ಗುರುವಾರ, ಸೆಪ್ಟೆಂಬರ್ 27, 2012

ಕೊಲೆಗಾರ್ತಿ



ಕತ್ತಿಯಿಂದ ಕೊರಳು ಕೊಯ್ಯದೆ,

ಚಾಕುವಿನಿಂದ ಎದೆಗೆ ಚುಚ್ಚದೆ,

ಜೀವ ತೆಗೆಯದೆಯೇ ,

ನನ್ನ ಕೊಂದವಳು ನೀನು .



ನಂಬಿ ನನ್ನ ಹೃದಯವ

ಕೊಟ್ಟಾಗ ,ಆಟಿಕೆಯಂತೆ

ಅದರ ಜೊತೆ

ಹುಡುಗಾಟಿಕೆ ಆಡಿದವಳು ನೀನು.



ಕನಸ್ಸುಗಳೆಂದು ಕಣ್ಣಿಗೆ ತುಂಬಿ ,

ಅದು ಕಸವೆಂದು ನಾ

ಅರಿಯುವ ಹೊತ್ತಿಗೆ

ಗಾಳಿ ಊದದೇ ಹೋದವಳು ನೀನು .



ನನ್ನ ದನಿಯ ಜೊತೆಗೂಡಿ

ಪಲ್ಲವಿಯಲ್ಲಿ ಅನುರಾಗ

ಹಾಡಿ ,ಚರಣದಲಿ

ಚರಮ ಗೀತೆ ಹಾಡಿದವಳು ನೀನು .



ಹೃದಯಕ್ಕೆ  ಘಾಸಿಯಾದರೇನಂತೆ ,

ಕನಸುಗಳು ಬತ್ತಿ

ಹೋದರೇನಂತೆ ,

ನನ್ನೊಳಗಿನ ಪ್ರೀತಿ ಸತ್ತಿಲ್ಲ ಇನ್ನು.



ಬದುಕಲು ಬಿಡದೆ ,

ಸಾಯಲು ಕೊಡದೆ,

ಬಡಿಬಡಿದು ದಿನವೂ

ಬಡಕಲು ಮಾಡಿದೆ ನನ್ನನು .





ತಪ್ಪು ಮಾಡಿದವಳು ನೀನು

ಆದರೆ ಪ್ರತಿದಿನವೂ

ಅದಕೆ ಶಿಕ್ಷೆ

ಬಿಡದೆ ಅನುಭವಿಸುವವನು ನಾನು .
English summary : You did not use knife or anything to kill me.Yet you managed to kill me without taking me breath.I gave my heart to you thinking that you will take care but you used it like a toy.You filled my eyes with dreams but later I realised they were dust.Your love has kept me confused.Its neither allowing me to die nor keeping me alive.But making me weak day by day.It was you who did mistake,but I am the one who is suffering here

4 ಕಾಮೆಂಟ್‌ಗಳು:

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...