ಬುಧವಾರ, ಮೇ 9, 2018

ಹುಟ್ಟು ಹಬ್ಬ



ಇದೀಗ ನಾ ಊದಿ ಆರಿಸಬೇಕಾದ
ನನ್ನ ವಯಸ್ಸಿನಷ್ಟು ಇರುವ
candleಗಳ ಸಂಖ್ಯೆ
ನಾ ಇಷ್ಟು ವರ್ಷ
ಏನನ್ನೂ  ಕಿತ್ತು ಹಾಕದ್ದನ್ನು
ನೋಡಿ ನಕ್ಕಂತಿದೆ .

ನನ್ನ ಸುತ್ತ ಒಂದಿಷ್ಟು ಜನ
ನನ್ನ ಹುಟ್ಟು ಹಬ್ಬ ಆಚರಿಸಲು ಬಂದಿದ್ದಾರೆ .
ಅದರಲ್ಲಿ ಕೆಲವರು ನನಗೆ ಗೊತ್ತು ,
ಹಲವರು ಗೊತ್ತೆಂದು ತಿಳಿದಿದ್ದೇನೆ.
ಇನ್ನು ಸ್ವಲ್ಪ ಜನ ನನಗೆ
ಯಾರಂದೇ ತಿಳಿದಿಲ್ಲ .
ಬಹುಶಃ ಕೊನೆಯಲ್ಲಿ cake ಸಿಗುತ್ತದೆ
ಎಂದು ಬಂದಿರಬೇಕು .
ಇನ್ನೂ ಬಂದ ಹಲವರಿಗೆ
ಇದು ಕೆಲಸದ ಮಧ್ಯೆ ಬ್ರೇಕ್ ಅಷ್ಟೇ.

ಅದೋ ಒಂದು ಮೂಲೆಯಲ್ಲಿ
ನನ್ನ ಆಫೀಸ್ H.R
ನನ್ನ ಹುಟ್ಟುಹಬ್ಬದ
ಆಚರಣೆಯ ಹೊರೆ ಹೊತ್ತಿದ್ದಾಳೆ.
ನನ್ನ ಮನೆಯವಳಂತೆ ಸಂಭ್ರಮಿಸುತ್ತಿದ್ದಾಳೆ.
ಮೊನ್ನೆ ನನ್ನ ಸಹೋದ್ಯೋಗಿ
ಹುಟ್ಟು ಹಬ್ಬಕ್ಕೂ ಇಷ್ಟೇ ಖುಷಿಯಾಗಿದ್ದಳು .
ಅವಳ ಸೌಂದರ್ಯಕ್ಕೆ ಕಾರಣವಾದ
ಮೇಕ್ ಅಪ್ ನ ಹಿಂದೆ ಯಾರಿಗೂ
ಕಾಣದ ನೋವೊಂದು ಅಡಗಿದೆ .
ಆಫೀಸ್ ನಲ್ಲಿರುವ ಎಲ್ಲರ
ಹುಟ್ಟು ಹಬ್ಬದ ದಿನ
ಸಂಭ್ರಮದಿಂದ ಆಚರಿಸಲೇಬೇಕು
ಅದೇ ಅವಳ ಕೆಲಸ ,
ಸ್ಮಶಾನದಲ್ಲಿ ಹೆಣ ಸುಡುವವನ ಹಾಗೆ .

