆ ನೀರು ಏರುಚುತ್ತಿತ್ತು .ಆಮೇಲೆ ಗಾಡಿ ಕಲಿಯಬೇಕಂದು ಆಸೆ ಇರುವವನು ,traffic ನಲ್ಲಿ ಗಾಡಿ ಹೊಡೆಯುವುದು ಕಷ್ಟ ಎಂದು,ಗಾಡಿಯೇ ಹೊರಗೆ ತಂದು ಕಲಿಯದೇ ಇದ್ದರೆ ,ಗಾಡಿ ಕಲಿಯವುದಾದರು ಹೇಗೆ?ಹಾಗೆಯೇ ನಾನು ಬರೆಯದೆ ಹೋದರೆ ನನ್ನ ಬರವಣಿಗೆ ಜನ ಓದುತ್ತಾರೋ ಇಲ್ಲವೋ ಅಥವಾ ಇಷ್ಟಪಡುತ್ತಾರೋ ಇಲ್ಲವೋ ಎಂದು ತಿಳಿಯುವುದಾದರೂ ಹೇಗೆ ?ಹಾಗೆಯೇ ಗಟ್ಟಿ ಮನಸ್ಸು ಮಾಡಿ ಬರೆಯಲು ಶುರು ಮಾಡಿದ್ದೇನೆ.
            ಆದರೆ ಆಗ ಯಕ್ಷ ಪ್ರಶ್ನೆ ಒಂದು ಹುಟ್ಟಿಕೊಂಡಿತು .ಹೆಸರು ಏನು ಇಡುವುದು ?ಸಾಮಾನ್ಯವಾಗಿ ನನ್ನ ನಾಟಕಕ್ಕೆ ಹೆಸರಿಡುವುದು ಅಥವಾ ಯಾವುದೇ ಕಥೆಗೆ ,ಕವನಕ್ಕೆ ಹೆಸರಿಡುವುದು ನನಗೆ ಕಷ್ಟಕರವಾದ ಕೆಲಸ .ಇಂತಹ ಸಮಯದಲ್ಲಿ ಸಾಹಿತ್ಯದಲ್ಲಿ ಮಾರ್ಗದರ್ಶಕ ನಾಗಿರುವ ಗಣೇಶ್ ಭಟ್ಟ ಕೊಪ್ಪಳ ತೋಟ ಸಹಾಯ ಮಾಡದೆ ಇದ್ದದರಿಂದ ,ನಾನೇ ತೀರ್ಮಾನಕ್ಕೆ ಬರಬೇಕಾಯ್ತು (ಹೆಸರು ಇದುವದರಲ್ಲಿ ನಿಸ್ಸೀಮ ರಾದ ಉಪೇಂದ್ರ ನನ್ನು ಕೇಳೋಣ ಅಂದ್ರೆ ,ಅವರೇ ತಮ್ಮ ಕೊನೆ ಚಿತ್ರಕ್ಕೆ ಬರಿ ಸನ್ನೆ ಇಟ್ಟಿದ್ದಾರೆ ) . ನಾನು ತುಂಬಾ ಓದಿ,ತಿಳಿದು ಕೊಂಡವನಲ್ಲ (ಮಾಡಿದ್ದ ಇಂಜಿನಿಯರಿಂಗ್ ಅಲ್ಲಿ 65 percent ).ಇನ್ನು  ನನ್ನ ಬರಹ ಅಷ್ಟೇನೂ  (ಸ್ವಲ್ಪಾನು )  ಚೆನ್ನಾಗಿಲ್ಲ .ಆದರೆ ನನ್ನ ೨೪ ವರ್ಷ ಬದುಕು ಹಾಗು ನನ್ನ ಸುತ್ತಮುತ್ತಲಿನವರ ಬದುಕನ್ನು ಕಣ್ಣಾರೆ ನೋಡಿ ,ಕಿವಿಯಾರೆ ಕೇಳಿ ಸ್ವಲ್ಪ ಎಲೆ ನಿಂಬೆಕಾಯಿ ಅಂತೆ ಇದ್ದವನು ಈಗ ಸ್ವಲ್ಪ ಸುಧಾರಿಸಿದ್ದೇನೆ .ಒಬ್ಬ ಸಾಮಾನ್ಯ ಮನುಷ್ಯನ ದೃಷ್ಟಿಕೋನವನ್ನೇ ನನ್ನ ಬರವಣಿಗೆಗಳು ,ಕವನಗಳು ,ಕಥೆಗಳು ಬಿಂಬಿಸುತ್ತವೆ .ಅದೇ ಕೋಸಂಬರಿ ,ಸ್ವಲ್ಪ ವಿಭಿನ್ನವಾಗಿ ತಯಾರಿಸಿ ವಿಭಿನ್ನವಾಗಿ ಬಡಿಸುವುದೇ ನನ್ನ ಗುರಿ .ನಿಮಗೆ ತಿಳಿಯದ ಕೆಲವೊಂದು ಜೀವನದ ಸ್ವಾರಸ್ಯಗಳನ್ನೂ ಹೇಳುತ್ತೇನೆ ಅಂತ ಸುಳ್ಳು ಆಶ್ವಾಸನೆ ನಾನು ಕೊಡುವುದಿಲ್ಲ .ಆದರೆ ನನ್ನ ಈ ಬ್ಲಾಗ್ ನಿಮಗೆ ಬೋರ್ ಹೊಡಿಸದೆ ನಿಮ್ಮ ಜೀವನದಲ್ಲಿ ಸಿಗುವ ಕೋಸಂಬರಿ ಪಾನಕದಂತೆ ಇರಬೇಕು ಅನ್ನುವುದು ನನ್ನ ಆಸೆ.ಅದಕ್ಕೆ ಈ ಬ್ಲಾಗ್ ನ ನಾಮಕರಣ ಕೋಸಂಬರಿ ಪಾನಕ.