ಎಲ್ಲರೂ ಹಾಡು ಹಾಡಿದರು
ಅದೇ ರಾಗ, ಅದೇ ತಾಳ
ಅಷ್ಟೇ ಕರ್ಕಶ , ಅಷ್ಟೇ ಕೃತಕ .
ಮೊನ್ನೆಯೂ ಇನ್ನೊಬ್ಬನಿಗೆ
ಇದನ್ನೇ ಹಾಡಿದ್ದರು ,
ನಾಳೆಯೂ ಇನ್ನೊಬ್ಬನಿಗೆ
ಇದನ್ನೇ ಹಾಡುತ್ತಾರೆ
ಒಳ್ಳೆಯ ಟೇಪ್ ರೆಕಾರ್ಡರ್ ತರ .
ಕೊಟ್ಟಿದ್ದ ಪ್ಲಾಸ್ಟಿಕ್ ಚಾಕುವಿನಲ್ಲಿ
cake ಕತ್ತರಿಸುವ ಶಾಸ್ತ್ರ ಮಾಡಬೇಕು ಅಷ್ಟೇ,
ಉಳಿದದ್ದನ್ನು ಅವರೇ ಕಟ್
ಮಾಡಿಕೊಳ್ಳುತ್ತಾರೆ ಬೇಕಾದ ಹಾಗೆ .

ಬಂದವರಲ್ಲಿ ಅನೇಕರು 
Cake ತಿನ್ನುವುದಕ್ಕಿಂತ
ನನ್ನ ಮುಖಕ್ಕೆ ಹಚ್ಚಿ ಖುಷಿ ಪಡುತ್ತಾ ,
Cake ತಿನ್ನುವವರು , ಹಚ್ಚುತ್ತಿರುವವರಿಗೆ ಬಯ್ಯುತ್ತಾ
ಡಯಟ್ ಅಂದು cake ತಿನ್ನದೇ ಹೋದರೂ ,
ಬಾಯಲ್ಲಿ ಇಟ್ಟುಕೊಂಡು ತಿನ್ನುವ
ಹಾಗೆ photo ತೆಗದುಕೊಳುತ್ತಾ ,
ನೆನ್ನೆ ಪರಿಚಯ ಆದ ಕೆಲವರು,
ಸೋಶಿಯಲ್ ಮೀಡಿಯಾ ದಲ್ಲಿ
ನನ್ನ ಗೆಳಯನ bday ಎಂದು post ಹಾಕುತ್ತಾ
ಇದ್ದ ಇಂತಹ ಜನಗಳ ನಡುವೆ
ನನ್ನ ನೋಟ ಮಾತ್ರ ಮೂಲೆಯಲ್ಲಿ
ಆಗಿಂದ mobile ನೊಳಗೆ ಮುಳುಗಿರುವ ,
ಯಾರದೋ ಒತ್ತಾಯಕ್ಕೆ ಬಂದಂತೆ
ಇರುವ ನನಗಿಷ್ಟದ ಹುಡುಗಿಯ ಮೇಲೆ .

ಸ್ವಲ್ಪ ಹೊತ್ತಿಗೆ Cake ಖಾಲಿ,
ಎಲ್ಲರೂ ಜಾಗ ಖಾಲಿ .
ಎಲ್ಲರೂ ನಗುವದನ್ನು ಮರೆತು
ಮತ್ತೆ ಜಟಕಾ ಬಂಡಿ ತಳ್ಳುವದರಲ್ಲಿ ಮಗ್ನ.
ನಾನು ಹೋಗಬೇಕಿದೆ ಅದಕ್ಕೆ ,
ಅದಕ್ಕೂ ಮುಂಚೆ ಬಾತ್ರೂಮ್ ನಲ್ಲಿ
ಒಬ್ಬನೇ ಮುಖಕ್ಕೆ ಹತ್ತಿದ
cake ನ ಜಿಡ್ಡು ತಿಕ್ಕಿ ತಿಕ್ಕಿ ತೊಳೆಯಬೇಕಿದೆ .

Note :It's a poem about birthday celebration at office. The author finds the
whole celebration is full of fake smiles and mechanic.
Please forgive if any mistakes.You can ping me and let me know my mistakes.