         ಕೋಸಂಬರಿ ಪಾನಕ ಎಂದು ಹೆಸರಿಡಲು ಕಾರಣ ಇನ್ನು ಒಂದು ಕಾರಣ ಇದೆ.ನಮ್ಮ ಉಡುಪಿ ಎಲೆ ಊಟದಲ್ಲಿ ಪದಾರ್ಥಗಳು ಜಾಸ್ತಿ .ಅಲ್ಲಿ ಉಪ್ಪು ,ಉಪ್ಪಿನಕಾಯಿ ,ಎರಡು ಬಗೆಯ ಕೋಸಂಬರಿ ,ಎರಡು ಬಗೆಯ ಪಲ್ಯ ,ಚಟ್ನಿ ,ಮೆಣಸಿನಕಾಯಿ ,ಬಜ್ಜಿ ,ಹಪ್ಪಳ ಎಲೆಯ ಮೇಲ್ಭಾಗ ಅಲಂಕರಿಸಿರುತ್ತದೆ .ಇನ್ನು ಚಿತ್ರಾನ್ನ ಎಲೆಯ ಕೆಳಗಿನ ಎಡಭಾಗದಲ್ಲಿ ಹಾಗು ಪಾಯಸ ಎಲೆಯ ಕೆಳಗಿನ ಬಲಭಾಗದಲ್ಲಿ ಬಡಿಸಿರುತ್ತಾರೆ .ಇನ್ನು ಮುಖ್ಯ ವಾದ ಅನ್ನ ಸಾರು, ಕೊದ್ದೆಲು ಆಮೇಲೆ ಸಿಹಿ ಎಲ್ಲ ಎಲೆಯ ಕೆಳಭಾಗದ ಮಧ್ಯ ಜಾಗವನ್ನು ಆವರಿಸುತ್ತದೆ . ನಾನು ಹೇಳಲು ಹೊರಟಿರುವುದು ಏನಂದರೆ ,ನಾನು ವೃತ್ತಿಯಿಂದ ಬರಹಗಾರನಲ್ಲ ,ಇದು ಕೇವಲ ನನ್ನ ಪ್ರವೃತ್ತಿ ಅಷ್ಟೇ .ಒಂಥರಾ ಸಾಹಿತ್ಯ ಲೋಕ ಎಂಬ ಎಲೆಯ ತುದಿಯಲ್ಲಿರುವ ಪದಾರ್ಥಗಳ ಹಾಗೆ ಉದಾಹರಣೆಗೆ ಪೌಷ್ಟಿಕವಾದ ಕೋಸಂಬರಿ ಥರಹ . ಈ ಪದಾರ್ಥಗಳು ಎಲೆಯಲ್ಲಿ ಕೆಲವೊಮ್ಮೆ ಇಲ್ಲದೆ ಹೋದರು ನಡೆಯುತ್ತದೆ ,ಆದರೆ ಅವುಗಳು ಇದ್ದರೆ ಊಟ ಇನ್ನಷ್ಟು ಚೆನ್ನಾಗಿರುತ್ತದೆ .ಈ ವಿಷಯ ವೃತ್ತಿಯಿಂದ ಕವಿ ಆಗಿರುವ ಗೆಳಯನಿಗೆ ಹೇಳಿದಾಗ "ಹಾಗಾದ್ರೆ ನಾವೆಲ್ಲ ಅಣ್ಣ ಸಾಂಬಾರ್ ಅಂತ ಇಟ್ಕೋಬೇಕು ಅಂದ ಹಾಗೆ ಆಯಿತು"ಅಂತ ರೇಗಿಸಿದ್ದ .
  .
         ಕೊನೆಯದಾಗಿ ನನ್ನ ಬರವಣಿಗೆಗಳನ್ನು ಪೌಷ್ಟಿಕಾವಾಗಿ ,ರುಚಿಯಾಗಿ ನಿಮ್ಮ ಹಸಿವನ್ನು ನೀಗಿಸುವ ಕೋಸಂಬರಿ ತರಹ ಹಾಗು ತಂಪಾಗಿ,ಸಿಹಿಯಾಗಿ ನಿಮ್ಮ ದಾಹವನ್ನು ತಣಿಸುವ ಬೆಲ್ಲದ ಪಾನಕದಂತೆ ಬರೆಯಲು ಪ್ರಯತ್ನಿಸುತ್ತೇನೆ.ಇದಕ್ಕೆ ನಿಮ್ಮ ಹಾರೈಕೆ ,ಆಶೀರ್ವಾದ ಹಾಗು ಪ್ರೋತ್ಸಾಹ ಅತ್ಯಗತ್ಯ .ಎಲ್ಲಾದರು ಕೋಸಂಬರಿಯಲ್ಲಿ ಉಪ್ಪು,ಹುಳಿ ಜಾಸ್ತಿ ಆಗಿದ್ದಲ್ಲಿ ಅಥವಾ ಪಾನಕದಲ್ಲಿ ಸಿಹಿ ಕಮ್ಮಿ ಇಲ್ಲವೇ ಸಿಕ್ಕಪಟ್ಟೆ ಜಾಸ್ತಿ ಆಗಿದ್ದಲ್ಲಿ ,ದಯವಿಟ್ಟು ತಿನ್ನಲಾಗದೆ ಎಲ್ಲೋ ಉಗಿದು ಸುಮ್ಮನೆ ಹೋಗಬೇಡಿ . ನಿಮ್ಮ ಮುಕ್ತ ಅಭಿಪ್ರಾಯಗಳನ್ನು ತಿಳಿಸುವ ಹಾಗು ನಾನು ಮಾಡಿದ ತಪ್ಪುಗಳನ್ನು ತಿದ್ದುವ ಎಲ್ಲ ಅಧಿಕಾರ ನಿಮಗೆ ಇದೆ .ನೀವು ಜೊತೆಗೂಡಿದರೆ ಕೋಸಂಬರಿ ಪಾನಕದ ರುಚಿಯನ್ನು ಹೆಚ್ಚಿಸಬುಹುದು .ಕೊನೆಯದಾಗಿ ನಿಮ್ಮ ಜೀವನದ ಮಧ್ಯೆ ಮರೆಯೆದೆ ಆಗಾಗ ಕೋಸಂಬರಿ ಪಾನಕ ತಿನ್ನುತ್ತೀರಿ ಎಂದು ಹೇಳುತ್ತಾ (ಮಗ ಸಿಕ್ಕಾಪಟ್ಟೆ ಕೊರೆಯುತ್ತ ಇದ್ದಾನೆ ಅಂತ ಇನ್ನಷ್ಟು ಬಯ್ದುಕೊಳ್ಳುವ ಮೊದಲು ) ಇಲ್ಲಿಗೆ ಮಂಗಳ ಹಾಡುತ್ತೇನೆ .
                                                          ಜೈ ಕೋಸಂಬರಿ ಪಾನಕ.

English summary:I had plan of starting a blog from many days.As I am not that much good in writing ,I was afraid to start.I was even afraid whether people will read or not .But then I thought how can I come to know,unless I start blog.
       Then came the toughest decision .Naming my blog.After asking many people and thinking for many days ,at last I kept name my blog name as "KOSAMBARI PANAKA".Its a side dish in Udupi cuisine.
     There is a reason to keep this name.My literary work is just a handful of sand in the Everest called Kannada literarture. So I wish my literature work to be just like kosamabari paanaka which is  in  one among side dish(compulsory )in  the udupi cusine .
   If you get relaxed while reading this blog, then I will be the most happiest person on the earth.

7 ಕಾಮೆಂಟ್‌ಗಳು:

  1. fantastic :)
    its like a bird's eye to current trend.

    Keep it up, you can realy make difference to many by your writings

    ಪ್ರತ್ಯುತ್ತರಅಳಿಸಿ
  2. hi.. shravan nani here.
    modalagi barodakke shurumadidakke dhnayvadagalu mattu shubhhasaya. dhanyavadagalu yake andre nam tara kanndadana englishnlli baride,bereyavara thara englisha na kannada thara baride kannada na knndadalli kanndatharane bardididdiya adakke. title bahala channgigide hage barahadllina amshavu saha. adaru kosambarige nityananda matte sunny leon vaggarane jastine ayitu annisitu.ninage shubhavagali....

    ಪ್ರತ್ಯುತ್ತರಅಳಿಸಿ
  3. shravn.... Superb...tumba chenagi ella vishaygalannu arta garbhithavagi helidiya.. hege barita iru... nav odta irtivi.. thank u..

    ಪ್ರತ್ಯುತ್ತರಅಳಿಸಿ
  4. hai bro... firstly ALL THE BEST to yo job, nice blog name... koosambari paanaka:) i want to clear u one thing which comes in my point of view... after reading this nange annisiddu... bereyavarige eshta agatho elwo anta yochane madodakinta, awra daaha tanisuvadakkintha..... ninna abipraya. vichara vinimaya nerawagi yallara manasu muttothara edre chanagirathe,its best if u keep this in mind n write.... i think u can create a seperate world through this, you hav all the capability,why cant u try in this way???

    ಪ್ರತ್ಯುತ್ತರಅಳಿಸಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...