5 ಕಾಮೆಂಟ್‌ಗಳು:

  1. ಕರ್ಕಶ, ಕೃತಕ ಅಂತೆಲ್ಲಾ ಹೇಳುವುದರ ಮೊದಲು ನಾಲ್ಕು ಜನ ಒಬ್ಬನ ಹುಟ್ಟಿದ ಹಬ್ಬ ಆಚರಿಸುವುದಕ್ಕೆ ಬಂದರಲ್ಲ, ತಮ್ಮ ಸಮಯದ ಒಂದಂಶವಾದರೂ ನೀಡಿದರಲ್ಲ ಅದು ಮುಖ್ಯ. ಕೃತಜ್ಞತೆ ತೋರುವುದರ ಬದಲು ನಾಳೆ ಬೇರೆಯವನಿಗೂ ಇದನ್ನು ಮಾಡುತ್ತಾರೆ, ಕೇಕ್ ತಿನ್ನುವುದಕ್ಕೆ ಬಂದಿದ್ದಾರೆ ಅಂತೆಲ್ಲಾ ಹೇಳುವುದು ಎಷ್ಟು ಸರಿ?
    ಮನುಷ್ಯ ಮನುಷ್ಯನಿಗೆ ತೋರುವ ಸೌಹಾರ್ದತೆಯೇ ಕಡಿಮೆಯಾಗಿ ಹೋಗಿರುವ ಈ ಕಾಲದಲ್ಲಿ ನಾಲ್ಕು ಜನ ಹೆಸರಿಗಾದರೂ ಬಂದು ನಗುಮುಖದಿಂದ ಮಾತನಾಡಿಸಿ ಶುಭಾಶಯ ಹೇಳಿದರೆ ಹೀಗೆಲ್ಲಾ ಬರೆಯುವುದೇ?
    ಆ ಗುಂಪಿನ ಗಲಭೆ ನಿಮಗಿಷ್ಟವಾಗದೇ ಹೋಗಿರಬಹುದು, ಗುಂಪಿನಲ್ಲಿದ್ದೂ ತಮಗೆ ಒಂಟಿತನ ಕಾಡಿರಬಹುದು ಅದು ಅವರ ತಪ್ಪಲ್ಲ, ನಿಮ್ಮ ಭಾವನೆಗಳು ಸತ್ಯವೆಂದು ನೀವಂದುಕೊಂಡಾಕ್ಷಣ ಅವರ ಭಾವನೆಗಳು ಕೃತಕವಾಗಿ ಬಿಡುತ್ತವೆಯೇ?
    ಹುಟ್ಟುಹಬ್ಬದ ನೆಪದಲ್ಲಿಯಾದರೂ ಮೊಬೈಲು, ಅಲ್ಲಿ ಇಲ್ಲಿ ಕಳೆದು ಹೋಗಿರುವ ನಾಲ್ಕು ಜನ ಸೇರಿ ಮಾತನಾಡುವಂತಾದರೆ ತಪ್ಪೇನು?

    Moreover, some people do like being nice to others, some people get happiness in celebrating the birthdays of colleagues, friends, just because you don't think it is genuine doesn't make their intentions artifical. When they are being nice, accept it, instead of calling it artificial and making them feel bad.
    ಇದನ್ನ ಅವರೇನಾದರೂ ಓದಿದರೆ ಇಂಥವರ ಹುಟ್ಟಿದಹಬ್ಬ ಆಚರಿಸಿದೆವಲ್ಲ ಅಂತ ಬೇಸರ ಪಟ್ಕೊಳ್ತಾರಷ್ಟೆ.

    ಪ್ರತ್ಯುತ್ತರಅಳಿಸಿ
  2. ಪ್ರಿಯ ಶ್ರವಣ್,
    ನಿತ್ಯದ ಕೆಲ ಅರ್ಥಹೀನ ಸಂಗತಿಗಳು ಚರ್ವಿತ ಚರ್ವಣವಾಗುವ , ಕ್ಲೀಷೆಯೆನ್ನಿಸುವ ಕ್ಷಣಗಳನ್ನು 'ಹುಟ್ಟುಹಬ್ಬ' ಹಿಡಿದಿಟ್ಟಿದೆ. ಇಡಿಯಾದ ಅಭಿವ್ಯಕ್ತಿಯಲ್ಲಿ ಮೇಲೆ ಶ್ರೀನಿಧಿಯವರು ಹೇಳಿದಂತೆ ಯಾವುದೇ ದೋಷವಿಲ್ಲ.
    ಒಂದು ಸಂದರ್ಭವನ್ನು ಎಲ್ಲ ಕೋನಗಳಿಂದ ಗಮನಿಸುವುದೂ ಒಂದೊಳ್ಳೆಯ ಸೃಜನಶೀಲತೆಯೇ.

    ಪಕ್ಕದಲ್ಲಿ ಕೂತು ಕೆಲಸ ಮಾಡುವ ಒಬ್ಬ ವ್ಯಕ್ತಿಯ ಹುಟ್ಟುಹಬ್ಬದ ಕುರಿತು ಆಸಕ್ತಿಯೇ ಇಲ್ಲದ ಇನ್ನೊಬ್ಬ ವ್ಯಕ್ತಿ, ಬರಿ ಕೇಕು ತಿನ್ನುವ ನೆಪದಿಂದಲೂ ಹುಟ್ಟುಹಬ್ಬಕ್ಕೆ ಬಂದಿರಬಹುದು, ಇದು ಮನುಷ್ಯನ ಮನಸ್ಥಿತಿಗಳ ಕುರಿತಾದ ಸತ್ಯದ ಶೋಧ, ಎಲ್ಲ ಸಾಹಿತ್ಯ ಪ್ರಕಾರಗಳೂ ಇದನ್ನೇ ಮಾಡುತ್ತಿರುವುದು ಮತ್ತು ಮಾಡಬೇಕು.
    ಇಲ್ಲಿ ಬರುವ ಎಚ್. ಆರ್ ಹೊಣೆಗಾರಿಕೆ ಕೂಡ ಇದಕ್ಕೆ ಪೂರಕ.
    ಮತ್ತು ಆ ಸತ್ಯ ಕೂಡ ಸಹಜವೇ.
    ಈ ಜಗತ್ತಿನಲ್ಲಿ ಹಿಂಸೆಯಿಲ್ಲದೇ ನಡೆಯುತ್ತಿರುವುದು ಯಾವುದೂ ತಪ್ಪಲ್ಲ, ಅಂದಮೇಲೆ ಅಂಥದರ ಅಭಿವ್ಯಕ್ತಿ ಹೇಗೆ ತಪ್ಪಾಗುತ್ತದೆ?
    ಯಾರು ಓದಿದರೆ ಏನು ತಿಳಿದುಕೊಳ್ಳುತ್ತಾರೋ ಎಂಬ ಮುಜುಗರವನ್ನು, ಕೀಳರಿಮೆಯನ್ನು ಬದಿಗಿರಿಸಿ ಬರೆಯುವುದೇ ಒಳ್ಳೆಯ ಸಾಹಿತ್ಯದ ಲಕ್ಷಣ.
    ಇದು ಸೂಕ್ಷ್ಮ ಸಂವೇದನೆಗಳಿರುವ( ಕ್ಯಾಂಡಲ್ ನನ್ನನ್ನು ನೋಡಿ ನಕ್ಕಂತಿದೆ ಎಂಬಲ್ಲಿ) ತೀಕ್ಷ್ಙ ಅವಲೋಕನೆಯಿರುವ (observations) ಮತ್ತು ಎಂಥದೋ ಮಹತ್ವಾಕಾಂಕ್ಷೆಯನ್ನು ಬಯಸುವ ಚಡಪಡಿಕೆಯನ್ನೊಳಗೊಂಡ ಪದ್ಯ.
    ಬರವಣಿಗೆ ನಿರಂತರವಾಗಲಿ.

    ಪ್ರತ್ಯುತ್ತರಅಳಿಸಿ
  3. Satya heltira Swamy. Namgistavillada birthday madi
    Hange tale mele ond kirita haki party anta Namma jebge katri haki
    Selfie jote facebook Alli post haki
    Next avru Bakra aagodondu baki😀

    ಪ್ರತ್ಯುತ್ತರಅಳಿಸಿ

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...